Aranyaka Parva: Chapter 18

ಆರಣ್ಯಕ ಪರ್ವ: ಕೈರಾತ ಪರ್ವ

೧೮

ಪ್ರದ್ಯುಮ್ನನ ಬಾಣಪ್ರಯೋಗಕ್ಕೆ ಸಿಲುಕಿ ಶಾಲ್ವನು ಮೂರ್ಛೆಗೊಂಡಿದುದು (೧-೧೭). ಎಚ್ಚೆತ್ತ ಶಾಲ್ವನು ಪ್ರದ್ಯುಮ್ನನನ್ನು ಮೂರ್ಛೆಗೊಳಿಸಿದ್ದುದು (೧೮-೨೪).

03018001 ವಾಸುದೇವ ಉವಾಚ|

03018001a ಏವಮುಕ್ತ್ವಾ ರೌಕ್ಮಿಣೇಯೋ ಯಾದವಾನ್ಭರತರ್ಷಭ|

03018001c ದಂಶಿತೈರ್ಹರಿಭಿರ್ಯುಕ್ತಂ ರಥಮಾಸ್ಥಾಯ ಕಾಂಚನಂ||

03018002a ಉಚ್ಚ್ರಿತ್ಯ ಮಕರಂ ಕೇತುಂ ವ್ಯಾತ್ತಾನನಮಲಂಕೃತಂ|

03018002c ಉತ್ಪತದ್ಭಿರಿವಾಕಾಶಂ ತೈರ್ಹಯೈರನ್ವಯಾತ್ಪರಾನ್||

ವಾಸುದೇವನು ಹೇಳಿದನು: “ಭರತರ್ಷಭ! ರೌಕ್ಮಿಣೇಯನು ಯಾದವರಿಗೆ ಈ ರೀತಿ ಹೇಳಿ, ಮೊನಚಾದ ಬಾಣಗಳನ್ನು ತೆಗೆದುಕೊಂಡು, ವೇಗವಾಗಿ ಹೋಗಬಲ್ಲ ಶ್ರೇಷ್ಠ ಕುದುರೆಗಳನ್ನು ಕಟ್ಟಿದ, ಬಾಯಿತೆರದ ಮೊಸಳೆಯ ಅಲಂಕೃತ ಧ್ವಜವು ಮೇಲೆ ಹಾರಾಡುತ್ತಿದ್ದ, ಕಾಂಚನ ರಥವನ್ನೇರಿದನು.

03018003a ವಿಕ್ಷಿಪನ್ನಾದಯಂಶ್ಚಾಪಿ ಧನುಃಶ್ರೇಷ್ಠಂ ಮಹಾಬಲಃ|

03018003c ತೂಣಖಡ್ಗಧರಃ ಶೂರೋ ಬದ್ಧಗೋಧಾಂಗುಲಿತ್ರವಾನ್||

ಗಾಳಿಯಲ್ಲಿ ಹಾರಿಹೋಗುತ್ತಿವೆಯೋ ಎಂದು ಅವನ ಕುದುರೆಗಳು ತೋರುತ್ತಿರಲು ತೂರಣಖಡ್ಗಗಳನ್ನು ಧರಿಸಿ, ಕೈ ಮತ್ತು ಬೆರಳುಗಳಿಗೆ ಕಟ್ಟಿಕೊಂಡು ಆ ಧನುಃಶ್ರೇಷ್ಠ, ಮಹಾಬಲ ಶೂರನು ಧಾಳಿಯಿಟ್ಟನು.

03018004a ಸ ವಿದ್ಯುಚ್ಚಲಿತಂ ಚಾಪಂ ವಿಹರನ್ವೈ ತಲಾತ್ತಲಂ|

03018004c ಮೋಹಯಾಮಾಸ ದೈತೇಯಾನ್ಸರ್ವಾನ್ಸೌಭನಿವಾಸಿನಃ||

ಅವನು ಮಿಂಚಿನಿಂದ ಧನುಸ್ಸನ್ನು ಒಂದು ಕೈಯಿಂದ ಇನ್ನೊಂದು ಕೈಗೆ ಬದಲಾಯಿಸುತ್ತಾ ಸೌಭದಲ್ಲಿದ್ದ ದೈತ್ಯರೆಲ್ಲರನ್ನೂ ಕಂಗಾಲುಗೊಳಿಸಿದನು.

03018005a ನಾಸ್ಯ ವಿಕ್ಷಿಪತಶ್ಚಾಪಂ ಸಂದಧಾನಸ್ಯ ಚಾಸಕೃತ್|

03018005c ಅಂತರಂ ದದೃಶೇ ಕಶ್ಚಿನ್ನಿಘ್ನತಃ ಶಾತ್ರವಾನ್ರಣೇ||

ಯಾರೂ ಕೂಡ ಅವನು ಬಾಣವನ್ನು ಹೂಡುವ ಮತ್ತು ಬಿಡುವುದರ ನಡುವಿನ ಅಂತರವನ್ನು ನೋಡಲಾಗುತ್ತಿರಲಿಲ್ಲ. ಹಾಗೆ ಅವನು ಶತ್ರುಗಳನ್ನು ರಣದಲ್ಲಿ ಒಂದೇ ಸಮನೆ ಕೊಲ್ಲುತ್ತಾ ಹೋದನು.

03018006a ಮುಖಸ್ಯ ವರ್ಣೋ ನ ವಿಕಲ್ಪತೇಽಸ್ಯ |

         ಚೇಲುಶ್ಚ ಗಾತ್ರಾಣಿ ನ ಚಾಪಿ ತಸ್ಯ||

03018006c ಸಿಂಹೋನ್ನತಂ ಚಾಪ್ಯಭಿಗರ್ಜತೋಽಸ್ಯ |

         ಶುಶ್ರಾವ ಲೋಕೋಽದ್ಭುತರೂಪಮಗ್ರ್ಯಂ||

ಅವನ ಮುಖದ ಬಣ್ಣವು ಬದಲಾಗಲಿಲ್ಲ. ಅವನ ದೇಹದಲ್ಲಿ ಕೂಡ ಏನೊಂದು ಕಂಪನವೂ ಕಂಡುಬರಲಿಲ್ಲ. ಆ ಅದ್ಭುತ ರೂಪಿ ನಾಯಕನು ಜೋರಾಗಿ ಗರ್ಜಿಸಿ ಸಿಂಹನಾದ ಮಾಡಿದ್ದುದನ್ನು ಲೋಕವೇ ಕೇಳಿಸಿಕೊಂಡಿತು.

03018007a ಜಲೇಚರಃ ಕಾಂಚನಯಷ್ಟಿಸಂಸ್ಥೋ |

         ವ್ಯಾತ್ತಾನನಃ ಸರ್ವತಿಮಿಪ್ರಮಾಥೀ||

03018007c ವಿತ್ರಾಸಯನ್ರಾಜತಿ ವಾಹಮುಖ್ಯೇ |

         ಶಾಲ್ವಸ್ಯ ಸೇನಾಪ್ರಮುಖೇ ಧ್ವಜಾಗ್ರ್ಯಃ||

ಕಾಂಚನದ ಧ್ವಜಸ್ಥಂಭದಮೇಲಿದ್ದ ದೊಡ್ಡದಾಗಿ ಬಾಯಿತೆರೆದಿದ್ದ ಜಲಚರ ಮೊಸಳೆಯು ರಥದ ಮೇಲೆ ಹಾರಾಡುತ್ತಾ ಶಾಲ್ವನ ಸೇನೆಯಲ್ಲಿ ಭಯದ ಬೀಜವನ್ನು ಬಿತ್ತಿತು.

03018008a ತತಃ ಸ ತೂರ್ಣಂ ನಿಷ್ಪತ್ಯ ಪ್ರದ್ಯುಮ್ನಃ ಶತ್ರುಕರ್ಶನಃ|

03018008c ಶಾಲ್ವಮೇವಾಭಿದುದ್ರಾವ ವಿಧಾಸ್ಯನ್ಕಲಹಂ ನೃಪ||

ನೃಪ! ಆಗ ಆ ಶತ್ರುಕರ್ಶನ ಪ್ರದ್ಯುಮ್ನನು ವೇಗದಿಂದ ಮುನ್ನುಗ್ಗಿ ಹೋರಾಟಕ್ಕೆ ತಯಾರಾಗಿ ಶಾಲ್ವನ ಮೇಲೆ ಎರಗಿದನು.

03018009a ಅಭಿಯಾನಂ ತು ವೀರೇಣ ಪ್ರದ್ಯುಮ್ನೇನ ಮಹಾಹವೇ|

03018009c ನಾಮರ್ಷಯತ ಸಂಕ್ರುದ್ಧಃ ಶಾಲ್ವಃ ಕುರುಕುಲೋದ್ವಹ||

ಕುರುಕುಲೋದ್ದಹ! ಆದರೆ ಮಹಾಹವ ಸಂಕೃದ್ಧ ಶಾಲ್ವನು ವೀರ ಪ್ರದ್ಯುಮ್ನನ ಆಕ್ರಮಣದಿಂದ ಕಷ್ಟಪಡಲಿಲ್ಲ.

03018010a ಸ ರೋಷಮದಮತ್ತೋ ವೈ ಕಾಮಗಾದವರುಹ್ಯ ಚ|

03018010c ಪ್ರದ್ಯುಮ್ನಂ ಯೋಧಯಾಮಾಸ ಶಾಲ್ವಃ ಪರಪುರಂಜಯಃ||

ರೋಷಮದಮತ್ತನಾದ ಆ ಪರಪುರಂಜಯ ಶಾಲ್ವನು ಕಾಮಗವನ್ನು ಏರಿ ಪ್ರದ್ಯುಮ್ನನೊಡನೆ ಯುದ್ಧಮಾಡಲು ತೊಡಗಿದನು.

03018011a ತಯೋಃ ಸುತುಮುಲಂ ಯುದ್ಧಂ ಶಾಲ್ವವೃಷ್ಣಿಪ್ರವೀರಯೋಃ|

03018011c ಸಮೇತಾ ದದೃಶುರ್ಲೋಕಾ ಬಲಿವಾಸವಯೋರಿವ||

ಬಲಿ ಮತ್ತು ವಾಸವರೊಡನೆ ನಡೆದ ಯುದ್ಧದಂತಿದ್ದ ಶಾಲ್ವ ಮತ್ತು ವೃಷ್ಣಿಪ್ರವೀರನ ನಡುವಿನ ತುಮುಲ ಯುದ್ಧವನ್ನು ನೋಡಲು ಜನರು ಒಟ್ಟು ಸೇರಿದರು.

03018012a ತಸ್ಯ ಮಾಯಾಮಯೋ ವೀರ ರಥೋ ಹೇಮಪರಿಷ್ಕೃತಃ|

03018012c ಸಧ್ವಜಃ ಸಪತಾಕಶ್ಚ ಸಾನುಕರ್ಷಃ ಸತೂಣವಾನ್||

ಆ ವೀರನ ಧ್ವಜಯುಕ್ತ, ಪತಾಕಯುಕ್ತ, ಗಾಲಿಗಳನ್ನು ಹೊಂದಿದ, ಭತ್ತಳಿಕೆಗಳನ್ನು ಹೊಂದಿದ ರಥವು ಮಾಯೆಯಿಂದ ಕೂಡಿದ್ದು ಚಿನ್ನದಿಂದ ಮಾಡಲ್ಪಟ್ಟಿತ್ತು.

03018013a ಸ ತಂ ರಥವರಂ ಶ್ರೀಮಾನ್ಸಮಾರುಹ್ಯ ಕಿಲ ಪ್ರಭೋ|

03018013c ಮುಮೋಚ ಬಾಣಾನ್ಕೌರವ್ಯ ಪ್ರದ್ಯುಮ್ನಾಯ ಮಹಾಬಲಃ||

ಕೌರವ್ಯ! ಪ್ರಭೋ! ಶ್ರೀಮಾನನು ಆ ಶ್ರೇಷ್ಠ ರಥವನ್ನು ಏರಿ ಮಹಾಬಲ ಪ್ರದ್ಯುಮ್ನನ ಮೇಲೆ ಬಾಣಗಳನ್ನು ಪ್ರಯೋಗಿಸಿದನು.

03018014a ತತೋ ಬಾಣಮಯಂ ವರ್ಷಂ ವ್ಯಸೃಜತ್ತರಸಾ ರಣೇ|

03018014c ಪ್ರದ್ಯುಮ್ನೋ ಭುಜವೇಗೇನ ಶಾಲ್ವಂ ಸಮ್ಮೋಹಯನ್ನಿವ||

ಆ ಯುದ್ಧದಲ್ಲಿ ಪ್ರದ್ಯುಮ್ನನು ತನ್ನ ಭುಜವೇಗದಿಂದ ಶಾಲ್ವನನ್ನು ಮೋಹಗೊಳಿಸುವಂತೆ ವೇಗವಾಗಿ ಬಾಣಗಳ ಮಳೆಯನ್ನೇ ಸುರಿಸಿದನು.

03018015a ಸ ತೈರಭಿಹತಃ ಸಂಖ್ಯೇ ನಾಮರ್ಷಯತ ಸೌಭರಾಟ್|

03018015c ಶರಾನ್ದೀಪ್ತಾಗ್ನಿಸಂಕಾಶಾನ್ಮುಮೋಚ ತನಯೇ ಮಮ||

ಈ ರೀತಿಯ ಅಸಂಖ್ಯ ಬಾಣಗಳನ್ನು ತಡೆಯಲಾಗದೇ ಸೌಭರಾಜನು ನನ್ನ ಮಗನ ಮೇಲೆ ಉರಿಯುತ್ತಿರುವ ಬೆಂಕಿಯಂತಿರುವ ಬಾಣಗಳನ್ನು ಪ್ರಯೋಗಿಸಿದನು.

03018016a ಸ ಶಾಲ್ವಬಾಣೈ ರಾಜೇಂದ್ರ ವಿದ್ಧೋ ರುಕ್ಮಿಣಿನಂದನಃ|

03018016c ಮುಮೋಚ ಬಾಣಂ ತ್ವರಿತೋ ಮರ್ಮಭೇದಿನಮಾಹವೇ||

03018017a ತಸ್ಯ ವರ್ಮ ವಿಭಿದ್ಯಾಶು ಸ ಬಾಣೋ ಮತ್ಸುತೇರಿತಃ|

03018017c ಬಿಭೇದ ಹೃದಯಂ ಪತ್ರೀ ಸ ಪಪಾತ ಮುಮೋಹ ಚ||

ರಾಜೇಂದ್ರ! ಶಾಲ್ವನ ಬಾಣಗಳ ಹೊಡೆತಕ್ಕೆ ಸಿಲುಕಿದ ರುಕ್ಮಿಣಿನಂದನನು ತಕ್ಷಣವೇ ಶತ್ರುವಿನ ದುರ್ಬಲ ಸ್ಥಾನವನ್ನು ಹುಡುಕಿಕೊಂಡು ಹೋಗುವ ಮರ್ಮಭೇದಿನಿ ಬಾಣವನ್ನು ಪ್ರಯೋಗಿಸಿದನು. ನನ್ನ ಮಗನು ಬಿಟ್ಟ ಆ ಬಾಣವು ಅವನ ಕವಚವನ್ನು ಬೇಧಿಸಿ ಹೃದಯವನ್ನು ಚುಚ್ಚಲು, ಅವನು ಮೂರ್ಛೆತಪ್ಪಿ ಬಿದ್ದನು.

03018018a ತಸ್ಮಿನ್ನಿಪತಿತೇ ವೀರೇ ಶಾಲ್ವರಾಜೇ ವಿಚೇತಸಿ|

03018018c ಸಂಪ್ರಾದ್ರವನ್ದಾನವೇಂದ್ರಾ ದಾರಯಂತೋ ವಸುಂಧರಾಂ||

ವೀರ ಶಾಲ್ವರಾಜನು ವಿಚೇತಸನಾಗಿ ಬೀಳಲು ದಾನವೇಂದ್ರರು ಭೂಮಿಯನ್ನೇ ಸೀಳಿಬಿಡುವರೋ ಎನ್ನುವಂತೆ ಮುನ್ನುಗ್ಗಿದರು.

03018019a ಹಾಹಾಕೃತಮಭೂತ್ಸೈನ್ಯಂ ಶಾಲ್ವಸ್ಯ ಪೃಥಿವೀಪತೇ|

03018019c ನಷ್ಟಸಂಜ್ಞೇ ನಿಪತಿತೇ ತದಾ ಸೌಭಪತೌ ನೃಪ||

ಪೃಥಿವೀಪತೇ! ನೃಪ! ಸೌಭಪತಿಯು ಮೂರ್ಛೆ ತಪ್ಪಿ ಕೆಳಗೆ ಬೀಳಲು ಶಾಲ್ವನ ಸೈನ್ಯವು ಹಾಹಾಕಾರವನ್ನು ಮಾಡಿತು.

03018020a ತತ ಉತ್ಥಾಯ ಕೌರವ್ಯ ಪ್ರತಿಲಭ್ಯ ಚ ಚೇತನಾಂ|

03018020c ಮುಮೋಚ ಬಾಣಂ ತರಸಾ ಪ್ರದ್ಯುಮ್ನಾಯ ಮಹಾಬಲಃ||

ಕೌರವ್ಯ! ಅನಂತರ ಪುನಃ ಚೇತರಿಸಿಕೊಂಡು ಎದ್ದು ತಕ್ಷಣವೇ ಮಹಾಬಲ ಪ್ರದ್ಯುಮ್ನನ ಮೇಲೆ ಬಾಣವನ್ನು ಪ್ರಯೋಗಿಸಿದನು.

03018021a ತೇನ ವಿದ್ಧೋ ಮಹಾಬಾಹುಃ ಪ್ರದ್ಯುಮ್ನಃ ಸಮರೇ ಸ್ಥಿತಃ|

03018021c ಜತ್ರುದೇಶೇ ಭೃಶಂ ವೀರೋ ವ್ಯವಾಸೀದದ್ರಥೇ ತದಾ||

ಸಮರದಲ್ಲಿ ಎದುರಿಸಿ ನಿಂತಿದ್ದ ಮಹಾಬಾಹು ವೀರ ಪ್ರದ್ಯುಮ್ನನು ಅವನಿಂದ ಜತ್ರುಪ್ರದೇಶದಲ್ಲಿ ಹೊಡೆತ ತಿಂದು ರಥದಲ್ಲಿಯೇ ಕುಸಿದು ಬಿದ್ದನು.

03018022a ತಂ ಸ ವಿದ್ಧ್ವಾ ಮಹಾರಾಜ ಶಾಲ್ವೋ ರುಕ್ಮಿಣಿನಂದನಂ|

03018022c ನನಾದ ಸಿಂಹನಾದಂ ವೈ ನಾದೇನಾಪೂರಯನ್ಮಹೀಂ||

03018023a ತತೋ ಮೋಹಂ ಸಮಾಪನ್ನೇ ತನಯೇ ಮಮ ಭಾರತ|

03018023c ಮುಮೋಚ ಬಾಣಾಂಸ್ತ್ವರಿತಃ ಪುನರನ್ಯಾನ್ದುರಾಸದಾನ್||

ಮಹಾರಾಜ! ರುಕ್ಮಿಣೀನಂದನನನ್ನು ಈ ರೀತಿ ಹೊಡೆದು ಶಾಲ್ವನು ಸಿಂದನಾದವನ್ನು ಗೈದು ತನ್ನ ನಿನಾದದಿಂದ ಇಡೀ ಭೂಮಿಯನ್ನೇ ತುಂಬಿಸಿದನು. ಭಾರತ! ನನ್ನ ಮಗನು ಮೂರ್ಛೆ ಹೊಂದಿರಲು ಅವನು ಪುನಃ ಇನ್ನೂ ತಡೆಯಲಸಾದ್ಯ ಬಾಣಗಳನ್ನು ಪ್ರಯೋಗಿಸಿದನು.

03018024a ಸ ತೈರಭಿಹತೋ ಬಾಣೈರ್ಬಹುಭಿಸ್ತೇನ ಮೋಹಿತಃ|

03018024c ನಿಶ್ಚೇಷ್ಟಃ ಕೌರವಶ್ರೇಷ್ಠ ಪ್ರದ್ಯುಮ್ನೋಽಭೂದ್ರಣಾಜಿರೇ||

ಕೌರವಶ್ರೇಷ್ಠ! ಆ ರಣರಂಗದಲ್ಲಿ ಪ್ರದ್ಯುಮ್ನನು ಬಹಳ ಬಾಣಗಳಿಂದ ಚುಚ್ಚಲ್ಪಟ್ಟು ಮೂರ್ಛಿತನಾಗಿ ನಿಶ್ಚೇಷ್ಟನಾಗಿದ್ದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ಅಷ್ಟಾದಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಹದಿನೆಂಟನೆಯ ಅಧ್ಯಾಯವು.

Related image

Comments are closed.