ಯುಧಿಷ್ಠಿರನ ವೈರಾಗ್ಯ; ತಮ್ಮಂದಿರು, ದ್ರೌಪದಿ, ಋಷಿ ದೇವಸ್ಥಾನ, ವ್ಯಾಸ ಮತ್ತು ಕೃಷ್ಣರು ರಾಜನಾಗಲು ಅವನನ್ನು ಉತ್ತೇಜಿಸಿದುದು
ಯುಧಿಷ್ಠಿರನ ವೈರಾಗ್ಯ; ತಮ್ಮಂದಿರು, ದ್ರೌಪದಿ, ಋಷಿ ದೇವಸ್ಥಾನ, ವ್ಯಾಸ ಮತ್ತು ಕೃಷ್ಣರು ರಾಜನಾಗಲು ಅವನನ್ನು ಉತ್ತೇಜಿಸಿದುದು ಯುಧಿಷ್ಠಿರ ವಾಕ್ಯ ತನ್ನ ಪುತ್ರ-ಪೌತ್ರರನ್ನೂ ಸಂಬಂಧಿ-ಸ್ನೇಹಿತರನ್ನೂ ನೆನಪಿಸಿಕೊಂಡು ರಾಜನು ಉದ್ವಿಗ್ನ ಹೃದಯಿಯಾಗಿ ಅಸ್ವಸ್ಥಚೇತನನಾದನು. ಆಗ ಹೊಗೆಯಿಂದ ತುಂಬಿದ ಅಗ್ನಿಯಂತೆ ಶೋಕಪರೀತಾತ್ಮನಾದ ಆ ಧೀಮಾನ್ ರಾಜನು ಸಂತಾಪಪೀಡಿತನಾಗಿ ವೈರಾಗ್ಯವನ್ನು ತಾಳಿದನು. ಧರ್ಮಾತ್ಮ ಯುಧಿಷ್ಠಿರನಾದರೋ ಶೋಕವ್ಯಾಕುಲ ಚೇತನನಾಗಿ ಮಹಾರಥ ಕರ್ಣನನ್ನು ಸ್ಮರಿಸಿಕೊಂಡು ದುಃಖಸಂತಪ್ತನಾಗಿ ಶೋಕಿಸಿದನು. ದುಃಖ-ಶೋಕಗಳಿಂದ ಆವಿಷ್ಟನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಾ ಶೋಕಕರ್ಶಿತನಾಗಿ ಅರ್ಜುನನನ್ನು…