ಭಗೀರಥ

ಭಗೀರಥ ಭಗೀರಥನು ಗಂಗೆಯನ್ನು ಭೂಮಿಗೆ ತಂದು ಬರಿದಾದ ಸಾಗರಗಳನ್ನು ತುಂಬಿಸಿದ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೦೪-೧೦೮) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು. ಇಕ್ಷ್ವಾಕುಗಳ ಕುಲದಲ್ಲಿ ಸಗರ ಎಂಬ ಹೆಸರಿನ ರೂಪ, ಸಂಪತ್ತು ಮತ್ತು ಬಲಾನ್ವಿತ ರಾಜನು ಜನಿಸಿದನು. ಆ ಪ್ರತಾಪವಂತನಿಗೆ ಪುತ್ರರಿರಲಿಲ್ಲ. ಅವನು ಹೈಹಯರನ್ನು ಹೊರಹೊಟ್ಟು, ತಾಲಜಂಘರನ್ನು ಮತ್ತು ಇತರ ರಾಜರನ್ನು…

Continue reading

ಮಹಾಪ್ರಸ್ಥಾನ

ಮಹಾಪ್ರಸ್ಥಾನ ಪಾಂಡವಪ್ರವ್ರಜನ ವೃಷ್ಣಿಗಳ ಮಹಾ ಕದನದ ಕುರಿತು ಕೇಳುತ್ತಲೇ ಕೌರವ ರಾಜ ಯುಧಿಷ್ಠಿರನು ಪ್ರಸ್ಥಾನದ ಕುರಿತು ನಿಶ್ಚಯಿಸಿ ಅರ್ಜುನನಿಗೆ ಇಂತೆಂದನು: “ಮಹಾಮತೇ! ಕಾಲವು ಸರ್ವ ಭೂತಗಳನ್ನೂ ಬೇಯಿಸುತ್ತದೆ. ಕರ್ಮನ್ಯಾಸಮಾಡಬೇಕೆಂದು ನನಗನ್ನಿಸುತ್ತದೆ. ನೀನೂ ಕೂಡ ಇದರ ಕುರಿತು ಯೋಚಿಸಬೇಕಾಗಿದೆ.” ಇದನ್ನು ಕೇಳಿದ ವೀರ್ಯವಾನ್ ಕೌಂತೇಯನು “ಕಾಲವೇ ಕಾಲ!” ಎಂದು ಹೇಳುತ್ತಾ ಜ್ಯೇಷ್ಠ ಭ್ರಾತರನ ಆ ಮಾತನ್ನು ಒಪ್ಪಿಕೊಂಡನು. ಅರ್ಜುನನ ಮತವನ್ನು ಅರಿತ ಭೀಮಸೇನ ಮತ್ತು ಯಮಳರು ಸವ್ಯಸಾಚಿಯು ಆಡಿದ ಆ ಮಾತನ್ನು…

Continue reading

ಮಹಾಭಾರತ ಯುದ್ಧ ಸಿದ್ಧತೆ

ಮಹಾಭಾರತ ಯುದ್ಧ ಸಿದ್ಧತೆ ಪಾಂಡವ ಸೇನೆಯು ಕುರುಕ್ಷೇತ್ರಕ್ಕೆ ಹೋಗಿ ಬೀಡುಬಿಟ್ಟುದುದು ಜನಾರ್ದನನ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಕೇಶವನ ಸಮಕ್ಷಮದಲ್ಲಿಯೇ ಧರ್ಮಾತ್ಮಾ ಸಹೋದರರಿಗೆ ಹೇಳಿದನು: “ನೀವು ಕುರುಸಂಸದಿಯ ಸಭೆಯಲ್ಲಿ ಏನಾಯಿತೆಂದು ಕೇಳಿದಿರಿ. ಕೇಶವನೂ ಕೂಡ ಅವನ ಮಾತಿನಲ್ಲಿ ಅವೆಲ್ಲವನ್ನೂ ವರದಿಮಾಡಿದ್ದಾನೆ. ಆದುದರಿಂದ ನಮ್ಮ ವಿಜಯಕ್ಕಾಗಿ ಸೇರಿರುವ ಏಳು ಅಕ್ಷೌಹಿಣೀ ಸೇನೆಗಳ ವಿಭಾಗಗಳನ್ನು ಮಾಡಿ. ಅವುಗಳ ಏಳು ವಿಖ್ಯಾತ ನಾಯಕರನ್ನು ತಿಳಿದುಕೊಳ್ಳಿ – ದ್ರುಪದ, ವಿರಾಟ, ಧೃಷ್ಟದ್ಯುಮ್ನ, ಶಿಖಂಡಿ, ಸಾತ್ಯಕಿ, ಚೇಕಿತಾನ…

Continue reading

ಮಹಾಭಾರತ ಯುದ್ಧಾರಂಭ

ಮಹಾಭಾರತ ಯುದ್ಧಾರಂಭ ವ್ಯಾಸದರ್ಶನ ಪೂರ್ವ-ಪಶ್ಚಿಮ ಮುಖಗಳಾಗಿ ಸೇರಿದ್ದ ಕೌರವ-ಪಾಂಡವರನ್ನು ನೋಡಿ ಭಗವಾನ್ ಋಷಿ, ಸರ್ವವೇದವಿದರಲ್ಲಿ ಶ್ರೇಷ್ಠ ವ್ಯಾಸ ಸತ್ಯವತೀ ಸುತ, ಭರತರ ಪಿತಾಮಹ, ಭೂತ-ಭವ್ಯ-ಭವಿಷ್ಯಗಳನ್ನು ತಿಳಿದಿರುವ, ಭಗವಾನನು ತನ್ನ ಪುತ್ರರ ಅನ್ಯಾಯದ ಕುರಿತು ಯೋಚಿಸಿ ಶೋಕಿಸಿ ಆರ್ತನಾಗಿರುವ ರಾಜ ವೈಚಿತ್ರವೀರ್ಯನಿಗೆ ರಹಸ್ಯದಲ್ಲಿ ಇದನ್ನು ಹೇಳಿದನು: “ರಾಜನ್! ನಿನ್ನ ಪುತ್ರರು ಮತ್ತು ಅನ್ಯ ಭೂಮಿಪರ ಕಾಲವು ಬಂದಾಗಿದೆ. ಅವರು ಸಂಗ್ರಾಮದಲ್ಲಿ ಪರಸ್ಪರರರನ್ನು ಕೊಲ್ಲುತ್ತಾರೆ. ಕಾಲದ ಬದಲಾವಣೆಗಳಿಂದ ಆಗುವ ಈ ವಿನಾಶವನ್ನು ಕಾಲಪರ್ಯಾಯವೆಂದು…

Continue reading

ಮಾತಲಿ ವರಾನ್ವೇಷಣೆ

ಮಾತಲಿ ವರಾನ್ವೇಷಣೆ ಮಾತಲಿಯು ತನ್ನ ಮಗಳಿಗೆ ವರನನ್ನು ಹುಡುಕಿದ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಭಗವದ್ಯಾನ ಪರ್ವ (ಅಧ್ಯಾಯ ೯೫-೧೦೩) ದಲ್ಲಿ ಬರುತ್ತದೆ. ಶ್ರೀಕೃಷ್ಣನು ಸಂಧಿಗೆಂದು ಕುರುಸಭೆಗೆ ಹೋದಾಗ ಅಲ್ಲಿ ಋಷಿ ಕಣ್ವನು ವಿಷ್ಣುವಿನ ಘನತೆಯನ್ನು ಸಾರುವ ಈ ಕಥೆಯನ್ನು ದುರ್ಯೋಧನನಿಗೆ ಹೇಳಿದನು. ತ್ರೈಲೋಕ್ಯರಾಜ ಇಂದ್ರನ ಸಾರಥಿಯ ಹೆಸರು ಮಾತಲಿ. ಅವನ ಕುಲದಲ್ಲಿ ರೂಪದಲ್ಲಿ ಲೋಕವಿಶ್ರುತ ಒಬ್ಬಳೇ ಕನ್ಯೆಯಿದ್ದಳು. ಗುಣಕೇಶೀ ಎಂಬ ಹೆಸರಿನಿಂದ ವಿಖ್ಯಾತಳಾಗಿ ಆ ದೇವರೂಪಿಣಿಯು ಕಾಂತಿ-ಸೌಂದರ್ಯಗಳಲ್ಲಿ…

Continue reading

ಮಾಂಧಾತಾ

ಮಾಂಧಾತಾ ರಾಜಾ ಮಾಂಧಾತನ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೨೬) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು. ಇಕ್ಷ್ವಾಕು ವಂಶದಲ್ಲಿ ಯುವನಾಶ್ವ (ಸೌದ್ಯುಮ್ನಿ) ಎನ್ನುವ ಮಹೀಪತಿಯು ಹುಟ್ಟಿದ್ದನು. ಆ ಪೃಥ್ವೀಪಾಲನು ಭೂರಿದಕ್ಷಿಣೆಗಳನ್ನೊಡಗೂಡಿದ ಕ್ರತುವಿಗೆ ಯಜಮಾನನಾಗಿದ್ದನು. ಧರ್ಮಭೃತರಲ್ಲಿ ಶ್ರೇಷ್ಠನಾದ ಅವನು ಸಾವಿರ ಅಶ್ವಮೇಧಗಳನ್ನು ಪೂರೈಸಿ, ಇನ್ನೂ ಇತರ ಪ್ರಮುಖ ಕ್ರತುಗಳನ್ನು ಆಪ್ತರು ಮತ್ತು ದಕ್ಷಿಣೆಗಳೊಂದಿಗೆ ಕೈಗೊಂಡನು.…

Continue reading

ಮೂರನೆಯ ದಿನದ ಯುದ್ಧ

ಮೂರನೆಯ ದಿನದ ಯುದ್ಧ ರಾತ್ರಿಯು ಕಳೆದು ಪ್ರಭಾತವಾಗಲು ಶಾಂತನವ ಭೀಷ್ಮನು ಸೇನೆಗಳಿಗೆ ಯುದ್ಧಕ್ಕೆ ಹೊರಡುವಂತೆ ಆದೇಶವಿತ್ತನು. ಧಾರ್ತರಾಷ್ಟ್ರರ ವಿಜಯಾಕಾಂಕ್ಷಿಯಾದ ಕುರುಪಿತಾಮಹ ಶಾಂತನವ ಭೀಷ್ಮನು ಗಾರುಡ ಮಹಾವ್ಯೂಹವನ್ನು ರಚಿಸಿದನು. ಗರುಡನ ಕೊಕ್ಕಿನ ಪ್ರದೇಶತಲ್ಲಿ ಸ್ವಯಂ ದೇವವ್ರತನಿದ್ದನು. ಭರದ್ವಾಜ ಮತ್ತು ಕೃತವರ್ಮರು ಅದರ ಕಣ್ಣುಗಳಾಗಿದ್ದರು. ಅದರ ಶೀರ್ಷಭಾಗದಲ್ಲಿ ಅಶ್ವತ್ಥಾಮ-ಕೃಪರೂ, ತ್ರಿಗರ್ತರು, ಕೇಕಯರು, ವಾಟದಾನರೂ ಇದ್ದರು. ಭೂರಿಶ್ರವ, ಶಲ, ಶಲ್ಯ, ಭಗದತ್ತ, ಮದ್ರಕ, ಸಿಂಧು-ಸೌವೀರರು, ಪಂಚನದರು ಜಯದ್ರಥನ ಸಹಿತ ಅದರ ಕುತ್ತಿಗೆಯ ಭಾಗದಲ್ಲಿ ಸೇರಿದ್ದರು.…

Continue reading

ಮೈತ್ರೇಯನು ದುರ್ಯೋಧನನಿಗೆ ಶಾಪವನ್ನಿತ್ತಿದುದು

ಮೈತ್ರೇಯನು ದುರ್ಯೋಧನನಿಗೆ ಶಾಪವನ್ನಿತ್ತಿದುದು ವ್ಯಾಸನು ಹೋಗುತ್ತಿದ್ದಂತೆಯೇ ಮೈತ್ರೇಯನು ಕಾಣಿಸಿಕೊಂಡನು ಮತ್ತು ಧೃತರಾಷ್ಟ್ರನು ಪುತ್ರರೊಂದಿಗೆ ಅವನನ್ನು ಪೂಜಿಸಿ ಬರಮಾಡಿಕೊಂಡನು. ಅಂಬಿಕಾಸುತ ರಾಜ ಧೃತರಾಷ್ಟ್ರನು ಆ ಮುನಿಪುಂಗವನಿಗೆ ಅರ್ಘ್ಯಾದಿ ಎಲ್ಲ ಸತ್ಕಾರಕ್ರಿಯೆಗಳನ್ನು ಪೂರೈಸಿ, ಅವನು ವಿಶ್ರಾಂತಗೊಳ್ಳಲು ವಿನಯದಿಂದ ಕೇಳಿದನು: “ಭಗವನ್! ಕುರುಜಂಗಲಕ್ಕೆ ನಿಮ್ಮ ಆಗಮನವು ಸುಖಕರವಾಗಿತ್ತೇ? ಐವರು ವೀರ ಪಾಂಡವ ಸಹೋದರರು ಕುಶಲರಾಗಿರುವರಷ್ಟೇ? ಆ ಪುರುಷರ್ಷಭರು ಒಪ್ಪಂದದಂತೆ ಇರಲು ಬಯಸುತ್ತಾರೆ ತಾನೇ? ಕುರುಗಳ ಒಳ್ಳೆಯ ಭ್ರಾತೃತ್ವವು ಅವಿಚ್ಛಿನ್ನವಾಗಿ ಉಳಿದುಕೊಳ್ಳುತ್ತದೆ ತಾನೇ?” ಮೈತ್ರೇಯನು ಹೇಳಿದನು:…

Continue reading

ಮೊದಲನೆಯ ದಿನದ ಯುದ್ಧ

ಮೊದಲನೆಯ ದಿನದ ಯುದ್ಧ ಸಹೋದರರೊಂದಿಗೆ ದುರ್ಯೋಧನನು ಭೀಷ್ಮನನ್ನು ಪ್ರಮುಖನನ್ನು ಮಾಡಿ ಸೇನೆಯನ್ನು ಕೂಡಿಕೊಂಡು ಹೊರಟನು. ಹಾಗೆಯೇ ಪಾಂಡವರೆಲ್ಲರೂ ಭೀಮಸೇನನನ್ನು ಮುಂದಿಟ್ಟುಕೊಂಡು ಭೀಷ್ಮನೊಂದಿಗೆ ಯುದ್ಧವನ್ನು ಬಯಸಿ ಹೃಷ್ಟಮಾನಸರಾಗಿ ಹೊರಟರು. ಕ್ರಕಚಗಳ ಕಿಲಕಿಲ ಶಬ್ಧ, ಗೋವಿನ ಕೊಂಬಿನ ವಾದ್ಯ, ಭೇರೀ ಮೃದಂಗ ಮತ್ತು ಹಯಕುಂಜರಗಳ ನಿಃಸ್ವನಗಳು ಕಿವುಡು ಮಾಡುವಂತಿತ್ತು. ಎರಡೂ ಸೇನೆಗಳು – ಪಾಂಡವರು ಕೌರವರನ್ನು ಮತ್ತು ಕೌರವರು ಪಾಂಡವರನ್ನು ಜೋರಾಗಿ ಕೂಗುತ್ತಾ ಆಕ್ರಮಣ ಮಾಡಲಾಯಿತು. ಆಗ ಅಲ್ಲಿ ಮಹಾ ತುಮುಲವುಂಟಾಯಿತು. ಪರಸ್ಪರರನ್ನು…

Continue reading

ಮೊದಲನೆಯ ರಾಯಭಾರ

ಮೊದಲನೆಯ ರಾಯಭಾರ ದ್ರುಪದನು ದೂತನನ್ನು ಕಳುಹಿಸಿದುದು ಯುಧಿಷ್ಠಿರನ ಮತದಂತೆ ಪಾಂಚಲನು ಪ್ರಜ್ಞಾವಂತನೂ ವಯೋವೃದ್ಧನೂ ಆದ ತನ್ನ ಪುರೋಹಿತನನ್ನು ಕುರುಗಳಲ್ಲಿಗೆ ಕಳುಹಿಸಿದನು. ದ್ರುಪದನು ಹೇಳಿದನು: “ಇರುವವುಗಳಲ್ಲಿ ಪ್ರಾಣಿಗಳು ಶ್ರೇಷ್ಠರು; ಪ್ರಾಣಿಗಳಲ್ಲಿ ಬುದ್ಧಿಜೀವಿಗಳು ಶ್ರೇಷ್ಠರು; ಬುದ್ಧಿಯಿರುವವರಲ್ಲಿ ನರರು ಶ್ರೇಷ್ಠರು ಮತ್ತು ನರರಲ್ಲಿ ದ್ವಿಜರು ಶ್ರೇಷ್ಠರು. ದ್ವಿಜರಲ್ಲಿ ವೇದವನ್ನು ತಿಳಿದವರು ಶ್ರೇಯಸ್ಕರು, ವೇದಗಳನ್ನು ತಿಳಿದವರಲ್ಲಿ ಆ ತಿಳುವಳಿಕೆಯನ್ನು ಕಾರ್ಯದಲ್ಲಿ ಅಳವಡಿಸಿಕೊಂಡವರು ಶ್ರೇಯಸ್ಕರು. ಹೀಗೆ ತಿಳುವಳಿಕೆಯನ್ನು ಅಳವಡಿಸಿಕೊಂಡವರಲ್ಲಿ ನೀನು ಪ್ರಧಾನನೆಂದು ನನಗನ್ನಿಸುತ್ತದೆ. ನೀನು ಕುಲದಲ್ಲಿ, ವಯಸ್ಸಿನಲ್ಲಿ…

Continue reading