|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
೧೭೯
ಮಳೆಗಾಲದ ವರ್ಣನೆ
ದ್ವೈತವನದಲ್ಲಿ ಮಳೆಗಾಲದ ವರ್ಣನೆ (೧-೧೮).
03179001 ವೈಶಂಪಾಯನ ಉವಾಚ|
03179001a ನಿದಾಘಾಂತಕರಃ ಕಾಲಃ ಸರ್ವಭೂತಸುಖಾವಹಃ|
03179001c ತತ್ರೈವ ವಸತಾಂ ತೇಷಾಂ ಪ್ರಾವೃಟ್ಸಮಭಿಪದ್ಯತ||
ವೈಶಂಪಾಯನನು ಹೇಳಿದನು: “ಅಲ್ಲಿ ಅವರು ವಾಸಿಸುತ್ತಿರುವಾಗ ಬೇಸಗೆಯನ್ನು ಕೊನೆಗೊಳಿಸುವ, ಸರ್ವಭೂತಗಳಿಗೂ ಸುಖಕರ ಮಳೆಗಾಲವು ಪ್ರಾರಂಭವಾಯಿತು.
03179002a ಚಾದಯಂತೋ ಮಹಾಘೋಷಾಃ ಖಂ ದಿಶಶ್ಚ ಬಲಾಹಕಾಃ|
03179002c ಪ್ರವವರ್ಷುರ್ದಿವಾರಾತ್ರಮಸಿತಾಃ ಸತತಂ ತದಾ||
ಆಗ ಆಕಾಶ ಮತ್ತು ಎಲ್ಲ ದಿಕ್ಕುಗಳನ್ನೂ ಆವರಿಸಿ, ಜೋರಾಗಿ ಗುಡುಗುವ ಕಪ್ಪು ಮೋಡಗಳು ಒಂದೇ ಸಮನೆ ದಿನರಾತ್ರಿಯೂ ಮಳೆಸುರಿಸಲು ಪ್ರಾರಂಭಿಸಿದವು.
03179003a ತಪಾತ್ಯಯನಿಕೇತಾಶ್ಚ ಶತಶೋಽಥ ಸಹಸ್ರಶಃ|
03179003c ಅಪೇತಾರ್ಕಪ್ರಭಾಜಾಲಾಃ ಸವಿದ್ಯುದ್ವಿಮಲಪ್ರಭಾಃ||
03179004a ವಿರೂಢಶಷ್ಪಾ ಪೃಥಿವೀ ಮತ್ತದಂಶಸರೀಸೃಪಾ|
03179004c ಬಭೂವ ಪಯಸಾ ಸಿಕ್ತಾ ಶಾಂತಧೂಮರಜೋಽರುಣಾ||
ನೂರಾರು ಸಾವಿರಾರು ಸಂಖ್ಯೆಗಳ ಈ ಮಳೆಗಾಲದ ಮೋಡಗಳು ಗೋಪುರಗಳಂತೆ ಕಂಡವು. ಭೂಮಿಯಿಂದ ಸೂರ್ಯನ ಪ್ರತಾಪವೇ ಇಲ್ಲದಂತಾಗಿ, ಬದಲಾಗಿ ಮಿಂಚಿನ ಪ್ರಭೆಯೇ ಬೆಳಕನ್ನು ತಂದಿತು. ಬೆಳೆದ ಹುಲ್ಲು ಸಸ್ಯಗಳಿಂದ ತುಂಬಿದ ಭೂಮಿಯು ಎಲ್ಲರಿಗೂ ಸಂತಸವನ್ನು ತಂದಿತು. ಮಳೆಯಿಂದ ತೋಯ್ದ ಸರೀಸರ್ಪಗಳು ತಂಪಾಗಿ ಸಂತಸಗೊಂಡವು.
03179005a ನ ಸ್ಮ ಪ್ರಜ್ಞಾಯತೇ ಕಿಂ ಚಿದಂಭಸಾ ಸಮವಸ್ತೃತೇ|
03179005c ಸಮಂ ವಾ ವಿಷಮಂ ವಾಪಿ ನದ್ಯೋ ವಾ ಸ್ಥಾವರಾಣಿ ವಾ||
ನೆಲದ ಮೇಲೆಲ್ಲಾ ನೀರು ತುಂಬಿರಲು ನೆಲದಲ್ಲಿನ ಏರು ತಗ್ಗುಗಳು ಕಾಣದಂತಾಯಿತು; ನದಿಯಿದೆಯೋ, ಕಾಡಿದೆಯೋ ಏನೂ ತೋರದಂತಾಯಿತು.
03179006a ಕ್ಷುಬ್ಧತೋಯಾ ಮಹಾಘೋಷಾಃ ಶ್ವಸಮಾನಾ ಇವಾಶುಗಾಃ|
03179006c ಸಿಂಧವಃ ಶೋಭಯಾಂ ಚಕ್ರುಃ ಕಾನನಾನಿ ತಪಾತ್ಯಯೇ||
ಬೇಸಗೆಯು ಕೊನೆಗೊಳ್ಳಲು ತುಂಬಿದ ನದಿಗಳು ಭುಸುಗುಟ್ಟುವ ಸರ್ಪಗಳಂತೆ ಜೋರಾಗಿ ಆರ್ಭಟಿಸುತ್ತಾ ಅತಿ ವೇಗದಲ್ಲಿ ಕಾಡುಗಳಲ್ಲಿ ಹರಿದವು.
03179007a ನದತಾಂ ಕಾನನಾಂತೇಷು ಶ್ರೂಯಂತೇ ವಿವಿಧಾಃ ಸ್ವನಾಃ|
03179007c ವೃಷ್ಟಿಭಿಸ್ತಾಡ್ಯಮಾನಾನಾಂ ವರಾಹಮೃಗಪಕ್ಷಿಣಾಂ||
ಮಳೆಯ ಹೊಡೆತಕ್ಕೆ ಸಿಲುಕಿದ ಹಂದಿಗಳು, ಜಿಂಕೆಗಳು ಮತ್ತು ಪಕ್ಷಿಗಳು ವಿವಿಧ ರೀತಿಗಳಲ್ಲಿ ಕೂಗಾಡುವುದು ಕಾನನದ ಕೊನೆಯವರೆಗೂ ಕೇಳಿಬರುತ್ತಿತ್ತು.
03179008a ಸ್ತೋಕಕಾಃ ಶಿಖಿನಶ್ಚೈವ ಪುಂಸ್ಕೋಕಿಲಗಣೈಃ ಸಹ|
03179008c ಮತ್ತಾಃ ಪರಿಪತಂತಿ ಸ್ಮ ದರ್ದುರಾಶ್ಚೈವ ದರ್ಪಿತಾಃ||
03179009a ತಥಾ ಬಹುವಿಧಾಕಾರಾ ಪ್ರಾವೃಣ್ಮೇಘಾನುನಾದಿತಾ|
03179009c ಅಭ್ಯತೀತಾ ಶಿವಾ ತೇಷಾಂ ಚರತಾಂ ಮರುಧನ್ವಸು||
03179010a ಕ್ರೌಂಚಹಂಸಗಣಾಕೀರ್ಣಾ ಶರತ್ಪ್ರಣಿಹಿತಾಭವತ್|
03179010c ರೂಢಕಕ್ಷವನಪ್ರಸ್ಥಾ ಪ್ರಸನ್ನಜಲನಿನ್ನಗಾ||
03179011a ವಿಮಲಾಕಾಶನಕ್ಷತ್ರಾ ಶರತ್ತೇಷಾಂ ಶಿವಾಭವತ್|
03179011c ಮೃಗದ್ವಿಜಸಮಾಕೀರ್ಣಾ ಪಾಂಡವಾನಾಂ ಮಹಾತ್ಮನಾಂ||
03179012a ಪಶ್ಯಂತಃ ಶಾಂತರಜಸಃ ಕ್ಷಪಾ ಜಲದಶೀತಲಾಃ|
03179012c ಗ್ರಹನಕ್ಷತ್ರಸಂಘೈಶ್ಚ ಸೋಮೇನ ಚ ವಿರಾಜಿತಾಃ||
03179013a ಕುಮುದೈಃ ಪುಂಡರೀಕೈಶ್ಚ ಶೀತವಾರಿಧರಾಃ ಶಿವಾಃ|
03179013c ನದೀಃ ಪುಷ್ಕರಿಣೀಶ್ಚೈವ ದದೃಶುಃ ಸಮಲಂಕೃತಾಃ||
03179014a ಆಕಾಶನೀಕಾಶತಟಾಂ ನೀಪನೀವಾರಸಂಕುಲಾಂ|
03179014c ಬಭೂವ ಚರತಾಂ ಹರ್ಷಃ ಪುಣ್ಯತೀರ್ಥಾಂ ಸರಸ್ವತೀಂ||
03179015a ತೇ ವೈ ಮುಮುದಿರೇ ವೀರಾಃ ಪ್ರಸನ್ನಸಲಿಲಾಂ ಶಿವಾಂ|
03179015c ಪಶ್ಯಂತೋ ದೃಢಧನ್ವಾನಃ ಪರಿಪೂರ್ಣಾಂ ಸರಸ್ವತೀಂ||
03179016a ತೇಷಾಂ ಪುಣ್ಯತಮಾ ರಾತ್ರಿಃ ಪರ್ವಸಂಧೌ ಸ್ಮ ಶಾರದೀ|
03179016c ತತ್ರೈವ ವಸತಾಮಾಸೀತ್ಕಾರ್ತ್ತಿಕೀ ಜನಮೇಜಯ||
03179017a ಪುಣ್ಯಕೃದ್ಭಿರ್ಮಹಾಸತ್ತ್ವೈಸ್ತಾಪಸೈಃ ಸಹ ಪಾಂಡವಾಃ|
03179017c ತತ್ಸರ್ವಂ ಭರತಶ್ರೇಷ್ಠಾಃ ಸಮೂಹುರ್ಯೋಗಮುತ್ತಮಂ||
03179018a ತಮಿಸ್ರಾಭ್ಯುದಯೇ ತಸ್ಮಿನ್ಧೌಮ್ಯೇನ ಸಹ ಪಾಂಡವಾಃ|
03179018c ಸೂತೈಃ ಪೌರೋಗವೈಶ್ಚೈವ ಕಾಮ್ಯಕಂ ಪ್ರಯಯುರ್ವನಂ||
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಕಾಮ್ಯಕವನಪ್ರವೇಶೇ ಏಕೋನಶೀತ್ಯಧಿಕಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಕಾಮ್ಯಕವನಪ್ರವೇಶದಲ್ಲಿ ನೂರಾಎಪ್ಪತ್ತೊಂಭತ್ತನೆಯ ಅಧ್ಯಾಯವು.