ಕಾಮ್ಯಕ ವನಕ್ಕೆ ಶ್ರೀಕೃಷ್ಣನ ಆಗಮನ

ಕಾಮ್ಯಕ ವನಕ್ಕೆ ಶ್ರೀಕೃಷ್ಣನ ಆಗಮನ ಪಾಂಡವರು ಸೋತು ದುಃಖಸಂತಪ್ತರಾಗಿದ್ದಾರೆ ಎಂದು ಕೇಳಿ ಭೋಜರು ವೃಷ್ಣಿ ಮತ್ತು ಅಂಧಕರೊಡಗೂಡಿ ಆ ಮಹಾವನಕ್ಕೆ ಬಂದರು. ಪಾಂಚಾಲನ ದಾಯಾದಿಗಳೂ, ಚೇದಿರಾಜ ಧೃಷ್ಟಕೇತು, ಮತ್ತು ಲೋಕವಿಶೃತ ಮಹಾವೀರ ಕೇಕಯ ಸಹೋದರರು ಕ್ರೋಧ ಮತ್ತು ಸಂತಾಪಗೊಂಡವರಾಗಿ ವನದಲ್ಲಿ ಪಾರ್ಥರಲ್ಲಿಗೆ ಬಂದರು. ಧಾರ್ತರಾಷ್ಟ್ರರನ್ನು ಝರಿದು “ಈಗ ಏನು ಮಾಡೋಣ?” ಎಂದು ಆ ಎಲ್ಲ ಕ್ಷತ್ರಿಯರ್ಷಭರೂ ವಾಸುದೇವನ ನಾಯಕತ್ವದಲ್ಲಿ ಧರ್ಮರಾಜ ಯುಧಿಷ್ಠಿರನನ್ನು ಸುತ್ತುವರೆದು ಕುಳಿತುಕೊಂಡರು. ವಾಸುದೇವನು ಹೇಳಿದನು: “ಈ ಭೂಮಿಯು…

Continue reading

ಪಾಂಡವರ ದ್ವೈತವನ ಪ್ರವೇಶ; ಮಾರ್ಕಂಡೇಯನ ಆಗಮನ; ದಾಲ್ಭ್ಯನ ಉಪದೇಶ

ಪಾಂಡವರ ದ್ವೈತವನ ಪ್ರವೇಶ; ಮಾರ್ಕಂಡೇಯನ ಆಗಮನ; ದಾಲ್ಭ್ಯನ ಉಪದೇಶ ದ್ವೈತವನ ಪ್ರವೇಶ ದಾಶಾರ್ಹಾಧಿಪತಿಯು ಹೊರಟುಹೋದ ನಂತರ ಭೂತಪತಿ ಪ್ರಕಾಶ, ವೀರ ಯುಧಿಷ್ಠಿರ, ಭೀಮಸೇನಾರ್ಜುನರು ಮತ್ತು ಯಮಳರು ಕೃಷ್ಣೆ ಮತ್ತು ಪುರೋಹಿತನೊಡನೆ ಪರಮ ಅಶ್ವಗಳಿಂದೊಡಗೂಡಿದ, ಬೆಲೆಬಾಳುವ ರಥವನ್ನೇರಿ, ವನಕ್ಕೆ ಹೊರಟರು. ಹೊರಡುವಾಗ ಶಿಕ್ಷಾಕ್ಷರಮಂತ್ರವಿಧ್ಯೆಗಳ ಬ್ರಾಹ್ಮಣರಿಗೆ ಚಿನ್ನದ ನಾಣ್ಯಗಳನ್ನೂ ವಸ್ತ್ರ- ಗೋವುಗಳನ್ನೂ ದಾನವನ್ನಾಗಿ ನೀಡಿದರು. ಇಪ್ಪತ್ತು ಶಸ್ತ್ರಧಾರಿಗಳು ಮುಂದೆ ನಡೆದರು ಮತ್ತು ಧನಸ್ಸು, ಕವಚಗಳು, ಲೋಹದ ಬಾಣಗಳು, ಉಪಕರಣಗಳು ಎಲ್ಲವನ್ನೂ ಎತ್ತಿಕೊಂಡು ಹಿಂದೆ…

Continue reading

ದ್ವೈತವನದಲ್ಲಿ ದ್ರೌಪದೀ-ಯುಧಿಷ್ಠಿರ-ಭೀಮಸೇನರ ಸಂವಾದ

ದ್ವೈತವನದಲ್ಲಿ ದ್ರೌಪದೀ-ಯುಧಿಷ್ಠಿರ-ಭೀಮಸೇನರ ಸಂವಾದ ದ್ವೈತವನವನ್ನು ಸೇರಿದ ಪಾರ್ಥರು ಸಾಯಂಕಾಲದಲ್ಲಿ ಕೃಷ್ಣೆಯೊಂದಿಗೆ ಕುಳಿದುಕೊಂಡು ದುಃಖಶೋಕಪರಾಯಣರಾಗಿ ಮಾತನಾಡಿಕೊಳ್ಳುತ್ತಿದ್ದರು. ಆಗ ಪ್ರಿಯೆ, ಸುಂದರಿ, ಚೆನ್ನಾಗಿ ಬುದ್ಧಿವಂತಿಕೆಯ ಮಾತನಾಡಬಲ್ಲ, ಪಂಡಿತೆ, ಪತಿವ್ರತೆ ಕೃಷ್ಣೆಯು ಧರ್ಮರಾಜನಿಗೆ ಈ ಮಾತುಗಳನ್ನು ಹೇಳಿದಳು: “ಆ ಪಾಪಿ ದುರಾತ್ಮ, ಸುಳ್ಳುಗಾರ, ಧಾರ್ತರಾಷ್ಟ್ರನಿಗೆ ನಮ್ಮ ಮೇಲೆ ನಿಜವಾಗಿಯೂ ಅಷ್ಟೊಂದು ದುಃಖವಾಗುತ್ತಿರಲಿಕ್ಕಿಲ್ಲ. ರಾಜನ್! ನೀನು ನನ್ನೊಂದಿಗೆ ಮತ್ತು ನಿನ್ನ ಭ್ರಾತೃಗಳೆಲ್ಲರೊಂದಿಗೆ ಜಿನವಸ್ತ್ರಗಳನ್ನು ಧರಿಸಿ ಹೊರಡುತ್ತಿರುವಾಗ ಅವನು ಏನಾದರೂ ಮಾತನಾಡಿದನೇ? ಇಲ್ಲ ತಾನೇ? ನಮ್ಮನ್ನು ವನಕ್ಕೆ…

Continue reading

ಕಿರಾತಾರ್ಜುನೀಯ: ಅರ್ಜುನನಿಗೆ ದಿವ್ಯಾಸ್ತ್ರಗಳ ಪ್ರದಾನ

ಕಿರಾತಾರ್ಜುನೀಯ: ಅರ್ಜುನನಿಗೆ ದಿವ್ಯಾಸ್ತ್ರಗಳ ಪ್ರದಾನ ಭೀಮಸೇನ-ಯುಧಿಷ್ಠಿರರಿಬ್ಬರೂ ಹೀಗೆ ಪರಸ್ಪರ ಮಾತನಾಡಿಕೊಳ್ಳುತ್ತಿರುವಾಗ ಅಲ್ಲಿಗೆ ಸತ್ಯವತೀ ಸುತ, ಮಹಾಯೋಗಿ ವ್ಯಾಸನು ಆಗಮಿಸಿದನು. ಅವನು ಬರುತ್ತಿದ್ದಂತೇ ಪಾಂಡವರು ಅವನನ್ನು ಯಥಾನ್ಯಾಯವಾಗಿ ಪೂಜಿಸಿದರು. ಅನಂತರ ಆ ಮಾತನಾಡುವರಲ್ಲಿ ಶ್ರೇಷ್ಠನು ಯುಧಿಷ್ಠಿರನಿಗೆ ಈ ಮಾತುಗಳನ್ನಾಡಿದನು: “ಯುಧಿಷ್ಠಿರ! ನಿನ್ನ ಮನಸ್ಸು-ಹೃದಯಗಳಲ್ಲಿರುವ ವಿಷಯವನ್ನು ತಿಳಿದಿದ್ದೇನೆ. ಆದುದರಿಂದಲೇ ನಾನು ಬೇಗನೇ ಇಲ್ಲಿಗೆ ಬಂದಿದ್ದೇನೆ. ಭೀಷ್ಮ, ದ್ರೋಣ, ಕೃಪ, ಕರ್ಣ, ಮತ್ತು ದ್ರೋಣಪುತ್ರರ ಕುರಿತು ನಿನ್ನ ಹೃದಯದವನ್ನು ಆವರಿಸಿರುವ ಭಯವನ್ನು ನಾನು ವಿಧಿಯ…

Continue reading

ಇಂದ್ರಲೋಕದಲ್ಲಿ ಅರ್ಜುನ

ಇಂದ್ರಲೋಕದಲ್ಲಿ ಅರ್ಜುನ ಅಮರಾವತಿಗೆ ಪ್ರಯಾಣ ಲೋಕಪಾಲಕರು ಹೊರಟುಹೋದ ನಂತರ ಶತ್ರುನಿಬರ್ಹಣ ಪಾರ್ಥನು ದೇವರಾಜನ ರಥವು ಬರುವುದರ ಕುರಿತು ಚಿಂತಿಸಿದನು. ಹೀಗೆ ಧೀಮತ ಗುಡಾಕೇಶನು ಯೋಚಿಸುತ್ತಿರುವಾಗಲೇ ಮಾತಲಿಯೊಂದಿಗೆ ಮಹಾಪ್ರಭೆಯುಳ್ಳ ರಥವು ಆಗಮಿಸಿತು. ಆಕಾಶದಲ್ಲಿ ಕತ್ತಲೆಯನ್ನು ದೂರಮಾಡಿ, ಮೋಡಗಳನ್ನು ಕತ್ತರಿಸಿಬರುತ್ತಿದೆಯೋ ಎನ್ನುವಂತೆ ಅದು ಮಳೆಗಾಲದ ಮೋಡಗಳ ಗುಡುಗಿನಂತೆ ಘರ್ಜಿಸುತ್ತಾ ದಿಶವನ್ನೆಲ್ಲಾ ಆವರಿಸಿ ಬಂದಿತು. ಅದರಲ್ಲಿ ಖಡ್ಗಗಳು, ಭಯಂಕರ ಈಟಿಗಳು, ಉಗ್ರರೂಪಿ ಗದೆಗಳು, ದಿವ್ಯಪ್ರಭಾವದ ಪ್ರಾಸಗಳು, ಮಹಾಪ್ರಭೆಯುಳ್ಳ ಮಿಂಚುಗಳು ಮತ್ತು ಸಿಡಿಲುಗಳೂ, ವಾಯುವಿನಲ್ಲಿ ಸ್ಪೋಟವಾಗುವ…

Continue reading

ಅರ್ಜುನನು ದಿವ್ಯಾಸ್ತ್ರಗಳನ್ನು ಪಡೆದನೆಂದು ಕೇಳಿದ ಧೃತರಾಷ್ಟ್ರನ ಶೋಕ

ಅರ್ಜುನನು ದಿವ್ಯಾಸ್ತ್ರಗಳನ್ನು ಪಡೆದನೆಂದು ಕೇಳಿದ ಧೃತರಾಷ್ಟ್ರನ ಶೋಕ ಪಾರ್ಥನು ಶಕ್ರಲೋಕಕ್ಕೆ ಹೋದುದನ್ನು ಋಷಿಶ್ರೇಷ್ಠ ದ್ವೈಪಾಯನನಿಂದ ಕೇಳಿದ ಅಂಬಿಕಾಸುತನು ಸಂಜಯನಿಗೆ ಹೇಳಿದನು: “ಸೂತ! ಧೀಮಂತ ಪಾರ್ಥನ ಸಾಧನೆಗಳ ಕುರಿತು ಸಂಪೂರ್ಣವಾಗಿ ಕೇಳಿದ್ದೇನೆ. ನೀನೂ ಕೂಡ ಇದರ ಕುರಿತು ಹೇಗಾಯಿತೋ ಹಾಗೆ ತಿಳಿದುಕೊಂಡಿದ್ದೀಯಾ? ಗ್ರಾಮ್ಯಧರ್ಮದಲ್ಲಿ ಪ್ರಮತ್ತನಾದ ನನ್ನ ಮಗ ದುರ್ಬುದ್ಧಿ ಮಂದಾತ್ಮ ಪಾಪನಿಶ್ಚಯನು ಭೂಮಿಯಲ್ಲಿರುವವರೆಲ್ಲರನ್ನೂ ಸಾಯಿಸುತ್ತಾನೆ. ಧನಂಜಯನನ್ನು ಯೋದ್ಧನಾಗಿ ಪಡೆದ, ನಿತ್ಯವೂ, ಹಾಸ್ಯದಲ್ಲಿಯೂ, ಸತ್ಯವನ್ನೇ ಮಾತನಾಡುವ, ಮಹಾತ್ಮನು ತ್ರೈಲೋಕ್ಯವನ್ನೂ ತನ್ನದಾಗಿಸಿಕೊಳ್ಳಬಲ್ಲ!  ಮೃತ್ಯು ಮತ್ತು…

Continue reading

ವನಕ್ಕೆ ಋಷಿ ಬೃಹದಶ್ವನ ಆಗಮನ

ವನಕ್ಕೆ ಋಷಿ ಬೃಹದಶ್ವನ ಆಗಮನ ವನದಲ್ಲಿ ಪಾಂಡವರ ಆಹಾರ; ಅರ್ಜುನನ ಕುರಿತಾದ ಚಿಂತೆ ಶುದ್ಧಬಾಣಗಳಿಂದ ವನ್ಯ ಮೃಗಗಳನ್ನು ಬೇಟೆಯಾಡಿ ಅದನ್ನು ಮೊದಲು ಬ್ರಾಹ್ಮಣರಿಗೆ ಬಡಿಸಿ ನಂತರ ಆ ಪುರುಷರ್ಷಭ ಪಾಂಡವರು ಸೇವಿಸುತ್ತಿದ್ದರು. ಆ ಶೂರ ಮಹೇಷ್ವಾಸರು ವನದಲ್ಲಿ ವಾಸಿಸುವಾಗ ಅಗ್ನಿಯನ್ನು ಹೊಂದಿದ್ದ ಮತ್ತು ಅಗ್ನಿಯನ್ನು ಹೊಂದಿರದ ಬ್ರಾಹ್ಮಣರು ಅವರನ್ನು ಅನುಸರಿಸಿ ಹೋಗಿದ್ದರು. ಯುಧಿಷ್ಠಿರನ ಆಶ್ರಯದಲ್ಲಿ ಮೋಕ್ಷದ ಹತ್ತು ಬಗೆಗಳನ್ನೂ ತಿಳಿದಿದ್ದ ಸಹಸ್ರಾರು ಮಹಾತ್ಮ ಸ್ನಾತಕ ಬ್ರಾಹ್ಮಣರು ಇದ್ದರು. ರುರು, ಕೃಷ್ಣಮೃಗ,…

Continue reading

ಯುಧಿಷ್ಠಿರನ ತೀರ್ಥಯಾತ್ರೆ

ಯುಧಿಷ್ಠಿರನ ತೀರ್ಥಯಾತ್ರೆ ತೀರ್ಥಯಾತ್ರೆಯ ಕುರಿತು ಯುಧಿಷ್ಠಿರ-ನಾರದರ ಸಂವಾದ ಧನಂಜಯನನ್ನು ಅಗಲಿದ ಆ ಮಹಾರಥಿ ಪಾಂಡವರು ಮಹಾಭಾಗೆ ದ್ರೌಪದಿಯೊಂದಿಗೆ ಆ ವನದಲ್ಲಿ ವಾಸಿಸುತ್ತಿದ್ದರು. ಅನಂತರ ಅವರು ಉರಿಯುತ್ತಿರುವ ಅಗ್ನಿಯ ತೇಜಸ್ಸಿಗೆ ಸಮಾನ, ಬ್ರಹ್ಮಜ್ಞಾನದ ಶೋಭೆಯಿಂದ ಬೆಳಗುತ್ತಿರುವ ಮಹಾತ್ಮ ದೇವರ್ಷಿ ನಾರದನನ್ನು ಕಂಡರು. ಭ್ರಾತೃಗಳಿಂದ ಪರಿವೃತನಾದ ಶ್ರೀಮಾನ್ ಕುರುಸತ್ತಮನು ದೇವತೆಗಳಿಂದ ಆವೃತನಾದ ಶತಕ್ರತುವಿನಂತೆ ವಿಶೇಷ ಕಾಂತಿಯಿಂದ ಬೆಳಗುತ್ತಿದ್ದನು. ಸಾವಿತ್ರಿಯು ವೇದಗಳನ್ನು ಮತ್ತು ಅರ್ಕ ಪ್ರಭೆಯು ಮೇರು ಪರ್ವತದ ಶಿಖರವನ್ನು ಹೇಗೆ ತೊರೆಯುವುದಿಲ್ಲವೋ ಹಾಗೆ…

Continue reading

ಸೌಗಂಧಿಕಾ ಹರಣ

ಸೌಗಂಧಿಕಾ ಹರಣ ಗಂಧಮಾಧನ ಪರ್ವತದಲ್ಲಿ ಆ ವೀರ ಪುರುಷವ್ಯಾಘ್ರ ಪಾಂಡವರು ವಿಹರಿಸುತ್ತಾ ರಂಜಿಸಿಕೊಳ್ಳುತ್ತಾ ಅತ್ಯಂತ ಶುಚಿಯಾಗಿದ್ದುಕೊಂಡು ಧನಂಜಯನನ್ನು ನೋಡುವ ಆಕಾಂಕ್ಷೆಯಿಂದ ಆರು ರಾತ್ರಿಗಳನ್ನು ಕಳೆದರು. ಮನೋಜ್ಞವಾದ, ಸರ್ವಭೂತಗಳಿಗೂ ಮನೋರಮವಾದ, ಆ ಶ್ರೇಷ್ಠ ಕಾನನದಲ್ಲಿ, ಹೂಗಳ ಗೊಂಚಲುಗಳಿಂದ ತೂಗುತ್ತಿದ್ದ, ಹಣ್ಣಿನ ಭಾರದಿಂದ ಬಾಗಿನಿಂತಿದ್ದ ಮರಗಳಿಂದ ಶೋಭಿತವಾದ, ಎಲ್ಲೆಲ್ಲೂ ಸುಂದರವಾಗಿದ್ದ, ಗಂಡುಕೋಗಿಲೆಗಳ ಕೂಗಿನಿಂದ ತುಂಬಿದ್ದ, ದಟ್ಟವಾದ ಚಿಗುರೆಲೆಗಳಿಂದ ಕೂಡಿದ್ದ, ಮನೋರಮವಾದ ತಣ್ಣಗಿನ ನೆರಳನ್ನು ಹೊಂದಿದ್ದ, ತಿಳಿನೀರಿನ ವಿಚಿತ್ರ ಸರೋವರಗಳಿಂದ ಕೂಡಿದ್ದ, ಕಮಲಗಳಿಂದ ಮತ್ತು…

Continue reading

ಜಟಾಸುರವಧೆ

ಜಟಾಸುರವಧೆ ಭೀಮಸೇನಾತ್ಮಜ ಮತ್ತು ಇತರ ರಾಕ್ಷಸರು ಹೊರಟು ಹೋದ ನಂತರ ಗಂಧಮಾಧನ ಪರ್ವತದಲ್ಲಿ ಪಾಂಡವರು ಶಾಂತರಾಗಿ ವಾಸಿಸುತ್ತಿರುವಾಗ ಒಂದು ದಿನ ಭೀಮಸೇನನು ಇಲ್ಲದಿರುವಾಗ ಓರ್ವ ರಾಕ್ಷಸನು ಧರ್ಮರಾಜನನ್ನು, ನಕುಲ-ಸಹದೇವರನ್ನು ಮತ್ತು ಕೃಷ್ಣೆಯನ್ನು ಅಪಹರಿಸಿಕೊಂಡು ಹೋದನು. ಅವನು ತಾನೋರ್ವ ಮಂತ್ರ ಕುಶಲ, ಶಸ್ತ್ರ ಅಶ್ವಸ್ತ್ರ ವಿತ್ತಮ ಬ್ರಾಹ್ಮಣನೆಂದು ಹೇಳಿಕೊಂಡು ಪಾಂಡವರನ್ನು ನಿತ್ಯವೂ ಸುತ್ತುವರೆದುಕೊಂಡು ಇರುತ್ತಿದ್ದನು. ಆ ಜಟಾಸುರನೆಂಬ ವಿಖ್ಯಾತನು ಪಾರ್ಥನ ಧನುಸ್ಸು ಮತ್ತು ಬತ್ತಳಿಕೆಗಳನ್ನು ಪರೀಕ್ಷಿಸುವ ಅವಕಾಶವನ್ನು ಹುಡುಕುತ್ತಿದ್ದನು. ಅರಿಂದಮ ಭೀಮಸೇನನು…

Continue reading