Aranyaka Parva: Chapter 129

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೨೯

ಯಮುನಾ ತೀರದ ಇತರ ಮಹತ್ವಗಳು (೧-೨೨).

03129001 ಲೋಮಶ ಉವಾಚ|

03129001a ಅಸ್ಮಿನ್ಕಿಲ ಸ್ವಯಂ ರಾಜನ್ನಿಷ್ಟವಾನ್ವೈ ಪ್ರಜಾಪತಿಃ|

03129001c ಸತ್ರಮಿಷ್ಟೀಕೃತಂ ನಾಮ ಪುರಾ ವರ್ಷಸಹಸ್ರಿಕಂ||

ಲೋಮಶನು ಹೇಳಿದನು: “ರಾಜನ್! ಇಲ್ಲಿಯೇ ಸ್ವಯಂ ಪ್ರಜಾಪತಿಯು ಸಹಸ್ರವರ್ಷಗಳ ಪುರಾತನ ಇಷ್ಟೀಕೃತ ಎಂಬ ಹೆಸರಿನ ಸತ್ರವನ್ನು - ಯಾಜಿಸಿದನು.

03129002a ಅಂಬರೀಷಶ್ಚ ನಾಭಾಗ ಇಷ್ಟವಾನ್ಯಮುನಾಮನು|

03129002c ಯಜ್ಞೈಶ್ಚ ತಪಸಾ ಚೈವ ಪರಾಂ ಸಿದ್ಧಿಮವಾಪ ಸಃ||

ನಾಭಾಗ ಅಂಬರೀಷನು ಯಮುನಾತೀರದಲ್ಲಿ ಇಷ್ಟಿಯನ್ನು ನೆರವೇರಿಸಿದನು. ಯಜ್ಞ ಮತ್ತು ತಪಸ್ಸಿನ ಮೂಲಕ ಅವನು ಪರಮ ಸಿದ್ಧಿಯನ್ನು ಹೊಂದಿದನು.

03129003a ದೇಶೋ ನಾಹುಷಯಜ್ಞಾನಾಮಯಂ ಪುಣ್ಯತಮೋ ನೃಪ|

03129003c ಯತ್ರೇಷ್ಟ್ವಾ ದಶ ಪದ್ಮಾನಿ ಸದಸ್ಯೇಭ್ಯೋ ನಿಸೃಷ್ಟವಾನ್||

ನೃಪ! ಇದೇ ಪುಣ್ಯತಮ ಪ್ರದೇಶದಲ್ಲಿ ನಾಹುಷ ಯಯಾತಿಯು ಸದಸ್ಯರಿಗೆ ಹತ್ತು ಪದ್ಮಗಳಷ್ಟನ್ನು ಕೊಟ್ಟು ಯಜ್ಞಮಾಡಿದನು.

03129004a ಸಾರ್ವಭೌಮಸ್ಯ ಕೌಂತೇಯ ಯಯಾತೇರಮಿತೌಜಸಃ|

03129004c ಸ್ಪರ್ಧಮಾನಸ್ಯ ಶಕ್ರೇಣ ಪಶ್ಯೇದಂ ಯಜ್ಞವಾಸ್ತ್ವಿಹ||

ಕೌಂತೇಯ! ಇದನ್ನು ನೋಡು! ಅಮಿತೌಜಸ ಯಯಾತಿಯು ಇಲ್ಲಿ ಯಜ್ಞಮಾಡಿ ಶಕ್ರನೊಡನೆ ಸ್ಪರ್ಧಿಸಿ ಸಾರ್ವಭೌಮತ್ವವನ್ನು ಪಡೆದನು.

03129005a ಪಶ್ಯ ನಾನಾವಿಧಾಕಾರೈರಗ್ನಿಭಿರ್ನಿಚಿತಾಂ ಮಹೀಂ|

03129005c ಮಜ್ಜಂತೀಮಿವ ಚಾಕ್ರಾಂತಾಂ ಯಯಾತೇರ್ಯಜ್ಞಕರ್ಮಭಿಃ||

ನೋಡು! ಯಯಾತಿಯ ಯಜ್ಞಕರ್ಮಗಳಿಂದ ನಾನಾವಿಧದ ಅಗ್ನಿವೇದಿ ರಾಶಿಗಳ ಭಾರದಿಂದ ಭೂಮಿಯು ಸೋತು ತಗ್ಗಾದಂತೆ ಕಾಣುತ್ತದೆ.

03129006a ಏಷಾ ಶಮ್ಯೇಕಪತ್ರಾ ಸಾ ಶರಕಂ ಚೈತದುತ್ತಮಂ|

03129006c ಪಶ್ಯ ರಾಮಹ್ರದಾನೇತಾನ್ಪಶ್ಯ ನಾರಾಯಣಾಶ್ರಮಂ||

ಇದು ಒಂದೇ ಎಲೆಯ ಶಮೀ ವೃಕ್ಷ, ಇದು ಉತ್ತಮ ಚೈತ್ಯ. ಇಲ್ಲಿಯೇ ರಾಮಸರೋವರನ್ನು ನೋಡು ಮತ್ತು ನಾರಾಯಣಾಶ್ರಮವನ್ನೂ ನೋಡು.

03129007a ಏತದಾರ್ಚೀಕಪುತ್ರಸ್ಯ ಯೋಗೈರ್ವಿಚರತೋ ಮಹೀಂ|

03129007c ಅಪಸರ್ಪಣಂ ಮಹೀಪಾಲ ರೌಪ್ಯಾಯಾಮಮಿತೌಜಸಃ||

ಮಹೀಪಾಲ! ಇಲ್ಲಿ ಅಮಿತೌಜಸ ಆರ್ಚೀಕನ ಮಗನು ರೌಪ್ಯನದಿಯಲ್ಲಿ ತನ್ನ ಯೋಗದಿಂದ ಭೂಮಿಯನ್ನು ಸಂಚರಿಸಿದನು.

03129008a ಅತ್ರಾನುವಂಶಂ ಪಠತಃ ಶೃಣು ಮೇ ಕುರುನಂದನ|

03129008c ಉಲೂಖಲೈರಾಭರಣೈಃ ಪಿಶಾಚೀ ಯದಭಾಷತ||

ಕುರುನಂದನ! ಉಲೂಖಲ ಆಭರಣಗಳನ್ನು ಧರಿಸಿದ ಪಿಶಾಚಿಗಳು ಹೇಳಿದ ಈ ಅನುವಂಶವನ್ನು ಓದುತ್ತೇನೆ. ಕೇಳು.

03129009a ಯುಗಂಧರೇ ದಧಿ ಪ್ರಾಶ್ಯ ಉಷಿತ್ವಾ ಚಾಚ್ಯುತಸ್ಥಲೇ|

03129009c ತದ್ವದ್ಭೂತಿಲಯೇ ಸ್ನಾತ್ವಾ ಸಪುತ್ರಾ ವಸ್ತುಮಿಚ್ಚಸಿ||

“ಯುಗಂಧರದಲ್ಲಿ ಮೊಸರನ್ನು ತಿಂದು ಅಚ್ಯುತಸ್ಥಲದಲ್ಲಿ ಒಂದು ರಾತ್ರಿಯನ್ನು ಉಳಿದು ನಂತರ ಭೂಮಿಲಯದಲ್ಲಿ ಸ್ನಾನಮಾಡಿ ಪುತ್ರನೊಂದಿಗೆ ಇಲ್ಲಿ ವಾಸಿಸಲು ಬಯಸುತ್ತೀಯೆ!”

03129010a ಏಕರಾತ್ರಮುಷಿತ್ವೇಹ ದ್ವಿತೀಯಂ ಯದಿ ವತ್ಸ್ಯಸಿ|

03129010c ಏತದ್ವೈ ತೇ ದಿವಾ ವೃತ್ತಂ ರಾತ್ರೌ ವೃತ್ತಮತೋಽನ್ಯಥಾ||

ಒಂದು ರಾತ್ರಿ ಇಲ್ಲಿ ಉಳಿದು ಎರಡನೇ ದಿನವೂ ಇಲ್ಲಿಯೇ ಉಳಿದರೆ ಹಗಲು ಮಾಡಿದುದೂ ರಾತ್ರಿ ಮಾಡಿದುದೂ ಬದಲಾಗುವವು.

03129011a ಅತ್ರಾದ್ಯಾಹೋ ನಿವತ್ಸ್ಯಾಮಃ ಕ್ಷಪಾಂ ಭರತಸತ್ತಮ|

03129011c ದ್ವಾರಮೇತದ್ಧಿ ಕೌಂತೇಯ ಕುರುಕ್ಷೇತ್ರಸ್ಯ ಭಾರತ||

ಭರತಸತ್ತಮ! ಇಂದು ಇಲ್ಲಿಯೇ ಉಳಿಯೋಣ. ಭಾರತ ಕೌಂತೇಯ! ಇದು ಕುರುಕ್ಷೇತ್ರದ ದ್ವಾರವೆಂದು ತಿಳಿ.

03129012a ಅತ್ರೈವ ನಾಹುಷೋ ರಾಜಾ ರಾಜನ್ಕ್ರತುಭಿರಿಷ್ಟವಾನ್|

03129012c ಯಯಾತಿರ್ಬಹುರತ್ನಾಢ್ಯೈರ್ಯತ್ರೇಂದ್ರೋ ಮುದಮಭ್ಯಗಾತ್||

ರಾಜನ್! ಇಲ್ಲಿಯೇ ರಾಜಾ ನಾಹುಷ ಯಯಾತಿಯು ಬಹುರತ್ನಗಳಿಂದ ದೇವೇಂದ್ರನು ಸಂತೋಷಗೊಂಡ ಕ್ರತುವನ್ನು ನೆರವೇರಿಸಿದನು.

03129013a ಏತತ್ಪ್ಲಕ್ಷಾವತರಣಂ ಯಮುನಾತೀರ್ಥಮುಚ್ಯತೇ|

03129013c ಏತದ್ವೈ ನಾಕಪೃಷ್ಠಸ್ಯ ದ್ವಾರಮಾಹುರ್ಮನೀಷಿಣಃ||

ಈ ಯಮುನಾ ತೀರ್ಥವನ್ನು ಪ್ಲಕ್ಷಾವತರಣ ಎಂದು ಕರೆಯುತ್ತಾರೆ. ಇದೇ ನಾಕಪೃಷ್ಟದ ದ್ವಾರವೆಂದು ತಿಳಿದವರು ಹೇಳುತ್ತಾರೆ.

03129014a ಅತ್ರ ಸಾರಸ್ವತೈರ್ಯಜ್ಞೈರೀಜಾನಾಃ ಪರಮರ್ಷಯಃ|

03129014c ಯೂಪೋಲೂಖಲಿನಸ್ತಾತ ಗಚ್ಚಂತ್ಯವಭೃಥಾಪ್ಲವಂ||

ಇಲ್ಲಿ ಸಾರಸ್ವತ ಯಜ್ಞವನ್ನು ಮುಗಿಸಿ ಪರಮ ಋಷಿಗಳು ಯೂಪ ಉಲೂಖಗಳನ್ನು ಹಿಡಿದು ಅವಭೃತಸ್ನಾನಕ್ಕೆ ಹೋದರು.

03129015a ಅತ್ರೈವ ಭರತೋ ರಾಜಾ ಮೇಧ್ಯಮಶ್ವಮವಾಸೃಜತ್|

03129015c ಅಸಕೃತ್ಕೃಷ್ಣಸಾರಂಗಂ ಧರ್ಮೇಣಾವಾಪ್ಯ ಮೇದಿನೀಂ||

ಇಲ್ಲಿಯೇ ರಾಜಾ ಭರತನು ಕೃಷ್ಣಸಾರಂಗವನ್ನು ಹೊದಿಸಿ ಅಶ್ವಮೇಧದ ಕುದುರೆಯನ್ನು ಬಿಟ್ಟು ಧರ್ಮದಿಂದ ಭೂಮಿಯನ್ನು ಪಡೆದನು.

03129016a ಅತ್ರೈವ ಪುರುಷವ್ಯಾಘ್ರ ಮರುತ್ತಃ ಸತ್ರಮುತ್ತಮಂ|

03129016c ಆಸ್ತೇ ದೇವರ್ಷಿಮುಖ್ಯೇನ ಸಂವರ್ತೇನಾಭಿಪಾಲಿತಃ||

ಪುರುಷವ್ಯಾಘ್ರ! ಇಲ್ಲಿಯೇ ಮರುತ್ತನು ಉತ್ತಮ ಸತ್ರವನ್ನು ದೇವರ್ಷಿಗಳ ಮುಖದಿಂದ ಸಂವರ್ತನನ ರಕ್ಷಣೆಯಲ್ಲಿ ನೆರವೇರಿಸಿದನು.

03129017a ಅತ್ರೋಪಸ್ಪೃಶ್ಯ ರಾಜೇಂದ್ರ ಸರ್ವಾಽಲ್ಲೋಕಾನ್ಪ್ರಪಶ್ಯತಿ|

03129017c ಪೂಯತೇ ದುಷ್ಕೃತಾಚ್ಚೈವ ಸಮುಪಸ್ಪೃಶ್ಯ ಭಾರತ||

ರಾಜೇಂದ್ರ! ಇಲ್ಲಿ ಸ್ನಾನಮಾಡು! ಭಾರತ! ಸರ್ವಲೋಕಗಳನ್ನೂ ನೋಡುತ್ತೀಯೆ ಮತ್ತು ಎಲ್ಲ ದುಷ್ಕೃತಗಳಿಂದಲೂ ಶುದ್ಧನಾಗುತ್ತೀಯೆ.””

03129018 ವೈಶಂಪಾಯನ ಉವಾಚ|

03129018a ತತ್ರ ಸಭ್ರಾತೃಕಃ ಸ್ನಾತ್ವಾ ಸ್ತೂಯಮಾನೋ ಮಹರ್ಷಿಭಿಃ|

03129018c ಲೋಮಶಂ ಪಾಂಡವಶ್ರೇಷ್ಠ ಇದಂ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ಅಲ್ಲಿ ತಮ್ಮಂದಿರೊಡನೆ ಸ್ನಾನಮಾಡಿ, ಮಹರ್ಷಿಗಳು ಹೊಗಳುತ್ತಿರಲು ಪಾಂಡವಶ್ರೇಷ್ಠನು ಲೋಮಶನಿಗೆ ಈ ಮಾತುಗಳನ್ನಾಡಿದನು:

03129019a ಸರ್ವಾಽಲ್ಲೋಕಾನ್ಪ್ರಪಶ್ಯಾಮಿ ತಪಸಾ ಸತ್ಯವಿಕ್ರಮ|

03129019c ಇಹಸ್ಥಃ ಪಾಂಡವಶ್ರೇಷ್ಠಂ ಪಶ್ಯಾಮಿ ಶ್ವೇತವಾಹನಂ||

“ಸತ್ಯವಿಕ್ರಮ! ತಪಸ್ಸಿನಿಂದ ಸರ್ವ ಲೋಕಗಳನ್ನು ಕಂಡೆ. ಇಲ್ಲಿ ನಿಂತಿರುವಾಗ ಪಾಂಡವಶ್ರೇಷ್ಠ ಶ್ವೇತವಾಹನನನ್ನು ಕಾಣುತ್ತಿದ್ದೇನೆ.”

03129020 ಲೋಮಶ ಉವಾಚ|

03129020a ಏವಮೇತನ್ಮಹಾಬಾಹೋ ಪಶ್ಯಂತಿ ಪರಮರ್ಷಯಃ|

03129020c ಸರಸ್ವತೀಮಿಮಾಂ ಪುಣ್ಯಾಂ ಪಶ್ಯೈಕಶರಣಾವೃತಾಂ||

ಲೋಮಶನು ಹೇಳಿದನು: “ಮಹಾಬಾಹೋ! ಪರಮ‌ಋಷಿಗಳೂ ಅದನ್ನೇ ನೋಡುತ್ತಾರೆ. ಸುತ್ತುವರೆದಿರುವವರ ಏಕೈಕ ಶರಣೆಯಾದ ಈ ಪುಣ್ಯ ಸರಸ್ವತಿಯನ್ನು ನೋಡು.

03129021a ಯತ್ರ ಸ್ನಾತ್ವಾ ನರಶ್ರೇಷ್ಠ ಧೂತಪಾಪ್ಮಾ ಭವಿಷ್ಯತಿ|

03129021c ಇಹ ಸಾರಸ್ವತೈರ್ಯಜ್ಞೈರಿಷ್ಟವಂತಃ ಸುರರ್ಷಯಃ||

03129021e ಋಷಯಶ್ಚೈವ ಕೌಂತೇಯ ತಥಾ ರಾಜರ್ಷಯೋಽಪಿ ಚ||

ನರಶ್ರೇಷ್ಠ! ಇಲ್ಲಿ ಸ್ನಾನಮಾಡಿದರೆ ಪಾಪಗಳೆಲ್ಲವೂ ತೊಳೆಯಲ್ಪಡುತ್ತವೆ. ಕೌಂತೇಯ! ಇಲ್ಲಿ ಇಷ್ಟವಂತ ಸುರರ್ಷಿಗಳು, ಋಷಿಗಳೂ, ಮತ್ತು ರಾಜರ್ಷಿಗಳೂ ಕೂಡ ಸಾರಸ್ವತ ಯಜ್ಞವನ್ನು ನಡೆಸಿದರು.

03129022a ವೇದೀ ಪ್ರಜಾಪತೇರೇಷಾ ಸಮಂತಾತ್ಪಂಚಯೋಜನಾ|

03129022c ಕುರೋರ್ವೈ ಯಜ್ಞಶೀಲಸ್ಯ ಕ್ಷೇತ್ರಮೇತನ್ಮಹಾತ್ಮನಃ||

ಇದು ಐದು ಯೋಜನೆ ಪರಿಧಿಯಿರುವ ಪ್ರಜಾಪತಿಯ ವೇದಿ. ಇದು ಯಜ್ಞಶೀಲ ಮಹಾತ್ಮ ಕುರುವಿನ ಕ್ಷೇತ್ರ.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಏಕೋನವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ನೂರಾಇಪ್ಪತ್ತೊಂಭತ್ತನೆಯ ಅಧ್ಯಾಯವು.

Related image

Comments are closed.