ರಾತ್ರಿ ಮಲಗಿದ್ದ ಪಾಂಡವ ಸೇನೆಯನ್ನು ಆಕ್ರಮಣಿಸಲು ಅಶ್ವತ್ಥಾಮನು ನಿಶ್ಚಯಿಸಿದುದು
ಅಶ್ವತ್ಥಾಮನು ರಾತ್ರಿ ಮಲಗಿದ್ದ ಪಾಂಡವ ಸೇನೆಯನ್ನು ಆಕ್ರಮಣಿಸಲು ನಿಶ್ಚಯಿಸಿದುದು ಅನಂತರ ವೀರ ಅಶ್ವತ್ಥಾಮ, ಕೃಪ ಮತ್ತು ಕೃತವರ್ಮರು ಒಟ್ಟಾಗಿ ದಕ್ಷಿಣಾಭಿಮುಖವಾಗಿ ಪ್ರಯಾಣಿಸುತ್ತಾ ಸೂರ್ಯಾಸ್ತಮನದ ವೇಳೆಯಲ್ಲಿ ಶಿಬಿರಗಳ ಬಳಿ ಆಗಮಿಸಿದರು. ಭೀತರಾದ ಅವರು ಗಹನವನಪ್ರದೇಶವನ್ನು ಸೇರಿ ತ್ವರೆಮಾಡಿ ಕುದುರೆಗಳನ್ನು ಬಿಚ್ಚಿ ಯಾರಿಗೂ ಕಾಣದಂತೆ ಒಂದೆಡೆ ಕುಳಿತುಕೊಂಡರು. ಸೇನಾಡೇರೆಗಳ ಅನತಿದೂರದಲ್ಲಿಯೇ ಕುಳಿತುಕೊಂಡಿದ್ದ ಅವರು ನಿಶಿತ ಶಸ್ತ್ರಗಳಿಂದ ಪ್ರಹೃತರಾಗಿ ಶರೀರಾದ್ಯಂತ ಕ್ಷತವಿಕ್ಷತರಾಗಿದ್ದರು. ಜಯೋಲ್ಲಾಸಿತರಾದ ಪಾಂಡವರ ಘೋರ ನಿನಾದವನ್ನು ಕೇಳಿ ಪಾಂಡವರನ್ನೇ ಬಾರಿ ಬಾರಿಗೂ ಚಿಂತಿಸುತ್ತಾ ಸುದೀರ್ಘವಾದ…