Bhishma Parva: Chapter 53

ಭೀಷ್ಮ ಪರ್ವ: ಭೀಷ್ಮವಧ ಪರ್ವ

೫೩

ಸಂಕುಲ ಯುದ್ಧ (೧-೩೪).

06053001 ಸಂಜಯ ಉವಾಚ|

06053001a ತತೋ ವ್ಯೂಢೇಷ್ವನೀಕೇಷು ತಾವಕೇಷ್ವಿತರೇಷು ಚ|

06053001c ಧನಂಜಯೋ ರಥಾನೀಕಮವಧೀತ್ತವ ಭಾರತ|

06053001e ಶರೈರತಿರಥೋ ಯುದ್ಧೇ ಪಾತಯನ್ರಥಯೂಥಪಾನ್||

ಸಂಜಯನು ಹೇಳಿದನು: “ಭಾರತ! ಆಗ ನಿನ್ನವರು ಮತ್ತು ಶತ್ರುಸೇನೆಗಳು ವ್ಯೂಹವನ್ನು ರಚಿಸಿಕೊಂಡಿರಲು ಅತಿರಥ ಧನಂಜಯನು ಯುದ್ಧಲ್ಲಿ ಅಲ್ಪವೇ ಸಮಯದಲ್ಲಿ ಶರಗಳಿಂದ ನಿನ್ನ ರಥಸೇನೆಯನ್ನು ವಧಿಸಿ ರಥಯೂಥಪರನ್ನು ಬೀಳಿಸಿದನು.

06053002a ತೇ ವಧ್ಯಮಾನಾಃ ಪಾರ್ಥೇನ ಕಾಲೇನೇವ ಯುಗಕ್ಷಯೇ|

06053002c ಧಾರ್ತರಾಷ್ಟ್ರಾ ರಣೇ ಯತ್ತಾಃ ಪಾಂಡವಾನ್ಪ್ರತ್ಯಯೋಧಯನ್|

06053002e ಪ್ರಾರ್ಥಯಾನಾ ಯಶೋ ದೀಪ್ತಂ ಮೃತ್ಯುಂ ಕೃತ್ವಾ ನಿವರ್ತನಂ||

ಯುಗಕ್ಷಯದಲ್ಲಿ ಕಾಲನಂತೆ ಪಾರ್ಥನು ಅವರನ್ನು ವಧಿಸುತ್ತಿರಲು ಬೆಳಗುವ ಯಶಸ್ಸನ್ನು ಬಯಸುತ್ತಾ ಮೃತ್ಯುವನ್ನೇ ಪಲಾಯನವನ್ನಾಗಿ ಮಾಡಿಕೊಂಡು ಧಾರ್ತರಾಷ್ಟ್ರರು ರಣದಲ್ಲಿ ಪಾಂಡವನೊಂದಿಗೆ ಪ್ರತಿಯುದ್ಧಮಾಡಲು, ಪ್ರಯತ್ನಿಸಿದರು.

06053003a ಏಕಾಗ್ರಮನಸೋ ಭೂತ್ವಾ ಪಾಂಡವಾನಾಂ ವರೂಥಿನೀಂ|

06053003c ಬಭಂಜುರ್ಬಹುಶೋ ರಾಜಂಸ್ತೇ ಚಾಭಜ್ಯಂತ ಸಮ್ಯುಗೇ||

ಸಂಯುಗದಲ್ಲಿ ಏಕಾಗ್ರಚಿತ್ತರಾಗಿ ಅವರು ಪಾಂಡವರ ಸೇನೆಗಳನ್ನು ಅನೇಕ ಬಾರಿ ಧ್ವಂಸಗೊಳಿಸಿದರು.

06053004a ದ್ರವದ್ಭಿರಥ ಭಗ್ನೈಶ್ಚ ಪರಿವರ್ತದ್ಭಿರೇವ ಚ|

06053004c ಪಾಂಡವೈಃ ಕೌರವೈಶ್ಚೈವ ನ ಪ್ರಜ್ಞಾಯತ ಕಿಂ ಚನ||

ರಥಗಳು ಮುರಿದು ಓಡಿಹೋಗುತ್ತಿದ್ದರು. ಹಿಂದಿರುಗಿ ಬರುತ್ತಿದ್ದರು ಕೂಡ. ಅವರಲ್ಲಿ ಪಾಂಡವರ್ಯಾರು ಕೌರವರ್ಯಾರು ಯಾರಿಗೂ ಗೊತ್ತಾಗುತ್ತಿರಲಿಲ್ಲ.

06053005a ಉದತಿಷ್ಠದ್ರಜೋ ಭೌಮಂ ಚಾದಯಾನಂ ದಿವಾಕರಂ|

06053005c ದಿಶಃ ಪ್ರತಿದಿಶೋ ವಾಪಿ ತತ್ರ ಜಜ್ಞುಃ ಕಥಂ ಚನ||

ದಿವಾಕರನನ್ನು ಮುಸುಕುವಷ್ಟು ಧೂಳು ಭೂಮಿಯಲ್ಲಿ ಎದ್ದಿತು. ಅಲ್ಲಿ ದಿಕ್ಕುಗಳ್ಯಾವುವು ಉಪದಿಕ್ಕುಗಳ್ಯಾವು ಯಾವುದೂ ತಿಳಿಯುತ್ತಿರಲಿಲ್ಲ.

06053006a ಅನುಮಾನೇನ ಸಂಜ್ಞಾಭಿರ್ನಾಮಗೋತ್ರೈಶ್ಚ ಸಂಯುಗೇ|

06053006c ವರ್ತತೇ ಸ್ಮ ತದಾ ಯುದ್ಧಂ ತತ್ರ ತತ್ರ ವಿಶಾಂ ಪತೇ||

ವಿಶಾಂಪತೇ! ಸಂಯುಗದ ಅಲ್ಲಲ್ಲಿ ಅನುಮಾನದಿಂದ ಹೆಸರು-ಗೋತ್ರಗಳನ್ನು ಹೇಳಿಕೊಂಡು ಯುದ್ಧಮಾಡುತ್ತಿದ್ದರು.

06053007a ನ ವ್ಯೂಹೋ ಭಿದ್ಯತೇ ತತ್ರ ಕೌರವಾಣಾಂ ಕಥಂ ಚನ|

06053007c ರಕ್ಷಿತಃ ಸತ್ಯಸಂಧೇನ ಭಾರದ್ವಾಜೇನ ಧೀಮತಾ||

ಅಲ್ಲಿ ಏನು ಮಾಡಿದರೂ ಧೀಮತ ಸತ್ಯಸಂಧ ಭಾರದ್ವಾಜನಿಂದ ರಕ್ಷಿತವಾದ ಕೌರವರ ವ್ಯೂಹವನ್ನು ಭೇದಿಸಲು ಸಾಧ್ಯವಾಗಲಿಲ್ಲ.

06053008a ತಥೈವ ಪಾಂಡವೇಯಾನಾಂ ರಕ್ಷಿತಃ ಸವ್ಯಸಾಚಿನಾ|

06053008c ನಾಭಿಧ್ಯತ ಮಹಾವ್ಯೂಹೋ ಭೀಮೇನ ಚ ಸುರಕ್ಷಿತಃ||

ಹಾಗೆಯೇ ಸವ್ಯಸಾಚಿಯಿಂದ ರಕ್ಷಿತವಾದ, ಭೀಮನಿಂದ ಸುರಕ್ಷಿತವಾದ ಮಹಾವ್ಯೂಹವನ್ನು ಭೇದಿಸಲಾಗಲಿಲ್ಲ.

06053009a ಸೇನಾಗ್ರಾದಭಿನಿಷ್ಪತ್ಯ ಪ್ರಾಯುಧ್ಯಂಸ್ತತ್ರ ಮಾನವಾಃ|

06053009c ಉಭಯೋಃ ಸೇನಯೋ ರಾಜನ್ವ್ಯತಿಷಕ್ತರಥದ್ವಿಪಾಃ||

ರಾಜನ್! ಎರಡೂ ಸೇನೆಗಳಲ್ಲಿ ಸೇನೆಯ ಅಗ್ರಭಾಗವನ್ನು ಬಿಟ್ಟು, ರಥ-ಗಜಗಳನ್ನು ತೊರೆದು ಹೊರಗೆ ನಿಂತು ಯುದ್ಧಮಾಡುತ್ತಿದ್ದರು.

06053010a ಹಯಾರೋಹೈರ್ಹಯಾರೋಹಾಃ ಪಾತ್ಯಂತೇ ಸ್ಮ ಮಹಾಹವೇ|

06053010c ಋಷ್ಟಿಭಿರ್ವಿಮಲಾಗ್ರಾಭಿಃ ಪ್ರಾಸೈರಪಿ ಚ ಸಂಯುಗೇ||

ಆ ಮಹಾಹವ ಸಂಯುಗದಲ್ಲಿ ಹೊಳೆಯುತ್ತಿರುವ ತುದಿಯ ಋಷ್ಟಿಗಳಿಂದ ಮತ್ತು ಪ್ರಾಸಗಳಿಂದ ಹಯಾರೋಹಿಗಳು ಹಯಾರೋಹಿಗಳನ್ನು ಬೀಳಿಸುತ್ತಿದ್ದರು.

06053011a ರಥೀ ರಥಿನಮಾಸಾದ್ಯ ಶರೈಃ ಕನಕಭೂಷಣೈಃ|

06053011c ಪಾತಯಾಮಾಸ ಸಮರೇ ತಸ್ಮಿನ್ನತಿಭಯಂಕರೇ||

ಆ ಅತಿಭಯಂಕರ ಸಮರದಲ್ಲಿ ರಥಿಗಳು ಕನಕಭೂಷಣ ಶರಗಳಿಂದ ಹೊಡೆದು ರಥಿಗಳನ್ನು ಕೆಳಗುರುಳಿಸುತ್ತಿದ್ದರು.

06053012a ಗಜಾರೋಹಾ ಗಜಾರೋಹಾನ್ನಾರಾಚಶರತೋಮರೈಃ|

06053012c ಸಂಸಕ್ತಾಃ ಪಾತಯಾಮಾಸುಸ್ತವ ತೇಷಾಂ ಚ ಸಂಘಶಃ||

ನಿನ್ನವರಲ್ಲಿರುವ ಮತ್ತು ಅವರಲ್ಲಿರುವ ಗಜಾರೋಹಿಗಳು ಗಜಾರೋಹಿಗಳನ್ನು ಒಟ್ಟುಗೂಡಿ, ಸಂಸಕ್ತರಾಗಿ, ನಾರಾಚ-ಶರ-ತೋಮರಗಳಿಂದ ಬೀಳಿಸುತ್ತಿದ್ದರು.

06053013a ಪತ್ತಿಸಂಘಾ ರಣೇ ಪತ್ತೀನ್ಭಿಂಡಿಪಾಲಪರಶ್ವಧೈಃ|

06053013c ನ್ಯಪಾತಯಂತ ಸಂಹೃಷ್ಟಾಃ ಪರಸ್ಪರಕೃತಾಗಸಃ||

ರಣದಲ್ಲಿ ಪರಸ್ಪರರನ್ನು ಕೊಲ್ಲಲು ಬಯಸಿ ಸಂಹೃಷ್ಟ ಪದಾತಿಗಳು ಪದಾತಿಗಳನ್ನು ಭಿಂಡಿಪಾಲ-ಪರಶುಗಳಿಂದ ಹೊಡೆದು ಕೆಳಗುರುಳಿಸುತ್ತಿದ್ದರು.

06053014a ಪದಾತೀ ರಥಿನಂ ಸಂಖ್ಯೇ ರಥೀ ಚಾಪಿ ಪದಾತಿನಂ|

06053014c ನ್ಯಪಾತಯಚ್ಚಿತೈಃ ಶಸ್ತ್ರೈಃ ಸೇನಯೋರುಭಯೋರಪಿ||

ಯುದ್ಧದಲ್ಲಿ ಎರಡೂ ಸೇನೆಗಳಲ್ಲಿ ಪದಾತಿಗಳು ರಥಿಗಳನ್ನೂ, ರಥಿಗಳು ಪದಾತಿಗಳನ್ನೂ ನಿಶಿತ ಶರಗಳಿಂದ ಕೆಳಗೆ ಬೀಳಿಸುತ್ತಿದ್ದರು.

06053015a ಗಜಾರೋಹಾ ಹಯಾರೋಹಾನ್ಪಾತಯಾಂ ಚಕ್ರಿರೇ ತದಾ|

06053015c ಹಯಾರೋಹಾ ಗಜಸ್ಥಾಂಶ್ಚ ತದದ್ಭುತಮಿವಾಭವತ್||

ಆಗ ಗಜಾರೋಹಿಗಳು ಹಯಾರೋಹಿಗಳನ್ನೂ ಹಯಾರೋಹಿಗಳು ಗಜಾರೋಹಿಗಳನ್ನೂ ಬೀಳಿಸಲು ತೊಡಗಿ ಅಲ್ಲಿ ಅದ್ಭುತವಾಯಿತು.

06053016a ಗಜಾರೋಹವರೈಶ್ಚಾಪಿ ತತ್ರ ತತ್ರ ಪದಾತಯಃ|

06053016c ಪಾತಿತಾಃ ಸಮದೃಶ್ಯಂತ ತೈಶ್ಚಾಪಿ ಗಜಯೋಧಿನಃ||

ಅಲ್ಲಲ್ಲಿ ಪದಾತಿಗಳು ಗಜಾರೋಹಿಗಳನ್ನೂ, ಅವರನ್ನು ಗಜಯೋಧರೂ ಉರುಳಿಸುವುದು ಕಂಡುಬಂದಿತು.

06053017a ಪತ್ತಿಸಂಘಾ ಹಯಾರೋಹೈಃ ಸಾದಿಸಂಘಾಶ್ಚ ಪತ್ತಿಭಿಃ|

06053017c ಪಾತ್ಯಮಾನಾ ವ್ಯದೃಶ್ಯಂತ ಶತಶೋಽಥ ಸಹಸ್ರಶಃ||

ನೂರಾರು ಸಹಸ್ರಾರು ಹಯಾರೋಹಿಗಳು ಪದಾತಿಸಂಘಗಳನ್ನು ಮತ್ತು ಪದಾತಿಸಂಘಗಳು ಸಾದಿಸಂಘಗಳನ್ನು ಬೀಳಿಸುವುದು ಕಂಡುಬಂದಿತು.

06053018a ಧ್ವಜೈಸ್ತತ್ರಾಪವಿದ್ಧೈಶ್ಚ ಕಾರ್ಮುಕೈಸ್ತೋಮರೈಸ್ತಥಾ|

06053018c ಪ್ರಾಸೈಸ್ತಥಾ ಗದಾಭಿಶ್ಚ ಪರಿಘೈಃ ಕಂಪನೈಸ್ತಥಾ||

06053019a ಶಕ್ತಿಭಿಃ ಕವಚೈಶ್ಚಿತ್ರೈಃ ಕಣಪೈರಂಕುಶೈರಪಿ|

06053019c ನಿಸ್ತ್ರಿಂಶೈರ್ವಿಮಲೈಶ್ಚಾಪಿ ಸ್ವರ್ಣಪುಂಖೈಃ ಶರೈಸ್ತಥಾ||

06053020a ಪರಿಸ್ತೋಮೈಃ ಕುಥಾಭಿಶ್ಚ ಕಂಬಲೈಶ್ಚ ಮಹಾಧನೈಃ|

06053020c ಭೂರ್ಭಾತಿ ಭರತಶ್ರೇಷ್ಠ ಸ್ರಗ್ದಾಮೈರಿವ ಚಿತ್ರಿತಾ||

ಆ ರಣಾಂಗಣದ ಸುತ್ತಲೂ ಧ್ವಜಗಳು, ಧನುಸ್ಸುಗಳು, ತೋಮರಗಳು ಪ್ರಾಸಗಳು, ಗದೆಗಳು, ಪರಿಘಗಳು, ಕಂಪನಗಳು, ಶಕ್ತ್ಯಾಯುಧಗಳು, ಚಿತ್ರ-ವಿಚಿತ್ರ ಕವಚಗಳು, ಕಣಪಗಳು, ಅಂಕುಶಗಳು, ಥಳಥಳಿಸುತ್ತಿದ್ದ ಖಡ್ಗಗಳು, ಸುವರ್ಣಮಯ ರೆಕ್ಕೆಗಳಿದ್ದ ಬಾಣಗಳು, ಶೂಲಗಳು, ಬಣ್ಣದ ಕಂಬಳಿಗಳು, ಬಹುಮೂಲ್ಯ ರತ್ನಗಂಬಳಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರಲು ಆ ಭೂಮಿಯು ನಾನಾ ಬಣ್ಣದ ಪುಷ್ಪಹಾರಗಳಿಂದ ಅಲಂಕೃತವಾಗಿದೆಯೋ ಎನ್ನುವಂತೆ ತೋರುತ್ತಿತ್ತು.

06053021a ನರಾಶ್ವಕಾಯೈಃ ಪತಿತೈರ್ದಂತಿಭಿಶ್ಚ ಮಹಾಹವೇ|

06053021c ಅಗಮ್ಯರೂಪಾ ಪೃಥಿವೀ ಮಾಂಸಶೋಣಿತಕರ್ದಮಾ||

ಮಹಾಹವದಲ್ಲಿ ಬಿದ್ದಿದ್ದ ನರ-ಅಶ್ವ-ಆನೆಗಳ ಕಾಯಗಳಿಂದ ಮತ್ತು  ಮಾಂಸಶೋಣಿತಕರ್ದಮಗಳಿಂದ ಕೂಡಿದ ಭೂಮಿಯು ಅಗಮ್ಯರೂಪವಾಗಿದ್ದಿತು.

06053022a ಪ್ರಶಶಾಮ ರಜೋ ಭೌಮಂ ವ್ಯುಕ್ಷಿತಂ ರಣಶೋಣಿತೈಃ|

06053022c ದಿಶಶ್ಚ ವಿಮಲಾಃ ಸರ್ವಾಃ ಸಂಬಭೂವುರ್ಜನೇಶ್ವರ||

ಜನೇಶ್ವರ! ಭೂಮಿಯ ಧೂಳು ರಣಶೋಣಿತದೊಂದಿಗೆ ಸೇರಿ ಕೆಸರುಂಟಾಯಿತು. ಎಲ್ಲ ದಿಕ್ಕುಗಳೂ ಧೂಳಿಲ್ಲದೇ ನಿರ್ಮಲವಾದವು.

06053023a ಉತ್ಥಿತಾನ್ಯಗಣೇಯಾನಿ ಕಬಂಧಾನಿ ಸಮಂತತಃ|

06053023c ಚಿಹ್ನಭೂತಾನಿ ಜಗತೋ ವಿನಾಶಾರ್ಥಾಯ ಭಾರತ||

ಭಾರತ! ಎಲ್ಲೆಡೆಯಲ್ಲಿಯೂ ಅಗಣಿತ ಕಬಂಧಗಳು (ರುಂಡಗಳಿಲ್ಲದ ಮುಂಡಗಳು) ಎದ್ದು ಓಡಾಡುತ್ತಿರುವುದು ಕಂಡುಬಂದಿತು. ಇದು ಜಗತ್ತಿನ ಭೂತಗಳ ವಿನಾಶದ ಚಿಹ್ನೆ.

06053024a ತಸ್ಮಿನ್ಯುದ್ಧೇ ಮಹಾರೌದ್ರೇ ವರ್ತಮಾನೇ ಸುದಾರುಣೇ|

06053024c ಪ್ರತ್ಯದೃಶ್ಯಂತ ರಥಿನೋ ಧಾವಮಾನಾಃ ಸಮಂತತಃ||

ನಡೆಯುತ್ತಿದ್ದ ಆ ಮಹಾರೌದ್ರ ಸುದಾರುಣ ಯುದ್ಧದಲ್ಲಿ ರಥಿಗಳು ಎಲ್ಲಕಡೆ ಓಡಿಹೋಗುತ್ತಿರುವುದು ಕಂಡುಬಂದಿತು.

06053025a ತತೋ ದ್ರೋಣಶ್ಚ ಭೀಷ್ಮಶ್ಚ ಸೈಂಧವಶ್ಚ ಜಯದ್ರಥಃ|

06053025c ಪುರುಮಿತ್ರೋ ವಿಕರ್ಣಶ್ಚ ಶಕುನಿಶ್ಚಾಪಿ ಸೌಬಲಃ||

06053026a ಏತೇ ಸಮರದುರ್ಧರ್ಷಾಃ ಸಿಂಹತುಲ್ಯಪರಾಕ್ರಮಾಃ|

06053026c ಪಾಂಡವಾನಾಮನೀಕಾನಿ ಬಭಂಜುಃ ಸ್ಮ ಪುನಃ ಪುನಃ||

ಆಗ ದ್ರೋಣ, ಭೀಷ್ಮ, ಸೈಂಧವ ಜಯದ್ರಥ, ಪುರುಮಿತ್ರ, ವಿಕರ್ಣ, ಸೌಬಲ ಶಕುನಿ - ಈ ಸಮರದುರ್ಧರ್ಷ ಸಿಂಹತುಲ್ಯಪರಾಕ್ರಮಿಗಳು ಪುನಃ ಪುನಃ ಪಾಂಡವರ ಸೇನೆಗಳನ್ನು ಸದೆಬಡಿದರು.

06053027a ತಥೈವ ಭೀಮಸೇನೋಽಪಿ ರಾಕ್ಷಸಶ್ಚ ಘಟೋತ್ಕಚಃ|

06053027c ಸಾತ್ಯಕಿಶ್ಚೇಕಿತಾನಶ್ಚ ದ್ರೌಪದೇಯಾಶ್ಚ ಭಾರತ||

06053028a ತಾವಕಾಂಸ್ತವ ಪುತ್ರಾಂಶ್ಚ ಸಹಿತಾನ್ಸರ್ವರಾಜಭಿಃ|

06053028c ದ್ರಾವಯಾಮಾಸುರಾಜೌ ತೇ ತ್ರಿದಶಾ ದಾನವಾನಿವ||

ಭಾರತ! ಹಾಗೆಯೇ ಭೀಮಸೇನ, ರಾಕ್ಷಸ ಘಟೋತ್ಕಚ, ಸಾತ್ಯಕಿ, ಚೇಕಿತಾನ ಮತ್ತು ದ್ರೌಪದೇಯರೂ ಕೂಡ ನಿನ್ನವರನ್ನು, ಸರ್ವರಾಜರೊಂದಿಗೆ ನಿನ್ನ ಪುತ್ರರನ್ನು ದೇವತೆಗಳು ದಾನವರನ್ನು ಹೇಗೋ ಹಾಗೆ ಓಡಿಸಿದರು.

06053029a ತಥಾ ತೇ ಸಮರೇಽನ್ಯೋನ್ಯಂ ನಿಘ್ನಂತಃ ಕ್ಷತ್ರಿಯರ್ಷಭಾಃ|

06053029c ರಕ್ತೋಕ್ಷಿತಾ ಘೋರರೂಪಾ ವಿರೇಜುರ್ದಾನವಾ ಇವ||

ಹಾಗೆ ಸಮರದಲ್ಲಿ ಅನ್ಯೋನ್ಯರನ್ನು ಸಂಹರಿಸುತ್ತಿದ್ದ ಕ್ಷತ್ರಿಯರ್ಷಭರು ರಕ್ತದಿಂದ ತೋಯ್ದು ಘೋರರೂಪಿಗಳಾಗಿ ದಾನವರಂತೆ ರಾಜಿಸಿದರು.

06053030a ವಿನಿರ್ಜಿತ್ಯ ರಿಪೂನ್ವೀರಾಃ ಸೇನಯೋರುಭಯೋರಪಿ|

06053030c ವ್ಯದೃಶ್ಯಂತ ಮಹಾಮಾತ್ರಾ ಗ್ರಹಾ ಇವ ನಭಸ್ತಲೇ||

ಎರಡೂ ಸೇನೆಗಳಲ್ಲಿ ವೀರರು ರಿಪುಗಳನ್ನು ಸೋಲಿಸಿ ನಭಸ್ತಲದಲ್ಲಿರುವ ಮಹಾಮಾತ್ರ ಗ್ರಹಗಳಂತೆ ತೋರುತ್ತಿದ್ದರು.

06053031a ತತೋ ರಥಸಹಸ್ರೇಣ ಪುತ್ರೋ ದುರ್ಯೋಧನಸ್ತವ|

06053031c ಅಭ್ಯಯಾತ್ಪಾಂಡವಾನ್ಯುದ್ಧೇ ರಾಕ್ಷಸಂ ಚ ಘಟೋತ್ಕಚಂ||

ಆಗ ನಿನ್ನ ಪುತ್ರ ದುರ್ಯೋಧನನು ಸಹಸ್ರ ರಥಗಳೊಂದಿಗೆ ಯುದ್ಧದಲ್ಲಿ ಪಾಂಡವರನ್ನು ಮತ್ತು ರಾಕ್ಷಸ ಘಟೋತ್ಕಚನನ್ನು ಎದುರಿಸಿದನು.

06053032a ತಥೈವ ಪಾಂಡವಾಃ ಸರ್ವೇ ಮಹತ್ಯಾ ಸೇನಯಾ ಸಹ|

06053032c ದ್ರೋಣಭೀಷ್ಮೌ ರಣೇ ಶೂರೌ ಪ್ರತ್ಯುದ್ಯಯುರರಿಂದಮೌ||

ಹಾಗೆಯೇ ಪಾಂಡವರೆಲ್ಲರೂ ಮಹಾಸೇನೆಯೊಂದಿಗೆ ರಣದಲ್ಲಿ ಅರಿಂದಮ ಶೂರ ದ್ರೋಣ-ಭೀಷ್ಮರೊಂದಿಗೆ ಪ್ರತಿಯುದ್ಧ ಮಾಡಿದರು.

06053033a ಕಿರೀಟೀ ತು ಯಯೌ ಕ್ರುದ್ಧಃ ಸಮರ್ಥಾನ್ಪಾರ್ಥಿವೋತ್ತಮಾನ್|

06053033c ಆರ್ಜುನಿಃ ಸಾತ್ಯಕಿಶ್ಚೈವ ಯಯತುಃ ಸೌಬಲಂ ಬಲಂ||

ಕ್ರುದ್ಧ ಕಿರೀಟಿಯು ಸಮರ್ಥಿಸುತ್ತಿದ್ದ ಪಾರ್ಥಿವೋತ್ತಮರ ಮೇಲೆರಗಿದನು. ಆರ್ಜುನಿ-ಸಾತ್ಯಕಿಯರು ಸೌಬಲನ ಬಲವನ್ನು ಎದುರಿಸಿದರು.

06053034a ತತಃ ಪ್ರವವೃತೇ ಭೂಯಃ ಸಂಗ್ರಾಮೋ ಲೋಮಹರ್ಷಣ|

06053034c ತಾವಕಾನಾಂ ಪರೇಷಾಂ ಚ ಸಮರೇ ವಿಜಿಗೀಷತಾಂ||

ಆಗ ಪುನಃ ಸಮರದಲ್ಲಿ ಜಯವನ್ನು ಬಯಸುತ್ತಿದ್ದ ನಿನ್ನವರು ಮತ್ತು ಶತ್ರುಗಳ ನಡುವೆ ಲೋಮಹರ್ಷಣ ಸಂಗ್ರಾಮವು ನಡೆಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ತೃತೀಯಯುದ್ಧದಿವಸೇ ಸಂಕುಲಯುದ್ಧೇ ತ್ರಿಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ತೃತೀಯಯುದ್ಧದಿವಸೇ ಸಂಕುಲಯುದ್ಧ ಎನ್ನುವ ಐವತ್ಮೂರನೇ ಅಧ್ಯಾಯವು.

Image result for flowers against white background

Comments are closed.