ನೈಮಿಷಾರಣ್ಯದಲ್ಲಿ ಶೌನಕನ ಸತ್ರದಲ್ಲಿ ಸೂತ ಪೌರಾಣಿಕನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದುದು
ನೈಮಿಷಾರಣ್ಯದಲ್ಲಿ ಶೌನಕನ ಸತ್ರದಲ್ಲಿ ಸೂತ ಪೌರಾಣಿಕನು ಮಹಾಭಾರತ ಕಥೆಯನ್ನು ಪ್ರಾರಂಭಿಸಿದುದು ಒಮ್ಮೆ ನೈಮಿಷಾರಣ್ಯದಲ್ಲಿ ಕುಲಪತಿ ಶೌನಕನು ಏರ್ಪಡಿಸಿದ್ದ ಹನ್ನೆರಡು ವರ್ಷಗಳ ಸತ್ರದಲ್ಲಿ ವಿಶ್ರಾಂತಿಪಡೆಯುತ್ತಿದ್ದ ಬ್ರಹ್ಮರ್ಷಿಗಳ ಮಧ್ಯೆ ಲೋಮಹರ್ಷಣನ ಮಗ ಸೂತ ಪೌರಾಣಿಕ ಉಗ್ರಶ್ರವನು ವಿನಯಾವನತನಾಗಿ ಆಗಮಿಸಿದನು. ಅವನು ಆಶ್ರಮವನ್ನು ತಲುಪಿದೊಡನೆಯೇ ನೈಮಿಷಾರಣ್ಯವಾಸಿ ತಪಸ್ವಿಗಳೆಲ್ಲರೂ ರೋಮಾಂಚಕ ಕಥೆಗಳನ್ನು ಕೇಳಲು ಅವನನ್ನು ಸುತ್ತುವರೆದರು. ಪರಸ್ಪರರನ್ನು ಅಭಿವಂದಿಸಿ, ಎಲ್ಲರೂ ಕುಳಿತುಕೊಂಡ ನಂತರ ಋಷಿಗಳಲ್ಲಿಯೇ ಒಬ್ಬನು ಕಥೆಗಳನ್ನು ಪ್ರಸ್ತಾವಿಸುತ್ತಾ “ಸೌತಿ! ನೀನು ಎಲ್ಲಿಂದ ಬರುತ್ತಿರುವೆ?” ಎಂದು…