Aranyaka Parva: Chapter 27

ಆರಣ್ಯಕ ಪರ್ವ: ಕೈರಾತ ಪರ್ವ

೨೭

ದಾಲ್ಭ್ಯನ ಉಪದೇಶ

ಬಕ ದಾಲ್ಭ್ಯನು ಯುಧಿಷ್ಠಿರನಿಗೆ ಬ್ರಾಹ್ಮಣತ್ವ ಮತ್ತು ಕ್ಷತ್ರಿಯತ್ವಗಳ ಮಿಲನದ ಕುರಿತು ಉಪದೇಶಿಸುವುದು (೧-೨೫).

03027001 ವೈಶಂಪಾಯನ ಉವಾಚ|

03027001a ವಸತ್ಸ್ವಥ ದ್ವೈತವನೇ ಪಾಂಡವೇಷು ಮಹಾತ್ಮಸು|

03027001c ಅನುಕೀರ್ಣಂ ಮಹಾರಣ್ಯಂ ಬ್ರಾಹ್ಮಣೈಃ ಸಮಪದ್ಯತ||

ವೈಶಂಪಾಯನನು ಹೇಳಿದನು: “ಮಹಾತ್ಮ ಪಾಂಡವರು ದ್ವೈತವನದಲ್ಲಿ ವಾಸಿಸುತ್ತಿರಲು ಆ ಮಹಾರಣ್ಯವು ಬ್ರಾಹ್ಮಣರ ಗುಂಪಿನಿಂದ ತುಂಬಿಕೊಂಡಿತು.

03027002a ಈರ್ಯಮಾಣೇನ ಸತತಂ ಬ್ರಹ್ಮಘೋಷೇಣ ಸರ್ವತಃ|

03027002c ಬ್ರಹ್ಮಲೋಕಸಮಂ ಪುಣ್ಯಮಾಸೀದ್ದ್ವೈತವನಂ ಸರಃ||

ಬ್ರಹ್ಮಲೋಕದ ಸಮನಾಗಿದ್ದ ಆ ದ್ವೈತವನ ಸರೋವರವು ಸತತವೂ ಎಲ್ಲಕಡೆಯಿಂದಲೂ ಪುಣ್ಯ ಬ್ರಹ್ಮಘೋಷದ ಶಬ್ಧದ ಗುಂಗಿನಿಂದ ತುಂಬಿಕೊಂಡಿತ್ತು.

03027003a ಯಜುಷಾಮೃಚಾಂ ಚ ಸಾಮ್ನಾಂ ಚ ಗದ್ಯಾನಾಂ ಚೈವ ಸರ್ವಶಃ|

03027003c ಆಸೀದುಚ್ಚಾರ್ಯಮಾಣಾನಾಂ ನಿಸ್ವನೋ ಹೃದಯಂಗಮಃ||

ಎಲ್ಲೆಡೆಯೂ ಯಜುಷ, ಸುಂದರ ಸಾಮ ಮತ್ತು ಗದ್ಯಗಳ ಉಚ್ಛಾರಣ ಗಾಯನಗಳ ಹೃದಯಂಗಮ ನಿಸ್ವನವು ಕೇಳಿಬರುತ್ತಿತ್ತು.

03027004a ಜ್ಯಾಘೋಷಃ ಪಾಂಡವೇಯಾನಾಂ ಬ್ರಹ್ಮಘೋಷಶ್ಚ ಧೀಮತಾಂ|

03027004c ಸಂಸೃಷ್ಟಂ ಬ್ರಹ್ಮಣಾ ಕ್ಷತ್ರಂ ಭೂಯ ಏವ ವ್ಯರೋಚತ||

ಪಾಂಡವರ ಧನುಸ್ಸಿನ ಘೋಷ ಮತ್ತು ಧೀಮಂತ ಬ್ರಾಹ್ಮಣರ ಬ್ರಹ್ಮಘೋಷ ಇವೆರಡೂ ಬ್ರಾಹ್ಮಣ ಮತ್ತು ಕ್ಷತ್ರಿಯರ ಸಂಘಟನೆಯಂತೆ ತೋರುತ್ತಿತ್ತು.

03027005a ಅಥಾಬ್ರವೀದ್ಬಕೋ ದಾಲ್ಭ್ಯೋ ಧರ್ಮರಾಜಂ ಯುಧಿಷ್ಠಿರಂ|

03027005c ಸಂಧ್ಯಾಂ ಕೌಂತೇಯಮಾಸೀನಮೃಷಿಭಿಃ ಪರಿವಾರಿತಂ||

ಆಗ ಸಂಧ್ಯಾಸಮಯದಲ್ಲಿ ಕೌಂತೇಯರನ್ನು ಸುತ್ತುವರೆದು ಋಷಿಗಳು ಕುಳಿತುಕೊಂಡಿರಲು ಬಕ ದಾಲ್ಭ್ಯನು[1] ಧರ್ಮರಾಜ ಯುಧಿಷ್ಠಿರನನ್ನು ಉದ್ದೇಶಿಸಿ ಹೇಳಿದನು.

03027006a ಪಶ್ಯ ದ್ವೈತವನೇ ಪಾರ್ಥ ಬ್ರಾಹ್ಮಣಾನಾಂ ತಪಸ್ವಿನಾಂ|

03027006c ಹೋಮವೇಲಾಂ ಕುರುಶ್ರೇಷ್ಠ ಸಂಪ್ರಜ್ವಲಿತಪಾವಕಾಂ||

“ಪಾರ್ಥ! ಕುರುಶ್ರೇಷ್ಠ! ತಪಸ್ವಿ ಬ್ರಾಹ್ಮಣರ ಉರಿಯುತ್ತಿರುವ ಅಗ್ನಿಯಲ್ಲಿ ಹೋಮಗಳನ್ನು ಮಾಡುವ ವೇಳೆಯು ಪ್ರಾಪ್ತಿಯಾಯಿತು ನೋಡು!

03027007a ಚರಂತಿ ಧರ್ಮಂ ಪುಣ್ಯೇಽಸ್ಮಿಂಸ್ತ್ವಯಾ ಗುಪ್ತಾ ಧೃತವ್ರತಾಃ|

03027007c ಭೃಗವೋಽಂಗಿರಸಶ್ಚೈವ ವಾಸಿಷ್ಠಾಃ ಕಾಶ್ಯಪೈಃ ಸಹ||

03027008a ಆಗಸ್ತ್ಯಾಶ್ಚ ಮಹಾಭಾಗಾ ಆತ್ರೇಯಾಶ್ಚೋತ್ತಮವ್ರತಾಃ|

03027008c ಸರ್ವಸ್ಯ ಜಗತಃ ಶ್ರೇಷ್ಠಾ ಬ್ರಾಹ್ಮಣಾಃ ಸಂಗತಾಸ್ತ್ವಯಾ||

ನಿನ್ನ ರಕ್ಷಣೆಗೆಂದು ಧೃತವ್ರತರಾಗಿರುವ ಈ ಭೃಗುಗಳು, ಅಂಗಿರಸರು, ವಾಸಿಷ್ಠರು, ಕಾಶ್ಯಪರು, ಆಗಸ್ತ್ಯರು, ಮಹಾಭಾಗ ಆತ್ರೇಯರು ಇವರೆಲ್ಲ ಉತ್ತಮವ್ರತರು ಜಗತ್ತಿನ ಶ್ರೇಷ್ಠ ಬ್ರಾಹ್ಮಣರು ನಿನ್ನೊಡನೆ ಸೇರಿ ಪುಣ್ಯ ಧರ್ಮಗಳಲ್ಲಿ ನಡೆಯುತ್ತಿದ್ದಾರೆ. 

03027009a ಇದಂ ತು ವಚನಂ ಪಾರ್ಥ ಶೃಣ್ವೇಕಾಗ್ರಮನಾ ಮಮ|

03027009c ಭ್ರಾತೃಭಿಃ ಸಹ ಕೌಂತೇಯ ಯತ್ತ್ವಾಂ ವಕ್ಷ್ಯಾಮಿ ಕೌರವ||

ಪಾರ್ಥ! ಕೌಂತೇಯ! ಕೌರವ! ಈಗ ನಾನು ನಿನಗೆ ಹೇಳುವ ಮಾತುಗಳನ್ನು ಏಕಾಗ್ರಚಿತ್ತನಾಗಿ ನಿನ್ನ ಸಹೋದರರೊಂದಿಗೆ ಕೇಳು.

03027010a ಬ್ರಹ್ಮ ಕ್ಷತ್ರೇಣ ಸಂಸೃಷ್ಟಂ ಕ್ಷತ್ರಂ ಚ ಬ್ರಹ್ಮಣಾ ಸಹ|

03027010c ಉದೀರ್ಣೌ ದಹತಃ ಶತ್ರೂನ್ವನಾನೀವಾಗ್ನಿಮಾರುತೌ||

ಬ್ರಹ್ಮವು ಕ್ಷಾತ್ರತ್ವವನ್ನು ಸೇರಿ ಕ್ಷಾತ್ರತ್ವ ಮತ್ತು ಬ್ರಾಹ್ಮಣತ್ವ ಎರಡೂ ಒಟ್ಟಿಗೇ ಬೆಂಕಿ ಮತ್ತು ಗಾಳಿ ವನವನ್ನು ಹೇಗೆ ಸುಡುತ್ತವೆಯೋ ಹಾಗೆ ಶತ್ರುಗಳನ್ನು ಸುಟ್ಟುಹಾಕುತ್ತವೆ.

03027011a ನಾಬ್ರಾಹ್ಮಣಸ್ತಾತ ಚಿರಂ ಬುಭೂಷೇದ್ |

         ಇಚ್ಚನ್ನಿಮಂ ಲೋಕಮಮುಂ ಚ ಜೇತುಂ||

03027011c ವಿನೀತಧರ್ಮಾರ್ಥಮಪೇತಮೋಹಂ |

         ಲಬ್ಧ್ವಾ ದ್ವಿಜಂ ನುದತಿ ನೃಪಃ ಸಪತ್ನಾನ್||

ಮಗೂ! ಈಗಿನ ಮತ್ತು ಮುಂದಿನ ಲೋಕಗಳನ್ನು ಗೆಲ್ಲಲು ಬಯಸುವೆಯಾದರೆ, ಬ್ರಾಹ್ಮಣರನ್ನು ಬಿಟ್ಟು ಇರಲು ಇಚ್ಛಿಸಬೇಡ. ಧರ್ಮಾರ್ಥಗಳನ್ನು ತಿಳಿದು ತನ್ನ ಗೊಂದಲವನ್ನು ತೊಡೆದುಹಾಕಿದ, ವಿನೀತ ದ್ವಿಜರನ್ನು ಪಡೆದು ನೃಪನು ತನ್ನ ಸ್ಪರ್ಧಿಗಳನ್ನು (ಎದುರಾಳಿಗಳನ್ನು) ತೆಗೆದುಹಾಕುತ್ತಾನೆ.

03027012a ಚರನ್ನೈಃಶ್ರೇಯಸಂ ಧರ್ಮಂ ಪ್ರಜಾಪಾಲನಕಾರಿತಂ|

03027012c ನಾಧ್ಯಗಚ್ಚದ್ಬಲಿರ್ಲೋಕೇ ತೀರ್ಥಮನ್ಯತ್ರ ವೈ ದ್ವಿಜಾತ್||

ಪ್ರಜಾಪಾಲನೆಯಿಂದ ಸಂಪಾದಿಸಿದ ಅತಿ ಶ್ರೀಮಂತ ಮತ್ತು ಧಾರ್ಮಿಕ ಬಲಿಯು ಲೋಕದಲ್ಲಿ ದ್ವಿಜರಲ್ಲದೇ ಬೇರೆ ಯಾರದ್ದೂ ಮೊರೆ ಹೋಗಲಿಲ್ಲ.

03027013a ಅನೂನಮಾಸೀದಸುರಸ್ಯ ಕಾಮೈರ್ |

         ವೈರೋಚನೇಃ ಶ್ರೀರಪಿ ಚಾಕ್ಷಯಾಸೀತ್||

03027013c ಲಬ್ಧ್ವಾ ಮಹೀಂ ಬ್ರಾಹ್ಮಣಸಂಪ್ರಯೋಗಾತ್ |

         ತೇಷ್ವಾಚರನ್ದುಷ್ಟಮತೋ ವ್ಯನಶ್ಯತ್||

ವಿರೋಚನನ ಅಸುರ ಮಗನಿಗೆ ಕಾಮ ಸುಖದ ಕೊರತೆಯಿರಲಿಲ್ಲ ಮತ್ತು ಸಂಪತ್ತು ಕಡಿಮೆಯಾಯಿತೆಂದಿರಲಿಲ್ಲ. ಬ್ರಾಹ್ಮಣರನ್ನು ಕೂಡಿಕೊಂಡು ಭೂಮಿಯನ್ನು ಪಡೆದುಕೊಂಡನು ಮತ್ತು ಅವರಿಗೆ ಕೆಟ್ಟದನ್ನು ಮಾಡಿದಾಗಲೆಲ್ಲಾ ದುಃಖಕ್ಕೊಳಗಾದನು.

03027014a ನಾಬ್ರಾಹ್ಮಣಂ ಭೂಮಿರಿಯಂ ಸಭೂತಿರ್ |

         ವರ್ಣಂ ದ್ವಿತೀಯಂ ಭಜತೇ ಚಿರಾಯ||

03027014c ಸಮುದ್ರನೇಮಿರ್ನಮತೇ ತು ತಸ್ಮೈ |

         ಯಂ ಬ್ರಾಹ್ಮಣಃ ಶಾಸ್ತಿ ನಯೈರ್ವಿನೀತಃ||

ಬ್ರಾಹ್ಮಣರನ್ನು ಸತ್ಕರಿಸದೇ ಇದ್ದರೆ ಈ ಭೂಮಿಯು ದ್ವಿತೀಯವರ್ಣದವರನ್ನು (ಕ್ಷತ್ರಿಯರನ್ನು) ಬಹಳ ಸಮಯದವರೆಗೆ ಪ್ರೀತಿಸುವುದಿಲ್ಲ. ಆದರೆ ನಯ-ವಿನೀತಿಯಿಂದ ಕೂಡಿದ ಬ್ರಾಹ್ಮಣನು ಯಾರಿಗೆ ಕಲಿಸುತ್ತಾನೋ ಅವನಿಗೆ ಸಮುದ್ರದಿಂದ ಸುತ್ತುವರೆದ ಈ ಭೂಮಿಯು ತಲೆಬಾಗುತ್ತದೆ.

03027015a ಕುಂಜರಸ್ಯೇವ ಸಂಗ್ರಾಮೇಽಪರಿಗೃಹ್ಯಾಂಕುಶಗ್ರಹಂ|

03027015c ಬ್ರಾಹ್ಮಣೈರ್ವಿಪ್ರಹೀಣಸ್ಯ ಕ್ಷತ್ರಸ್ಯ ಕ್ಷೀಯತೇ ಬಲಂ||

ಸಂಗ್ರಾಮದಲ್ಲಿ ಮಾವುತನ ನಿಯಂತ್ರಣವನ್ನು ಕಳೆದುಕೊಂಡ ಆನೆಯ ಸಾಮರ್ಥ್ಯವು ಹೇಗೋ ಹಾಗೆ ಬ್ರಾಹ್ಮಣರನ್ನು ಕಳೆದುಕೊಂಡ ಕ್ಷತ್ರಿಯನ ಬಲವು ಕ್ಷೀಣಿಸುತ್ತದೆ.

03027016a ಬ್ರಹ್ಮಣ್ಯನುಪಮಾ ದೃಷ್ಟಿಃ ಕ್ಷಾತ್ರಮಪ್ರತಿಮಂ ಬಲಂ|

03027016c ತೌ ಯದಾ ಚರತಃ ಸಾರ್ಧಮಥಜ್ ಲೋಕಃ ಪ್ರಸೀದತಿ||

ಬ್ರಾಹ್ಮಣರಲ್ಲಿ ಅನುಪಮ ದೃಷ್ಟಿಯಿದೆ ಮತ್ತು ಕ್ಷತ್ರಿಯರಲ್ಲಿ ಅಪ್ರತಿಮ ಬಲವಿದೆ. ಇವರಿಬ್ಬರೂ ಒಟ್ಟಿಗೇ ನಡೆದಾಗ ಲೋಕವು ಸಂತೋಷಗೊಳ್ಳುತ್ತದೆ.

03027017a ಯಥಾ ಹಿ ಸುಮಹಾನಗ್ನಿಃ ಕಕ್ಷಂ ದಹತಿ ಸಾನಿಲಃ|

03027017c ತಥಾ ದಹತಿ ರಾಜನ್ಯೋ ಬ್ರಾಹ್ಮಣೇನ ಸಮಂ ರಿಪೂನ್||

ಮಹಾ ಅಗ್ನಿಯು ಗಾಳಿಯು ಬೀಸುವುದರಿಂದ ಹೇಗೆ ವನವನ್ನು ಸುಟ್ಟುಹಾಕುತ್ತದೆಯೋ ಹಾಗೆ ಬ್ರಾಹ್ಮಣರು ಜೊತೆಗಿರುವ ರಾಜನು ರಿಪುಗಳನ್ನು ಸುಟ್ಟುಹಾಕುತ್ತಾನೆ.

03027018a ಬ್ರಾಹ್ಮಣೇಭ್ಯೋಽಥ ಮೇಧಾವೀ ಬುದ್ಧಿಪರ್ಯೇಷಣಂ ಚರೇತ್|

03027018c ಅಲಬ್ಧಸ್ಯ ಚ ಲಾಭಾಯ ಲಬ್ಧಸ್ಯ ಚ ವಿವೃದ್ಧಯೇ||

ಇಲ್ಲದಿರುವುದನ್ನು ಪಡೆಯಲು ಮತ್ತು ಇದ್ದುದನ್ನು ಹೆಚ್ಚಿಸಿಕೊಳ್ಳಲು ಬುದ್ಧಿವಂತನು ಬ್ರಾಹ್ಮಣರ ಸಲಹೆಯನ್ನು ಪಡೆದು ಅದರಂತೆ ನಡೆಯಬೇಕು.

03027019a ಅಲಬ್ಧಲಾಭಾಯ ಚ ಲಬ್ಧವೃದ್ಧಯೇ |

         ಯಥಾರ್ಹತೀರ್ಥಪ್ರತಿಪಾದನಾಯ||

03027019c ಯಶಸ್ವಿನಂ ವೇದವಿದಂ ವಿಪಶ್ಚಿತಂ |

         ಬಹುಶ್ರುತಂ ಬ್ರಾಹ್ಮಣಮೇವ ವಾಸಯ||

ದೊರೆಯದಿರುವುದನ್ನು ಪಡೆಯಲು, ಪಡೆದುದನ್ನು ವೃದ್ಧಿಗೊಳಿಸಲು, ಮತ್ತು ಸರಿಯಾದ ದಾರಿಯನ್ನು ಹಿಡಿಯಲು ಯಶಸ್ವಿನಿಯೂ, ವೇದವಿದನೂ, ಬಹುಶ್ರುತನೂ, ವಿಪಶ್ಚಿತನೂ ಆದ ಬ್ರಾಹ್ಮಣನೊಂದಿಗೆ ಜೀವಿಸಿಬೇಕು.

03027020a ಬ್ರಾಹ್ಮಣೇಷೂತ್ತಮಾ ವೃತ್ತಿಸ್ತವ ನಿತ್ಯಂ ಯುಧಿಷ್ಠಿರ|

03027020c ತೇನ ತೇ ಸರ್ವಲೋಕೇಷು ದೀಪ್ಯತೇ ಪ್ರಥಿತಂ ಯಶಃ||

ಯುಧಿಷ್ಠಿರ! ಬ್ರಾಹ್ಮಣರೊಂದಿಗೆ ನಿನ್ನ ನಡತೆಯು ಯಾವಾಗಲೂ ಉತ್ತಮವಾಗಿಯೇ ಇದೆ. ಆದುದರಿಂದ ನಿನ್ನ ಯಶಸ್ಸು ಸರ್ವಲೋಕಗಳಲ್ಲಿಯೂ ಬೆಳಗುತ್ತದೆ.”

03027021a ತತಸ್ತೇ ಬ್ರಾಹ್ಮಣಾಃ ಸರ್ವೇ ಬಕಂ ದಾಲ್ಭ್ಯಮಪೂಜಯನ್|

03027021c ಯುಧಿಷ್ಠಿರೇ ಸ್ತೂಯಮಾನೇ ಭೂಯಃ ಸುಮನಸೋಽಭವನ್||

ಅವನು ಈ ರೀತಿ ಯುಧಿಷ್ಠಿರನನ್ನು ಹೊಗಳಲು ಸಂತೋಷಗೊಂಡ ಬ್ರಾಹ್ಮಣರೆಲ್ಲರೂ ಬಕ ದಾಲ್ಭ್ಯನನ್ನು ಹೊಗಳಿದರು.

03027022a ದ್ವೈಪಾಯನೋ ನಾರದಶ್ಚ ಜಾಮದಗ್ನ್ಯಃ ಪೃಥುಶ್ರವಾಃ|

03027022c ಇಂದ್ರದ್ಯುಮ್ನೋ ಭಾಲುಕಿಶ್ಚ ಕೃತಚೇತಾಃ ಸಹಸ್ರಪಾತ್||

03027023a ಕರ್ಣಶ್ರವಾಶ್ಚ ಮುಂಜಶ್ಚ ಲವಣಾಶ್ವಶ್ಚ ಕಾಶ್ಯಪಃ|

03027023c ಹಾರೀತಃ ಸ್ಥೂಣಕರ್ಣಶ್ಚ ಅಗ್ನಿವೇಶ್ಯೋಽಥ ಶೌನಕ||

03027024a ಋತವಾಕ್ ಚ ಸುವಾಕ್ ಚೈವ ಬೃಹದಶ್ವ ಋತಾವಸುಃ|

03027024c ಊರ್ಧ್ವರೇತಾ ವೃಷಾಮಿತ್ರಃ ಸುಹೋತ್ರೋ ಹೋತ್ರವಾಹನಃ||

03027025a ಏತೇ ಚಾನ್ಯೇ ಚ ಬಹವೋ ಬ್ರಾಹ್ಮಣಾಃ ಸಂಶಿತವ್ರತಾಃ|

03027025c ಅಜಾತಶತ್ರುಮಾನರ್ಚುಃ ಪುರಂದರಮಿವರ್ಷಯಃ||

ದ್ವೈಪಾಯನ, ನಾರದ, ಜಾಮದಗ್ನ್ಯ, ಪೃಥುಶ್ರವ, ಇಂದ್ರದ್ಯುಮ್ನ, ಭಾಲುಕಿ, ಕೃತಚೇತ, ಸಹಸ್ರಪಾದ, ಕರ್ಣಶ್ರವ, ಮುಂಜ, ಅಗ್ನಿವೇಶ, ಶೌನಕ, ಋತ್ವಿಕ, ಸುವಾಕ್, ಬೃಹದಶ್ವ, ಋತಾವಸು, ಊರ್ಧ್ವರೇತ, ವೃಷಾಮಿತ್ರ, ಸುಹೋತ್ರ, ಹೋತ್ರವಾಹನ, ಇವರು ಮತ್ತು ಇತರ ಬಹಳಷ್ಟು ಸಂಶಿತವ್ರತ ಬ್ರಾಹ್ಮಣ ಋಷಿಗಳು ಪುರಂದರನನ್ನು ಹೇಗೋ ಹಾಗೆ ಆಜಾತಶತ್ರುವನ್ನು ಸತ್ಕರಿಸಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದ್ವೈತವನಪ್ರವೇಶೇ ಸಪ್ತವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದ್ವೈತವನಪ್ರವೇಶದಲ್ಲಿ ಇಪ್ಪತ್ತೇಳನೆಯ ಅಧ್ಯಾಯವು.

Related image

[1] ಬಕ ದಾಲ್ಭ್ಯನ ಚರಿತ್ರೆಯು ಮುಂದೆ ಶಲ್ಯಪರ್ವದ ಅಧ್ಯಾಯ ೪೦ ರಲ್ಲಿ ಬರುತ್ತದೆ.

Comments are closed.