ಆರಣ್ಯಕ ಪರ್ವ: ಅರಣ್ಯ ಪರ್ವ
೩
ಸೂರ್ಯ ಅಷ್ಟೋತ್ತರಶತನಾಮಾವಳಿ
ವಿಪ್ರರನ್ನು ಪೊರೆಯಲು ಏನುಮಾಡಲೆಂದು ಪುರೋಹಿತನನ್ನು ಕೇಳಲು ಧೌಮ್ಯನ ಸಲಹೆಯಂತೆ ಯುಧಿಷ್ಠಿರನು ಸೂರ್ಯನ ಕುರಿತು ತಪವನ್ನಾಚರಿಸಿದುದು (೧-೧೭). ಸೂರ್ಯಾಷ್ಟೋತ್ತರಶತನಾಮಾವಳಿ (೧೮-೩೩).
03003001 ವೈಶಂಪಾಯನ ಉವಾಚ|
03003001a ಶೌನಕೇನೈವಮುಕ್ತಸ್ತು ಕುಂತೀಪುತ್ರೋ ಯುಧಿಷ್ಠಿರಃ|
03003001c ಪುರೋಹಿತಮುಪಾಗಮ್ಯ ಭ್ರಾತೃಮಧ್ಯೇಽಬ್ರವೀದಿದಂ||
ವೈಶಂಪಾಯನನು ಹೇಳಿದನು: “ಶೌನಕನು ಈ ರೀತಿ ಹೇಳಲು ಕುಂತೀಪುತ್ರ ಯುಧಿಷ್ಠಿರನು ಪುರೋಹಿತನ ಬಳಿ ಹೋಗಿ ಸಹೋದರರ ಮಧ್ಯೆ ಈ ರೀತಿ ಹೇಳಿದನು:
03003002a ಪ್ರಸ್ಥಿತಂ ಮಾನುಯಾಂತೀಮೇ ಬ್ರಾಹ್ಮಣಾ ವೇದಪಾರಗಾಃ|
03003002c ನ ಚಾಸ್ಮಿ ಪಾಲನೇ ಶಕ್ತೋ ಬಹುದುಃಖಸಮನ್ವಿತಃ||
“ವೇದಪಾರಂಗತರಾದ ಈ ಬ್ರಾಹ್ಮಣರು ಹೊರಡುವಾಗ ನನ್ನನ್ನು ಅನುಸರಿಸಿ ಬಂದಿದ್ದಾರೆ. ಆದರೆ ನಾನು ಅವರನ್ನು ಪಾಲಿಸಲು ಶಕ್ತನಾಗಿಲ್ಲ ಎಂದು ಬಹಳ ದುಃಖ ಸಮನ್ವಿತನಾಗಿದ್ದೇನೆ.
03003003a ಪರಿತ್ಯಕ್ತುಂ ನ ಶಕ್ನೋಮಿ ದಾನಶಕ್ತಿಶ್ಚ ನಾಸ್ತಿ ಮೇ|
03003003c ಕಥಮತ್ರ ಮಯಾ ಕಾರ್ಯಂ ಭಗವಾಂಸ್ತದ್ಬ್ರವೀತು ಮೇ||
ಅವರನ್ನು ತ್ಯಜಿಸಲೂ ಶಕ್ತನಿಲ್ಲ ಮತ್ತು ಅವರಿಗೆ ಕೊಡಲೂ ಶಕ್ತನಿಲ್ಲ. ಇಂಥಹ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕು? ಭಗವನ್! ಅದನ್ನು ನನಗೆ ಹೇಳು.”
03003004a ಮುಹೂರ್ತಮಿವ ಸ ಧ್ಯಾತ್ವಾ ಧರ್ಮೇಣಾನ್ವಿಷ್ಯ ತಾಂ ಗತಿಂ|
03003004c ಯುಧಿಷ್ಠಿರಮುವಾಚೇದಂ ಧೌಮ್ಯೋ ಧರ್ಮಭೃತಾಂ ವರಃ||
ಧರ್ಮಭೃತರಲ್ಲಿ ಶ್ರೇಷ್ಠ ಧೌಮ್ಯನು ಧರ್ಮಮಾರ್ಗವನ್ನು ಹುಡುಕುತ್ತಾ ಒಂದು ಕ್ಷಣ ಯೋಚಿಸಿ ಯುಧಿಷ್ಠಿರನಿಗೆ ಹೇಳಿದನು:
03003005a ಪುರಾ ಸೃಷ್ಟಾನಿ ಭೂತಾನಿ ಪೀಡ್ಯಂತೇ ಕ್ಷುಧಯಾ ಭೃಶಂ|
03003005c ತತೋಽನುಕಂಪಯಾ ತೇಷಾಂ ಸವಿತಾ ಸ್ವಪಿತಾ ಇವ||
“ಹಿಂದೆ ಸೃಷ್ಟಿಯ ಸಮಯದಲ್ಲಿ ಪ್ರಾಣಿಗಳು ಅತ್ಯಂತ ಹಸಿವೆಯಲ್ಲಿದ್ದಾಗ ಅವರ ಮೇಲಿನ ಅನುಕಂಪದಿಂದ ಸವಿತನು ಅವರನ್ನು ತಂದೆಯಂತೆ ಪಾಲಿಸಿದನು.
03003006a ಗತ್ವೋತ್ತರಾಯಣಂ ತೇಜೋರಸಾನುದ್ಧೃತ್ಯ ರಶ್ಮಿಭಿಃ|
03003006c ದಕ್ಷಿಣಾಯನಮಾವೃತ್ತೋ ಮಹೀಂ ನಿವಿಶತೇ ರವಿಃ||
ರವಿಯು ಉತ್ತರಾಯಣದಲ್ಲಿ ಹೋಗಿ ತನ್ನ ಕಿರಣಗಳಿಂದ ತೇಜೋರಸವನ್ನು ತೆಗೆದು ದಕ್ಷಿಣಾಯನಕ್ಕೆ ಹಿಂದಿರುಗಿ ಭೂಮಿಯ ಮೇಲೆ ಬಿತ್ತಿದನು.
03003007a ಕ್ಷೇತ್ರಭೂತೇ ತತಸ್ತಸ್ಮಿನ್ನೋಷಧೀರೋಷಧೀಪತಿಃ|
03003007c ದಿವಸ್ತೇಜಃ ಸಮುದ್ಧೃತ್ಯ ಜನಯಾಮಾಸ ವಾರಿಣಾ||
ಅವನು ಈ ರೀತಿ ಕ್ಷೇತ್ರನಾದಾಗ ಔಷಧಿಗಳ ಅಧಿಪತಿಯು ತನ್ನ ಶೀತಲ ಕಿರಣಗಳಿಂದ ಸೂರ್ಯನ ಕಿರಣಗಳಲ್ಲಿದ್ದ ರಸಗಳನ್ನು ಮೋಡಗಳನ್ನಾಗಿ ಪರಿವರ್ತಿಸಿ, ಭೂಮಿಯ ಮೇಲೆ ಮಳೆಗರೆದನು.
03003008a ನಿಷಿಕ್ತಶ್ಚಂದ್ರತೇಜೋಭಿಃ ಸೂಯತೇ ಭೂಗತೋ ರವಿಃ|
03003008c ಓಷಧ್ಯಃ ಷಡ್ರಸಾ ಮೇಧ್ಯಾಸ್ತದನ್ನಂ ಪ್ರಾಣಿನಾಂ ಭುವಿ||
ಚಂದ್ರನ ತೇಜಸ್ಸಿನಿಂದ ಒದ್ದೆಯಾದ ಭೂಗತ ರವಿಯು ಷಡ್ರಸ ಔಷಧಿಗಳಾಗಿ ಮತ್ತು ಭೂಮಿಯಲ್ಲಿ ಪ್ರಾಣಿಗಳ ಆಹಾರವಾಗಿ ಬೆಳೆದನು.
03003009a ಏವಂ ಭಾನುಮಯಂ ಹ್ಯನ್ನಂ ಭೂತಾನಾಂ ಪ್ರಾಣಧಾರಣಂ|
03003009c ಪಿತೈಷ ಸರ್ವಭೂತಾನಾಂ ತಸ್ಮಾತ್ತಂ ಶರಣಂ ವ್ರಜ||
ಈ ರೀತಿ ಭೂತಗಳ ಪ್ರಾಣಧಾರಕ ಈ ಅನ್ನವು ಭಾನುಮಯವು. ಅವನೇ ಸರ್ವಭೂತಗಳಿಗೆ ಪಿತ. ಆದುದರಿಂದ ಅವನಿಗೇ ಶರಣು ಹೋಗು.
03003010a ರಾಜಾನೋ ಹಿ ಮಹಾತ್ಮಾನೋ ಯೋನಿಕರ್ಮವಿಶೋಧಿತಾಃ|
03003010c ಉದ್ಧರಂತಿ ಪ್ರಜಾಃ ಸರ್ವಾಸ್ತಪ ಆಸ್ಥಾಯ ಪುಷ್ಕಲಂ||
ಹುಟ್ಟು ಮತ್ತು ಕರ್ಮಗಳಿಂದ ಶುದ್ಧರಾದ ಮಹಾತ್ಮ ರಾಜರು ಪುಷ್ಕಲ ತಪಸ್ಸನ್ನು ಮಾಡಿಯೇ ಸರ್ವ ಪ್ರಜೆಗಳನ್ನೂ ಉದ್ಧರಿಸುತ್ತಾರೆ.
03003011a ಭೀಮೇನ ಕಾರ್ತವೀರ್ಯೇಣ ವೈನ್ಯೇನ ನಹುಷೇಣ ಚ|
03003011c ತಪೋಯೋಗಸಮಾಧಿಸ್ಥೈರುದ್ಧೃತಾ ಹ್ಯಾಪದಃ ಪ್ರಜಾಃ||
ಭೀಮ, ಕಾರ್ತವೀರ್ಯ, ವೈನ್ಯ, ಮತ್ತು ನಹುಷರೂ ಕೂಡ ತಪಸ್ಸು, ಯೋಗ ಮತ್ತು ಸಮಾಧಿಗಳಲ್ಲಿದ್ದುಕೊಂಡು ಪ್ರಜೆಗಳಿಗೊದಗಿದ ಆಪತ್ತನ್ನು ನಿವಾರಿಸಿದರು.
03003012a ತಥಾ ತ್ವಮಪಿ ಧರ್ಮಾತ್ಮನ್ಕರ್ಮಣಾ ಚ ವಿಶೋಧಿತಃ|
03003012c ತಪ ಆಸ್ಥಾಯ ಧರ್ಮೇಣ ದ್ವಿಜಾತೀನ್ಭರ ಭಾರತ||
ಧರ್ಮಾತ್ಮ! ಭಾರತ! ಅವರಂತೆ ಕರ್ಮಗಳಿಂದ ಶುದ್ಧನಾದ ನೀನೂ ಕೂಡ ತಪಸ್ಸನ್ನು ಮಾಡಿ ಈ ದ್ವಿಜರನ್ನು ಪರಿಪಾಲಿಸು.”
03003013a ಏವಮುಕ್ತಸ್ತು ಧೌಮ್ಯೇನ ತತ್ಕಾಲಸದೃಶಂ ವಚಃ|
03003013c ಧರ್ಮರಾಜೋ ವಿಶುದ್ಧಾತ್ಮಾ ತಪ ಆತಿಷ್ಠದುತ್ತಮಂ||
ಧೌಮ್ಯನು ಹೀಗೆ ಸಮಯಕ್ಕೆ ಸರಿಯಾದ ಮಾತುಗಳನ್ನು ಹೇಳಲು ವಿಶುದ್ಧಾತ್ಮ ಧರ್ಮರಾಜನು ಉತ್ತಮ ತಪಸ್ಸಿನಲ್ಲಿ ನಿರತನಾದನು.
03003014a ಪುಷ್ಪೋಪಹಾರೈರ್ಬಲಿಭಿರರ್ಚಯಿತ್ವಾ ದಿವಾಕರಂ|
03003014c ಯೋಗಮಾಸ್ಥಾಯ ಧರ್ಮಾತ್ಮಾ ವಾಯುಭಕ್ಷೋ ಜಿತೇಂದ್ರಿಯಃ|
03003014e ಗಾಂಗೇಯಂ ವಾರ್ಯುಪಸ್ಪೃಷ್ಯ ಪ್ರಾಣಾಯಾಮೇನ ತಸ್ಥಿವಾನ್||
ಆ ಧರ್ಮಾತ್ಮ ಜಿತೇಂದ್ರಿಯನು ಗಾಳಿಯನ್ನು ಮಾತ್ರ ಸೇವಿಸುತ್ತ ಯೋಗಸ್ಥನಾಗಿ ಪುಷ್ಪ, ಉಪಹಾರ ಮತ್ತು ಬಲಿಗಳಿಂದ ದಿವಾಕರನನ್ನು ಅರ್ಚಿಸಿ ಗಂಗಾನದಿಯ ನೀರನ್ನು ಮುಟ್ಟಿ ಪ್ರಾಣಾಯಾಮದಲ್ಲಿ ನಿರತನಾದನು[1].”
03003015 ಜನಮೇಜಯ ಉವಾಚ|
03003015a ಕಥಂ ಕುರೂಣಾಮೃಷಭಃ ಸ ತು ರಾಜಾ ಯುಧಿಷ್ಠಿರಃ|
03003015c ವಿಪ್ರಾರ್ಥಮಾರಾಧಿತವಾನ್ಸೂರ್ಯಮದ್ಭುತವಿಕ್ರಮಂ||
ಜನಮೇಜಯನು ಹೇಳಿದನು: “ಕುರುವೃಷಭ ರಾಜಾ ಯುಧಿಷ್ಠಿರನು ವಿಪ್ರರಿಗೋಸ್ಕರವಾಗಿ ಹೇಗೆ ಅದ್ಭುತವಿಕ್ರಮಿ ಸೂರ್ಯನನ್ನು ಆರಾಧಿಸಿದನು?”
03003016 ವೈಶಂಪಾಯನ ಉವಾಚ|
03003016a ಶೃಣುಷ್ವಾವಹಿತೋ ರಾಜಂ ಶುಚಿರ್ಭೂತ್ವಾ ಸಮಾಹಿತಃ|
03003016c ಕ್ಷಣಂ ಚ ಕುರು ರಾಜೇಂದ್ರ ಸರ್ವಂ ವಕ್ಷ್ಯಾಮ್ಯಶೇಷತಃ||
ವೈಶಂಪಾಯನನು ಹೇಳಿದನು: “ರಾಜನ್! ರಾಜೇಂದ್ರ! ಮನಸ್ಸಿಟ್ಟು ಕೇಳು. ಶುಚಿಯಾಗಿ ಸಮಾಹಿತನಾಗಿ ಸ್ವಲ್ಪ ಸಮಯವನ್ನು ತೆಗೆದುಕೊಂಡು ಕೇಳು. ಎಲ್ಲವನ್ನೂ ಬಿಡದೇ ಹೇಳುತ್ತೇನೆ.
03003017a ಧೌಮ್ಯೇನ ತು ಯಥ ಪ್ರೋಕ್ತಂ ಪಾರ್ಥಾಯ ಸುಮಹಾತ್ಮನೇ|
03003017c ನಾಮ್ನಾಮಷ್ಟಶತಂ ಪುಣ್ಯಂ ತಚ್ಛೃಣುಷ್ವ ಮಹಾಮತೇ||
ಮಹಾಮತೇ! ಸುಮಹಾತ್ಮ ಪಾರ್ಥನಿಗೆ ಧೌಮ್ಯನು ಹೇಳಿಕೊಟ್ಟ ಪುಣ್ಯಕರ ನೂರಾಎಂಟು ನಾಮಗಳನ್ನು ಕೇಳು.
03003018a ಸೂರ್ಯೋಽರ್ಯಮಾ ಭಗಸ್ತ್ವಷ್ಟಾ ಪೂಷಾರ್ಕಃ ಸವಿತಾ ರವಿಃ|
03003018c ಗಭಸ್ತಿಮಾನಜಃ ಕಾಲೋ ಮೃತ್ಯುರ್ಧಾತಾ ಪ್ರಭಾಕರಃ||
03003019a ಪೃಥಿವ್ಯಾಪಶ್ಚ ತೇಜಶ್ಚ ಖಂ ವಾಯುಶ್ಚ ಪರಾಯಣಂ|
03003019c ಸೆಮೋ ಬೃಹಸ್ಪತಿಃ ಶುಕ್ರೋ ಬುಧೋಽಂಗಾರಕ ಏವ ಚ||
03003020a ಇಂದ್ರೋ ವಿವಸ್ವಾನ್ದೀಪ್ತಾಂಶುಃ ಶುಚಿಃ ಶೌರಿಃ ಶನೈಶ್ಚರಃ|
03003020c ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಸ್ಕಂದೋ ವೈಶ್ರವಣೋ ಯಮಃ||
03003021a ವೈದ್ಯುತೋ ಜಾಠರಶ್ಚಾಗ್ನಿರೈಂಧನಸ್ತೇಜಸಾಂ ಪತಿಃ|
03003021c ಧರ್ಮಧ್ವಜೋ ವೇದಕರ್ತಾ ವೇದಾಂಗೋ ವೇದವಾಹನಃ||
03003022a ಕೃತಂ ತ್ರೇತಾ ದ್ವಾಪರಶ್ಚ ಕಲಿಃ ಸರ್ವಾಮರಾಶ್ರಯಃ|
03003022c ಕಲಾ ಕಾಷ್ಠಾ ಮುಹೂರ್ತಾಶ್ಚ ಪಕ್ಷಾ ಮಾಸಾ ಋತುಸ್ತಥಾ||
03003023a ಸಂವತ್ಸರಕರೋಽಶ್ವತ್ಥಃ ಕಾಲಚಕ್ರೋ ವಿಭಾವಸುಃ|
03003023c ಪುರುಷಃ ಶಾಶ್ವತೋ ಯೋಗೀ ವ್ಯಕ್ತಾವ್ಯಕ್ತಃ ಸನಾತನಃ||
03003024a ಲೋಕಾಧ್ಯಕ್ಷಃ ಪ್ರಜಾಧ್ಯಕ್ಷೋ ವಿಶ್ವಕರ್ಮಾ ತಮೋನುದಃ|
03003024c ವರುಣಃ ಸಾಗರೋಽಂಶುಶ್ಚ ಜೀಮೂತೋ ಜೀವನೋಽರಿಹಾ||
03003025a ಭೂತಾಶ್ರಯೋ ಭೂತಪತಿಃ ಸರ್ವಭೂತನಿಷೇವಿತಃ|
03003025c ಮಣಿಃ ಸುವರ್ಣೋ ಭೂತಾದಿಃ ಕಾಮದಃ ಸರ್ವತೋಮುಖಃ||
03003026a ಜಯೋ ವಿಶಾಲೋ ವರದಃ ಶೀಘ್ರಗಃ ಪ್ರಾಣಧಾರಣಃ|
03003026c ಧನ್ವಂತರಿರ್ಧೂಮಕೇತುರಾದಿದೇವೋಽದಿತೇಃ ಸುತಃ||
03003027a ದ್ವಾದಶಾತ್ಮಾರವಿಂದಾಕ್ಷಃ ಪಿತಾ ಮಾತಾ ಪಿತಾಮಹಃ|
03003027c ಸ್ವರ್ಗದ್ವಾರಂ ಪ್ರಜಾದ್ವಾರಂ ಮೋಕ್ಷದ್ವಾರಂ ತ್ರಿವಿಷ್ಟಪಂ||
03003028a ದೇಹಕರ್ತಾ ಪ್ರಶಾಂತಾತ್ಮಾ ವಿಶ್ವಾತ್ಮಾ ವಿಶ್ವತೋಮುಖಃ|
03003028c ಚರಾಚರಾತ್ಮಾ ಸೂಕ್ಷ್ಮಾತ್ಮಾ ಮೈತ್ರೇಣ ವಪುಷಾನ್ವಿತಃ||
ಸೂರ್ಯ, ಆರ್ಯಮಾ, ಭಗ, ತ್ವಷ್ಠಾ, ಪೂಷ, ಅರ್ಕ, ಸವಿತಾ, ರವಿ, ಗಭಸ್ತಿಮಾನ್, ಅಜ, ಕಾಲ, ಮೃತ್ಯು, ಧಾತಾ, ಪ್ರಭಾಕರ, ಪೃಥ್ವಿ, ಆಪಸ್, ತೇಜಸ್, ಖಂ, ವಾಯು, ಪರಾಯಣ, ಸೋಮ, ಬೃಹಸ್ಪತಿ, ಶುಕ್ರ, ಬುಧ, ಅಂಗಾರಕ, ಇಂದ್ರ, ವಿವಸ್ವಾನ್, ದೀಪ್ತಾಂಶು, ಶುಚಿ, ಶೌರಿ, ಶನೈಶ್ಚರ, ಬ್ರಹ್ಮ, ವಿಷ್ಣು, ರುದ್ರ, ಸ್ಕಂದ, ವೈಶ್ರವಣ, ಯಮ, ವೈದ್ಯುತ, ಜಠರ, ಅಗ್ನಿ, ಇಂಧನ, ತೇಜಸಾಂಪತಿ, ಧರ್ಮಧ್ವಜ, ವೇದಕರ್ತಾ, ವೇದಾಂಗ, ವೇದವಾಹನ, ಕೃತ, ತ್ರೇತ, ದ್ವಾಪರ, ಕಲಿ, ಸರ್ವಾಮರಾಶ್ರಯ, ಕಲಾ, ಕಾಷ್ಠ, ಮುಹೂರ್ತ, ಪಕ್ಷ, ಮಾಸ, ಋತು, ಸಂವತ್ಸರಕಾರ, ಅಶ್ವತ್ಥ, ಕಾಲಚಕ್ರ, ವಿಭಾವಸು, ಪುರುಷ, ಶಾಶ್ವತ, ಯೋಗಿ, ವ್ಯಕ್ತಾವ್ಯಕ್ತ, ಸನಾತನ, ಲೋಕಾಧ್ಯಕ್ಷ, ಪ್ರಜಾಧ್ಯಕ್ಷ, ವಿಶ್ವಕರ್ಮ, ತಮೋನುದ, ವರುಣ, ಸಾಗರ, ಅಂಶು, ಜೀಮೂತ, ಜೀವನ, ಅರಿಹ, ಭೂತಾಶ್ರಯ, ಭೂತಪತಿ, ಸರ್ವಭೂತನಿಷೇವಿತ, ಮಣಿ, ಸುವರ್ಣ, ಭೂತಾದಿ, ಕಾಮದ, ಸರ್ವತೋಮುಖ, ಜಯ, ವಿಶಾಲ, ವರದ, ಶೀಘ್ರಗ, ಪ್ರಾಣಧಾರಣ, ಧನ್ವಂತರಿ, ಧೂಮಕೇತು, ಆದಿದೇವ, ಆದಿತ್ಯ, ದ್ವಾದಶಾತ್ಮ, ಅರವಿಂದಾಕ್ಷ, ಪಿತ, ಮಾತಾ, ಪಿತಾಮಹ, ಸ್ವರ್ಗದ್ವಾರ, ಪ್ರಜಾದ್ವಾರ, ಮೋಕ್ಷದ್ವಾರ, ತ್ರಿವಿಷ್ಠಪ, ದೇಹಕರ್ತಾರ, ಪ್ರಶಾಂತಾತ್ಮ, ವಿಶ್ವಾತ್ಮ, ವಿಶ್ವತೋಮುಖ, ಚರಾಚರಾತ್ಮ, ಸೂಕ್ಷಾತ್ಮ, ಮೈತ್ರಿ, ವಪುಶಾನ್ವಿತ.
03003029a ಏತದ್ವೈ ಕೀರ್ತನೀಯಸ್ಯ ಸೂರ್ಯಸ್ಯೈವ ಮಹಾತ್ಮನಃ|
03003029c ನಾಮ್ನಾಮಷ್ಟಶತಂ ಪುಣ್ಯಂ ಶಕ್ರೇಣೋಕ್ತಂ ಮಹಾತ್ಮನಾ||
ಇವು ಮಹಾತ್ಮ ಶಕ್ರನು ಮಹಾತ್ಮ ಸೂರ್ಯನ ಕೀರ್ತನೆ ಮಾಡಿದ ಪುಣ್ಯಕರ ನೂರಾಎಂಟು ನಾಮಾವಳಿಯು.
03003030a ಶಕ್ರಾಚ್ಚ ನಾರದಃ ಪ್ರಾಪ್ತೋ ಧೌಮ್ಯಶ್ಚ ತದನಂತರಂ|
03003030c ಧೌಮ್ಯಾದ್ಯುಧಿಷ್ಠಿರಃ ಪ್ರಾಪ್ಯ ಸರ್ವಾನ್ಕಾಮಾನವಾಪ್ತವಾನ್||
ಶಕ್ರನಿಂದ ಇದನ್ನು ನಾರದನು ಪಡೆದನು ಮತ್ತು ನಂತರ ಧೌಮ್ಯನು ಪಡೆದನು. ಧೌಮ್ಯನಿಂದ ಪಡೆದ ಯುಧಿಷ್ಠಿರನು ಸರ್ವ ಕಾಮಗಳನ್ನೂ ಹೊಂದಿದನು.
03003031a ಸುರಪಿತೃಗಣಯಕ್ಷಸೇವಿತಂ
ಹ್ಯಸುರನಿಶಾಚರಸಿದ್ಧವಂದಿತಂ|
03003031c ವರಕನಕಹುತಾಶನಪ್ರಭಂ
ತ್ವಮಪಿ ಮನಸ್ಯಭಿಧೇಹಿ ಭಾಸ್ಕರಂ||
ಸುರ, ಪಿತೃಗಣ ಮತ್ತು ಯಕ್ಷರಿಂದ ಸೇವಿತ, ಅಸುರ, ನಿಶಾಚರ, ಸಿದ್ಧರಿಂದ ವಂದಿತ, ಶ್ರೇಷ್ಠ ಕನಕ ಮತ್ತು ಹುತಾಶನನ ಪ್ರಭೆಯುಳ್ಳ ಭಾಸ್ಕರನನ್ನು ನೀನೂ ಕೂಡ ಮನಸ್ಸಿನಲ್ಲಿಯೇ ಪ್ರಾರ್ಥಿಸು.
03003032a ಸೂರ್ಯೋದಯೇ ಯಸ್ತು ಸಮಾಹಿತಃ ಪಠೇತ್
ಸ ಪುತ್ರಲಾಭಂ ಧನರತ್ನಸಂಚಯಾನ್|
03003032c ಲಭೇತ ಜಾತಿಸ್ಮರತಾಂ ಸದಾ ನರಃ
ಸ್ಮೃತಿಂ ಚ ಮೇಧಾಂ ಚ ಸ ವಿಂದತೇ ಪರಾಂ||
ಸೂರ್ಯೋದಯದಲ್ಲಿ ಏಕಾಗ್ರಸ್ಥನಾಗಿ ಯಾರು ಇದನ್ನು ಪಠಿಸುತ್ತಾರೋ ಅವರು ಪುತ್ರಲಾಭವನ್ನೂ, ಧನರತ್ನಸಂಚಯವನ್ನೂ ಪಡೆಯುತ್ತಾರೆ. ಅಂಥಹ ನರನು ಸದಾ ಹಿಂದಿನ ಜನ್ಮದ ಜ್ಞಾನವನ್ನೂ, ಸ್ಮೃತಿಯನ್ನೂ, ಬುದ್ಧಿಯನ್ನೂ, ಮತ್ತು ಶ್ರೇಷ್ಠ ಜ್ಞಾನವನ್ನೂ ಪಡೆಯುತ್ತಾನೆ.
03003033a ಇಮಂ ಸ್ತವಂ ದೇವವರಸ್ಯ ಯೋ ನರಃ
ಪ್ರಕೀರ್ತಯೇಚ್ಛುಚಿಸುಮನಾಃ ಸಮಾಹಿತಃ|
03003033c ಸ ಮುಚ್ಯತೇ ಶೋಕದವಾಗ್ನಿಸಾಗರಾಲ್
ಲಭೇತ ಕಾಮಾನ್ಮನಸಾ ಯಥೇಪ್ಸಿತಾನ್||
ಯಾವ ನರನು ಈ ದೇವವರನ ಸ್ತುತಿಯನ್ನು ಶುಚಿಮನಸ್ಕನಾಗಿ ಏಕಾಗ್ರಚಿತ್ತನಾಗಿ ಹಾಡುತ್ತಾನೋ ಅವನು ಶೋಕದವಾಗ್ನಿಸಾಗರವನ್ನು ದಾಟಿ ಮನಸ್ಸಿನಲ್ಲಿ ಬಯಸಿದ ಇಚ್ಛೆಯನ್ನು ಪಡೆಯುತ್ತಾನೆ.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಪರ್ವಣಿ ಕಾಮ್ಯಕವನಪ್ರವೇಶೇ ತೃತೀಯೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಪರ್ವದಲ್ಲಿ ಕಾಮ್ಯಕವನಪ್ರವೇಶ ಎನ್ನುವ ಮೂರನೆಯ ಅಧ್ಯಾಯವು.
[1]ಕುಂಭಕೋಣದ ಪ್ರತಿಯಲ್ಲಿ ಇಲ್ಲಿ ಯುಧಿಷ್ಠಿರನು ಸೂರ್ಯದೇವನನ್ನು ಆರಾಧಿಸಿದ ಸ್ತೋತ್ರವಿದೆ. ಸಾಧಾರಣ ಅದೇ ಶ್ಲೋಕಗಳು ನೀಲಕಂಠೀಯ ಪಾಠದಲ್ಲಿ ಈ ಅಧ್ಯಾಯದ ಕೊನೆಯಲ್ಲಿ ಬರುತ್ತದೆ.