Aranyaka Parva: Chapter 291

ಆರಣ್ಯಕ ಪರ್ವ: ಕುಂಡಲಾಹರಣ ಪರ್ವ

೨೯೧

ಕುಂತಿಯನ್ನು ಸೇರಿ ಅವಳಿಗೆ ಗರ್ಭವನ್ನಿತ್ತು ಸೂರ್ಯನು ಅಂತರ್ಧಾನನಾದುದು (೧-೨೬).

03291001 ವೈಶಂಪಾಯನ ಉವಾಚ|

03291001a ಸಾ ತು ಕನ್ಯಾ ಬಹುವಿಧಂ ಬ್ರುವಂತೀ ಮಧುರಂ ವಚಃ|

03291001c ಅನುನೇತುಂ ಸಹಸ್ರಾಂಶುಂ ನ ಶಶಾಕ ಮನಸ್ವಿನೀ||

ವೈಶಂಪಾಯನನು ಹೇಳಿದನು: “ಆ ಮನಸ್ವಿನಿ ಕನ್ಯೆಯಾದರೋ ಬಹುವಿಧವಾಗಿ ಮಧುರ ವಚನಗಳಿಂದ ಮಾತನಾಡಿದರೂ ಸಹಸ್ರಾಂಶುವನ್ನು ಹಿಂದೆ ಕಳುಹಿಸಲು ಶಕ್ಯಳಾಗಲಿಲ್ಲ.

03291002a ನ ಶಶಾಕ ಯದಾ ಬಾಲಾ ಪ್ರತ್ಯಾಖ್ಯಾತುಂ ತಮೋನುದಂ|

03291002c ಭೀತಾ ಶಾಪಾತ್ತತೋ ರಾಜನ್ದಧ್ಯೌ ದೀರ್ಘಮಥಾಂತರಂ||

ರಾಜನ್! ಅವನನ್ನು ಹಿಂದೆ ಕಳುಹಿಸಲು ಅಶಕ್ಯಳಾದ ಬಾಲಕಿಯು ಶಾಪದಿಂದ ಭೀತಳಾಗಿ ಬಹಳ ಸಮಯದ ನಂತರ ಒಂದು ಉಪಾಯವನ್ನು ಕಂಡುಕೊಂಡಳು.

03291003a ಅನಾಗಸಃ ಪಿತುಃ ಶಾಪೋ ಬ್ರಾಹ್ಮಣಸ್ಯ ತಥೈವ ಚ|

03291003c ಮನ್ನಿಮಿತ್ತಃ ಕಥಂ ನ ಸ್ಯಾತ್ಕ್ರುದ್ಧಾದಸ್ಮಾದ್ವಿಭಾವಸೋಃ||

“ನನ್ನ ಕಾರಣದಿಂದ ವಿಭಾವಸುವಿನ ಕೋಪದಿಂದ ಅನಾಗಸ ತಂದೆ ಮತ್ತು ಆ ಬ್ರಾಹ್ಮಣರು ಶಾಪಹೊಂದದಂತೆ ತಡೆಯಲು ಏನು ಮಾಡಲಿ?

03291004a ಬಾಲೇನಾಪಿ ಸತಾ ಮೋಹಾದ್ಭೃಶಂ ಸಾಪಹ್ನವಾನ್ಯಪಿ|

03291004c ನಾತ್ಯಾಸಾದಯಿತವ್ಯಾನಿ ತೇಜಾಂಸಿ ಚ ತಪಾಂಸಿ ಚ||

ಬಾಲೆಯಾಗಿದ್ದರೂ, ಸತ್ಪುರುಷರ ತೇಜಸ್ಸು-ತಪಸ್ಸುಗಳು ಬಹಿರಂಗವಾಗಿದ್ದರೂ ಮೋಹದಿಂದ ಅವುಗಳನ್ನು ಮುಟ್ಟಲು ಹೋಗಬಾರದು.

03291005a ಸಾಹಮದ್ಯ ಭೃಶಂ ಭೀತಾ ಗೃಹೀತಾ ಚ ಕರೇ ಭೃಶಂ|

03291005c ಕಥಂ ತ್ವಕಾರ್ಯಂ ಕುರ್ಯಾಂ ವೈ ಪ್ರದಾನಂ ಹ್ಯಾತ್ಮನಃ ಸ್ವಯಂ||

ಇಂದು ನನ್ನ ಕೈಯನ್ನು ಅವನು ಗಟ್ಟಿಯಾಗಿ ಹಿಡಿದುಕೊಂಡಿದ್ದುದರಿಂದ ನಾನು ತುಂಬಾ ಭಯಭೀತಳಾಗಿದ್ದೇನೆ. ನನ್ನನ್ನು ನಾನೇ ಕೊಟ್ಟು ಹೇಗೆ ಈ ಅಕಾರ್ಯವನ್ನು ಮಾಡಲಿ?”

03291006a ಸೈವಂ ಶಾಪಪರಿತ್ರಸ್ತಾ ಬಹು ಚಿಂತಯತೀ ತದಾ|

03291006c ಮೋಹೇನಾಭಿಪರೀತಾಂಗೀ ಸ್ಮಯಮಾನಾ ಪುನಃ ಪುನಃ||

ಶಾಪಕ್ಕೆ ತುಂಬಾ ಹೆದರಿ ಬಹಳ ಚಿಂತಿಸುತ್ತಿದ್ದ ಅವಳು ಮೋಹದಿಂದ ದೇಹವು ನಡುಗುತ್ತಿರಲು ಪುನಃ ಪುನಃ ಮುಗುಳ್ನಗುತ್ತಿದ್ದಳು.

03291007a ತಂ ದೇವಮಬ್ರವೀದ್ಭೀತಾ ಬಂಧೂನಾಂ ರಾಜಸತ್ತಮ|

03291007c ವ್ರೀಡಾವಿಹ್ವಲಯಾ ವಾಚಾ ಶಾಪತ್ರಸ್ತಾ ವಿಶಾಂ ಪತೇ||

ರಾಜಸತ್ತಮ! ವಿಶಾಂಪತೇ! ಅವಳು ಬಂಧುಗಳಿಗೆ ಹೆದರಿ ದೇವನಿಗೆ ನಾಚಿ, ವಿಹ್ವಲಳಾಗಿ ಶಾಪಕ್ಕೆ ಹೆದರಿ ಈ ಮಾತುಗಳನ್ನು ಹೇಳಿದಳು.

03291008 ಕುಂತ್ಯುವಾಚ|

03291008a ಪಿತಾ ಮೇ ಧ್ರಿಯತೇ ದೇವ ಮಾತಾ ಚಾನ್ಯೇ ಚ ಬಾಂಧವಾಃ|

03291008c ನ ತೇಷು ಧ್ರಿಯಮಾಣೇಷು ವಿಧಿಲೋಪೋ ಭವೇದಯಂ||

ಕುಂತಿಯು ಹೇಳಿದಳು: “ದೇವ! ನನ್ನ ತಂದೆಯೂ ತಾಯಿಯೂ ಮತ್ತು ಇತರ ಬಾಂಧವರೂ ಜೀವಿಸಿದ್ದಾರೆ. ಅವರು ಜೀವಿಸಿರುವಾಗ ಈ ವಿಧಿಲೋಪವು ಆಗಕೂಡದು.

03291009a ತ್ವಯಾ ಮೇ ಸಂಗಮೋ ದೇವ ಯದಿ ಸ್ಯಾದ್ವಿಧಿವರ್ಜಿತಃ|

03291009c ಮನ್ನಿಮಿತ್ತಂ ಕುಲಸ್ಯಾಸ್ಯ ಲೋಕೇ ಕೀರ್ತಿರ್ನಶೇತ್ತತಃ||

ದೇವ! ಒಂದುವೇಳೆ ನನ್ನ ಮತ್ತು ನಿನ್ನ ಸಂಗಮವು ವಿಧಿವರ್ಜಿತವಾಗಿದ್ದರೆ ನನ್ನ ಕಾರಣದಿಂದ ಲೋಕದಲ್ಲಿ ಈ ಕುಲದ ಕೀರ್ತಿಯು ನಾಶವಾಗುತ್ತದೆ.

03291010a ಅಥ ವಾ ಧರ್ಮಮೇತಂ ತ್ವಂ ಮನ್ಯಸೇ ತಪತಾಂ ವರ|

03291010c ಋತೇ ಪ್ರದಾನಾದ್ಬಂಧುಭ್ಯಸ್ತವ ಕಾಮಂ ಕರೋಮ್ಯಹಂ||

ಅಥವಾ ತಪಸ್ವಿಗಳಲ್ಲಿ ಶ್ರೇಷ್ಠನೇ! ಇದು ಧರ್ಮವೆಂದೇ ನೀನು ತಿಳಿದರೆ ನನ್ನ ಬಂಧುಗಳಿಂದ ಕೊಡಲ್ಪಡದೇ ನಿನಗಿಷ್ಟವಾದುದನ್ನು ಮಾಡುತ್ತೇನೆ.

03291011a ಆತ್ಮಪ್ರದಾನಂ ದುರ್ಧರ್ಷ ತವ ಕೃತ್ವಾ ಸತೀ ತ್ವಹಂ|

03291011c ತ್ವಯಿ ಧರ್ಮೋ ಯಶಶ್ಚೈವ ಕೀರ್ತಿರಾಯುಶ್ಚ ದೇಹಿನಾಂ||

ದುರ್ದರ್ಷ! ನಾನು ನಿನಗೆ ನನ್ನನ್ನು ಕೊಟ್ಟುಕೊಂಡರೂ ಸತಿಯಾಗಿಯೇ ಇರುತ್ತೇನೆ. ಯಾಕೆಂದರೆ ನಿನ್ನಲ್ಲಿ ದೇಹಿಗಳ ಧರ್ಮ, ಯಶಸ್ಸು, ಕೀರ್ತಿ ಮತ್ತು ಆಯಸ್ಸುಗಳು ಇವೆ.”

03291012 ಸೂರ್ಯ ಉವಾಚ|

03291012a ನ ತೇ ಪಿತಾ ನ ತೇ ಮಾತಾ ಗುರವೋ ವಾ ಶುಚಿಸ್ಮಿತೇ|

03291012c ಪ್ರಭವಂತಿ ವರಾರೋಹೇ ಭದ್ರಂ ತೇ ಶೃಣು ಮೇ ವಚಃ||

ಸೂರ್ಯನು ಹೇಳಿದನು: “ಶುಚಿಸ್ಮಿತೇ! ನಿನ್ನ ತಂದೆಯಾಗಲೀ ತಾಯಿಯಾಗಲೀ ಮತ್ತು ಹಿರಿಯರಾಗಲೀ ಶಕ್ಯರಿಲ್ಲ. ವರಾರೋಹೇ! ನಿನಗೆ ಮಂಗಳವಾಗಲಿ! ನನ್ನ ಮಾತನ್ನು ಕೇಳು.

03291013a ಸರ್ವಾನ್ಕಾಮಯತೇ ಯಸ್ಮಾತ್ಕನೇರ್ಧಾತೋಶ್ಚ ಭಾಮಿನಿ|

03291013c ತಸ್ಮಾತ್ಕನ್ಯೇಹ ಸುಶ್ರೋಣಿ ಸ್ವತಂತ್ರಾ ವರವರ್ಣಿನಿ||

ಭಾಮಿನಿ! ಸುಶ್ರೋಣೀ! ವರವರ್ಣಿನೀ! ಎಲ್ಲ ಕಾಮಗಳೆಂಬ ಅರ್ಥವುಳ್ಳ ಕನೇ ಎಂಬ ಧಾತುವಿನಿಂದ ಬಂದಿದ್ದುದಕ್ಕೆ ಕನ್ಯೆಯನ್ನು ಸ್ವತಂತ್ರಳೆಂದು ಹೇಳುತ್ತಾರೆ.

03291014a ನಾಧರ್ಮಶ್ಚರಿತಃ ಕಶ್ಚಿತ್ತ್ವಯಾ ಭವತಿ ಭಾಮಿನಿ|

03291014c ಅಧರ್ಮಂ ಕುತ ಏವಾಹಂ ಚರೇಯಂ ಲೋಕಕಾಮ್ಯಯಾ||

ಭಾಮಿನಿ! ಇದರಲ್ಲಿ ನಿನ್ನಿಂದ ಯಾವುದೇ ಅಧರ್ಮವು ನಡೆಯುವುದಿಲ್ಲ. ಲೋಕಕಾಮದಿಂದ ನಡೆಯುವ ನಾನು ಅಧರ್ಮವನ್ನು ಹೇಗೆ ಮಾಡಿಯೇನು?

03291015a ಅನಾವೃತಾಃ ಸ್ತ್ರಿಯಃ ಸರ್ವಾ ನರಾಶ್ಚ ವರವರ್ಣಿನಿ|

03291015c ಸ್ವಭಾವ ಏಷ ಲೋಕಾನಾಂ ವಿಕಾರೋಽನ್ಯ ಇತಿ ಸ್ಮೃತಃ||

ವರವರ್ಣಿನೀ! ಎಲ್ಲ ಸ್ತ್ರೀಯರೂ ನರರೂ ಅನಾವೃತರು. ಲೋಕಗಳ ಸ್ವಭಾವವೇ ಇದು. ಬೇರೆ ರೀತಿಯಲ್ಲಿಲ್ಲ ಎಂದು ಸ್ಮೃತಿಗಳು ಹೇಳುತ್ತವೆ.

03291016a ಸಾ ಮಯಾ ಸಹ ಸಂಗಮ್ಯ ಪುನಃ ಕನ್ಯಾ ಭವಿಷ್ಯಸಿ|

03291016c ಪುತ್ರಶ್ಚ ತೇ ಮಹಾಬಾಹುರ್ವವಿಷ್ಯತಿ ಮಹಾಯಶಾಃ||

ನನ್ನೊಡನೆ ಕೂಡಿ ಪುನಃ ಕನ್ಯೆಯಾಗುತ್ತೀಯೆ. ನಿನ್ನ ಮಗನು ಮಹಾಬಾಹುವೂ ಮಹಾಯಶಸ್ವಿಯೂ ಆಗುತ್ತಾನೆ.”

03291017 ಕುಂತ್ಯುವಾಚ|

03291017a ಯದಿ ಪುತ್ರೋ ಮಮ ಭವೇತ್ತ್ವತ್ತಃ ಸರ್ವತಮೋಪಹ|

03291017c ಕುಂಡಲೀ ಕವಚೀ ಶೂರೋ ಮಹಾಬಾಹುರ್ಮಹಾಬಲಃ||

ಕುಂತಿಯು ಹೇಳಿದಳು: “ಸರ್ವಕತ್ತಲೆಯನ್ನೂ ಕಳೆಯುವವನೇ! ನಿನ್ನಿಂದ ಪಡೆದ ನನ್ನ ಪುತ್ರನು ಕುಂಡಲಿಯಾಗಿದ್ದು, ಕವಚಿಯಾಗಿದ್ದು, ಶೂರನೂ, ಮಹಾಬಾಹುವೂ, ಮಹಾಬಲನೂ ಆಗಲಿ.”

03291018 ಸೂರ್ಯ ಉವಾಚ|

03291018a ಭವಿಷ್ಯತಿ ಮಹಾಬಾಹುಃ ಕುಂಡಲೀ ದಿವ್ಯವರ್ಮಭೃತ್|

03291018c ಉಭಯಂ ಚಾಮೃತಮಯಂ ತಸ್ಯ ಭದ್ರೇ ಭವಿಷ್ಯತಿ||

ಸೂರ್ಯನು ಹೇಳಿದನು: “ಭದ್ರೇ! ಅವನು ಮಹಾಬಾಹುವೂ, ಮತ್ತು ಧರಿಸಿದ ಕುಂಡಲ ದಿವ್ಯಕವಚಗಳೆರಡೂ ಅಮೃತ ಮಯವಾಗಿರುತ್ತವೆ.”

03291019 ಕುಂತ್ಯುವಾಚ|

03291019a ಯದ್ಯೇತದಮೃತಾದಸ್ತಿ ಕುಂಡಲೇ ವರ್ಮ ಚೋತ್ತಮಂ|

03291019c ಮಮ ಪುತ್ರಸ್ಯ ಯಂ ವೈ ತ್ವಂ ಮತ್ತ ಉತ್ಪಾದಯಿಷ್ಯಸಿ||

ಕುಂತಿಯು ಹೇಳಿದಳು: “ನನ್ನ ಪುತ್ರನ ಉತ್ತಮ ಕುಂಡಲ ಕವಚಗಳು ಅಮೃತಮಯವಾಗಿರುತ್ತವೆಯೆಂದಾದರೆ ಅವನನ್ನು ನನ್ನಲ್ಲಿ ಹುಟ್ಟಿಸು.

03291020a ಅಸ್ತು ಮೇ ಸಂಗಮೋ ದೇವ ಯಥೋಕ್ತಂ ಭಗವನ್ಸ್ತ್ವಯಾ|

03291020c ತ್ವದ್ವೀರ್ಯರೂಪಸತ್ತ್ವೌಜಾ ಧರ್ಮಯುಕ್ತೋ ಭವೇತ್ಸ ಚ||

ದೇವ! ಭಗವನ್! ನೀನು ಹೇಳಿದಂತೆ ನಿನ್ನೊಡನೆ ನನ್ನ ಸಂಗಮವಾಗಲಿ. ಅವನು ವೀರ್ಯದಲ್ಲಿ, ರೂಪದಲ್ಲಿ, ಸತ್ವದಲ್ಲಿ, ತೇಜಸ್ಸಿನಲ್ಲಿ ನಿನ್ನ ಹಾಗೆಯೇ ಆಗಲಿ. ಧರ್ಮಯುಕ್ತನಾಗಿರಲಿ.”

03291021 ಸೂರ್ಯ ಉವಾಚ|

03291021a ಅದಿತ್ಯಾ ಕುಂಡಲೇ ರಾಜ್ಞಿ ದತ್ತೇ ಮೇ ಮತ್ತಕಾಶಿನಿ|

03291021c ತೇಽಸ್ಯ ದಾಸ್ಯಾಮಿ ವೈ ಭೀರು ವರ್ಮ ಚೈವೇದಮುತ್ತಮಂ||

ಸೂರ್ಯನು ಹೇಳಿದನು: “ರಾಣಿ! ಮತ್ತಕಾಶಿನೀ! ಭೀರು! ಅದಿತಿಯು ನನಗೆ ಕೊಟ್ಟಿದ್ದ ಕುಂಡಲಗಳನ್ನೂ ಅನುತ್ತಮ ಕವಚವನ್ನೂ ಅವನಿಗೆ ನೀಡುತ್ತೇನೆ.”

03291022 ಪೃಥೋವಾಚ|

03291022a ಪರಮಂ ಭಗವನ್ದೇವ ಸಂಗಮಿಷ್ಯೇ ತ್ವಯಾ ಸಹ|

03291022c ಯದಿ ಪುತ್ರೋ ಭವೇದೇವಂ ಯಥಾ ವದಸಿ ಗೋಪತೇ||

ಪೃಥೆಯು ಹೇಳಿದಳು: “ಪರಮ ಭಗವನ್! ದೇವ! ಗೋಪತೇ! ನೀನು ಹೇಳಿದಂಥ ಪುತ್ರನಾಗುತ್ತಾನೆಂದರೆ ನಾನು ನಿನ್ನೊಡನೆ ಕೂಡುತ್ತೇನೆ.””

03291023 ವೈಶಂಪಾಯನ ಉವಾಚ|

03291023a ತಥೇತ್ಯುಕ್ತ್ವಾ ತು ತಾಂ ಕುಂತೀಮಾವಿವೇಶ ವಿಹಂಗಮಃ|

03291023c ಸ್ವರ್ಭಾನುಶತ್ರುರ್ಯೋಗಾತ್ಮಾ ನಾಭ್ಯಾಂ ಪಸ್ಪರ್ಶ ಚೈವ ತಾಂ||

ವೈಶಂಪಾಯನನು ಹೇಳಿದನು: “ಹಾಗೆಯೇ ಆಗಲೆಂದು ಹೇಳಿ ಆ ವಿಹಂಗಮನು ಕುಂತಿಯನ್ನು ಪ್ರವೇಶಿಸಿದನು. ಆ ಸ್ವರ್ಭಾನುಶತ್ರು ಯೋಗಾತ್ಮನು ಅವಳ ಹೊಕ್ಕಳನ್ನು ಮುಟ್ಟಿದನು.

03291024a ತತಃ ಸಾ ವಿಹ್ವಲೇವಾಸೀತ್ಕನ್ಯಾ ಸೂರ್ಯಸ್ಯ ತೇಜಸಾ|

03291024c ಪಪಾತಾಥ ಚ ಸಾ ದೇವೀ ಶಯನೇ ಮೂಢಚೇತನಾ||

ಆಗ ಆ ದೇವಿ ಕನ್ಯೆಯು ಸೂರ್ಯನ ತೇಜಸ್ಸಿನಿಂದ ವಿಹ್ವಲಳಾಗಿ ಮೂಢಚೇತನಳಾಗಿ ಹಾಸಿಗೆಯ ಮೇಲೆ ಬಿದ್ದಳು.”

03291025 ಸೂರ್ಯ ಉವಾಚ|

03291025a ಸಾಧಯಿಷ್ಯಾಮಿ ಸುಶ್ರೋಣಿ ಪುತ್ರಂ ವೈ ಜನಯಿಷ್ಯಸಿ|

03291025c ಸರ್ವಶಸ್ತ್ರಭೃತಾಂ ಶ್ರೇಷ್ಠಂ ಕನ್ಯಾ ಚೈವ ಭವಿಷ್ಯಸಿ||

ಸೂರ್ಯನು ಹೇಳಿದನು: “ಸುಶ್ರೋಣೀ! ಮುಗಿಸುತ್ತಿದ್ದೇನೆ. ನಿನಗೆ ಪುತ್ರನು ಜನಿಸುತ್ತಾನೆ. ಕನ್ಯೇ! ಶಸ್ತ್ರಭೃತರೆಲ್ಲರಲ್ಲಿ ಶ್ರೇಷ್ಠನಾಗುತ್ತಾನೆ.””

03291026 ವೈಶಂಪಾಯನ ಉವಾಚ|

03291026a ತತಃ ಸಾ ವ್ರೀಡಿತಾ ಬಾಲಾ ತದಾ ಸೂರ್ಯಮಥಾಬ್ರವೀತ್|

03291026c ಏವಮಸ್ತ್ವಿತಿ ರಾಜೇಂದ್ರ ಪ್ರಸ್ಥಿತಂ ಭೂರಿವರ್ಚಸಂ||

ವೈಶಂಪಾಯನನು ಹೇಳಿದನು: “ಆಗ ನಾಚಿಕೆಯಿಂದ ಆ ಬಾಲಕಿಯು ಹಾಗೆಯೇ ಆಗಲೆಂದು ಸೂರ್ಯನಿಗೆ ಹೇಳಿದಳು. ರಾಜೇಂದ್ರ! ಅನಂತರ ಭೂರಿವರ್ಚಸ ಸೂರ್ಯನು ಮುಂದುವರೆದನು.

03291027a ಇತಿ ಸ್ಮೋಕ್ತಾ ಕುಂತಿರಾಜಾತ್ಮಜಾ ಸಾ|

         ವಿವಸ್ವಂತಂ ಯಾಚಮಾನಾ ಸಲಜ್ಜಾ|

03291027c ತಸ್ಮಿನ್ಪುಣ್ಯೇ ಶಯನೀಯೇ ಪಪಾತ|

         ಮೋಹಾವಿಷ್ಟಾ ಭಜ್ಯಮಾನಾ ಲತೇವ||

ಈ ರೀತಿ ಭರವಸೆಯನ್ನು ಪಡೆದ ಕುಂತಿರಾಜನ ಮಗಳು ವಿವಸ್ವತನನ್ನು ಯಾಚಿಸುವುದರಲ್ಲಿ ಲಜ್ಜಿತಳಾಗಿ, ಮೋಹಾವಿಷ್ಟಳಾಗಿ, ತುಂಡರಿಸಿದ ಲತೆಯಂತೆ ಆ ಪುಣ್ಯ ಶಯನದಲ್ಲಿ ಬಿದ್ದಳು.

03291028a ತಾಂ ತಿಗ್ಮಾಂಶುಸ್ತೇಜಸಾ ಮೋಹಯಿತ್ವಾ|

         ಯೋಗೇನಾವಿಷ್ಯಾತ್ಮಸಂಸ್ಥಾಂ ಚಕಾರ|

03291028c ನ ಚೈವೈನಾಂ ದೂಷಯಾಮಾಸ ಭಾನುಃ|

         ಸಂಜ್ಞಾಂ ಲೇಭೇ ಭೂಯ ಏವಾಥ ಬಾಲಾ||

ತಿಗ್ಮಾಂಶುವು ತೇಜಸ್ಸಿನಿಂದ ಅವಳನ್ನು ಮೋಹಿಸುತ್ತಾ ಯೋಗದಿಂದ ಅವಳನ್ನು ಪ್ರವೇಶಿಸಿ ಗರ್ಭಿಣಿಯನ್ನಾಗಿ ಮಾಡಿದನು. ಆದರೆ ಆ ಭಾನುವು ಅವಳನ್ನು ದೂಷಿಸಲಿಲ್ಲ. ಮತ್ತು ಆ ಬಾಲಕಿಯು ಪುನಃ ತನ್ನ ಸಂಜ್ಞೆಗಳನ್ನು ಪಡೆದಳು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಸೂರ್ಯಕುಂತೀಸಮಾಗಮೇ ಏಕನವತ್ಯಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಸೂರ್ಯಕುಂತೀಸಮಾಗಮದಲ್ಲಿ ಇನ್ನೂರಾತೊಂಭತ್ತೊಂದನೆಯ ಅಧ್ಯಾಯವು.

Image result for indian motifs

Comments are closed.