ಯಕ್ಷಯುದ್ಧ
ಯಕ್ಷಯುದ್ಧ ರಾಕ್ಷಸ ಜಟಾಸುರನನ್ನು ಕೊಂದನಂತರ ಪ್ರಭು ರಾಜ ಕೌಂತೇಯನು ಪುನಃ ನಾರಾಯಣಾಶ್ರಮಕ್ಕೆ ಹೋಗಿ ಅಲ್ಲಿ ವಾಸಿಸತೊಡಗಿದನು. ಒಂದು ದಿನ ಅವನು ದ್ರೌಪದಿಯ ಸಹಿತ ಎಲ್ಲ ತಮ್ಮಂದಿರನ್ನೂ ಸೇರಿಸಿ, ತಮ್ಮ ಜಯನನ್ನು ನೆನಪಿಸಿಕೊಳ್ಳುತ್ತಾ ಹೇಳಿದನು: “ನಾವು ವನದಲ್ಲಿ ಸಂತೋಷದಿಂದ ತಿರುಗಾಡುತ್ತಾ ನಾಲ್ಕು ವರ್ಷಗಳು ಕಳೆದು ಹೋದವು. ಐದನೆಯ ವರ್ಷದಲ್ಲಿ ತನ್ನ ಉದ್ದೇಶಗಳನ್ನು ಪೂರೈಸಿದ ನಂತರ ಪರ್ವತರಾಜ, ಶ್ರೇಷ್ಠ ಶ್ವೇತಶಿಖರಕ್ಕೆ ಬೀಭತ್ಸುವು ಬರುವವನಿದ್ದಾನೆ. ನಾವೂ ಕೂಡ ಅವನನ್ನು ಭೇಟಿಮಾಡುವ ಉದ್ದೇಶದಿಂದ ಅಲ್ಲಿಗೆ ಹೋಗಿರಬೇಕು.…