ನೈಮಿಷಾರಣ್ಯದಲ್ಲಿ ಶೌನಕನ ಸತ್ರದಲ್ಲಿ ಸೂತ ಪೌರಾಣಿಕನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದುದು

ನೈಮಿಷಾರಣ್ಯದಲ್ಲಿ ಶೌನಕನ ಸತ್ರದಲ್ಲಿ ಸೂತ ಪೌರಾಣಿಕನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದುದು ಒಮ್ಮೆ ನೈಮಿಷಾರಣ್ಯದಲ್ಲಿ ಕುಲಪತಿ ಶೌನಕನು ಏರ್ಪಡಿಸಿದ್ದ ಹನ್ನೆರಡು ವರ್ಷಗಳ ಸತ್ರದಲ್ಲಿ ವಿಶ್ರಾಂತಿಪಡೆಯುತ್ತಿದ್ದ ಬ್ರಹ್ಮರ್ಷಿಗಳ ಮಧ್ಯೆ ಲೋಮಹರ್ಷಣನ ಮಗ ಸೂತ ಪೌರಾಣಿಕ ಉಗ್ರಶ್ರವನು ವಿನಯಾವನತನಾಗಿ ಆಗಮಿಸಿದನು. ಅವನು ಆಶ್ರಮವನ್ನು ತಲುಪಿದೊಡನೆಯೇ ನೈಮಿಷಾರಣ್ಯವಾಸಿ ತಪಸ್ವಿಗಳೆಲ್ಲರೂ ರೋಮಾಂಚಕ ಕಥೆಗಳನ್ನು ಕೇಳಲು ಅವನನ್ನು ಸುತ್ತುವರೆದರು. ಪರಸ್ಪರರನ್ನು ಅಭಿವಂದಿಸಿ, ಎಲ್ಲರೂ ಕುಳಿತುಕೊಂಡ ನಂತರ ಋಷಿಗಳಲ್ಲಿಯೇ ಒಬ್ಬನು ಕಥೆಗಳನ್ನು ಪ್ರಸ್ತಾವಿಸುತ್ತಾ “ಸೌತಿ! ನೀನು ಎಲ್ಲಿಂದ ಬರುತ್ತಿರುವೆ?” ಎಂದು…

Continue reading

ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ

ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ ಸತ್ಯವಾನ-ಸಾವಿತ್ರಿಯರ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ದ್ರೌಪದೀಹರಣ ಪರ್ವ (ಅಧ್ಯಾಯ ೨೭೭-೨೮೩) ದಲ್ಲಿ ಬರುತ್ತದೆ. ಈ ಕಥೆಯನ್ನು ಋಷಿ ಮಾರ್ಕಂಡೇಯನು ಯುಧಿಷ್ಠಿರನಿಗೆ ಹೇಳಿದನು. ಜಯದ್ರಥನನ್ನು ಸೋಲಿಸಿ, ದ್ರೌಪದಿಯನ್ನು ಹಿಂದೆ ಪಡೆದ ಯುಧಿಷ್ಠಿರನು ದ್ರೌಪದೀಹರಣದ ಪ್ರಕರಣದಿಂದ ಅತ್ಯಂತ ದುಃಖಿತನಾಗಿ ಮಾರ್ಕಂಡೇಯನನ್ನು ಪ್ರಶ್ನಿಸಿದನು: “ಮಹಾಮುನೇ! ದ್ರುಪದಾತ್ಮಜೆಯ ಕುರಿತು ನಾನು ಎಷ್ಟು ಶೋಕಿಸುತ್ತಿದ್ದೇನೋ ಅಷ್ಟು ನನ್ನ ಕುರಿತಾಗಲೀ, ನನ್ನ ಈ ಭ್ರಾತೃಗಳ ಕುರಿತಾಗಲೀ ಅಥವಾ ಕಳೆದು ಹೋದ…

Continue reading

ಪರಶುರಾಮ

ಪರಶುರಾಮ ಪರಶುರಾಮನ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೧೫-೧೧೭) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ರಾಜರ್ಷಿ ಅಕೃತವ್ರಣನು ಯುಧಿಷ್ಠಿರನಿಗೆ ಹೇಳಿದನು. ಕನ್ಯಕುಬ್ಜದಲ್ಲಿ ಗಾಧಿ ಎಂದು ಲೋಕದಲ್ಲಿ ವಿಶ್ರುತನಾದ ಮಹಾಬಲಿ ಮಹಾ ರಾಜನಿದ್ದನು. ಅವನು ವನವಾಸಕ್ಕೆ ಹೋದನು. ವನದಲ್ಲಿ ವಾಸಿಸುತ್ತಿರುವಾಗ ಅವನಿಗೆ ಅಪ್ಸರೆಯಂತಿರುವ ಕನ್ಯೆಯು ಜನಿಸಿದಳು. ಭಾರ್ಗವ ಋಚೀಕನು ಅವಳನ್ನು ವರಿಸಿದನು. ಆಗ ರಾಜನು ಆ ಸಂಶಿತವ್ರತ ಬ್ರಾಹ್ಮಣನಿಗೆ ಹೇಳಿದನು:…

Continue reading

ಪಾಂಡವ ದಿಗ್ವಿಜಯ

ಪಾಂಡವ ದಿಗ್ವಿಜಯ ಶ್ರೇಷ್ಠ ಧನುಸ್ಸು, ಎರಡು ಅಕ್ಷಯ ಬತ್ತಳಿಕೆಗಳು, ರಥ, ಮತ್ತು ಧ್ವಜಗಳನ್ನು ಪಡೆದ ಮಹೇಷುಧಿ ಪಾರ್ಥನು ಸಭೆಯಲ್ಲಿ ಯುಧಿಷ್ಠಿರನಿಗೆ ಹೇಳಿದನು:  “ರಾಜನ್! ಬಯಸಿದರೂ ಪಡೆಯಲು ದುಷ್ಕರವಾದ ಧನಸ್ಸು, ಅಸ್ತ್ರ, ಬಾಣ, ವೀರ್ಯ, ಬೆಂಬಲಿಗರು, ಭೂಮಿ, ಯಶಸ್ಸು, ಬಲಗಳನ್ನು ನಾನು ಗಳಿಸಿದ್ದೇನೆ. ಈಗ ನಮ್ಮ ಕೋಶವನ್ನು ವೃದ್ಧಿಗೊಳಿಸುವ ಕೃತ್ಯವನ್ನು ಮಾಡಬೇಕೆಂದು ನನ್ನ ಅಭಿಪ್ರಾಯ. ಎಲ್ಲ ರಾಜರುಗಳಿಂದ ಕರ-ಕಪ್ಪಗಳನ್ನು ತರುತ್ತೇನೆ. ಶುಭ ತಿಥಿ, ಮುಹೂರ್ತ ಮತ್ತು ನಕ್ಷತ್ರದಲ್ಲಿ ವಿಜಯಕ್ಕಾಗಿ ಧನರಾಜನಿಂದ ರಕ್ಷಿತ…

Continue reading

ಪಾಂಡವ-ಕೌರವರು ಸೇನೆಗಳನ್ನು ಒಂದುಗೂಡಿಸಿದುದು

ಪಾಂಡವ-ಕೌರವರು ಸೇನೆಗಳನ್ನು ಒಂದುಗೂಡಿಸಿದುದು ವಿರಾಟ ಸಭೆಯಲ್ಲಿ ಪಾಂಡವ ಪಕ್ಷದವರ ಸಮಾಲೋಚನೆ; ಕೃಷ್ಣನಿಂದ ವಿಷಯ ಪ್ರಸ್ತಾವನೆ ಅಭಿಮನ್ಯುವಿನ ವಿವಾಹವನ್ನು ಪೂರೈಸಿ ಆ ಕುರುಪ್ರವೀರರು ತಮ್ಮ ಪಕ್ಷದವರೊಂದಿಗೆ ನಾಲ್ಕು ರಾತ್ರಿಗಳನ್ನು ಸಂತೋಷದಿಂದ ಕಳೆದು ಮಾರನೆಯ ದಿನ ವಿರಾಟನ ಸಭೆಯನ್ನು ಪ್ರವೇಶಿಸಿದರು. ಆ ಮತ್ಸ್ಯಪತಿಯ ಸಭೆಯು ಮಣಿಗಳಿಂದ ತುಂಬಿದ್ದು ಉತ್ತಮ ರತ್ನಗಳಿಂದಲೂ ಬಣ್ಣಬಣ್ಣದ ಮಾಲೆಗಳಿಂದ ಸುಗಂಧಿತ ಆಸನಗಳಿಂದಲೂ ಶೋಭಿಸುತ್ತಿತ್ತು. ಅಲ್ಲಿಗೆ ನರವರ್ಯರೆಲ್ಲರೂ ಆಗಮಿಸಿದರು. ಎದುರಿಗೆ ಆಸನಗಳಲ್ಲಿ ಪೃಥಿವೀಪತಿಗಳಲ್ಲಿಯೇ ಮಾನ್ಯರಾದ ವೃದ್ಧ ವಿರಾಟ-ದ್ರುಪದ ರಾಜರೀರ್ವರು, ಮತ್ತು…

Continue reading

ಪಾಂಡವರ ದ್ವೈತವನ ಪ್ರವೇಶ; ಮಾರ್ಕಂಡೇಯನ ಆಗಮನ; ದಾಲ್ಭ್ಯನ ಉಪದೇಶ

ಪಾಂಡವರ ದ್ವೈತವನ ಪ್ರವೇಶ; ಮಾರ್ಕಂಡೇಯನ ಆಗಮನ; ದಾಲ್ಭ್ಯನ ಉಪದೇಶ ದ್ವೈತವನ ಪ್ರವೇಶ ದಾಶಾರ್ಹಾಧಿಪತಿಯು ಹೊರಟುಹೋದ ನಂತರ ಭೂತಪತಿ ಪ್ರಕಾಶ, ವೀರ ಯುಧಿಷ್ಠಿರ, ಭೀಮಸೇನಾರ್ಜುನರು ಮತ್ತು ಯಮಳರು ಕೃಷ್ಣೆ ಮತ್ತು ಪುರೋಹಿತನೊಡನೆ ಪರಮ ಅಶ್ವಗಳಿಂದೊಡಗೂಡಿದ, ಬೆಲೆಬಾಳುವ ರಥವನ್ನೇರಿ, ವನಕ್ಕೆ ಹೊರಟರು. ಹೊರಡುವಾಗ ಶಿಕ್ಷಾಕ್ಷರಮಂತ್ರವಿಧ್ಯೆಗಳ ಬ್ರಾಹ್ಮಣರಿಗೆ ಚಿನ್ನದ ನಾಣ್ಯಗಳನ್ನೂ ವಸ್ತ್ರ- ಗೋವುಗಳನ್ನೂ ದಾನವನ್ನಾಗಿ ನೀಡಿದರು. ಇಪ್ಪತ್ತು ಶಸ್ತ್ರಧಾರಿಗಳು ಮುಂದೆ ನಡೆದರು ಮತ್ತು ಧನಸ್ಸು, ಕವಚಗಳು, ಲೋಹದ ಬಾಣಗಳು, ಉಪಕರಣಗಳು ಎಲ್ಲವನ್ನೂ ಎತ್ತಿಕೊಂಡು ಹಿಂದೆ…

Continue reading

ಪಾಂಡವರಿಗೆ ರಾಜ್ಯಪ್ರಾಪ್ತಿ

ಪಾಂಡವರಿಗೆ ರಾಜ್ಯಪ್ರಾಪ್ತಿ ಕುರುಗಳಲ್ಲಿ ಪಾಂಡವರ ಕುರಿತಾದ ಸಮಾಲೋಚನೆ ವಿಮನಸ್ಕ ರಾಜ ದುರ್ಯೋಧನನು ಅಶ್ವತ್ಥಾಮ, ಮಾತುಲ, ಕರ್ಣ, ಕೃಪ ಮತ್ತು ತನ್ನ ಭ್ರಾತೃಗಳ ಸಹಿತ ದ್ರೌಪದಿಯು ಶ್ವೇತವಾಹನನ್ನು ವರಿಸಿದ್ದುದನ್ನು ಕಂಡು ವಿನಿವೃತನಾಗಿ ಹಿಂದಿರುಗಿದನು. ನಾಚಿಕೊಂಡ ದುಃಶಾಸನನು ಅವನಲ್ಲಿ ಪಿಸುಮಾತಿನಲ್ಲಿ ಹೇಳಿದನು: “ಬ್ರಾಹ್ಮಣನಾಗಿಲ್ಲದಿದ್ದರೆ ಎಂದೂ ಅವನು ದ್ರೌಪದಿಯನ್ನು ಪಡೆಯುತ್ತಿರಲಿಲ್ಲ. ರಾಜನ್! ಯಾರಿಗೂ ಅವನು ಧನಂಜಯನೆಂದು ಗೊತ್ತಾಗಲಿಲ್ಲ. ದೈವವೇ ಪರಮವಾದದ್ದು ಪೌರುಷವು ನಿರರ್ಥಕ ಎನ್ನುವುದು ನನ್ನ ಅಭಿಪ್ರಾಯ. ಪಾಂಡವರು ಇನ್ನೂ ಜೀವದಿಂದಿದ್ದಾರೆಂದರೆ ನಮ್ಮ ಪೌರುಷಕ್ಕೆ…

Continue reading

ಪಾಂಡವರು ಅಶ್ವತ್ಥಾಮನಿಗೆ ಪ್ರತೀಕಾರವನ್ನೆಸಗಿದುದು

ಪಾಂಡವರು ಅಶ್ವತ್ಥಾಮನಿಗೆ ಪ್ರತೀಕಾರವನ್ನೆಸಗಿದುದು ಯುಧಿಷ್ಠಿರ ಶೋಕ ಆ ರಾತ್ರಿಯು ಕಳೆಯಲು ಮಲಗಿರುವಾಗ ನಡೆದ ಕದನದ ಕುರಿತು ಧೃಷ್ಟದ್ಯುಮ್ನನ ಸಾರಥಿಯು ಧರ್ಮರಾಜನಿಗೆ ವರದಿಮಾಡಿದನು. “ಮಹಾರಾಜ! ರಾತ್ರಿ ದ್ರೌಪದೇಯರು ದ್ರುಪದನ ಮಕ್ಕಳೊಂದಿಗೆ ಮೈಮರೆತು ನಿಶ್ಚಿಂತೆಯಿಂದ ತಮ್ಮ ತಮ್ಮ ಶಿಬಿರಗಳಲ್ಲಿ ಮಲಗಿದ್ದರು. ರಾತ್ರಿವೇಳೆ ಶಿಬಿರಕ್ಕೆ ಧಾಳಿಯಿಟ್ಟ ಕೃತವರ್ಮ, ಗೌತಮ ಕೃಪ ಮತ್ತು ಅಶ್ವತ್ಥಾಮರ ಕ್ರೂರ ಪಾಪದಿಂದ ನಾವುಗಳು ಹತರಾದೆವು! ಅವರು ಪ್ರಾಸ-ಶಕ್ತಿ-ಪರಶುಗಳಿಂದ ಸಹಸ್ರಾರು ನರ-ಗಜ-ಅಶ್ವಗಳನ್ನು ಕತ್ತರಿಸಿ ನಿನ್ನ ಸೇನೆಯನ್ನು ನಿಃಶೇಷಗೊಳಿಸಿದರು. ಮಹಾವನವನ್ನು ಪರಶುಗಳಿಂದ ತುಂಡರಿಸುವಾಗ…

Continue reading

ಪಾಂಡವರು ವನವಾಸಕ್ಕೆ ಹೊರಟಿದುದು

ಪಾಂಡವರು ವನವಾಸಕ್ಕೆ ಹೊರಟಿದುದು ದ್ಯೂತದಲ್ಲಿ ಸೋತ ಪಾರ್ಥರು ದುರಾತ್ಮ ಧಾರ್ತರಾಷ್ಟ್ರರು ಮತ್ತು ಅವರ ಅಮಾತ್ಯರ ಮೇಲೆ ಕುಪಿತಗೊಂಡು ಗಜಸಾಹ್ವಯದಿಂದ ನಿರ್ಗಮಿಸಿದರು. ಶಸ್ತ್ರಧಾರಿಗಳಾದ ಅವರು ಕೃಷ್ಣೆಯನ್ನೊಡಗೊಂಡು ವರ್ಧಮಾನ ದ್ವಾರದಿಂದ ಹೊರಬಂದು ಉತ್ತರಾಭಿಮುಖವಾಗಿ ಹೊರಟರು. ಇಂದ್ರಸೇನಾದಿ ಅವರ ಸೇವಕರು – ಒಟ್ಟು ಹದಿನಾಲ್ಕು ಮಂದಿ – ತಮ್ಮ ಪತ್ನಿಯರನ್ನೊಡಗೂಡಿ ಶೀಘ್ರ ರಥಗಳಲ್ಲಿ ಅವರನ್ನು ಹಿಂಬಾಲಿಸಿದರು. ಅವರು ಹೊರಡುತ್ತಿರುವುದನ್ನು ತಿಳಿದ ಪೌರಜನರು ಶೋಕಪೀಡಿತರಾಗಿ ಗುಂಪುಗೂಡಿ ನಿರ್ಭಯರಾಗಿ ಭೀಷ್ಮ-ವಿದುರ-ದ್ರೋಣ ಮತ್ತು ಗೌತಮರನ್ನು ನಿಂದಿಸುತ್ತಾ ಪರಸ್ಪರರಲ್ಲಿ ಮಾತನಾಡತೊಡಗಿದರು.…

Continue reading

ಬಕವಧ

ಬಕವಧ ಮಹಾರಥಿ ಕುಂತೀಪುತ್ರರು ಏಕಚಕ್ರಕ್ಕೆ ಹೋಗಿ ಬ್ರಾಹ್ಮಣನ ಮನೆಯಲ್ಲಿ ಸ್ವಲ್ಪ ಸಮಯ ಉಳಿದರು. ಅವರೆಲ್ಲರೂ ಭಿಕ್ಷೆಬೇಡಲು ಹೋಗುತ್ತಿದ್ದಾಗ ರಮಣೀಯ ವಿವಿಧ ವನ, ರಾಜರ ದೇಶ ಮತ್ತು ನದೀ ಸರೋವರಗಳನ್ನು ಕಂಡರು. ತಮ್ಮ ಸುಗುಣಗಳಿಂದಾಗಿ ನಗರವಾಸಿಗಳಿಗೆ ಪ್ರಿಯದರ್ಶನರಾದರು. ಪ್ರತಿ ರಾತ್ರಿಯೂ ಅವರು ಭಿಕ್ಷವನ್ನು ಕುಂತಿಗೆ ತಂದು ಒಪ್ಪಿಸುತ್ತಿದ್ದರು. ಅದನ್ನು ಅವಳು ವಿಂಗಡಿಸಿದ ನಂತರ ಅವರವರ ಪಾಲುಗಳನ್ನು ಸೇವಿಸುತ್ತಿದ್ದರು: ಅರ್ಧವನ್ನು ತಾಯಿಯೂ ಸೇರಿ ಪರಂತಪ ವೀರರು ತಿನ್ನುತ್ತಿದ್ದರು. ಇನ್ನೊಂದು ಅರ್ಧ ಭಾಗವನ್ನೆಲ್ಲಾ ಮಹಾಬಲಿ…

Continue reading