ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
೧೮೪
ಸರಸ್ವತೀ ಗೀತೆ
ತಾರ್ಕ್ಷ್ಯನಿಗೆ ಸರಸ್ವತಿಯು ಹೇಳಿದ ಗೀತೆ (೧-೨೫).
03184001a ಅತ್ರೈವ ಚ ಸರಸ್ವತ್ಯಾ ಗೀತಂ ಪರಪುರಂಜಯ|
03184001c ಪೃಷ್ಟಯಾ ಮುನಿನಾ ವೀರ ಶೃಣು ತಾರ್ಕ್ಷ್ಯೇಣ ಧೀಮತಾ||
ಮಾರ್ಕಂಡೇಯನು ಹೇಳಿದನು: “ಪರಪುರಂಜಯ! ವೀರ! ಅಲ್ಲಿಯೇ ಧೀಮಂತ ತಾರ್ಕ್ಷ್ಯ ಮುನಿಯು ಈ ವಿಷಯದ ಕುರಿತು ಕೇಳಿಕೊಂಡಾಗ ಸರಸ್ವತಿಯು ಹೇಳಿದ ಗೀತೆಯಿದೆ.
03184002 ತಾರ್ಕ್ಷ್ಯ ಉವಾಚ|
03184002a ಕಿಂ ನು ಶ್ರೇಯಃ ಪುರುಷಸ್ಯೇಹ ಭದ್ರೇ|
ಕಥಂ ಕುರ್ವನ್ನ ಚ್ಯವತೇ ಸ್ವಧರ್ಮಾತ್|
03184002c ಆಚಕ್ಷ್ವ ಮೇ ಚಾರುಸರ್ವಾಂಗಿ ಸರ್ವಂ|
ತ್ವಯಾನುಶಿಷ್ಟೋ ನ ಚ್ಯವೇಯಂ ಸ್ವಧರ್ಮಾತ್||
ತಾರ್ಕ್ಷ್ಯನು ಹೇಳಿದನು: “ಭದ್ರೇ! ಇಲ್ಲಿ ಪುರುಷರಿಗೆ ಯಾವುದು ಶ್ರೇಯಸ್ಸು? ಸ್ವಧರ್ಮದಿಂದ ಚ್ಯುತಿಹೊಂದದಿರಲು ಏನನ್ನು ಮಾಡಬೇಕು? ಚಾರುಸರ್ವಾಂಗೀ! ನನಗೆ ಎಲ್ಲವನ್ನೂ ಹೇಳು. ನಿನ್ನಿಂದ ಉಪದೇಶಿಸಲ್ಪಟ್ಟ ನಾನು ಸ್ವಧರ್ಮದಿಂದ ಚ್ಯುತನಾಗುವುದಿಲ್ಲ.
03184003a ಕಥಂ ಚಾಗ್ನಿಂ ಜುಹುಯಾಂ ಪೂಜಯೇ ವಾ|
ಕಸ್ಮಿನ್ಕಾಲೇ ಕೇನ ಧರ್ಮೋ ನ ನಶ್ಯೇತ್|
03184003c ಏತತ್ಸರ್ವಂ ಸುಭಗೇ ಪ್ರಬ್ರವೀಹಿ|
ಯಥಾ ಲೋಕಾನ್ವಿರಜಾಃ ಸಂಚರೇಯಂ||
ಧರ್ಮವು ನಷ್ಟವಾಗದ ರೀತಿಯಲ್ಲಿ ಹೇಗೆ ಮತ್ತು ಯಾವಾಗ ಅಗ್ನಿಯನ್ನು ಪೂಜಿಸಬೇಕು ಮತ್ತು ಅವನಲ್ಲಿ ಆಹುತಿಯನ್ನು ನೀಡಬೇಕು? ಸುಭಗೇ! ಇವೆಲ್ಲವನ್ನೂ ಹೇಳು. ಇದರಿಂದ ನಾನು ಲೋಕಗಳಲ್ಲಿ ವಿರಜನಾಗಿ ಸಂಚರಿಸಬಲ್ಲೆ.””
03184004 ಮಾರ್ಕಂಡೇಯ ಉವಾಚ|
03184004a ಏವಂ ಪೃಷ್ಟಾ ಪ್ರೀತಿಯುಕ್ತೇನ ತೇನ|
ಶುಶ್ರೂಷುಮೀಕ್ಷ್ಯೋತ್ತಮಬುದ್ಧಿಯುಕ್ತಂ|
03184004c ತಾರ್ಕ್ಷ್ಯಂ ವಿಪ್ರಂ ಧರ್ಮಯುಕ್ತಂ ಹಿತಂ ಚ|
ಸರಸ್ವತೀ ವಾಕ್ಯಮಿದಂ ಬಭಾಷೇ||
ಮಾರ್ಕಂಡೇಯನು ಹೇಳಿದನು: “ಪ್ರೀತಿಯುಕ್ತನಾದ ಅವನು ಹೀಗೆ ಕೇಳಲು ಅವನ ಉತ್ತಮ ಬುದ್ಧಿಯನ್ನು ಬೆಳೆಸುವ ಇಚ್ಛೆಯಿಂದ ಆ ಧರ್ಮಯುಕ್ತ ಮತ್ತು ಹಿತನಾದ ವಿಪ್ರ ತಾರ್ಕ್ಷ್ಯನಿಗೆ ಸರಸ್ವತಿಯು ಈ ಮಾತುಗಳನ್ನಾಡಿದಳು.”
03184005 ಸರಸ್ವತ್ಯುವಾಚ|
03184005a ಯೋ ಬ್ರಹ್ಮ ಜಾನಾತಿ ಯಥಾಪ್ರದೇಶಂ|
ಸ್ವಾಧ್ಯಾಯನಿತ್ಯಃ ಶುಚಿರಪ್ರಮತ್ತಃ|
03184005c ಸ ವೈ ಪುರೋ ದೇವಪುರಸ್ಯ ಗಂತಾ|
ಸಹಾಮರೈಃ ಪ್ರಾಪ್ನುಯಾತ್ಪ್ರೀತಿಯೋಗಂ||
ಸರಸ್ವತಿಯು ಹೇಳಿದಳು: “ಪ್ರದೇಶವನ್ನು ಹೇಗೋ ಹಾಗೆ ಬ್ರಹ್ಮನನ್ನು ಯಾರು ತಿಳಿದಿರುವನೋ, ನಿತ್ಯವೂ ಸ್ವಾಧ್ಯಾಯದಲ್ಲಿದ್ದು, ಶುಚಿಯೂ ಅಪ್ರಮತ್ತನೂ ಆಗಿರುತ್ತಾನೋ ಅವನೇ ದೇವಪುರದ ಪುರಕ್ಕೆ ಹೋಗುತ್ತಾನೆ ಮತ್ತು ಅಲ್ಲಿ ಅಮರರೊಂದಿಗೆ ಪ್ರೀತಿಯೋಗವನ್ನು ಪಡೆಯುತ್ತಾನೆ.
03184006a ತತ್ರ ಸ್ಮ ರಮ್ಯಾ ವಿಪುಲಾ ವಿಶೋಕಾಃ|
ಸುಪುಷ್ಪಿತಾಃ ಪುಷ್ಕರಿಣ್ಯಃ ಸುಪುಣ್ಯಾಃ|
03184006c ಅಕರ್ದಮಾ ಮೀನವತ್ಯಃ ಸುತೀರ್ಥಾ|
ಹಿರಣ್ಮಯೈರಾವೃತಾಃ ಪುಂಡರೀಕೈಃ||
ಅಲ್ಲಿ ವಿಶಾಲವಾದ ವಿಶೋಕವಾದ ರಮ್ಯ ಪುಷ್ಪಭರಿತ ಸುಪುಣ್ಯ ಪುಷ್ಕರಿಣಿಗಳಿವೆ. ಕೆಸರಿಲ್ಲದ ಮೀನುಗಳನ್ನು ಹೊಂದಿದ, ಹಿರಣ್ಮಯ ಪುಂಡರೀಕಗಳಿಂದ ಆವೃತವಾದ ಪುಣ್ಯತೀರ್ಥಗಳಿವೆ.
03184007a ತಾಸಾಂ ತೀರೇಷ್ವಾಸತೇ ಪುಣ್ಯಕರ್ಮಾ|
ಮಹೀಯಮಾನಃ ಪೃಥಗಪ್ಸರೋಭಿಃ|
03184007c ಸುಪುಣ್ಯಗಂಧಾಭಿರಲಂಕೃತಾಭಿರ್|
ಹಿರಣ್ಯವರ್ಣಾಭಿರತೀವ ಹೃಷ್ಟಃ||
ಅವುಗಳ ತೀರದಲ್ಲಿ ಪುಣ್ಯಕರ್ಮಿಯು ಸುಪುಣ್ಯ ಗಂಧ ಮತ್ತು ಅಲಂಕಾರಗಳಿಂದ ಶೋಭಿತ, ಮತ್ತು ಬಂಗಾರದ ಮೈಬಣ್ಣವುಳ್ಳ ಅಪ್ಸರೆಯರಿಂದ ಗೌರವಿಸಿಕೊಂಡು ವಾಸಿಸುತ್ತಾನೆ.
03184008a ಪರಂ ಲೋಕಂ ಗೋಪ್ರದಾಸ್ತ್ವಾಪ್ನುವಂತಿ|
ದತ್ತ್ವಾನಡ್ವಾಹಂ ಸೂರ್ಯಲೋಕಂ ವ್ರಜಂತಿ|
03184008c ವಾಸೋ ದತ್ತ್ವಾ ಚಂದ್ರಮಸಃ ಸ ಲೋಕಂ|
ದತ್ತ್ವಾ ಹಿರಣ್ಯಮಮೃತತ್ವಮೇತಿ||
ಗೋವುಗಳನ್ನು ದಾನವಾಗಿತ್ತವರು ಪರಮ ಲೋಕವನ್ನು ಪಡೆಯುತ್ತಾರೆ. ಹೋರಿಯನ್ನು ದಾನವನ್ನಾಗಿತ್ತವರು ಸೋರ್ಯಲೋಕವನ್ನು ಪಡೆಯುತ್ತಾರೆ. ಮನೆಗಳನ್ನು ದಾನವನ್ನಾಗಿತ್ತವರು ಚಂದ್ರಲೋಕಕ್ಕೆ ಹೋಗುತ್ತಾರೆ. ಬಂಗಾರವನ್ನು ದಾನವನ್ನಾಗಿತ್ತವರು ಅಮೃತತ್ವವನ್ನು ಪಡೆಯುತ್ತಾರೆ.
03184009a ಧೇನುಂ ದತ್ತ್ವಾ ಸುವ್ರತಾಂ ಸಾಧುದೋಹಾಂ|
ಕಲ್ಯಾಣವತ್ಸಾಮಪಲಾಯಿನೀಂ ಚ|
03184009c ಯಾವಂತಿ ರೋಮಾಣಿ ಭವಂತಿ ತಸ್ಯಾಸ್|
ತಾವದ್ವರ್ಷಾಣ್ಯಶ್ನುತೇ ಸ್ವರ್ಗಲೋಕಂ||
ಸುವ್ರತ, ಚೆನ್ನಾಗಿ ಹಾಲುಕೊಡುವ, ಕಲ್ಯಾಣ ಕರುವಿದ್ದ, ಬಿಟ್ಟು ಹೋಗದೇ ಇರುವ ಧೇನುವನ್ನು ದಾನವನ್ನಾಗಿತ್ತವನು ಅದರಲ್ಲಿ ರೋಮಗಳು ಎಷ್ಟಿವೆಯೋ ಅಷ್ಟು ವರ್ಷಗಳ ಪರ್ಯಂತ ಸ್ವರ್ಗಲೋಕವನ್ನು ಸುಖಿಸುತ್ತಾನೆ.
03184010a ಅನಡ್ವಾಹಂ ಸುವ್ರತಂ ಯೋ ದದಾತಿ|
ಹಲಸ್ಯ ವೋಢಾರಮನಂತವೀರ್ಯಂ|
03184010c ಧುರಂಧರಂ ಬಲವಂತಂ ಯುವಾನಂ|
ಪ್ರಾಪ್ನೋತಿ ಲೋಕಾನ್ದಶ ಧೇನುದಸ್ಯ||
ಯಾರು ಸುವ್ರತವೂ, ನೇಗಿಲನ್ನು ಎಳೆಯುವಂಥಹ, ಅನಂತವೀರ್ಯವುಳ್ಳ, ಧುರಂಧರ, ಬಲವಂತ, ಯುವ ಹೋರಿಯನ್ನು ದಾನವನ್ನಾಗಿ ಕೊಡುತ್ತಾನೋ ಅವನು ಗೋವನ್ನು ಕೊಟ್ಟವನಿಗಿಂತ ಹತ್ತುಪಟ್ಟು ಲೋಕಗಳನ್ನು ಪಡೆಯುತ್ತಾನೆ.
03184011a ಯಃ ಸಪ್ತ ವರ್ಷಾಣಿ ಜುಹೋತಿ ತಾರ್ಕ್ಷ್ಯ|
ಹವ್ಯಂ ತ್ವಗ್ನೌ ಸುವ್ರತಃ ಸಾಧುಶೀಲಃ|
03184011c ಸಪ್ತಾವರಾನ್ಸಪ್ತ ಪೂರ್ವಾನ್ಪುನಾತಿ|
ಪಿತಾಮಹಾನಾತ್ಮನಃ ಕರ್ಮಭಿಃ ಸ್ವೈಃ||
ತಾರ್ಕ್ಷ್ಯ! ಏಳು ವರ್ಷಗಳು ಅಗ್ನಿಯಲ್ಲಿ ಹವ್ಯವನ್ನಿಡುವವನು, ಸುವ್ರತನು, ಸಾಧುಶೀಲನು ತನ್ನ ಹಿಂದಿನ ಏಳು ಪಿತಾಮಹರನ್ನು ಮತ್ತು ಮುಂದಿನ ಏಳು ಪೀಳಿಗೆಗಳನ್ನು ತನ್ನ ಸ್ವಕರ್ಮಗಳಿಂದ ಪುನೀತಗೊಳಿಸುತ್ತಾನೆ.”
03184012 ತಾರ್ಕ್ಷ್ಯ ಉವಾಚ|
03184012a ಕಿಮಗ್ನಿಹೋತ್ರಸ್ಯ ವ್ರತಂ ಪುರಾಣಂ|
ಆಚಕ್ಷ್ವ ಮೇ ಪೃಚ್ಚತಶ್ಚಾರುರೂಪೇ|
03184012c ತ್ವಯಾನುಶಿಷ್ಟೋಽಹಮಿಹಾದ್ಯ ವಿದ್ಯಾಂ|
ಯದಗ್ನಿಹೋತ್ರಸ್ಯ ವ್ರತಂ ಪುರಾಣಂ||
ತಾರ್ಕ್ಷ್ಯನು ಹೇಳಿದನು: “ಚಾರುರೂಪೇ! ಪುರಾಣವ್ರತವಾದ ಅಗ್ನಿಹೋತ್ರವು ಏನೆಂದು ಕೇಳುವ ನನಗೆ ಹೇಳು. ನಿನ್ನಿಂದ ಉಪದೇಶಿಸಲ್ಪಟ್ಟ ನಾನು ಪುರಾಣವ್ರತ ಅಗ್ನಿಹೋತ್ರವೇನೆಂದು ತಿಳಿದುಕೊಳ್ಳುತ್ತೇನೆ.”
03184013 ಸರಸ್ವತ್ಯುವಾಚ|
03184013a ನ ಚಾಶುಚಿರ್ನಾಪ್ಯನಿರ್ಣಿಕ್ತಪಾಣಿರ್|
ನಾಬ್ರಹ್ಮವಿಜ್ಜುಹುಯಾನ್ನಾವಿಪಶ್ಚಿತ್|
03184013c ಬುಭುಕ್ಷವಃ ಶುಚಿಕಾಮಾ ಹಿ ದೇವಾ|
ನಾಶ್ರದ್ದಧಾನಾದ್ಧಿ ಹವಿರ್ಜುಷಂತಿ||
ಸರಸ್ವತಿಯು ಹೇಳಿದಳು: “ಅಶುಚಿಯಾದವನು, ಕೈತೊಳೆಯದೇ ಇರುವವನು, ಬ್ರಹ್ಮವಿದುವಲ್ಲದವನು ಅಗ್ನಿಯಲ್ಲಿ ಆಹುತಿಗಳನ್ನು ನೀಡಬಾರದು. ಹವಿಸ್ಸು ಶುಚಿಯಾಗಿರಬೇಕೆಂದು ಭೋಗಿಸುವ ದೇವತೆಗಳು ಬಯಸುತ್ತಾರೆ ಮತ್ತು ನಂಬಿಕೆಯಿಲ್ಲದಿರುವವನಿಂದ ಹವಿಸ್ಸನ್ನು ಸ್ವೀಕರಿಸುವುದಿಲ್ಲ.
03184014a ನಾಶ್ರೋತ್ರಿಯಂ ದೇವಹವ್ಯೇ ನಿಯುಂಜ್ಯಾನ್|
ಮೋಘಂ ಪರಾ ಸಿಂಚತಿ ತಾದೃಶೋ ಹಿ|
03184014c ಅಪೂರ್ಣಮಶ್ರೋತ್ರಿಯಮಾಹ ತಾರ್ಕ್ಷ್ಯ|
ನ ವೈ ತಾದೃಗ್ಜುಹುಯಾದಗ್ನಿಹೋತ್ರಂ||
ದೇವಹವ್ಯಕ್ಕೆ ಶ್ರೋತ್ರಿಯನನ್ನು ನಿಯೋಜಿಸಬೇಕು. ಇತರರು ಆಹುತಿಯನ್ನು ಎಲ್ಲೆಡೆ ಚೆಲ್ಲಿಬಿಡುತ್ತಾರೆ. ತಾರ್ಕ್ಷ್ಯ! ಶ್ರೋತ್ರಿಯನಲ್ಲದ ಬೇರೆ ಯಾರೂ ಅಗ್ನಿಹೋತ್ರಕ್ಕೆ ಆಹುತಿಯನ್ನು ಕೊಡಬಾರದೆಂದು ನಾನು ಹೇಳುತ್ತೇನೆ.
03184015a ಕೃಶಾನುಂ ಯೇ ಜುಹ್ವತಿ ಶ್ರದ್ದಧಾನಾಃ|
ಸತ್ಯವ್ರತಾ ಹುತಶಿಷ್ಟಾಶಿನಶ್ಚ|
03184015c ಗವಾಂ ಲೋಕಂ ಪ್ರಾಪ್ಯ ತೇ ಪುಣ್ಯಗಂಧಂ|
ಪಶ್ಯಂತಿ ದೇವಂ ಪರಮಂ ಚಾಪಿ ಸತ್ಯಂ||
ಯಾರು ಶ್ರದ್ಧೆಯಿಂದ ಅಗ್ನಿಯಲ್ಲಿ ಹವಿಸ್ಸನ್ನು ಹಾಕುತ್ತಾನೋ ಮತ್ತು ಉಳಿದ ಹವಿಸ್ಸನ್ನು ತಿನ್ನುತ್ತಾನೋ ಅಂತಹ ಸತ್ಯವ್ರತನು ಪುಣ್ಯಗಂಧದ ಗೋಲೋಕವನ್ನು ಹೊಂದಿ ಅಲ್ಲಿ ಪರಮ ಸತ್ಯ ದೇವನನ್ನು ಕಾಣುತ್ತಾನೆ.”
03184016 ತಾರ್ಕ್ಷ್ಯ ಉವಾಚ|
03184016a ಕ್ಷೇತ್ರಜ್ಞಭೂತಾಂ ಪರಲೋಕಭಾವೇ|
ಕರ್ಮೋದಯೇ ಬುದ್ಧಿಮತಿಪ್ರವಿಷ್ಟಾಂ|
03184016c ಪ್ರಜ್ಞಾಂ ಚ ದೇವೀಂ ಸುಭಗೇ ವಿಮೃಶ್ಯ|
ಪೃಚ್ಚಾಮಿ ತ್ವಾಂ ಕಾ ಹ್ಯಸಿ ಚಾರುರೂಪೇ||
ತಾರ್ಕ್ಷ್ಯನು ಹೇಳಿದನು: “ಕ್ಷೇತ್ರಜ್ಞಭೂತೇ! ಪರಲೋಕಭಾವೇ! ಕರ್ಮದಿಂದಾಗುವ ಫಲಗಳನ್ನು ಚೆನ್ನಾಗಿ ತಿಳಿದಿರುವವಳೇ! ಪ್ರಾಜ್ಞೆ! ದೇವೀ! ಸುಭಗೇ! ಚಾರುರೂಪೇ! ನೀನು ಯಾರೆಂದು ಕೇಳುತ್ತೇನೆ.”
03184017 ಸರಸ್ವತ್ಯುವಾಚ|
03184017a ಅಗ್ನಿಹೋತ್ರಾದಹಮಭ್ಯಾಗತಾಸ್ಮಿ|
ವಿಪ್ರರ್ಷಭಾಣಾಂ ಸಂಶಯಚ್ಚೇದನಾಯ|
03184017c ತ್ವತ್ಸಮ್ಯೋಗಾದಹಮೇತದಬ್ರುವಂ|
ಭಾವೇ ಸ್ಥಿತಾ ತಥ್ಯಮರ್ಥಂ ಯಥಾವತ್||
ಸರಸ್ವತಿಯು ಹೇಳಿದಳು: “ವಿಪ್ರರ್ಷಭರ ಸಂಶಯವನ್ನು ಹೋಗಲಾಡಿಸಲು ನಾನು ಅಗ್ನಿಹೋತ್ರದಿಂದ ಎದ್ದು ಬಂದವಳಾಗಿದ್ದೇನೆ. ನಿನ್ನನ್ನು ಭೇಟಿಯಾಗಿ ಸಂತೋಷಗೊಂಡು ಅವುಗಳ ಅರ್ಥವನ್ನು ಯಥಾವತ್ತಾಗಿ ನಿನಗೆ ಹೇಳಿದ್ದೇನೆ.”
03184018 ತಾರ್ಕ್ಷ್ಯ ಉವಾಚ|
03184018a ನ ಹಿ ತ್ವಯಾ ಸದೃಶೀ ಕಾ ಚಿದಸ್ತಿ|
ವಿಭ್ರಾಜಸೇ ಹ್ಯತಿಮಾತ್ರಂ ಯಥಾ ಶ್ರೀಃ|
03184018c ರೂಪಂ ಚ ತೇ ದಿವ್ಯಮತ್ಯಂತಕಾಂತಂ|
ಪ್ರಜ್ಞಾಂ ಚ ದೇವೀಂ ಸುಭಗೇ ಬಿಭರ್ಷಿ||
ತಾರ್ಕ್ಷ್ಯನು ಹೇಳಿದನು: “ಶ್ರೀಯಷ್ಟೇ ವಿಭ್ರಾಜಿಸುವ ನಿನ್ನಂಥಹ ಬೇರೆ ಯಾರೂ ಇಲ್ಲ. ನಿನ್ನ ರೂಪವೂ ದಿವ್ಯವಾಗಿದ್ದು ಅತ್ಯಂತ ಆಕರ್ಷಣೀಯವಾಗಿದೆ. ಸುಭಗೇ! ದೇವಿ! ನೀನು ದೇವತೆಗಳ ಪ್ರಜ್ಞೆಯನ್ನು ಪ್ರದರ್ಶಿಸುತ್ತಿದ್ದೀಯೆ.”
03184019 ಸರಸ್ವತ್ಯುವಾಚ|
03184019a ಶ್ರೇಷ್ಠಾನಿ ಯಾನಿ ದ್ವಿಪದಾಂ ವರಿಷ್ಠ|
ಯಜ್ಞೇಷು ವಿದ್ವನ್ನುಪಪಾದಯಂತಿ|
03184019c ತೈರೇವಾಹಂ ಸಂಪ್ರವೃದ್ಧಾ ಭವಾಮಿ|
ಆಪ್ಯಾಯಿತಾ ರೂಪವತೀ ಚ ವಿಪ್ರ||
ಸರಸ್ವತಿಯು ಹೇಳಿದಳು: “ಮನುಷ್ಯಶ್ರೇಷ್ಠ! ವಿಪ್ರ! ಯಜ್ಞಗಳಲ್ಲಿ ಆಹುತಿಗಳನ್ನು ಹಾಕುತ್ತಿರುವಾಗ ಮತ್ತು ಅಲ್ಲಿಯ ದಕ್ಷಿಣೆಗಳಿಂದ ನಾನು ಬೆಳೆದಿದ್ದೇನೆ ಮತ್ತು ಆಕರ್ಷಣೀಯ ರೂಪವತಿಯೂ ಆಗಿದ್ದೇನೆ.
03184020a ಯಚ್ಚಾಪಿ ದ್ರವ್ಯಮುಪಯುಜ್ಯತೇ ಹ|
ವಾನಸ್ಪತ್ಯಮಾಯಸಂ ಪಾರ್ಥಿವಂ ವಾ|
03184020c ದಿವ್ಯೇನ ರೂಪೇಣ ಚ ಪ್ರಜ್ಞಯಾ ಚ|
ತೇನೈವ ಸಿದ್ಧಿರಿತಿ ವಿದ್ಧಿ ವಿದ್ವನ್||
ಯಾವುದೇ ದ್ರವ್ಯವನ್ನು ದಾನದ ವಸ್ತುವನ್ನಾಗಿ ಕೊಡಲಿ – ಮರದಿಂದ ಮಾಡಿದ್ದಿರಬಹುದು, ಕಬ್ಬಿಣವಾಗಿರಬಹುದು ಅಥವಾ ಮಣ್ಣಿನದೇ ಆಗಿರಬಹುದು - ಅವನು ದಿವ್ಯವಾದ ರೂಪ ಮತ್ತು ಪ್ರಜ್ಞೆಯನ್ನು ಪಡೆಯುತ್ತಾನೆ.”
03184021 ತಾರ್ಕ್ಷ್ಯ ಉವಾಚ|
03184021a ಇದಂ ಶ್ರೇಯಃ ಪರಮಂ ಮನ್ಯಮಾನಾ|
ವ್ಯಾಯಚ್ಚಂತೇ ಮುನಯಃ ಸಂಪ್ರತೀತಾಃ|
03184021c ಆಚಕ್ಷ್ವ ಮೇ ತಂ ಪರಮಂ ವಿಶೋಕಂ|
ಮೋಕ್ಷಂ ಪರಂ ಯಂ ಪ್ರವಿಶಂತಿ ಧೀರಾಃ||
ತಾರ್ಕ್ಷ್ಯನು ಹೇಳಿದನು: “ಇದು ಪರಮ ಶ್ರೇಯಸ್ಕರವೆಂದು ಮನ್ನಿಸಿ ಮುನಿಗಳು ಸಂಪ್ರತೀತರಾಗಿ ಇದನ್ನು ಅರಸುತ್ತಾರೆ. ನನ್ನನು ಕೇಳಿದರೆ ಆ ಪರಮ ವಿಶೋಕವಾದದ್ದು ತಿಳಿದವರು ಪಡೆಯಲು ಪ್ರಯತ್ನಿಸುವ ಮರಮ ಮೋಕ್ಷವೇ ಸರಿ.”
03184022 ಸರಸ್ವತ್ಯುವಾಚ|
03184022a ತಂ ವೈ ಪರಂ ವೇದವಿದಃ ಪ್ರಪನ್ನಾಃ|
ಪರಂ ಪರೇಭ್ಯಃ ಪ್ರಥಿತಂ ಪುರಾಣಂ|
03184022c ಸ್ವಾಧ್ಯಾಯದಾನವ್ರತಪುಣ್ಯಯೋಗೈಸ್|
ತಪೋಧನಾ ವೀತಶೋಕಾ ವಿಮುಕ್ತಾಃ||
ಸರಸ್ವತಿಯು ಹೇಳಿದಳು: “ವೇದವಿದರು ಅದೇ ಪರಮ ಪರನಿಗೆ ಪ್ರಥಿತನಿಗೆ ಪುರಾಣನಿಗೆ ಮೊರೆಹೋಗುತ್ತಾರೆ. ಸ್ವಧ್ಯಾಯದಿಂದ, ದಾನ, ವ್ರತ ಮತ್ತು ಪುಣ್ಯಯೋಗಗಳಿಂದ ತಪೋಧನರು ಶೋಕವನ್ನು ಕಳೆದುಕೊಂಡು ವಿಮುಕ್ತರಾಗುತ್ತಾರೆ.
03184023a ತಸ್ಯಾಥ ಮಧ್ಯೇ ವೇತಸಃ ಪುಣ್ಯಗಂಧಃ|
ಸಹಸ್ರಶಾಖೋ ವಿಮಲೋ ವಿಭಾತಿ|
03184023c ತಸ್ಯ ಮೂಲಾತ್ಸರಿತಃ ಪ್ರಸ್ರವಂತಿ|
ಮಧೂದಕಪ್ರಸ್ರವಣಾ ರಮಣ್ಯಃ||
03184024a ಶಾಖಾಂ ಶಾಖಾಂ ಮಹಾನದ್ಯಃ ಸಮ್ಯಾಂತಿ ಸಿಕತಾಸಮಾಃ|
03184024c ಧಾನಾಪೂಪಾ ಮಾಂಸಶಾಕಾಃ ಸದಾ ಪಾಯಸಕರ್ದಮಾಃ||
03184025a ಯಸ್ಮಿನ್ನಗ್ನಿಮುಖಾ ದೇವಾಃ ಸೇಂದ್ರಾಃ ಸಹ ಮರುದ್ಗಣೈಃ|
03184025c ಈಜಿರೇ ಕ್ರತುಭಿಃ ಶ್ರೇಷ್ಠೈಸ್ತತ್ಪದಂ ಪರಮಂ ಮುನೇ||
ಅದರ ಮಧ್ಯೆ ಪುಣ್ಯಗಂಧವನ್ನು ನೀಡುವ, ಸಹಸ್ರ ಶಾಖೆಗಳ, ವಿಮಲವಾಗಿ ಹೊಳೆಯುತ್ತಿರುವ ಬಿದಿರು ಮೆಳೆಯು ನಿಂತಿದೆ. ಅದರ ಮೂಲದಲ್ಲಿ ಸಿಹಿ ನೀರಿನ ರಮ್ಯ ನದಿಗಳು ಹರಿಯುತ್ತವೆ. ಮಹಾನದಿಗಳು ಶಾಖೆ ಶಾಖೆಗಳ ಮೇಲೆ ಮರಳಿನಂತೆ ಧಾನ್ಯ, ಪೂಪ, ಮಾಂಸ, ತರಕಾರಿಗಳು, ಪಾಯಸಗಳನ್ನು ಸದಾ ಸಿಂಪಡಿಸುತ್ತಿರುತ್ತವೆ. ಮುನೇ! ಕ್ರತುಗಳ ಮೂಲಕ ಅಗ್ನಿಮುಖದಲ್ಲಿ ಇಂದ್ರ-ಮರುದ್ಗಣಗಳೊಂದಿಗೆ ದೇವತೆಗಳಿಗೆ ಹವಿಸ್ಸನ್ನು ನೀಡುವುದೇ ಶ್ರೇಷ್ಠವಾದ ಪರಮ ಪದ.”””
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಸರಸ್ವತೀತಾರ್ಕ್ಷ್ಯಸಂವಾದೇ ಚತುಃಶೀತ್ಯಧಿಕಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಸರಸ್ವತೀತಾರ್ಕ್ಷ್ಯಸಂವಾದದಲ್ಲಿ ನೂರಾಎಂಭತ್ನಾಲ್ಕನೆಯ ಅಧ್ಯಾಯವು.