Aranyaka Parva: Chapter 24

ಆರಣ್ಯಕ ಪರ್ವ: ಕೈರಾತ ಪರ್ವ

೨೪

ಪಾಂಡವರ ದ್ವೈತವನ ಪ್ರವೇಶ

ಹಿಂಬಾಲಿಸಿ ಬಂದಿದ್ದ ಪುರಜನರು ದುಃಖದಿಂದ ಪಾಂಡವರನ್ನು ಬೀಳ್ಕೊಟ್ಟು ಹಿಂದಿರುಗಿದುದು (೧-೧೬).

03024001 ಶಂಪಾಯನ ಉವಾಚ|

03024001a ತಸ್ಮಿನ್ದಶಾರ್ಹಾಧಿಪತೌ ಪ್ರಯಾತೇ |

         ಯುಧಿಷ್ಠಿರೋ ಭೀಮಸೇನಾರ್ಜುನೌ ಚ||

03024001c ಯಮೌ ಚ ಕೃಷ್ಣಾ ಚ ಪುರೋಹಿತಶ್ಚ |

         ರಥಾನ್ಮಹಾರ್ಹಾನ್ಪರಮಾಶ್ವಯುಕ್ತಾನ್||

03024002a ಆಸ್ಥಾಯ ವೀರಾಃ ಸಹಿತಾ ವನಾಯ |

         ಪ್ರತಸ್ಥಿರೇ ಭೂತಪತಿಪ್ರಕಾಶಾಃ||

03024002c ಹಿರಣ್ಯನಿಷ್ಕಾನ್ವಸನಾನಿ ಗಾಶ್ಚ |

         ಪ್ರದಾಯ ಶಿಕ್ಷಾಕ್ಷರಮಂತ್ರವಿದ್ಭ್ಯಃ||

ವೈಶಂಪಾಯನನು ಹೇಳಿದನು: “ದಶಾರ್ಹಾಧಿಪತಿಯು ಹೊರಟುಹೋದ ನಂತರ ಭೂತಪತಿ ಪ್ರಕಾಶ, ವೀರ ಯುಧಿಷ್ಠಿರ, ಭೀಮಸೇನಾರ್ಜುನರು ಮತ್ತು ಯಮಳರು ಕೃಷ್ಣೆ ಮತ್ತು ಪುರೋಹಿತನೊಡನೆ ಪರಮ ಅಶ್ವಗಳಿಂದೊಡಗೂಡಿದ, ಬೆಲೆಬಾಳುವ ರಥವನ್ನೇರಿ, ವನಕ್ಕೆ ಹೊರಟರು. ಹೊರಡುವಾಗ ಶಿಕ್ಷಾಕ್ಷರಮಂತ್ರವಿದ್ಯೆಗಳ ಬ್ರಾಹ್ಮಣರಿಗೆ ಚಿನ್ನದ ನಾಣ್ಯಗಳನ್ನೂ ವಸ್ತ್ರ- ಗೋವುಗಳನ್ನೂ ದಾನವನ್ನಾಗಿ ನೀಡಿದರು.

03024003a ಪ್ರೇಷ್ಯಾಃ ಪುರೋ ವಿಂಶತಿರಾತ್ತಶಸ್ತ್ರಾ |

         ಧನೂಂಷಿ ವರ್ಮಾಣಿ ಶರಾಂಶ್ಚ ಪೀತಾನ್||

03024003c ಮೌರ್ವೀಶ್ಚ ಯಂತ್ರಾಣಿ ಚ ಸಾಯಕಾಂಶ್ಚ |

         ಸರ್ವೇ ಸಮಾದಾಯ ಜಘನ್ಯಮೀಯುಃ||

ಇಪ್ಪತ್ತು ಶಸ್ತ್ರಧಾರಿಗಳು ಮುಂದೆ ನಡೆದರು ಮತ್ತು ಧನಸ್ಸು, ಕವಚಗಳು, ಲೋಹದ ಬಾಣಗಳು, ಉಪಕರಣಗಳು ಎಲ್ಲವನ್ನೂ ಎತ್ತಿಕೊಂಡು ಹಿಂದೆ ನಡೆದರು.

03024004a ತತಸ್ತು ವಾಸಾಂಸಿ ಚ ರಾಜಪುತ್ರ್ಯಾ |

         ಧಾತ್ರ್ಯಶ್ಚ ದಾಸ್ಯಶ್ಚ ವಿಭೂಷಣಂ ಚ||

03024004c ತದಿಂದ್ರಸೇನಸ್ತ್ವರಿತಂ ಪ್ರಗೃಹ್ಯ|

         ಜಘನ್ಯಮೇವೋಪಯಯೌ ರಥೇನ||

ಅನಂತರ ಸಾರಥಿ ಇಂದ್ರಸೇನನು ಬೇಗನೇ ರಾಜಪುತ್ರಿಯ ವಸ್ತ್ರಗಳನ್ನು, ದಾಸಿಗಳನ್ನು, ವಿಭೂಷಣಗಳನ್ನು ಒಟ್ಟುಮಾಡಿ ರಥದ ಹಿಂದೆ ತೆಗೆದುಕೊಂಡು ಬಂದನು.

03024005a ತತಃ ಕುರುಶ್ರೇಷ್ಠಮುಪೇತ್ಯ ಪೌರಾಃ|

         ಪ್ರದಕ್ಷಿಣಂ ಚಕ್ರುರದೀನಸತ್ತ್ವಾಃ||

03024005c ತಂ ಬ್ರಾಹ್ಮಣಾಶ್ಚಾಭ್ಯವದನ್ಪ್ರಸನ್ನಾ |

         ಮುಖ್ಯಾಶ್ಚ ಸರ್ವೇ ಕುರುಜಾಂಗಲಾನಾಂ||

ಪೌರರು ಕುರುಶ್ರೇಷ್ಠನ ಬಳಿ ಹೋದರು ಮತ್ತು ದೀನಸತ್ವರಾಗಿ ಅವನನ್ನು ಪ್ರದಕ್ಷಿಣೆಮಾಡಿದರು. ಬ್ರಾಹ್ಮಣರು ಪ್ರಸನ್ನರಾಗಿ ಅವನನ್ನು ಮತ್ತು ಕುರುಜಂಗಲದ ಮುಖ್ಯರೆಲ್ಲರನ್ನೂ ಅಭಿವಂದಿಸಿದರು.

03024006a ಸ ಚಾಪಿ ತಾನಭ್ಯವದತ್ಪ್ರಸನ್ನಃ|

         ಸಹೈವ ತೈರ್ಭ್ರಾತೃಭಿರ್ಧರ್ಮರಾಜಃ||

03024006c ತಸ್ಥೌ ಚ ತತ್ರಾಧಿಪತಿರ್ಮಹಾತ್ಮಾ |

         ದೃಷ್ಟ್ವಾ ಜನೌಘಂ ಕುರುಜಾಂಗಲಾನಾಂ||

ಧರ್ಮರಾಜನೂ ಕೂಡ ಪ್ರಸನ್ನನಾಗಿ ತನ್ನ ಭ್ರಾತೃಗಳೊಂದಿಗೆ ಅವರಿಗೆ ಅಭಿವಂದಿಸಿದನು. ಅಲ್ಲಿಯೇ ನಿಂತು ಅಧಿಪತಿ ಮಹಾತ್ಮನು ಕುರುಜಂಗಲದ ಜನರಾಶಿಯನ್ನು ನೋಡಿದನು.

03024007a ಪಿತೇವ ಪುತ್ರೇಷು ಸ ತೇಷು ಭಾವಂ |

         ಚಕ್ರೇ ಕುರೂಣಾಮೃಷಭೋ ಮಹಾತ್ಮಾ||

03024007c ತೇ ಚಾಪಿ ತಸ್ಮಿನ್ಭರತಪ್ರಬರ್ಹೇ |

         ತದಾ ಬಭೂವುಃ ಪಿತರೀವ ಪುತ್ರಾಃ||

ಆ ಮಹಾತ್ಮ ಕುರುವೃಷಭನು ಒಬ್ಬ ತಂದೆಯು ತನ್ನ ಮಕ್ಕಳಲ್ಲಿ ತೋರಿಸುವ ಭಾವವನ್ನು ತೋರಿಸಿದನು. ಅವರೂ ಕೂಡ ಆ ಭರತಪ್ರಮುಖನಿಗೆ ಪುತ್ರರು ತಂದೆಗೆ ಹೇಗೋ ಹಾಗೆ ಇದ್ದರು.

03024008a ತತಃ ಸಮಾಸಾದ್ಯ ಮಹಾಜನೌಘಾಃ |

         ಕುರುಪ್ರವೀರಂ ಪರಿವಾರ್ಯ ತಸ್ಥುಃ||

03024008c ಹಾ ನಾಥ ಹಾ ಧರ್ಮ ಇತಿ ಬ್ರುವಂತೋ|

         ಹ್ರಿಯಾ ಚ ಸರ್ವೇಽಶ್ರುಮುಖಾ ಬಭೂವುಃ||

ಅಲ್ಲಿ ಕುರುಪ್ರವೀರನನ್ನು ಸುತ್ತುವರೆದು “ಹಾ ನಾಥ! ಹಾ ಧರ್ಮ!” ಎಂದು ಹೇಳುತ್ತಾ ಅತಿ ದೊಡ್ಡ ಜನಸಂದಣಿಯೇ ಸೇರಿ ನಿಂತಿದ್ದವರ ಎಲ್ಲರ ಮುಖದಲ್ಲಿ ನಾಚಿಕೆ ಮತ್ತು ಕಣ್ಣೀರಿತ್ತು.

03024009a ವರಃ ಕುರೂಣಾಮಧಿಪಃ ಪ್ರಜಾನಾಂ |

         ಪಿತೇವ ಪುತ್ರಾನಪಹಾಯ ಚಾಸ್ಮಾನ್||

03024009c ಪೌರಾನಿಮಾಂಜಾನಪದಾಂಶ್ಚ ಸರ್ವಾನ್ |

         ಹಿತ್ವಾ ಪ್ರಯಾತಃ ಕ್ವ ನು ಧರ್ಮರಾಜಃ||

“ಕುರುಗಳ ಶ್ರೇಷ್ಠ ಅಧಿಪತಿ! ಪುತ್ರರನ್ನು ತೊರೆದು ಹೋಗುವ ತಂದೆಯಂತೆ ನೀನು ನಮ್ಮನ್ನು ಬಿಟ್ಟು ಹೊರಟು ಹೋಗುತ್ತಿದ್ದೀಯೆ! ನಗರ ಮತ್ತು ಗ್ರಾಮೀಣ ಪ್ರಜೆಗಳನ್ನು ಎಲ್ಲರನ್ನೂ ತೊರೆದು ಧರ್ಮರಾಜ ನೀನು ಎಲ್ಲಿಗೆ ಹೋಗುತ್ತೀಯೆ?

03024010a ಧಿಗ್ಧಾರ್ತರಾಷ್ಟ್ರಂ ಸುನೃಶಂಸಬುದ್ಧಿಂ |

         ಸಸೌಬಲಂ ಪಾಪಮತಿಂ ಚ ಕರ್ಣಂ||

03024010c ಅನರ್ಥಮಿಚ್ಚಂತಿ ನರೇಂದ್ರ ಪಾಪಾ |

         ಯೇ ಧರ್ಮನಿತ್ಯಸ್ಯ ಸತಸ್ತವೋಗ್ರಾಃ||

ಅತ್ಯಂತ ಕೆಟ್ಟ ಬುದ್ಧಿಯ ಧಾರ್ತರಾಷ್ಟ್ರ, ಜೊತೆಗೆ ಸೌಬಲ, ಮತ್ತು ಪಾಪಮತಿ ಕರ್ಣನಿಗೆ ಧಿಕ್ಕಾರ! ನರೇಂದ್ರ! ಧರ್ಮನಿತ್ಯನಾದ ನಿನಗೆ ಪಾಪವೆಸಗಿದವರು ಅನರ್ಥವನ್ನು ಬಯಸುತ್ತಿದ್ದಾರೆ.

03024011a ಸ್ವಯಂ ನಿವೇಶ್ಯಾಪ್ರತಿಮಂ ಮಹಾತ್ಮಾ |

         ಪುರಂ ಮಹದ್ದೇವಪುರಪ್ರಕಾಶಂ||

03024011c ಶತಕ್ರತುಪ್ರಸ್ಥಮಮೋಘಕರ್ಮಾ |

         ಹಿತ್ವಾ ಪ್ರಯಾತಃ ಕ್ವ ನು ಧರ್ಮರಾಜಃ||

ಮಹಾತ್ಮ! ಸ್ವಯಂ ನೀನೇ ಈ ಅಪ್ರತಿಮ ನಿವೇಶನವನ್ನು, ದೇವಪುರದಂತೆ ಪ್ರಕಾಶಿತ ಮಹಾ ಪುರವನ್ನು ನಿರ್ಮಿಸಿರುವೆ. ಅಮೋಘವಾಗಿ ನಿರ್ಮಿಸಿರುವ ಈ ಶತಕ್ರತುಪ್ರಸ್ಥವನ್ನು ಬಿಟ್ಟು ಧರ್ಮರಾಜ! ಎಲ್ಲಿಗೆ ಹೋಗುತ್ತಿರುವೆ?

03024012a ಚಕಾರ ಯಾಮಪ್ರತಿಮಾಂ ಮಹಾತ್ಮಾ |

         ಸಭಾಂ ಮಯೋ ದೇವಸಭಾಪ್ರಕಾಶಾಂ||

03024012c ತಾಂ ದೇವಗುಪ್ತಾಮಿವ ದೇವಮಾಯಾಂ |

         ಹಿತ್ವಾ ಪ್ರಯಾತಃ ಕ್ವ ನು ಧರ್ಮರಾಜಃ||

ದೇವಸಭೆಯ ಪ್ರಕಾಶವನ್ನು ಹೊಂದಿರುವ ಈ ಅಪ್ರತಿಮ ಸಭೆಯನ್ನು ಮಹಾತ್ಮ ಮಯನು ನಿರ್ಮಿಸಿದನು. ಧರ್ಮರಾಜ! ದೇವರಹಸ್ಯದಂತಿರುವ, ದೇವಮಾಯೆಯಂತಿರುವ ಇದನ್ನು ಬಿಟ್ಟು ಎಲ್ಲಿಗೆ ಹೊರಟಿರುವೆ?”

03024013a ತಾನ್ಧರ್ಮಕಾಮಾರ್ಥವಿದುತ್ತಮೌಜಾ |

         ಬೀಭತ್ಸುರುಚ್ಚೈಃ ಸಹಿತಾನುವಾಚ||

03024013c ಆದಾಸ್ಯತೇ ವಾಸಮಿಮಂ ನಿರುಷ್ಯ|

         ವನೇಷು ರಾಜಾ ದ್ವಿಷತಾಂ ಯಶಾಂಸಿ||

ಧರ್ಮ-ಕಾಮ-ಅರ್ಥಗಳನ್ನು ತಿಳಿದುಕೊಂಡಿದ್ದ, ತೇಜಸ್ವಿ ಬೀಭತ್ಸುವು ಅಲ್ಲಿ ಸೇರಿದ ಅವರಿಗೆ ಉಚ್ಛ ಸ್ವರದಲ್ಲಿ ಹೇಳಿದನು: “ವನದಲ್ಲಿ ವಾಸಮಾಡಿ ರಾಜನು ದ್ವೇಷಿಗಳ ಯಶಸ್ಸನ್ನು ಹಿಂದೆ ತೆಗೆದುಕೊಳ್ಳುತ್ತಾನೆ!

03024014a ದ್ವಿಜಾತಿಮುಖ್ಯಾಃ ಸಹಿತಾಃ ಪೃಥಕ್ಚ |

         ಭವದ್ಭಿರಾಸಾದ್ಯ ತಪಸ್ವಿನಶ್ಚ||

03024014c ಪ್ರಸಾದ್ಯ ಧರ್ಮಾರ್ಥವಿದಶ್ಚ ವಾಚ್ಯಾ |

         ಯಥಾರ್ಥಸಿದ್ಧಿಃ ಪರಮಾ ಭವೇನ್ನಃ||

ದ್ವಿಜಮುಖ್ಯರೇ! ತಪಸ್ವಿಗಳೇ! ನೀವು ಒಬ್ಬೊಬ್ಬರಾಗಿ ಅಥವಾ ಒಟ್ಟಿಗೇ ನಮ್ಮ ಜೊತೆ ಬಂದು ಧರ್ಮಾರ್ಥಗಳನ್ನು ಹೇಳುವ ಮಾತುಗಳಿಂದ ನಮ್ಮ ಪರಮ ಸಿದ್ಧಿಯು ಹೇಗೆ ಎನ್ನುವುದನ್ನು ಹೇಳಿಕೊಡಿ!”

03024015a ಇತ್ಯೇವಮುಕ್ತೇ ವಚನೇಽರ್ಜುನೇನ |

         ತೇ ಬ್ರಾಹ್ಮಣಾಃ ಸರ್ವವರ್ಣಾಶ್ಚ ರಾಜನ್||

03024015c ಮುದಾಭ್ಯನಂದನ್ಸಹಿತಾಶ್ಚ ಚಕ್ರುಃ|

         ಪ್ರದಕ್ಷಿಣಂ ಧರ್ಮಭೃತಾಂ ವರಿಷ್ಠಂ||

ರಾಜನ್! ಅರ್ಜುನನು ಈ ಮಾತುಗಳನ್ನು ಹೇಳಲು ಆ ಬ್ರಾಹ್ಮಣರು ಮತ್ತು ಸರ್ವವರ್ಣದವರು ಸಂತೋಷಗೊಂಡರು ಮತ್ತು ಒಟ್ಟಿಗೇ ಆ ಧರ್ಮಭೃತ ವರಿಷ್ಠರನ್ನು ಪ್ರದಕ್ಷಿಣೆ ಮಾಡಿದರು.

03024016a ಆಮಂತ್ರ್ಯ ಪಾರ್ಥಂ ಚ ವೃಕೋದರಂ ಚ |

         ಧನಂಜಯಂ ಯಾಜ್ಞಸೇನೀಂ ಯಮೌ ಚ||

03024016c ಪ್ರತಸ್ಥಿರೇ ರಾಷ್ಟ್ರಮಪೇತಹರ್ಷಾ |

         ಯುಧಿಷ್ಠಿರೇಣಾನುಮತಾ ಯಥಾಸ್ವಂ||

ಪಾರ್ಥ ವೃಕೋದರ, ಧನಂಜಯ, ಯಾಜ್ಞಸೇನಿ, ಮತ್ತು ಯಮಳರನ್ನು ಬೀಳ್ಕೊಟ್ಟು ಯುಧಿಷ್ಠಿರನಿಂದ ಅನುಮತಿಯನ್ನು ಪಡೆದು, ಸಂತೋಷವನ್ನು ಕಳೆದುಕೊಂಡು ತಮ್ಮ ತಮ್ಮ ಮನೆಗಳಿಗೆ ರಾಷ್ಟ್ರಕ್ಕೆ ತೆರಳಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದ್ವೈತವನಪ್ರವೇಶೇ ಚತುರ್ವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದ್ವೈತವನಪ್ರವೇಶದಲ್ಲಿ ಇಪ್ಪತ್ತ್ನಾಲ್ಕನೆಯ ಅಧ್ಯಾಯವು.

Related image

Comments are closed.