ಹಿಡಿಂಬವಧ
ಹಿಡಿಂಬವಧ ವನದಲ್ಲಿ ಪಾಂಡವರು ಮಲಗಿರುವಾಗ, ಆ ವನದಿಂದ ಸ್ವಲ್ಪ ದೂರದಲ್ಲಿಯೇ ಒಂದು ಶಾಲವೃಕ್ಷದಲ್ಲಿ ಹಿಡಿಂಬ ಎಂಬ ಹೆಸರಿನ ರಾಕ್ಷಸನು ಮಲಗಿದ್ದನು. ಮಹಾವೀರ, ಮಹಾಬಲಿ, ವಿರೂಪರೂಪಿ, ಪಿಂಗಾಕ್ಷ, ಕರಾಲ, ಘೋರದರ್ಶನ ಕ್ರೂರನು ಮನುಷ್ಯರ ಮಾಂಸವನ್ನು ಭಕ್ಷಿಸುವವನಾಗಿದ್ದನು. ಹಸಿದ ಅವನು ಮಾಂಸವನ್ನು ಬಯಸುತ್ತಿದ್ದಾಗ ಅಲ್ಲಿರುವ ಅವರನ್ನು ನೋಡಿದನು. ಪುನಃ ಪುನಃ ಅವನ ಕಣ್ಣುಗಳು ಅವರೆಡೆಗೇ ತಿರುಗುತ್ತಿರಲು ಅವನು ತನ್ನ ಬೆರಳುಗಳನ್ನು ಮೇಲಕ್ಕೆ ಮಾಡಿ ಹೊಲಸಾದ ತನ್ನ ಕೂದಲುಗಳನ್ನು ಕೆರೆದು ಕೆದರಿ ತನ್ನ ಅಗಲ…