Aranyaka Parva: Chapter 173

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ: ಅಜಗರ ಪರ್ವ

೧೭೩

ವನವಾಸದ ಹತ್ತು ವರ್ಷಗಳು ತುಂಬಲು ಭೀಮನು ಯುಧಿಷ್ಠಿರನಿಗೆ ಯುದ್ಧದ ವಿಷಯವಾಗಿ ಮಾತನಾಡುವುದು (೧-೧೬). ಯುಧಿಷ್ಠಿರನು ಗಂಧಮಾದನ ಪರ್ವತದಿಂದ ಇಳಿಯುವುದು (೧೭-೨೩).

03173001 ಜನಮೇಜಯ ಉವಾಚ|

03173001a ತಸ್ಮಿನ್ ಕೃತಾಸ್ತ್ರೇ ರಥಿನಾಂ ಪ್ರಧಾನೇ|

         ಪ್ರತ್ಯಾಗತೇ ಭವನಾದ್ವೃತ್ರಹಂತುಃ|

03173001c ಅತಃ ಪರಂ ಕಿಮಕುರ್ವಂತ ಪಾರ್ಥಾಃ|

         ಸಮೇತ್ಯ ಶೂರೇಣ ಧನಂಜಯೇನ||

ಜನಮೇಜಯನು ಹೇಳಿದನು: “ಕೃತಾರ್ಥನಾದ ಆ ರಥಿಗಳಲ್ಲಿ ಪ್ರಧಾನನು ವೃತ್ರಹಂತುವಿನ ಭವನದಿಂದ ಹಿಂದಿರುಗಿದ ನಂತರ ಶೂರ ಧನಂಜಯನೊಂದಿಗೆ ಸೇರಿ ಆ ಪಾರ್ಥರು ಏನು ಮಾಡಿದರು?”

03173002 ವೈಶಂಪಾಯನ ಉವಾಚ|

03173002a ವನೇಷು ತೇಷ್ವೇವ ತು ತೇ ನರೇಂದ್ರಾಃ|

         ಸಹಾರ್ಜುನೇನೇಂದ್ರಸಮೇನ ವೀರಾಃ|

03173002c ತಸ್ಮಿಂಶ್ಚ ಶೈಲಪ್ರವರೇ ಸುರಮ್ಯೇ|

         ಧನೇಶ್ವರಾಕ್ರೀಡಗತಾ ವಿಜಃರುಃ||

ವೈಶಂಪಾಯನನು ಹೇಳಿದನು: “ಅದೇ ವನದಲ್ಲಿ ಆ ನರೇಂದ್ರರು ಇಂದ್ರಸಮಾನನಾದ ಅರ್ಜುನನೊಂದಿಗೆ ಸುರಮ್ಯವಾದ ಧನೇಶ್ವರನ ಶೈಲಪ್ರವರದಮೇಲೆ ಕ್ರೀಡಾನುಗತರಾಗಿದ್ದರು.

03173003a ವೇಶ್ಮಾನಿ ತಾನ್ಯಪ್ರತಿಮಾನಿ ಪಶ್ಯನ್|

         ಕ್ರೀಡಾಶ್ಚ ನಾನಾದ್ರುಮಸಮ್ನಿಕರ್ಷಾಃ|

03173003c ಚಚಾರ ಧನ್ವೀ ಬಹುಧಾ ನರೇಂದ್ರಃ|

         ಸೋಽಸ್ತ್ರೇಷು ಯತ್ತಃ ಸತತಂ ಕಿರೀಟೀ||

ಆ ಅಪ್ರತಿಮ ಕಟ್ಟಡಗಳನ್ನು ಮತ್ತು ನಾನಾ ದ್ರುಮಗಳಿಂದ ಕೂಡಿದ್ದ ಕ್ರೀಡಾಪ್ರದೇಶವನ್ನು ನೋಡಿ ಸತತವೂ ತನ್ನ ಅಸ್ತ್ರಗಳಲ್ಲಿಯೇ ಮಗ್ನನಾದ, ಆ ಕಿರೀಟಿ ಧನ್ವಿ ನರೇಂದ್ರನು ತುಂಬಾ ತಿರುಗಾಡಿದನು.

03173004a ಅವಾಪ್ಯ ವಾಸಂ ನರದೇವಪುತ್ರಾಃ|

         ಪ್ರಸಾದಜಂ ವೈಶ್ರವಣಸ್ಯ ರಾಜ್ಞಃ|

03173004c ನ ಪ್ರಾಣಿನಾಂ ತೇ ಸ್ಪೃಹಯಂತಿ ರಾಜಂ|

         ಶಿವಶ್ಚ ಕಾಲಃ ಸ ಬಭೂವ ತೇಷಾಂ||

ರಾಜನ್! ರಾಜ ವೈಶ್ರವಣನ ಕೃಪೆಯಿಂದ ವಾಸಸ್ಥಳವನ್ನು ಪಡೆದ ಆ ನರದೇವಪುತ್ರರು ಪ್ರಾಣಿಗಳು ಬಯಸುವ ಸುಖವನ್ನು ಬಯಸದೇ ಅವರು ಕಳೆದ ಸಮಯವು ಶುಭವಾಗಿತ್ತು.

03173005a ಸಮೇತ್ಯ ಪಾರ್ಥೇನ ಯಥೈಕರಾತ್ರಂ|

         ಊಷುಃ ಸಮಾಸ್ತತ್ರ ತದಾ ಚತಸ್ರಃ|

03173005c ಪೂರ್ವಾಶ್ಚ ಷಟ್ತಾ ದಶ ಪಾಂಡವಾನಾಂ|

         ಶಿವಾ ಬಭೂವುರ್ವಸತಾಂ ವನೇಷು||

ಪಾರ್ಥನನ್ನು ಸೇರಿದ ಅವರು ನಾಲ್ಕು ವರ್ಷಗಳನ್ನು ಕಳೆದರು ಮತ್ತು ಅಲ್ಲಿ ಕಳೆದ ವರ್ಷಗಳು ಒಂದೇ ರಾತ್ರಿಯಂತೆ ಕಳೆದುಹೋಯಿತು. ಹಿಂದಿನ ಆರು ವರ್ಷಗಳನ್ನೂ ಸೇರಿ ಪಾಂಡವರು ಮಂಗಳಕರ ವನಗಳಲ್ಲಿ ಹತ್ತು ವರ್ಷಗಳು ವಾಸಿಸಿದರು.

03173006a ತತೋಽಬ್ರವೀದ್ವಾಯುಸುತಸ್ತರಸ್ವೀ|

         ಜಿಷ್ಣುಶ್ಚ ರಾಜಾನಮುಪೋಪವಿಶ್ಯ|

03173006c ಯಮೌ ಚ ವೀರೌ ಸುರರಾಜಕಲ್ಪಾವ್|

         ಏಕಾಂತಮಾಸ್ಥಾಯ ಹಿತಂ ಪ್ರಿಯಂ ಚ||

ಜಿಷ್ಣು, ಸುರರಾಜನಂತಿದ್ದ ವೀರ ಯಮಳರು ಏಕಾಂತದಲ್ಲಿ ರಾಜನೊಂದಿಗೆ ಕುಳಿತುಕೊಂಡ ನಂತರ ತರಸ್ವೀ ವಾಯುಸುತನು ಹಿತವೂ ಪ್ರಿಯವೂ ಆದ ಈ ಮಾತುಗಳನ್ನಾಡಿದನು:

03173007a ತವ ಪ್ರತಿಜ್ಞಾಂ ಕುರುರಾಜ ಸತ್ಯಾಂ|

         ಚಿಕೀರ್ಷಮಾಣಾಸ್ತ್ವದನು ಪ್ರಿಯಂ ಚ|

03173007c ತತೋಽನುಗಚ್ಚಾಮ ವನಾನ್ಯಪಾಸ್ಯ|

         ಸುಯೋಧನಂ ಸಾನುಚರಂ ನಿಹಂತುಂ||

“ಕುರುರಾಜ! ನಿನ್ನ ಪ್ರತಿಜ್ಞೆಯನ್ನು ಸತ್ಯವಾಗಿಸಲು ಮತ್ತು ನಿನಗೆ ಪ್ರಿಯವಾದುದನ್ನು ಮಾಡಲು ವನಕ್ಕೂ ನಿನ್ನನ್ನು ಅನುಸರಿಸಿ ಬಂದೆವು ಮತ್ತು ಸುಯೋಧನನ್ನು ಅವನ ಅನುಚರರೊಂದಿಗೆ ಸಂಹರಿಸಲಿಲ್ಲ.

03173008a ಏಕಾದಶಂ ವರ್ಷಮಿದಂ ವಸಾಮಃ

         ಸುಯೋಧನೇನಾತ್ತಸುಖಾಃ ಸುಖಾರ್ಹಾಃ|

03173008c ತಂ ವಂಚಯಿತ್ವಾಧಮಬುದ್ಧಿಶೀಲಂ|

         ಅಜ್ಞಾತವಾಸಂ ಸುಖಮಾಪ್ನುಯಾಮಃ||

ಇದು ನಮ್ಮ ವನವಾಸದ ಹನ್ನೊಂದನೆಯ ವರ್ಷ! ಸುಯೋಧನನು ನಮ್ಮದಾಗಿದ್ದ ಉತ್ತಮ ಸುಖವನ್ನು ಕಸಿದುಕೊಂಡಿದ್ದಾನೆ. ಅತ್ಯಂತ ಕೀಳು ಬುದ್ಧಿ ಮತ್ತು ನಡತೆಯ ಅವನನ್ನು ವಂಚಿಸಿ ಅಜ್ಞಾತವಾಸವನ್ನು ಸುಖವಾಗಿ ಕಳೆಯೋಣ.

03173009a ತವಾಜ್ಞಯಾ ಪಾರ್ಥಿವ ನಿರ್ವಿಶಮ್ಕಾ|

         ವಿಹಾಯ ಮಾನಂ ವಿಚರನ್ವನಾನಿ|

03173009c ಸಮೀಪವಾಸೇನ ವಿಲೋಭಿತಾಸ್ತೇ|

         ಜ್ಞಾಸ್ಯಂತಿ ನಾಸ್ಮಾನಪಕೃಷ್ಟದೇಶಾನ್||

ಪಾರ್ಥಿವ! ನಿನ್ನ ಆಜ್ಞೆಯಂತೆ ನಮ್ಮ ಗೌರವವನ್ನು ತೊರೆದು ನಿರ್ವಿಶಂಕರಾಗಿ ವನಗಳಲ್ಲಿ ಸಂಚರಿಸುತ್ತಿದ್ದೇವೆ. ಸಮೀಪದಲ್ಲಿಯೇ ವಾಸಿಸುತ್ತಿದ್ದುದರಿಂದ ನಾವು ಬೇರೆ ದೇಶಕ್ಕೆ ಹೋದರೆ ಅವರಿಗೆ ಗೊತ್ತಾಗುವುದಿಲ್ಲ.

03173010a ಸಂವತ್ಸರಂ ತಂ ತು ವಿಹೃತ್ಯ ಗೂಢಂ|

         ನರಾಧಮಂ ತಂ ಸುಖಮುದ್ಧರೇಮ|

03173010c ನಿರ್ಯಾತ್ಯ ವೈರಂ ಸಫಲಂ ಸಪುಷ್ಪಂ|

         ತಸ್ಮೈ ನರೇಂದ್ರಾಧಮಪೂರುಷಾಯ||

ನರೇಂದ್ರ! ಗೂಢವಾಗಿ ವಾಸಿಸಿ ಆ ಒಂದು ವರ್ಷವನ್ನು ಕಳೆದನಂತರ ಆ ನರಾಧಮನನ್ನು ಸುಲಭವಾಗಿ ಸೋಲಿಸಬಹುದು. ಆ ಅಧಮ ಪುರುಷನ ವೈರದ ಮರವನ್ನು ಫಲ ಪುಷ್ಪಗಳೊಂದಿಗೆ ಕೀಳಬಹುದು.

3173011a ಸುಯೋಧನಾಯಾನುಚರೈರ್ವೃತಾಯ|

         ತತೋ ಮಹೀಮಾಹರ ಧರ್ಮರಾಜ|

03173011c ಸ್ವರ್ಗೋಪಮಂ ಶೈಲಮಿಮಂ ಚರದ್ಭಿಃ|

         ಶಕ್ಯೋ ವಿಹಂತುಂ ನರದೇವ ಶೋಕಃ||

ಧರ್ಮರಾಜ! ಅನುಚರರಿಂದ ಆವೃತನಾದ ಸುಯೋಧನನ ನಂತರ ನೀನು ಈ ಭೂಮಿಯನ್ನು ಆಳು. ನರದೇವ! ಸ್ವರ್ಗೋಪಮ ಈ ಶೈಲದಲ್ಲಿ ತಿರುಗಾಡಬಹುದು. ಶೋಕವನ್ನು ತೊಲಗಿಸು.

03173012a ಕೀರ್ತಿಶ್ಚ ತೇ ಭಾರತ ಪುಣ್ಯಗಂಧಾ|

         ನಶ್ಯೇತ ಲೋಕೇಷು ಚರಾಚರೇಷು|

03173012c ತತ್ಪ್ರಾಪ್ಯ ರಾಜ್ಯಂ ಕುರುಪುಂಗವಾನಾಂ|

         ಶಕ್ಯಂ ಮಹತ್ಪ್ರಾಪ್ತಮಥ ಕ್ರಿಯಾಶ್ಚ||

ಭಾರತ! ಪುಣ್ಯದ ಸುವಾಸುನೆಯಿಂದೊಡಗೂಡಿದ ನಿನ್ನ ಕೀರ್ತಿಯು ಲೋಕಗಳಲ್ಲಿ, ಚರಾಚರಗಳಲ್ಲಿ ನಾಶವಾಗುವುದಿಲ್ಲ. ಕುರುಪುಂಗವರ ರಾಜ್ಯವನ್ನು ಪಡೆದು ಮಹಾಕಾರ್ಯಗಳನ್ನೂ ಮಾಡಬಹುದು.

03173013a ಇದಂ ತು ಶಕ್ಯಂ ಸತತಂ ನರೇಂದ್ರ|

         ಪ್ರಾಪ್ತುಂ ತ್ವಯಾ ಯಲ್ಲಭಸೇ ಕುಬೇರಾತ್|

03173013c ಕುರುಷ್ವ ಬುದ್ಧಿಂ ದ್ವಿಷತಾಂ ವಧಾಯ|

         ಕೃತಾಗಸಾಂ ಭಾರತ ನಿಗ್ರಹೇ ಚ||

ನರೇಂದ್ರ! ಕುಬೇರನಿಂದ ಈಗ ನೀನು ಪಡೆದುದೆಲ್ಲವನ್ನೂ ಸತತವಾಗಿ ಪಡೆಯಬಹುದು. ಭಾರತ! ದ್ವೇಷಿಗಳನ್ನು ವಧಿಸುವ, ನಿನಗೆ ಕೆಟ್ಟದ್ದನ್ನು ಮಾಡಿದವರನ್ನು ನಿಗ್ರಹಿಸುವ ಮನಸ್ಸುಮಾಡು.

03173014a ತೇಜಸ್ತವೋಗ್ರಂ ನ ಸಹೇತ ರಾಜನ್|

         ಸಮೇತ್ಯ ಸಾಕ್ಷಾದಪಿ ವಜ್ರಪಾಣಿಃ|

03173014c ನ ಹಿ ವ್ಯಥಾಂ ಜಾತು ಕರಿಷ್ಯತಸ್ತೌ|

         ಸಮೇತ್ಯ ದೇವೈರಪಿ ಧರ್ಮರಾಜ||

ಧರ್ಮರಾಜ! ರಾಜನ್! ಸಾಕ್ಷಾದ್ ವಜ್ರಪಾಣಿಯೇ ನಿನ್ನನ್ನು ಭೇಟಿಮಾಡಿದರೆ ನಿನ್ನ ಈ ಉಗ್ರ ತೇಜಸ್ಸನ್ನು ಸಹಿಸಲಾರ. ದೇವತೆಗಳೆಲ್ಲರೂ ಒಟ್ಟಾಗಿ ಬಂದರೂ ನೀನು ಏನು ಮಾಡಬೇಕೆಂದು ಬಯಸಿದ್ದೀಯೋ ಅದಕ್ಕೆ ತಡೆಯೊಡ್ಡಲಾರರು.

03173015a ತ್ವದರ್ಥಸಿದ್ಧ್ಯರ್ಥಮಭಿಪ್ರವೃತ್ತೌ|

         ಸುಪರ್ಣಕೇತುಶ್ಚ ಶಿನೇಶ್ಚ ನಪ್ತಾ|

03173015c ಯಥೈವ ಕೃಷ್ಣೋಽಪ್ರತಿಮೋ ಬಲೇನ|

         ತಥೈವ ರಾಜನ್ಸ ಶಿನಿಪ್ರವೀರಃ||

ಶಿನಿಪ್ರವೀರ ಕೃಷ್ಣನು ಹೇಗೆ ಬಲದಲ್ಲಿ ತನ್ನ ಸಮಾನರನ್ನು ಕಾಣುವುದಿಲ್ಲವೋ ಹಾಗೆ ಸುಪರ್ಣಕೇತು ಮತ್ತು ಶಿನಿ ಇವರೀರ್ವರೂ ಎಂದೂ ದುಃಖವನ್ನು ಹೊಂದುವುದಿಲ್ಲ.

03173016a ತವಾರ್ಥಸಿದ್ಧ್ಯರ್ಥಮಭಿಪ್ರವೃತ್ತೌ|

         ಯಥೈವ ಕೃಷ್ಣಃ ಸಹ ಯಾದವೈಸ್ತೈಃ|

03173016c ತಥೈವ ಚಾವಾಂ ನರದೇವವರ್ಯ|

         ಯಮೌ ಚ ವೀರೌ ಕೃತಿನೌ ಪ್ರಯೋಗೇ||

03173016e ತ್ವದರ್ಥಯೋಗಪ್ರಭವಪ್ರಧಾನಾಃ|

         ಸಮಂ ಕರಿಷ್ಯಾಮ ಪರಾನ್ಸಮೇತ್ಯ||

ನರದೇವವರ್ಯ! ಕೃಷ್ಣ ಮತ್ತು ಯಾದವರು ಒಟ್ಟಿಗೆ ಹೇಗೋ ಹಾಗೆ ಈ ವೀರ ಯಮಳರೂ ಕೂಡ ನಿನ್ನ ಅರ್ಥ ಮತ್ತು ಸಿದ್ಧಿಗಳಿಗಾಗಿ ಹೋರಾಡುತ್ತಾರೆ. ನಿನ್ನ ಗುರಿಯನ್ನು ತಲುಪಲು ಹೋರಾಡಬೇಕೆಂದಾದರೆ ನಾವೆಲ್ಲರೂ ಸೇರಿ ಹೋರಾಡುತ್ತೇವೆ.”

03173017a ತತಸ್ತದಾಜ್ಞಾಯ ಮತಂ ಮಹಾತ್ಮಾ|

         ತೇಷಾಂ ಸ ಧರ್ಮಸ್ಯ ಸುತೋ ವರಿಷ್ಠಃ|

03173017c ಪ್ರದಕ್ಷಿಣಂ ವೈಶ್ರವಣಾಧಿವಾಸಂ|

         ಚಕಾರ ಧರ್ಮಾರ್ಥವಿದುತ್ತಮೌಜಃ||

ಹೀಗೆ ಅವರ ಅಭಿಪ್ರಾಯಗಳನ್ನು ತಿಳಿದ ಮಹಾತ್ಮ, ಧರ್ಮಸುತ, ಹಿರಿಯ, ಧರ್ಮಾರ್ಥವಿದು, ಉತ್ತಮೌಜಸನು ವೈಶ್ರವಣನ ಪೀಠಕ್ಕೆ ಪ್ರದಕ್ಷಿಣೆಮಾಡಿದನು.

03173018a ಆಮಂತ್ರ್ಯ ವೇಶ್ಮಾನಿ ನದೀಃ ಸರಾಂಸಿ|

         ಸರ್ವಾಣಿ ರಕ್ಷಾಂಸಿ ಚ ಧರ್ಮರಾಜಃ|

03173018c ಯಥಾಗತಂ ಮಾರ್ಗಮವೇಕ್ಷಮಾಣಃ|

         ಪುನರ್ಗಿರಿಂ ಚೈವ ನಿರೀಕ್ಷಮಾಣಃ||

ತಾನು ಬಂದಿರುವ ದಾರಿಯನ್ನು ನೋಡುತ್ತಾ ಪುನಃ ಗಿರಿಯಕಡೆ ನೋಡುತ್ತಾ ಧರ್ಮರಾಜನು ಮನೆಗಳು, ನದಿಗಳು, ಸರೋವರಗಳು ಮತ್ತು ಸರ್ವ ರಾಕ್ಷಸರಿಗೆ ವಿದಾಯವನ್ನು ಹೇಳಿದನು.

03173019a ಸಮಾಪ್ತಕರ್ಮಾ ಸಹಿತಃ ಸುಹೃದ್ಭಿರ್|

         ಜಿತ್ವಾ ಸಪತ್ನಾನ್ಪ್ರತಿಲಭ್ಯ ರಾಜ್ಯಂ|

03173019c ಶೈಲೇಂದ್ರ ಭೂಯಸ್ತಪಸೇ ಧೃತಾತ್ಮಾ|

         ದ್ರಷ್ಟಾ ತವಾಸ್ಮೀತಿ ಮತಿಂ ಚಕಾರ||

“ಶೈಲೇಂದ್ರ! ಸುಹೃದಯರೊಂದಿಗೆ ಕಾರ್ಯಗಳನ್ನೆಲ್ಲ ಮುಗಿಸಿ, ಶತ್ರುಗಳನ್ನು ಜಯಿಸಿ ರಾಜ್ಯವನ್ನು ಹಿಂದೆ ಪಡೆದು ಧೃತಾತ್ಮನಾಗಿ ನಿನ್ನ ಮೇಲೆ ತಪಸ್ಸು ಮಾಡಲು ಬರುತ್ತೇನೆ” ಎಂದು ಮನಸ್ಸು ಮಾಡಿದನು.

03173020a ವೃತಃ ಸ ಸರ್ವೈರನುಜೈರ್ದ್ವಿಜೈಶ್ಚ|

         ತೇನೈವ ಮಾರ್ಗೇಣ ಪತಿಃ ಕುರೂಣಾಂ|

03173020c ಉವಾಹ ಚೈನಾನ್ಸಗಣಾಂಸ್ತಥೈವ|

         ಘಟೋತ್ಕಚಃ ಪರ್ವತನಿರ್ಝರೇಷು||

ಸರ್ವ ಅನುಜರು ಮತ್ತು ದ್ವಿಜರಿಂದ ಸುತ್ತುವರೆಯಲ್ಪಟ್ಟ ಆ ಕುರುಗಳ ನಾಯಕನನ್ನು ಅವನ ಗುಂಪಿನಲ್ಲಿದ್ದವರೆಲ್ಲರನ್ನೂ ಸೇರಿಸಿ ಪುನಃ ಘಟೋತ್ಕಚನು ಪರ್ವತ ಕಂದರಗಳಿಂದ ಕೆಳಗಿಳಿಸಿದನು.

03173021a ತಾನ್ಪ್ರಸ್ಥಿತಾನ್ಪ್ರೀತಿಮನಾ ಮಹರ್ಷಿಃ|

         ಪಿತೇವ ಪುತ್ರಾನನುಶಿಷ್ಯ ಸರ್ವಾನ್|

03173021c ಸ ಲೋಮಶಃ ಪ್ರೀತಮನಾ ಜಗಾಮ|

         ದಿವೌಕಸಾಂ ಪುಣ್ಯತಮಂ ನಿವಾಸಂ||

ಅವರು ಹೊರಡುವಾಗ ಪ್ರೀತಿಮನಸ್ಕ ಮಹರ್ಷಿ ಲೋಮಶನು ತಂದೆಯು ಪುತ್ರರಿಗೆ ಹೇಗೋ ಹಾಗೆ ಉಪದೇಶಿಸಿ ಸಂತೋಷಗೊಂಡು ದಿವೌಕಸರ ಪುಣ್ಯತಮ ನಿವಾಸಕ್ಕೆ ತೆರಳಿದನು.

03173022a ತೇನಾನುಶಿಷ್ಟಾರ್ಷ್ಟಿಷೇಣೇನ ಚೈವ|

         ತೀರ್ಥಾನಿ ರಮ್ಯಾಣಿ ತಪೋವನಾನಿ|

03173022c ಮಹಾಂತಿ ಚಾನ್ಯಾನಿ ಸರಾಂಸಿ ಪಾರ್ಥಾಃ|

         ಸಂಪಶ್ಯಮಾನಾಃ ಪ್ರಯಯುರ್ನರಾಗ್ರ್ಯಾಃ||

ಅವನಿಂದ ಮತ್ತು ಅರ್ಷ್ಟಿಷೇಣನಿಂದ ಉಪದೇಶವನ್ನು ಪಡೆದು ಆ ನರವ್ಯಾಘ್ರ ಪಾರ್ಥರು ರಮ್ಯ ತೀರ್ಥಗಳನ್ನೂ, ತಪೋವನಗಳನ್ನೂ, ಮತ್ತು ಅನ್ಯ ಮಹಾ ಸರೋವರಗಳಿಗೂ ಭೀಟಿ ಕೊಡುತ್ತಾ ತಮ್ಮ ಪ್ರಯಾಣವನ್ನು ಮುಂದುವರಿಸಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅಜಗರಪರ್ವಣಿ ಗಂಧಮಾದನಪ್ರಸ್ಥಾನೇ ತ್ರಿಸಪ್ತತ್ಯಧಿಕಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಅಜಗರಪರ್ವದಲ್ಲಿ ಗಂಧಮಾದನಪ್ರಸ್ಥಾನದಲ್ಲಿ ನೂರಾಎಪ್ಪತ್ಮೂರನೆಯ ಅಧ್ಯಾಯವು.

Image result for indian motifs

Comments are closed.