ಚಿತ್ರಾಂಗದ-ವಿಚಿತ್ರವೀರ್ಯ

ಚಿತ್ರಾಂಗದ-ವಿಚಿತ್ರವೀರ್ಯ ವಿವಾಹಕಾರ್ಯಗಳು ಮುಗಿದ ನಂತರ ನೃಪ ಶಂತನು ರಾಜನು ಆ ರೂಪಸಂಪನ್ನ ಕನ್ಯೆಯೊಂದಿಗೆ ಕೂಡಿ ತನ್ನ ಮನೆಯಲ್ಲಿ ವಾಸಿಸತೊಡಗಿದನು. ಶಂತನುವಿಗೆ ಸತ್ಯವತಿಯು ವೀರತೆಯಲ್ಲಿ ಮನುಷ್ಯರೆಲ್ಲರನ್ನೂ ಮೀರಿದ ಚಿತ್ರಾಂಗದ ಎನ್ನುವ ಧೀಮಂತ ವೀರ ಪುತ್ರನಿಗೆ ಜನ್ಮವಿತ್ತಳು. ನಂತರ ಪುನಃ ಆ ಮಹೇಷ್ವಾಸ ಪ್ರಭುವು ಸತ್ಯವತಿಯಲ್ಲಿ ವಿಚಿತ್ರವೀರ್ಯನೆನ್ನುವ ವೀರ್ಯವಂತ ರಾಜಪುತ್ರನನ್ನು ಪಡೆದನು. ಅವರು ಯೌವನವನ್ನು ಹೊಂದುವುದರೊಳಗೇ ಆ ಧೀಮಾನ್ ರಾಜ ಶಂತನುವು ಕಾಲಧರ್ಮಕ್ಕೊಳಗಾದನು. ಶಂತನುವು ಸ್ವರ್ಗವಾಸಿಯಾದ ನಂತರ ಭೀಷ್ಮನು, ಸತ್ಯವತಿಯ ಇಚ್ಛೆಯಂತೆ, ಅರಿಂದಮ…

Continue reading

ಚ್ಯವನ

ಚ್ಯವನ ಚ್ಯವನ-ಸುಕನ್ಯೆಯರ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೨೨-೧೨೫) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು. ಭೃಗು ಮಹರ್ಷಿಗೆ ಚ್ಯವನ ಭಾರ್ಗವನೆಂಬ ಹೆಸರಿನ ಮಗನಿದ್ದನು ಮತ್ತು ಆ ಮಹಾದ್ಯುತಿಯು ನರ್ಮದಾ ತೀರದಲ್ಲಿ ತಪಸ್ಸನ್ನಾಚರಿಸುತ್ತಿದ್ದನು. ಆ ಮಹಾತೇಜಸ್ವಿಯು ವೀರಾಸನದಲ್ಲಿ ಅಚಲವಾಗಿದ್ದು ಒಂದೇ ಸ್ಥಳದಲ್ಲಿ ಬಹಳಷ್ಟು ಕಾಲ ನಿಂತು ತಪಸ್ಸನ್ನಾಚರಿಸುತ್ತಿದ್ದನು. ಬಹು ಸಮಯದ ನಂತರ ಅವನ ಮೇಲೆ…

Continue reading

ಜಟಾಸುರವಧೆ

ಜಟಾಸುರವಧೆ ಭೀಮಸೇನಾತ್ಮಜ ಮತ್ತು ಇತರ ರಾಕ್ಷಸರು ಹೊರಟು ಹೋದ ನಂತರ ಗಂಧಮಾಧನ ಪರ್ವತದಲ್ಲಿ ಪಾಂಡವರು ಶಾಂತರಾಗಿ ವಾಸಿಸುತ್ತಿರುವಾಗ ಒಂದು ದಿನ ಭೀಮಸೇನನು ಇಲ್ಲದಿರುವಾಗ ಓರ್ವ ರಾಕ್ಷಸನು ಧರ್ಮರಾಜನನ್ನು, ನಕುಲ-ಸಹದೇವರನ್ನು ಮತ್ತು ಕೃಷ್ಣೆಯನ್ನು ಅಪಹರಿಸಿಕೊಂಡು ಹೋದನು. ಅವನು ತಾನೋರ್ವ ಮಂತ್ರ ಕುಶಲ, ಶಸ್ತ್ರ ಅಶ್ವಸ್ತ್ರ ವಿತ್ತಮ ಬ್ರಾಹ್ಮಣನೆಂದು ಹೇಳಿಕೊಂಡು ಪಾಂಡವರನ್ನು ನಿತ್ಯವೂ ಸುತ್ತುವರೆದುಕೊಂಡು ಇರುತ್ತಿದ್ದನು. ಆ ಜಟಾಸುರನೆಂಬ ವಿಖ್ಯಾತನು ಪಾರ್ಥನ ಧನುಸ್ಸು ಮತ್ತು ಬತ್ತಳಿಕೆಗಳನ್ನು ಪರೀಕ್ಷಿಸುವ ಅವಕಾಶವನ್ನು ಹುಡುಕುತ್ತಿದ್ದನು. ಅರಿಂದಮ ಭೀಮಸೇನನು…

Continue reading

ಜಯದ್ರಥವಿಮೋಕ್ಷಣ: ಪಾಂಡವರು ಯುದ್ಧದಲ್ಲಿ ಜಯದ್ರಥನನ್ನು ಸೋಲಿಸಿ, ಅಪಮಾನಗೊಳಿಸಿ ಪ್ರಾಣಸಹಿತ ಕಳುಹಿಸಿದುದು

ಜಯದ್ರಥವಿಮೋಕ್ಷಣ: ಪಾಂಡವರು ಯುದ್ಧದಲ್ಲಿ ಜಯದ್ರಥನನ್ನು ಸೋಲಿಸಿ, ಅಪಮಾನಗೊಳಿಸಿ ಪ್ರಾಣಸಹಿತ ಕಳುಹಿಸಿದುದು ಬೇಟೆಗಾಗಿ ನಾಲ್ಕು ದಿಕ್ಕುಗಳಲ್ಲಿಯೂ ಪ್ರತ್ಯೇಕವಾಗಿ ಹೋಗಿದ್ದ ಶ್ರೇಷ್ಠತಮ ಧನುರ್ಧರ ಪಾಂಡವರು ಜಿಂಕೆ, ಹಂದಿ ಮತ್ತು ಕಾಡೆಮ್ಮೆಗಳನ್ನು ಬೇಟೆಯಾಡಿ ಒಂದು ಕಡೆ ಒಟ್ಟಾಗಿ ಸೇರಿದರು. ಆ ಮಹಾವನದಲ್ಲಿ ಸಂಚರಿಸುತ್ತಿದ್ದ ಜಿಂಕೆಗಳ ಕೂಗನ್ನು ಕೇಳಿ ಯುಧಿಷ್ಠಿರನು ತಮ್ಮಂದಿರಿಗೆ ಹೇಳಿದನು: “ಸೂರ್ಯನು ಬೆಳಗುತ್ತಿರುವ ದಿಕ್ಕನ್ನು ಎದುರಿಸಿ ಜಿಂಕೆ ಮತ್ತು ಪಕ್ಷಿಗಳು ಉಗ್ರ ವೇದನೆಯಲ್ಲಿ ಕ್ರೂರವಾಗಿ ಕೂಗುತ್ತಾ ಶತ್ರುಗಳ ಮಹಾ ಆಕ್ರಮಣವನ್ನು ಸೂಚಿಸಿ ಓಡುತ್ತಿವೆ.…

Continue reading

ತ್ರಿಪುರವಧೋಪಾಖ್ಯಾನ

ತ್ರಿಪುರವಧೋಪಾಽಖ್ಯಾನ ತ್ರಿಪುರವಧೆಯ ಈ ಕಥೆಯು ವ್ಯಾಸ ಮಹಾಭಾರತದ ಕರ್ಣಪರ್ವ (ಅಧ್ಯಾಯ ೨೪) ದಲ್ಲಿ ಬರುತ್ತದೆ. ಬ್ರಹ್ಮನು ಶಿವನ ಸಾರಥಿಯಾದಂತೆ ಶಲ್ಯನೂ ಕರ್ಣನ ಸಾರಥಿಯಾಗಬೇಕೆಂದು ಕೇಳಿಕೊಳ್ಳುವಾಗ ಈ ಕಥೆಯನ್ನು ದುರ್ಯೋಧನನು ಶಲ್ಯನಿಗೆ ಹೇಳಿದನು. ದೇವತೆಗಳ ಅಸುರರ ಮಹಾ ಸಮಾಗಮವಾಗಿತ್ತು. ಪ್ರಥಮವಾಗಿ ತಾರಕಾಮಯ ಸಂಗ್ರಾಮವು ನಡೆಯಿತು. ದೇವತೆಗಳಿಂದ ದೈತ್ಯರು ಸೋತರೆಂದು ನಾವು ಕೇಳಿದ್ದೇವೆ. ದೈತ್ಯರು ಸೋಲಲು ತಾರಕನ ಮೂವರು ಮಕ್ಕಳು – ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲೀ- ಇವರು ಉಗ್ರವಾದ ತಪಸ್ಸನ್ನು ಕೈಗೊಂಡು…

Continue reading

ದಂಭೋಧ್ಭವ

ದಂಭೋಧ್ಭವ ದಂಭೋದ್ಭವನ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಭಗವದ್ಯಾನ ಪರ್ವ (ಅಧ್ಯಾಯ ೯೪) ದಲ್ಲಿ ಬರುತ್ತದೆ. ಶ್ರೀಕೃಷ್ಣನು ಸಂಧಿಗೆಂದು ಕುರುಸಭೆಗೆ ಹೋದಾಗ ಅಲ್ಲಿ ಪರಶುರಾಮನು ದುರ್ಯೋಧನನಿಗೆ ನರ-ನಾರಾಯಣರ ಮಹಾತ್ಮೆಯನ್ನು ಸಾರುವ ಈ ಕಥೆಯನ್ನು ಹೇಳಿದನು. ಹಿಂದೆ ದಂಭೋದ್ಭವನೆಂಬ ಹೆಸರಿನ ಸಾರ್ವಭೌಮನಿದ್ದನು. ಅವನು ಅಖಿಲ ಪೃಥ್ವಿಯಲ್ಲಿಯ ಎಲ್ಲವನ್ನೂ ಭೋಗಿಸುತ್ತಿದ್ದನು. ಆ ಮಹಾರಥಿ ವೀರ್ಯವಂತನು ನಿತ್ಯವೂ ರಾತ್ರಿಕಳೆದು ಪ್ರಾತಃಕಾಲದಲ್ಲೆದ್ದು ಬ್ರಾಹ್ಮಣರನ್ನೂ ಕ್ಷತ್ರಿಯರನ್ನೂ ಕೇಳುತ್ತಿದ್ದನು: “ಶೂದ್ರನಾಗಲೀ, ವೈಶ್ಯನಾಗಲೀ, ಕ್ಷತ್ರಿಯನಾಗಲೀ ಅಥವಾ ಬ್ರಾಹ್ಮಣನಾಗಲೀ ಯುದ್ಧದಲ್ಲಿ…

Continue reading

ದಾವಾಗ್ನಿಯಲ್ಲಿ ಧೃತರಾಷ್ಟ್ರಾದಿಗಳ ದಹನ

ದಾವಾಗ್ನಿಯಲ್ಲಿ ಧೃತರಾಷ್ಟ್ರಾದಿಗಳ ದಹನ ಹಸ್ತಿನಾಪುರಕ್ಕೆ ನಾರದನ ಆಗಮನ ಪಾಂಡವರು ಹಿಂದಿರುಗಿ ಎರಡು ವರ್ಷಗಳಾದನಂತರ ದೇವರ್ಷಿ ನಾರದನು ರಾಜ ಯುಧಿಷ್ಠಿರನಲ್ಲಿಗೆ ಆಗಮಿಸಿದನು. ಕುರುರಾಜ ಯುಧಿಷ್ಠಿರನು ಅವನನ್ನು ಅರ್ಚಿಸಿದನು. ವಿಶ್ರಮಿಸಿಕೊಂಡು ಆಸನದಲ್ಲಿ ಕುಳಿತಿದ್ದ ನಾರದನಿಗೆ ವಾಗ್ಮಿಶ್ರೇಷ್ಠ ಯುಧಿಷ್ಠಿರನು ಹೇಳಿದನು: “ವಿಪ್ರ! ಬಹುದಿನಗಳ ನಂತರ ನಿಮ್ಮ ಆಗಮನವನ್ನು ನಾನು ಕಾಣುತ್ತಿದ್ದೇನೆ. ನೀವು ಕುಶಲರಾಗಿದ್ದೀರಿ ತಾನೆ? ಎಲ್ಲವೂ ಶುಭವಾಗಿದೆಯಲ್ಲವೇ? ಇಲ್ಲಿ ಬರುವ ಮೊದಲು ಯಾವ ಪ್ರದೇಶಗಳನ್ನು ನೋಡಿದ್ದಿರಿ? ನಿಮಗೆ ನಾನು ಯಾವ ಕಾರ್ಯವನ್ನು ಮಾಡಲಿ? ದ್ವಿಜಮುಖ್ಯ!…

Continue reading

ದುರ್ಯೋಧನನ ಪ್ರಾಣತ್ಯಾಗ

ದುರ್ಯೋಧನನ ಪ್ರಾಣತ್ಯಾಗ ಅವರು ಸರ್ವ ಪಾಂಚಾಲರನ್ನೂ ದ್ರೌಪದೇಯರನ್ನೂ ಸಂಹರಿಸಿ ಒಟ್ಟಾಗಿ ದುರ್ಯೋಧನನು ಎಲ್ಲಿ ಹತನಾಗಿದ್ದನೋ ಅಲ್ಲಿಗೆ ಹೋದರು. ಅಲ್ಲಿಗೆ ಹೋಗಿ ನರಾಧಿಪನಿಗೆ ಸ್ವಲ್ಪವೇ ಪ್ರಾಣವು ಉಳಿದಿದೆಯೆನ್ನುವುದನ್ನು ನೋಡಿ ರಥದಿಂದ ಇಳಿದು ಧೃತರಾಷ್ಟ್ರನ ಮಗನನ್ನು ಸುತ್ತುವರೆದು ಕುಳಿತರು. ತೊಡೆಯೊಡೆದು ಕಷ್ಟದಿಂದ ಪ್ರಾಣವನ್ನು ಹಿಡಿದುಕೊಂಡು ನಿಶ್ಚೇತನನಾಗಿ ರಕ್ತವನ್ನು ಕಾರುತ್ತಾ, ನೆಲದಮೇಲಿದ್ದ ದುರ್ಯೋಧನನನ್ನು ಅವರು ನೋಡಿದರು. ಅನೇಕ ಘೋರ ತೋಳ-ನರಿಗಳು ಅವನನ್ನು ಕಚ್ಚಿ ತಿನ್ನಲು ಸುತ್ತುವರೆದು ಹತ್ತಿರ-ಹತ್ತಿರಕ್ಕೆ ಹೋಗುತ್ತಿದ್ದವು. ಮಾಂಸವನ್ನು ತಿನ್ನಲು ಮುಂದೆ ಬರುತ್ತಿರುವ…

Continue reading

ದುರ್ಯೋಧನನ ವೈಷ್ಣವ ಯಜ್ಞ

ದುರ್ಯೋಧನನ ವೈಷ್ಣವ ಯಜ್ಞ ಪಾಂಡುನಂದನರಿಂದ ಮೋಕ್ಷಿತನಾಗಿ ಹಸ್ತಿನಾಪುರಕ್ಕೆ ಮರಳಿದ ದುರ್ಯೋಧನನಿಗೆ ಭೀಷ್ಮನು ಈ ಮಾತುಗಳನ್ನಾಡಿದನು: “ಮಗನೇ! ಆ ತಪೋವನಕ್ಕೆ ಹೋಗುವ ಮೊದಲೇ ಹೋಗುವುದು ನನಗಿಷ್ಟವಿಲ್ಲವೆಂದು ನಿನಗೆ ಹೇಳಿದ್ದೆ. ಆದರೆ ನೀನು ಅದರಂತೆ ಮಾಡಲಿಲ್ಲ. ಶತ್ರುಗಳ ಬಂಧಿಯಾಗಿ ಧರ್ಮಜ್ಞ ಪಾಂಡವರಿಂದ ಬಿಡಿಸಲ್ಪಟ್ಟ ನಿನಗೆ ನಾಚಿಕೆಯಾಗುತ್ತಿಲ್ಲವೇ? ನಿನ್ನ ಮತ್ತು ನಿನ್ನ ಸೈನ್ಯದ ಪ್ರತ್ಯಕ್ಷದಲ್ಲಿಯೇ ಗಂಧರ್ವರ ಭಯದಿಂದ ಸೂತಪುತ್ರನು ರಣದಿಂದ ಓಡಿಹೋಗಲಿಲ್ಲವೇ? ಆ ನಿನ್ನ ಸೇನೆಯು ಕಷ್ಟದಿಂದ ರೋದಿಸುತ್ತಿದ್ದಾಗ ಮಹಾತ್ಮ ಪಾಂಡವರ ವಿಕ್ರಮವನ್ನು ನೋಡಿದುದರ…

Continue reading

ದುರ್ಯೋಧನನು ಪಾಂಡವರನ್ನು ಕೊಲ್ಲಲು ಯೋಚಿಸುತ್ತಿರುವಾಗ ವ್ಯಾಸನು ಧೃತರಾಷ್ಟ್ರನಿಗೆ ಸಲಹೆಗಳನ್ನಿತ್ತಿದುದು

ದುರ್ಯೋಧನನು ಪಾಂಡವರನ್ನು ಕೊಲ್ಲಲು ಯೋಚಿಸುತ್ತಿರುವಾಗ ವ್ಯಾಸನು ಧೃತರಾಷ್ಟ್ರನಿಗೆ ಸಲಹೆಗಳನ್ನಿತ್ತಿದುದು ವಿದುರನು ಹಿಂದಿರುಗಿ ಬಂದಿದ್ದಾನೆ ಮತ್ತು ರಾಜನು ಅವನನ್ನು ಸಂತವಿಸಿದ್ದಾನೆ ಎಂದು ಕೇಳಿದ ಧೃತರಾಷ್ಟ್ರಾತ್ಮಜ ದುರ್ಮತಿ ದುರ್ಯೋಧನನು ಪರಿತಪಿಸಿದನು. ಅವನು ಸೌಬಲ, ಕರ್ಣ ಮತ್ತು ದುಃಶಾಸರನ್ನು ಕರೆಯಿಸಿ ತನ್ನ ಬುದ್ಧಿಯಿಂದ ಹುಟ್ಟಿದ ಕತ್ತಲೆಯನ್ನು ಪ್ರವೇಶಿಸುತ್ತಾ ಈ ಮಾತುಗಳನ್ನಾಡಿದನು: “ಪಾಂಡುಪುತ್ರರ ಹಿತರತನಾಗಿರುವ ಮತ್ತು ಅವರ ಬುದ್ಧಿವಂತ ಮಿತ್ರನಾಗಿರುವ ಮಂತ್ರಿ ವಿದುರನು ಧೃತರಾಷ್ಟ್ರನ ಸಮ್ಮತಿಯಂತೆ ಹಿಂದಿರುಗಿ ಬಂದಿದ್ದಾನೆ. ವಿದುರನು ಪಾಂಡವರನ್ನು ಹಿಂದೆ ಕರೆಯಿಸಲು ರಾಜನ…

Continue reading