Aranyaka Parva: Chapter 125

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೨೫

ಚ್ಯವನನು ಬಯಸಿದಂತೆಯೇ ಆಗಲೆಂದು ಇಂದ್ರನು ಹೇಳಲು, ಚ್ಯವನನು ಮದನನ್ನು ವಿಂಗಡಿಸಿ ಮಾದಕ ಪದಾರ್ಥಗಳಲ್ಲಿ, ಸ್ತ್ರೀಯರಲ್ಲಿ, ಜೂಜಿನಲ್ಲಿ ಬೇಟೆಯಲ್ಲಿ ಹಂಚಿದುದು (೧-೧೦). ಯುಧಿಷ್ಠಿರನ ತೀರ್ಥಯಾತ್ರೆಯು ಮುಂದುವರೆದು, ಅವನು ಮಾಂಧಾತ-ಸೋಮಕರು ಯಜ್ಞಮಾಡಿದ ಸ್ಥಳಕ್ಕೆ ಆಗಮಿಸಿದುದು (೧೧-೨೩).

03125001 ಲೋಮಶ ಉವಾಚ|

03125001a ತಂ ದೃಷ್ಟ್ವಾ ಘೋರವದನಂ ಮದಂ ದೇವಃ ಶತಕ್ರತುಃ|

03125001c ಆಯಾಂತಂ ಭಕ್ಷಯಿಷ್ಯಂತಂ ವ್ಯಾತ್ತಾನನಮಿವಾಂತಕಂ||

03125002a ಭಯಾತ್ಸಂಸ್ತಂಭಿತಭುಜಃ ಸೃಕ್ಕಿಣೀ ಲೇಲಿಹನ್ಮುಹುಃ|

03125002c ತತೋಽಬ್ರವೀದ್ದೇವರಾಜಶ್ಚ್ಯವನಂ ಭಯಪೀಡಿತಃ||

ಲೋಮಶನು ಹೇಳಿದನು: “ಮಿಂಚಿನಂತೆ ಹರಿದಾಡುತ್ತಿರುವ ನಾಲಿಗೆಗಳಿಂದ ಮುಖವನ್ನು ಸವರುತ್ತಾ, ಬಲಾತ್ಕಾರವಾಗಿ ಇಡೀ ಜಗತ್ತನ್ನೇ ನುಂಗಿಬಿಡುತ್ತಾನೋ ಎಂದು ದೊಡ್ಡಕ್ಕೆ ಬಾಯಿ ಕಳೆದು, ತನ್ನ ಘೋರರೂಪದ ಮಹಾ ಗರ್ಜನೆಯು ಲೋಕಗಳಲ್ಲಿ ಮೊಳಗುತ್ತಿರಲು, ಅವನು ಕೋಪದಿಂದ ಶತಕ್ರತು ಇಂದ್ರನನ್ನು ತಿನ್ನಲು ಓಡಿ ಬಂದನು.

03125003a ಸೋಮಾರ್ಹಾವಶ್ವಿನಾವೇತಾವದ್ಯ ಪ್ರಭೃತಿ ಭಾರ್ಗವ|

03125003c ಭವಿಷ್ಯತಃ ಸತ್ಯಮೇತದ್ವಚೋ ಬ್ರಹ್ಮನ್ಬ್ರವೀಮಿ ತೇ||

“ಭಾರ್ಗವ! ಇಂದಿನಿಂದ ಅಶ್ವಿನಿಯರು ಸೋಮಕ್ಕೆ ಅರ್ಹರು. ಬ್ರಹ್ಮನ್! ನಾನು ಮುಂದಾಗುವ ಸತ್ಯವನ್ನೇ ಹೇಳುತ್ತಿದ್ದೇನೆ.

03125004a ನ ತೇ ಮಿಥ್ಯಾ ಸಮಾರಂಭೋ ಭವತ್ವೇಷ ಪರೋ ವಿಧಿಃ|

03125004c ಜಾನಾಮಿ ಚಾಹಂ ವಿಪ್ರರ್ಷೇ ನ ಮಿಥ್ಯಾ ತ್ವಂ ಕರಿಷ್ಯಸಿ||

ವಿಪ್ರರ್ಷೇ! ನಿನ್ನ ಈ ಸಮಾರಂಭವು ಪರಮ ವಿಧಿವತ್ತಾಗಿ ಮಾಡಿರುವಂಥದ್ದು ಮಿಥ್ಯವಾಗಿಲ್ಲ! ನೀನು ಯಾವ ಕೆಲಸವನ್ನೂ ಸುಳ್ಳಾಗಿಸದ ಹಾಗೆ ಮಾಡುತ್ತೀಯೆ ಎಂದು ತಿಳಿದಿದ್ದೇನೆ.

03125005a ಸೋಮಾರ್ಹಾವಶ್ವಿನಾವೇತೌ ಯಥೈವಾದ್ಯ ಕೃತೌ ತ್ವಯಾ|

03125005c ಭೂಯ ಏವ ತು ತೇ ವೀರ್ಯಂ ಪ್ರಕಾಶೇದಿತಿ ಭಾರ್ಗವ||

03125006a ಸುಕನ್ಯಾಯಾಃ ಪಿತುಶ್ಚಾಸ್ಯ ಲೋಕೇ ಕೀರ್ತಿಃ ಪ್ರಥೇದಿತಿ|

03125006c ಅತೋ ಮಯೈತದ್ವಿಹಿತಂ ತವ ವೀರ್ಯಪ್ರಕಾಶನಂ||

03125006e ತಸ್ಮಾತ್ಪ್ರಸಾದಂ ಕುರು ಮೇ ಭವತ್ವೇತದ್ಯಥೇಚ್ಚಸಿ||

ಇಂದು ನೀನು ಹೇಗೆ ಅಶ್ವಿನಿಯರನ್ನು ಸೋಮಕ್ಕೆ ಅರ್ಹರನ್ನಾಗಿ ಮಾಡಿಸಿದೆಯೋ ಹಾಗೆಯೆ ಆಗಬೇಕಿತ್ತು ಎಂದು ನಾನು ನಿರ್ಧರಿಸಿದ್ದೆ. ಭಾರ್ಗವ! ಇದರಿಂದ ನಿನ್ನ ವೀರ್ಯದ ಪ್ರದರ್ಶನವಾಯಿತು ಮತ್ತು ಸುಕನ್ಯೆಯ ತಂದೆ ಶರ್ಯಾತಿಯ ಕೀರ್ತಿಯು ಲೋಕಗಳಲ್ಲಿ ಹರಡಿದಂತಾಯಿತು. ಆದುದರಿಂದ ನನ್ನ ಮೇಲೆ ಪ್ರಸನ್ನನಾಗು. ನೀನು ಬಯಸಿದ ಹಾಗೆಯೇ ಆಗಲಿ.”

03125007a ಏವಮುಕ್ತಸ್ಯ ಶಕ್ರೇಣ ಚ್ಯವನಸ್ಯ ಮಹಾತ್ಮನಃ|

03125007c ಸ ಮನ್ಯುರ್ವ್ಯಗಮಚ್ಛೀಘ್ರಂ ಮುಮೋಚ ಚ ಪುರಂದರಂ||

ಶಕ್ರನ ಈ ಮಾತಿಗೆ ಮಹಾತ್ಮ ಚ್ಯವನನ ಸಿಟ್ಟು ಹೊರಟುಹೋಗಿ, ಶೀಘ್ರದಲ್ಲಿಯೇ ಪುರಂದರ ಇಂದ್ರನನ್ನು ಬಿಡುಗಡೆ ಮಾಡಿದನು.

03125008a ಮದಂ ಚ ವ್ಯಭಜದ್ರಾಜನ್ಪಾನೇ ಸ್ತ್ರೀಷು ಚ ವೀರ್ಯವಾನ್|

03125008c ಅಕ್ಷೇಷು ಮೃಗಯಾಯಾಂ ಚ ಪೂರ್ವಸೃಷ್ಟಂ ಪುನಃ ಪುನಃ||

ರಾಜನ್! ಮದನನ್ನು ವಿಂಗಡಿಸಿ ಒಂದೊಂದರಂತೆ ಮೊದಲೇ ಸೃಷ್ಟಿಯಾಗಿದ್ದ ಮಾದಕ ಪದಾರ್ಥಗಳಲ್ಲಿ, ಸ್ತ್ರೀಯರಲ್ಲಿ, ಜೂಜಿನಲ್ಲಿ ಮತ್ತು ಬೇಟೆಯಲ್ಲಿ ಹಂಚಿದನು.

03125009a ತಥಾ ಮದಂ ವಿನಿಷ್ಕ್ಷಿಪ್ಯ ಶಕ್ರಂ ಸಂತರ್ಪ್ಯ ಚೇಂದುನಾ|

03125009c ಅಶ್ವಿಭ್ಯಾಂ ಸಹಿತಾನ್ದೇವಾನ್ಯಾಜಯಿತ್ವಾ ಚ ತಂ ನೃಪಂ||

03125010a ವಿಖ್ಯಾಪ್ಯ ವೀರ್ಯಂ ಸರ್ವೇಷು ಲೋಕೇಷು ವದತಾಂ ವರಃ|

03125010c ಸುಕನ್ಯಯಾ ಸಹಾರಣ್ಯೇ ವಿಜಹಾರಾನುರಕ್ತಯಾ||

ಈ ರೀತಿ ಮದನನ್ನು ನಿಯಂತ್ರಿಸಿ ಒಂದು ಬಿಂದುವಿನಿಂದ ಶಕ್ರನನ್ನು, ಅಶ್ವಿನಿಯರನ್ನೂ ಸೇರಿ ದೇವತೆಗಳನ್ನು ತೃಪ್ತಿಪಡಿಸಿ, ರಾಜನ ಯಜ್ಞವನ್ನು ಸಂಪೂರ್ಣಗೊಳಿಸಿ, ತನ್ನ ವೀರ್ಯವನ್ನು ಸರ್ವಲೋಕಗಳಿಗೆ ತಿಳಿಸಿ ಆ ಮಾತುಗಾರರಲ್ಲಿ ಶ್ರೇಷ್ಠ ಚ್ಯವನನು ಸುಕನ್ಯೆಯೊಡನೆ ಅನುರಕ್ತನಾಗಿ ಒಟ್ಟಿಗೇ ಅರಣ್ಯದಲ್ಲಿ ವಿಹರಿಸಿದನು.

03125011a ತಸ್ಯೈತದ್ದ್ವಿಜಸಂಘುಷ್ಟಂ ಸರೋ ರಾಜನ್ಪ್ರಕಾಶತೇ|

03125011c ಅತ್ರ ತ್ವಂ ಸಹ ಸೋದರ್ಯೈಃ ಪಿತೄನ್ದೇವಾಂಶ್ಚ ತರ್ಪಯ||

ರಾಜನ್! ಇಲ್ಲಿ ಪ್ರಕಾಶಿಸುವ ಹಕ್ಕಿಗಳ ಧ್ವನಿಗಳಿಂದ ತುಂಬಿದ ಸರೋವರವು ಅವನದ್ದೇ! ಅಲ್ಲಿಯೇ ನೀನು ಸಹೋದರರೊಂದಿಗೆ ಪಿತೃಗಳಿಗೂ ದೇವತೆಗಳಿಗೂ ತರ್ಪಣವನ್ನು ನೀಡು.

03125012a ಏತದ್ದೃಷ್ಟ್ವಾ ಮಹೀಪಾಲ ಸಿಕತಾಕ್ಷಂ ಚ ಭಾರತ|

03125012c ಸೈಂಧವಾರಣ್ಯಮಾಸಾದ್ಯ ಕುಲ್ಯಾನಾಂ ಕುರು ದರ್ಶನಂ||

03125012e ಪುಷ್ಕರೇಷು ಮಹಾರಾಜ ಸರ್ವೇಷು ಚ ಜಲಂ ಸ್ಪೃಶ||

ಭಾರತ! ಮಹೀಪಾಲ! ಮಹಾರಾಜ! ಇದನ್ನು ಮತ್ತು ಸಿಕತಾಕ್ಷವನ್ನು ನೋಡಿ ಸೈಂಧವಾರಣ್ಯಕ್ಕೆ ಹೋಗಿ ಪುಷ್ಕರಕ್ಕೆ ಸೇರುವ ಎಲ್ಲ ಕಾಲುವೆಗಳನ್ನು ನೋಡು ಮತ್ತು ಸ್ನಾನಮಾಡು.

03125013a ಆರ್ಚೀಕಪರ್ವತಶ್ಚೈವ ನಿವಾಸೋ ವೈ ಮನೀಷಿಣಾಂ|

03125013c ಸದಾಫಲಃ ಸದಾಸ್ರೋತೋ ಮರುತಾಂ ಸ್ಥಾನಮುತ್ತಮಂ||

03125013e ಚೈತ್ಯಾಶ್ಚೈತೇ ಬಹುಶತಾಸ್ತ್ರಿದಶಾನಾಂ ಯುಧಿಷ್ಠಿರ||

ಋಷಿಮುನಿಗಳ ನಿವಾಸಸ್ಥಾನವಾದ, ಸದಾ ಹಣ್ಣುಗಳಿಂದ ಕೂಡಿರುವ, ಸದಾ ಹರಿಯುತ್ತಿರುವ ನದಿಗಳಿಂದ, ತಂಗಾಳಿಯಿಂದ ಕೂಡಿರುವ ಆರ್ಚೀಕ ಪರ್ವತವೇ ಅದು. ಯುಧಿಷ್ಠಿರ! ಇಲ್ಲಿಯೇ ಹಲವಾರು ಸಾವಿರ ದೇವತೆಗಳ ಚೈತ್ಯಗಳಿವೆ.

03125014a ಏತಚ್ಚಂದ್ರಮಸಸ್ತೀರ್ಥಮೃಷಯಃ ಪರ್ಯುಪಾಸತೇ|

03125014c ವೈಖಾನಸಾಶ್ಚ ಋಷಯೋ ವಾಲಖಿಲ್ಯಾಸ್ತಥೈವ ಚ||

ಇದು ಋಷಿಗಳು, ಅದರಲ್ಲೂ ವೈಖಾನ ಋಷಿಗಳು ಮತ್ತು ವಾಲಖಿಲ್ಯರು ಉಪಾಸನೆ ಮಾಡುವ ಚಂದ್ರಮ ತೀರ್ಥವು.

03125015a ಶೃಂಗಾಣಿ ತ್ರೀಣಿ ಪುಣ್ಯಾಣಿ ತ್ರೀಣಿ ಪ್ರಸ್ರವಣಾನಿ ಚ|

03125015c ಸರ್ವಾಣ್ಯನುಪರಿಕ್ರಮ್ಯ ಯಥಾಕಾಮಮುಪಸ್ಪೃಶ||

ಇಲ್ಲಿ ಮೂರು ಪುಣ್ಯಕರ ಬೆಟ್ಟಗಳೂ ಮೂರು ಜಲಪಾತಗಳೂ ಇವೆ. ಇವೆಲ್ಲವನ್ನೂ ಪ್ರದಕ್ಷಿಣೆಮಾಡಿ ಯಥೇಚ್ಛವಾಗಿ ಇಲ್ಲಿ ಸ್ನಾನಮಾಡು.

03125016a ಶಂತನುಶ್ಚಾತ್ರ ಕೌಂತೇಯ ಶುನಕಶ್ಚ ನರಾಧಿಪ|

03125016c ನರನಾರಾಯಣೌ ಚೋಭೌ ಸ್ಥಾನಂ ಪ್ರಾಪ್ತಾಃ ಸನಾತನಂ||

ನರಾಧಿಪ ಕೌಂತೇಯ! ಇಲ್ಲಿಯೇ ಶಂತನು, ಶುನಕ ಮತ್ತು ನರ-ನಾರಾಯಣರಿಬ್ಬರೂ ಕೂಡ ಸನಾತನ ಸ್ಥಾನವನ್ನು ಪಡೆದರು.

03125017a ಇಹ ನಿತ್ಯಶಯಾ ದೇವಾಃ ಪಿತರಶ್ಚ ಮಹರ್ಷಿಭಿಃ|

03125017c ಆರ್ಚೀಕಪರ್ವತೇ ತೇಪುಸ್ತಾನ್ಯಜಸ್ವ ಯುಧಿಷ್ಠಿರ||

ಇಲ್ಲಿ ಆರ್ಚೀಕ ಪರ್ವತದಲ್ಲಿ ದೇವತೆಗಳು, ಪಿತೃಗಳು ಮತ್ತು ಮಹರ್ಷಿಗಳು ವಾಸಿಸಿ ತಪಸ್ಸನ್ನು ಮಾಡಿದ್ದರು. ಯುಧಿಷ್ಠಿರ! ಅವರನ್ನು ಪೂಜಿಸು.

03125018a ಇಹ ತೇ ವೈ ಚರೂನ್ಪ್ರಾಶ್ನನ್ನೃಷಯಶ್ಚ ವಿಶಾಂ ಪತೇ|

03125018c ಯಮುನಾ ಚಾಕ್ಷಯಸ್ರೋತಾಃ ಕೃಷ್ಣಶ್ಚೇಹ ತಪೋರತಃ||

ವಿಶಾಂಪತೇ! ಇಲ್ಲಿ ಆ ಋಷಿಗಳು ಚರುವನ್ನು ತಿನ್ನುತ್ತಾರೆ. ಇದು ಅಕ್ಷಯವಾಗಿ ಹರಿಯುತ್ತಿರುವ ಯಮುನಾ. ಇಲ್ಲಿ ಕೃಷ್ಣನು ತಪಸ್ಸನ್ನಾಚರಿಸಿದನು.

03125019a ಯಮೌ ಚ ಭೀಮಸೇನಶ್ಚ ಕೃಷ್ಣಾ ಚಾಮಿತ್ರಕರ್ಶನ|

03125019c ಸರ್ವೇ ಚಾತ್ರ ಗಮಿಷ್ಯಾಮಃ ಸುಕೃಶಾಃ ಸುತಪಸ್ವಿನಃ||

ಅಮಿತ್ರಕರ್ಶನ! ಯಮಳರು, ಭೀಮಸೇನ ಮತ್ತು ಕೃಷ್ಣಾ ಎಲ್ಲರೂ ಕೃಶರಾದ ಸುತಪಸ್ವಿಗಳಂತೆ ಅಲ್ಲಿಗೆ ಹೋಗೋಣ.

03125020a ಏತತ್ಪ್ರಸ್ರವಣಂ ಪುಣ್ಯಮಿಂದ್ರಸ್ಯ ಮನುಜಾಧಿಪ|

03125020c ಯತ್ರ ಧಾತಾ ವಿಧಾತಾ ಚ ವರುಣಶ್ಚೋರ್ಧ್ವಮಾಗತಾಃ||

03125021a ಇಹ ತೇ ನ್ಯವಸನ್ರಾಜನ್ ಕ್ಷಾಂತಾಃ ಪರಮಧರ್ಮಿಣಃ|

03125021c ಮೈತ್ರಾಣಾಮೃಜುಬುದ್ಧೀನಾಮಯಂ ಗಿರಿವರಃ ಶುಭಃ||

ಮನುಜಾಧಿಪ! ಇದು ಇಂದ್ರನ ಪುಣ್ಯಕರ ಪ್ರಸ್ರವಣ. ಇಲ್ಲಿ ಧಾತಾ, ವಿಧಾತಾ ಮತ್ತು ವರುಣರು ಮೇಲಿನ ಲೋಕಗಳನ್ನು ಪಡೆದರು. ರಾಜನ್! ಅವರು ಕ್ಷಮಾಗುಣವಂತರಾಗಿ, ಪರಮ ಧಾರ್ಮಿಕರಾಗಿ ಇಲ್ಲಿ ವಾಸಿಸುತ್ತಾರೆ.

03125022a ಏಷಾ ಸಾ ಯಮುನಾ ರಾಜನ್ರಾಜರ್ಷಿಗಣಸೇವಿತಾ|

03125022c ನಾನಾಯಜ್ಞಚಿತಾ ರಾಜನ್ಪುಣ್ಯಾ ಪಾಪಭಯಾಪಹಾ||

03125023a ಅತ್ರ ರಾಜಾ ಮಹೇಷ್ವಾಸೋ ಮಾಂಧಾತಾಯಜತ ಸ್ವಯಂ|

03125023c ಸಹದೇವಶ್ಚ ಕೌಂತೇಯ ಸೋಮಕೋ ದದತಾಂ ವರಃ||

ರಾಜನ್! ರಾಜರ್ಷಿಗಣರು ಸೇವಿಸುವ ಯಮುನೆಯೇ ಇವಳು. ರಾಜನ್! ನಾನಾ ಯಜ್ಞಚಿತೆಗಳಿಂದ ಕೂಡಿದ ಇವಳು ಪುಣ್ಯೆ ಮತ್ತು ಭಯವನ್ನು ದೂರಮಾಡುವವಳು. ಕೌಂತೇಯ! ಅಲ್ಲಿ ರಾಜಾ ಮಹೇಷ್ವಾಸ ಸ್ವಯಂ ಮಾಂಧಾತ ಮತ್ತು ದಾನಿಗಳಲ್ಲಿ ಶ್ರೇಷ್ಠ ಸೋಮಕ ಸಹದೇವರು ಯಜ್ಞಮಾಡಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸೌಕನ್ಯೇ ಪಂಚವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸೌಕನ್ಯದಲ್ಲಿ ನೂರಾಇಪ್ಪತ್ತೈದನೆಯ ಅಧ್ಯಾಯವು.

Related image

Comments are closed.