ವ್ಯಾಸನು ಧೃತರಾಷ್ಟ್ರಾದಿಗಳಿಗೆ ಯುದ್ಧದಲ್ಲಿ ಮಡಿದ ದುರ್ಯೋಧನಾದಿ ಯೋದ್ಧರನ್ನು ತೋರಿಸಿದುದು
ವ್ಯಾಸನು ಧೃತರಾಷ್ಟ್ರಾದಿಗಳಿಗೆ ಯುದ್ಧದಲ್ಲಿ ಮಡಿದ ದುರ್ಯೋಧನಾದಿ ಯೋದ್ಧರನ್ನು ತೋರಿಸಿದುದು ಪಾಂಡವಶೋಕ ಕೌರವೇಂದ್ರನು ವನಕ್ಕೆ ತೆರಳಿದ ನಂತರ ಪಾಂಡವರು ಮಾತೃಶೋಕದಿಂದ ಪೀಡಿತರಾಗಿ ದುಃಖಶೋಕಗಳಿಂದ ಪರಿತಪಿಸಿದರು. ಹಾಗೆಯೇ ಪೌರಜನರೆಲ್ಲರೂ ಜನಾಧಿಪನ ಕುರಿತು ಶೋಕಿಸುತ್ತಿದ್ದರು. ರಾಜನ ಕುರಿತು ಬ್ರಾಹ್ಮಣರು ಅಲ್ಲಲ್ಲಿ ಈ ರೀತಿ ಮಾತನಾಡಿಕೊಳ್ಳುತ್ತಿದ್ದರು: “ವೃದ್ಧ ರಾಜನು ನಿರ್ಜನ ವನದಲ್ಲಿ ಹೇಗೆ ತಾನೇ ವಾಸಿಸುತ್ತಾನೆ? ಮಹಾಭಾಗೆ ಗಾಂಧಾರಿಯೂ ಪೃಥೆ ಕುಂತಿಯೂ ಹೇಗೆ ಜೀವಿಸುತ್ತಿದ್ದಾರೆ? ಸುಖಾರ್ಹನೂ ಮಕ್ಕಳನ್ನು ಕಳೆದುಕೊಂಡವನೂ ಆದ ಆ ಪ್ರಜ್ಞಾಚಕ್ಷು ರಾಜರ್ಷಿಯು ಆ…