ಹದಿನಾಲ್ಕನೇ ದಿನದ ಯುದ್ಧ -೩
ಹದಿನಾಲ್ಕನೇ ದಿನದ ಯುದ್ಧ -೩ ಸಂಕುಲಯುದ್ಧ ವೃಷ್ಣಿ-ಅಂಧಕ-ಮತ್ತು ಕುರು ಉತ್ತಮರನ್ನು ನೋಡಿ ಕೌರವರು ಅವರನ್ನು ಕೊಲ್ಲಲು ನಾಮುಂದು ತಾಮುಂದು ಎಂದು ಮುನ್ನುಗ್ಗಲು ವಿಜಯನೂ ಶತ್ರುಗಳ ಮೇಲೆ ಎರಗಿದನು. ಸುವರ್ಣ ಚಿತ್ರಗಳಿಂದ, ವ್ಯಾಘ್ರಚರ್ಮಗಳಿಂದ ಅಲಂಕೃತಗೊಂಡ, ಉತ್ತಮ ಶಬ್ಧಮಾಡುತ್ತಿರುವ ಮಹಾರಥಗಳಲ್ಲಿ, ಎಲ್ಲ ದಿಕ್ಕುಗಳನ್ನೂ ಪ್ರಜ್ವಲಿಸುತ್ತಿರುವ ಪಾವಕನಂತೆ ಬೆಳಗಿಸುತ್ತಾ, ಬಂಗಾರದ ಹಿಡಿಯನ್ನುಳ್ಳ ಕಾರ್ಮುಕಗಳನ್ನು ಎತ್ತಿ ತೋರಿಸುತ್ತಾ, ಸರಿಸಾಟಿಯಿಲ್ಲದ ಕೂಗುಗಳನ್ನು ಕೂಗುತ್ತಾ, ಕ್ರುದ್ಧರಾದ ಕುದುರೆಗಳಂತೆ ಭೂರಿಶ್ರವ, ಶಲ, ಕರ್ಣ, ವೃಷಸೇನ, ಜಯದ್ರಥ, ಕೃಪ, ಮದ್ರರಾಜ, ಮತ್ತು…