Aranyaka Parva: Chapter 196

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೧೯೬

ಕೌಶಿಕ-ಪತಿವ್ರತೆ

ಉತ್ತಮ ಸ್ತ್ರೀಯರ ಮಹಾತ್ಮೆಯನ್ನು ಹೇಳೆಂದು ಯುಧಿಷ್ಠಿರನು ಕೇಳಲು (೧-೧೩) ಮಾರ್ಕಂಡೇಯನು ಪತಿವ್ರತಾ ಧರ್ಮದ ಕುರಿತು ಹೇಳುವುದು (೧೪-೨೧).

03196001 ವೈಶಂಪಾಯನ ಉವಾಚ|

03196001a ತತೋ ಯುಧಿಷ್ಠಿರೋ ರಾಜಾ ಮಾರ್ಕಂಡೇಯಂ ಮಹಾದ್ಯುತಿಂ|

03196001c ಪಪ್ರಚ್ಚ ಭರತಶ್ರೇಷ್ಠೋ ಧರ್ಮಪ್ರಶ್ನಂ ಸುದುರ್ವಚಂ||

ವೈಶಂಪಾಯನನು ಹೇಳಿದನು: “ಆಗ ಭರತಶ್ರೇಷ್ಠ ರಾಜ ಯುಧಿಷ್ಠಿರನು ಮಹಾದ್ಯುತಿ ಮಾರ್ಕಂಡೇಯನನ್ನು ಒಳ್ಳೆಯ ಮಾತಿನಿಂದ ಧರ್ಮಪ್ರಶ್ನೆಯನ್ನು ಕೇಳಿದನು.

03196002a ಶ್ರೋತುಮಿಚ್ಚಾಮಿ ಭಗವನ್ಸ್ತ್ರೀಣಾಂ ಮಾಹಾತ್ಮ್ಯಮುತ್ತಮಂ|

03196002c ಕಥ್ಯಮಾನಂ ತ್ವಯಾ ವಿಪ್ರ ಸೂಕ್ಷ್ಮಂ ಧರ್ಮಂ ಚ ತತ್ತ್ವತಃ||

“ಭಗವನ್! ವಿಪ್ರ! ನೀನು ಉತ್ತಮ ಸ್ತ್ರೀಯರ ಮಹಾತ್ಮೆಯನ್ನು ಮತ್ತು ಧರ್ಮ ಸೂಕ್ಷವನ್ನು ತತ್ವತವಾಗಿ ಹೇಳುವುದನ್ನು ಕೇಳಬಯಸುತ್ತೇನೆ.

03196003a ಪ್ರತ್ಯಕ್ಷೇಣ ಹಿ ವಿಪ್ರರ್ಷೇ ದೇವಾ ದೃಶ್ಯಂತಿ ಸತ್ತಮ|

03196003c ಸೂರ್ಯಾಚಂದ್ರಮಸೌ ವಾಯುಃ ಪೃಥಿವೀ ವಹ್ನಿರೇವ ಚ||

03196004a ಪಿತಾ ಮಾತಾ ಚ ಭಗವನ್ಗಾವ ಏವ ಚ ಸತ್ತಮ|

03196004c ಯಚ್ಚಾನ್ಯದೇವ ವಿಹಿತಂ ತಚ್ಚಾಪಿ ಭೃಗುನಂದನ||

ಭೃಗುನಂದನ! ವಿಪ್ರರ್ಷೇ! ಸತ್ತಮ! ಭಗವನ್! ದೇವತೆಗಳು, ಸೂರ್ಯ-ಚಂದ್ರರು, ವಾಯು, ಭೂಮಿ, ಅಗ್ನಿ ಮತ್ತು ಮಾತಾಪಿತೃಗಳು, ಗೋವುಗಳು, ಮತ್ತು ದೇವವೆಂದು ವಿಹಿತವಾಗಿರುವ ಎಲ್ಲವನ್ನೂ ನಾವು ಪ್ರತ್ಯಕ್ಷವಾಗಿಯೇ ಕಾಣುತ್ತೇವೆ.

03196005a ಮನ್ಯೇಽಹಂ ಗುರುವತ್ಸರ್ವಮೇಕಪತ್ನ್ಯಸ್ತಥಾ ಸ್ತ್ರಿಯಃ|

03196005c ಪತಿವ್ರತಾನಾಂ ಶುಶ್ರೂಷಾ ದುಷ್ಕರಾ ಪ್ರತಿಭಾತಿ ಮೇ||

ಈ ಎಲ್ಲವನ್ನೂ ನಾನು ಗುರುವೆಂದು ಮನ್ನಿಸುತ್ತೇನೆ. ಹಾಗೆಯೇ ಪತ್ರಿವ್ರತೆಯರಾದ ಸ್ತ್ರೀಯರನ್ನು ಕೂಡ. ಪತಿವ್ರತೆಯರು ಮಾಡುವ ಶುಶ್ರೂಷೆಗಳು ದುಷ್ಕರವೆಂದು ನನಗನ್ನಿಸುತ್ತವೆ.

03196006a ಪತಿವ್ರತಾನಾಂ ಮಾಹಾತ್ಮ್ಯಂ ವಕ್ತುಮರ್ಹಸಿ ನಃ ಪ್ರಭೋ|

03196006c ನಿರುಧ್ಯ ಚೇಂದ್ರಿಯಗ್ರಾಮಂ ಮನಃ ಸಂರುಧ್ಯ ಚಾನಘ||

03196006e ಪತಿಂ ದೈವತವಚ್ಚಾಪಿ ಚಿಂತಯಂತ್ಯಃ ಸ್ಥಿತಾ ಹಿ ಯಾಃ||

ಪ್ರಭೋ! ಸದಾ ಪತಿಯೇ ದೈವವೆಂದು ಯೋಚಿಸುವ, ಇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸನ್ನು ನಿಯಂತ್ರಿಸಿರುವ ಪತಿವ್ರತೆಯರ ಮಹಾತ್ಮೆಯನ್ನು ಹೇಳಬೇಕು.

03196007a ಭಗವನ್ದುಷ್ಕರಂ ಹ್ಯೇತತ್ಪ್ರತಿಭಾತಿ ಮಮ ಪ್ರಭೋ|

03196007c ಮಾತಾಪಿತೃಷು ಶುಶ್ರೂಷಾ ಸ್ತ್ರೀಣಾಂ ಭರ್ತೃಷು ಚ ದ್ವಿಜ||

ಭಗವನ್! ಪ್ರಭೋ! ದ್ವಿಜ! ಸ್ತ್ರೀಯರು ಮಾತಾ-ಪಿತೃಗಳ ಮತ್ತು ಪತಿಯ ಶುಶ್ರೂಷೆ ಮಾಡುವುದು ದುಷ್ಕರವೆಂದು ನನಗನ್ನಿಸುತ್ತದೆ.

03196008a ಸ್ತ್ರೀಣಾಂ ಧರ್ಮಾತ್ಸುಘೋರಾದ್ಧಿ ನಾನ್ಯಂ ಪಶ್ಯಾಮಿ ದುಷ್ಕರಂ|

03196008c ಸಾಧ್ವಾಚಾರಾಃ ಸ್ತ್ರಿಯೋ ಬ್ರಹ್ಮನ್ಯತ್ಕುರ್ವಂತಿ ಸದಾದೃತಾಃ||

03196008e ದುಷ್ಕರಂ ಬತ ಕುರ್ವಂತಿ ಪಿತರೋ ಮಾತರಶ್ಚ ವೈ||

ಬ್ರಹ್ಮನ್! ಸ್ತ್ರೀಯರ ಧರ್ಮಕ್ಕಿಂತ ಘೋರವೂ ದುಷ್ಕರವೂ ಆದ  ಇನ್ನೊಂದನ್ನು ನಾನು ಕಾಣೆ. ಸದಾ ನಿಷ್ಠೆಯಿಂದ ಸದಾಚಾರ ಸ್ತ್ರೀಯರು ಏನನ್ನು ಮಾಡುತ್ತಾರೋ ಅದನ್ನು ತಂದೆ ತಾಯಂದಿರು ದುಷ್ಕರವನ್ನಾಗಿಸುತ್ತಾರೆ.

03196009a ಏಕಪತ್ನ್ಯಶ್ಚ ಯಾ ನಾರ್ಯೋ ಯಾಶ್ಚ ಸತ್ಯಂ ವದಂತ್ಯುತ|

03196009c ಕುಕ್ಷಿಣಾ ದಶ ಮಾಸಾಂಶ್ಚ ಗರ್ಭಂ ಸಂಧಾರಯಂತಿ ಯಾಃ||

03196009e ನಾರ್ಯಃ ಕಾಲೇನ ಸಂಭೂಯ ಕಿಮದ್ಭುತತರಂ ತತಃ||

ಸ್ತ್ರೀಯಾಗಿ ಹುಟ್ಟಿ, ಪತಿವ್ರತೆಯಾಗಿದ್ದು, ಸದಾ ಸತ್ಯವನ್ನೇ ಆಡಿಕೊಂಡು, ಹೊಟ್ಟೆಯಲ್ಲಿ ಹತ್ತು ತಿಂಗಳು ಗರ್ಭವನ್ನು ಧರಿಸುವುದಕ್ಕಿಂತ ಅದ್ಭುತವಾದುದು ಬೇರೆ ಏನಿದೆ?

03196010a ಸಂಶಯಂ ಪರಮಂ ಪ್ರಾಪ್ಯ ವೇದನಾಮತುಲಾಮಪಿ|

03196010c ಪ್ರಜಾಯಂತೇ ಸುತಾನ್ನಾರ್ಯೋ ದುಃಖೇನ ಮಹತಾ ವಿಭೋ||

03196010e ಪುಷ್ಣಂತಿ ಚಾಪಿ ಮಹತಾ ಸ್ನೇಹೇನ ದ್ವಿಜಸತ್ತಮ||

ವಿಭೋ! ದ್ವಿಜಸತ್ತಮ! ಪರಮ ಸಂಶಯವನ್ನು ಹೊಂದಿ, ಅತುಲ ವೇದನೆಯನ್ನನ್ನುಭವಿಸಿ ನಾರಿಯರು ಮಹಾ ದುಃಖದಿಂದ ಮಕ್ಕಳನ್ನು ಹಡೆಯುತ್ತಾರೆ ಮತ್ತು ಮಹಾ ಸ್ನೇಹದಿಂದ ಬೆಳೆಸುತ್ತಾರೆ.

03196011a ಯೇ ಚ ಕ್ರೂರೇಷು ಸರ್ವೇಷು ವರ್ತಮಾನಾ ಜುಗುಪ್ಸಿತಾಃ|

03196011c ಸ್ವಕರ್ಮ ಕುರ್ವಂತಿ ಸದಾ ದುಷ್ಕರಂ ತಚ್ಚ ಮೇ ಮತಂ||

ಹಾಗೆಯೇ ಕ್ರೂರಕರ್ಮಗಳನ್ನು ಮಾಡುವ, ಎಲ್ಲರ ಜಿಗುಪ್ಸೆಗೆ ಪಾತ್ರರಾದವರೂ ಕೂಡ ಸದಾ ದುಷ್ಕರ ಸ್ವಕರ್ಮವನ್ನು ಮಾಡುತ್ತಿರುತ್ತಾರೆ ಎಂದು ನನಗನ್ನಿಸುತ್ತದೆ.

03196012a ಕ್ಷತ್ರಧರ್ಮಸಮಾಚಾರಂ ತಥ್ಯಂ ಚಾಖ್ಯಾಹಿ ಮೇ ದ್ವಿಜ|

03196012c ಧರ್ಮಃ ಸುದುರ್ಲಭೋ ವಿಪ್ರ ನೃಶಂಸೇನ ದುರಾತ್ಮನಾ||

ದ್ವಿಜ! ಕ್ಷತ್ರಧರ್ಮವನ್ನು ಸದಾಚಾರದಲ್ಲಿರಿಸುಕೊಳ್ಳುವುದರ ಸತ್ಯವನ್ನೂ ನನಗೆ ಹೇಳು. ವಿಪ್ರ! ಕ್ರೂರ ಮತ್ತು ದುರಾತ್ಮನು ಧರ್ಮದಲ್ಲಿ ನಡೆದುಕೊಳ್ಳುವುದು ಕಷ್ಟ.

03196013a ಏತದಿಚ್ಚಾಮಿ ಭಗವನ್ಪ್ರಶ್ನಂ ಪ್ರಶ್ನವಿದಾಂ ವರ|

03196013c ಶ್ರೋತುಂ ಭೃಗುಕುಲಶ್ರೇಷ್ಠ ಶುಶ್ರೂಷೇ ತವ ಸುವ್ರತ||

ಪ್ರಶ್ನೆಗಳನ್ನು ತಿಳಿದುಕೊಳ್ಳುವವರಲ್ಲಿ ಶ್ರೇಷ್ಠ! ಭಗವನ್! ಭೃಗುಕುಲಶ್ರೇಷ್ಠ! ಸುವ್ರತ! ಈ ಪ್ರಶ್ನೆಯ ಕುರಿತು ನೀನು ಹೇಳುವುದನ್ನು ಕೇಳಲು ಬಯಸುತ್ತೇನೆ.”

03196014 ಮಾರ್ಕಂಡೇಯ ಉವಾಚ|

03196014a ಹಂತ ತೇ ಸರ್ವಮಾಖ್ಯಾಸ್ಯೇ ಪ್ರಶ್ನಮೇತಂ ಸುದುರ್ವಚಂ|

03196014c ತತ್ತ್ವೇನ ಭರತಶ್ರೇಷ್ಠ ಗದತಸ್ತನ್ನಿಬೋಧ ಮೇ||

ಮಾರ್ಕಂಡೇಯನು ಹೇಳಿದನು: “ಭರತಶ್ರೇಷ್ಠ! ನಿನ್ನ ಈ ಕಷ್ಟದ ಪ್ರಶ್ನೆಯನ್ನು ಉತ್ತರಿಸುತ್ತೇನೆ. ಸತ್ಯವನ್ನು ಹೇಳಿದಂತೆ ನನ್ನನ್ನು ಕೇಳು.

03196015a ಮಾತರಂ ಸದೃಶೀಂ ತಾತ ಪಿತೄನನ್ಯೇ ಚ ಮನ್ಯತೇ|

03196015c ದುಷ್ಕರಂ ಕುರುತೇ ಮಾತಾ ವಿವರ್ಧಯತಿ ಯಾ ಪ್ರಜಾಃ||

ಮಗೂ! ಕೆಲವರು ತಾಯಿಯನ್ನು ಮತ್ತೆ ಕೆಲವರು ತಂದೆಯನ್ನು ಉಚ್ಛರೆಂದು ಪರಿಗಣಿಸುತ್ತಾರೆ. ಆದರೆ ಮಕ್ಕಳನ್ನು ಬೆಳೆಸುವ ದುಷ್ಕರ ಕಾರ್ಯವನ್ನು ತಾಯಂದಿರೇ ಮಾಡುತ್ತಾರೆ.

03196016a ತಪಸಾ ದೇವತೇಜ್ಯಾಭಿರ್ವಂದನೇನ ತಿತಿಕ್ಷಯಾ|

03196016c ಅಭಿಚಾರೈರುಪಾಯೈಶ್ಚ ಈಹಂತೇ ಪಿತರಃ ಸುತಾನ್||

ತಪಸ್ಸಿನ ಮೂಲಕ, ದೇವತೆಗಳನ್ನು ಪೂಜಿಸಿ ವಂದಿಸುವುದರ ಮೂಲಕ, ಧೃಢತೆಯ ಮೂಲಕ, ಅಭಿಚಾರ ಉಪಾಯಗಳ ಮೂಲಕ ತಂದೆಯರು ಪುತ್ರರನ್ನು ಪಡೆಯಲು ಬಯಸುತ್ತಾರೆ.

03196017a ಏವಂ ಕೃಚ್ಚ್ರೇಣ ಮಹತಾ ಪುತ್ರಂ ಪ್ರಾಪ್ಯ ಸುದುರ್ಲಭಂ|

03196017c ಚಿಂತಯಂತಿ ಸದಾ ವೀರ ಕೀದೃಶೋಽಯಂ ಭವಿಷ್ಯತಿ||

ವೀರ! ಈ ರೀತಿ ಮಹಾ ಕಷ್ಟಪಟ್ಟು ದುರ್ಲಭನಾದ ಪುತ್ರನನ್ನು ಪಡೆದು ಇವನು ಏನಾಗುತ್ತಾನೋ ಎಂದು ಸದಾ ಚಿಂತಿಸುತ್ತಿರುತ್ತಾರೆ.

03196018a ಆಶಂಸತೇ ಚ ಪುತ್ರೇಷು ಪಿತಾ ಮಾತಾ ಚ ಭಾರತ|

03196018c ಯಶಃ ಕೀರ್ತಿಮಥೈಶ್ವರ್ಯಂ ಪ್ರಜಾ ಧರ್ಮಂ ತಥೈವ ಚ||

ಭಾರತ! ತಂದೆ-ತಾಯಿಯರು ತಮ್ಮ ಪುತ್ರರು ಯಶಸ್ಸು, ಕೀರ್ತಿ, ಐಶ್ವರ್ಯ ಮತ್ತು ಧರ್ಮದಲ್ಲಿ ಮಕ್ಕಳನ್ನೂ ಪಡೆಯಲೆಂದು ಆಶಿಸುತ್ತಾರೆ.

03196019a ತಯೋರಾಶಾಂ ತು ಸಫಲಾಂ ಯಃ ಕರೋತಿ ಸ ಧರ್ಮವಿತ್|

03196019c ಪಿತಾ ಮಾತಾ ಚ ರಾಜೇಂದ್ರ ತುಷ್ಯತೋ ಯಸ್ಯ ನಿತ್ಯದಾ||

03196019e ಇಹ ಪ್ರೇತ್ಯ ಚ ತಸ್ಯಾಥ ಕೀರ್ತಿರ್ಧರ್ಮಶ್ಚ ಶಾಶ್ವತಃ||

ರಾಜೇಂದ್ರ! ಅವರ ಆಶೆಗಳನ್ನು ಸಫಲಗೊಳಿಸುವವನು ಧರ್ಮವಿದು. ತಂದೆ-ತಾಯಿಯರನ್ನು ನಿತ್ಯವೂ ತೃಪ್ತಿಗೊಳಿಸುವವನು ಇಲ್ಲಿ ಮತ್ತು ಪರದಲ್ಲಿ ಶಾಶ್ವತ ಕೀರ್ತಿ-ಧರ್ಮಗಳನ್ನು ಪಡೆಯುತ್ತಾನೆ.

03196020a ನೈವ ಯಜ್ಞಃ ಸ್ತ್ರಿಯಃ ಕಶ್ಚಿನ್ನ ಶ್ರಾದ್ಧಂ ನೋಪವಾಸಕಂ|

03196020c ಯಾ ತು ಭರ್ತರಿ ಶುಶ್ರೂಷಾ ತಯಾ ಸ್ವರ್ಗಮುಪಾಶ್ನುತೇ||

ಸ್ತ್ರೀಯರಿಗೆ ಯಜ್ಞ, ಶ್ರಾದ್ಧ, ಉಪವಾಸಗಳು ಉಪಯೋಗಕ್ಕೆ ಬರುವವಲ್ಲವು. ಪತಿಯ ಶುಶ್ರೂಷೆ ಮಾಡುವುದರಿಂದ ಅವಳಿಗೆ ಸ್ವರ್ಗವು ದೊರೆಯುತ್ತದೆ.

03196021a ಏತತ್ಪ್ರಕರಣಂ ರಾಜನ್ನಧಿಕೃತ್ಯ ಯುಧಿಷ್ಠಿರ|

03196021c ಪ್ರತಿವ್ರತಾನಾಂ ನಿಯತಂ ಧರ್ಮಂ ಚಾವಹಿತಃ ಶೃಣು||

ರಾಜನ್! ಯುಧಿಷ್ಠಿರ! ಈ ವಿಷಯದಲ್ಲಿ ಪತಿವ್ರತೆಯರ ನಿಯತ ಧರ್ಮವನ್ನು ಗಮನವಿಟ್ಟು ಕೇಳು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಪತಿವ್ರತೋಪಾಖ್ಯಾನೇ ಷಟ್‌ನವತ್ಯಧಿಕಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಪತಿವ್ರತೋಪಾಖ್ಯಾನದಲ್ಲಿ ನೂರಾತೊಂಭತ್ತಾರನೆಯ ಅಧ್ಯಾಯವು.

Related image

Comments are closed.