ಆರಣ್ಯಕ ಪರ್ವ: ಕುಂಡಲಾಹರಣ ಪರ್ವ
೨೮೬
ಸೂರ್ಯನು ತನ್ನ ಆರಾದ್ಯ ದೇವನೆಂದೂ, ಈ ವಿಷಯದಲ್ಲಿ ತನ್ನನ್ನು ತಡೆಯಬಾರದೆಂದೂ ಕರ್ಣನು ಹೇಳಿಕೊಳ್ಳುವುದು (೧-೯). ಕುಂಡಲಗಳಿಗೆ ಬದಲಾಗಿ ಅಮೋಘ ಶಕ್ತಿಯನ್ನಾದರೂ ಇಂದ್ರನಿಂದ ಪಡೆ ಎಂದು ಸೂರ್ಯನು ಕರ್ಣನಿಗೆ ಸಲಹೆ ಮಾಡಿ ಅಂತರ್ಧಾನನಾದುದು; ಕರ್ಣನು ಇಂದ್ರನ ನಿರೀಕ್ಷೆಯಲ್ಲಿದ್ದುದು (೧೦-೨೦).
03286001 ಕರ್ಣ ಉವಾಚ|
03286001a ಭಗವಂತಮಹಂ ಭಕ್ತೋ ಯಥಾ ಮಾಂ ವೇತ್ಥ ಗೋಪತೇ|
03286001c ತಥಾ ಪರಮತಿಗ್ಮಾಂಶೋ ನಾನ್ಯಂ ದೇವಂ ಕಥಂ ಚನ||
ಕರ್ಣನು ಹೇಳಿದನು: “ಭಗವಾನ್ ಗೋಪತೇ! ಪರಮತಿಗ್ಮಾಂಶೋ! ನಿನ್ನ ಮೇಲಿದ್ದಷ್ಟು ಭಕ್ತಿಯು ನನಗೆ ಬೇರೆ ಯಾವ ದೇವನ ಮೇಲೂ ಇಲ್ಲ ಎನ್ನುವುದು ನಿನಗೆ ಚೆನ್ನಾಗಿ ತಿಳಿದಿದೆ.
03286002a ನ ಮೇ ದಾರಾ ನ ಮೇ ಪುತ್ರಾ ನ ಚಾತ್ಮಾ ಸುಹೃದೋ ನ ಚ|
03286002c ತಥೇಷ್ಟಾ ವೈ ಸದಾ ಭಕ್ತ್ಯಾ ಯಥಾ ತ್ವಂ ಗೋಪತೇ ಮಮ||
ಗೋಪತೇ! ಸದಾ ನಿನ್ನ ಮೇಲೆ ಇರುವಷ್ಟು ಭಕ್ತಿಯು ನನಗೆ ಬೇರೆ ಯಾರಲ್ಲಿಯೂ ಇಲ್ಲ – ನನ್ನ ಪತ್ನಿಯ ಮೇಲಿಲ್ಲ, ನನ್ನ ಪುತ್ರನ ಮೇಲಿಲ್ಲ, ನನ್ನ ಮೇಲೆಯೂ ಇಲ್ಲ ಮತ್ತು ಸುಹೃದಯರ ಮೇಲೂ ಇಲ್ಲ.
03286003a ಇಷ್ಟಾನಾಂ ಚ ಮಹಾತ್ಮಾನೋ ಭಕ್ತಾನಾಂ ಚ ನ ಸಂಶಯಃ|
03286003c ಕುರ್ವಂತಿ ಭಕ್ತಿಮಿಷ್ಟಾಂ ಚ ಜಾನೀಷೇ ತ್ವಂ ಚ ಭಾಸ್ಕರ||
ಭಾಸ್ಕರ! ಮಹಾತ್ಮರು ತಮ್ಮ ಭಕ್ತರ ಇಷ್ಟಗಳನ್ನು ಪೂರೈಸುತ್ತಾರೆ ಮತ್ತು ಭಕ್ತಿಗೆ ಮೆಚ್ಚಿ ಮಾಡುತ್ತಾರೆ ಎಂದು ನಿನಗೆ ತಿಳಿದೇ ಇದೆ.
03286004a ಇಷ್ಟೋ ಭಕ್ತಶ್ಚ ಮೇ ಕರ್ಣೋ ನ ಚಾನ್ಯದ್ದೈವತಂ ದಿವಿ|
03286004c ಜಾನೀತ ಇತಿ ವೈ ಕೃತ್ವಾ ಭಗವಾನಾಹ ಮದ್ಧಿತಂ||
ಭಗವನ್! ಕರ್ಣನು ದಿವಿಯಲ್ಲಿ ಬೇರೆ ಯಾವ ದೇವತೆಯದ್ದೂ ಅಲ್ಲದೇ ನನ್ನ ಇಷ್ಟಭಕ್ತ ಎಂತು ಅರಿತ ನೀನು ನನ್ನ ಹಿತದಲ್ಲಿಯೇ ಮಾತನಾಡಿದ್ದೀಯೆ.
03286005a ಭೂಯಶ್ಚ ಶಿರಸಾ ಯಾಚೇ ಪ್ರಸಾದ್ಯ ಚ ಪುನಃ ಪುನಃ|
03286005c ಇತಿ ಬ್ರವೀಮಿ ತಿಗ್ಮಾಂಶೋ ತ್ವಂ ತು ಮೇ ಕ್ಷಂತುಮರ್ಹಸಿ||
ಮತ್ತೊಮ್ಮೆ ನಾನು ನಿನಗೆ ಶಿರಸಾವಹಿಸಿ ಪುನಃ ಪುನಃ ಕೇಳಿಕೊಳ್ಳುತ್ತೇನೆ - ನನ್ನ ಉತ್ತರವು ಒಂದೇ. ತಿಂಗ್ಮಾಂಶು! ನನ್ನನ್ನು ನೀನು ಕ್ಷಮಿಸಬೇಕು.
03286006a ಬಿಭೇಮಿ ನ ತಥಾ ಮೃತ್ಯೋರ್ಯಥಾ ಬಿಭ್ಯೇಽನೃತಾದಹಂ|
03286006c ವಿಶೇಷೇಣ ದ್ವಿಜಾತೀನಾಂ ಸರ್ವೇಷಾಂ ಸರ್ವದಾ ಸತಾಂ|
03286006e ಪ್ರದಾನೇ ಜೀವಿತಸ್ಯಾಪಿ ನ ಮೇಽತ್ರಾಸ್ತಿ ವಿಚಾರಣಾ||
ನಾನು ಸುಳ್ಳಿಗೆ ಹೆದರುವಷ್ಟು ಮೃತ್ಯುವಿಗೆ ಹೆದರುವುದಿಲ್ಲ. ವಿಶೇಷವಾಗಿ ದ್ವಿಜರಿಗೆ, ಸರ್ವದಾ ಸತ್ಯವಂತರಿಗೆ ಎಲ್ಲವನ್ನೂ ಕೊಡಲು, ಜೀವವನ್ನೂ ಕೂಡ ಕೊಡಲು, ನಾನು ಸಿದ್ಧನಾಗಿದ್ದೇನೆ. ಅದರಲ್ಲಿ ವಿಚಾರಮಾಡುವುದೇನೂ ಇಲ್ಲ.
03286007a ಯಚ್ಚ ಮಾಮಾತ್ಥ ದೇವ ತ್ವಂ ಪಾಂಡವಂ ಫಲ್ಗುನಂ ಪ್ರತಿ|
03286007c ವ್ಯೇತು ಸಂತಾಪಜಂ ದುಃಖಂ ತವ ಭಾಸ್ಕರ ಮಾನಸಂ|
03286007e ಅರ್ಜುನಂ ಪ್ರತಿ ಮಾಂ ಚೈವ ವಿಜೇಷ್ಯಾಮಿ ರಣೇಽರ್ಜುನಂ||
ದೇವ! ಭಾಸ್ಕರ! ಇನ್ನು ಪಾಂಡವ ಫಲ್ಗುನನ ಕುರಿತು ನೀನು ಹೇಳಿದ ವಿಷಯ - ಇದರ ಬಗ್ಗೆ ನೀನು ದುಃಖ ಸಂತಾಪವನ್ನು ಪಡೆಯುವುದು ಬೇಡ. ಅರ್ಜುನನನ್ನು ನಾನು ರಣದಲ್ಲಿ ಗೆಲ್ಲುತ್ತೇನೆ.
03286008a ತವಾಪಿ ವಿದಿತಂ ದೇವ ಮಮಾಪ್ಯಸ್ತ್ರಬಲಂ ಮಹತ್|
03286008c ಜಾಮದಗ್ನ್ಯಾದುಪಾತ್ತಂ ಯತ್ತಥಾ ದ್ರೋಣಾನ್ಮಹಾತ್ಮನಃ||
ದೇವ! ನಾನು ಜಾಮದಗ್ನಿಯಿಂದ ಪಡೆದ ಮತ್ತು ಮಹಾತ್ಮ ದ್ರೋಣನಿಂದ ಪಡೆದ ಮಹಾ ಅಸ್ತ್ರಬಲವನ್ನು ಹೊಂದಿದ್ದೇನೆ.
03286009a ಇದಂ ತ್ವಮನುಜಾನೀಹಿ ಸುರಶ್ರೇಷ್ಠ ವ್ರತಂ ಮಮ|
03286009c ಭಿಕ್ಷತೇ ವಜ್ರಿಣೇ ದದ್ಯಾಮಪಿ ಜೀವಿತಮಾತ್ಮನಃ||
ಸುರಶ್ರೇಷ್ಠ! ವಜ್ರಿಯು ನನ್ನ ಈ ಜೀವವನ್ನು ಬೇಡಿ ಬಂದರೂ ಅವನಿಗೆ ಕೊಡುತ್ತೇನೆ ಎನ್ನುವ ನನ್ನ ಈ ವ್ರತಕ್ಕೆ ಅನುಮತಿಯ್ನ ನೀಡು.”
03286010 ಸೂರ್ಯ ಉವಾಚ|
03286010a ಯದಿ ತಾತ ದದಾಸ್ಯೇತೇ ವಜ್ರಿಣೇ ಕುಂಡಲೇ ಶುಭೇ|
03286010c ತ್ವಮಪ್ಯೇನಮಥೋ ಬ್ರೂಯಾ ವಿಜಯಾರ್ಥಂ ಮಹಾಬಲ||
ಸೂರ್ಯನು ಹೇಳಿದನು: “ಮಗೂ! ಮಹಾಬಲ! ಒಂದು ವೇಳೆ ವಜ್ರನಿಗೆ ಶುಭ ಕುಂಡಲಗಳನ್ನು ಕೊಡಲು ಬಯಸುವೆಯಾದರೆ ನೀನು ಅವನಿಂದ ವಿಜಯವನ್ನು ಕೇಳಿಕೋ.
03286011a ನಿಯಮೇನ ಪ್ರದದ್ಯಾಸ್ತ್ವಂ ಕುಂಡಲೇ ವೈ ಶತಕ್ರತೋಃ|
03286011c ಅವಧ್ಯೋ ಹ್ಯಸಿ ಭೂತಾನಾಂ ಕುಂಡಲಾಭ್ಯಾಂ ಸಮನ್ವಿತಃ||
ಆ ಕುಂಡಲಗಳನ್ನು ನೀನು ಶತಕ್ರತುವಿಗೆ ವ್ರತದ ಕಾರಣದಿಂದ ನೀಡುತ್ತೀಯೆ. ಆದರೆ ಈ ಕುಂಡಲಗಳಿಂದ ಕೂಡಿದ್ದ ನೀನು ಭೂತಗಳಿಂದ ಅವಧ್ಯನಾಗಿದ್ದೀಯೆ.
03286012a ಅರ್ಜುನೇನ ವಿನಾಶಂ ಹಿ ತವ ದಾನವಸೂದನಃ|
03286012c ಪ್ರಾರ್ಥಯಾನೋ ರಣೇ ವತ್ಸ ಕುಂಡಲೇ ತೇ ಜಿಹೀರ್ಷತಿ||
ವತ್ಸ! ಯುದ್ಧದಲ್ಲಿ ಅರ್ಜುನನಿಂದ ನಿನ್ನ ವಿನಾಶವನ್ನು ಬಯಸಿಯೇ ದಾನವಸೂದನನು ನಿನ್ನ ಕುಂಡಲಗಳನ್ನು ಅಪಹರಿಸಲು ಬಯಸುತ್ತಿದ್ದಾನೆ.
03286013a ಸ ತ್ವಮಪ್ಯೇನಮಾರಾಧ್ಯ ಸೂನೃತಾಭಿಃ ಪುನಃ ಪುನಃ|
03286013c ಅಭ್ಯರ್ಥಯೇಥಾ ದೇವೇಶಮಮೋಘಾರ್ಥಂ ಪುರಂದರಂ||
ನೀನು ಆ ಪುರಂದರನನ್ನು ಪ್ರೀತಿಯ ಮಾತುಗಳಿಂದ ಆರಾಧಿಸಿ ಪುನಃ ಪುನಃ ಆ ಪುರಂದರ ದೇವೇಶ ಅಮೋಘಾರ್ತನಲ್ಲಿ ಕೇಳಿಕೊಳ್ಳಬೇಕು:
03286014a ಅಮೋಘಾಂ ದೇಹಿ ಮೇ ಶಕ್ತಿಮಮಿತ್ರವಿನಿಬರ್ಹಿಣೀಂ|
03286014c ದಾಸ್ಯಾಮಿ ತೇ ಸಹಸ್ರಾಕ್ಷ ಕುಂಡಲೇ ವರ್ಮ ಚೋತ್ತಮಂ||
“ನನಗೆ ಅಮಿತ್ರರನ್ನು ನಾಶಪಡಿಸುವ ಅಮೋಘ ಶಕ್ತಿಯನ್ನು ಕೊಡು! ಆಗ ಸಹಸ್ರಾಕ್ಷ! ನಿನಗೆ ನನ್ನ ಉತ್ತಮ ಕುಂಡಲಗಳನ್ನೂ ಕವಚವನ್ನೂ ಕೊಡುತ್ತೇನೆ.”
03286015a ಇತ್ಯೇವಂ ನಿಯಮೇನ ತ್ವಂ ದದ್ಯಾಃ ಶಕ್ರಾಯ ಕುಂಡಲೇ|
03286015c ತಯಾ ತ್ವಂ ಕರ್ಣ ಸಂಗ್ರಾಮೇ ಹನಿಷ್ಯಸಿ ರಣೇ ರಿಪೂನ್||
ಇದೇ ನಿಯಮದಂತೆ ನೀನು ಶಕ್ರನಿಗೆ ಕುಂಡಲಗಳನ್ನು ಕೊಡು. ಇದರಿಂದ ಕರ್ಣ! ನೀನು ರಣ ಸಂಗ್ರಾಮದಲ್ಲಿ ರಿಪುಗಳನ್ನು ಸಂಹರಿಸಬಲ್ಲೆ.
03286016a ನಾಹತ್ವಾ ಹಿ ಮಹಾಬಾಹೋ ಶತ್ರೂನೇತಿ ಕರಂ ಪುನಃ|
03286016c ಸಾ ಶಕ್ತಿರ್ದೇವರಾಜಸ್ಯ ಶತಶೋಽಥ ಸಹಸ್ರಶಃ||
ಮಹಾಬಾಹೋ! ದೇವರಾಜನ ಶಕ್ತಿಯು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಶತ್ರುಗಳನ್ನು ಕೊಂದೇ ನಿನ್ನ ಕೈಸೇರುವುದು.””
03286017 ವೈಶಂಪಾಯನ ಉವಾಚ|
03286017a ಏವಮುಕ್ತ್ವಾ ಸಹಸ್ರಾಂಶುಃ ಸಹಸಾಂತರಧೀಯತ|
03286017c ತತಃ ಸೂರ್ಯಾಯ ಜಪ್ಯಾಂತೇ ಕರ್ಣಃ ಸ್ವಪ್ನಂ ನ್ಯವೇದಯತ್||
ವೈಶಂಪಾಯನನು ಹೇಳಿದನು: “ಈ ರೀತಿ ಹೇಳಿದ ಸಹಸ್ರಾಂಶವು ತಕ್ಷಣವೇ ಅಂತರ್ಧಾನನಾದನು. ಅನಂತರ ಜಪದ ಅಂತ್ಯದಲ್ಲಿ ಕರ್ಣನು ಸೂರ್ಯನಿಗೆ ಸ್ವಪ್ನವನ್ನು ನಿವೇದಿಸಿದನು.
03286018a ಯಥಾದೃಷ್ಟಂ ಯಥಾತತ್ತ್ವಂ ಯಥೋಕ್ತಮುಭಯೋರ್ನಿಶಿ|
03286018c ತತ್ಸರ್ವಮಾನುಪೂರ್ವ್ಯೇಣ ಶಶಂಸಾಸ್ಮೈ ವೃಷಸ್ತದಾ||
ರಾತ್ರಿಯಲ್ಲಿ ಕಂಡಂತೆ, ತಿಳಿದಂತೆ ಮತ್ತು ಹೇಳಿದಂತೆ ಎಲ್ಲವನ್ನೂ ಸಂಪೂರ್ಣವಾಗಿ ಅವನಿಗೆ ವೃಷಸೇನನು ಹೇಳಿದನು.
03286019a ತಚ್ಚ್ರುತ್ವಾ ಭಗವಾನ್ದೇವೋ ಭಾನುಃ ಸ್ವರ್ಭಾನುಸೂದನಃ|
03286019c ಉವಾಚ ತಂ ತಥೇತ್ಯೇವ ಕರ್ಣಂ ಸೂರ್ಯಃ ಸ್ಮಯನ್ನಿವ||
ಅದನ್ನು ಕೇಳಿದ ಭಗವಾನ್ ದೇವ ಭಾನು ಸ್ವರ್ಭಾನುಸೂದನ ಸೂರ್ಯನು ನಗುತ್ತಾ “ಹಾಗೆಯೇ ಆಗಲಿ!” ಎಂದು ಕರ್ಣನಿಗೆ ಹೇಳಿದನು.
03286020a ತತಸ್ತತ್ತ್ವಮಿತಿ ಜ್ಞಾತ್ವಾ ರಾಧೇಯಃ ಪರವೀರಹಾ|
03286020c ಶಕ್ತಿಮೇವಾಭಿಕಾಂಕ್ಷನ್ವೈ ವಾಸವಂ ಪ್ರತ್ಯಪಾಲಯತ್||
ಆಗ ಅದು ಹಾಗೆಯೇ ಆಗುತ್ತದೆಯೆಂದು ತಿಳಿದ ರಾಧೇಯ ಪರವೀರಹನು ಶಕ್ತಿಯನ್ನೇ ಬಯಸಿ ವಾಸವನ ಬರವನ್ನು ಕಾಯುತ್ತಿದ್ದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಸೂರ್ಯಕರ್ಣಸಂವಾದೇ ಷಡಶೀತ್ಯಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಸೂರ್ಯಕರ್ಣಸಂವಾದದಲ್ಲಿ ಇನ್ನೂರಾಎಂಭತ್ತಾರನೆಯ ಅಧ್ಯಾಯವು.