ಎಂಟನೆಯ ದಿನದ ಯುದ್ಧ
ಎಂಟನೆಯ ದಿನದ ಯುದ್ಧ ಕೌರವರ ಮತ್ತು ಪಾಂಡವರ ಕಡೆಯ ಜನೇಶ್ವರರು ಆ ರಾತ್ರಿಯಲ್ಲಿ ಸುಖವಾಗಿ ಮಲಗಿ ಬೆಳಗಾಗುತ್ತಲೇ ಪುನಃ ಯುದ್ಧಕ್ಕೆ ತೆರಳಿದರು. ಯುದ್ಧಕ್ಕೆ ಹೊರಡುವ ಆ ಎರಡೂ ಸೇನೆಗಳಲ್ಲಿ ಮಹಾಸಾಗರದ ಭೋರ್ಗರೆತದಂತೆ ಮಹಾ ಶಬ್ಧವುಂಟಾಯಿತು. ಆಗ ಕೌರವರ ಮಹಾಸೇನೆಯ ರಾಜ ದುರ್ಯೋಧನ, ಚಿತ್ರಸೇನ, ವಿವಿಂಶತಿ, ರಥಿಗಳಲ್ಲಿ ಶ್ರೇಷ್ಠ ಭೀಷ್ಮ, ದ್ವಿಜ ಭಾರದ್ವಾಜ ಇವರೆಲ್ಲರೂ ಸಂಘಟಿತರಾಗಿ ಸುಸನ್ನದ್ಧರಾಗಿ ಪಾಂಡವರೊಂದಿಗೆ ಯುದ್ಧಮಾಡಲು ಕವಚಗಳನ್ನು ಧರಿಸಿ ವ್ಯೂಹವನ್ನು ರಚಿಸಿದರು. ಭೀಷ್ಮನು ಸಾಗರದಂತೆ ಘೋರವಾಗಿರುವ ವಾಹನಗಳೇ…