ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
೧೯೫
ಮಧು-ಕೈಟಭರ ಮಗ ಧುಂಧುವು ಬ್ರಹ್ಮನಿಂದ ವರವನ್ನು ಪಡೆದುದು (೧-೯). ನಾರಾಯಣನ ತೇಜಸ್ಸಿನಿಂದ ಬಲಗೊಂಡ ಕುವಲಾಶ್ವನು ಧುಂಧುವನ್ನು ಸಂಹರಿಸಲು ಹೊರಟಿದುದು (೧೦-೨೧). ಧುಂಧುವನ್ನು ಸಂಹರಿಸಿ ಕುವಲಾಶ್ವನು ಧುಂಧುಮಾರನಾದುದು (೨೨-೩೯).
03195001 ಮಾರ್ಕಂಡೇಯ ಉವಾಚ|
03195001a ಧುಂಧುರ್ನಾಮ ಮಹಾತೇಜಾಸ್ತಯೋಃ ಪುತ್ರೋ ಮಹಾದ್ಯುತಿಃ|
03195001c ಸ ತಪೋಽತಪ್ಯತ ಮಹನ್ಮಹಾವೀರ್ಯಪರಾಕ್ರಮಃ||
ಮಾರ್ಕಂಡೇಯನು ಹೇಳಿದನು: “ಮಹಾಧ್ಯುತಿ ಧುಂಧು ಎಂಬ ಹೆಸರಿನವರ ಆ ಮಹಾತೇಜಸ್ವಿಗಳ ಮಗ. ಆ ಮಹಾವೀರ್ಯಪರಾಕ್ರಮಿಯು ಮಹಾ ತಪಸ್ಸನ್ನು ತಪಿಸಿದನು.
03195002a ಅತಿಷ್ಠದೇಕಪಾದೇನ ಕೃಶೋ ಧಮನಿಸಂತತಃ|
03195002c ತಸ್ಮೈ ಬ್ರಹ್ಮಾ ದದೌ ಪ್ರೀತೋ ವರಂ ವವ್ರೇ ಸ ಚ ಪ್ರಭೋ||
ಧಮನಿಗಳು ಮಾತ್ರ ಕಾಣುವಷ್ಟು ಕೃಶನಾದ ಅವನು ಒಂದೇ ಕಾಲಿನ ಮೇಲೆ ನಿಂತುಕೊಂಡಿದ್ದನು. ಪ್ರೀತನಾಗಿ ಬ್ರಹ್ಮನು ಅವನಿಗೆ ವರವನ್ನು ಕೊಟ್ಟನು. ಆ ಪ್ರಭುವು ಈ ವರವನ್ನು ಬೇಡಿದನು.
03195003a ದೇವದಾನವಯಕ್ಷಾಣಾಂ ಸರ್ಪಗಂಧರ್ವರಕ್ಷಸಾಂ|
03195003c ಅವಧ್ಯೋಽಹಂ ಭವೇಯಂ ವೈ ವರ ಏಷ ವೃತೋ ಮಯಾ||
“ದೇವ, ದಾನವ, ಯಕ್ಷ, ಸರ್ಪ, ಗಂಧರ್ವ, ರಾಕ್ಷಸರಿಗೆ ನಾನು ಅವಧ್ಯನಾಗಲಿ. ಇದೇ ನಾನು ಕೇಳುವ ವರ.”
03195004a ಏವಂ ಭವತು ಗಚ್ಚೇತಿ ತಮುವಾಚ ಪಿತಾಮಹಃ|
03195004c ಸ ಏವಮುಕ್ತಸ್ತತ್ಪಾದೌ ಮೂರ್ಧ್ನಾ ಸ್ಪೃಶ್ಯ ಜಗಾಮ ಹ||
“ಹಾಗೆಯೇ ಆಗುತ್ತದೆ! ಹೋಗು!” ಎಂದು ಪಿತಾಮಹನು ಅವನಿಗೆ ಹೇಳಿದನು. ಇದನ್ನು ಕೇಳಿದ ಅವನು ಅವನ ಪಾದಗಳಿಗೆ ತಲೆಯನ್ನಿರಿಸಿ ಹೋದನು.
03195005a ಸ ತು ಧುಂಧುರ್ವರಂ ಲಬ್ಧ್ವಾ ಮಹಾವೀರ್ಯಪರಾಕ್ರಮಃ|
03195005c ಅನುಸ್ಮರನ್ಪಿತೃವಧಂ ತತೋ ವಿಷ್ಣುಮುಪಾದ್ರವತ್||
ಆ ವರವನ್ನು ಪಡೆದು ಮಹಾವೀರ್ಯಪರಾಕ್ರಮಿ ಧುಂಧುವು ಪಿತೃಗಳ ವಧೆಯನ್ನು ನೆನಪಿಸಿಕೊಂಡು ವಿಷ್ಣುವಿಗೆ ಉಪದ್ರವಿಸಿದನು.
03195006a ಸ ತು ದೇವಾನ್ಸಗಂಧರ್ವಾನ್ಜಿತ್ವಾ ಧುಂಧುರಮರ್ಷಣಃ|
03195006c ಬಬಾಧ ಸರ್ವಾನಸಕೃದ್ದೇವಾನ್ವಿಷ್ಣುಂ ಚ ವೈ ಭೃಶಂ||
ಆ ಅಮರ್ಷಣ ಧುಂಧುವು ದೇವ-ಗಂಧರ್ವರನ್ನು ಜಯಿಸಿ ಎಲ್ಲ ದೇವತೆಗಳನ್ನೂ ವಿಷ್ಣುವನ್ನೂ ಚೆನ್ನಾಗಿ ಬಾಧಿಸಿದನು.
03195007a ಸಮುದ್ರೋ ವಾಲುಕಾಪೂರ್ಣ ಉಜ್ಜಾನಕ ಇತಿ ಸ್ಮೃತಃ|
03195007c ಆಗಮ್ಯ ಚ ಸ ದುಷ್ಟಾತ್ಮಾ ತಂ ದೇಶಂ ಭರತರ್ಷಭ||
ಭರತರ್ಷಭ! ಪ್ರಭೋ! ಉಜ್ಜಾನಕವೆಂದು ಪ್ರಸಿದ್ಧವಾದ ಮರಳಿನ ಸಮುದ್ರಕ್ಕೆ ಹೋಗಿ, ಆ ಪ್ರದೇಶದಲ್ಲಿರುವ ಉತ್ತಂಕನ ಆ ಆಶ್ರಮವನ್ನು ಪರಮ ಶಕ್ತಿಯಿಂದ ಬಾಧಿಸತೊಡಗಿದನು.
03195007e ಬಾಧತೇ ಸ್ಮ ಪರಂ ಶಕ್ತ್ಯಾ ತಮುತ್ತಂಕಾಶ್ರಮಂ ಪ್ರಭೋ||
03195008a ಅಂತರ್ಭೂಮಿಗತಸ್ತತ್ರ ವಾಲುಕಾಂತರ್ಹಿತಸ್ತದಾ|
03195008c ಮಧುಕೈಟಭಯೋಃ ಪುತ್ರೋ ಧುಂಧುರ್ಭೀಮಪರಾಕ್ರಮಃ||
03195009a ಶೇತೇ ಲೋಕವಿನಾಶಾಯ ತಪೋಬಲಸಮಾಶ್ರಿತಃ|
03195009c ಉತ್ತಂಕಸ್ಯಾಶ್ರಮಾಭ್ಯಾಶೇ ನಿಃಶ್ವಸನ್ಪಾವಕಾರ್ಚಿಷಃ||
ಅಲ್ಲಿ ಭೂಮಿಯ ಒಳಗೆ ಹೋಗಿ, ಮರಳಿನಲ್ಲಿ ಭೀಮಪರಾಕ್ರಮಿ, ಮಧು-ಕೈಟಭರ ಪುತ್ರ ಧುಂಧುವು, ತಪೋಬಲವನ್ನಾಶ್ರಯಿಸಿ ಲೋಕವಿನಾಶಕ್ಕಾಗಿ ಉತ್ತಂಕನ ಆಶ್ರಮದ ಬಳಿ ಬೆಂಕಿಯನ್ನು ಉಸಿರಾಡುತ್ತಾ ಮಲಗಿಕೊಂಡಿದ್ದನು.
03195010a ಏತಸ್ಮಿನ್ನೇವ ಕಾಲೇ ತು ಸಭೃತ್ಯಬಲವಾಹನಃ|
03195010c ಕುವಲಾಶ್ವೋ ನರಪತಿರನ್ವಿತೋ ಬಲಶಾಲಿನಾಂ||
03195011a ಸಹಸ್ರೈರೇಕವಿಂಶತ್ಯಾ ಪುತ್ರಾಣಾಮರಿಮರ್ದನಃ|
03195011c ಪ್ರಾಯಾದುತ್ತಂಕಸಹಿತೋ ಧುಂಧೋಸ್ತಸ್ಯ ನಿವೇಶನಂ||
ಇದೇ ಸಮಯದಲ್ಲಿ ನರಪತಿ ಅರಿಮರ್ದನ ಕುವಲಾಶ್ವನು ಸೇವಕ, ಬಲ ವಾಹನಗಳಿಂದ ಕೂಡಿದವನಾಗಿ ಇಪ್ಪತ್ತೊಂದು ಸಾವಿರ ಬಲಶಾಲಿ ಪುತ್ರರೊಂದಿಗೆ ಧುಂಧುವಿನ ವಾಸಸ್ಥಳಕ್ಕೆ ಹೊರಟನು.
03195012a ತಮಾವಿಶತ್ತತೋ ವಿಷ್ಣುರ್ಭಗವಾನ್ ಸ್ತೇಜಸಾ ಪ್ರಭುಃ|
03195012c ಉತ್ತಂಕಸ್ಯ ನಿಯೋಗೇನ ಲೋಕಾನಾಂ ಹಿತಕಾಮ್ಯಯಾ||
ಆಗ ಪ್ರಭು ಭಗವಾನ್ ವಿಷ್ಣುವು ಉತ್ತಂಕನ ನಿಯೋಗದಂತೆ ಲೋಕಗಳ ಹಿತವನ್ನು ಬಯಸಿ ತೇಜಸ್ಸಿನಿಂದ ಅವರಲ್ಲಿ ಆವೇಶಗೊಂಡನು.
03195013a ತಸ್ಮಿನ್ಪ್ರಯಾತೇ ದುರ್ಧರ್ಷೇ ದಿವಿ ಶಬ್ಧೋ ಮಹಾನಭೂತ್|
03195013c ಏಷ ಶ್ರೀಮಾನ್ನೃಪಸುತೋ ಧುಂಧುಮಾರೋ ಭವಿಷ್ಯತಿ||
ಆ ದುರ್ಧರ್ಷರು ಹೊರಡುವಾಗ ದಿವಿಯಲ್ಲಿ ಈ ಶ್ರೀಮಾನ್ ನೃಪಸುತನು ಧುಂಧುಮಾರನಾಗುತ್ತಾನೆ ಎಂದು ಮಹಾ ಶಬ್ಧವುಂಟಾಯಿತು.
03195014a ದಿವ್ಯೈಶ್ಚ ಪುಷ್ಪೈಸ್ತಂ ದೇವಾಃ ಸಮಂತಾತ್ಪರ್ಯವಾಕಿರನ್|
03195014c ದೇವದುಂದುಭಯಶ್ಚೈವ ನೇದುಃ ಸ್ವಯಮುದೀರಿತಾಃ||
ದೇವತೆಗಳು ದಿವ್ಯ ಪುಷ್ಪಗಳನ್ನು ಎಲ್ಲೆಡೆಯೂ ಚೆಲ್ಲಿದರು. ದೇವದುಂದುಭಿಗಳನ್ನೇ ಅವರು ಮೊಳಗಿಸಿದರು.
03195015a ಶೀತಶ್ಚ ವಾಯುಃ ಪ್ರವವೌ ಪ್ರಯಾಣೇ ತಸ್ಯ ಧೀಮತಃ|
03195015c ವಿಪಾಂಸುಲಾಂ ಮಹೀಂ ಕುರ್ವನ್ವವರ್ಷ ಚ ಸುರೇಶ್ವರಃ||
ಆ ಧೀಮಂತನ ಪ್ರಯಾಣದಲ್ಲಿ ಶೀತಲ ಗಾಳಿಯು ಬೀಸಿತು. ಸುರೇಶ್ವರನು ಮಳೆಸುರಿಸಿ ನೆಲವನ್ನು ಧೂಳಿಲ್ಲದಂತೆ ಮಾಡಿದನು.
03195016a ಅಂತರಿಕ್ಷೇ ವಿಮಾನಾನಿ ದೇವತಾನಾಂ ಯುಧಿಷ್ಠಿರ|
03195016c ತತ್ರೈವ ಸಮದೃಶ್ಯಂತ ಧುಂಧುರ್ಯತ್ರ ಮಹಾಸುರಃ||
ಯುಧಿಷ್ಠಿರ! ಮಹಾಸುರ ಧುಂಧುವಿರುವಲ್ಲಿ ಅಂತರಿಕ್ಷದಲ್ಲಿ ದೇವತೆಗಳ ವಿಮಾನಗಳು ಕಂಡುಬಂದವು.
03195017a ಕುವಲಾಶ್ವಸ್ಯ ಧುಂಧೋಶ್ಚ ಯುದ್ಧಕೌತೂಹಲಾನ್ವಿತಾಃ|
03195017c ದೇವಗಂಧರ್ವಸಹಿತಾಃ ಸಮವೈಕ್ಷನ್ಮಹರ್ಷಯಃ||
ಕುವಲಾಶ್ವ ಮತ್ತು ಧುಂಧುವಿನ ಯುದ್ಧವನ್ನು ನೋಡಲು ಕುತೂಹಲಗೊಂಡ ಮಹರ್ಷಿಗಳು ದೇವ-ಗಂಧರ್ವರೊಡನೆ ಸೇರಿದರು.
03195018a ನಾರಾಯಣೇನ ಕೌರವ್ಯ ತೇಜಸಾಪ್ಯಾಯಿತಸ್ತದಾ|
03195018c ಸ ಗತೋ ನೃಪತಿಃ ಕ್ಷಿಪ್ರಂ ಪುತ್ರೈಸ್ತೈಃ ಸರ್ವತೋದಿಶಂ||
ಕೌರವ್ಯ! ನಾರಾಯಣನ ತೇಜಸ್ಸಿನಿಂದ ಬಲಗೊಂಡ ನೃಪತಿಯು ತನ್ನ ಪುತ್ರರೊಂದಿಗೆ ಎಲ್ಲ ದಿಕ್ಕುಗಳಿಂದಲೂ ಕ್ಷಿಪ್ರವಾಗಿ ಮುಂದುವರೆದನು.
03195019a ಅರ್ಣವಂ ಖಾನಯಾಮಾಸ ಕುವಲಾಶ್ವೋ ಮಹೀಪತಿಃ|
03195019c ಕುವಲಾಶ್ವಸ್ಯ ಪುತ್ರೈಸ್ತು ತಸ್ಮಿನ್ವೈ ವಾಲುಕಾರ್ಣವೇ||
03195020a ಸಪ್ತಭಿರ್ದಿವಸೈಃ ಖಾತ್ವಾ ದೃಷ್ಟೋ ಧುಂಧುರ್ಮಹಾಬಲಃ|
ಕುವಲಾಶ್ವನು ಮರಳಿನ ರಾಶಿಯನ್ನು ಅಗೆಯಿಸಿದನು. ಆ ಮರಳಿನ ರಾಶಿಯನ್ನು ಏಳು ದಿವಸಗಳು ಅಗೆದ ನಂತರ ಕುವಲಾಶ್ವನ ಪುತ್ರರು ಮಹಾಬಲಿ ಧುಂಧುವನ್ನು ಕಂಡರು.
03195020c ಆಸೀದ್ಘೋರಂ ವಪುಸ್ತಸ್ಯ ವಾಲುಕಾಂತರ್ಹಿತಂ ಮಹತ್||
03195020e ದೀಪ್ಯಮಾನಂ ಯಥಾ ಸೂರ್ಯಸ್ತೇಜಸಾ ಭರತರ್ಷಭ||
ಮರಳಿನೊಳಗಿದ್ದ ಅವನ ಮಹಾಕಾಯವು ಘೋರವಾಗಿತ್ತು. ಭರತರ್ಷಭ! ಸೂರ್ಯನ ತೇಜಸ್ಸಿನಂತೆ ಬೆಳಗುತ್ತಿತ್ತು.
03195021a ತತೋ ಧುಂಧುರ್ಮಹಾರಾಜ ದಿಶಮಾಶ್ರಿತ್ಯ ಪಶ್ಚಿಮಾಂ|
03195021c ಸುಪ್ತೋಽಭೂದ್ರಾಜಶಾರ್ದೂಲ ಕಾಲಾನಲಸಮದ್ಯುತಿಃ||
ಮಹಾರಾಜ! ರಾಜಶಾರ್ದೂಲ! ಅಲ್ಲಿ ಧುಂಧುವು ಪಶ್ಚಿಮ ದಿಕ್ಕನ್ನು ಮುಚ್ಚಿ ಕಾಲಾನಲನಂತೆ ಬೆಳಗಿ ಮಲಗಿದ್ದನು.
03195022a ಕುವಲಾಶ್ವಸ್ಯ ಪುತ್ರೈಸ್ತು ಸರ್ವತಃ ಪರಿವಾರಿತಃ|
03195022c ಅಭಿದ್ರುತಃ ಶರೈಸ್ತೀಕ್ಷ್ಣೈರ್ಗದಾಭಿರ್ಮುಸಲೈರಪಿ||
03195022e ಪಟ್ಟಿಶೈಃ ಪರಿಘೈಃ ಪ್ರಾಸೈಃ ಖಡ್ಗೈಶ್ಚ ವಿಮಲೈಃ ಶಿತೈಃ||
ಕುವಲಾಶ್ವನ ಪುತ್ರರು ಎಲ್ಲಕಡೆಯಿಂದ ಸುತ್ತುವರೆದು, ತೀಕ್ಷ್ಣ ಶರಗಳಿಂದ, ಗದೆಗಳಿಂದ ಮತ್ತು ಮುಸಲ, ಪಟ್ಟಿಶ, ಪರಿಘ, ಪ್ರಾಸ, ಹರಿತ ವಿಮಲ ಖಡ್ಗಗಳಿಂದ ಅವನನ್ನು ತಿವಿದರು.
03195023a ಸ ವಧ್ಯಮಾನಃ ಸಂಕ್ರುದ್ಧಃ ಸಮುತ್ತಸ್ಥೌ ಮಹಾಬಲಃ|
03195023c ಕ್ರುದ್ಧಶ್ಚಾಭಕ್ಷಯತ್ತೇಷಾಂ ಶಸ್ತ್ರಾಣಿ ವಿವಿಧಾನಿ ಚ||
ಹೀಗೆ ಪೆಟ್ಟು ತಿಂದ ಆ ಮಹಾಬಲನು ಸಂಕ್ರುದ್ದನಾಗಿ ಮೇಲೆದ್ದು ಕೋಪದಿಂದ ವಿವಿಧ ಶಸ್ತ್ರಗಳನ್ನು ಭಕ್ಷಿಸಿದನು.
03195024a ಆಸ್ಯಾದ್ವಮನ್ಪಾವಕಂ ಸ ಸಂವರ್ತಕಸಮಂ ತದಾ|
03195024c ತಾನ್ಸರ್ವಾನ್ನೃಪತೇಃ ಪುತ್ರಾನದಹತ್ಸ್ವೇನ ತೇಜಸಾ||
ಬಾಯಿಯಿಂದ ಸಂವರ್ತಕನ ಸಮನಾದ ಬೆಂಕಿಯನ್ನು ಕಾರುತ್ತಾ, ಅದರ ತೇಜಸ್ಸಿನಿಂದ ಅವನು ನೃಪತಿಯ ಎಲ್ಲ ಮಕ್ಕಳನ್ನೂ ಸುಟ್ಟುಹಾಕಿದನು.
03195025a ಮುಖಜೇನಾಗ್ನಿನಾ ಕ್ರುದ್ಧೋ ಲೋಕಾನುದ್ವರ್ತಯನ್ನಿವ|
03195025c ಕ್ಷಣೇನ ರಾಜಶಾರ್ದೂಲ ಪುರೇವ ಕಪಿಲಃ ಪ್ರಭುಃ||
03195025e ಸಗರಸ್ಯಾತ್ಮಜಾನ್ ಕ್ರುದ್ಧಸ್ತದದ್ಭುತಮಿವಾಭವತ್||
ರಾಜಶಾರ್ದೂಲ! ಮುಖದಿಂದ ಹುಟ್ಟಿದ ಅಗ್ನಿಯಿಂದ ಲೋಕಗಳನ್ನು ಕೊನೆಗೊಳಿಸುವನೋ ಎಂಬಂತೆ ಕೃದ್ಧನಾಗಿ, ಹಿಂದೆ ಪ್ರಭು ಕಪಿಲನು ಕೃದ್ಧನಾಗಿ ಸಗರನ ಮಕ್ಕಳನ್ನು ಸುಟ್ಟಂತೆ, ಕ್ಷಣಾರ್ಧದಲ್ಲಿ ಅವರನ್ನು ಸುಟ್ಟು ಅದ್ಭುತವನ್ನೆಸಗಿದನು.
03195026a ತೇಷು ಕ್ರೋಧಾಗ್ನಿದಗ್ಧೇಷು ತದಾ ಭರತಸತ್ತಮ|
03195026c ತಂ ಪ್ರಬುದ್ಧಂ ಮಹಾತ್ಮಾನಂ ಕುಂಭಕರ್ಣಮಿವಾಪರಂ||
03195026e ಆಸಸಾದ ಮಹಾತೇಜಾಃ ಕುವಲಾಶ್ವೋ ಮಹೀಪತಿಃ||
ಭರತಸತ್ತಮ! ಅವರು ಕ್ರೋಧಾಗ್ನಿಯಲ್ಲಿ ಸುಟ್ಟುಹೋಗಲು, ಮಹಾತೇಜಸ್ವಿ ಮಹೀಪತಿ ಕುವಲಾಶ್ವನು ಕುಂಭಕರ್ಣನಂತೆ ಬೆಳೆದಿದ್ದ ಆ ಮಹಾತ್ಮನನ್ನು ಎದುರಿಸಿದನು.
03195027a ತಸ್ಯ ವಾರಿ ಮಹಾರಾಜ ಸುಸ್ರಾವ ಬಹು ದೇಹತಃ|
03195027c ತದಾಪೀಯತ ತತ್ತೇಜೋ ರಾಜಾ ವಾರಿಮಯಂ ನೃಪ||
03195027e ಯೋಗೀ ಯೋಗೇನ ವಹ್ನಿಂ ಚ ಶಮಯಾಮಾಸ ವಾರಿಣಾ||
ಮಹಾರಾಜ! ಅವನ ದೇಹದಿಂದ ಬಹಳಷ್ಟು ನೀರು ಹರಿಯಿತು. ರಾಜ ನೃಪನಿಂದ ಹರಿದ ಆ ನೀರಿನ ರಾಶಿಯು ಆ ತೇಜಸ್ಸನ್ನು ಕುಡಿಯಿತು. ಆ ಯೋಗಿಯು ಯೋಗದ ನೀರಿನಿಂದ ಆ ಬೆಂಕಿಯನ್ನು ಆರಿಸಿದನು.
03195028a ಬ್ರಹ್ಮಾಸ್ತ್ರೇಣ ತದಾ ರಾಜಾ ದೈತ್ಯಂ ಕ್ರೂರಪರಾಕ್ರಮಂ|
03195028c ದದಾಹ ಭರತಶ್ರೇಷ್ಠ ಸರ್ವಲೋಕಾಭಯಾಯ ವೈ||
ಭರತಶ್ರೇಷ್ಠ! ಆಗ ರಾಜನು ಸರ್ವಲೋಕಭಯವನ್ನು ನಿವಾರಿಸಲು ಬ್ರಹ್ಮಾಸ್ತ್ರದಿಂದ ಆ ಕ್ರೂರಪರಾಕ್ರಮಿ ದೈತ್ಯನನ್ನು ಸುಟ್ಟುಹಾಕಿದನು.
03195029a ಸೋಽಸ್ತ್ರೇಣ ದಗ್ಧ್ವಾ ರಾಜರ್ಷಿಃ ಕುವಲಾಶ್ವೋ ಮಹಾಸುರಂ|
03195029c ಸುರಶತ್ರುಮಮಿತ್ರಘ್ನಸ್ತ್ರಿಲೋಕೇಶ ಇವಾಪರಃ||
03195029e ಧುಂಧುಮಾರ ಇತಿ ಖ್ಯಾತೋ ನಾಮ್ನಾ ಸಮಭವತ್ತತಃ||
ಆ ಸುರಶತ್ರು, ಅಮಿತ್ರಘ್ನ, ಇನ್ನೊಬ್ಬ ತ್ರಿಲೋಕೇಶನಂತಿರುವ ಮಹಾಸುರನನ್ನು ಅಸ್ತ್ರದಿಂದ ಸುಟ್ಟಿದುದರಿಂದ ರಾಜರ್ಷಿ ಕುವಲಾಶ್ವನು ಧುಂಧುಮಾರ ಎಂಬ ಹೆಸರಿನಿಂದ ಖ್ಯಾತನಾದನು.
03195030a ಪ್ರೀತೈಶ್ಚ ತ್ರಿದಶೈಃ ಸರ್ವೈರ್ಮಹರ್ಷಿಸಹಿತೈಸ್ತದಾ|
03195030c ವರಂ ವೃಣೀಷ್ವೇತ್ಯುಕ್ತಃ ಸ ಪ್ರಾಂಜಲಿಃ ಪ್ರಣತಸ್ತದಾ||
03195030e ಅತೀವ ಮುದಿತೋ ರಾಜನ್ನಿದಂ ವಚನಮಬ್ರವೀತ್||
ಮುದಿತರಾಗಿ ಸರ್ವ ಮಹರ್ಷಿಗಳ ಸಹಿತ ತ್ರಿದಶರು ಅವನಿಗೆ ವರವನ್ನು ಕೇಳಿಕೋ ಎಂದು ಹೇಳಿದರು. ಆಗ ಅತೀವ ಮುದಿತನಾದ ರಾಜನು ಅಂಜಲೀಬದ್ದನಾಗಿ ಹೇಳಿದನು:
03195031a ದದ್ಯಾಂ ವಿತ್ತಂ ದ್ವಿಜಾಗ್ರ್ಯೇಭ್ಯಃ ಶತ್ರೂಣಾಂ ಚಾಪಿ ದುರ್ಜಯಃ|
03195031c ಸಖ್ಯಂ ಚ ವಿಷ್ಣುನಾ ಮೇ ಸ್ಯಾದ್ಭೂತೇಷ್ವದ್ರೋಹ ಏವ ಚ||
03195031e ಧರ್ಮೇ ರತಿಶ್ಚ ಸತತಂ ಸ್ವರ್ಗೇ ವಾಸಸ್ತಥಾಕ್ಷಯಃ||
“ನಾನು ದ್ವಿಜಾಗ್ರರಿಗೆ ವಿತ್ತವನ್ನು ಕೊಡುವಂಥವನಾಗಲಿ, ಶತ್ರುಗಳಿಗೆ ದುರ್ಜಯನಾಗಲಿ, ವಿಷ್ಣುವಿನೊಂದಿಗೆ ನನ್ನ ಸಖ್ಯವು ಇರಲಿ, ಭೂತಗಳಿಗೆ ಏನೂ ದ್ರೋಹವನ್ನೆಸಗದೇ ಇರಲಿ. ಸತತವೂ ಧರ್ಮದಲ್ಲಿ ಸಂತೋಷಹೊಂದುವವನಾಗಲಿ, ಮತ್ತು ಸ್ವರ್ಗವಾಸವು ಅಕ್ಷಯವಾಗಲಿ.”
03195032a ತಥಾಸ್ತ್ವಿತಿ ತತೋ ದೇವೈಃ ಪ್ರೀತೈರುಕ್ತಃ ಸ ಪಾರ್ಥಿವಃ|
03195032c ಋಷಿಭಿಶ್ಚ ಸಗಂಧರ್ವೈರುತ್ತಂಕೇನ ಚ ಧೀಮತಾ||
“ಹಾಗೆಯೇ ಆಗಲಿ” ಎಂದು ದೇವತೆಗಳು, ಋಷಿಗಳು, ಗಂಧರ್ವರು ಮತ್ತು ಧೀಮತ ಉತ್ತಂಕನೂ ಸೇರಿ, ಪ್ರೀತಿಯಿಂದ ರಾಜನಿಗೆ ಉತ್ತರಿಸಿದರು.
03195033a ಸಭಾಜ್ಯ ಚೈನಂ ವಿವಿಧೈರಾಶೀರ್ವಾದೈಸ್ತತೋ ನೃಪಂ|
03195033c ದೇವಾ ಮಹರ್ಷಯಶ್ಚೈವ ಸ್ವಾನಿ ಸ್ಥಾನಾನಿ ಭೇಜಿರೇ||
ರಾಜನಿಗೆ ವಿವಿಧ ಆಶೀರ್ವಾದಗಳನ್ನಿತ್ತು ದೇವತೆಗಳೂ ಮಹರ್ಷಿಗಳೂ ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು.
03195034a ತಸ್ಯ ಪುತ್ರಾಸ್ತ್ರಯಃ ಶಿಷ್ಟಾ ಯುಧಿಷ್ಠಿರ ತದಾಭವನ್|
03195034c ದೃಢಾಶ್ವಃ ಕಪಿಲಾಶ್ವಶ್ಚ ಚಂದ್ರಾಶ್ವಶ್ಚೈವ ಭಾರತ||
03195034e ತೇಭ್ಯಃ ಪರಂಪರಾ ರಾಜನ್ನಿಕ್ಷ್ವಾಕೂಣಾಂ ಮಹಾತ್ಮನಾಂ||
ಯುಧಿಷ್ಠಿರ! ಭಾರತ! ರಾಜನ್! ಅವನಿಗೆ ಮೂವರು ಶಿಷ್ಠರಾದ ಪುತ್ರರಾದರು - ದೃಢಾಶ್ವ, ಕಪಿಲಾಶ್ವ ಮತ್ತು ಚಂದ್ರಾಶ್ವ. ಅವರಿಂದ ಮಹಾತ್ಮ ಇಕ್ಷ್ವಾಕುಗಳ ಪರಂಪರೆಯು ಮುಂದುವರೆಯಿತು.
03195035a ಏವಂ ಸ ನಿಹತಸ್ತೇನ ಕುವಲಾಶ್ವೇನ ಸತ್ತಮ|
03195035c ಧುಂಧುರ್ದೈತ್ಯೋ ಮಹಾವೀರ್ಯೋ ಮಧುಕೈಟಭಯೋಃ ಸುತಃ||
ಹೀಗೆ ಆ ಮಧು-ಕೈಟಭರ ಮಗ ಮಹಾವೀರ್ಯ ದೈತ್ಯ ಧುಂಧುವು ಸತ್ತಮ ಕುವಲಾಶ್ವನಿಂದ ಹತನಾದನು.
03195036a ಕುವಲಾಶ್ವಸ್ತು ನೃಪತಿರ್ಧುಂಧುಮಾರ ಇತಿ ಸ್ಮೃತಃ|
03195036c ನಾಮ್ನಾ ಚ ಗುಣಸಮ್ಯುಕ್ತಸ್ತದಾ ಪ್ರಭೃತಿ ಸೋಽಭವತ್||
ಅಂದಿನಿಂದ ಗುಣಸಂಯುಕ್ತ ನೃಪತಿ ಕುವಲಾಶ್ವನಾದರೋ ಧುಂಧುಮಾರನೆಂಬ ಹೆಸರಿನಿಂದ ಪ್ರಸಿದ್ಧನಾದನು.
03195037a ಏತತ್ತೇ ಸರ್ವಮಾಖ್ಯಾತಂ ಯನ್ಮಾಂ ತ್ವಂ ಪರಿಪೃಚ್ಚಸಿ|
03195037c ಧೌಂಧುಮಾರಮುಪಾಖ್ಯಾನಂ ಪ್ರಥಿತಂ ಯಸ್ಯ ಕರ್ಮಣಾ||
ಹೀಗೆ ನೀನು ಕೇಳಿದ ಯಾರ ಕರ್ಮದಿಂದ ಪ್ರಥಿತವಾಗಿದೆಯೋ ಆ ಧುಂಧುಮಾರನ ಉಪಾಖ್ಯಾನವನ್ನು ನಿನಗೆ ಹೇಳಿದ್ದೇನೆ.
03195038a ಇದಂ ತು ಪುಣ್ಯಮಾಖ್ಯಾನಂ ವಿಷ್ಣೋಃ ಸಮನುಕೀರ್ತನಂ|
03195038c ಶೃಣುಯಾದ್ಯಃ ಸ ಧರ್ಮಾತ್ಮಾ ಪುತ್ರವಾಂಶ್ಚ ಭವೇನ್ನರಃ||
ಯಾರು, ವಿಷ್ಣುವಿನ ಕೀರ್ತನೆಯಿರುವ, ಈ ಪುಣ್ಯಕಥೆಯನ್ನು ಕೇಳುತ್ತಾರೋ ಆ ನರನು ಧರ್ಮಾತ್ಮನೂ ಪುತ್ರವಂತನೂ ಆಗುತ್ತಾನೆ.
03195039a ಆಯುಷ್ಮಾನ್ಧೃತಿಮಾಂಶ್ಚೈವ ಶ್ರುತ್ವಾ ಭವತಿ ಪರ್ವಸು|
03195039c ನ ಚ ವ್ಯಾಧಿಭಯಂ ಕಿಂ ಚಿತ್ಪ್ರಾಪ್ನೋತಿ ವಿಗತಜ್ವರಃ||
ಪರ್ವಗಳಲ್ಲಿ ಕೇಳುವವನು ಧೃತಿವಂತನೂ ಆಯುಷ್ಮಂತನೂ ಆಗುತ್ತಾನೆ. ವ್ಯಾಧಿಭಯ ಯಾವುದನ್ನೂ ಹೊಂದದೇ ವಿಗತಜ್ವರನಾಗುತ್ತಾನೆ.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಧುಂಧುಮಾರೋಪಾಖ್ಯಾನೇ ಪಂಚನವತ್ಯಧಿಕಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಧುಂಧುಮಾರೋಪಾಖ್ಯಾನದಲ್ಲಿ ನೂರಾತೊಂಭತ್ತೈದನೆಯ ಅಧ್ಯಾಯವು.