ಕುಂಡಲಾಹರಣ: ಇಂದ್ರನು ಕರ್ಣನ ಕವಚ-ಕುಂಡಲಗಳನ್ನು ಬೇಡಿ ಪಡೆದುದು

ಕುಂಡಲಾಹರಣ: ಇಂದ್ರನು ಕರ್ಣನ ಕವಚ-ಕುಂಡಲಗಳನ್ನು ಬೇಡಿ ಪಡೆದುದು ಹನ್ನೆರಡನೆಯ ವರ್ಷವು ಮುಗಿದು ಹದಿಮೂರನೆಯದು ಕಾಲಿಡುತ್ತಿರುವಾಗ ಪಾಂಡವರಿಗೆ ಹಿತವನ್ನುಂಟುಮಾಡಲೋಸುಗ ಇಂದ್ರನು ಕರ್ಣನಲ್ಲಿ ಭಿಕ್ಷೆಬೇಡಲು ಹೊರಟನು. ಕರ್ಣನ ಕುಂಡಲಗಳ ಕುರಿತು ಇಂದ್ರನು ಮಾಡಿದ ಉಪಾಯವನ್ನು ತಿಳಿದ ಸೂರ್ಯನು ಕರ್ಣನ ಬಳಿ ಬಂದನು. ಕರ್ಣನು ಸುಖಮಯ ಹಾಸಿಗೆಯ ಮೇಲೆ ವಿಶ್ವಾಸದಿಂದ ಮಲಗಿಕೊಂಡಿರುವಾಗ ರಾತ್ರಿಯ ಕೊನೆಯಲ್ಲಿ ಪುತ್ರಸ್ನೇಹ ಮತ್ತು ಕೃಪೆಗಳಿಂದ ಮುಳುಗಿಹೋಗಿದ್ದ ಸೂರ್ಯನು ವೇದವಿದ ರೂಪವಂತ ಬ್ರಾಹ್ಮಣನ ವೇಷದಲ್ಲಿ ಸ್ವಪ್ನದಲ್ಲಿ ಅವನಿಗೆ ಕಾಣಿಸಿಕೊಂಡನು. ಕರ್ಣನ ಹಿತಾರ್ಥವಾಗಿ…

Continue reading

ಕುರುಸಭೆಯಲ್ಲಿ ಸಂಜಯನು ತನ್ನ ರಾಯಭಾರವೃತ್ತಾಂತವನ್ನು ತಿಳಿಸಿದುದು

ಕುರುಸಭೆಯಲ್ಲಿ ಸಂಜಯನು ತನ್ನ ರಾಯಭಾರವೃತ್ತಾಂತವನ್ನು ತಿಳಿಸಿದುದು ಪಾಂಡವರಿಂದ ಹಿಂದಿರುಗಿದ ಸಂಜಯನು ಕೌರವ ಸಭೆಗೆ ಆಗಮಿಸಿದುದು ಆ ರಾತ್ರಿಯು ಕಳೆಯಲು ಎಲ್ಲ ರಾಜರೂ ಸೂತನನ್ನು ಕೇಳಲು ಸಂತೋಷದಿಂದ ಸಭೆಯನ್ನು ಪ್ರವೇಶಿಸಿದರು. ಪಾರ್ಥರ ಧರ್ಮಾರ್ಥಸಂಹಿತ ಮಾತುಗಳನ್ನು ಕೇಳಲು ಬಯಸಿ ಎಲ್ಲರೂ ಧೃತರಾಷ್ಟ್ರನನ್ನು ಮುಂದಿಟ್ಟುಕೊಂಡು ಶುಭ ರಾಜಸಭೆಯನ್ನು ಪ್ರವೇಶಿಸಿದರು. ಆ ವಿಸ್ತೀರ್ಣ ಸಭೆಗೆ ಬಿಳಿಯ ಬಣ್ಣವನ್ನು ಬಳಿದಿದ್ದರು. ಕನಕರಾಜಿಗಳಿಂದ ಅಲಂಕರಿಸಿದ್ದರು. ಚಂದ್ರನ ಪ್ರಭೆಯಂತೆ ಸುಂದರವಾದ ಬೆಳಕುಗಳನ್ನಿಟ್ಟಿದ್ದರು. ಗಂಧದ ನೀರನ್ನು ಸಿಂಪಡಿಸಿದ್ದರು. ಬಂಗಾರದ ಮತ್ತು ಮರದ…

Continue reading

ಕೌರವ-ಪಾಂಡವರ ಗುರುಗಳು; ವಿದ್ಯಾಭ್ಯಾಸ; ಪ್ರತಿಭಾ ಪ್ರದರ್ಶನ; ಗುರುದಕ್ಷಿಣೆ

ಕೌರವ-ಪಾಂಡವರ ಗುರುಗಳು; ವಿದ್ಯಾಭ್ಯಾಸ; ಪ್ರತಿಭಾ ಪ್ರದರ್ಶನ; ಗುರುದಕ್ಷಿಣೆ ಕೃಪ ಶಾರದ್ವತ ಮಹರ್ಷಿ ಗೌತಮನಿಗೆ ಶರದ್ವತ ಎನ್ನುವ ಹೆಸರಿನ ಮಗನಿದ್ದನು. ಆ ಮಗನು ಶರಗಳನ್ನು ಪಡೆದೇ ಹುಟ್ಟಿದ್ದನು. ಆ ಪರಂತಪನಿಗೆ ಧನುರ್ವೇದದಲ್ಲಿ ಎಷ್ಟು ಬುದ್ದಿಯಿತ್ತೋ ಅಷ್ಟು ಬುದ್ದಿ ವೇದಾಧ್ಯಯನದಲ್ಲಿ ಇರಲಿಲ್ಲ. ಬ್ರಹ್ಮವಾದಿಗಳು ಹೇಗೆ ತಪಸ್ಸಿನಿಂದ ಪರಿಶ್ರಮಿಸಿ ವೇದಗಳನ್ನು ಪಡೆಯುತ್ತಾರೋ ಹಾಗೆ ಅವನೂ ಕೂಡ ತಪಸ್ಸಿನಿಂದಲೇ ಸರ್ವ ಅಸ್ತ್ರಗಳನ್ನೂ ಪಡೆದನು. ಶರದ್ವತನ ವಿಪುಲ ತಪಸ್ಸು ಮತ್ತು ಧನುರ್ವೇದ ಪಾಂಡಿತ್ಯವು ದೇವರಾಜನನ್ನು ಸಾಕಷ್ಟು ಕಾಡಿತು.…

Continue reading

ಕೌರವ-ಪಾಂಡವರ ಜನನ; ಬಾಲ್ಯ

ಕೌರವ-ಪಾಂಡವರ ಜನನ; ಬಾಲ್ಯ ದುರ್ಯೋಧನಾದಿ ಕೌರವರ ಜನನ ನಂತರ ಗಾಂಧಾರಿಯಲ್ಲಿ ಧೃತರಾಷ್ಟ್ರನ ನೂರು ಪುತ್ರರು ಮತ್ತು ನೂರಾ ಒಂದನೆಯವನು ವೈಶ್ಯೆಯೊಬ್ಬಳಲ್ಲಿ ಜನಿಸಿದರು. ಪಾಂಡುವಿಗೆ ಕುಂತಿ ಮತ್ತು ಮಾದ್ರಿಯರಲ್ಲಿ ಕುಲಸಂತಾನಾರ್ಥವಾಗಿ ದೇವತೆಗಳಿಂದ ಐವರು ಮಹಾರಥಿ ಪುತ್ರರು ಜನಿಸಿದರು. ಒಮ್ಮೆ ಹಸಿದು ಬಳಲಿ ಬಂದಿದ್ದ ದ್ವೈಪಾಯನನನ್ನು ಗಾಂಧಾರಿಯು ತೃಪ್ತಿಗೊಳಿಸಿದಳು. ವ್ಯಾಸನು ಅವಳಿಗೆ ವರವನ್ನಿತ್ತನು. ಅವಳು ತನಗಾಗಿ ತನ್ನ ಪತಿ ಸಮಾನ ನೂರು ಪುತ್ರರನ್ನು ಕೇಳಿದಳು. ಸ್ವಲ್ಪ ಸಮಯದ ನಂತರ ಅವಳು ಧೃತರಾಷ್ಟ್ರನಿಂದ ಗರ್ಭವತಿಯಾದಳು.…

Continue reading

ಖಾಂಡವದಹನ

ಖಾಂಡವದಹನ ಬ್ರಾಹ್ಮಣ ರೂಪಿ ಅನಲನ ಆಗಮನ ರಾಜ ಧೃತರಾಷ್ಟ್ರ ಮತ್ತು ಶಾಂತನುವಿನ ಶಾಸನದಂತೆ ಇಂದ್ರಪ್ರಸ್ಥದಲ್ಲಿ ವಾಸಿಸುತ್ತಿದ್ದ ಪಾಂಡವರು ಅನ್ಯ ನರಾಧಿಪರನ್ನು ಸದೆಬಡಿದರು. ಧರ್ಮರಾಜನ ಆಶ್ರಯದಲ್ಲಿ ಸರ್ವ ಜನರೂ ಪುಣ್ಯಲಕ್ಷಣ ಕರ್ಮಗಳ ದೇಹಗಳೊಳಗಿರುವ ಆತ್ಮಗಳಂತೆ ಸುಖವಾಗಿ ವಾಸಿಸುತ್ತಿದ್ದರು. ಭರತರ್ಷಭರು ಧರ್ಮ, ಅರ್ಥ, ಕಾಮ ಈ ಮೂರು ಬಂಧುಗಳನ್ನೂ ಆತ್ಮಸಮಾನ ಬಂಧುಗಳೆಂದು ತಿಳಿದು ಸಮವಾಗಿ ಬೆಳೆಸಿದರು. ಆ ಪಾರ್ಥಿವನು ಭೂಮಿಯ ಮೇಲೆ ಸಮ ಭಾಗಗಳಲ್ಲಿ ದೇಹ ತಳೆದ ಧರ್ಮ, ಅರ್ಥ, ಕಾಮಗಳಿಗೆ ನಾಲ್ಕನೆಯವನಂತೆ…

Continue reading

ಗಾಂಧಾರೀ ವಿಲಾಪ ಮತ್ತು ಕೃಷ್ಣನಿಗೆ ಶಾಪ

ಗಾಂಧಾರೀ ವಿಲಾಪ ಮತ್ತು ಕೃಷ್ಣನಿಗೆ ಶಾಪ ಗಾಂಧಾರಿಯು ನಿಂತಲ್ಲಿಂದಲೇ ತನ್ನ ದಿವ್ಯ ದೃಷ್ಟಿಯಿಂದ ಕುರುಗಳ ವಿನಾಶಸ್ಥಳವೆಲ್ಲವನ್ನೂ ನೋಡಿದಳು. ಆ ಸಮಾನವ್ರತಚಾರಿಣೀ, ಪ್ರತಿವ್ರತೆ, ಮಹಾಭಾಗೆ ಸತ್ಯವಾದಿನಿಯು ಸತತವೂ ಉಗ್ರ ತಪೋನಿರತಳಾಗಿದ್ದು, ಪುಣ್ಯಕರ್ಮಿ ಮಹರ್ಷಿ ಕೃಷ್ಣನ ವರದಾನದಿಂದ ಪಡೆದ ದಿವ್ಯಜ್ಞಾನದ ಬಲವನ್ನು ಪಡೆದು ವಿವಿಧ ರೀತಿಗಳಲ್ಲಿ ಶೋಕಿಸಿದಳು. ಅಷ್ಟು ದೂರದಿಂದ ಕೂಡ ಆ ಬುದ್ಧಿಮತಿಯು ಅತಿ ಹತ್ತಿರದಿಂದಲೋ ಎಂಬಂತೆ ನರವೀರರ ಲೋಮಹರ್ಷಣ ರಣಭೂಮಿಯನ್ನು ನೋಡಿದಳು. ರಣಭೂಮಿಯು ಮೂಳೆಗಳಿಂದಲೂ, ತಲೆಗೂದಲುಗಳಿಂದಲೂ ವ್ಯಾಪ್ತವಾಗಿತ್ತು. ರಕ್ತದಿಂದ ತುಂಬಿಹೋಗಿತ್ತು.…

Continue reading

ಗಾಲವ ಚರಿತೆ

ಗಾಲವ ಚರಿತೆ ವಿಶ್ವಾಮಿತ್ರನ ಶಿಷ್ಯ ಗಾಲವನ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಭಗವದ್ಯಾನ ಪರ್ವ (ಅಧ್ಯಾಯ ೧೦೪-೧೨೧) ದಲ್ಲಿ ಬರುತ್ತದೆ. ಶ್ರೀಕೃಷ್ಣನು ಸಂಧಿಗೆಂದು ಕುರುಸಭೆಗೆ ಹೋದಾಗ ಅಲ್ಲಿ ದೇವರ್ಷಿ ನಾರದನು ಹಠವು ಒಳ್ಳೆಯದಲ್ಲ ಎಂದು ಸಾರುವ ಈ ಕಥೆಯನ್ನು ದುರ್ಯೋಧನನಿಗೆ ಹೇಳಿದನು. ಹಿಂದೆ ತಪಸ್ಸಿನಲ್ಲಿದ್ದ ವಿಶ್ವಾಮಿತ್ರನನ್ನು ಪರೀಕ್ಷಿಸಲೋಸುಗ ಸ್ವಯಂ ಧರ್ಮನು ಭಗವಾನ್ ಋಷಿ ವಸಿಷ್ಠನಾಗಿ ಬಂದನು. ಸಪ್ತರ್ಷಿಗಳಲ್ಲೊಬ್ಬನ ವೇಷವನ್ನು ತಾಳಿ ಹಸಿದು ಊಟಮಾಡಲು ಕೌಶಿಕನ ಆಶ್ರಮಕ್ಕೆ ಬಂದನು. ಆಗ…

Continue reading

ಗಿಡುಗ-ಪಾರಿವಾಳ

ಗಿಡುಗ-ಪಾರಿವಾಳ ಇಂದ್ರ ಮತ್ತು ಅಗ್ನಿಯರು ಗಿಡುಗ-ಪಾರಿವಾಳಗಳಾಗಿ ರಾಜಾ ಉಶೀನರನನ್ನು ಪರೀಕ್ಷಿಸಿದ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೩೦-೧೩೧) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಯಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು. ಉಶೀನರನು ದೇವತೆಗಳಿಗೆ ಸಮಾನನೋ ಎಂದು ಪರೀಕ್ಷಿಸಲು ಒಮ್ಮೆ ಇಂದ್ರ ಮತ್ತು ಅಗ್ನಿಯರು ಆ ರಾಜನಲ್ಲಿಗೆ ಬಂದರು. ಮಹಾತ್ಮ ಉಶೀನರನನ್ನು ಪರೀಕ್ಷಿಸಲು ಮತ್ತು ವರಗಳನ್ನು ನೀಡಲು ಇಂದ್ರನು ಒಂದು ಗಿಡುಗವಾಗಿ…

Continue reading

ಘೋಷಯಾತ್ರೆ: ಪಾಂಡವರನ್ನು ಅಣಕಿಸಲು ಹೋದ ದುರ್ಯೋಧನನು ತಾನೇ ಅಪಮಾನಿತನಾದುದು

ಘೋಷಯಾತ್ರೆ: ಪಾಂಡವರನ್ನು ಅಣಕಿಸಲು ಹೋದ ದುರ್ಯೋಧನನು ತಾನೇ ಅಪಮಾನಿತನಾದುದು ಪಾಂಡವರ ವನವಾಸದ ಕುರಿತು ಕೇಳಿದ ಧೃತರಾಷ್ಟ್ರನ ಸಂತಾಪ ಪಾಂಡವರು ವನದಲ್ಲಿ ಸ್ವಾಧ್ಯಾಯ-ತಪಸ್ಸುಗಳಲ್ಲಿ ನಿರತರಾಗಿ ವಾಸಿಸುತ್ತಿರುವಾಗ ಒಂದು ದಿನ ಕಥೆಗಳಲ್ಲಿ ಕುಶಲನಾದ ಓರ್ವ ವಿಪ್ರನು ಕೌರವರ ನಾಡಿಗೆ ಬಂದು ರಾಜಾ ಧೃತರಾಷ್ಟ್ರನನ್ನು ಕಂಡನು. ವೃದ್ಧರಾಜನು ಅವನನ್ನು ಕುಳ್ಳಿರಿಸಿ ಸತ್ಕರಿಸಿ ಪಾಂಡವರ ಕುರಿತು ಕೇಳಲು ಆ ವಿಪ್ರನು ಗಾಳಿಬಿಸಿಲುಗಳಿಂದ ಕೃಶಾಂಗರಾಗಿ ತಮ್ಮ ದುಃಖಿತ ಉಗ್ರ ಮುಖಗಳನ್ನು ಮುಚ್ಚಿಕೊಂಡು ವಾಸಿಸುತ್ತಿದ್ದ ಧರ್ಮ, ಅನಿಲ ಮತ್ತು…

Continue reading

ಘೋಷಯಾತ್ರೆಯಲ್ಲಿ ತನಗಾದ ಅಪಮಾನದಿಂದ ಹತಾಶನಾದ ದುರ್ಯೋಧನನಿಗೆ ದಾನವರು ಆಶ್ವಾಸನೆಯನ್ನಿತ್ತಿದುದು

ಘೋಷಯಾತ್ರೆಯಲ್ಲಿ ತನಗಾದ ಅಪಮಾನದಿಂದ ಹತಾಶನಾದ ದುರ್ಯೋಧನನಿಗೆ ದಾನವರು ಆಶ್ವಾಸನೆಯನ್ನಿತ್ತಿದುದು ದುರ್ಯೋಧನನ ಪ್ರಾಯೋಪವೇಶ ಧರ್ಮರಾಜನಿಂದ ಕಳುಹಿಸಲ್ಪಟ್ಟ ದುರ್ಯೋಧನನು ಲಜ್ಜೆಯಿಂದ ತಲೆತಗ್ಗಿಸಿಕೊಂಡು ದುಃಖಿತನಾಗಿ ಎಲ್ಲವನ್ನೂ ಕಳೆದುಕೊಂಡವನಂತೆ ನಿಧಾನವಾಗಿ ನಡೆದನು. ಚತುರಂಗಬಲವು ಅವನನ್ನು ಹಿಂಬಾಲಿಸುತ್ತಿರಲು, ಆ ರಾಜನು ಶೋಕದಿಂದ ಸೋತು, ಪರಾಭವದ ಕುರಿತು ಚಿಂತಿಸುತ್ತಾ ತನ್ನ ಪುರಕ್ಕೆ ಪ್ರಯಾಣ ಬೆಳೆಸಿದನು. ಮಾರ್ಗದಲ್ಲಿ ವಿಪುಲ ಹುಲ್ಲು-ನೀರಿರುವ ಪ್ರದೇಶದಲ್ಲಿ ವಾಹನಗಳನ್ನು ವಿಸರ್ಜಿಸಿ, ಬೀಡುಬಿಟ್ಟನು. ಉರಿಯುತ್ತಿರುವ ಬೆಂಕಿಯಂತೆ ಹೊಳೆಯುವ ಪರ್ಯಂಕದಲ್ಲಿ ರಾಹುವಿನ ಗ್ರಹಣಕ್ಕೊಳಗಾದ ಚಂದ್ರನಂತೆ ಕುಂದಿ ಕುಳಿತು ರಾತ್ರಿಯನ್ನು…

Continue reading