Aranyaka Parva: Chapter 131

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೩೧

ಗಿಡುಗ-ಉಶೀನರರ ಸಂವಾದ (೧-೨೫). ರಾಜನು ಪಾರಿವಾಳಕ್ಕೆ ಸಮನಾದ ತೂಕದ ತನ್ನದೇ ದೇಹದ ಮಾಂಸವನ್ನು ಕೊಡಲು ಸಿದ್ಧನಾಗುವುದು; ಇನ್ನು ತುಂಡುಮಾಡಲು ಮಾಂಸವೇ ಇಲ್ಲವಾಗಲು ತಾನೇ ತಕ್ಕಡಿಯನ್ನೇರುವುದು (೧೬-೨೭). ಇಂದ್ರನು ತನ್ನ ಸ್ವರೂಪವನ್ನು ತಿಳಿಸಿ ವರವನ್ನಿತ್ತುದುದು (೨೮-೩೨).

Image result for ushinara03131001 ಶ್ಯೇನ ಉವಾಚ|

03131001a ಧರ್ಮಾತ್ಮಾನಂ ತ್ವಾಹುರೇಕಂ ಸರ್ವೇ ರಾಜನ್ಮಹೀಕ್ಷಿತಃ|

03131001c ಸ ವೈ ಧರ್ಮವಿರುದ್ಧಂ ತ್ವಂ ಕಸ್ಮಾತ್ಕರ್ಮ ಚಿಕೀರ್ಷಸಿ||

ಗಿಡುಗವು ಹೇಳಿತು: “ರಾಜನ್! ಮಹೀಕ್ಷಿತರೆಲ್ಲರೂ ನೀನೊಬ್ಬ ಧರ್ಮಾತ್ಮನೆಂದು ಕರೆಯುತ್ತಾರೆ. ಹಾಗಿರುವಾಗ ಯಾಕೆ ಈ ಧರ್ಮವಿರುದ್ಧವಾದ ಕಾರ್ಯವನ್ನು ಮಾಡಲು ಬಯಸುತ್ತಿದ್ದೀಯೆ?

03131002a ವಿಹಿತಂ ಭಕ್ಷಣಂ ರಾಜನ್ಪೀಡ್ಯಮಾನಸ್ಯ ಮೇ ಕ್ಷುಧಾ|

03131002c ಮಾ ಭಾಂಕ್ಷೀರ್ಧರ್ಮಲೋಭೇನ ಧರ್ಮಮುತ್ಸೃಷ್ಟವಾನಸಿ||

ರಾಜನ್! ಹಸಿವೆಯಿಂದ ತಳಮಳಿಸುತ್ತಿರುವ ನನ್ನ ಆಹಾರವನ್ನು ತಡೆಯಬೇಡ. ಧರ್ಮದಿಂದ ನನಗಾಗಿರುವ ಆಹಾರವನ್ನು ಕೊಡದೇ ನೀನು ಧರ್ಮವನ್ನೇ ಎಸೆಯುತ್ತಿದ್ದೀಯೆ.”

03131003 ರಾಜೋವಾಚ|

03131003a ಸಂತ್ರಸ್ತರೂಪಸ್ತ್ರಾಣಾರ್ಥೀ ತ್ವತ್ತೋ ಭೀತೋ ಮಹಾದ್ವಿಜ|

03131003c ಮತ್ಸಕಾಶಮನುಪ್ರಾಪ್ತಃ ಪ್ರಾಣಗೃಧ್ನುರಯಂ ದ್ವಿಜಃ||

ರಾಜನು ಹೇಳಿದನು: “ಮಹಾಪಕ್ಷಿಯೇ! ನಿನ್ನ ಭಯದಿಂದ ನಡುಗುತ್ತಾ ರಕ್ಷಣೆಯನ್ನರಸಿಕೊಂಡು ನನ್ನ ಬಳಿ ಸೇರಿ ಈ ಪಕ್ಷಿಯು ಪ್ರಾಣವನ್ನು ಬೇಡಿಕೊಂಡಿದೆ.

03131004a ಏವಮಭ್ಯಾಗತಸ್ಯೇಹ ಕಪೋತಸ್ಯಾಭಯಾರ್ಥಿನಃ|

03131004c ಅಪ್ರದಾನೇ ಪರೋಽಧರ್ಮಃ ಕಿಂ ತ್ವಂ ಶ್ಯೇನ ಪ್ರಪಶ್ಯಸಿ||

ಗಿಡುಗವೇ! ಈ ರೀತಿ ಇಲ್ಲಿಗೆ ಬಂದು ಅಭಯವನ್ನು ಯಾಚಿಸುವ ಪಾರಿವಾಳಕ್ಕೆ ಅಭಯವನ್ನು ಕೊಡದೇ ಇದ್ದರೆ ಅದು ಪರಮ ಅಧರ್ಮವಾಗುತ್ತದೆ ಎಂದು ನಿನಗೆ ಕಾಣುತ್ತಿಲ್ಲವೇ?

03131005a ಪ್ರಸ್ಪಂದಮಾನಃ ಸಂಭ್ರಾಂತಃ ಕಪೋತಃ ಶ್ಯೇನ ಲಕ್ಷ್ಯತೇ|

03131005c ಮತ್ಸಕಾಶಂ ಜೀವಿತಾರ್ಥೀ ತಸ್ಯ ತ್ಯಾಗೋ ವಿಗರ್ಹಿತಃ||

ಗಿಡುಗವೇ! ಈ ಪಾರಿವಾಳವು ಭ್ರಾಂತಗೊಂಡು ನಡುಗುತ್ತಿರುವಂತೆ ಕಾಣುತ್ತಿದೆ. ಜೀವವನ್ನು ಬೇಡಿಕೊಂಡು ನನ್ನ ಬಳಿಬಂದಿರುವ ಇದನ್ನು ತ್ಯಜಿಸುವುದು ನಿಂದನೀಯ.”

03131006 ಶ್ಯೇನ ಉವಾಚ|

03131006a ಆಹಾರಾತ್ಸರ್ವಭೂತಾನಿ ಸಂಭವಂತಿ ಮಹೀಪತೇ|

03131006c ಆಹಾರೇಣ ವಿವರ್ಧಂತೇ ತೇನ ಜೀವಂತಿ ಜಂತವಃ||

ಗಿಡುಗವು ಹೇಳಿತು: “ಮಹೀಪತೇ! ಸರ್ವಭೂತಗಳೂ (ಇರುವ ಎಲ್ಲವೂ) ಆಹಾರದಿಂದಲೇ ಜೀವಿಸುತ್ತವೆ. ಆಹಾರದಿಂದಲೇ ಬೆಳೆಯುತ್ತವೆ ಮತ್ತು ಅದರಿಂದಲೇ ಜಂತುಗಳು ಜೀವಿಸುತ್ತವೆ.

03131007a ಶಕ್ಯತೇ ದುಸ್ತ್ಯಜೇಽಪ್ಯರ್ಥೇ ಚಿರರಾತ್ರಾಯ ಜೀವಿತುಂ|

03131007c ನ ತು ಭೋಜನಮುತ್ಸೃಜ್ಯ ಶಕ್ಯಂ ವರ್ತಯಿತುಂ ಚಿರಂ||

ತ್ಯಜಿಸಲು ಕಷ್ಟವಾದ ವಸ್ತುಗಳಿಲ್ಲದೆಯೂ ಮನುಷ್ಯನು ಬಹಳಷ್ಟು ಕಾಲ ಜೀವಿಸಬಹುದು. ಆದರೆ ಆಹಾರವಿಲ್ಲದೇ ಅವನು ಬಹಳಷ್ಟು ಕಾಲ ಜೀವಿಸಿರಲು ಸಾಧ್ಯವಿಲ್ಲ.

03131008a ಭಕ್ಷ್ಯಾದ್ವಿಲೋಪಿತಸ್ಯಾದ್ಯ ಮಮ ಪ್ರಾಣಾ ವಿಶಾಂ ಪತೇ|

03131008c ವಿಸೃಜ್ಯ ಕಾಯಮೇಷ್ಯಂತಿ ಪಂಥಾನಮಪುನರ್ಭವಂ||

ವಿಶಾಂಪತೇ! ಇಂದು ನನ್ನ ಆಹಾರದಿಂದ ವಂಚಿತನಾದರೆ ನನ್ನ ಪ್ರಾಣವು ದೇಹವನ್ನು ತೊರೆದು ಹಿಂದಿರುಗಿ ಬರಲಿಕ್ಕಾಗದೇ ಇರುವ ದಾರಿಯನ್ನು ಹಿಡಿಯುತ್ತದೆ.

03131009a ಪ್ರಮೃತೇ ಮಯಿ ಧರ್ಮಾತ್ಮನ್ಪುತ್ರದಾರಂ ನಶಿಷ್ಯತಿ|

03131009c ರಕ್ಷಮಾಣಃ ಕಪೋತಂ ತ್ವಂ ಬಹೂನ್ಪ್ರಾಣಾನ್ನಶಿಷ್ಯಸಿ||

ಧರ್ಮಾತ್ಮನ್! ನಾನು ಮೊದಲೇ ತೀರಿಕೊಂಡರೆ ನನ್ನ ಹೆಂಡತಿ ಮತ್ತು ಮಗು ನಾಶಹೊಂದುತ್ತಾರೆ. ಈ ಪಾರಿವಾಳವನ್ನು ನೀನು ರಕ್ಷಿಸಿದರೆ ಬಹಳಷ್ಟು ಪ್ರಾಣಗಳು ನಾಶಹೊಂದುತ್ತವೆ.

03131010a ಧರ್ಮಂ ಯೋ ಬಾಧತೇ ಧರ್ಮೋ ನ ಸ ಧರ್ಮಃ ಕುಧರ್ಮ ತತ್|

03131010c ಅವಿರೋಧೀ ತು ಯೋ ಧರ್ಮಃ ಸ ಧರ್ಮಃ ಸತ್ಯವಿಕ್ರಮ||

ಧರ್ಮವನ್ನು ಬಾಧಿಸುವ ಧರ್ಮವು ಧರ್ಮವಲ್ಲ. ಅದು ಕುಧರ್ಮ. ಸತ್ಯವಿಕ್ರಮ! ಧರ್ಮಕ್ಕೆ ಅವಿರೋಧಿಯಾಗಿರುವುದೇ ಧರ್ಮ.

03131011a ವಿರೋಧಿಷು ಮಹೀಪಾಲ ನಿಶ್ಚಿತ್ಯ ಗುರುಲಾಘವಂ|

03131011c ನ ಬಾಧಾ ವಿದ್ಯತೇ ಯತ್ರ ತಂ ಧರ್ಮಂ ಸಮುದಾಚರೇತ್||

ಮಹೀಪಾಲ! ಎರಡು ವಿಷಯಗಳು ಒಂದಕ್ಕೊಂದು ವಿರೋಧವಾಗಿರುವಾಗ ಯಾವುದು ಹೆಚ್ಚು ಮತ್ತು ಯಾವುದು ಕೀಳು ಎನ್ನುವುದನ್ನು ನಿಶ್ಚಯಿಸು. ಏನನ್ನೂ ಬಾಧಿಸದೇ ಇರುವಂಥ ಧರ್ಮವನ್ನು ಎಲ್ಲರೂ ಆಚರಿಸಬೇಕು.

03131012a ಗುರುಲಾಘವಮಾಜ್ಞಾಯ ಧರ್ಮಾಧರ್ಮವಿನಿಶ್ಚಯೇ|

03131012c ಯತೋ ಭೂಯಾಂಸ್ತತೋ ರಾಜನ್ಕುರು ಧರ್ಮವಿನಿಶ್ಚಯಂ||

ರಾಜನ್! ಯಾವುದು ಹೆಚ್ಚಿನದು ಮತ್ತು ಯಾವುದು ಕೀಳಾದುದು ಎಂದು ತಿಳಿದು ಧರ್ಮಾಧರ್ಮಗಳನ್ನು ನಿಶ್ಚಯಿಸಿ ಯಾವುದು ಹೆಚ್ಚು ಒಳ್ಳೆಯದನ್ನು ಮಾಡುತ್ತದೆಯೋ ಅದನ್ನೇ ಧರ್ಮವೆಂದು ನಿಶ್ಚಯಿಸಿ ಮಾಡು.”

03131013 ರಾಜೋವಾಚ|

03131013a ಬಹುಕಲ್ಯಾಣಸಮ್ಯುಕ್ತಂ ಭಾಷಸೇ ವಿಹಗೋತ್ತಮ|

03131013c ಸುಪರ್ಣಃ ಪಕ್ಷಿರಾಟ್ಕಿಂ ತ್ವಂ ಧರ್ಮಜ್ಞಶ್ಚಾಸ್ಯಸಂಶಯಂ||

03131013e ತಥಾ ಹಿ ಧರ್ಮಸಮ್ಯುಕ್ತಂ ಬಹು ಚಿತ್ರಂ ಪ್ರಭಾಷಸೇ||

ರಾಜನು ಹೇಳಿದನು: “ವಿಹಗೋತ್ತಮ! ನೀನು ತುಂಬಾ ಚೆನ್ನಾಗಿ ಮಾತನಾಡುತ್ತೀಯೆ. ಪಕ್ಷಿರಾಜ! ಸುಂದರ ರೆಕ್ಕೆಗಳನ್ನುಳ್ಳ ನೀನು ಧರ್ಮವನ್ನು ತಿಳಿದಿದ್ದೀಯೆ ಎನ್ನುವುದರಲ್ಲಿ ಸಂಶಯವಾದರೂ ಏಕೆ? ಧರ್ಮಸಂಯುಕ್ತವಾದ ದೀರ್ಘವಾದ ವಿಚಿತ್ರ ಮಾತುಗಳನ್ನಾಡಿದ್ದೀಯೆ.

03131014a ನ ತೇಽಸ್ತ್ಯವಿದಿತಂ ಕಿಂ ಚಿದಿತಿ ತ್ವಾ ಲಕ್ಷಯಾಮ್ಯಹಂ|

03131014c ಶರಣೈಷಿಣಃ ಪರಿತ್ಯಾಗಂ ಕಥಂ ಸಾಧ್ವಿತಿ ಮನ್ಯಸೇ||

ನೀನು ಹೇಳಿದುದರಲ್ಲಿ ಅಸತ್ಯವೇನೂ ನನಗೆ ಕಾಣುವುದಿಲ್ಲ. ಶರಣಾರ್ಥಿಯನ್ನು ತ್ಯಜಿಸುವುದು ಒಳ್ಳೆಯದು ಎಂದು ಹೇಗೆ ಹೇಳುತ್ತೀಯೆ?

03131015a ಆಹಾರಾರ್ಥಂ ಸಮಾರಂಭಸ್ತವ ಚಾಯಂ ವಿಹಂಗಮ|

03131015c ಶಕ್ಯಶ್ಚಾಪ್ಯನ್ಯಥಾ ಕರ್ತುಮಾಹಾರೋಽಪ್ಯಧಿಕಸ್ತ್ವಯಾ||

ಪಕ್ಷಿಯೇ! ಇದೆಲ್ಲವೂ ನೀನು ಆಹಾರವನ್ನು ಹುಡುಕುವುದರಿಂದ ಪ್ರಾರಂಭವಾಯಿತು. ಆದರೆ ನೀನು ಬೇರೆ ರೀತಿಯಲ್ಲಿ ಇನ್ನೂ ಒಳ್ಳೆಯ ಆಹಾರವನ್ನು ಪಡೆಯಲು ಶಕ್ಯನಾಗಿದ್ದೀಯೆ.

03131016a ಗೋವೃಷೋ ವಾ ವರಾಹೋ ವಾ ಮೃಗೋ ವಾ ಮಹಿಷೋಽಪಿ ವಾ|

03131016c ತ್ವದರ್ಥಮದ್ಯ ಕ್ರಿಯತಾಂ ಯದ್ವಾನ್ಯದಭಿಕಾಂಕ್ಷಸೇ||

ಹಸು, ಹೋರಿ, ಅಥವಾ ಹಂದಿ, ಅಥವಾ ಜಿಂಕೆ ಅಥವಾ ಎಮ್ಮೆಯನ್ನಾದರೂ ಅಥವಾ ನೀನು ಏನನ್ನು ಬಯಸುತ್ತೀಯೋ ಅದನ್ನು ನಿನಗೋಸ್ಕರ ಬಡಿಸುತ್ತೇನೆ.”

03131017 ಶ್ಯೇನ ಉವಾಚ|

03131017a ನ ವರಾಹಂ ನ ಚೋಕ್ಷಾಣಂ ನ ಮೃಗಾನ್ವಿವಿಧಾಂಸ್ತಥಾ|

03131017c ಭಕ್ಷಯಾಮಿ ಮಹಾರಾಜ ಕಿಮನ್ನಾದ್ಯೇನ ತೇನ ಮೇ||

ಗಿಡುಗವು ಹೇಳಿತು: “ಮಹಾರಾಜ! ನಾನು ಹಂದಿಯಾಗಲೀ, ಎತ್ತುಗಳನ್ನಾಗಲೀ ಅಥವಾ ವಿವಿಧ ರೀತಿಯ ಜಿಂಕೆಗಳನ್ನಾಗಲೀ ತಿನ್ನುವುದಿಲ್ಲ. ಅವುಗಳ ಮಾಂಸವು ನನಗೇತಕ್ಕೆ?

03131018a ಯಸ್ತು ಮೇ ದೈವವಿಹಿತೋ ಭಕ್ಷಃ ಕ್ಷತ್ರಿಯಪುಂಗವ|

03131018c ತಮುತ್ಸೃಜ ಮಹೀಪಾಲ ಕಪೋತಮಿಮಮೇವ ಮೇ||

ಕ್ಷತ್ರಿಯ ಪುಂಗವ! ದೈವವಿಹಿತವಾದ ಆಹಾರವೇ ನನಗಿರಲಿ. ಮಹೀಪಾಲ! ಈ ಪಾರಿವಾಳವನ್ನೇ ನನಗಾಗಿ ಬಿಟ್ಟುಕೊಡು.

03131019a ಶ್ಯೇನಾಃ ಕಪೋತಾನ್ಖಾದಂತಿ ಸ್ಥಿತಿರೇಷಾ ಸನಾತನೀ|

03131019c ಮಾ ರಾಜನ್ಮಾರ್ಗಮಾಜ್ಞಾಯ ಕದಲೀಸ್ಕಂಧಮಾರುಹ||

ಗಿಡುಗಗಳು ಪಾರಿವಾಳಗಳನ್ನು ತಿನ್ನುತ್ತವೆ ಎನ್ನುವುದು ಸನಾತನ ಸ್ಥಿತಿ. ರಾಜನ್! ದಾರಿಯನ್ನು ತಿಳಿಯದೇ ಬಾಳೆಯ ಮರವನ್ನು ಹತ್ತಬೇಡ!”

03131020 ರಾಜೋವಾಚ|

03131020a ರಾಜ್ಯಂ ಶಿಬೀನಾಮೃದ್ಧಂ ವೈ ಶಾಧಿ ಪಕ್ಷಿಗಣಾರ್ಚಿತ|

03131020c ಯದ್ವಾ ಕಾಮಯಸೇ ಕಿಂ ಚಿಚ್ಶ್ಯೇನ ಸರ್ವಂ ದದಾನಿ ತೇ||

03131020e ವಿನೇಮಂ ಪಕ್ಷಿಣಂ ಶ್ಯೇನ ಶರಣಾರ್ಥಿನಮಾಗತಂ||

ರಾಜನು ಹೇಳಿದನು: “ಪಕ್ಷಿಗಣಗಳಿಂದ ಗೌರವಿಸಲ್ಪಟ್ಟ ನೀನು ಈ ಸಮೃದ್ಧವಾದ ಶಿಬಿರಾಜ್ಯವನ್ನು ಆಳು. ಗಿಡುಗ! ಅಥವಾ ಶರಣಾರ್ಥಿಯಾಗಿ ಬಂದಿರುವ ಈ ಪಕ್ಷಿಯನ್ನು ಬಿಟ್ಟು ನೀನು ಬಯಸುವ ಎಲ್ಲವನ್ನೂ ನಾನು ನಿನಗೆ ಕೊಡುತ್ತೇನೆ.

03131021a ಯೇನೇಮಂ ವರ್ಜಯೇಥಾಸ್ತ್ವಂ ಕರ್ಮಣಾ ಪಕ್ಷಿಸತ್ತಮ|

03131021c ತದಾಚಕ್ಷ್ವ ಕರಿಷ್ಯಾಮಿ ನ ಹಿ ದಾಸ್ಯೇ ಕಪೋತಕಂ||

ಪಕ್ಷಿಸತ್ತಮ! ನಾನು ಏನು ಮಾಡಿದರೆ ನೀನು ಇದನ್ನು ಬಿಟ್ಟುಬಿಡುತ್ತೀಯೆ ಎನ್ನುವುದನ್ನು ಹೇಳು. ನೀನು ಹೇಳಿದಂತೆ ನಾನು ಮಾಡುತ್ತೇನೆ. ಆದರೆ ಈ ಪಾರಿವಾಳವನ್ನು ಮಾತ್ರ ನಾನು ನಿನಗೆ ಕೊಡುವುದಿಲ್ಲ.”

03131022 ಶ್ಯೇನ ಉವಾಚ|

03131022a ಉಶೀನರ ಕಪೋತೇ ತೇ ಯದಿ ಸ್ನೇಹೋ ನರಾಧಿಪ|

03131022c ಆತ್ಮನೋ ಮಾಂಸಮುತ್ಕೃತ್ಯ ಕಪೋತತುಲಯಾ ಧೃತಂ||

ಗಿಡುಗವು ಹೇಳಿತು: “ನರಾಧಿಪ! ಉಶೀನರ! ನೀನು ಈ ಪಾರಿವಾಳವನ್ನು ಪ್ರೀತಿಸುತ್ತೀಯಾದರೆ ನಿನ್ನದೇ ಮಾಂಸವನ್ನು ಕಿತ್ತು ಈ ಪಾರಿವಾಳದ ಸರಿಸಮನಾಗಿ ತೂಕಮಾಡು.

03131023a ಯದಾ ಸಮಂ ಕಪೋತೇನ ತವ ಮಾಂಸಂ ಭವೇನ್ನೃಪ|

03131023c ತದಾ ಪ್ರದೇಯಂ ತನ್ಮಹ್ಯಂ ಸಾ ಮೇ ತುಷ್ಟಿರ್ಭವಿಷ್ಯತಿ||

ರಾಜನ್! ನಿನ್ನ ಮಾಂಸವು ಈ ಪಾರಿವಾಳದ ತೂಕಕ್ಕೆ ಸರಿಸಮವಾದಾಗ ಅದನ್ನು ನೀನು ನನಗೆ ಕೊಡು. ಅದರಿಂದ ನಾನು ಸಂತೃಪ್ತನಾಗುತ್ತೇನೆ.”

03131024 ರಾಜೋವಾಚ|

03131024a ಅನುಗ್ರಹಮಿಮಂ ಮನ್ಯೇ ಶ್ಯೇನ ಯನ್ಮಾಭಿಯಾಚಸೇ|

03131024c ತಸ್ಮಾತ್ತೇಽದ್ಯ ಪ್ರದಾಸ್ಯಾಮಿ ಸ್ವಮಾಂಸಂ ತುಲಯಾ ಧೃತಂ||

ರಾಜನು ಹೇಳಿದನು: “ಗಿಡುಗವೇ! ನೀನು ಕೇಳುತ್ತಿರುವುದು ನನ್ನ ಅನುಗ್ರಹವೆಂದು ತಿಳಿಯುತ್ತೇನೆ. ಇಂದು ನಾನು ನಿನಗೆ ಇದರ ಸರಿಸಮನಾದ ತೂಕದ ನನ್ನ ಮಾಂಸವನ್ನು ಕೊಡುತ್ತೇನೆ.””

03131025 ಲೋಮಶ ಉವಾಚ|

03131025a ಅಥೋತ್ಕೃತ್ಯ ಸ್ವಮಾಂಸಂ ತು ರಾಜಾ ಪರಮಧರ್ಮವಿತ್|

03131025c ತುಲಯಾಮಾಸ ಕೌಂತೇಯ ಕಪೋತೇನ ಸಹಾಭಿಭೋ||

ಲೋಮಶನು ಹೇಳಿದನು: “ವಿಭೋ! ಕೌಂತೇಯ! ಆ ಪರಮಧರ್ಮವಿದು ರಾಜನು ತನ್ನ ಮಾಂಸವನ್ನು ಕಿತ್ತು ಪಾರಿವಾಳದ ವಿರುದ್ಧ ತುಲನೆ ಮಾಡಿದನು.

03131026a ಧ್ರಿಯಮಾಣಸ್ತು ತುಲಯಾ ಕಪೋತೋ ವ್ಯತಿರಿಚ್ಯತೇ|

03131026c ಪುನಶ್ಚೋತ್ಕೃತ್ಯ ಮಾಂಸಾನಿ ರಾಜಾ ಪ್ರಾದಾದುಶೀನರಃ||

03131027a ನ ವಿದ್ಯತೇ ಯದಾ ಮಾಂಸಂ ಕಪೋತೇನ ಸಮಂ ಧೃತಂ|

03131027c ತತ ಉತ್ಕೃತ್ತಮಾಂಸೋಽಸಾವಾರುರೋಹ ಸ್ವಯಂ ತುಲಾಂ||

ಆದರೆ ತಕ್ಕಡಿಯಲ್ಲಿ ಪಾರಿವಾಳವು ಭಾರವಾಗಿತ್ತು. ಆಗ ರಾಜಾ ಉಶೀನರನು ಪುನಃ ತನ್ನ ಮಾಂಸವನ್ನು ಕಿತ್ತು ಕೊಟ್ಟನು. ಆದರೂ ಅವನ ಮಾಂಸವು ಪಾರಿವಾಳದ ತೂಕಕ್ಕೆ ಸಮನಾಗಲಿಲ್ಲ. ಇನ್ನೂ ತುಂಡುಮಾಡಲು ಮಾಂಸವೇ ಇಲ್ಲದಾಗಲು, ಸ್ವಯಂ ತಾನೇ ತಕ್ಕಡಿಯನ್ನೇರಿದನು.

03131028 ಶ್ಯೇನ ಉವಾಚ|

03131028a ಇಂದ್ರೋಽಹಮಸ್ಮಿ ಧರ್ಮಜ್ಞ ಕಪೋತೋ ಹವ್ಯವಾಡಯಂ|

03131028c ಜಿಜ್ಞಾಸಮಾನೌ ಧರ್ಮೇ ತ್ವಾಂ ಯಜ್ಞವಾಟಮುಪಾಗತೌ||

ಗಿಡುಗವು ಹೇಳಿತು: “ಧರ್ಮಜ್ಞ! ನಾನು ಇಂದ್ರ ಮತ್ತು ಪಾರಿವಾಳವು ಅಗ್ನಿಯು. ಧರ್ಮದಲ್ಲಿ ನಿನ್ನನ್ನು ಪರೀಕ್ಷಿಸಲು ನಾವೀರ್ವರು ನಿನ್ನ ಯಜ್ಞವಾಟಿಗೆಗೆ ಬಂದಿದ್ದೇವೆ.

03131029a ಯತ್ತೇ ಮಾಂಸಾನಿ ಗಾತ್ರೇಭ್ಯ ಉತ್ಕೃತ್ತಾನಿ ವಿಶಾಂ ಪತೇ|

03131029c ಏಷಾ ತೇ ಭಾಸ್ವರೀ ಕೀರ್ತಿರ್ಲೋಕಾನಭಿಭವಿಷ್ಯತಿ||

ವಿಶಾಂಪತೇ! ನಿನ್ನ ದೇಹದಿಂದಲೇ ಮಾಂಸವನ್ನು ಕಿತ್ತು ಕೊಟ್ಟಿರುವುದು ನಿನ್ನನ್ನು ಲೋಕದಲ್ಲಿ ಬೆಳಗಿಸಿ ಕೀರ್ತಿವಂತನಾಗಿಸುತ್ತದೆ.

03131030a ಯಾವಲ್ಲೋಕೇ ಮನುಷ್ಯಾಸ್ತ್ವಾಂ ಕಥಯಿಷ್ಯಂತಿ ಪಾರ್ಥಿವ|

03131030c ತಾವತ್ಕೀರ್ತಿಶ್ಚ ಲೋಕಾಶ್ಚ ಸ್ಥಾಸ್ಯಂತಿ ತವ ಶಾಶ್ವತಾಃ||

ಪಾರ್ಥಿವ! ಎಂದಿನವರೆಗೆ ಲೋಕದಲ್ಲಿ ಮನುಷ್ಯರು ನಿನ್ನ ಕುರಿತು ಹೇಳುತ್ತಿರುತ್ತಾರೋ ಅಲ್ಲಿಯ ವರೆಗೆ ನಿನ್ನ ಕೀರ್ತಿಯು ಲೋಕದಲ್ಲಿ ಶಾಶ್ವತವಾಗಿ ನೆಲೆಗೊಳ್ಳುತ್ತದೆ.””

03131031 ಲೋಮಶ ಉವಾಚ|

03131031a ತತ್ಪಾಂಡವೇಯ ಸದನಂ ರಾಜ್ಞಸ್ತಸ್ಯ ಮಹಾತ್ಮನಃ|

03131031c ಪಶ್ಯಸ್ವೈತನ್ಮಯಾ ಸಾರ್ಧಂ ಪುಣ್ಯಂ ಪಾಪಪ್ರಮೋಚನಂ||

ಲೋಮಶನು ಹೇಳಿದನು: “ಪಾಂಡವೇಯ! ಇದು ಆ ಮಹಾತ್ಮ ರಾಜನ ಸದನ. ನನ್ನೊಡನೆ ಆ ಪುಣ್ಯ ಪಾಪಪ್ರಮೋಚನ ಸ್ಥಳವನ್ನು ನೋಡು.

03131032a ಅತ್ರ ವೈ ಸತತಂ ದೇವಾ ಮುನಯಶ್ಚ ಸನಾತನಾಃ|

03131032c ದೃಶ್ಯಂತೇ ಬ್ರಾಹ್ಮಣೈ ರಾಜನ್ಪುಣ್ಯವದ್ಭಿರ್ಮಹಾತ್ಮಭಿಃ||

ರಾಜನ್! ಇಲ್ಲಿಯೇ ದೇವತೆಗಳು ಮತ್ತು ಸನಾತನ ಮುನಿಗಳು ಸತತವಾಗಿ ಪುಣ್ಯವಾದಿಗಳಾದ ಮಹಾತ್ಮ ಬ್ರಾಹ್ಮಣರಿಗೆ ಕಾಣಿಸಿಕೊಳ್ಳುತ್ತಾರೆ.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಶ್ಯೇನಕಪೋತೀಯೇ ಏಕತ್ರಿಂಶದಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಶ್ಯೇನಕಪೋತದಲ್ಲಿ ನೂರಾಮೂವತ್ತೊಂದನೆಯ ಅಧ್ಯಾಯವು.

Image result for indian motifs cranes

Comments are closed.