Aranyaka Parva: Chapter 117

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೧೭

ಕ್ಷತ್ರಿಯರೆಲ್ಲರನ್ನೂ ವಧಿಸುವುದಾಗಿ ರಾಮನು ಪ್ರತಿಜ್ಞೆಮಾಡಿದುದು (೧-೬). ಪರಶುರಾಮನು ೨೧ ಬಾರಿ ಕ್ಷತ್ರಿಯ ನಿರ್ಮೂಲನ ಮಾಡಿ, ಭೂಮಿಯನ್ನು ಬ್ರಾಹ್ಮಣರಿಗಿತ್ತು ಮಹೇಂದ್ರಗಿರಿಯನ್ನು ಸೇರಿದ್ದುದು (೭-೧೮).

Image result for parashurama03117001 ರಾಮ ಉವಾಚ|

03117001a ಮಮಾಪರಾಧಾತ್ತೈಃ ಕ್ಷುದ್ರೈರ್ಹತಸ್ತ್ವಂ ತಾತ ಬಾಲಿಶೈಃ|

03117001c ಕಾರ್ತವೀರ್ಯಸ್ಯ ದಾಯಾದೈರ್ವನೇ ಮೃಗ ಇವೇಷುಭಿಃ||

ರಾಮನು ಹೇಳಿದನು: “ಅಪ್ಪಾ! ನನ್ನ ಅಪರಾಧದಿಂದಲೇ ಈ ಕ್ಷುದ್ರ ಬಾಲಿಶ ಕಾರ್ತವೀರ್ಯನ ದಾಯದಿಗಳು ವನದಲ್ಲಿ ಮೃಗವನ್ನು ಬಾಣಗಳಿಂದ ಕೊಲ್ಲುವಂತೆ ನಿನ್ನನ್ನು ಕೊಂದಿದ್ದಾರೆ.

03117002a ಧರ್ಮಜ್ಞಸ್ಯ ಕಥಂ ತಾತ ವರ್ತಮಾನಸ್ಯ ಸತ್ಪಥೇ|

03117002c ಮೃತ್ಯುರೇವಂವಿಧೋ ಯುಕ್ತಃ ಸರ್ವಭೂತೇಷ್ವನಾಗಸಃ||

ಅಪ್ಪಾ! ಸತ್ಯಪಥದಲ್ಲಿ ನಡೆದುಕೊಂಡು ಹೋಗುತ್ತಿರುವ, ಎಲ್ಲ ಭೂತಗಳಿಗೂ ಅನಾಗಸನಾಗಿರುವ ಧರ್ಮಜ್ಞನಾದ ನಿನಗೆ ಈ ರೀತಿಯ ಮೃತ್ಯುವು ಹೇಗೆ ಸರಿಯಾಗುತ್ತದೆ?

03117003a ಕಿಂ ನು ತೈರ್ನ ಕೃತಂ ಪಾಪಂ ಯೈರ್ಭವಾಂಸ್ತಪಸಿ ಸ್ಥಿತಃ|

03117003c ಅಯುಧ್ಯಮಾನೋ ವೃದ್ಧಃ ಸನ್ ಹತಃ ಶರಶತೈಃ ಶಿತೈಃ||

ತಪಸ್ಥನಾಗಿದ್ದ ಯುದ್ಧಮಾಡದೇ ಇರುವ ವೃದ್ಧನಾದ ನಿನ್ನನ್ನು ನೂರಾರು ಹರಿತ ಬಾಣಗಳಿಂದ ಕೊಂದು ಅವರು ಎಷ್ಟು ಪಾಪಗಳನ್ನು ಸಂಗ್ರಹಿಸಿರಲಿಕ್ಕಿಲ್ಲ?

03117004a ಕಿಂ ನು ತೇ ತತ್ರ ವಕ್ಷ್ಯಂತಿ ಸಚಿವೇಷು ಸುಹೃತ್ಸು ಚ|

03117004c ಅಯುಧ್ಯಮಾನಂ ಧರ್ಮಜ್ಞಮೇಕಂ ಹತ್ವಾನಪತ್ರಪಾಃ||

ಹೋರಾಡದೇ ಇದ್ದ ಏಕಾಂಗಿಯಾಗಿದ್ದ ಧರ್ಮಜ್ಞನನ್ನು ನಾಚಿಕೆಯಿಲ್ಲದೇ ಕೊಂದ ಅವರು ತಮ್ಮ ಸಚಿವರಿಗೆ ಮತ್ತು ಸ್ನೇಹಿತರಿಗೆ ಏನೆಂದು ಹೇಳುವುದಿಲ್ಲ?””

03117005 ಅಕೃತವ್ರಣ ಉವಾಚ|

03117005a ವಿಲಪ್ಯೈವಂ ಸ ಕರುಣಂ ಬಹು ನಾನಾವಿಧಂ ನೃಪ|

03117005c ಪ್ರೇತಕಾರ್ಯಾಣಿ ಸರ್ವಾಣಿ ಪಿತುಶ್ಚಕ್ರೇ ಮಹಾತಪಾಃ||

ಅಕೃತವ್ರಣನು ಹೇಳಿದನು: “ನೃಪ! ಈ ರೀತಿ ಆ ಕರುಣಿಯು ನಾನಾವಿಧವಾಗಿ ವಿಲಪಿಸಿದನು ಮತ್ತು ಆ ಮಹಾತಪಸ್ವಿಯು ತಂದೆಯ ಪ್ರೇತಕರ್ಮಗಳೆಲ್ಲವನ್ನೂ ನಡೆಸಿದನು.

03117006a ದದಾಹ ಪಿತರಂ ಚಾಗ್ನೌ ರಾಮಃ ಪರಪುರಂಜಯಃ|

03117006c ಪ್ರತಿಜಜ್ಞೇ ವಧಂ ಚಾಪಿ ಸರ್ವಕ್ಷತ್ರಸ್ಯ ಭಾರತ||

ಪರಪುರಂಜಯ ರಾಮನು ತಂದೆಯನ್ನು ಅಗ್ನಿಯಲ್ಲಿ ದಹಿಸಿದನು ಮತ್ತು ಭಾರತ! ಕ್ಷತ್ರಿಯರೆಲ್ಲರನ್ನೂ ವಧಿಸುವ ಪ್ರತಿಜ್ಞೆ ಮಾಡಿದನು.

03117007a ಸಂಕ್ರುದ್ಧೋಽತಿಬಲಃ ಶೂರಃ ಶಸ್ತ್ರಮಾದಾಯ ವೀರ್ಯವಾನ್|

03117007c ಜಘ್ನಿವಾನ್ಕಾರ್ತವೀರ್ಯಸ್ಯ ಸುತಾನೇಕೋಽಅಂತಕೋಪಮಃ||

ಅಂತಕನಂತಿದ್ದ ಆ ಅತಿಬಲ ಶೂರ ವೀರ್ಯವಂತನು ಕೋಪದಿಂದ ಶಸ್ತ್ರವನ್ನು ಹಿಡಿದು ಒಬ್ಬನೇ ಕಾರ್ತವೀರ್ಯನ ಮಕ್ಕಳನ್ನು ಸಂಹರಿಸಿದನು.

03117008a ತೇಷಾಂ ಚಾನುಗತಾ ಯೇ ಚ ಕ್ಷತ್ರಿಯಾಃ ಕ್ಷತ್ರಿಯರ್ಷಭ|

03117008c ತಾಂಶ್ಚ ಸರ್ವಾನವಾಮೃದ್ನಾದ್ರಾಮಃ ಪ್ರಹರತಾಂ ವರಃ||

ಕ್ಷತ್ರಿಯರ್ಷಭ! ಪ್ರಹರಿಗಳಲ್ಲಿ ಶ್ರೇಷ್ಠ ರಾಮನು ಅವರ ಅನುಯಾಯಿ ಕ್ಷತ್ರಿಯರೆಲ್ಲರನ್ನೂ ಸದೆಬಡಿದನು.

03117009a ತ್ರಿಹ್ಸಪ್ತಕೃತ್ವಃ ಪೃಥಿವೀಂ ಕೃತ್ವಾ ನಿಃಕ್ಷತ್ರಿಯಾಂ ಪ್ರಭುಃ|

03117009c ಸಮಂತಪಂಚಕೇ ಪಂಚ ಚಕಾರ ರುಧಿರಹ್ರದಾನ್||

ಇಪ್ಪತ್ತೊಂದು ಬಾರಿ ಭೂಮಿಯಮೇಲೆ ಕ್ಷತ್ರಿಯರಿಲ್ಲದಂತೆ ಮಾಡಿ ಪ್ರಭುವು ಸಮಂತಪಂಚಕದಲ್ಲಿ ರಕ್ತದ ಐದು ಸರೋವರಗಳನ್ನು ನಿರ್ಮಿಸಿದನು.

03117010a ಸ ತೇಷು ತರ್ಪಯಾಮಾಸ ಪಿತೄನ್ಭೃಗುಕುಲೋದ್ವಹಃ|

03117010c ಸಾಕ್ಷಾದ್ದದರ್ಶ ಚರ್ಚೀಕಂ ಸ ಚ ರಾಮಂ ನ್ಯವಾರಯತ್||

ಆ ಭೃಗುಕುಲೋದ್ವಹನು ಅವುಗಳಿಂದ ಪಿತೃಗಳಿಗೆ ತರ್ಪಣೆಯನ್ನಿತ್ತನು. ಆಗ ಸಾಕ್ಷಾತ್ ಋಚೀಕನು ಅಲ್ಲಿಗೆ ಬಂದು ರಾಮನನ್ನು ತಡೆದನು.

03117011a ತತೋ ಯಜ್ಞೇನ ಮಹತಾ ಜಾಮದಗ್ನ್ಯಃ ಪ್ರತಾಪವಾನ್|

03117011c ತರ್ಪಯಾಮಾಸ ದೇವೇಂದ್ರಮೃತ್ವಿಗ್ಭ್ಯಶ್ಚ ಮಹೀಂ ದದೌ||

ಅನಂತರ ಮಹಾತ್ಮ ಪ್ರತಾಪಿ ಜಾಮದಗ್ನಿಯು ಮಹಾ ಯಜ್ಞದಿಂದ ದೇವೇಂದ್ರನನ್ನು ತೃಪ್ತಿಪಡಿಸಿ ಭೂಮಿಯನ್ನು ಬ್ರಾಹ್ಮಣರಿಗೆ ದಾನವಾಗಿತ್ತನು.

03117012a ವೇದೀಂ ಚಾಪ್ಯದದದ್ಧೈಮೀಂ ಕಶ್ಯಪಾಯ ಮಹಾತ್ಮನೇ|

03117012c ದಶವ್ಯಾಮಾಯತಾಂ ಕೃತ್ವಾ ನವೋತ್ಸೇಧಾಂ ವಿಶಾಂ ಪತೇ||

ವಿಶಾಂಪತೇ! ಹತ್ತು ಅಳತೆ ಉದ್ದದ ಮತ್ತು ಒಂಭತ್ತು ಅಳತೆ ಎತ್ತರದ ಬಂಗಾರದ ವೇದಿಯನ್ನು ನಿರ್ಮಿಸಿ ಮಹಾತ್ಮ ಕಶ್ಯಪನಿಗೆ ದಾನವಾಗಿತ್ತನು.

03117013a ತಾಂ ಕಶ್ಯಪಸ್ಯಾನುಮತೇ ಬ್ರಾಹ್ಮಣಾಃ ಖಂಡಶಸ್ತದಾ|

03117013c ವ್ಯಭಜಂಸ್ತೇನ ತೇ ರಾಜನ್ಪ್ರಖ್ಯಾತಾಃ ಖಾಂಡವಾಯನಾಃ||

ಕಶ್ಯಪನ ಅನುಮತಿಯನ್ನು ಪಡೆದು ಬ್ರಾಹ್ಮಣರು ಅದನ್ನು ತುಂಡುತುಂಡುಗಳನ್ನಾಗಿ ಮಾಡಿ ಹಂಚಿಕೊಂಡರು ಮತ್ತು ಆದುದರಿಂದ ರಾಜನ್! ಅವರು ಖಾಂಡವಾಯನರೆಂದು ಪ್ರಖ್ಯಾತರಾದರು.

03117014a ಸ ಪ್ರದಾಯ ಮಹೀಂ ತಸ್ಮೈ ಕಶ್ಯಪಾಯ ಮಹಾತ್ಮನೇ|

03117014c ಅಸ್ಮಿನ್ಮಹೇಂದ್ರೇ ಶೈಲೇಂದ್ರೇ ವಸತ್ಯಮಿತವಿಕ್ರಮಃ||

ಭೂಮಿಯನ್ನು ಮಹಾತ್ಮ ಕಶ್ಯಪನಿಗಿತ್ತು ಆ ಅಮಿತವಿಕ್ರಮನು ಈ ಮಹೇಂದ್ರ ಗಿರಿಯಲ್ಲಿ ವಾಸಮಾಡುತ್ತಿದ್ದಾನೆ.

03117015a ಏವಂ ವೈರಮಭೂತ್ತಸ್ಯ ಕ್ಷತ್ರಿಯೈರ್ಲೋಕವಾಸಿಭಿಃ|

03117015c ಪೃಥಿವೀ ಚಾಪಿ ವಿಜಿತಾ ರಾಮೇಣಾಮಿತತೇಜಸಾ||

ಈ ಪ್ರಕಾರವಾಗಿ ಲೋಕದಲ್ಲಿ ವಾಸಿಸುತ್ತಿದ್ದ ಕ್ಷತ್ರಿಯರೊಂದಿಗೆ ಅವನ ವೈರವಿತ್ತು ಮತ್ತು ಹೀಗೆ ಅಮಿತತೇಜಸ್ವಿ ರಾಮನು ಈ ಭೂಮಿಯನ್ನು ಗೆದ್ದನು.”

03117016 ವೈಶಂಪಾಯನ ಉವಾಚ|

03117016a ತತಶ್ಚತುರ್ದಶೀಂ ರಾಮಃ ಸಮಯೇನ ಮಹಾಮನಾಃ|

03117016c ದರ್ಶಯಾಮಾಸ ತಾನ್ವಿಪ್ರಾನ್ಧರ್ಮರಾಜಂ ಚ ಸಾನುಜಂ||

ವೈಶಂಪಾಯನನು ಹೇಳಿದನು: “ಅನಂತರ ಒಪ್ಪಂದದಂತೆ ಚತುರ್ದಶಿಯಂದು ಮಹಾಮನಸ್ವಿ ರಾಮನು ಆ ವಿಪ್ರರಿಗೂ, ಅನುಜರ ಸಮೇತ ಧರ್ಮರಾಜನಿಗೂ ದರ್ಶನವನ್ನಿತ್ತನು.

03117017a ಸ ತಮಾನರ್ಚ ರಾಜೇಂದ್ರೋ ಭ್ರಾತೃಭಿಃ ಸಹಿತಃ ಪ್ರಭುಃ|

03117017c ದ್ವಿಜಾನಾಂ ಚ ಪರಾಂ ಪೂಜಾಂ ಚಕ್ರೇ ನೃಪತಿಸತ್ತಮಃ||

ತಮ್ಮಂದಿರೊಡನೆ ಆ ಪ್ರಭು ರಾಜೇಂದ್ರನು ಅವನನ್ನು ಅರ್ಚಿಸಿದನು ಮತ್ತು ಆ ನೃಪತಿಸತ್ತಮನು ಬ್ರಾಹ್ಮಣರಿಗೂ ಪರಮ ಪೂಜೆಯನ್ನು ಗೈದನು.

03117018a ಅರ್ಚಯಿತ್ವಾ ಜಾಮದಗ್ನ್ಯಂ ಪೂಜಿತಸ್ತೇನ ಚಾಭಿಭೂಃ|

03117018c ಮಹೇಂದ್ರ ಉಷ್ಯ ತಾಂ ರಾತ್ರಿಂ ಪ್ರಯಯೌ ದಕ್ಷಿಣಾಮುಖಃ||

ಜಾಮದಗ್ನಿಯನ್ನು ಅರ್ಚಿಸಿ ಮತ್ತು ಅವನಿಂದ ಗೌರವಿಸಲ್ಪಟ್ಟ ಪ್ರಭುವು ಮಹೇಂದ್ರ ಪರ್ವತದಲ್ಲಿ ಆ ರಾತ್ರಿಯನ್ನು ಕಳೆದು ದಕ್ಷಿಣಾಭಿಮುಖವಾಗಿ ಪ್ರಯಾಣಿಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಕಾರ್ತವೀರ್ಯೋಪಾಖ್ಯಾನೇ ಸಪ್ತದಶಾಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಕಾರ್ತವೀರ್ಯೋಪಾಖ್ಯಾನದಲ್ಲಿ ನೂರಾಹದಿನೇಳನೆಯ ಅಧ್ಯಾಯವು.

Related image

Comments are closed.