Aranyaka Parva: Chapter 133

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೩೩

ರಾಜ ಮತ್ತು ದ್ವಾರಪಾಲರೊಡನೆ ವಾದಿಸಿ ಅಷ್ಟಾವಕ್ರನು ಆಸ್ಥಾನಕ್ಕೆ ಬಂದುದು (೧-೨೭).

03133001 ಅಷ್ಟಾವಕ್ರ ಉವಾಚ|

03133001a ಅಂಧಸ್ಯ ಪಂಥಾ ಬಧಿರಸ್ಯ ಪಂಥಾಃ|

         ಸ್ತ್ರಿಯಃ ಪಂಥಾ ವೈವಧಿಕಸ್ಯ ಪಂಥಾಃ|

03133001c ರಾಜ್ಞಃ ಪಂಥಾ ಬ್ರಾಹ್ಮಣೇನಾಸಮೇತ್ಯ|

         ಸಮೇತ್ಯ ತು ಬ್ರಾಹ್ಮಣಸ್ಯೈವ ಪಂಥಾಃ||

ಅಷ್ಟಾವಕ್ರನು ಹೇಳಿದನು: “ಕುರುಡನ ಮಾರ್ಗ, ಕಿವುಡನ ಮಾರ್ಗ, ಸ್ತ್ರೀಯ ಮಾರ್ಗ, ಕೂಲಿಯ ಮಾರ್ಗ, ಬ್ರಾಹ್ಮಣನನ್ನು ಭೇಟಿಯಾಗದೇ ಇದ್ದರೆ ರಾಜನ ಮಾರ್ಗ. ಭೇಟಿಯಾದರೆ ಅದು ಬ್ರಾಹ್ಮಣನದೇ ಮಾರ್ಗವಾಗುತ್ತದೆ.”

03133002 ರಾಜೋವಾಚ|

03133002a ಪಂಥಾ ಅಯಂ ತೇಽದ್ಯ ಮಯಾ ನಿಸೃಷ್ಟೋ|

         ಯೇನೇಚ್ಚಸೇ ತೇನ ಕಾಮಂ ವ್ರಜಸ್ವ|

03133002c ನ ಪಾವಕೋ ವಿದ್ಯತೇ ವೈ ಲಘೀಯಾನ್|

         ಇಂದ್ರೋಽಪಿ ನಿತ್ಯಂ ನಮತೇ ಬ್ರಾಹ್ಮಣಾನಾಂ||

ರಾಜನು ಹೇಳಿದನು: “ಹಾಗಾದರೆ ಇಂದು ನಾನು ಈ ದಾರಿಯನ್ನು ನಿನಗಾಗಿ ಬಿಟ್ಟುಕೊಡುತ್ತೇನೆ. ಎಲ್ಲಿ ಬೇಕಾದಲ್ಲಿ ಪ್ರಯಾಣಮಾಡು. ಎಷ್ಟೇ ಸಣ್ಣದಾದರೂ ಬೆಂಕಿಯನ್ನು ತಿಳಿಯಲಿಕ್ಕಾಗುವುದಿಲ್ಲ. ಇಂದ್ರನೂ ಕೂಡ ನಿತ್ಯವೂ ಬ್ರಾಹ್ಮಣರನ್ನು ನಮಸ್ಕರಿಸುತ್ತಾನೆ.”

03133003 ಅಷ್ಟಾವಕ್ರ ಉವಾಚ|

03133003a ಯಜ್ಞಂ ದ್ರಷ್ಟುಂ ಪ್ರಾಪ್ತವಂತೌ ಸ್ವ ತಾತ|

         ಕೌತೂಹಲಂ ನೌ ಬಲವದ್ವೈ ವಿವೃದ್ಧಂ|

03133003c ಆವಾಂ ಪ್ರಾಪ್ತಾವತಿಥೀ ಸಂಪ್ರವೇಶಂ|

         ಕಾಂಕ್ಷಾವಹೇ ದ್ವಾರಪತೇ ತವಾಜ್ಞಾಂ||

ಅಷ್ಟಾವಕ್ರನು ಹೇಳಿದನು: “ಮಗೂ! ನಾವು ಯಜ್ಞವನ್ನು ನೋಡಲು ಬಂದಿದ್ದೇವೆ. ಬಲವಂತ! ನಮ್ಮ ಕುತೂಹಲವು ಹೆಚ್ಚಾಗುತ್ತಿದೆ. ನಾವು ಅತಿಥಿಗಳಾಗಿ ಪ್ರವೇಶಿಸುತ್ತಿದ್ದೇವೆ. ದ್ವಾರಪತಿ! ನಿನ್ನ ಆಜ್ಞೆಯನ್ನು ಬಯಸುತ್ತೇವೆ.

03133004a ಐಂದ್ರದ್ಯುಮ್ನೇರ್ಯಜ್ಞದೃಶಾವಿಹಾವಾಂ|

         ವಿವಕ್ಷೂ ವೈ ಜನಕೇಂದ್ರಂ ದಿದೃಕ್ಷೂ|

03133004c ನ ವೈ ಕ್ರೋಧಾದ್ವ್ಯಾಧಿನೈವೋತ್ತಮೇನ|

         ಸಮ್ಯೋಜಯ ದ್ವಾರಪಾಲ ಕ್ಷಣೇನ||

ಐಂದ್ರದ್ಯುಮ್ನಿಯ ಯಜ್ಞವನ್ನು ನೋಡಿ ನಾವು ಜನಕೇಂದ್ರನನ್ನೂ ನೋಡಬಯಸುತ್ತೇವೆ. ದ್ವಾರಪಾಲ! ನಮ್ಮ ಕೋಪದಿಂದ ಇದೇ ಕ್ಷಣದಲ್ಲಿ ಗುಣವಾಗದ ವ್ಯಾಧಿಯಿಂದ ಬಳಲಬೇಡ!”

03133005 ದ್ವಾರಪಾಲ ಉವಾಚ|

03133005a ಬಂದೇಃ ಸಮಾದೇಶಕರಾ ವಯಂ ಸ್ಮ|

         ನಿಬೋಧ ವಾಕ್ಯಂ ಚ ಮಯೇರ್ಯಮಾಣಂ|

03133005c ನ ವೈ ಬಾಲಾಃ ಪ್ರವಿಶಂತ್ಯತ್ರ ವಿಪ್ರಾ|

         ವೃದ್ಧಾ ವಿದ್ವಾಂಸಃ ಪ್ರವಿಶಂತಿ ದ್ವಿಜಾಗ್ರ್ಯಾಃ||

ದ್ವಾರಪಾಲಕನು ಹೇಳಿದನು: “ನಾವು ಬಂದಿಯ ಆದೇಶದಂತೆ ನಡೆಯುತ್ತೇವೆ. ನಾನು ಹೇಳಿದಂತೆ ನಡೆದುಕೊಳ್ಳಿ. ಯಾವ ವಿಪ್ರ ಬಾಲಕರೂ ಇಲ್ಲಿಗೆ ಪ್ರವೇಶಿಸದಿರಲಿ. ಆದರೆ ವೃದ್ಧ ಮತ್ತು ವಿಧ್ವಾಂಸ ದ್ವಿಜಾಗ್ರರು ಪ್ರವೇಶಿಸಲಿ.”

03133006 ಅಷ್ಟಾವಕ್ರ ಉವಾಚ|

03133006a ಯದ್ಯತ್ರ ವೃದ್ಧೇಷು ಕೃತಃ ಪ್ರವೇಶೋ|

         ಯುಕ್ತಂ ಮಮ ದ್ವಾರಪಾಲ ಪ್ರವೇಷ್ಟುಂ|

03133006c ವಯಂ ಹಿ ವೃದ್ಧಾಶ್ಚರಿತವ್ರತಾಶ್ಚ|

         ವೇದಪ್ರಭಾವೇನ ಪ್ರವೇಶನಾರ್ಹಾಃ||

ಅಷ್ಟಾವಕ್ರನು ಹೇಳಿದನು: ವೃದ್ಧರಿಗೆ ಇಲ್ಲಿ ಪ್ರವೇಶವಿದೆಯೆಂದಾದರೆ ದ್ವಾರಪಾಲ! ನಾನು ಪ್ರವೇಶಿಸಲು ಅರ್ಹನಾಗಿದ್ದೇನೆ. ಯಾಕೆಂದರೆ ನಾವು ವೃದ್ಧರು ಮತ್ತು ವ್ರತಗಳನ್ನು ಪಾಲಿಸುತ್ತಿದ್ದೇವೆ. ವೇದಪ್ರಭಾವದಿಂದ ನಾವು ಪ್ರವೇಶಿಸಲು ಅರ್ಹರಾಗಿದ್ದೇವೆ.

03133007a ಶುಶ್ರೂಷವಶ್ಚಾಪಿ ಜಿತೇಂದ್ರಿಯಾಶ್ಚ|

         ಜ್ಞಾನಾಗಮೇ ಚಾಪಿ ಗತಾಃ ಸ್ಮ ನಿಷ್ಠಾಂ|

03133007c ನ ಬಾಲ ಇತ್ಯವಮಂತವ್ಯಮಾಹುರ್|

         ಬಾಲೋಽಪ್ಯಗ್ನಿರ್ದಹತಿ ಸ್ಪೃಶ್ಯಮಾನಃ||

ಶುಶ್ರೂಷೆ ಮಾಡುವವರು ಮತ್ತು ಜಿತೇಂದ್ರಿಯರಾದ ನಾವು ನಿಷ್ಠೆಯಿಂದ ಜ್ಞಾನದ ಕೊನೆಯವರೆಗೆ ತಲುಪಿದ್ದೇವೆ. ಬಾಲಕರೆಂದು ನಮ್ಮನ್ನು ಅಪಮಾನಿಸಬೇಡ. ಸಣ್ಣದಾಗಿದ್ದರೂ ಬೆಂಕಿಯನ್ನು ಮುಟ್ಟಿದರೆ ಸುಡುತ್ತದೆ.”

03133008 ದ್ವಾರಪಾಲ ಉವಾಚ|

03133008a ಸರಸ್ವತೀಮೀರಯ ವೇದಜುಷ್ಟಾಂ|

         ಏಕಾಕ್ಷರಾಂ ಬಹುರೂಪಾಂ ವಿರಾಜಂ|

03133008c ಅಂಗಾತ್ಮಾನಂ ಸಮವೇಕ್ಷಸ್ವ ಬಾಲಂ|

         ಕಿಂ ಶ್ಲಾಘಸೇ ದುರ್ಲಭಾ ವಾದಸಿದ್ಧಿಃ||

ದ್ವಾರಪಾಲಕನು ಹೇಳಿದನು: “ಹಾಗಾದರೆ ವೇದಜುಷ್ಟವಾದ ಒಂದೇ ಒಂದು ಅಕ್ಷರವಾದರೂ ಬಹುರೂಪದಲ್ಲಿ ವಿರಾಜಿಸುವ ಸರಸ್ವತಿಯನ್ನು ಹೇಳು. ಬಾಲಕ! ನಿನ್ನ ದೇಹವನ್ನು ನೋಡಿಕೋ! ವಾದಸಿದ್ಧಿಯನ್ನು ಪಡೆಯದೇ ಇದ್ದರೂ ಯಾಕೆ ಹೊಗಳಿಕೊಳ್ಳುತ್ತಿದ್ದೀಯೆ?”

03133009 ಅಷ್ಟಾವಕ್ರ ಉವಾಚ|

03133009a ನ ಜ್ಞಾಯತೇ ಕಾಯವೃದ್ಧ್ಯಾ ವಿವೃದ್ಧಿರ್|

         ಯಥಾಷ್ಠೀಲಾ ಶಾಲ್ಮಲೇಃ ಸಂಪ್ರವೃದ್ಧಾ|

03133009c ಹ್ರಸ್ವೋಽಲ್ಪಕಾಯಃ ಫಲಿತೋ ವಿವೃದ್ಧೋ|

         ಯಶ್ಚಾಫಲಸ್ತಸ್ಯ ನ ವೃದ್ಧಭಾವಃ||

ಅಷ್ಟಾವಕ್ರನು ಹೇಳಿದನು: “ಶಾಲ್ಮೀಲ ವೃಕ್ಷದಲ್ಲಿ ಬೆಳೆಯುವ ಕಳೆಯಂತೆ ವೃದ್ಧರೆಂದರೆ ದೇಹದ ವಯಸ್ಸು ಹೆಚ್ಚಿನದು ಎಂದು ತಿಳಿಯಬಾರದು. ಸಣ್ಣದಾದರೂ, ಗಿಡ್ಡದಾದರೂ ಫಲವನ್ನು ಪಡೆದರೆ ವೃದ್ಧವೆನಿಸಿಕೊಳ್ಳುತ್ತದೆ. ಫಲವನ್ನೇ ಪಡೆಯದ ವೃಕ್ಷವು ವೃದ್ಧವೆಂದೆನಿಸಿಕೊಳ್ಳುವುದಿಲ್ಲ.”

03133010 ದ್ವಾರಪಾಲ ಉವಾಚ|

03133010a ವೃದ್ಧೇಭ್ಯ ಏವೇಹ ಮತಿಂ ಸ್ಮ ಬಾಲಾ|

         ಗೃಹ್ಣಂತಿ ಕಾಲೇನ ಭವಂತಿ ವೃದ್ಧಾಃ|

03133010c ನ ಹಿ ಜ್ಞಾನಮಲ್ಪಕಾಲೇನ ಶಕ್ಯಂ|

         ಕಸ್ಮಾದ್ಬಾಲೋ ವೃದ್ಧ ಇವಾವಭಾಷಸೇ||

ದ್ವಾರಪಾಲಕನು ಹೇಳಿದನು: “ಬಾಲಕರು ವೃದ್ಧರಾಗುವವರೆಗೆ ವೃದ್ಧರಿಂದಲೇ ತಮ್ಮ ಬುದ್ಧಿಯನ್ನು ಪಡೆಯುತ್ತಾರೆ. ಸ್ವಲ್ಪವೇ ಸಮಯದಲ್ಲಿ ಜ್ಞಾನವನ್ನು ಪಡೆಯುವುದು ಶಕ್ಯವಿಲ್ಲ. ಹಾಗಿದ್ದಾಗ ಬಾಲಕರಾದ ನೀವು ನಿಮ್ಮನ್ನು ವೃದ್ಧರೆಂದು ಏಕೆ ಕರೆದುಕೊಳ್ಳುತ್ತಿದ್ದೀರಿ?”

03133011 ಅಷ್ಟಾವಕ್ರ ಉವಾಚ|

03133011a ನ ತೇನ ಸ್ಥವಿರೋ ಭವತಿ ಯೇನಾಸ್ಯ ಪಲಿತಂ ಶಿರಃ|

03133011c ಬಾಲೋಽಪಿ ಯಃ ಪ್ರಜಾನಾತಿ ತಂ ದೇವಾಃ ಸ್ಥವಿರಂ ವಿದುಃ||

ಅಷ್ಟಾವಕ್ರನು ಹೇಳಿದನು: “ಬೆಳೆದ ಬಿಳಿಕೂದಲಿದ್ದರೆ ಮಾತ್ರ ವೃದ್ಧನೆಂದಾಗುವುದಿಲ್ಲ. ತಿಳಿದಿರುವವನನ್ನು ಬಾಲಕನಾಗಿದ್ದರೂ ದೇವತೆಗಳು ವೃದ್ಧನೆಂದು ತಿಳಿಯುತ್ತಾರೆ.

03133012a ನ ಹಾಯನೈರ್ನ ಪಲಿತೈರ್ನ ವಿತ್ತೇನ ನ ಬಂಧುಭಿಃ|

03133012c ಋಷಯಶ್ಚಕ್ರಿರೇ ಧರ್ಮಂ ಯೋಽನೂಚಾನಃ ಸ ನೋ ಮಹಾನ್||

ವಯಸ್ಸಿನಿಂದಾಗಲೀ, ಬಿಳಿಕೂದಲಿನಿಂದಾಗಲೀ, ಸಂಪತ್ತಿನಿಂದಾಗಲೀ, ಬಂಧುಗಳಿಂದಾಗಲೀ ಋಷಿಗಳು ಧರ್ಮವನ್ನು ಮಾಡಿಲ್ಲ. ಯಾರು ಕಲಿತಿದ್ದಾನೋ ಅವನೇ ದೊಡ್ಡವನು.

03133013a ದಿದೃಕ್ಷುರಸ್ಮಿ ಸಂಪ್ರಾಪ್ತೋ ಬಂದಿನಂ ರಾಜಸಂಸದಿ|

03133013c ನಿವೇದಯಸ್ವ ಮಾಂ ದ್ವಾಃಸ್ಥ ರಾಜ್ಞೇ ಪುಷ್ಕರಮಾಲಿನೇ||

ರಾಜಸಭೆಯಲ್ಲಿ ಬಂದಿಯನ್ನು ನೋಡಲು ಬಂದಿದ್ದೇವೆ. ದ್ವಾರಪಾಲಕ! ಪುಷ್ಕರ ಮಾಲಿನಿ ರಾಜನಿಗೆ ನಾವು ಬಂದಿರುವುದನ್ನು ಹೇಳು.

03133014a ದ್ರಷ್ಟಾಸ್ಯದ್ಯ ವದತೋ ದ್ವಾರಪಾಲ|

         ಮನೀಷಿಭಿಃ ಸಹ ವಾದೇ ವಿವೃದ್ಧೇ|

03133014c ಉತಾಹೋ ವಾಪ್ಯುಚ್ಚತಾಂ ನೀಚತಾಂ ವಾ|

         ತೂಷ್ಣೀಂ ಭೂತೇಷ್ವಥ ಸರ್ವೇಷು ಚಾದ್ಯ||

ದ್ವಾರಪಾಲಕ! ಇಂದು ನಾನು ತಿಳಿದವರೊಡನೆ ವಾದಮಾಡುವುದನ್ನು ನೋಡು. ಎಲ್ಲರೂ ಸುಮ್ಮನಿರುವಾಗ ನಾನು ಮೇಲಾಗುವುದನ್ನು ಅಥವಾ ಕೆಳಗಾಗುವುದನ್ನು ನೋಡು.”

03133015 ದ್ವಾರಪಾಲ ಉವಾಚ|

03133015a ಕಥಂ ಯಜ್ಞಂ ದಶವರ್ಷೋ ವಿಶೇಸ್ತ್ವಂ|

         ವಿನೀತಾನಾಂ ವಿದುಷಾಂ ಸಂಪ್ರವೇಶ್ಯಂ|

03133015c ಉಪಾಯತಃ ಪ್ರಯತಿಷ್ಯೇ ತವಾಹಂ|

         ಪ್ರವೇಶನೇ ಕುರು ಯತ್ನಂ ಯಥಾವತ್||

ದ್ವಾರಪಾಲಕನು ಹೇಳಿದನು: “ವಿನೀತರಿಗೆ ಮತ್ತು ವಿದುಷರಿಗೆ ಮಾತ್ರ ಪ್ರವೇಶವುಳ್ಳ ಯಜ್ಞಶಾಲೆಗೆ ಹತ್ತುವರ್ಷದ ನೀವು ಹೇಗೆ ಪ್ರವೇಶಿಸುವಿರಿ? ನಿಮ್ಮನ್ನು ಒಳಗೆ ಬಿಡಲು ನಾನು ಉಪಾಯವನ್ನು ಹುಡುಕುತ್ತೇನೆ. ನೀವೂ ಕೂಡ ಪ್ರಯತ್ನಮಾಡಬೇಕು.”

03133016 ಅಷ್ಟಾವಕ್ರ ಉವಾಚ|

03133016a ಭೋ ಭೋ ರಾಜಂ ಜನಕಾನಾಂ ವರಿಷ್ಠ|

         ಸಭಾಜ್ಯಸ್ತ್ವಂ ತ್ವಯಿ ಸರ್ವಂ ಸಮೃದ್ಧಂ|

03133016c ತ್ವಂ ವಾ ಕರ್ತಾ ಕರ್ಮಣಾಂ ಯಜ್ಞಿಯಾನಾಂ|

         ಯಯಾತಿರೇಕೋ ನೃಪತಿರ್ವಾ ಪುರಸ್ತಾತ್||

ಅಷ್ಟಾವಕ್ರನು ಹೇಳಿದನು: “ಭೋ ಭೋ ರಾಜನ್! ಜನಕರಲ್ಲಿ ವರಿಷ್ಠ! ನಿನ್ನ ಸಭೆಗೆ ಜಯವಾಗಲಿ, ನಿನ್ನ ಸರ್ವ ಸಮೃದ್ಧಿಗೆ ಜಯವಾಗಲಿ! ನೀನು ನಡೆಸುತ್ತಿರುವ ಈ ಯಜ್ಞದಂಥಹ ಕರ್ತನು ಹಿಂದೆ ಯಯಾತಿ ಮಾತ್ರ ಇದ್ದನು!

03133017a ವಿದ್ವಾನ್ಬಂದೀ ವೇದವಿದೋ ನಿಗೃಹ್ಯ|

         ವಾದೇ ಭಗ್ನಾನಪ್ರತಿಶಮ್ಕಮಾನಃ|

03133017c ತ್ವಯಾ ನಿಸೃಷ್ಟೈಃ ಪುರುಷೈರಾಪ್ತಕೃದ್ಭಿರ್|

         ಜಲೇ ಸರ್ವಾನ್ಮಜ್ಜಯತೀತಿ ನಃ ಶ್ರುತಂ||

ವಿದ್ವಾನ್ ವೇದವಿದ ಬಂದಿಯು ವಾದದಲ್ಲಿ ಅನುಮಾನಿತರನ್ನು ಸೋಲಿಸಿ ನೀನು ಕಳುಹಿಸಿದ ಆಪ್ತ ಜನರಿಂದ ಎಲ್ಲರನ್ನೂ ಸಮುದ್ರದಲ್ಲಿ ಹಾಕಿ ಮುಳುಗಿಸಿದನೆಂದು ಕೇಳಲಿಲ್ಲವೇ?

03133018a ಸ ತಚ್ಛೃತ್ವಾ ಬ್ರಾಹ್ಮಣಾನಾಂ ಸಕಾಶಾದ್|

         ಬ್ರಹ್ಮೋದ್ಯಂ ವೈ ಕಥಯಿತುಮಾಗತೋಽಸ್ಮಿ|

03133018c ಕ್ವಾಸೌ ಬಂದೀ ಯಾವದೇನಂ ಸಮೇತ್ಯ|

         ನಕ್ಷತ್ರಾಣೀವ ಸವಿತಾ ನಾಶಯಾಮಿ||

ಬ್ರಾಹ್ಮಣರಿಂದ ಇದನ್ನು ಕೇಳಿದ ನಾನು ಇಂದು ಬ್ರಹ್ಮನನ್ನು ಹೇಳಲು ಬಂದಿದ್ದೇನೆ. ಬಂದಿಯು ಎಲ್ಲಿದ್ದಾನೆ? ಸೂರ್ಯನು ನಕ್ಷತ್ರಗಳನ್ನು ಹೇಗೋ ಹಾಗೆ ನಾನು ಅವನನ್ನು ವಾದದಲ್ಲಿ ಎದುರಿಸಿ ನಾಶಗೊಳಿಸುತ್ತೇನೆ.”

03133019 ರಾಜೋವಾಚ|

03133019a ಆಶಂಸಸೇ ಬಂದಿನಂ ತ್ವಂ ವಿಜೇತುಂ|

         ಅವಿಜ್ಞಾತ್ವಾ ವಾಕ್ಯಬಲಂ ಪರಸ್ಯ|

03133019c ವಿಜ್ಞಾತವೀರ್ಯೈಃ ಶಕ್ಯಮೇವಂ ಪ್ರವಕ್ತುಂ|

         ದೃಷ್ಟಶ್ಚಾಸೌ ಬ್ರಾಹ್ಮಣೈರ್ವಾದಶೀಲೈಃ||

ರಾಜನು ಹೇಳಿದನು: “ಎದುರಾಳಿಯ ವಾಕ್ಯಬಲವನ್ನು ತಿಳಿಯದೇ ಬಂದಿಯನ್ನು ನೀನು ಸೋಲಿಸುತ್ತೀಯೆ ಎಂದು ಹೇಳುತ್ತಿರುವೆಯಲ್ಲ! ಹೀಗೆ ಹೇಳಲು ಕೇವಲ ವಿಜ್ಞಾತವೀರರಿಗೆ ಶಕ್ಯ. ವಾದಶೀಲ ಬ್ರಾಹ್ಮಣರು ಇದನ್ನು ಕಂಡುಕೊಂಡಿದ್ದಾರೆ.”

03133020 ಅಷ್ಟಾವಕ್ರ ಉವಾಚ|

03133020a ವಿವಾದಿತೋಽಸೌ ನ ಹಿ ಮಾದೃಶೈರ್ಹಿ|

         ಸಿಂಹೀಕೃತಸ್ತೇನ ವದತ್ಯಭೀತಃ|

03133020c ಸಮೇತ್ಯ ಮಾಂ ನಿಹತಃ ಶೇಷ್ಯತೇಽದ್ಯ|

         ಮಾರ್ಗೇ ಭಗ್ನಂ ಶಕಟಮಿವಾಬಲಾಕ್ಷಂ||

ಅಷ್ಟಾವಕ್ರನು ಹೇಳಿದನು: “ಅವನೊಂದಿಗೆ ವಾದಮಾಡಿದವರು ನನ್ನ ಹಾಗಿಲ್ಲ. ವಾದದಲ್ಲಿ ಭೀತರಾದ ಅವರು ಅವನನ್ನು ಸಿಂಹನನ್ನಾಗಿ ಮಾಡಿದ್ದಾರೆ. ನನ್ನನ್ನು ಭೇಟಿಯಾದ ನಂತರ ಇಂದು ಗಾಲಿ ಕಳಚಿದ ಬಂಡಿಯಂತೆ ಮಾರ್ಗಮದ್ಯದಲ್ಲಿ ಉಳಿಯುತ್ತಾನೆ.”

03133021 ರಾಜೋವಾಚ|

03133021a ಷಣ್ಣಾಭೇರ್ದ್ವಾದಶಾಕ್ಷಸ್ಯ ಚತುರ್ವಿಂಶತಿಪರ್ವಣಃ|

03133021c ಯಸ್ತ್ರಿಷಷ್ಟಿಶತಾರಸ್ಯ ವೇದಾರ್ಥಂ ಸ ಪರಃ ಕವಿಃ||

ರಾಜನು ಹೇಳಿದನು: “ಆರು ಭೇದಗಳನ್ನು, ಹನ್ನೆರಡು ಅಕ್ಷಗಳನ್ನು, ಇಪ್ಪತ್ನಾಲ್ಕು ಪರ್ವಗಳನ್ನು ಮತ್ತು ಮುನ್ನೂರಾ ಅರವತ್ತು ಚಕ್ರದ ಕಾಲುಗಳನ್ನು ತಿಳಿದವನೇ ಪರಮ ಕವಿಯು.”

03133022 ಅಷ್ಟಾವಕ್ರ ಉವಾಚ|

03133022a ಚತುರ್ವಿಂಶತಿಪರ್ವ ತ್ವಾಂ ಷಣ್ಣಾಭಿ ದ್ವಾದಶಪ್ರಧಿ|

03133022c ತತ್ತ್ರಿಷಷ್ಟಿಶತಾರಂ ವೈ ಚಕ್ರಂ ಪಾತು ಸದಾಗತಿ||

ಅಷ್ಟಾವಕ್ರನು ಹೇಳಿದನು: “ಸದಾ ತಿರುಗುತ್ತಿರುವ ಇಪ್ಪತ್ನಾಲ್ಕು ಪರ್ವಗಳು, ಆರು ಭೇದಗಳುಳ್ಳ ಹನ್ನೆರಡು ಪ್ರಧಿಗಳನ್ನು ಹೊಂದಿದ ಮತ್ತು ಮುನ್ನೂರಾ ಅರವತ್ತು ಕಾಲುಗಳುಳ್ಳ ಚಕ್ರವು ನಿನ್ನನ್ನು ರಕ್ಷಿಸಲಿ!”

03133023 ರಾಜೋವಾಚ|

03133023a ವಡವೇ ಇವ ಸಂಯುಕ್ತೇ ಶ್ಯೇನಪಾತೇ ದಿವೌಕಸಾಂ|

03133023c ಕಸ್ತಯೋರ್ಗರ್ಭಮಾಧತ್ತೇ ಗರ್ಭಂ ಸುಷುವತುಶ್ಚ ಕಂ||

ರಾಜನು ಹೇಳಿದನು: “ಎರಡು ಕುದುರೆಗಳನ್ನು ಕಟ್ಟಿದಂತಿದೆ, ಆಕಾಶದಿಂದ ಗಿಡುಗವು ಬಂದೆರಗುವಂತಿದೆ. ಅದು ಯಾವ ದೇವತೆಯ ಗರ್ಭದಿಂದ ಬಂದಿದೆ ಮತ್ತು ಯಾರು ಆ ಗರ್ಭದಿಂದ ಹುಟ್ಟಿದ್ದಾರೆ?”

03133024 ಅಷ್ಟಾವಕ್ರ ಉವಾಚ|

03133024a ಮಾ ಸ್ಮ ತೇ ತೇ ಗೃಹೇ ರಾಜಂ ಶಾತ್ರವಾಣಾಮಪಿ ಧ್ರುವಂ|

03133024c ವಾತಸಾರಥಿರಾಧತ್ತೇ ಗರ್ಭಂ ಸುಷುವತುಶ್ಚ ತಂ||

ಅಷ್ಟಾವಕ್ರನು ಹೇಳಿದನು: “ರಾಜನ್! ಅವುಗಳನ್ನು ನಿನ್ನ ಮನೆಯಿಂದ ಮತ್ತು ನಿನ್ನ ಶತ್ರುವಿನ ಮನೆಯಿಂದಲೂ ದೂರವಿಡು! ವಾಯುಸಾರಥಿಯು ಅವನ್ನು ಪಡೆಯುತ್ತಾನೆ ಮತ್ತು ಅವು ಅವನ ಗರ್ಭದಲ್ಲಿ ಬೆಳೆಯುತ್ತವೆ.”

03133025 ರಾಜೋವಾಚ|

03133025a ಕಿಂ ಸ್ವಿತ್ಸುಪ್ತಂ ನ ನಿಮಿಷತಿ ಕಿಂ ಸ್ವಿಜ್ಜಾತಂ ನ ಚೋಪತಿ|

03133025c ಕಸ್ಯ ಸ್ವಿದ್ಧೃದಯಂ ನಾಸ್ತಿ ಕಿಂ ಸ್ವಿದ್ವೇಗೇನ ವರ್ಧತೇ|

ರಾಜನು ಹೇಳಿದನು: “ನಿದ್ರಿಸಿರುವಾಗ ಏನು ಕಣ್ಣನ್ನು ಮುಚ್ಚುವುದಿಲ್ಲ? ಹುಟ್ಟುವಾಗ ಯಾವುದು ಚಲಿಸುವುದಿಲ್ಲ? ಯಾವುದಕ್ಕೆ ಹೃದಯವೇ ಇಲ್ಲ? ಮತ್ತು ಯಾವುದು ವೇಗದಿಂದ ವೃದ್ಧಿಯಾಗುತ್ತದೆ?”

03133026 ಅಷ್ಟಾವಕ್ರ ಉವಾಚ|

03133026a ಮತ್ಸ್ಯಃ ಸುಪ್ತೋ ನ ನಿಮಿಷತ್ಯಂಡಂ ಜಾತಂ ನ ಚೋಪತಿ|

03133026c ಅಶ್ಮನೋ ಹೃದಯಂ ನಾಸ್ತಿ ನದೀ ವೇಗೇನ ವರ್ಧತೇ||

ಅಷ್ಟಾವಕ್ರನು ಹೇಳಿದನು: “ಮೀನು ನಿದ್ದೆಮಾಡುತ್ತಿರುವಾಗ ಕಣ್ಣು ಮುಚ್ಚುವುದಿಲ್ಲ ಮತ್ತು ಮೊಟ್ಟೆಯು ಹುಟ್ಟಿದಾಗ ಚಲಿಸುವುದಿಲ್ಲ. ಕಲ್ಲಿಗೆ ಹೃದಯವಿಲ್ಲ ಮತ್ತು ನದಿಯು ವೇಗದಲ್ಲಿ ಬೆಳೆಯುತ್ತದೆ.”

03133027 ರಾಜೋವಾಚ|

03133027a ನ ತ್ವಾ ಮನ್ಯೇ ಮಾನುಷಂ ದೇವಸತ್ತ್ವಂ|

         ನ ತ್ವಂ ಬಾಲಃ ಸ್ಥವಿರಸ್ತ್ವಂ ಮತೋ ಮೇ|

03133027c ನ ತೇ ತುಲ್ಯೋ ವಿದ್ಯತೇ ವಾಕ್ಪ್ರಲಾಪೇ|

         ತಸ್ಮಾದ್ದ್ವಾರಂ ವಿತರಾಮ್ಯೇಷ ಬಂದೀ||

ರಾಜನು ಹೇಳಿದನು: “ನೀನು ಮನುಷ್ಯನಲ್ಲ ದೇವಸತ್ವವೆಂದು ತಿಳಿಯುತ್ತೇನೆ. ನೀನು ಬಾಲಕನಲ್ಲ ಆದರೆ ಸ್ಥಾವಿರನೆಂದು ನನ್ನ ಅಭಿಪ್ರಾಯ. ಮಾತಿನ ಪ್ರವಾಹದಲ್ಲಿ ನಿನ್ನ ಸಮಾನನು ಇಲ್ಲವೆಂದೇ ತಿಳಿಯಬಹುದು. ಆದುದರಿಂದ ನಿನಗೆ ದ್ವಾರವು ತೆರೆಯಲ್ಪಡುತ್ತದೆ. ಇದೋ ಬಂದಿಯು!”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಷ್ಟಾವಕ್ರೀಯೇ ತ್ರಯಂಸ್ತ್ರಿಶದಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಷ್ಟಾವಕ್ರದಲ್ಲಿ ನೂರಾಮೂವತ್ಮೂರನೆಯ ಅಧ್ಯಾಯವು.

Related image

Comments are closed.