ಮಹಾಭಾರತ ಯುದ್ಧ ಸಿದ್ಧತೆ
ಮಹಾಭಾರತ ಯುದ್ಧ ಸಿದ್ಧತೆ ಪಾಂಡವ ಸೇನೆಯು ಕುರುಕ್ಷೇತ್ರಕ್ಕೆ ಹೋಗಿ ಬೀಡುಬಿಟ್ಟುದುದು ಜನಾರ್ದನನ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಕೇಶವನ ಸಮಕ್ಷಮದಲ್ಲಿಯೇ ಧರ್ಮಾತ್ಮಾ ಸಹೋದರರಿಗೆ ಹೇಳಿದನು: “ನೀವು ಕುರುಸಂಸದಿಯ ಸಭೆಯಲ್ಲಿ ಏನಾಯಿತೆಂದು ಕೇಳಿದಿರಿ. ಕೇಶವನೂ ಕೂಡ ಅವನ ಮಾತಿನಲ್ಲಿ ಅವೆಲ್ಲವನ್ನೂ ವರದಿಮಾಡಿದ್ದಾನೆ. ಆದುದರಿಂದ ನಮ್ಮ ವಿಜಯಕ್ಕಾಗಿ ಸೇರಿರುವ ಏಳು ಅಕ್ಷೌಹಿಣೀ ಸೇನೆಗಳ ವಿಭಾಗಗಳನ್ನು ಮಾಡಿ. ಅವುಗಳ ಏಳು ವಿಖ್ಯಾತ ನಾಯಕರನ್ನು ತಿಳಿದುಕೊಳ್ಳಿ – ದ್ರುಪದ, ವಿರಾಟ, ಧೃಷ್ಟದ್ಯುಮ್ನ, ಶಿಖಂಡಿ, ಸಾತ್ಯಕಿ, ಚೇಕಿತಾನ…