Aranyaka Parva: Chapter 215

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೨೧೫

ಕೆಲವರು ಆರು ಋಷಿಗಳ ಪತ್ನಿಯರು ಅಗ್ನಿಯನ್ನು ಕೂಡಿದುದರಿಂದ ಸ್ಕಂದನು ಜನಿಸಿದನೆಂದೂ, ಕೆಲವರು ಗರುಡಿಯಿಂದ ಜನಿಸಿದನೆಂದೂ ತಿಳಿದುಕೊಳ್ಳುವುದು; ಅರುಂಧತಿಯನ್ನು ಬಿಟ್ಟು ಆರು ಋಷಿಪತ್ನಿಯರನ್ನು ಗಂಡಂದಿರು ತೊರೆದುದು; ಸ್ವಾಹಾಳು ಸ್ಕಂದನು ತನ್ನ ಮಗನೆಂದು ಸಪ್ತರ್ಷಿಗಳಿಗೆ ಹೇಳುವುದು (೧-೬). ಸತ್ಯಸಂಗತಿಯನ್ನು ತಿಳಿದುಕೊಂಡಿದ್ದ ವಿಶ್ವಾಮಿತ್ರನು ಸ್ಕಂದನನ್ನು ಸ್ತುತಿಸಿದುದು (೭-೧೨). ಸ್ಕಂದನನ್ನು ಸಂಹರಿಸೆಂದು ದೇವತೆಗಳು ಇಂದ್ರನಿಗೆ ಹೇಳಲು, ಅವನನ್ನು ಗೆಲ್ಲಲು ಇಂದ್ರನು ಸಪ್ತಮಾತೃಕೆಯರನ್ನು ಅವನ ಬಳಿ ಕಳುಹಿಸಿದುದು; ಅಗ್ನಿಯು ಆಡಿನ ರೂಪವನ್ನು ತಾಳಿ ಮಗನನ್ನು ರಕ್ಷಿಸಿದುದು, ರಂಜಿಸಿದುದು (೧೩-೨೩).

Image result for skanda03215001 ಮಾರ್ಕಂಡೇಯ ಉವಾಚ|

03215001a ಋಷಯಸ್ತು ಮಹಾಘೋರಾನ್ದೃಷ್ಟ್ವೋತ್ಪಾತಾನ್ಪೃಥಗ್ವಿಧಾನ್|

03215001c ಅಕುರ್ವಂ ಶಾಂತಿಮುದ್ವಿಗ್ನಾ ಲೋಕಾನಾಂ ಲೋಕಭಾವನಾಃ||

ಮಾರ್ಕಂಡೇಯನು ಹೇಳಿದನು: “ಮಹಾಘೋರವಾದ ಉತ್ಪಾತಗಳನ್ನು ನೋಡಿದ ಲೋಕಭಾವನ ಋಷಿಗಳು ಉದ್ವಿಗ್ನ ಲೋಕಗಳ ಶಾಂತಿಗಾಗಿ ಕಾರ್ಯಕೈಗೊಂಡರು.

03215002a ನಿವಸಂತಿ ವನೇ ಯೇ ತು ತಸ್ಮಿಂಶ್ಚೈತ್ರರಥೇ ಜನಾಃ|

03215002c ತೇಽಬ್ರುವನ್ನೇಷ ನೋಽನರ್ಥಃ ಪಾವಕೇನಾಹೃತೋ ಮಹಾನ್|

03215002e ಸಂಗಮ್ಯ ಷಡ್ಭಿಃ ಪತ್ನೀಭಿಃ ಸಪ್ತರ್ಷೀಣಾಮಿತಿ ಸ್ಮ ಹ||

ಚೈತ್ರರಥ ವನದಲ್ಲಿ ವಾಸಿಸುತ್ತಿದ್ದ ಜನರು ಹೇಳಿಕೊಂಡರು: “ಈ ಮಹಾನ್ ಅನರ್ಥವು ಪಾವಕನು ಸಪ್ತರ್ಷಿಗಳ ಆರು ಪತ್ನಿಯರೊಂದಿಗೆ ಗುಟ್ಟಾಗಿ ಕೂಡಿದ್ದುದರಿಂದ ಆಗಿದೆ.”

03215003a ಅಪರೇ ಗರುಡೀಮಾಹುಸ್ತ್ವಯಾನರ್ಥೋಽಯಮಾಹೃತಃ|

03215003c ಯೈರ್ದೃಷ್ಟಾ ಸಾ ತದಾ ದೇವೀ ತಸ್ಯಾ ರೂಪೇಣ ಗಚ್ಚತೀ|

03215003e ನ ತು ತತ್ಸ್ವಾಹಯಾ ಕರ್ಮ ಕೃತಂ ಜಾನಾತಿ ವೈ ಜನಃ||

ಆ ದೇವಿಯು ಗರುಡಿಯ ರೂಪವನ್ನು ಧರಿಸಿ ಹೋಗುತ್ತಿದ್ದುದನ್ನು ನೋಡಿದ ಇತರರು ಇದು ಸ್ವಾಹಾಳ ಕೆಲಸ ಎಂದು ತಿಳಿಯದೇ “ಈ ಅನರ್ಥವನ್ನು ಪಕ್ಷಿಯೊಂದು ತಂದೊಡ್ಡಿದೆ” ಎಂದೂ ಹೇಳಿದರು.

03215004a ಸುಪರ್ಣೀ ತು ವಚಃ ಶ್ರುತ್ವಾ ಮಮಾಯಂ ತನಯಸ್ತ್ವಿತಿ|

03215004c ಉಪಗಮ್ಯ ಶನೈಃ ಸ್ಕಂದಮಾಹಾಹಂ ಜನನೀ ತವ||

ಈ ಮಾತುಗಳನ್ನು ಕೇಳಿದ ಸುಪರ್ಣಿಯು ಇವನು ನನ್ನ ಮಗನೆಂದು ನಿಧಾನವಾಗಿ ಸ್ಕಂದನ ಬಳಿಬಂದು “ನಾನು ನಿನ್ನ ತಾಯಿ” ಎಂದು ಹೇಳಿದಳು.

03215005a ಅಥ ಸಪ್ತರ್ಷಯಃ ಶ್ರುತ್ವಾ ಜಾತಂ ಪುತ್ರಂ ಮಹೌಜಸಂ|

03215005c ತತ್ಯಜುಃ ಷಟ್ತದಾ ಪತ್ನೀರ್ವಿನಾ ದೇವೀಮರುಂಧತೀಂ||

03215006a ಷಡ್ಭಿರೇವ ತದಾ ಜಾತಮಾಹುಸ್ತದ್ವನವಾಸಿನಃ|

ಆಗ ಮಹೌಜಸ ಪುತ್ರನು ಹುಟ್ಟಿದ್ದಾನೆಂದು ಕೇಳಿ ಸಪ್ತರ್ಷಿಗಳು ದೇವೀ ಅರುಂಧತಿಯನ್ನು ಬಿಟ್ಟು ಉಳಿದ ಆರು ಪತ್ನಿಯರನ್ನು ತ್ಯಜಿಸಿದರು. ಏಕೆಂದರೆ ವನವಾಸಿಗಳು “ಈ ಆರರಿಂದಲೇ ಅವನು ಹುಟ್ಟಿದ್ದಾನೆ” ಎಂದು ಹೇಳಿದರು.

03215006c ಸಪ್ತರ್ಷೀನಾಹ ಚ ಸ್ವಾಹಾ ಮಮ ಪುತ್ರೋಽಯಮಿತ್ಯುತ|

03215006e ಅಹಂ ಜಾನೇ ನೈತದೇವಮಿತಿ ರಾಜನ್ಪುನಃ ಪುನಃ||

ಸ್ವಾಹಳೂ ಕೂಡ “ಇವನು ನನ್ನ ಮಗ” ಎಂದೂ, “ನಿಮ್ಮ ಪತ್ನಿಯರು ಇವನ ತಾಯಿಯರಲ್ಲ” ಎಂದೂ ಪುನಃ ಪುನಃ ಸಪ್ತರ್ಷಿಗಳಿಗೆ ಹೇಳಿದಳು.

03215007a ವಿಶ್ವಾಮಿತ್ರಸ್ತು ಕೃತ್ವೇಷ್ಟಿಂ ಸಪ್ತರ್ಷೀಣಾಂ ಮಹಾಮುನಿಃ|

03215007c ಪಾವಕಂ ಕಾಮಸಂತಪ್ತಮದೃಷ್ಟಃ ಪೃಷ್ಠತೋಽನ್ವಗಾತ್|

03215007e ತತ್ತೇನ ನಿಖಿಲಂ ಸರ್ವಮವಬುದ್ಧಂ ಯಥಾತಥಂ||

ಮಹಾಮುನಿ ವಿಶ್ವಾಮಿತ್ರನು ಸಪ್ತರ್ಷಿಗಳ ಆ ಇಷ್ಟಿಯನ್ನು ಪೂರೈಸಿ ಕಾಮಸಂತಪ್ತನಾದ ಪಾವಕನನ್ನು ಹಿಂಬಾಲಿಸಿ ಹೋಗಿ ನೋಡಿದ್ದನು. ಆದುದರಿಂದ ಅವನಿಗೆ ನಡೆದುದೆಲ್ಲವೂ ಸರಿಯಾಗಿ ತಿಳಿದಿತ್ತು.

03215008a ವಿಶ್ವಾಮಿತ್ರಸ್ತು ಪ್ರಥಮಂ ಕುಮಾರಂ ಶರಣಂ ಗತಃ|

03215008c ಸ್ತವಂ ದಿವ್ಯಂ ಸಂಪ್ರಚಕ್ರೇ ಮಹಾಸೇನಸ್ಯ ಚಾಪಿ ಸಃ||

03215009a ಮಂಗಲಾನಿ ಚ ಸರ್ವಾಣಿ ಕೌಮಾರಾಣಿ ತ್ರಯೋದಶ|

03215009c ಜಾತಕರ್ಮಾದಿಕಾಸ್ತಸ್ಯ ಕ್ರಿಯಾಶ್ಚಕ್ರೇ ಮಹಾಮುನಿಃ||

ಪ್ರಥಮವಾಗಿ ವಿಶ್ವಾಮಿತ್ರನು ಕುಮಾರನಿಗೆ ಶರಣು ಹೋದನು. ಮಹಾಸೇನನನ್ನು ದಿವ್ಯ ಸ್ತವದಿಂದ ಸ್ತುತಿಸಿದನು ಕೂಡ. ಜಾತಕರ್ಮಾದಿ ಎಲ್ಲ ಹದಿಮೂರು ಮಂಗಲ ಕಾರ್ಯಗಳನ್ನು ಆ ಮಹಾಮುನಿಯು ಕುಮಾರನಿಗೆ ನೆರವೇರಿಸಿದನು.

03215010a ಷಡ್ವಕ್ತ್ರಸ್ಯ ತು ಮಾಹಾತ್ಮ್ಯಂ ಕುಕ್ಕುಟಸ್ಯ ಚ ಸಾಧನಂ|

03215010c ಶಕ್ತ್ಯಾ ದೇವ್ಯಾಃ ಸಾಧನಂ ಚ ತಥಾ ಪಾರಿಷದಾಮಪಿ||

03215011a ವಿಶ್ವಾಮಿತ್ರಶ್ಚಕಾರೈತತ್ಕರ್ಮ ಲೋಕಹಿತಾಯ ವೈ|

ಲೋಕಹಿತಾರ್ಥವಾಗಿ ವಿಶ್ವಾಮಿತ್ರನು ಆ ಷಡ್ವಕ್ತ್ರನ ಮಹಾತ್ಮೆಯನ್ನೂ, ಕುಕ್ಕುಟದ ಸಾಧನೆಯನ್ನೂ, ದೇವಿ ಶಕ್ತಿಯ ಸಾಧನೆಯನ್ನೂ ಮತ್ತು ಅವನಿಗೆ ಸೇವೆಸಲ್ಲಿಸಿದ ಜನರನ್ನೂ ಸ್ತುತಿಸಿದನು.

03215011c ತಸ್ಮಾದೃಷಿಃ ಕುಮಾರಸ್ಯ ವಿಶ್ವಾಮಿತ್ರೋಽಭವತ್ಪ್ರಿಯಃ||

03215012a ಅನ್ವಜಾನಾಚ್ಚ ಸ್ವಾಹಾಯಾ ರೂಪಾನ್ಯತ್ವಂ ಮಹಾಮುನಿಃ|

03215012c ಅಬ್ರವೀಚ್ಚ ಮುನೀನ್ಸರ್ವಾನ್ನಾಪರಾಧ್ಯಂತಿ ವೈ ಸ್ತ್ರಿಯಃ|

03215012e ಶ್ರುತ್ವಾ ತು ತತ್ತ್ವತಸ್ತಸ್ಮಾತ್ತೇ ಪತ್ನೀಃ ಸರ್ವತೋಽತ್ಯಜನ್||

ಆದುದರಿಂದ ಋಷಿ ವಿಶ್ವಾಮಿತ್ರನು ಕುಮಾರನ ಪ್ರಿಯಕರನಾದನು. ಆಗ ಆ ಮಹಾಮುನಿಯು ಸ್ವಾಹಾಳು ಯಾರಿಗೂ ತಿಳಿಯದೇ ರೂಪವನ್ನು ಬದಲಾಯಿಸಿಕೊಂಡಿದ್ದುದನ್ನು ಮುನಿಗಳಿಗೆ ಹೇಳಿ ಅವರ ಸ್ತ್ರೀಯರದ್ದು ಏನೂ ಅಪರಾಧವಿಲ್ಲವೆಂದೂ ಹೇಳಿದನು. ಅದನ್ನು ಕೇಳಿಯೂ ಅವರು ಅವರ ಪತ್ನಿಯರನ್ನು ಸರ್ವತಾ ತ್ಯಜಿಸಿದರು.

03215013a ಸ್ಕಂದಂ ಶ್ರುತ್ವಾ ತತೋ ದೇವಾ ವಾಸವಂ ಸಹಿತಾಬ್ರುವನ್|

03215013c ಅವಿಷಹ್ಯಬಲಂ ಸ್ಕಂದಂ ಜಹಿ ಶಕ್ರಾಶು ಮಾಚಿರಂ||

ಸ್ಕಂದನ ಕುರಿತು ಕೇಳಿದ ದೇವತೆಗಳು ಒಟ್ಟಿಗೇ ವಾಸವನಿಗೆ ಹೇಳಿದರು: “ಶಕ್ರ! ಈ ಬಲಶಾಲಿಯಾದ ಸ್ಕಂದನನ್ನು ಬೇಗನೇ ಸಂಹರಿಸು!

03215014a ಯದಿ ವಾ ನ ನಿಹಂಸ್ಯೇನಮದ್ಯೇಂದ್ರೋಽಯಂ ಭವಿಷ್ಯತಿ|

03215014c ತ್ರೈಲೋಕ್ಯಂ ಸನ್ನಿಗೃಹ್ಯಾಸ್ಮಾಂಸ್ತ್ವಾಂ ಚ ಶಕ್ರ ಮಹಾಬಲಃ||

ಶಕ್ರ! ಒಂದುವೇಳೆ ನೀನು ಇವನನ್ನು ಕೊಲ್ಲದಿದ್ದರೆ ಈ ಮಹಾಬಲನು ನಮ್ಮೊಂದಿಗೆ ಮೂರು ಲೋಕಗಳನ್ನೂ ಗೆದ್ದು ಇವನೇ ಇಂದ್ರನಾಗುತ್ತಾನೆ!”

03215015a ಸ ತಾನುವಾಚ ವ್ಯಥಿತೋ ಬಾಲೋಽಯಂ ಸುಮಹಾಬಲಃ|

03215015c ಸ್ರಷ್ಟಾರಮಪಿ ಲೋಕಾನಾಂ ಯುಧಿ ವಿಕ್ರಮ್ಯ ನಾಶಯೇತ್||

ಅವನು ಅವರಿಗೆ ವ್ಯಥಿತನಾಗಿ ಹೇಳಿದನು: “ಈ ಬಾಲಕನು ತುಂಬಾ ಬಲಶಾಲಿಯು. ಲೋಕಗಳ ಸೃಷ್ಟಾರನನ್ನು ಕೂಡ ಯುದ್ಧದಲ್ಲಿ ವಿಕ್ರಮದಿಂದ ನಾಶಪಡಿಸಬಲ್ಲನು.

03215016a ಸರ್ವಾಸ್ತ್ವದ್ಯಾಭಿಗಚ್ಚಂತು ಸ್ಕಂದಂ ಲೋಕಸ್ಯ ಮಾತರಃ|

03215016c ಕಾಮವೀರ್ಯಾ ಘ್ನಂತು ಚೈನಂ ತಥೇತ್ಯುಕ್ತ್ವಾ ಚ ತಾ ಯಯುಃ||

ಲೋಕಮಾತೆಯರು ಎಲ್ಲರೂ ಸ್ಕಂದನಲ್ಲಿಗೆ ಇಂದು ಹೋಗಿ ಅವನ ವೀರ್ಯವನ್ನು ಗೆಲ್ಲಲಿ.” ಹಾಗೆಯೇ ಆಗಲೆಂದು ಅವರು ಹೋದರು.

03215017a ತಮಪ್ರತಿಬಲಂ ದೃಷ್ಟ್ವಾ ವಿಷಣ್ಣವದನಾಸ್ತು ತಾಃ|

03215017c ಅಶಕ್ಯೋಽಯಂ ವಿಚಿಂತ್ಯೈವಂ ತಮೇವ ಶರಣಂ ಯಯುಃ||

ಆ ಅಪ್ರತಿಮಬಲಶಾಲಿಯನ್ನು ಕಂಡು ವಿಷಣ್ಣವದನರಾಗಿ ಅವರು ಇವನನ್ನು ಗೆಲ್ಲಲು ನಾವು ಅಶಕ್ಯರು ಎಂದು ಚಿಂತಿಸಿ ಅವನಿಗೇ ಶರಣು ಹೊಕ್ಕರು.

03215018a ಊಚುಶ್ಚಾಪಿ ತ್ವಮಸ್ಮಾಕಂ ಪುತ್ರೋಽಸ್ಮಾಭಿರ್ಧೃತಂ ಜಗತ್|

03215018c ಅಭಿನಂದಸ್ವ ನಃ ಸರ್ವಾಃ ಪ್ರಸ್ನುತಾಃ ಸ್ನೇಹವಿಕ್ಲವಾಃ||

ಅವನಿಗೆ ಹೇಳಿದರು: “ನೀನು ನಮ್ಮ ಮಗ. ನಾವು ಜಗತ್ತನ್ನೇ ಪಾಲಿಸುವವರು. ಸ್ನೇಹದಿಂದ ಚಿಮ್ಮುತ್ತಿರುವ ನಮ್ಮ ಮೊಲೆಹಾಲನ್ನು ಉಣ್ಣು.”

03215019a ತಾಃ ಸಂಪೂಜ್ಯ ಮಹಾಸೇನಃ ಕಾಮಾಂಶ್ಚಾಸಾಂ ಪ್ರದಾಯ ಸಃ|

03215019c ಅಪಶ್ಯದಗ್ನಿಮಾಯಾಂತಂ ಪಿತರಂ ಬಲಿನಾಂ ಬಲೀ||

ಅವರನ್ನು ಪೂಜಿಸಿ ಮಹಾಸೇನನು ಅವರ ಆಸೆಯನ್ನು ಈಡೇರಿಸಿದನು. ಇದನ್ನು ನೋಡಿ ಬಲಿಗಳಲ್ಲಿ ಬಲಿಯಾದ ತಂದೆ ಅಗ್ನಿಯು ಅಲ್ಲಿಗೆ ಆಗಮಿಸಿದನು.

03215020a ಸ ತು ಸಂಪೂಜಿತಸ್ತೇನ ಸಹ ಮಾತೃಗಣೇನ ಹ|

03215020c ಪರಿವಾರ್ಯ ಮಹಾಸೇನಂ ರಕ್ಷಮಾಣಃ ಸ್ಥಿತಃ ಸ್ಥಿರಂ||

ಮಾತೃಗಣಗಳೊಂದಿಗೆ ಅವನಿಂದಲೂ ಗೌರವಿಸಲ್ಪಟ್ಟ ಅವನು ಮಹಾಸೇನನನ್ನು ಸುತ್ತುವರೆದು ಅವನನ್ನು ರಕ್ಷಿಸಲು ಸ್ಥಿರವಾಗಿ ನಿಂತನು.

03215021a ಸರ್ವಾಸಾಂ ಯಾ ತು ಮಾತೄಣಾಂ ನಾರೀ ಕ್ರೋಧಸಮುದ್ಭವಾ|

03215021c ಧಾತ್ರೀ ಸಾ ಪುತ್ರವತ್ಸ್ಕಂದಂ ಶೂಲಹಸ್ತಾಭ್ಯರಕ್ಷತ||

ಆ ಎಲ್ಲ ಮಾತೆಯರಲ್ಲಿ ಕ್ರೋಧದಿಂದ ಹುಟ್ಟಿದ ನಾರಿಯು ಕೈಯಲ್ಲಿ ಶೂಲವನ್ನು ಹಿಡಿದು ತನ್ನದೇ ಮಗನನ್ನು ಕಾಯುವಂತೆ ಅವನನ್ನು ರಕ್ಷಿಸಿ ಕಾದಳು.

03215022a ಲೋಹಿತಸ್ಯೋದಧೇಃ ಕನ್ಯಾ ಕ್ರೂರಾ ಲೋಹಿತಭೋಜನಾ|

03215022c ಪರಿಷ್ವಜ್ಯ ಮಹಾಸೇನಂ ಪುತ್ರವತ್ಪರ್ಯರಕ್ಷತ||

ಕೆಂಪುಬಣ್ಣದ ಸಮುದ್ರದ ಮಗಳು, ರಕ್ತವನ್ನು ಕುಡಿಯುವ ಕ್ರೂರಳು ಮಹಾಸೇನನನ್ನು ಪುತ್ರನಂತೆ ಬಿಗಿದಪ್ಪಿ ರಕ್ಷಿಸಿದಳು.

03215023a ಅಗ್ನಿರ್ಭೂತ್ವಾ ನೈಗಮೇಯಶ್ಚಾಗವಕ್ತ್ರೋ ಬಹುಪ್ರಜಃ|

03215023c ರಮಯಾಮಾಸ ಶೈಲಸ್ಥಂ ಬಾಲಂ ಕ್ರೀಡನಕೈರಿವ||

ಅಗ್ನಿಯು ಆಡಿನ ಮುಖವನ್ನು ಧರಿಸಿ, ಬಹಳ ಮಕ್ಕಳೊಂದಿಗೆ ಆ ಗಿರಿಯ ಮೇಲಿದ್ದ ಬಾಲಕನೊಂದಿಗೆ ಆಟವಾಡುತ್ತಾ ರಂಜಿಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವ ಅಂಗೀರಸೋಪಾಖ್ಯಾನೇ ಸ್ಕಂದೋತ್ಪತ್ತೌ ಪಂಚದಶಾಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗೀರಸೋಪಾಖ್ಯಾನದಲ್ಲಿ ಸ್ಕಂದೋತ್ಪತ್ತಿಯಲ್ಲಿ ಇನ್ನೂರಾಹದಿನೈದನೆಯ ಅಧ್ಯಾಯವು.

Related image

Comments are closed.