ಆರಣ್ಯಕ ಪರ್ವ: ಯಕ್ಷಯುದ್ಧ ಪರ್ವ
೧೭೧
ಯುಧಿಷ್ಠಿರನು ದಿವ್ಯಾಸ್ತ್ರಗಳನ್ನು ತೋರಿಸೆಂದು ಕೇಳಲು ಅರ್ಜುನನು ನಾಳೆ ತೋರಿಸುತ್ತೇನೆಂದು ಹೇಳುವುದು (೧-೧೭).
03171001 ಅರ್ಜುನ ಉವಾಚ|
03171001a ತತೋ ಮಾಮಭಿವಿಶ್ವಸ್ತಂ ಸಂರೂಢಶರವಿಕ್ಷತಂ|
03171001c ದೇವರಾಜೋಽನುಗೃಹ್ಯೇದಂ ಕಾಲೇ ವಚನಮಬ್ರವೀತ್||
ಅರ್ಜುನನು ಹೇಳಿದನು: “ನಾನು ಬಾಣದ ಗಾಯಗಳು ಮಾಸಿ ವಿಶ್ರಾಂತಿಹೊಂದಿರುವ ಸಮಯದಲ್ಲಿ ದೇವರಾಜನು ಅನುಗ್ರಹಿಸುವ ಈ ಮಾತುಗಳನ್ನಾಡಿದನು.
03171002a ದಿವ್ಯಾನ್ಯಸ್ತ್ರಾಣಿ ಸರ್ವಾಣಿ ತ್ವಯಿ ತಿಷ್ಠಂತಿ ಭಾರತ|
03171002c ನ ತ್ವಾಭಿಭವಿತುಂ ಶಕ್ತೋ ಮಾನುಷೋ ಭುವಿ ಕಶ್ಚನ||
“ಭಾರತ! ಎಲ್ಲ ದಿವ್ಯಾಸ್ತ್ರಗಳೂ ನಿನ್ನಲ್ಲಿ ನಿಂತಿವೆ. ಭೂಮಿಯಲ್ಲಿನ ಯಾವ ಒಬ್ಬ ಮನುಷ್ಯನೂ ನಿನ್ನನ್ನು ಮೀರಿಸಲಾರ.
03171003a ಭೀಷ್ಮೋ ದ್ರೋಣಃ ಕೃಪಃ ಕರ್ಣಃ ಶಕುನಿಃ ಸಹ ರಾಜಭಿಃ|
03171003c ಸಂಗ್ರಾಮಸ್ಥಸ್ಯ ತೇ ಪುತ್ರ ಕಲಾಂ ನಾರ್ಹಂತಿ ಷೋಡಶೀಂ||
ಪುತ್ರ! ಸಂಗ್ರಾಮಸ್ಥನಾದ ನಿನ್ನನ್ನು ಭೀಷ್ಮ, ದ್ರೋಣ, ಕೃಪ, ಕರ್ಣ, ಶಕುನಿ ಮತ್ತು ರಾಜರುಗಳೆಲ್ಲ ಸೇರಿದರೂ ಸಂಗ್ರಾಮಸ್ಥನಾದ ನಿನ್ನ ಮೌಲ್ಯದ ಒಂದಂಶದಷ್ಟೂ ಅಲ್ಲ.”
03171004a ಇದಂ ಚ ಮೇ ತನುತ್ರಾಣಂ ಪ್ರಾಯಚ್ಚನ್ಮಘವಾನ್ಪ್ರಭುಃ|
03171004c ಅಭೇದ್ಯಂ ಕವಚಂ ದಿವ್ಯಂ ಸ್ರಜಂ ಚೈವ ಹಿರಣ್ಮಯೀಂ||
03171005a ದೇವದತ್ತಂ ಚ ಮೇ ಶಂಖಂ ದೇವಃ ಪ್ರಾದಾನ್ಮಹಾರವಂ|
03171005c ದಿವ್ಯಂ ಚೇದಂ ಕಿರೀಟಂ ಮೇ ಸ್ವಯಮಿಂದ್ರೋ ಯುಯೋಜ ಹ||
ಪ್ರಭು ಮಘವತನು ನನಗೆ ಈ ಅಭೇದ್ಯವಾದ, ದಿವ್ಯ ಕವಚವನ್ನೂ, ಹಿರಣ್ಮಯೀ ಹಾರವನ್ನೂ ಕೊಟ್ಟನು. ದೇವನು ಮಹಾರವ ದೇವದತ್ತ ಶಂಖವನ್ನೂ ಕೊಟ್ಟನು. ಸ್ವಯಂ ಇಂದ್ರನೇ ದಿವ್ಯವಾದ ಈ ಕಿರೀಟವನ್ನು ನನ್ನ ತಲೆಗೆ ತೊಡಿಸಿದನು.
03171006a ತತೋ ದಿವ್ಯಾನಿ ವಸ್ತ್ರಾಣಿ ದಿವ್ಯಾನ್ಯಾಭರಣಾನಿ ಚ|
03171006c ಪ್ರಾದಾಚ್ಛಕ್ರೋ ಮಮೈತಾನಿ ರುಚಿರಾಣಿ ಬೃಹಂತಿ ಚ||
ಶಕ್ರನು ನನಗೆ ಈ ಎಲ್ಲ ಸುಂದರವಾದ ದಿವ್ಯ ವಸ್ತ್ರಗಳನ್ನೂ, ದಿವ್ಯ ಆಭರಣಗಳನ್ನೂ ಹೇರಳವಾಗಿ ನೀಡಿದನು.
03171007a ಏವಂ ಸಂಪೂಜಿತಸ್ತತ್ರ ಸುಖಮಸ್ಮ್ಯುಷಿತೋ ನೃಪ|
03171007c ಇಂದ್ರಸ್ಯ ಭವನೇ ಪುಣ್ಯೇ ಗಂಧರ್ವಶಿಶುಭಿಃ ಸಹ||
ನೃಪ! ಈ ರೀತಿ ಅಲ್ಲಿ ಗೌರವಿಸಲ್ಪಟ್ಟ ನಾನು ಇಂದ್ರನ ಪುಣ್ಯ ಭವನದಲ್ಲಿ ಗಂಧರ್ವ ಮಕ್ಕಳೊಡನೆ ಸಂತೋಷದಿಂದ ವಾಸಿಸಿದೆನು.
03171008a ತತೋ ಮಾಮಬ್ರವೀಚ್ಛಕ್ರಃ ಪ್ರೀತಿಮಾನಮರೈಃ ಸಹ|
03171008c ಸಮಯೋಽರ್ಜುನ ಗಂತುಂ ತೇ ಭ್ರಾತರೋ ಹಿ ಸ್ಮರಂತಿ ತೇ||
ಆಗ ಅಮರರೊಂದಿಗೆ ಶಕ್ರನು ಪ್ರೀತಿಯಿಂದ ನನಗೆ ಹೇಳಿದನು: “ಅರ್ಜುನ! ನಿನಗೆ ನಿನ್ನ ಸಹೋದರರಲ್ಲಿಗೆ ಹೋಗುವ ಸಮಯವು ಬಂದಿದೆ. ಅವರು ನಿನ್ನನ್ನು ನೆನಪಿಸಿಕೊಳ್ಳುತ್ತಿದ್ದಾರೆ.”
03171009a ಏವಮಿಂದ್ರಸ್ಯ ಭವನೇ ಪಂಚ ವರ್ಷಾಣಿ ಭಾರತ|
03171009c ಉಷಿತಾನಿ ಮಯಾ ರಾಜನ್ಸ್ಮರತಾ ದ್ಯೂತಜಂ ಕಲಿಂ||
03171010a ತತೋ ಭವಂತಮದ್ರಾಕ್ಷಂ ಭ್ರಾತೃಭಿಃ ಪರಿವಾರಿತಂ|
03171010c ಗಂಧಮಾದನಮಾಸಾದ್ಯ ಪರ್ವತಸ್ಯಾಸ್ಯ ಮೂರ್ಧನಿ||
ರಾಜನ್! ಭಾರತ! ಈ ರೀತಿ ಇಂದ್ರನ ಭವನದಲ್ಲಿ ಐದು ವರ್ಷಗಳು ದ್ಯೂತದಿಂದ ಹುಟ್ಟಿದ ಕಷ್ಟಗಳನ್ನು ನೆನಪಿಸಿಕೊಳ್ಳುತ್ತಾ ಉಳಿದೆ. ಆಗ ಗಂಧಮಾದನ ಪರ್ವತವನ್ನು ಸೇರಿ ಪರ್ವತದ ಶಿಖರದಲ್ಲಿ ಸಹೋದರರಿಂದ ಪರಿವೃತನಾಗಿರುವ ನಿನ್ನನ್ನು ನೋಡಿದೆ.”
03171011 ಯುಧಿಷ್ಠಿರ ಉವಾಚ|
03171011a ದಿಷ್ಟ್ಯಾ ಧನಂಜಯಾಸ್ತ್ರಾಣಿ ತ್ವಯಾ ಪ್ರಾಪ್ತಾನಿ ಭಾರತ|
03171011c ದಿಷ್ಟ್ಯಾ ಚಾರಾಧಿತೋ ರಾಜಾ ದೇವಾನಾಮೀಶ್ವರಃ ಪ್ರಭುಃ||
ಯುಧಿಷ್ಠಿರನು ಹೇಳಿದನು: “ಭಾರತ! ಧನಂಜಯ! ಒಳ್ಳೆಯದಾಯಿತು ನೀನು ದಿವ್ಯಾಸ್ತ್ರಗಳನ್ನು ಪಡೆದಿದ್ದೀಯೆ. ಒಳ್ಳೆಯದಾಯಿತು ನೀನು ರಾಜ, ಪ್ರಭು, ದೇವತೆಗಳ ಒಡೆಯನನ್ನು ಆರಾಧಿಸಿದೆ.
03171012a ದಿಷ್ಟ್ಯಾ ಚ ಭಗವಾನ್ ಸ್ಥಾಣುರ್ದೇವ್ಯಾ ಸಹ ಪರಂತಪ|
03171012c ಸಾಕ್ಷಾದ್ದೃಷ್ಟಃ ಸುಯುದ್ಧೇನ ತೋಷಿತಶ್ಚ ತ್ವಯಾನಘ||
ಪರಂತಪ! ಅನಘ! ಒಳ್ಳೆಯದಾಯಿತು ನೀನು ಭಗವಾನ್ ಸ್ಥಾಣುವನ್ನು ದೇವಿಯ ಸಹಿತ ಸಾಕ್ಷಾತ್ ಕಂಡೆ ಮತ್ತು ಉತ್ತಮ ಯುದ್ಧದಿಂದ ಅವನನ್ನು ತೃಪ್ತಿಪಡಿಸಿದೆ.
03171013a ದಿಷ್ಟ್ಯಾ ಚ ಲೋಕಪಾಲೈಸ್ತ್ವಂ ಸಮೇತೋ ಭರತರ್ಷಭ|
03171013c ದಿಷ್ಟ್ಯಾ ವರ್ಧಾಮಹೇ ಸರ್ವೇ ದಿಷ್ಟ್ಯಾಸಿ ಪುನರಾಗತಃ||
ಭರತರ್ಷಭ! ಒಳ್ಳೆಯದಾಯಿತು ನೀನು ಲೋಕಪಾಲಕರನ್ನು ಭೇಟಿ ಮಾಡಿದೆ. ಅದೃಷ್ಟದಿಂದ ನಾವೆಲ್ಲರೂ ವರ್ಧಿಸಿದ್ದೇವೆ. ಅದೃಷ್ಟದಿಂದ ನೀನು ಮರಳಿ ಬಂದಿದ್ದೀಯೆ.
03171014a ಅದ್ಯ ಕೃತ್ಸ್ನಾಮಿಮಾಂ ದೇವೀಂ ವಿಜಿತಾಂ ಪುರಮಾಲಿನೀಂ|
03171014c ಮನ್ಯೇ ಚ ಧೃತರಾಷ್ಟ್ರಸ್ಯ ಪುತ್ರಾನಪಿ ವಶೀಕೃತಾನ್||
ಇಂದು ನಾವು ಈ ಇಡೀ ಪುರಮಾಲಿನಿ ಭೂಮಿದೇವಿಯನ್ನು ಗೆದ್ದಿದ್ದೇವೆ ಮತ್ತು ಧೃತರಾಷ್ಟ್ರನ ಮಕ್ಕಳನ್ನೂ ವಶೀಕರಿಸಿದ್ದೇವೆ ಎಂದು ನನಗನ್ನಿಸುತ್ತಿದೆ.
03171015a ತಾನಿ ತ್ವಿಚ್ಚಾಮಿ ತೇ ದ್ರಷ್ಟುಂ ದಿವ್ಯಾನ್ಯಸ್ತ್ರಾಣಿ ಭಾರತ|
03171015c ಯೈಸ್ತಥಾ ವೀರ್ಯವಂತಸ್ತೇ ನಿವಾತಕವಚಾ ಹತಾ||
ಭಾರತ! ಆದರೆ ನಾನು ವೀರ್ಯವಂತ ನಿವಾತಕವಚರನ್ನು ಸಂಹರಿಸಲು ಬಳಸಿದ ನಿನ್ನ ಆ ದಿವ್ಯಾಸ್ತ್ರಗಳನ್ನು ನೋಡಲು ಬಯಸುತ್ತೇನೆ.”
03171016 ಅರ್ಜುನ ಉವಾಚ|
03171016a ಶ್ವಃ ಪ್ರಭಾತೇ ಭವಾನ್ದ್ರಷ್ಟಾ ದಿವ್ಯಾನ್ಯಸ್ತ್ರಾಣಿ ಸರ್ವಶಃ|
03171016c ನಿವಾತಕವಚಾ ಘೋರಾ ಯೈರ್ಮಯಾ ವಿನಿಪಾತಿತಾಃ||
ಅರ್ಜುನನು ಹೇಳಿದನು: “ನಾಳೆ ಬೆಳಿಗ್ಗೆ ನಿಮಗೆ ಯಾವುದರಿಂದ ಘೋರ ನಿವಾತಕವಚರು ಕೆಳಗುರುಳಿದರೋ ಆ ಎಲ್ಲ ದಿವ್ಯಾಸ್ತ್ರಗಳನ್ನೂ ತೋರಿಸುತ್ತೇನೆ.””
03171017 ವೈಶಂಪಾಯನ ಉವಾಚ|
03171017a ಏವಮಾಗಮನಂ ತತ್ರ ಕಥಯಿತ್ವಾ ಧನಂಜಯಃ|
03171017c ಭ್ರಾತೃಭಿಃ ಸಹಿತಃ ಸರ್ವೈ ರಜನೀಂ ತಾಮುವಾಸ ಹ||
ವೈಶಂಪಾಯನನು ಹೇಳಿದನು: “ಹೀಗೆ ಧನಂಜಯನು ತನ್ನ ಆಗಮನದ ಕುರಿತು ಹೇಳಿ, ಎಲ್ಲ ಸಹೋದರರ ಸಹಿತ ರಾತ್ರಿಯನ್ನು ಕಳೆದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಅಸ್ತ್ರದರ್ಶನಸಂಕೇತೇ ಏಕಸಪ್ತತ್ಯಧಿಕಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಅಸ್ತ್ರದರ್ಶನಸಂಕೇತದಲ್ಲಿ ನೂರಾಎಪ್ಪತ್ತೊಂದನೆಯ ಅಧ್ಯಾಯವು.