ಹದಿನೈದನೆಯ ದಿನದ ಯುದ್ಧ ಸಮಾಪ್ತಿ
ಹದಿನೈದನೆಯ ದಿನದ ಯುದ್ಧ ಸಮಾಪ್ತಿ ಅಶ್ವತ್ಥಾಮ ಪರಾಕ್ರಮ ಆ ಅಸ್ತ್ರದಿಂದ ಹತಗೊಳ್ಳದೇ ವ್ಯವಸ್ಥಿತವಾಗಿ ನಿಂತಿದ್ದ ಆ ಸೇನೆಯನ್ನು ನೋಡಿ ದುರ್ಯೋಧನನು ದ್ರೋಣಪುತ್ರನಿಗೆ ಹೇಳಿದನು: “ಅಶ್ವತ್ಥಾಮ! ಶೀಘ್ರದಲ್ಲಿಯೇ ಪುನಃ ಆ ಅಸ್ತ್ರವನ್ನು ಪ್ರಯೋಗಿಸು! ಜಯೈಷಿ ಪಾಂಚಾಲರು ಪುನಃ ಯುದ್ಧಕ್ಕೆ ಸಿದ್ಧರಾಗಿದ್ದಾರೆ!” ದುರ್ಯೋಧನನು ಹಾಗೆ ಹೇಳಲು ಅಶ್ವತ್ಥಾಮನು ದೀನನಾಗಿ ನಿಟ್ಟುಸಿರುಬಿಡುತ್ತಾ ರಾಜನಿಗೆ ಈ ಮಾತನ್ನಾಡಿದನು: “ರಾಜನ್! ಈ ಅಸ್ತ್ರವನ್ನು ಮರುಕಳಿಸಲಾಗುವುದಿಲ್ಲ. ಎರಡನೆಯ ಬಾರಿ ಪ್ರಯೋಗಿಸಲಿಕ್ಕಾಗುವುದಿಲ್ಲ. ಪುನಃ ಪ್ರಯೋಗಿಸಿದ್ದಾದರೆ ಪ್ರಯೋಗಿಸಿದವನನ್ನೇ ಅದು ಸಂಹರಿಸುತ್ತದೆ ಎನ್ನುವುದರಲ್ಲಿ…