ಜಯದ್ರಥವಿಮೋಕ್ಷಣ: ಪಾಂಡವರು ಯುದ್ಧದಲ್ಲಿ ಜಯದ್ರಥನನ್ನು ಸೋಲಿಸಿ, ಅಪಮಾನಗೊಳಿಸಿ ಪ್ರಾಣಸಹಿತ ಕಳುಹಿಸಿದುದು
ಜಯದ್ರಥವಿಮೋಕ್ಷಣ: ಪಾಂಡವರು ಯುದ್ಧದಲ್ಲಿ ಜಯದ್ರಥನನ್ನು ಸೋಲಿಸಿ, ಅಪಮಾನಗೊಳಿಸಿ ಪ್ರಾಣಸಹಿತ ಕಳುಹಿಸಿದುದು ಬೇಟೆಗಾಗಿ ನಾಲ್ಕು ದಿಕ್ಕುಗಳಲ್ಲಿಯೂ ಪ್ರತ್ಯೇಕವಾಗಿ ಹೋಗಿದ್ದ ಶ್ರೇಷ್ಠತಮ ಧನುರ್ಧರ ಪಾಂಡವರು ಜಿಂಕೆ, ಹಂದಿ ಮತ್ತು ಕಾಡೆಮ್ಮೆಗಳನ್ನು ಬೇಟೆಯಾಡಿ ಒಂದು ಕಡೆ ಒಟ್ಟಾಗಿ ಸೇರಿದರು. ಆ ಮಹಾವನದಲ್ಲಿ ಸಂಚರಿಸುತ್ತಿದ್ದ ಜಿಂಕೆಗಳ ಕೂಗನ್ನು ಕೇಳಿ ಯುಧಿಷ್ಠಿರನು ತಮ್ಮಂದಿರಿಗೆ ಹೇಳಿದನು: “ಸೂರ್ಯನು ಬೆಳಗುತ್ತಿರುವ ದಿಕ್ಕನ್ನು ಎದುರಿಸಿ ಜಿಂಕೆ ಮತ್ತು ಪಕ್ಷಿಗಳು ಉಗ್ರ ವೇದನೆಯಲ್ಲಿ ಕ್ರೂರವಾಗಿ ಕೂಗುತ್ತಾ ಶತ್ರುಗಳ ಮಹಾ ಆಕ್ರಮಣವನ್ನು ಸೂಚಿಸಿ ಓಡುತ್ತಿವೆ.…