Aranyaka Parva: Chapter 211

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೨೧೧

ಭಾನು (ಮನು) ಸಂತತಿಯ ಅಗ್ನಿಗಳ ವರ್ಣನೆ (೧-೩೧).

Image result for agni03211001 ಮಾರ್ಕಂಡೇಯ ಉವಾಚ|

03211001a ಗುರುಭಿರ್ನಿಯಮೈರ್ಯುಕ್ತೋ ಭರತೋ ನಾಮ ಪಾವಕಃ|

03211001c ಅಗ್ನಿಃ ಪುಷ್ಟಿಮತಿರ್ನಾಮ ತುಷ್ಟಃ ಪುಷ್ಟಿಂ ಪ್ರಯಚ್ಚತಿ|

03211001e ಭರತ್ಯೇಷ ಪ್ರಜಾಃ ಸರ್ವಾಸ್ತತೋ ಭರತ ಉಚ್ಯತೇ||

ಮಾರ್ಕಂಡೇಯನು ಹೇಳಿದನು: “ಭರತ ಎಂಬ ಹೆಸರಿನ ಪಾವಕನು ಭಾರದ ನಿಯಮಗಳಿಗೆ ಬದ್ಧನಾಗಿದ್ದನು. ತುಷ್ಟನಾದಾಗ ಪುಷ್ಟಿಯನ್ನು ತರುವುದರಿಂದ ಪುಷ್ಟಿಮತಿ ಎಂಬುದು ಈ ಅಗ್ನಿಯ ಇನ್ನೊಂದು ಹೆಸರು. ಪ್ರಜೆಗಳೆಲ್ಲರನ್ನೂ ಪೊರೆಯುವುದರಿಂದ ಇದಕ್ಕೆ ಭರತ ಎಂದು ಹೇಳುತ್ತಾರೆ.

03211002a ಅಗ್ನಿರ್ಯಸ್ತು ಶಿವೋ ನಾಮ ಶಕ್ತಿಪೂಜಾಪರಶ್ಚ ಸಃ|

03211002c ದುಃಖಾರ್ತಾನಾಂ ಸ ಸರ್ವೇಷಾಂ ಶಿವಕೃತ್ಸತತಂ ಶಿವಃ||

ಇನ್ನೊಂದು ಅಗ್ನಿಯ ಹೆಸರು ಶಿವ. ಶಕ್ತಿಪೂಜೆಯಲ್ಲಿ ನಿರತನಾದವನು. ದುಃಖಾರ್ತರೆಲ್ಲರಿಗೆ ಮಂಗಳವನ್ನುಂಟುಮಾಡುವುದರಿಂದ ಇವನು ಶಿವ.

03211003a ತಪಸಸ್ತು ಫಲಂ ದೃಷ್ಟ್ವಾ ಸಂಪ್ರವೃದ್ಧಂ ತಪೋ ಮಹತ್|

03211003c ಉದ್ಧರ್ತುಕಾಮೋ ಮತಿಮಾನ್ಪುತ್ರೋ ಜಜ್ಞೇ ಪುರಂದರಃ||

ಮಹಾತಪಸ್ಸಿನ ಫಲವು ಪ್ರವೃದ್ಧವಾದುದನ್ನು ನೋಡಿ ತಪನು ಕಾಮೋದ್ಯುಕ್ತನಾದಾಗ ಅವನಿಗೆ ಪುರಂದರನೆಂಬ ಮತಿವಂತ ಪುತ್ರನು ಜನಿಸಿದನು.

03211004a ಊಷ್ಮಾ ಚೈವೋಷ್ಮಣೋ ಜಜ್ಞೇ ಸೋಽಗ್ನಿರ್ಭೂತೇಷು ಲಕ್ಷ್ಯತೇ|

03211004c ಅಗ್ನಿಶ್ಚಾಪಿ ಮನುರ್ನಾಮ ಪ್ರಾಜಾಪತ್ಯಮಕಾರಯತ್||

ಉಷ್ಮ ಎನ್ನುವ ಇನ್ನೊಬ್ಬ ಮಗನೂ ಹುಟ್ಟಿದನು. ಭೂತಗಳು ಆವಿಯಾದಾಗ ಈ ಅಗ್ನಿಯು ಕಾಣಿಸಿಕೊಳ್ಳುತ್ತಾನೆ. ಮನು ಎಂಬ ಹೆಸರಿನ ಅಗ್ನಿಯು ಪ್ರಜಾಪತಿಯಾದನು.

03211005a ಶಂಭುಮಗ್ನಿಮಥ ಪ್ರಾಹುರ್ಬ್ರಾಹ್ಮಣಾ ವೇದಪಾರಗಾಃ|

03211005c ಆವಸಥ್ಯಂ ದ್ವಿಜಾಃ ಪ್ರಾಹುರ್ದೀಪ್ತಮಗ್ನಿಂ ಮಹಾಪ್ರಭಂ||

ವೇದಪಾರಂಗತರಾದ ಬ್ರಾಹ್ಮಣರು ಶಂಭು ಎನ್ನುವ ಅಗ್ನಿಯ ಕುರಿತು ಹೇಳುತ್ತಾರೆ. ಅನಂತರ ದ್ವಿಜರು ಮಹಾಪ್ರಭೆಯ ಅವಸಥ್ಯ ಎನ್ನುವ ಅಗ್ನಿಯ ಕುರಿತು ಹೇಳುತ್ತಾರೆ.

03211006a ಊರ್ಜಸ್ಕರಾನ್ ಹವ್ಯವಾಹಾನ್ಸುವರ್ಣಸದೃಶಪ್ರಭಾನ್|

03211006c ಅಗ್ನಿಸ್ತಪೋ ಹ್ಯಜನಯತ್ಪಂಚ ಯಜ್ಞಸುತಾನಿಹ||

ಹೀಗೆ ತಪನು ಐದು ಸುವರ್ಣಸದೃಶ ಫ್ರಭೆಯುಳ್ಳ ಹವ್ಯವಾಹನ ಅಗ್ನಿಗಳನ್ನು ಹುಟ್ಟಿಸಿದನು.

03211007a ಪ್ರಶಾಂತೇಽಗ್ನಿರ್ಮಹಾಭಾಗ ಪರಿಶ್ರಾಂತೋ ಗವಾಂಪತಿಃ|

03211007c ಅಸುರಾಂ ಜನಯನ್ಘೋರಾನ್ಮರ್ತ್ಯಾಂಶ್ಚೈವ ಪೃಥಗ್ವಿಧಾನ್||

ಪರಿಶ್ರಾಂತನಾದ ಮಹಾಭಾಗ ಗವಾಂಪತಿ (ಸೂರ್ಯ) ಯನ್ನು ಪ್ರಾಶಾಂತ ಅಗ್ನಿಯೆಂದು ಹೇಳುತ್ತಾರೆ. ಅವನು ಭೂಮಿಯಮೇಲೆ ಘೋರ ಅಸುರರನ್ನೂ ಮತ್ತು ಇತರ ಮರ್ತ್ಯರನ್ನು ಹುಟ್ಟಿಸಿದನು.

03211008a ತಪಸಶ್ಚ ಮನುಂ ಪುತ್ರಂ ಭಾನುಂ ಚಾಪ್ಯಂಗಿರಾಸೃಜತ್|

03211008c ಬೃಹದ್ಭಾನುಂ ತು ತಂ ಪ್ರಾಹುರ್ಬ್ರಾಹ್ಮಣಾ ವೇದಪಾರಗಾಃ||

ಅಂಗಿರಸನು ತಪನ ಮಗ ಮನು ಭಾನುವನ್ನು ಸೃಷ್ಟಿಸಿದನು. ಅವನನ್ನು ವೇದಪಾರಂಗತ ಬ್ರಾಹ್ಮಣರು ಬೃದದ್ಭಾನುವೆಂದು ಕರೆಯುತ್ತಾರೆ.

03211009a ಭಾನೋರ್ಭಾರ್ಯಾ ಸುಪ್ರಜಾ ತು ಬೃಹದ್ಭಾಸಾ ತು ಸೋಮಜಾ|

03211009c ಅಸೃಜೇತಾಂ ತು ಷಟ್ಪುತ್ರಾಂ ಶೃಣು ತಾಸಾಂ ಪ್ರಜಾವಿಧಿಂ||

ಭಾನುವಿನ ಪತ್ನಿಯರು ಸುಪ್ರಜಾ ಮತ್ತು ಸೋಮನ ಮಗಳು ಬೃಹದ್ಭಾಸಾ. ಅವರಿಗೆ ಆರು ಪುತ್ರರು ಹುಟ್ಟಿದರು. ಅವರ ಹುಟ್ಟುವಿಕೆಯನ್ನು ಕೇಳು.

03211010a ದುರ್ಬಲಾನಾಂ ತು ಭೂತಾನಾಂ ತನುಂ ಯಃ ಸಂಪ್ರಯಚ್ಚತಿ|

03211010c ತಮಗ್ನಿಂ ಬಲದಂ ಪ್ರಾಹುಃ ಪ್ರಥಮಂ ಭಾನುತಃ ಸುತಂ||

ದುರ್ಬಲ ಜೀವಿಗಳಿಗೆ ಬಲವನ್ನು ನೀಡುವವನಿಗೆ ಬಲದನೆಂದು ಕರೆಯುತ್ತಾರೆ. ಇವನು ಭಾನುವಿನ ಮೊದಲನೆಯ ಮಗ.

03211011a ಯಃ ಪ್ರಶಾಂತೇಷು ಭೂತೇಷು ಮನ್ಯುರ್ಭವತಿ ದಾರುಣಃ|

03211011c ಅಗ್ನಿಃ ಸ ಮನ್ಯುಮಾನ್ನಾಮ ದ್ವಿತೀಯೋ ಭಾನುತಃ ಸುತಃ||

ಭೂತಗಳು ಪ್ರಶಾಂತರಾಗಿರುವಾಗ ದಾರುಣ ಕೋಪನಾಗಿರುವ ಅಗ್ನಿಯು ಮನ್ಯು ಎಂಬ ಹೆಸರಿನ ಭಾನುವಿನ ಎರಡನೆಯ ಮಗ.

03211012a ದರ್ಶೇ ಚ ಪೌರ್ಣಮಾಸೇ ಚ ಯಸ್ಯೇಹ ಹವಿರುಚ್ಯತೇ|

03211012c ವಿಷ್ಣುರ್ನಾಮೇಹ ಯೋಽಗ್ನಿಸ್ತು ಧೃತಿಮಾನ್ನಾಮ ಸೋಽಂಗಿರಾಃ||

ಇಲ್ಲಿ ದರ್ಶ ಮತ್ತು ಪೌರ್ಣಿಮೆಗಳಲ್ಲಿ ಯಾರಿಗೆ ಹವಿಸ್ಸನ್ನು ಹಾಕುತ್ತೇವೋ ಅವನೇ ವಿಷ್ಣುವೆಂಬ ಅಗ್ನಿ ಧೃತಿ ಎಂಬ ಹೆಸರಿದೆ. ಅಂಗಿರಸ ಎಂದೂ ಇದೆ.

03211013a ಇಂದ್ರೇಣ ಸಹಿತಂ ಯಸ್ಯ ಹವಿರಾಗ್ರಯಣಂ ಸ್ಮೃತಂ|

03211013c ಅಗ್ನಿರಾಗ್ರಯಣೋ ನಾಮ ಭಾನೋರೇವಾನ್ವಯಸ್ತು ಸಃ||

ಇಂದ್ರನ ಸಹಿತ ಅಗ್ರಯನ ಹವಿಸ್ಸನ್ನು ಸೇರಿಸಲಾಗುವ ಆ ಅಗ್ನಿಯು ಅಗ್ರಯಣ ಎಂಬ ಹೆಸರಿನ ಭಾನುವಿನ ಇನ್ನೊಬ್ಬ ಪುತ್ರ.

03211014a ಚಾತುರ್ಮಾಸ್ಯೇಷು ನಿತ್ಯಾನಾಂ ಹವಿಷಾಂ ಯೋ ನಿರಗ್ರಹಃ|

03211014c ಚತುರ್ಭಿಃ ಸಹಿತಃ ಪುತ್ರೈರ್ಭಾನೋರೇವಾನ್ವಯಸ್ತು ಸಃ||

ಚಾತುರ್ಮಾಸ್ಯಗಳಲ್ಲಿ ನಿತ್ಯವೂ ಹವಿಸ್ಸನ್ನು ಹಾಕುವ ನಿರಗ್ರಹನು ಭಾನುವಿನ ಐದನೆಯ ಮಗ.

03211015a ನಿಶಾಂ ತ್ವಜನಯತ್ಕನ್ಯಾಮಗ್ನೀಷೋಮಾವುಭೌ ತಥಾ|

03211015c ಮನೋರೇವಾಭವದ್ಭಾರ್ಯಾ ಸುಷುವೇ ಪಂಚ ಪಾವಕಾನ್||

ನಿಶಾ ಎನ್ನುವವಳು ಮನುವಿನ ಇನ್ನೊಬ್ಬ ಪತ್ನಿ. ಅವಳು ಓರ್ವ ಕನ್ಯೆಯನ್ನೂ, ಇಬ್ಬರು ಅಗ್ನಿಷ್ಟೋಮರನ್ನೂ ಮತ್ತು ಐದು ಪಾವಕರನ್ನೂ ಜನಿಸಿದಳು.

03211016a ಪೂಜ್ಯತೇ ಹವಿಷಾಗ್ರ್ಯೇಣ ಚಾತುರ್ಮಾಸ್ಯೇಷು ಪಾವಕಃ|

03211016c ಪರ್ಜನ್ಯಸಹಿತಃ ಶ್ರೀಮಾನಗ್ನಿರ್ವೈಶ್ವಾನರಸ್ತು ಸಃ||

ಚಾತುರ್ಮಾಸ್ಯದಲ್ಲಿ ಹವಿಸ್ಸಿನ ಮೊದಲು ಪರ್ಜನ್ಯನ ಸಹಿತ ಪೂಜಿಸುವ ಪಾವಕನನ್ನು ಶ್ರೀಮಾನ್ ವೈಶ್ವಾನರನೆಂದು ಕರೆಯುತ್ತಾರೆ.

03211017a ಅಸ್ಯ ಲೋಕಸ್ಯ ಸರ್ವಸ್ಯ ಯಃ ಪತಿಃ ಪರಿಪಠ್ಯತೇ|

03211017c ಸೋಽಗ್ನಿರ್ವಿಶ್ವಪತಿರ್ನಾಮ ದ್ವಿತೀಯೋ ವೈ ಮನೋಃ ಸುತಃ|

03211017e ತತಃ ಸ್ವಿಷ್ಟಂ ಭವೇದಾಜ್ಯಂ ಸ್ವಿಷ್ಟಕೃತ್ಪರಮಃ ಸ್ಮೃತಃ||

ಈ ಲೋಕಗಳೆಲ್ಲವುಗಳ ಪತಿಯಾರಿದ್ದಾನೋ ಆ ಮನುವಿನ ಎರಡನೆಯ ಮಗ ಅಗ್ನಿಯನ್ನು ವಿಶ್ಪಪತಿ ಎಂಬ ಹೆಸರಿನಿಂದ ಕರೆಯುತ್ತಾರೆ. ಮನುವಿನ ಮಗಳನ್ನು ಸ್ವಿಷ್ಟಕೃತ್ ಎಂದು ಕರೆಯುತ್ತಾರೆ. ಏಕೆಂದರೆ ಅವಳಿಗೆ ಆಜ್ಯವನ್ನು ನೀಡುವುದರಿಂದ ಪರಮ ಪುಣ್ಯವು ದೊರೆಯುತ್ತದೆ.

03211018a ಕನ್ಯಾ ಸಾ ರೋಹಿಣೀ ನಾಮ ಹಿರಣ್ಯಕಶಿಪೋಃ ಸುತಾ|

03211018c ಕರ್ಮಣಾಸೌ ಬಭೌ ಭಾರ್ಯಾ ಸ ವಹ್ನಿಃ ಸ ಪ್ರಜಾಪತಿಃ||

ರೋಹಿಣೀ ಎಂಬ ಹೆಸರಿನ ಹಿರಣ್ಯಕಶಿಪುವಿನ ಮಗಳು ಕನ್ಯೆಯು ತನ್ನ ಕರ್ಮಗಳಿಂದ ಅವನ ಭಾರ್ಯೆಯಾದಳು. ಅವಳೂ ಕೂಡ ಪ್ರಜಾಪತಿ ಅಗ್ನಿ.

03211019a ಪ್ರಾಣಮಾಶ್ರಿತ್ಯ ಯೋ ದೇಹಂ ಪ್ರವರ್ತಯತಿ ದೇಹಿನಾಂ|

03211019c ತಸ್ಯ ಸನ್ನಿಹಿತೋ ನಾಮ ಶಬ್ದರೂಪಸ್ಯ ಸಾಧನಃ||

ದೇಹದ ಪ್ರಾಣದಲ್ಲಿ ನೆಲೆಸಿಕೊಂಡು ದೇಹಿಗಳನ್ನು ನಡೆಸುವವನ ಹೆಸರು ಸಂನಿಹಿತ - ಅವನು ಶಬ್ಧ ರೂಪಗಳ ಸಾಧನ.

03211020a ಶುಕ್ಲಕೃಷ್ಣಗತಿರ್ದೇವೋ ಯೋ ಬಿಭರ್ತಿ ಹುತಾಶನಂ|

03211020c ಅಕಲ್ಮಷಃ ಕಲ್ಮಷಾಣಾಂ ಕರ್ತಾ ಕ್ರೋಧಾಶ್ರಿತಸ್ತು ಸಃ||

03211021a ಕಪಿಲಂ ಪರಮರ್ಷಿಂ ಚ ಯಂ ಪ್ರಾಹುರ್ಯತಯಃ ಸದಾ|

03211021c ಅಗ್ನಿಃ ಸ ಕಪಿಲೋ ನಾಮ ಸಾಂಖ್ಯಯೋಗಪ್ರವರ್ತಕಃ||

ಶುಕ್ಲ ಮತ್ತು ಕೃಷ್ಣ ಗತಿಯಲ್ಲಿ ಹೋಗುವ, ಹುತಾಶನನನ್ನು ಕಾಪಾಡುವ ಅಕಲ್ಮಷ, ಕಲ್ಮಷರ ಕ್ರೋಧಾಶ್ರಿತರ ಕರ್ತ ದೇವನನ್ನು ಕಪಿಲ ಮಹರ್ಷಿಯೆಂದು ಯತಿಗಳು ಸದಾ ಹೇಳುತ್ತಾರೆ. ಅವನೇ ಸಾಂಖ್ಯಯೋಗ ಪ್ರವರ್ತಕ ಕಪಿಲ ಎಂಬ ಹೆಸರಿನ ಅಗ್ನಿ.

03211022a ಅಗ್ನಿರ್ಯಚ್ಚತಿ ಭೂತಾನಿ ಯೇನ ಭೂತಾನಿ ನಿತ್ಯದಾ|

03211022c ಕರ್ಮಸ್ವಿಹ ವಿಚಿತ್ರೇಷು ಸೋಽಗ್ರಣೀರ್ವಹ್ನಿರುಚ್ಯತೇ||

ಯಾವ ಅಗ್ನಿಯಲ್ಲಿ ಭೂತಗಳು ಭೂತಗಳಿಗೆ ನಿತ್ಯವೂ ಆಹುತಿಗಳನ್ನು ವಿಚಿತ್ರ ಕರ್ಮದಲ್ಲಿ ನೀಡುತ್ತವೆಯೋ ಅದನ್ನು ಅಗ್ರಣೀ ವಹ್ನಿಯೆಂದು ಹೇಳುತ್ತಾರೆ.

03211023a ಇಮಾನನ್ಯಾನ್ಸಮಸೃಜತ್ಪಾವಕಾನ್ಪ್ರಥಿತಾನ್ಭುವಿ|

03211023c ಅಗ್ನಿಹೋತ್ರಸ್ಯ ದುಷ್ಟಸ್ಯ ಪ್ರಾಯಶ್ಚಿತ್ತಾರ್ಥಮುಲ್ಬಣಾನ್||

ಅಗ್ನಿಹೋತ್ರದ ದೋಷಗಳನ್ನು ಉಲ್ಬಣವಾಗದೇ ಪ್ರಾಯಶ್ಚಿತ್ತಕ್ಕಾಗಿ ಇವು ಮತ್ತು ಅನ್ಯ ಪಾವಕಗಳನ್ನು ಭೂಮಿಯಲ್ಲಿ ಸೃಷ್ಟಿಸಲಾಯಿತು ಎಂದು ಪ್ರಥಿತವಾಗಿದೆ.

03211024a ಸಂಸ್ಪೃಶೇಯುರ್ಯದಾನ್ಯೋನ್ಯಂ ಕಥಂ ಚಿದ್ವಾಯುನಾಗ್ನಯಃ|

03211024c ಇಷ್ಟಿರಷ್ಟಾಕಪಾಲೇನ ಕಾರ್ಯಾ ವೈ ಶುಚಯೇಽಗ್ನಯೇ||

ವಾಯುವಿನಿಂದಾಗಿ ಅಗ್ನಿಗಳು ಅನ್ಯೋನ್ಯರನ್ನು ಮುಟ್ಟಿದರೆ ಅಷ್ಟಾಕಪಾಲ ಅಗ್ನಿಯಿಂದ ಇಷ್ಟಿಯ[1] ಮೂಲಕ ಶುಚಿಯನ್ನು ಪೂಜಿಸಬೇಕು.

03211025a ದಕ್ಷಿಣಾಗ್ನಿರ್ಯದಾ ದ್ವಾಭ್ಯಾಂ ಸಂಸೃಜೇತ ತದಾ ಕಿಲ|

03211025c ಇಷ್ಟಿರಷ್ಟಾಕಪಾಲೇನ ಕಾರ್ಯಾ ವೈ ವೀತಯೇಽಗ್ನಯೇ||

ದಕ್ಷಿಣಾಗ್ನಿಯು ಇತರ ಎರಡು ಅಗ್ನಿಗಳನ್ನು ಮುಟ್ಟಿದರೆ ಅಷ್ಟಾಕಪಾಲ ಇಷ್ಟಿಯಿಂದ ವೀತ ಅಗ್ನಿಯನ್ನು ಪೂಜಿಸಬೇಕು.

03211026a ಯದ್ಯಗ್ನಯೋ ಹಿ ಸ್ಪೃಶ್ಯೇಯುರ್ನಿವೇಶಸ್ಥಾ ದವಾಗ್ನಿನಾ|

03211026c ಇಷ್ಟಿರಷ್ಟಾಕಪಾಲೇನ ಕಾರ್ಯಾ ತು ಶುಚಯೇಽಗ್ನಯೇ||

ನಿವೇಶ ಎಂಬ ಅಗ್ನಿಯು ದವಾ ಎಂಬ ಅಗ್ನಿಯೊಂದಿಗೆ ಸೇರಿದರೆ ಅಷ್ಟಾಕಪಾಲ ಇಷ್ಟಿಯಿಂದ ಶುಚೀ ಅಗ್ನಿಯನ್ನು ಪೂಜಿಸಬೇಕು.

03211027a ಅಗ್ನಿಂ ರಜಸ್ವಲಾ ಚೇತ್ಸ್ತ್ರೀ ಸಂಸ್ಪೃಶೇದಗ್ನಿಹೋತ್ರಿಕಂ|

03211027c ಇಷ್ಟಿರಷ್ಟಾಕಪಾಲೇನ ಕಾರ್ಯಾ ದಸ್ಯುಮತೇಽಗ್ನಯೇ||

ಅಗ್ನಿಹೋತ್ರಕನ ಅಗ್ನಿಯನ್ನು ರಜಸ್ವಲೆಯು ಸ್ಪರ್ಶಿಸಿದರೆ ಅಷ್ಟಾಕಪಾಲ ಇಷ್ಟಿಯಿಂದ ದಸ್ಯುಮತಿ ಅಗ್ನಿಯನ್ನು ಪೂಜಿಸಬೇಕು.

03211028a ಮೃತಃ ಶ್ರೂಯೇತ ಯೋ ಜೀವನ್ಪರೇಯುಃ ಪಶವೋ ಯಥಾ|

03211028c ಇಷ್ಟಿರಷ್ಟಾಕಪಾಲೇನ ಕರ್ತವ್ಯಾಭಿಮತೇಽಗ್ನಯೇ||

ಅಗ್ನಿಹೋತ್ರವನ್ನು ನಡೆಸುವಾಗ ಯಾರಾದರೂ ಸತ್ತ ವಿಷಯವನ್ನು ಕೇಳಿದರೆ ಅಥವಾ ಪ್ರಾಣಿಯು ಸತ್ತರೆ ಅಷ್ಟಾಕಪಾಲ ಇಷ್ಟಿಯನ್ನು ಮಾಡಿ ಅಭಿಮತ ಅಗ್ನಿಯನ್ನು ಪೂಜಿಸಬೇಕು.

03211029a ಆರ್ತೋ ನ ಜುಹುಯಾದಗ್ನಿಂ ತ್ರಿರಾತ್ರಂ ಯಸ್ತು ಬ್ರಾಹ್ಮಣಃ|

03211029c ಇಷ್ಟಿರಷ್ಟಾಕಪಾಲೇನ ಕಾರ್ಯಾ ಸ್ಯಾದುತ್ತರಾಗ್ನಯೇ||

ಒಂದುವೇಳೆ ಖಾಯಿಲೆಯಲ್ಲಿದ್ದುಕೊಂಡು ಬ್ರಾಹ್ಮಣನು ಮೂರು ರಾತ್ರಿಗಳು ಅಗ್ನಿಕಾರ್ಯವನ್ನು ಮಾಡಲಿಕ್ಕಾಗಲಿಲ್ಲವಾದರೆ ಅಷ್ಟಾಕಪಾಲ ಇಷ್ಟಿಯನ್ನು ಮಾಡಿ ಉತ್ತರಾಗ್ನಿಯನ್ನು ಪೂಜಿಸಬೇಕು.

03211030a ದರ್ಶಂ ಚ ಪೌರ್ಣಮಾಸಂ ಚ ಯಸ್ಯ ತಿಷ್ಠೇತ್ಪ್ರತಿಷ್ಠಿತಂ|

03211030c ಇಷ್ಟಿರಷ್ಟಾಕಪಾಲೇನ ಕಾರ್ಯಾ ಪಥಿಕೃತೇಽಗ್ನಯೇ||

ದರ್ಶ ಮತ್ತು ಪೌರ್ಣಮಾಸಗಳಲ್ಲಿ ಯಜ್ಞವನ್ನು ನಡೆಸುವವನು ಅಷ್ಟಾಕಪಾಲ ಇಷ್ಟಿಯಿಂದ ಪಥಿಕೃತ ಅಗ್ನಿಯನ್ನು ಪೂಜಿಸಬೇಕು.

03211031a ಸೂತಿಕಾಗ್ನಿರ್ಯದಾ ಚಾಗ್ನಿಂ ಸಂಸ್ಪೃಶೇದಗ್ನಿಹೋತ್ರಿಕಂ|

03211031c ಇಷ್ಟಿರಷ್ಟಾಕಪಾಲೇನ ಕಾರ್ಯಾ ಚಾಗ್ನಿಮತೇಽಗ್ನಯೇ||

ಸೂತಿಕಾಗೃಹದಲ್ಲಿರುವ ಅಗ್ನಿಯು ಅಗ್ನಿಹೋತ್ರದೊಂದಿಗೆ ಸೇರಿದರೆ ಅಷ್ಟಾಕಪಾಲ ಇಷ್ಟಿಯಿಂದ ಅಗ್ನಿಮತ ಅಗ್ನಿಯನ್ನು ಪೂಜಿಸಬೇಕು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗಿರಸೋಪಾಖ್ಯಾನೇ ಏಕಾದಶಾಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗಿರಸೋಪಾಖ್ಯಾನದಲ್ಲಿ ಇನ್ನೂರಾಹನ್ನೊಂದನೆಯ ಅಧ್ಯಾಯವು.

Related image

[1]ಚರು-ಪುರೋಡಾಶಾದಿ ದ್ರವ್ಯಗಳಿಂದ ಮಾಡುವ ದರ್ಶ-ಪೂರ್ಣಮಾಸಗಳೇ ಮೊದಲಾದ ಯಾಗಗಳು ಇಷ್ಟಿಗಳು.

Comments are closed.