Aranyaka Parva: Chapter 172

ಆರಣ್ಯಕ ಪರ್ವ: ಯಕ್ಷಯುದ್ಧ ಪರ್ವ

೧೭೨

ಮರುದಿನ ಅರ್ಜುನನು ದಿವ್ಯಾಸ್ತ್ರಗಳನ್ನು ತೋರಿಸಲು ತೊಡಗಿದಾಗ, ಬ್ರಹ್ಮಾದಿ ದೇವತೆಗಳು ಅವನನ್ನು ತಡೆದುದು (೧-೨೪).

03172001 ವೈಶಂಪಾಯನ ಉವಾಚ|

03172001a ತಸ್ಯಾಂ ರಜನ್ಯಾಂ ವ್ಯುಷ್ಟಾಯಾಂ ಧರ್ಮರಾಜೋ ಯುಧಿಷ್ಠಿರಃ|

03172001c ಉತ್ಥಾಯಾವಶ್ಯಕಾರ್ಯಾಣಿ ಕೃತವಾನ್ ಭ್ರಾತೃಭಿಃ ಸಹ||

ವೈಶಂಪಾಯನನು ಹೇಳಿದನು: “ಆ ರಾತ್ರಿಯು ಕಳೆದ ಮೇಲೆ ಧರ್ಮರಾಜ ಯುಧಿಷ್ಠಿರನು ತನ್ನ ತಮ್ಮಂದಿರೊಡನೆ ಎದ್ದು ಅವಶ್ಯ ಕಾರ್ಯಗಳನ್ನು ಪೂರೈಸಿದನು.

03172002a ತತಃ ಸಂಚೋದಯಾಮಾಸ ಸೋಽರ್ಜುನಂ ಭ್ರಾತೃನಂದನಂ|

03172002c ದರ್ಶಯಾಸ್ತ್ರಾಣಿ ಕೌಂತೇಯ ಯೈರ್ಜಿತಾ ದಾನವಾಸ್ತ್ವಯಾ||

ನಂತರ ಅವನು ತನ್ನ ಪ್ರೀತಿಯ ತಮ್ಮ ಅರ್ಜುನನಿಗೆ ಸೂಚಿಸಿದನು: “ಕೌಂತೇಯ! ಯಾವ ಅಸ್ತ್ರಗಳಿಂದ ಆ ದಾನವರನ್ನು ಜಯಿಸಿದೆಯೋ ಆ ಅಸ್ತ್ರಗಳನ್ನು ತೋರಿಸು!”

03172003a ತತೋ ಧನಂಜಯೋ ರಾಜನ್ದೇವೈರ್ದತ್ತಾನಿ ಪಾಂಡವಃ|

03172003c ಅಸ್ತ್ರಾಣಿ ತಾನಿ ದಿವ್ಯಾನಿ ದರ್ಶಯಾಮಾಸ ಭಾರತ||

ಭಾರತ! ರಾಜನ್! ಆಗ ಪಾಂಡವ ಧನಂಜಯನು ದೈವದತ್ತವಾದ ಆ ದಿವ್ಯಾಸ್ತ್ರಗಳನ್ನು ತೋರಿಸಿದನು.

03172004a ಯಥಾನ್ಯಾಯಂ ಮಹಾತೇಜಾಃ ಶೌಚಂ ಪರಮಮಾಸ್ಥಿತಃ|

03172004c ಗಿರಿಕೂಬರಂ ಪಾದಪಾಂಗಂ ಶುಭವೇಣು ತ್ರಿವೇಣುಕಂ||

03172004e ಪಾರ್ಥಿವಂ ರಥಮಾಸ್ಥಾಯ ಶೋಭಮಾನೋ ಧನಂಜಯಃ||

03172005a ತತಃ ಸುದಂಶಿತಸ್ತೇನ ಕವಚೇನ ಸುವರ್ಚಸಾ|

03172005c ಧನುರಾದಾಯ ಗಾಂಡೀವಂ ದೇವದತ್ತಂ ಚ ವಾರಿಜಂ||

ಯಥಾನ್ಯಾಯವಾಗಿ ಆ ಮಹಾತೇಜಸ್ವಿಗಳು ಶೌಚವನ್ನು ಮುಗಿಸಿ ಉಪಸ್ಥಿತರಾಗಿರಲು, ಸುವರ್ಚಸ ಕವಚವನ್ನು ಧರಿಸಿ, ಗಾಂಡೀವಧನುಸ್ಸು ಮತ್ತು ಸಾಗರದಲ್ಲಿ ಜನಿಸಿದ ದೇವದತ್ತವನ್ನು ಹಿಡಿದು ಶೋಭಿಸುತ್ತಿರುವ ಧನಂಜಯನು ಗಿರಿಕೂಬರಗಳೇ ಕಾಲಕಂಭಗಳಾಗಿದ್ದ, ವೃಕ್ಷಗಳೇ ತ್ರಿವೇಣಿಗಳಾಗಿದ್ದ, ಬಿದಿರೇ ಧ್ವಜಕಂಬಗಳಾಗಿದ್ದ ಭೂಮಿಯ ರಥವನ್ನೇರಿದನು.

03172006a ಶೋಶುಭ್ಯಮಾನಃ ಕೌಂತೇಯ ಆನುಪೂರ್ವ್ಯಾನ್ಮಹಾಭುಜಃ|

03172006c ಅಸ್ತ್ರಾಣಿ ತಾನಿ ದಿವ್ಯಾನಿ ದರ್ಶನಾಯೋಪಚಕ್ರಮೇ||

ಕಿರಣಗಳಿಂದ ತೋಯ್ದ ಮಹಾಭುಜ ಕೌಂತೇಯನು ಆ ದಿವ್ಯಾಸ್ತ್ರಗಳನ್ನು ಒಂದೊಂದಾಗಿ ಪ್ರದರ್ಶಿಸಲು ತೊಡಗಿದನು.

03172007a ಅಥ ಪ್ರಯೋಕ್ಷ್ಯಮಾಣೇನ ದಿವ್ಯಾನ್ಯಸ್ತ್ರಾಣಿ ತೇನ ವೈ|

03172007c ಸಮಾಕ್ರಾಂತಾ ಮಹೀ ಪದ್ಭ್ಯಾಂ ಸಮಕಂಪತ ಸದ್ರುಮಾ||

ಆದರೆ ಅವನು ದಿವ್ಯಾಸ್ತ್ರಗಳನ್ನು ಪ್ರಯೋಗಿಸಲು ತೊಡಗಿದಾಗ ಆಕ್ರಾಂತಗೊಂಡು ಅವನ ಕಾಲ್ಕೆಳಗಿನ ಭೂಮಿಯು ಮರಗಳೊಂದಿಗೆ ಕಂಪಿಸತೊಡಗಿತು.

03172008a ಕ್ಷುಭಿತಾಃ ಸರಿತಶ್ಚೈವ ತಥೈವ ಚ ಮಹೋದಧಿಃ|

03172008c ಶೈಲಾಶ್ಚಾಪಿ ವ್ಯಶೀರ್ಯಂತ ನ ವವೌ ಚ ಸಮೀರಣಃ||

ನದಿಗಳು ಮತ್ತು ಹಾಗೆಯೇ ಸಾಗರಗಳು ಉಕ್ಕೆದ್ದು ಗಿರಿಗಳೂ ಕೂಡ ಮುಳುಗಿದವು. ಗಾಳಿಯು ಬೀಸಲಿಲ್ಲ.

03172009a ನ ಬಭಾಸೇ ಸಹಸ್ರಾಂಶುರ್ನ ಜಜ್ವಾಲ ಚ ಪಾವಕಃ|

03172009c ನ ವೇದಾಃ ಪ್ರತಿಭಾಂತಿ ಸ್ಮ ದ್ವಿಜಾತೀನಾಂ ಕಥಂ ಚನ||

ಸೂರ್ಯನು ಕಾಣಲಿಲ್ಲ, ಅಗ್ನಿಯು ಉರಿಯಲಿಲ್ಲ. ದ್ವಿಜಾತಿಯವರಿಗೆ ವೇದಗಳೇ ಮನಸ್ಸಿಗೆ ಕಾಣಿಸಿಕೊಳ್ಳಲಿಲ್ಲ.

03172010a ಅಂತರ್ಭೂಮಿಗತಾ ಯೇ ಚ ಪ್ರಾಣಿನೋ ಜನಮೇಜಯ|

03172010c ಪೀಡ್ಯಮಾನಾಃ ಸಮುತ್ಥಾಯ ಪಾಂಡವಂ ಪರ್ಯವಾರಯನ್||

ಜನಮೇಜಯ! ಭೂಮಿಯ ಒಳಗೆ ಜೀವಿಸುತ್ತಿದ್ದ ಪ್ರಾಣಿಗಳು ಪೀಡಿತರಾಗಿ ಮೇಲೆದ್ದು ಪಾಂಡವರನ್ನು ಸುತ್ತುವರೆದವು.

03172011a ವೇಪಮಾನಾಃ ಪ್ರಾಂಜಲಯಸ್ತೇ ಸರ್ವೇ ಪಿಹಿತಾನನಾಃ|

03172011c ದಹ್ಯಮಾನಾಸ್ತದಾಸ್ತ್ರೈಸ್ತೈರ್ಯಾಚಂತಿ ಸ್ಮ ಧನಂಜಯಂ||

ಅವರೆಲ್ಲರೂ ನಡುಗುತ್ತಾ ಪ್ರಾಂಜಲಿಬದ್ಧರಾಗಿ ಮುಖವನ್ನು ಮುಚ್ಚಿಕೊಂಡು, ಆ ಅಸ್ತ್ರಗಳಿಂದ ಸುಡಲ್ಪಟ್ಟು ಧನಂಜಯನಲ್ಲಿ ಬೇಡಿಕೊಂಡವು.

03172012a ತತೋ ಬ್ರಹ್ಮರ್ಷಯಶ್ಚೈವ ಸಿದ್ಧಾಶ್ಚೈವ ಸುರರ್ಷಯಃ|

03172012c ಜಂಗಮಾನಿ ಚ ಭೂತಾನಿ ಸರ್ವಾಣ್ಯೇವಾವತಸ್ಥಿರೇ||

03172013a ರಾಜರ್ಷಯಶ್ಚ ಪ್ರವರಾಸ್ತಥೈವ ಚ ದಿವೌಕಸಃ|

03172013c ಯಕ್ಷರಾಕ್ಷಸಗಂಧರ್ವಾಸ್ತಥೈವ ಚ ಪತತ್ರಿಣಃ||

ಆಗ ಬ್ರಹ್ಮರ್ಷಿಗಳೂ, ಸಿದ್ಧರೂ, ಸುರ‌ಋಷಿಗಳೂ, ಚಲಿಸುವವೆಲ್ಲವೂ, ಶ್ರೇಷ್ಠ ರಾಜರ್ಷಿಗಳು, ದಿವೌಕಸರು, ಯಕ್ಷ, ರಾಕ್ಷಸ, ಗಂಧರ್ವರೂ, ಪಕ್ಷಿಗಳು ಕೂಡಿ ಇದ್ದಲ್ಲಿಯೇ ನಿಂತುಕೊಂಡವು.

03172014a ತತಃ ಪಿತಾಮಹಶ್ಚೈವ ಲೋಕಪಾಲಾಶ್ಚ ಸರ್ವಶಃ|

03172014c ಭಗವಾಂಶ್ಚ ಮಹಾದೇವಃ ಸಗಣೋಽಭ್ಯಾಯಯೌ ತದಾ||

ಆಗ ಪಿತಾಮಹ, ಸರ್ವ ಲೋಕಪಾಲಕರೂ, ಭಗವಾನ್ ಮಹಾದೇವನೂ ಗಣಗೊಳಿಂದಿಗೆ ಅಲ್ಲಿಗೆ ಆಗಮಿಸಿದನು.

03172015a ತತೋ ವಾಯುರ್ಮಹಾರಾಜ ದಿವ್ಯೈರ್ಮಾಲ್ಯೈಃ ಸುಗಂಧಿಭಿಃ|

03172015c ಅಭಿತಃ ಪಾಂಡವಾಂಶ್ಚಿತ್ರೈರವಚಕ್ರೇ ಸಮಂತತಃ||

03172016a ಜಗುಶ್ಚ ಗಾಥಾ ವಿವಿಧಾ ಗಂಧರ್ವಾಃ ಸುರಚೋದಿತಾಃ|

03172016c ನನೃತುಃ ಸಂಘಶಶ್ಚೈವ ರಾಜನ್ನಪ್ಸರಸಾಂ ಗಣಾಃ||

ಮಹಾರಾಜ! ಆಗ ವಾಯುವು ಸುಗಂಧಯುಕ್ತ ದಿವ್ಯಮಾಲೆಗಳನ್ನು ಹಿಡಿದು ಪಾಂಡವರನ್ನು ಎಲ್ಲ ಕಡೆಗಳಿಂದ ಎದುರುಗೊಂಡನು. ಸುರರಿಂದ ಪ್ರೇರಿತಗೊಂಡು ಗಂಧರ್ವರು ವಿವಿಧ ಗಾಯನಗಳನ್ನು ಹಾಡಿದರು. ರಾಜನ್! ಅಪ್ಸರೆಯರ ಗಣಗಳೂ ಕೂಡ ಗುಂಪು ಗುಂಪಾಗಿ ನರ್ತಿಸಿದರು.

03172017a ತಸ್ಮಿಂಸ್ತು ತುಮುಲೇ ಕಾಲೇ ನಾರದಃ ಸುರಚೋದಿತಃ|

03172017c ಆಗಮ್ಯಾಹ ವಚಃ ಪಾರ್ಥಂ ಶ್ರವಣೀಯಮಿದಂ ನೃಪ||

ನೃಪ! ಆ ತುಮುಲಗಳ ಸಮಯದಲ್ಲಿ ಸುರರಿಂದ ಕಳುಹಿಸಲ್ಪಟ್ಟ ನಾರದನು ಬಂದು ಪಾರ್ಥನಿಗೆ ಕೇಳುವಂಥಹ ಈ ಮಾತುಗಳನ್ನಾಡಿದನು.

03172018a ಅರ್ಜುನಾರ್ಜುನ ಮಾ ಯುಂಕ್ಷ್ವದಿವ್ಯಾನ್ಯಸ್ತ್ರಾಣಿ ಭಾರತ|

03172018c ನೈತಾನಿ ನಿರಧಿಷ್ಠಾನೇ ಪ್ರಯುಜ್ಯಂತೇ ಕದಾ ಚನ||

03172019a ಅಧಿಷ್ಠಾನೇ ನ ವಾನಾರ್ತಃ ಪ್ರಯುಂಜೀತ ಕದಾ ಚನ|

03172019c ಪ್ರಯೋಗೇ ಸುಮಹಾನ್ದೋಷೋ ಹ್ಯಸ್ತ್ರಾಣಾಂ ಕುರುನಂದನ||

“ಅರ್ಜುನ! ಅರ್ಜುನ! ಭಾರತ! ದಿವ್ಯಾಸ್ತ್ರಗಳನ್ನು ಹೂಡಬೇಡ! ಇವುಗಳನ್ನು ಸಾಮರ್ಥ್ಯವಿಲ್ಲದಿರುವವ ಮೇಲೆ ಎಂದೂ ಬಿಡುಗಡೆಮಾಡಬಾರದು! ಮತ್ತು ಸಮರ್ಥರ ಮೇಲೂ ಆರ್ತನಾಗಿರದಿದ್ದರೆ ಎಂದೂ ಬಿಡುಗಡೆ ಮಾಡಬಾರದು. ಕುರುನಂದನ! ಈ ಅಸ್ತ್ರಗಳ ಪ್ರಯೋಗದಿಂದ ಮಹಾ ದೋಷವುಂಟಾಗುತ್ತದೆ.

03172020a ಏತಾನಿ ರಕ್ಷ್ಯಮಾಣಾನಿ ಧನಂಜಯ ಯಥಾಗಮಂ|

03172020c ಬಲವಂತಿ ಸುಖಾರ್ಹಾಣಿ ಭವಿಷ್ಯಂತಿ ನ ಸಂಶಯಃ||

03172021a ಅರಕ್ಷ್ಯಮಾಣಾನ್ಯೇತಾನಿ ತ್ರೈಲೋಕ್ಯಸ್ಯಾಪಿ ಪಾಂಡವ|

03172021c ಭವಂತಿ ಸ್ಮ ವಿನಾಶಾಯ ಮೈವಂ ಭೂಯಃ ಕೃಥಾಃ ಕ್ವ ಚಿತ್||

ಧನಂಜಯ! ನೀನು ಕಲಿತಂತೆ ಇವುಗಳನ್ನು ರಕ್ಷಿಸಿದರೆ ಈ ಬಲಿಷ್ಟ ಅಸ್ತ್ರಗಳು ಸುಖವನ್ನು ನೀಡುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಪಾಂಡವ! ಇವುಗಳನ್ನು ರಕ್ಷಿಸದೇ ಇದ್ದರೆ ಮೂರು ಲೋಕಗಳ ವಿನಾಶವಾಗುತ್ತದೆ. ಮುಂದೆಂದೂ ಹೀಗೆ ಮಾಡಬೇಡ!

03172022a ಅಜಾತಶತ್ರೋ ತ್ವಂ ಚೈವ ದ್ರಕ್ಷ್ಯಸೇ ತಾನಿ ಸಮ್ಯುಗೇ|

03172022c ಯೋಜ್ಯಮಾನಾನಿ ಪಾರ್ಥೇನ ದ್ವಿಷತಾಮವಮರ್ದನೇ||

ಅಜಾತಶತ್ರೋ! ಯುದ್ಧದಲ್ಲಿ ದ್ವೇಷಿಗಳ ವಿನಾಶಕ್ಕಾಗಿ ಪಾರ್ಥನು ಇವುಗಳ್ನು ಬಳಸುವಾಗ ನೀನು ನೋಡುವೆಯಂತೆ!”

03172023a ನಿವಾರ್ಯಾಥ ತತಃ ಪಾರ್ಥಂ ಸರ್ವೇ ದೇವಾ ಯಥಾಗತಂ|

03172023c ಜಗ್ಮುರನ್ಯೇ ಚ ಯೇ ತತ್ರ ಸಮಾಜಗ್ಮುರ್ನರರ್ಷಭ||

ನರರ್ಷಭ! ಪಾರ್ಥನನ್ನು ಈ ರೀತಿ ತಡೆದು ಎಲ್ಲ ದೇವತೆಗಳೂ ಮತ್ತು ಇತರರೂ ಅಲ್ಲಿಗೆ ಹೇಗೆ ಬಂದಿದ್ದರೋ ಹಾಗೆ ಹೊರಟುಹೋದರು.

03172024a ತೇಷು ಸರ್ವೇಷು ಕೌರವ್ಯ ಪ್ರತಿಯಾತೇಷು ಪಾಂಡವಾಃ|

03172024c ತಸ್ಮಿನ್ನೇವ ವನೇ ಹೃಷ್ಟಾಸ್ತ ಊಷುಃ ಸಹ ಕೃಷ್ಣಯಾ||

ಕೌರವ್ಯ! ಅವರೆಲ್ಲರೂ ಹೊರಟುಹೋದ ನಂತರ ಪಾಂಡವರು ಕೃಷ್ಣೆಯೊಡನೆ ಅದೇ ವನದಲ್ಲಿಯೇ ಸಂತೋಷದಿಂದ ಉಳಿದುಕೊಂಡರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಅಸ್ತ್ರದರ್ಶನೇ ದ್ವಿಸಪ್ತತ್ಯಧಿಕಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಅಸ್ತ್ರದರ್ಶನದಲ್ಲಿ ನೂರಾಎಪ್ಪತ್ತೆರಡನೆಯ ಅಧ್ಯಾಯವು.ಇತಿ ಶ್ರೀ ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೩೫/೧೦೦, ಅಧ್ಯಾಯಗಳು-೪೬೯/೧೯೯೫, ಶ್ಲೋಕಗಳು-೧೫೫೧೯/೭೩೭೮೪

Related image

Comments are closed.