ಹದಿನೇಳನೇ ದಿನದ ಯುದ್ಧ – ೬: ಕರ್ಣನ ವಧೆಗಾಗಿ ಕೃಷ್ಣಾರ್ಜುನರ ಪ್ರಸ್ಥಾನ
ಹದಿನೇಳನೇ ದಿನದ ಯುದ್ಧ – ೬: ಕರ್ಣನ ವಧೆಗಾಗಿ ಕೃಷ್ಣಾರ್ಜುನರ ಪ್ರಸ್ಥಾನ ದಾರುಕನು ಸಿದ್ಧಗೊಳಿಸಿದ ರಥವನ್ನು ನೋಡಿ ಅರ್ಜುನನು ಧರ್ಮರಾಜನ ಆಶೀರ್ವಾದ ಮತ್ತು ಬ್ರಾಹ್ಮಣರ ಸ್ವಸ್ತಿವಾಚನವನ್ನು ಕೇಳಿಸಿಕೊಂಡು ಆ ಸುಮಂಗಲಯುಕ್ತ ಉತ್ತಮ ರಥವನ್ನೇರಿದನು. ಧರ್ಮರಾಜ ಯುಧಿಷ್ಠಿರನು ಅವನಿಗೆ ಕರ್ಣವಧೆಯ ಕುರಿತು ಪರಮ ಆಶೀರ್ವಚನಗಳನ್ನಿತ್ತನು. ಆ ಮಹೇಷ್ವಾಸನು ಹೋಗುತ್ತಿರುವುದನ್ನು ನೋಡಿ ಭೂತಗಳು ಮಹಾತ್ಮ ಪಾಂಡವನಿಂದ ಕರ್ಣನು ಹತನಾದನೆಂದೇ ಭಾವಿಸಿದವ್ರ. ಎಲ್ಲ ದಿಕ್ಕುಗಳೂ ಸುತ್ತಲೂ ವಿಮಲವಾದವು. ನವಿಲುಗಳೂ, ಸಾರಸಗಳೂ ಮತ್ತು ಕ್ರೌಂಚಪಕ್ಷಿಗಳೂ ಪಾಂಡುನಂದನನ್ನು ಪ್ರದಕ್ಷಿಣೆ…