Aranyaka Parva: Chapter 210

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೨೧೦

ಪಾಂಚಜನ್ಯಾಗ್ನಿಯ ಉತ್ಪತ್ತಿ ಮತ್ತು ಅವನ ಸಂತಾನ ವರ್ಣನೆ (೧-೧೯).

[1]03210001 ಮಾರ್ಕಂಡೇಯ ಉವಾಚ|

03210001a ಕಾಶ್ಯಪೋ ಹ್ಯಥ ವಾಸಿಷ್ಠಃ ಪ್ರಾಣಶ್ಚ ಪ್ರಾಣಪುತ್ರಕಃ|

03210001c ಅಗ್ನಿರಾಂಗಿರಸಶ್ಚೈವ ಚ್ಯವನಸ್ತ್ರಿಷುವರ್ಚಕಃ||

03210002a ಅಚರಂತ ತಪಸ್ತೀವ್ರಂ ಪುತ್ರಾರ್ಥೇ ಬಹುವಾರ್ಷಿಕಂ|

03210002c ಪುತ್ರಂ ಲಭೇಮ ಧರ್ಮಿಷ್ಠಂ ಯಶಸಾ ಬ್ರಹ್ಮಣಾ ಸಮಂ||

ಮಾರ್ಕಂಡೇಯನು ಹೇಳಿದನು: “ಕಾಶ್ಯಪ ವಸಿಷ್ಠ, ಪ್ರಾಣ, ಪ್ರಾಣನ ಪುತ್ರ, ಅಗ್ನಿ ಆಂಗಿರಸ ಮತ್ತು ಚ್ಯವನ ತ್ರಿಷುವರ್ಚಕರು ಪುತ್ರನಿಗೋಸ್ಕರ ನಮಗೆ ಧರ್ಮಿಷ್ಠನೂ ಯಶಸ್ಸಿನಲ್ಲಿ ಬ್ರಹ್ಮನ ಸಮನೂ ಆದ ಮಗನು ದೊರಕಲಿ ಎಂದು ಬಹಳ ವರ್ಷಗಳ ತೀವ್ರ ತಪಸ್ಸನ್ನು ಆಚರಿಸಿದರು.

03210003a ಮಹಾವ್ಯಾಹೃತಿಭಿರ್ಧ್ಯಾತಃ ಪಂಚಭಿಸ್ತೈಸ್ತದಾ ತ್ವಥ|

03210003c ಜಜ್ಞೇ ತೇಜೋಮಯೋಽರ್ಚಿಷ್ಮಾನ್ಪಂಚವರ್ಣಃ ಪ್ರಭಾವನಃ||

ಹೀಗೆ ಧ್ಯಾನಿಸಿ ಆ ಐವರು ಮಹಾ ಆಹುತಿಗಳನ್ನು ನೀಡಲು ಅಲ್ಲಿ ಹೊಳೆಯುತ್ತಿರುವ, ಐದು ಬಣ್ಣಗಳಿಂದ ವಿಜೃಂಭಿಸುವ ತೇಜೋರಾಶಿಯು ಹೊರಹೊಮ್ಮಿತು.

03210004a ಸಮಿದ್ಧೋಽಗ್ನಿಃ ಶಿರಸ್ತಸ್ಯ ಬಾಹೂ ಸೂರ್ಯನಿಭೌ ತಥಾ|

03210004c ತ್ವಂನೇತ್ರೇ ಚ ಸುವರ್ಣಾಭೇ ಕೃಷ್ಣೇ ಜಂಘೇ ಚ ಭಾರತ||

ಭಾರತ! ಚೆನ್ನಾಗಿ ಉರಿಯುತ್ತಿರುವ ಬೆಂಕಿಯು ಅವನ ಶಿರವಾಗಿತ್ತು. ಬಾಹುಗಳು ಸೂರ್ಯನಂತಿದ್ದವು. ಕಣ್ಣುಗಳು ಬಂಗಾರದ ಬಣ್ಣಗಳದ್ದಾಗಿದ್ದವು ಮತ್ತು ಜಂಘವು ಕಪ್ಪಾಗಿತ್ತು.

03210005a ಪಂಚವರ್ಣಃ ಸ ತಪಸಾ ಕೃತಸ್ತೈಃ ಪಂಚಭಿರ್ಜನೈಃ|

03210005c ಪಾಂಚಜನ್ಯಃ ಶ್ರುತೋ ವೇದೇ ಪಂಚವಂಶಕರಸ್ತು ಸಃ||

ಐದು ಬಣ್ಣಗಳ, ಆ ಐದು ಜನರ ತಪಸ್ಸಿನಿಂದ ಮಾಡಲ್ಪಟ್ಟ ಅವನು ವೇದಗಳಲ್ಲಿ ಪಾಂಚಜನ್ಯನೆಂದು ಕರೆಯಲ್ಪಟ್ಟಿದ್ದಾನೆ ಮತ್ತು ಅವನು ಐದು ವಂಶಗಳನ್ನು ಹುಟ್ಟಿಸಿದನು.

03210006a ದಶ ವರ್ಷಸಹಸ್ರಾಣಿ ತಪಸ್ತಪ್ತ್ವಾ ಮಹಾತಪಾಃ|

03210006c ಜನಯತ್ಪಾವಕಂ ಘೋರಂ ಪಿತೄಣಾಂ ಸ ಪ್ರಜಾಃ ಸೃಜನ್||

ಆ ಮಹಾತಪಸ್ವಿಯು ಹತ್ತು ಸಾವಿರ ವರ್ಷಗಳ ತಪಸ್ಸನ್ನು ತಪಿಸಿ ಪಿತೃಗಳ ಘೋರ ಬೆಂಕಿಯನ್ನು ಹುಟ್ಟಿಸಿದನು ಮತ್ತು ಪ್ರಜೆಗಳನ್ನು ಸೃಷ್ಟಿಸಿದನು.

03210007a ಬೃಹದ್ರಥಂತರಂ ಮೂರ್ಧ್ನೋ ವಕ್ತ್ರಾಚ್ಚ ತರಸಾಹರೌ|

03210007c ಶಿವಂ ನಾಭ್ಯಾಂ ಬಲಾದಿಂದ್ರಂ ವಾಯ್ವಗ್ನೀ ಪ್ರಾಣತೋಽಸೃಜತ್||

ನೆತ್ತಿ ಮತ್ತು ಮುಖದಿಂದ ಬೃಹದ್ ಮತ್ತು ರಥಂತರಗಳೆಂಬ ಶೀಘ್ರಹಾರಿಗಳನ್ನು, ಹೊಕ್ಕಳಿನಿಂದ ಶಿವನನ್ನು, ಬಲದಿಂದ ಇಂದ್ರನನ್ನು, ಮತ್ತು ಪ್ರಾಣದಿಂದ ವಾಯು-ಅಗ್ನಿಗಳನ್ನು ಸೃಷ್ಟಿಸಿದನು.

03210008a ಬಾಹುಭ್ಯಾಮನುದಾತ್ತೌ ಚ ವಿಶ್ವೇ ಭೂತಾನಿ ಚೈವ ಹ|

03210008c ಏತಾನ್ಸೃಷ್ಟ್ವಾ ತತಃ ಪಂಚ ಪಿತೄಣಾಮಸೃಜತ್ಸುತಾನ್||

03210009a ಬೃಹದೂರ್ಜಸ್ಯ ಪ್ರಣಿಧಿಃ ಕಾಶ್ಯಪಸ್ಯ ಬೃಹತ್ತರಃ|

03210009c ಭಾನುರಂಗಿರಸೋ ವೀರಃ ಪುತ್ರೋ ವರ್ಚಸ್ಯ ಸೌಭರಃ||

03210010a ಪ್ರಾಣಸ್ಯ ಚಾನುದಾತ್ತಶ್ಚ ವ್ಯಾಖ್ಯಾತಾಃ ಪಂಚ ವಂಶಜಾಃ|

ಎರಡು ಬಾಹುಗಳಿಂದ ವಿಶ್ವೇಭೂತಗಳು ಹುಟ್ಟಿದವು. ಇವುಗಳನ್ನು ಸೃಷ್ಟಿಸಿ ಪಿತೃಗಳ ಐವರು ಮಕ್ಕಳನ್ನು ಹುಟ್ಟಿಸಿದನು. ಬೃಹದೂರ್ಜನಲ್ಲಿ ಪ್ರಣಿಧಿ, ಕಾಶ್ಯಪನಲ್ಲಿ ಬೃಹತ್ತರ, ಅಂಗಿರಸನ ವೀರ ಪುತ್ರ ಭಾನು, ವರ್ಚನ ಸೌಭರ, ಪ್ರಾಣನ ಅನುದತ್ತ ಈ ಐದು ವಂಶಗಳು ಹೇಳಲ್ಪಟ್ಟಿವೆ.

03210010c ದೇವಾನ್ಯಜ್ಞಮುಷಶ್ಚಾನ್ಯಾನ್ಸೃಜನ್ಪಂಚದಶೋತ್ತರಾನ್||

03210011a ಅಭೀಮಮತಿಭೀಮಂ ಚ ಭೀಮಂ ಭೀಮಬಲಾಬಲಂ|

03210011c ಏತಾನ್ಯಜ್ಞಮುಷಃ ಪಂಚ ದೇವಾನಭ್ಯಸೃಜತ್ತಪಃ||

ತಪನು ಯಜ್ಞಗಳನ್ನು ತಡೆಗಟ್ಟುವಂತಹ ಹದಿನೈದು ದೇವತೆಗಳನ್ನು ಸೃಷ್ಟಿಸಿದನು. ಅಭೀಮ, ಅತಿಭೀಮ, ಭೀಮ, ಭೀಮಬಲ ಮತ್ತು ಅಬಲ - ಈ ಐವರು ಯಜ್ಞಗಳನ್ನು ನಿಲ್ಲಿಸುವ ದೇವತೆಗಳು.

03210012a ಸುಮಿತ್ರಂ ಮಿತ್ರವಂತಂ ಚ ಮಿತ್ರಜ್ಞಂ ಮಿತ್ರವರ್ಧನಂ|

03210012c ಮಿತ್ರಧರ್ಮಾಣಮಿತ್ಯೇತಾನ್ದೇವಾನಭ್ಯಸೃಜತ್ತಪಃ||

ಸುಮಿತ್ರ, ಮಿತ್ರವಂತ, ಮಿತ್ರಜ್ಞ, ಮಿತ್ರವರ್ಧನ ಮತ್ತು ಮಿತ್ರಧರ್ಮಾಣ ಇವರು ತಪನು ಸೃಷ್ಟಿಸಿದ ದೇವತೆಗಳು.

03210013a ಸುರಪ್ರವೀರಂ ವೀರಂ ಚ ಸುಕೇಶಂ ಚ ಸುವರ್ಚಸಂ|

03210013c ಸುರಾಣಾಮಪಿ ಹಂತಾರಂ ಪಂಚೈತಾನಸೃಜತ್ತಪಃ||

ಸುರಪ್ರವೀರ, ವೀರ, ಸುಕೇಶ, ಸುವರ್ಚಸ ಮತ್ತು ಸುರಹಂತ್ರಿ ಈ ಐವರು ತಪನಿಂದ ಸೃಷ್ಟಿಸಲ್ಪಟ್ಟವರು.

03210014a ತ್ರಿವಿಧಂ ಸಂಸ್ಥಿತಾ ಹ್ಯೇತೇ ಪಂಚ ಪಂಚ ಪೃಥಕ್ ಪೃಥಕ್|

03210014c ಮುಷ್ಣಂತ್ಯತ್ರ ಸ್ಥಿತಾ ಹ್ಯೇತೇ ಸ್ವರ್ಗತೋ ಯಜ್ಞಯಾಜಿನಃ||

ಇವರು ಪ್ರತ್ಯೇಕ ಪ್ರತ್ಯೇಕವಾಗಿ ಐದೈದರಂತೆ ಮೂರು ವಿಧಗಳಲ್ಲಿ ಇದ್ದಾರೆ. ಅವರು ಇಲ್ಲಿ ಇದ್ದುಕೊಂಡು ಸ್ವರ್ಗದ ಯಜ್ಞಯಾಜಿಗಳನ್ನು ನಾಶಮಾಡುತ್ತಾರೆ.

03210015a ತೇಷಾಮಿಷ್ಟಂ ಹರಂತ್ಯೇತೇ ನಿಘ್ನಂತಿ ಚ ಮಹದ್ಭುವಿ|

03210015c ಸ್ಪರ್ಧಯಾ ಹವ್ಯವಾಹಾನಾಂ ನಿಘ್ನಂತ್ಯೇತೇ ಹರಂತಿ ಚ||

ಅವರು ಭೂಮಿಯಲ್ಲಿ ಇಷ್ಟವನ್ನು ಹರಣಗೊಳಿಸಿ ಮಹಾ ವಿಘ್ನಗಳನ್ನು ತರುತ್ತಾರೆ. ಹವಿಸ್ಸುಗಳನ್ನು ಕೊಂಡೊಯ್ಯುವವರೊಂದಿಗೆ ಸ್ಪರ್ಧಿಸಿ ನಿಲ್ಲಿಸುತ್ತಾರೆ.

03210016a ಹವಿರ್ವೇದ್ಯಾಂ ತದಾದಾನಂ ಕುಶಲೈಃ ಸಂಪ್ರವರ್ತಿತಂ|

03210016c ತದೇತೇ ನೋಪಸರ್ಪಂತಿ ಯತ್ರ ಚಾಗ್ನಿಃ ಸ್ಥಿತೋ ಭವೇತ್||

ಎಲ್ಲಿ ಅಗ್ನಿಯನ್ನು ಸ್ಥಾಪಿಸಿರುತ್ತಾರೋ ಅಲ್ಲಿಗೆ ಅವರು ಹೋಗದಂತೆ ವೇದಗಳಲ್ಲಿ ಕುಶಲರಾದವರು ಅವರಿಗೆ ಹವಿಸ್ಸನ್ನು ಯಜ್ಞವೇದಿಕೆಯ ಹೊರಗೆ ನೀಡುತ್ತಾರೆ.

03210017a ಚಿತೋಽಗ್ನಿರುದ್ವಹನ್ಯಜ್ಞಂ ಪಕ್ಷಾಭ್ಯಾಂ ತಾನ್ಪ್ರಬಾಧತೇ|

03210017c ಮಂತ್ರೈಃ ಪ್ರಶಮಿತಾ ಹ್ಯೇತೇ ನೇಷ್ಟಂ ಮುಷ್ಣಂತಿ ಯಜ್ಞಿಯಂ||

ಅವರು ಯಜ್ಞದ ಅಗ್ನಿಯನ್ನು ತಮ್ಮ ರೆಕ್ಕೆಗಳ ಮೇಲೆ ಒಯ್ಯುತ್ತಾರೆ. ಮಂತ್ರಗಳಿಂದ ಶಾಂತಗೊಂಡರೆ ಅವರು ಯಜ್ಞವನ್ನು ನಿಲ್ಲಿಸುವುದಿಲ್ಲ.

03210018a ಬೃಹದುಕ್ಥತಪಸ್ಯೈವ ಪುತ್ರೋ ಭೂಮಿಮುಪಾಶ್ರಿತಃ|

03210018c ಅಗ್ನಿಹೋತ್ರೇ ಹೂಯಮಾನೇ ಪೃಥಿವ್ಯಾಂ ಸದ್ಭಿರಿಜ್ಯತೇ||

ತಪನ ಇನ್ನೊಬ್ಬ ಮಗ ಬೃಹದುಕ್ತನು ಭೂಮಿಯಲ್ಲಿ ವಾಸಿಸುತ್ತಾನೆ. ಅವನು ಭೂಮಿಯಲ್ಲಿ ಅಗ್ನಿಹೋತ್ರವನ್ನು ಮಾಡುವ ಒಳ್ಳೆಯವರಿಂದ ಪೂಜಿಸಲ್ಪಡುತ್ತಾನೆ.

03210019a ರಥಂತರಶ್ಚ ತಪಸಃ ಪುತ್ರೋಽಗ್ನಿಃ ಪರಿಪಠ್ಯತೇ|

03210019c ಮಿತ್ರವಿಂದಾಯ ವೈ ತಸ್ಯ ಹವಿರಧ್ವರ್ಯವೋ ವಿದುಃ|

03210019e ಮುಮುದೇ ಪರಮಪ್ರೀತಃ ಸಹ ಪುತ್ರೈರ್ಮಹಾಯಶಾಃ||

ರಥಂತರನೆಂದು ಕರೆಯಲ್ಪಡುವ ತಪನ ಪುತ್ರ ಅಗ್ನಿಯು ಮಿತ್ರವಿಂದನಿಗೆ ಹವಿಸ್ಸನ್ನು ಕೊಂಡೊಯ್ಯುತ್ತಾನೆ ಎಂದು ತಿಳಿಯುತ್ತಾರೆ. ತಪನು ತನ್ನ ಮಹಾಯಶಸ್ವಿ ಪುತ್ರರೊಂದಿಗೆ ಪರಮ ಪ್ರೀತನಾಗಿ ಮೋದಿಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗಿರಸೋಪಾಖ್ಯಾನೇ ದಶಾಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗಿರಸೋಪಾಖ್ಯಾನದಲ್ಲಿ ಇನ್ನೂರಾಹತ್ತನೆಯ ಅಧ್ಯಾಯವು.

Related image

[1]ಈ ಅಧ್ಯಾಯದ ಅರ್ಥವಿವರಣೆಯು ಬಹು ಕ್ಲಿಷ್ಟವಾಗಿದ್ದು ಪೂರ್ವ ಮೀಮಾಂಸಾ-ಉತ್ತರ ಮೀಮಾಂಸೆಗಳೆರಡನ್ನೂ ಅವಲಂಬಿಸಿದೆ. ವೇದಗಳಲ್ಲಿರುವ ಅನೇಕಾನೇಕ ಯಾಜ್ಞಿಕ ಪ್ರಯೋಗಗಳನ್ನು ಇಲ್ಲಿ ಶ್ಲೋಕರೂಪದಲ್ಲಿ ಕೊಡಲಾಗಿದೆ. ಇಲ್ಲಿ ಹೇಳಿರುವ ಅಗ್ನಿಗಳು ಶರೀರದಲ್ಲಿಯೂ ಇರುತ್ತವೆ. ಯಜ್ಞಯಾಗಾದಿಗಳಲ್ಲಿಯೂ ಕೂಡ ಈ ಹೆಸರುಗಳಿಂದಲೇ ಆರಾಧಿಸುತ್ತಾರೆ. ಅಂತರ್ವ್ಯಾಪಾರವನ್ನು ಬಹಿರ್ವ್ಯಾಪಾರದ ಮೂಲಕ ಸ್ಮರಣೆಗೆ ತರುವ ಮಹಾವಿದ್ಯೆಯು ಇದಾಗಿರುತ್ತದೆ. ಪ್ರತಿಯೊಂದು ಶ್ಲೋಕಕ್ಕೂ ವೇದ ಮತ್ತು ಶ್ರೌತ-ಸ್ಮಾರ್ತ-ಗೃಹ್ಯಸೂತ್ರಗಳನ್ನು ನಿರೂಪಣೆ ಕೊಟ್ಟು ವ್ಯಾಖ್ಯೆ ಮಾಡಲು ಬಹುವಿಸ್ತರಾವುವುದು [ಭಾರತ ದರ್ಶನ ಪ್ರಕಾಶನ, ಸಂಪುಟ ೭, ಪುಟ ೩೫೦೪].

Comments are closed.