ಯುಧಿಷ್ಠಿರನ ವೈಭವವನ್ನು ಕಂಡ ದುರ್ಯೋಧನನ ಅಸೂಯೆ-ಸಂತಾಪ; ದ್ಯೂತದ ಸಂಚು

ಯುಧಿಷ್ಠಿರನ ವೈಭವವನ್ನು ಕಂಡ ದುರ್ಯೋಧನನ ಅಸೂಯೆ-ಸಂತಾಪ; ದ್ಯೂತದ ಸಂಚು ದುರ್ಯೋಧನನ ಸಂತಾಪ ಇಂದ್ರಪ್ರಸ್ಥದಲ್ಲಿ ಪಾಂಡವರ ಮಯ ಸಭೆಯಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ದುರ್ಯೋಧನನು ಶಕುನಿಯೊಡನೆ ನಿಧಾನವಾಗಿ ಸಭೆಯ ಸರ್ವಸ್ವವನ್ನೂ ನೋಡಿದನು. ಕುರುನಂದನನು ಇದಕ್ಕೂ ಮೊದಲು ತನ್ನ ನಾಗಸಾಹ್ವಯದಲ್ಲಿ ನೋಡಿಯೇ ಇರದ ದಿವ್ಯ ಅಭಿಪ್ರಾಯಗಳನ್ನು ಅಲ್ಲಿ ನೋಡಿದನು. ಒಮ್ಮೆ ಮಹೀಪತಿ ರಾಜ ಧಾರ್ತರಾಷ್ಟ್ರನು ಸ್ಪಟಿಕದಿಂದ ನಿರ್ಮಿಸಿದ್ದ ಸಭಾಮಧ್ಯದ ಒಂದು ನೆಲದ ಬಳಿ ಬಂದು ನೀರಿದೆಯೆಂದು ಶಂಕಿಸಿ ಬುದ್ಧಿಮೋಹಿತನಾಗಿ ತನ್ನ ವಸ್ತ್ರಗಳನ್ನು ಎತ್ತಿಹಿಡಿದನು. ನಂತರ…

Continue reading

ದ್ಯೂತ: ದ್ರೌಪದೀ ವಸ್ತ್ರಾಪಹರಣ

ದ್ಯೂತ: ದ್ರೌಪದೀ ವಸ್ತ್ರಾಪಹರಣ ದ್ಯೂತಾರಂಭ ಪಾಂಡವರು ಜೂಜಾಡುವವರಿಂದ ತುಂಬಿದ್ದ ರಮ್ಯ ಸಭೆಯನ್ನು ಪ್ರವೇಶಿಸಲು ಶಕುನಿಯು ಹೇಳಿದನು: “ರಾಜನ್! ಸಭೆಯಲ್ಲಿ ಕಂಬಳಿಯನ್ನು ಹಾಸಿಯಾಗಿದೆ ಮತ್ತು ಇಲ್ಲಿರುವವರು ಸಂತೋಷಪಡಲು ಸಮಯವನ್ನು ತೆಗೆದಿಟ್ಟಿದ್ದಾರೆ. ನಾವು ದಾಳಗಳನ್ನು ಉರುಳಿಸುವಾಗ ಪಣದ ಕುರಿತು ಪರಸ್ಪರರಲ್ಲಿ ಒಪ್ಪಂದವಿರಲಿ.” ಯುಧಿಷ್ಠಿರನು ಹೇಳಿದನು: “ರಾಜನ್! ಪಣವಿಟ್ಟು ಜೂಜಾಡುವುದು ಮೋಸ ಮತ್ತು ಪಾಪದ ಕೆಲಸ. ಅದರಲ್ಲಿ ಕ್ಷತ್ರಿಯ ಪರಾಕ್ರಮವೇನೂ ಇಲ್ಲ ಮತ್ತು ಶಾಶ್ವತ ನೀತಿಯೂ ಇಲ್ಲ. ನೀನು ಏಕೆ ದ್ಯೂತವನ್ನು ಪ್ರಶಂಸಿಸುತ್ತಿದ್ದೀಯೆ? ಶಕುನಿ!…

Continue reading

ಅನುದ್ಯೂತ; ಪಾಂಡವರಿಗೆ ವನವಾಸ

ಅನುದ್ಯೂತ; ಪಾಂಡವರಿಗೆ ವನವಾಸ ಯುಧಿಷ್ಠಿರನನ್ನು ಪುನಃ ದ್ಯೂತಕ್ಕೆ ಕರೆದುದು ಧೀಮತ ಧೃತರಾಷ್ಟ್ರನು ಅವರಿಗೆ ಹೋಗಲು ಅನುಮತಿಯನ್ನು ಕೊಟ್ಟ ಎಂದು ತಿಳಿದಾಕ್ಷಣವೇ ದುಃಶಾಸನನು ಅಣ್ಣನ ಬಳಿ ಹೋದನು. ಅಲ್ಲಿ ಅಮಾತ್ಯರ ಜೊತೆಗಿದ್ದ ದುರ್ಯೋಧನನ್ನು ಭೆಟ್ಟಿಯಾಗಿ ದುಃಖಾರ್ತನಾಗಿ ಹೇಳಿದನು: “ಕಷ್ಟಪಟ್ಟು ಗಳಿಸಿದ ಎಲ್ಲವನ್ನೂ ಆ ಮುದುಕನು ನಾಶಮಾಡಿಬಿಟ್ಟನಲ್ಲ! ಎಲ್ಲ ಸಂಪತ್ತನ್ನೂ ಶತ್ರುಗಳಿಗೆ ಹೋಗುವ ಹಾಗೆ ಮಾಡಿದ್ದಾನೆ. ಮಹಾರಥಿಗಳೇ! ಇದನ್ನು ಯೋಚಿಸಿ.” ಆಗ ಮಾನಿನ ದುರ್ಯೋಧನನು ಕರ್ಣ ಮತ್ತು ಸೌಬಲ ಶಕುನಿಯರೊಡಗೂಡಿ ಒಟ್ಟಿಗೇ ಪಾಂಡವರ…

Continue reading

ಪಾಂಡವರು ವನವಾಸಕ್ಕೆ ಹೊರಟಿದುದು

ಪಾಂಡವರು ವನವಾಸಕ್ಕೆ ಹೊರಟಿದುದು ದ್ಯೂತದಲ್ಲಿ ಸೋತ ಪಾರ್ಥರು ದುರಾತ್ಮ ಧಾರ್ತರಾಷ್ಟ್ರರು ಮತ್ತು ಅವರ ಅಮಾತ್ಯರ ಮೇಲೆ ಕುಪಿತಗೊಂಡು ಗಜಸಾಹ್ವಯದಿಂದ ನಿರ್ಗಮಿಸಿದರು. ಶಸ್ತ್ರಧಾರಿಗಳಾದ ಅವರು ಕೃಷ್ಣೆಯನ್ನೊಡಗೊಂಡು ವರ್ಧಮಾನ ದ್ವಾರದಿಂದ ಹೊರಬಂದು ಉತ್ತರಾಭಿಮುಖವಾಗಿ ಹೊರಟರು. ಇಂದ್ರಸೇನಾದಿ ಅವರ ಸೇವಕರು – ಒಟ್ಟು ಹದಿನಾಲ್ಕು ಮಂದಿ – ತಮ್ಮ ಪತ್ನಿಯರನ್ನೊಡಗೂಡಿ ಶೀಘ್ರ ರಥಗಳಲ್ಲಿ ಅವರನ್ನು ಹಿಂಬಾಲಿಸಿದರು. ಅವರು ಹೊರಡುತ್ತಿರುವುದನ್ನು ತಿಳಿದ ಪೌರಜನರು ಶೋಕಪೀಡಿತರಾಗಿ ಗುಂಪುಗೂಡಿ ನಿರ್ಭಯರಾಗಿ ಭೀಷ್ಮ-ವಿದುರ-ದ್ರೋಣ ಮತ್ತು ಗೌತಮರನ್ನು ನಿಂದಿಸುತ್ತಾ ಪರಸ್ಪರರಲ್ಲಿ ಮಾತನಾಡತೊಡಗಿದರು.…

Continue reading

ಶೌನಕ ಗೀತೆ

ಶೌನಕ ಗೀತೆ ನಕ್ಷತ್ರಗಳಿಂದೊಡಗೂಡಿದ ರಾತ್ರಿ ಕಳೆದು ಪ್ರಭಾತವಾಗಲು ಭಿಕ್ಷವನ್ನೇ ಉಂಡು ಜೀವಿಸುವ ವಿಪ್ರರು ವನಕ್ಕೆ ಹೊರಡಲು ಸಿದ್ಧರಾಗಿ ಪಾಂಡವರ ಎದಿರು ನಿಂತರು. ಆಗ ಕುಂತೀಪುತ್ರ ರಾಜ ಯುಧಿಷ್ಠಿರನು ಅವರನ್ನು ಉದ್ದೇಶಿಸಿ ಇಂತೆಂದನು: “ರಾಜ್ಯ, ಸಂಪತ್ತು ಮತ್ತು ಎಲ್ಲವನ್ನೂ ಕಳೆದುಕೊಂಡು ದುಃಖಿತರಾದ ನಾವು ವನಕ್ಕೆ ತೆರಳಿ ಫಲ-ಮೂಲಗಳನ್ನು ಸೇವಿಸಿ ಜೀವಿಸುತ್ತೇವೆ. ವನವು ಹಲವು ಆಪತ್ತುಗಳು, ಹಲವಾರು ಕ್ರೂರಪ್ರಾಣಿಗಳು ಮತ್ತು ಸರ್ಪಗಳಿಂದ ತುಂಬಿದೆ. ಅಲ್ಲಿ ನಿಮಗೆ ನಿಜವಾಗಿಯೂ ಅತ್ಯಂತ ಕಷ್ಟಗಳಾಗುತ್ತವೆ ಎನ್ನುವುದು ನನ್ನ…

Continue reading

ಯುಧಿಷ್ಠಿರನು ಸೂರ್ಯದೇವನಿಂದ ಅಕ್ಷಯಪಾತ್ರೆಯನ್ನು ಪಡೆದುದು

ಯುಧಿಷ್ಠಿರನು ಸೂರ್ಯದೇವನಿಂದ ಅಕ್ಷಯಪಾತ್ರೆಯನ್ನು ಪಡೆದುದು ಶೌನಕನು ಹೀಗೆ ಹೇಳಲು ಕುಂತೀಪುತ್ರ ಯುಧಿಷ್ಠಿರನು ಸಹೋದರರೊಂದಿಗೆ ಪುರೋಹಿತ ಧೌಮ್ಯನ ಬಳಿಸಾರಿ ಹೇಳಿದನು: “ಈ ವೇದಪಾರಂಗತ ಬ್ರಾಹ್ಮಣರು ನನ್ನನ್ನು ಅನುಸರಿಸಿ ಬಂದಿದ್ದಾರೆ. ಆದರೆ ನಾನು ಅವರನ್ನು ಪಾಲಿಸಲು ಶಕ್ತನಾಗಿಲ್ಲ ಎಂದು ಅತೀವ ದುಃಖಿತನಾಗಿದ್ದೇನೆ. ಅವರನ್ನು ತ್ಯಜಿಸಲೂ ಶಕ್ತನಿಲ್ಲ ಮತ್ತು ಅವರಿಗೆ ಕೊಡಲೂ ಶಕ್ತನಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕು?” ಧರ್ಮಭೃತರಲ್ಲಿ ಶ್ರೇಷ್ಠ ಧೌಮ್ಯನು ಧರ್ಮಮಾರ್ಗವನ್ನು ಹುಡುಕುತ್ತಾ ಒಂದು ಕ್ಷಣ ಯೋಚಿಸಿ ಯುಧಿಷ್ಠಿರನಿಗೆ ಹೇಳಿದನು:…

Continue reading

ಧೃತರಾಷ್ಟ್ರ-ವಿದುರರ ನಡುವೆ ಮನಸ್ತಾಪ

ಧೃತರಾಷ್ಟ್ರ-ವಿದುರರ ನಡುವೆ ಮನಸ್ತಾಪ ಪಾಂಡವರು ವನಕ್ಕೆ ತೆರಳಿದ ನಂತರ ಪರಿತಪಿಸುತ್ತಿದ್ದ ಧೃತರಾಷ್ಟ್ರನು ಅಗಾಧಬುದ್ಧಿ ಧರ್ಮಾತ್ಮ ವಿದುರನಿಗೆ ಇಂತೆಂದನು: “ನಿನ್ನ ಬುದ್ಧಿಯು ಭಾರ್ಗವನದಷ್ಟೇ ಶುದ್ಧವಾದುದು. ನಿನ್ನ ಧರ್ಮವು ಶ್ರೇಷ್ಠ ಮತ್ತು ಸೂಕ್ಷ್ಮ. ಕುರುಗಳು ನಿನ್ನನ್ನು ನಿಷ್ಪಕ್ಷಪಾತಿ ಎಂದು ಒಪ್ಪಿಕೊಳ್ಳುತ್ತಾರೆ. ಅವರಿಗೆ ಮತ್ತು ನನಗೆ ಈಗ ಯಾವುದು ಒಳ್ಳೆಯದು ಎನ್ನುವುದನ್ನು ಹೇಳು! ವಿದುರ! ಇವೆಲ್ಲ ನಡೆದುಹೋಯಿತಲ್ಲ! ಈಗ ನಾನು ಏನು ಮಾಡಬೇಕು? ಪ್ರಜೆಗಳು ನಮ್ಮೊಂದಿಗೇ ಇರುವಂತೆ ಹೇಗೆ ಮಾಡಬಹುದು? ಅವರು ನಮ್ಮನ್ನು ಸಮೂಲವಾಗಿ…

Continue reading

ದುರ್ಯೋಧನನು ಪಾಂಡವರನ್ನು ಕೊಲ್ಲಲು ಯೋಚಿಸುತ್ತಿರುವಾಗ ವ್ಯಾಸನು ಧೃತರಾಷ್ಟ್ರನಿಗೆ ಸಲಹೆಗಳನ್ನಿತ್ತಿದುದು

ದುರ್ಯೋಧನನು ಪಾಂಡವರನ್ನು ಕೊಲ್ಲಲು ಯೋಚಿಸುತ್ತಿರುವಾಗ ವ್ಯಾಸನು ಧೃತರಾಷ್ಟ್ರನಿಗೆ ಸಲಹೆಗಳನ್ನಿತ್ತಿದುದು ವಿದುರನು ಹಿಂದಿರುಗಿ ಬಂದಿದ್ದಾನೆ ಮತ್ತು ರಾಜನು ಅವನನ್ನು ಸಂತವಿಸಿದ್ದಾನೆ ಎಂದು ಕೇಳಿದ ಧೃತರಾಷ್ಟ್ರಾತ್ಮಜ ದುರ್ಮತಿ ದುರ್ಯೋಧನನು ಪರಿತಪಿಸಿದನು. ಅವನು ಸೌಬಲ, ಕರ್ಣ ಮತ್ತು ದುಃಶಾಸರನ್ನು ಕರೆಯಿಸಿ ತನ್ನ ಬುದ್ಧಿಯಿಂದ ಹುಟ್ಟಿದ ಕತ್ತಲೆಯನ್ನು ಪ್ರವೇಶಿಸುತ್ತಾ ಈ ಮಾತುಗಳನ್ನಾಡಿದನು: “ಪಾಂಡುಪುತ್ರರ ಹಿತರತನಾಗಿರುವ ಮತ್ತು ಅವರ ಬುದ್ಧಿವಂತ ಮಿತ್ರನಾಗಿರುವ ಮಂತ್ರಿ ವಿದುರನು ಧೃತರಾಷ್ಟ್ರನ ಸಮ್ಮತಿಯಂತೆ ಹಿಂದಿರುಗಿ ಬಂದಿದ್ದಾನೆ. ವಿದುರನು ಪಾಂಡವರನ್ನು ಹಿಂದೆ ಕರೆಯಿಸಲು ರಾಜನ…

Continue reading

ಮೈತ್ರೇಯನು ದುರ್ಯೋಧನನಿಗೆ ಶಾಪವನ್ನಿತ್ತಿದುದು

ಮೈತ್ರೇಯನು ದುರ್ಯೋಧನನಿಗೆ ಶಾಪವನ್ನಿತ್ತಿದುದು ವ್ಯಾಸನು ಹೋಗುತ್ತಿದ್ದಂತೆಯೇ ಮೈತ್ರೇಯನು ಕಾಣಿಸಿಕೊಂಡನು ಮತ್ತು ಧೃತರಾಷ್ಟ್ರನು ಪುತ್ರರೊಂದಿಗೆ ಅವನನ್ನು ಪೂಜಿಸಿ ಬರಮಾಡಿಕೊಂಡನು. ಅಂಬಿಕಾಸುತ ರಾಜ ಧೃತರಾಷ್ಟ್ರನು ಆ ಮುನಿಪುಂಗವನಿಗೆ ಅರ್ಘ್ಯಾದಿ ಎಲ್ಲ ಸತ್ಕಾರಕ್ರಿಯೆಗಳನ್ನು ಪೂರೈಸಿ, ಅವನು ವಿಶ್ರಾಂತಗೊಳ್ಳಲು ವಿನಯದಿಂದ ಕೇಳಿದನು: “ಭಗವನ್! ಕುರುಜಂಗಲಕ್ಕೆ ನಿಮ್ಮ ಆಗಮನವು ಸುಖಕರವಾಗಿತ್ತೇ? ಐವರು ವೀರ ಪಾಂಡವ ಸಹೋದರರು ಕುಶಲರಾಗಿರುವರಷ್ಟೇ? ಆ ಪುರುಷರ್ಷಭರು ಒಪ್ಪಂದದಂತೆ ಇರಲು ಬಯಸುತ್ತಾರೆ ತಾನೇ? ಕುರುಗಳ ಒಳ್ಳೆಯ ಭ್ರಾತೃತ್ವವು ಅವಿಚ್ಛಿನ್ನವಾಗಿ ಉಳಿದುಕೊಳ್ಳುತ್ತದೆ ತಾನೇ?” ಮೈತ್ರೇಯನು ಹೇಳಿದನು:…

Continue reading

ಕಿರ್ಮೀರವಧ

ಕಿರ್ಮೀರವಧ ಮೈತ್ರೇಯನು ಹೊರಟುಹೋದ ನಂತರ ಧೃತರಾಷ್ಟ್ರನು ಹೇಳಿದನು: “ಕ್ಷತ್ತ! ಕಿರ್ಮೀರನ ವಧೆಯ ಕುರಿತು ಕೇಳಲು ಬಯಸುತ್ತೇನೆ. ರಾಕ್ಷಸ ಮತ್ತು ಭೀಮಸೇನರ ನಡುವೆ ಸಮಾಗಮವು ಹೇಗೆ ಆಯಿತು ಎನ್ನುವುದನ್ನು ಹೇಳು.” ವಿದುರನು ಹೇಳಿದನು: “ಅವರು ಪುನಃ ಪುನಃ ಹೇಳುತ್ತಿದ್ದುದನ್ನು ಇದಕ್ಕೆ ಮೊದಲೇ ಕೇಳಿದ ಅಮಾನುಷಕರ್ಮಿ ಭೀಮನ ಕೃತ್ಯವನ್ನು ಕೇಳು. ರಾಜೇಂದ್ರ! ದ್ಯೂತದಲ್ಲಿ ಸೋತ ಪಾಂಡವರು ಇಲ್ಲಿಂದ ಹೊರಟು ಮೂರು ಹಗಲು ರಾತ್ರಿ ನಡೆದು ಕಾಮ್ಯಕವೆಂಬ ಹೆಸರಿನ ಆ ವನವನ್ನು ಸೇರಿದರು. ಢಕಾಯಿತರಿಗೆ…

Continue reading