Bhishma Parva: Chapter 36

ಭೀಷ್ಮ ಪರ್ವ:ಭಗವದ್ಗೀತಾ ಪರ್ವ

೩೬

ಗುಣತ್ರಯ ವಿಭಾಗ ಯೋಗ

Image result for bhagavadgita"06036001 ಶ್ರೀಭಗವಾನುವಾಚ|

06036001a ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಂ|

06036001c ಯಜ್ಜ್ಞಾತ್ವಾ ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ||

ಶ್ರೀಭಗವಾನನು ಹೇಳಿದನು: “ಇನ್ನೊಮ್ಮೆ ಜ್ಞಾನಗಳಲ್ಲಿ ಉತ್ತಮವಾದ ಪರಮ ಜ್ಞಾನವನ್ನು ಹೇಳುತ್ತೇನೆ. ಇದನ್ನರಿತ ಮುನಿಗಳೆಲ್ಲರೂ ಪರಮ ಸಿದ್ಧಿಯನ್ನು ಪಡೆದರು.

06036002a ಇದಂ ಜ್ಞಾನಮುಪಾಶ್ರಿತ್ಯ ಮಮ ಸಾಧರ್ಮ್ಯಮಾಗತಾಃ|

06036002c ಸರ್ಗೇಽಪಿ ನೋಪಜಾಯಂತೇ ಪ್ರಲಯೇ ನ ವ್ಯಥಂತಿ ಚ||

ಈ ಜ್ಞಾನವನ್ನು ಆಶ್ರಯಿಸಿ ನನ್ನ ಸಾಧರ್ಮ್ಯವನ್ನು ಹೊಂದಿದವರು ಸೃಷ್ಟಿಯಲ್ಲಿಯೂ ಹುಟ್ಟುವುದಿಲ್ಲ ಮತ್ತು ಪ್ರಲಯದಲ್ಲಿಯೂ ವ್ಯಥೆಪಡುವುದಿಲ್ಲ.

06036003a ಮಮ ಯೋನಿರ್ಮಹದ್ಬ್ರಹ್ಮ ತಸ್ಮಿನ್ಗರ್ಭಂ ದಧಾಮ್ಯಹಂ|

06036003c ಸಂಭವಃ ಸರ್ವಭೂತಾನಾಂ ತತೋ ಭವತಿ ಭಾರತ||

ಮಹಾ ಬ್ರಹ್ಮವು ನನ್ನ ಯೋನಿಯು. ಅದರಲ್ಲಿ ನಾನು ಗರ್ಭವನ್ನು ಇಡುತ್ತೇನೆ. ಭಾರತ! ಆಗ ಸರ್ವಭೂತಗಳ ಸಂಭವವಾಗುತ್ತದೆ.

06036004a ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ|

06036004c ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದಃ ಪಿತಾ||

ಕೌಂತೇಯ! ಸರ್ವಯೋನಿಗಳಲ್ಲಿ ಯಾವ ಮೂರ್ತಿಗಳು ಸಂಭವಿಸುತ್ತವೆಯೋ ಅವುಗಳೆಲ್ಲವಕ್ಕೆ ಬ್ರಹ್ಮವು ಮಹಾಯೋನಿ ಮತ್ತು ನಾನು ಬೀಜವನ್ನು ನೀಡುವ ತಂದೆ.

06036005a ಸತ್ತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿಸಂಭವಾಃ|

06036005c ನಿಬಧ್ನಂತಿ ಮಹಾಬಾಹೋ ದೇಹೇ ದೇಹಿನಮವ್ಯಯಂ||

ಮಹಾಬಾಹೋ! ಸತ್ತ್ವ, ರಜ, ತಮ ಎಂಬ ಪ್ರಕೃತಿಯಿಂದುಂಟಾದ ಗುಣಗಳು ದೇಹದಲ್ಲಿ ಅವ್ಯಯ ದೇಹಿಯನ್ನು ಬಂಧಿಸುತ್ತವೆ.

06036006a ತತ್ರ ಸತ್ತ್ವಂ ನಿರ್ಮಲತ್ವಾತ್ಪ್ರಕಾಶಕಮನಾಮಯಂ|

06036006c ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ||

ಅನಘ! ಇವುಗಳಲ್ಲಿ ಸತ್ತ್ವವು ನಿರ್ಮಲವಾಗಿರುವುದರಿಂದ, ಪ್ರಕಾಶಕವೂ ಅನಾಮಯವೂ ಆಗಿದ್ದು ಅದು ದೇಹಿಯನ್ನು ಸುಖಸಂಗ ಮತ್ತು ಜ್ಞಾನಸಂಗಗಳಿಂದ ಬಂಧಿಸುತ್ತದೆ.

06036007a ರಜೋ ರಾಗಾತ್ಮಕಂ ವಿದ್ಧಿ ತೃಷ್ಣಾಸಂಗಸಮುದ್ಭವಂ|

06036007c ತನ್ನಿಬಧ್ನಾತಿ ಕೌಂತೇಯ ಕರ್ಮಸಂಗೇನ ದೇಹಿನಂ||

ರಜವು ರಾಗಾತ್ಮಕವಾಗಿರುವುದೆಂದು ತಿಳಿ. ತೃಷ್ಣೆ-ಅಸಂಗಗಳನ್ನುಂಟುಮಾಡುತ್ತದೆ. ಕೌಂತೇಯ! ಇದು ದೇಹಿಯನ್ನು ಕರ್ಮಸಂಗದಿಂದ ಬಂಧಿಸುತ್ತದೆ.

06036008a ತಮಸ್ತ್ವಜ್ಞಾನಜಂ ವಿದ್ಧಿ ಮೋಹನಂ ಸರ್ವದೇಹಿನಾಂ|

06036008c ಪ್ರಮಾದಾಲಸ್ಯನಿದ್ರಾಭಿಸ್ತನ್ನಿಬಧ್ನಾತಿ ಭಾರತ||

ತಮಸ್ಸು ಅಜ್ಞಾನದಿಂದ ಹುಟ್ಟಿರುವುದೆಂದೂ, ಸರ್ವ ದೇಹಿಗಳನ್ನೂ ಮೋಹಗೊಳಿಸುವುದೆಂದೂ ತಿಳಿ. ಭಾರತ! ಅದು ಪ್ರಮಾದ, ಆಲಸ್ಯ, ಮತ್ತು ನಿದ್ದೆಗಳಿಂದ ದೇಹಿಯನ್ನು ಬಂಧಿಸುತ್ತದೆ.

06036009a ಸತ್ತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ|

06036009c ಜ್ಞಾನಮಾವೃತ್ಯ ತು ತಮಃ ಪ್ರಮಾದೇ ಸಂಜಯತ್ಯುತ||

ಭಾರತ! ಸತ್ತ್ವವು ದೇಹಿಯನ್ನು ಸುಖಕ್ಕೆ ಅಂಟಿಸುತ್ತದೆ. ರಜವು ದೇಹಿಯನ್ನು ಕರ್ಮಗಳಿಗೆ ಮತ್ತು ತಮವು ಜ್ಞಾನವನ್ನು ಆವರಿಸಿಕೊಂಡು ಪ್ರಮಾದಕ್ಕೆ ಅಂಟಿಸುತ್ತದೆ.

06036010a ರಜಸ್ತಮಶ್ಚಾಭಿಭೂಯ ಸತ್ತ್ವಂ ಭವತಿ ಭಾರತ|

06036010c ರಜಃ ಸತ್ತ್ವಂ ತಮಶ್ಚೈವ ತಮಃ ಸತ್ತ್ವಂ ರಜಸ್ತಥಾ||

ಭಾರತ! ರಜ ಮತ್ತು ತಮಗಳನ್ನು ಗೆದ್ದ ನಂತರವೇ ಸತ್ತ್ವವುಂಟಾಗುತ್ತದೆ. ಹಾಗೆಯೇ ಸತ್ತ್ವ-ತಮಗಳನ್ನು ಗೆದ್ದು ರಜವೂ, ಸತ್ತ್ವ-ರಜಗಳನ್ನು ಗೆದ್ದು ತಮವೂ ಉಂಟಾಗುತ್ತದೆ.

06036011a ಸರ್ವದ್ವಾರೇಷು ದೇಹೇಽಸ್ಮಿನ್ಪ್ರಕಾಶ ಉಪಜಾಯತೇ|

06036011c ಜ್ಞಾನಂ ಯದಾ ತದಾ ವಿದ್ಯಾದ್ವಿವೃದ್ಧಂ ಸತ್ತ್ವಮಿತ್ಯುತ||

ಈ ದೇಹದ ಸರ್ವದ್ವಾರಗಳಲ್ಲಿಯೂ ಯಾವಾಗ ಜ್ಞಾನವೆಂಬ ಪ್ರಕಾಶವು ಉಂಟಾಗುವುದೋ ಆಗ ಸತ್ತ್ವವು ಬೆಳೆದುಕೊಂಡಿದೆ ಎಂದು ಹೇಳಬಹುದು.

06036012a ಲೋಭಃ ಪ್ರವೃತ್ತಿರಾರಂಭಃ ಕರ್ಮಣಾಮಶಮಃ ಸ್ಪೃಹಾ|

06036012c ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ||

ಭರತರ್ಷಭ! ಲೋಭ, ಪ್ರವೃತ್ತಿ, ಕರ್ಮಗಳ ಆರಂಭ, ಅಶಮ, ಸ್ಪೃಹಾ ಇವುಗಳು ರಜವು ವೃದ್ಧಿಯಾಗುವಾಗ ಉಂಟಾಗುವವು.

06036013a ಅಪ್ರಕಾಶೋಽಪ್ರವೃತ್ತಿಶ್ಚ ಪ್ರಮಾದೋ ಮೋಹ ಏವ ಚ|

06036013c ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರುನಂದನ||

ಕುರುನಂದನ! ಅಪ್ರಕಾಶ, ಅಪ್ರವೃತ್ತಿ, ಪ್ರಮಾದ, ಮತ್ತು ಮೋಹ ಇವು ತಮಸ್ಸು ವೃದ್ಧಿಯಾದಾಗ ಉಂಟಾಗುವವು.

06036014a ಯದಾ ಸತ್ತ್ವೇ ಪ್ರವೃದ್ಧೇ ತು ಪ್ರಲಯಂ ಯಾತಿ ದೇಹಭೃತ್|

06036014c ತದೋತ್ತಮವಿದಾಂ ಲೋಕಾನಮಲಾನ್ಪ್ರತಿಪದ್ಯತೇ||

ಸತ್ತ್ವವು ಪ್ರವೃದ್ಧವಾಗಿರುವಾಗ ದೇಹಧಾರಿಯು ಪ್ರಲಯಹೊಂದಿದರೆ ಅವನು ಉತ್ತಮ ಜ್ಞಾನಿಗಳ ಅಮಲ ಲೋಕಗಳನ್ನು ಹೊಂದುತ್ತಾನೆ.

06036015a ರಜಸಿ ಪ್ರಲಯಂ ಗತ್ವಾ ಕರ್ಮಸಂಗಿಷು ಜಾಯತೇ|

06036015c ತಥಾ ಪ್ರಲೀನಸ್ತಮಸಿ ಮೂಢಯೋನಿಷು ಜಾಯತೇ||

ರಜಸ್ಸಿನಲ್ಲಿ ಪ್ರಲಯವಾದರೆ ಕರ್ಮಸಂಗಿಗಳಲ್ಲಿ ಹುಟ್ಟುತ್ತಾನೆ. ಹಾಗೆಯೇ ತಮಸ್ಸಿನಲ್ಲಿ ಪ್ರಲೀನನಾದರೆ ಮೂಢಯೋನಿಗಳಲ್ಲಿ ಹುಟ್ಟುತ್ತಾನೆ.

06036016a ಕರ್ಮಣಃ ಸುಕೃತಸ್ಯಾಹುಃ ಸಾತ್ತ್ವಿಕಂ ನಿರ್ಮಲಂ ಫಲಂ|

06036016c ರಜಸಸ್ತು ಫಲಂ ದುಃಖಮಜ್ಞಾನಂ ತಮಸಃ ಫಲಂ||

ಸುಕೃತವಾದ ಸಾತ್ತ್ವಿಕ ಕರ್ಮಗಳಿಗೆ ನಿರ್ಮಲ ಫಲವೆನ್ನುವರು. ರಜಸ್ಸಿನ ಫಲ ದುಃಖ. ಮತ್ತು ತಮಸ್ಸಿನ ಫಲ ಅಜ್ಞಾನ.

06036017a ಸತ್ತ್ವಾತ್ಸಂಜಾಯತೇ ಜ್ಞಾನಂ ರಜಸೋ ಲೋಭ ಏವ ಚ|

06036017c ಪ್ರಮಾದಮೋಹೌ ತಮಸೋ ಭವತೋಽಜ್ಞಾನಮೇವ ಚ||

ಸತ್ತ್ವದಿಂದ ಜ್ಞಾನವು ಹುಟ್ಟುತ್ತದೆ. ರಜಸ್ಸಿನಿಂದ ಲೋಭವುಂಟಾಗುತ್ತದೆ. ತಮಸ್ಸಿನಿಂದ ಪ್ರಮಾದ-ಮೋಹಗಳೂ ಅಜ್ಞಾನವೂ ಉಂಟಾಗುತ್ತವೆ.

06036018a ಊರ್ಧ್ವಂ ಗಚ್ಛಂತಿ ಸತ್ತ್ವಸ್ಥಾ ಮಧ್ಯೇ ತಿಷ್ಠಂತಿ ರಾಜಸಾಃ|

06036018c ಜಘನ್ಯಗುಣವೃತ್ತಸ್ಥಾ ಅಧೋ ಗಚ್ಛಂತಿ ತಾಮಸಾಃ||

ಸತ್ತ್ವದಲ್ಲಿರುವವವರು ಊರ್ಧ್ವಲೋಕಗಳಿಗೆ ಹೋಗುತ್ತಾರೆ. ರಾಜಸರು ಮಧ್ಯಮ ಲೋಕಗಳಲ್ಲಿ ಇರುವರು. ಕೆಳಗಿನ ಗುಣದ ವೃತ್ತದಲ್ಲಿರುವ ತಾಮಸರು ಅಧೋಲೋಕಗಳಿಗೆ ಹೋಗುತ್ತಾರೆ.

06036019a ನಾನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾನುಪಶ್ಯತಿ|

06036019c ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋಽಧಿಗಚ್ಛತಿ||

ದ್ರಷ್ಟನು ಯಾವಾಗ ಗುಣಗಳಿಗಿಂತ ಬೇರೊಬ್ಬ ಕರ್ತೃವಿಲ್ಲವೆಂದು ಕಂಡುಕೊಳ್ಳುತ್ತಾನೋ ಮತ್ತು ಗುಣಗಳಿಗಿಂತ ಆಚಿನದ್ದನ್ನು ಅರಿತುಕೊಳ್ಳುತ್ತಾನೋ ಆಗ ಅವನು ನನ್ನ ಭಾವವನ್ನು ಹೊಂದುವನು.

06036020a ಗುಣಾನೇತಾನತೀತ್ಯ ತ್ರೀನ್ದೇಹೀ ದೇಹಸಮುದ್ಭವಾನ್|

06036020c ಜನ್ಮಮೃತ್ಯುಜರಾದುಃಖೈರ್ವಿಮುಕ್ತೋಽಮೃತಮಶ್ನುತೇ||

ದೇಹಿಯು ದೇಹಕ್ಕೆ ಕಾರಣವಾಗಿರುವ ಈ ಮೂರು ಗುಣಗಳನ್ನೂ ದಾಟಿದರೆ ಜನ್ಮ-ಮೃತ್ಯು-ಜರಾ-ದುಃಖಗಳಿಂದ ವಿಮುಕ್ತನಾಗಿ ಅಮೃತತ್ವವನ್ನು ಪಡೆಯುತ್ತಾನೆ.”

06036021 ಅರ್ಜುನ ಉವಾಚ|

06036021a ಕೈರ್ಲಿಂಗೈಸ್ತ್ರೀನ್ಗುಣಾನೇತಾನತೀತೋ ಭವತಿ ಪ್ರಭೋ|

06036021c ಕಿಮಾಚಾರಃ ಕಥಂ ಚೈತಾಂಸ್ತ್ರೀನ್ಗುಣಾನತಿವರ್ತತೇ||

ಅರ್ಜುನನು ಹೇಳಿದನು: “ಪ್ರಭೋ! ಈ ಮೂರೂ ಗುಣಗಳನ್ನು ದಾಟಿದವನ ಗುರುತುಗಳೇನು? ಅವನ ಆಚಾರಗಳೇನು? ಮತ್ತು ಈ ಮೂರೂ ಗುಣಗಳನ್ನು ಹೇಗೆ ಮೀರಬಹುದು?”

06036022 ಶ್ರೀಭಗವಾನುವಾಚ|

06036022a ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ|

06036022c ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ||

ಶ್ರೀಭಗವಾನನು ಹೇಳಿದನು: “ಪಾಂಡವ! ಗುಣಗಳನ್ನು ಮೀರಿದವನು ಪ್ರಕಾಶ, ಪ್ರವೃತ್ತಿ ಮತ್ತು ಮೋಹಗಳನ್ನು ದ್ವೇಷಿಸುವುದಿಲ್ಲ. ನಡೆಯುತ್ತಿರುವುದನ್ನು ಮತ್ತು ನಡೆದುಹೋದವುಗಳನ್ನು ಬಯಸುವುದೂ ಇಲ್ಲ.

06036023a ಉದಾಸೀನವದಾಸೀನೋ ಗುಣೈರ್ಯೋ ನ ವಿಚಾಲ್ಯತೇ|

06036023c ಗುಣಾ ವರ್ತಂತ ಇತ್ಯೇವ ಯೋಽವತಿಷ್ಠತಿ ನೇಂಗತೇ||

06036024a ಸಮದುಃಖಸುಖಃ ಸ್ವಸ್ಥಃ ಸಮಲೋಷ್ಟಾಶ್ಮಕಾಂಚನಃ|

06036024c ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮಸಂಸ್ತುತಿಃ||

06036025a ಮಾನಾವಮಾನಯೋಸ್ತುಲ್ಯಸ್ತುಲ್ಯೋ ಮಿತ್ರಾರಿಪಕ್ಷಯೋಃ|

06036025c ಸರ್ವಾರಂಭಪರಿತ್ಯಾಗೀ ಗುಣಾತೀತಃ ಸ ಉಚ್ಯತೇ||

ಗುಣಗಳಿಂದ ಚಲಿತನಾಗಿದೇ ಉದಾಸೀನನಾಗಿ ಕುಳಿತಿರುವವನು, ಗುಣಗಳು ವರ್ತಿಸುತ್ತಿವೆ ಎಂದು ಅಲುಗಾಡದೇ ನಿಂತಿರುವವನು, ದುಃಖ-ಸುಖಗಳಲ್ಲಿ ಸಮನಾಗಿರುವವನು, ಸ್ವಸ್ಥನಾಗಿರುವವನು, ಮಣ್ಣು-ಕಲ್ಲು-ಕಾಂಚನಗಳನ್ನು ಸಮನಾಗಿ ನೋಡುವವನು, ಪ್ರಿಯ-ಅಪ್ರಿಯಗಳನ್ನು ಸಮನಾಗಿ ಕಾಣುವವನು, ನಿಂದೆ-ಸಂಸ್ತುತಿಗಳನ್ನು ಸಮವೆಂದು ತೆಗೆದುಕೊಳ್ಳುವ ಧೀರನು, ಮಾನ-ಅಪಮಾನಗಳನ್ನು ಸಮವೆಂದೂ, ಮಿತ್ರ-ಅಮಿತ್ರರ ಪಕ್ಷಗಳನ್ನು ಸಮನಾಗಿ ನೋಡುವ, ಸರ್ವಾರಂಭಪರಿತ್ಯಾಗಿಯು ಗುಣಾತೀತನೆಂದು ಕರೆಯಲ್ಪಡುತ್ತಾನೆ.

06036026a ಮಾಂ ಚ ಯೋಽವ್ಯಭಿಚಾರೇಣ ಭಕ್ತಿಯೋಗೇನ ಸೇವತೇ|

06036026c ಸ ಗುಣಾನ್ಸಮತೀತ್ಯೈತಾನ್ಬ್ರಹ್ಮಭೂಯಾಯ ಕಲ್ಪತೇ||

ಯಾರು ನನ್ನನ್ನು ಅವ್ಯಭಿಚಾರದ ಭಕ್ತಿಯೋಗದಿಂದ ಸೇವಿಸುತ್ತಾನೋ ಅವನು ಈ ಗುಣಗಳನ್ನು ಸಂಪೂರ್ಣವಾಗಿ ದಾಟಿ ಬ್ರಹ್ಮಭೂಯನಂತಾಗುತ್ತಾನೆ.

06036027a ಬ್ರಹ್ಮಣೋ ಹಿ ಪ್ರತಿಷ್ಠಾಹಮಮೃತಸ್ಯಾವ್ಯಯಸ್ಯ ಚ|

06036027c ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ||

ಏಕೆಂದರೆ ನನ್ನಲ್ಲಿ ಬ್ರಹ್ಮ, ಅಮೃತ, ಅವ್ಯಯ, ಶಾಶ್ವತ ಧರ್ಮ, ಮತ್ತು ಏಕಾಂತಿಕ ಸುಖಗಳು ನೆಲೆಸಿವೆ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಗಣತ್ರಯವಿಭಾಗಯೋಗೋ ನಾಮ ಚತುರ್ದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಗುಣತ್ರಯವಿಭಾಗಯೋಗವೆಂಬ ಹದಿನಾಲ್ಕನೇ ಅಧ್ಯಾಯವು.

ಭೀಷ್ಮ ಪರ್ವಣಿ ಷಡ್ತ್ರಿಂಶೋಽಧ್ಯಾಯಃ||

ಭೀಷ್ಮ ಪರ್ವದಲ್ಲಿ ಮೂವತ್ತಾರನೇ ಅಧ್ಯಾಯವು.

Image result for flowers against white background"

Comments are closed.