ಉತ್ತರ ಗೋಗ್ರಹಣ – ೩
ಉತ್ತರ ಗೋಗ್ರಹಣ – ೩ ಅರ್ಜುನ-ಕರ್ಣರ ಯುದ್ಧ ಧನುರ್ಧರರಲ್ಲಿ ಶ್ರೇಷ್ಠ ಅರ್ಜುನನು ಶತ್ರುಸೈನ್ಯವನ್ನು ಕೂಡಲೆ ಚೆಲ್ಲಾಪಿಲ್ಲಿಮಾಡಿ ಆ ಗೋವುಗಳನ್ನು ಗೆದ್ದು ಅನಂತರ ಮತ್ತೆ ಯುದ್ಧದಲ್ಲಿ ಪ್ರಿಯವಾದುದನ್ನು ಮಾಡಬಯಸಿ, ದುರ್ಯೋಧನನತ್ತ ಹೊರಟನು. ಗೋವುಗಳು ವೇಗವಾಗಿ ಮತ್ಸ್ಯನಗರದತ್ತ ಹೋಗುತ್ತಿರಲು ಅರ್ಜುನನು ಕೃತಕೃತ್ಯನಾದನೆಂದು ತಿಳಿದು ಕುರುವೀರರು ದುರ್ಯೋಧನನತ್ತ ಹೋಗುತ್ತಿದ್ದ ಅವನ ಮೇಲೆ ಥಟ್ಟನೆ ಎರಗಿದರು. ಆಗ ದಟ್ಟವಾಗಿ ವ್ಯೂಹಗೊಂಡಿದ್ದ ಬಹಳ ಬಾವುಟಗಳಿಂದ ಕೂಡಿದ್ದ ಅವರ ಬಹುಸೇನೆಯನ್ನು ನೋಡಿ ಶತ್ರುನಾಶಕ ಅರ್ಜುನನು ಮತ್ಸ್ಯರಾಜ ವಿರಾಟನ ಮಗನನ್ನು…