Aranyaka Parva: Chapter 114

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೧೪

ವೈತರಣೀ ನದಿಯ ಮಹಾತ್ಮೆ (೧-೨೬).

03114001 ವೈಶಂಪಾಯನ ಉವಾಚ|

03114001a ತತಃ ಪ್ರಯಾತಃ ಕೌಶಿಕ್ಯಾಃ ಪಾಂಡವೋ ಜನಮೇಜಯ|

03114001c ಆನುಪೂರ್ವ್ಯೇಣ ಸರ್ವಾಣಿ ಜಗಾಮಾಯತನಾನ್ಯುತ||

ವೈಶಂಪಾಯನನು ಹೇಳಿದನು: “ಜನಮೇಜಯ! ಅನಂತರ ಪಾಂಡವನು ಕೌಶಿಕೀ ನದಿಗೆ ಪ್ರಯಾಣ ಮಾಡಿ ಒಂದಾದ ನಂತರ ಇನ್ನೊಂದರಂತೆ ಎಲ್ಲ ಪುಣ್ಯಕ್ಷೇತ್ರಗಳಿಗೆ ಹೋದನು.

03114002a ಸ ಸಾಗರಂ ಸಮಾಸಾದ್ಯ ಗಂಗಾಯಾಃ ಸಂಗಮೇ ನೃಪ|

03114002c ನದೀಶತಾನಾಂ ಪಂಚಾನಾಂ ಮಧ್ಯೇ ಚಕ್ರೇ ಸಮಾಪ್ಲವಂ||

ನೃಪ! ಅವನು ಸಾಗರವನ್ನು ತಲುಪಿ ಗಂಗಾ ಸಂಗಮದಲ್ಲಿ ಐನೂರು ನದಿಗಳ ಮಧ್ಯೆ ಸ್ನಾನಮಾಡಿದನು.

03114003a ತತಃ ಸಮುದ್ರತೀರೇಣ ಜಗಾಮ ವಸುಧಾಧಿಪಃ|

03114003c ಭ್ರಾತೃಭಿಃ ಸಹಿತೋ ವೀರಃ ಕಲಿಂಗಾನ್ಪ್ರತಿ ಭಾರತ||

ಭಾರತ! ಅನಂತರ ವೀರ ವಸುಧಾಧಿಪನು ಸಹೋದರರೊಂದಿಗೆ ಸಮುದ್ರತೀರದಲ್ಲಿ ಕಲಿಂಗ ದೇಶದ ಕಡೆ ಪ್ರಯಾಣ ಮಾಡಿದನು.

03114004 ಲೋಮಶ ಉವಾಚ|

03114004a ಏತೇ ಕಲಿಂಗಾಃ ಕೌಂತೇಯ ಯತ್ರ ವೈತರಣೀ ನದೀ|

03114004c ಯತ್ರಾಯಜತ ಧರ್ಮೋಽಪಿ ದೇವಾಂ ಶರಣಮೇತ್ಯ ವೈ||

ಲೋಮಶನು ಹೇಳಿದನು: “ಕೌಂತೇಯ! ಇದು ವೈತರಣೀ ನದಿಯಿರುವ ಕಲಿಂಗ. ಇಲ್ಲಿ ಧರ್ಮನೂ ಕೂಡ ಯಜ್ಞಮಾಡಿ ದೇವತೆಗಳ ಶರಣು ಹೋದನು.

03114005a ಋಷಿಭಿಃ ಸಮುಪಾಯುಕ್ತಂ ಯಜ್ಞಿಯಂ ಗಿರಿಶೋಭಿತಂ|

03114005c ಉತ್ತರಂ ತೀರಮೇತದ್ಧಿ ಸತತಂ ದ್ವಿಜಸೇವಿತಂ||

ಸತತವೂ ದ್ವಿಜರು ಸೇವಿಸುವ ಈ ಉತ್ತರ ತೀರದಲ್ಲಿ ಗಿರಿಗಳಿಂದ ಶೋಭಿಸುವ ಯಜ್ಞಭೂಮಿಗೆ ಋಷಿಗಳು ಬರುತ್ತಿರುತ್ತಾರೆ.

03114006a ಸಮೇನ ದೇವಯಾನೇನ ಪಥಾ ಸ್ವರ್ಗಮುಪೇಯುಷಃ|

03114006c ಅತ್ರ ವೈ ಋಷಯೋಽನ್ಯೇಽಪಿ ಪುರಾ ಕ್ರತುಭಿರೀಜಿರೇ||

ಅಲ್ಲಿ ಹಿಂದೆ ಋಷಿಗಳೂ ಮತ್ತು ಇತರರೂ ಕ್ರತುಗಳನ್ನು ಯಾಜಿಸಿ ದೇವಯಾನಗಳ ಸಮನಾದ ದಾರಿಯಲ್ಲಿ ಸ್ವರ್ಗಕ್ಕೆ ಹೋಗಿದ್ದಾರೆ.

03114007a ಅತ್ರೈವ ರುದ್ರೋ ರಾಜೇಂದ್ರ ಪಶುಮಾದತ್ತವಾನ್ಮಖೇ|

03114007c ರುದ್ರಃ ಪಶುಂ ಮಾನವೇಂದ್ರ ಭಾಗೋಽಯಮಿತಿ ಚಾಬ್ರವೀತ್||

ರಾಜೇಂದ್ರ! ಮಾನವೇಂದ್ರ! ಅಲ್ಲಿಯೇ ರುದ್ರನು ಯಾಗದಲ್ಲಿ ಈ ಪಶುವು ನನ್ನ ಭಾಗ ಎಂದು ಹೇಳಿ ಪಶುವನ್ನು ತೆಗೆದಕೊಂಡು ಹೋದನು. 

03114008a ಹೃತೇ ಪಶೌ ತದಾ ದೇವಾಸ್ತಮೂಚುರ್ಭರತರ್ಷಭ|

03114008c ಮಾ ಪರಸ್ವಮಭಿದ್ರೋಗ್ಧಾ ಮಾ ಧರ್ಮಾನ್ಸಕಲಾನ್ನಶೀಃ||

ಭರತರ್ಷಭ! ಪಶುವು ಕಳವಾದಾಗ ದೇವತೆಗಳು ಅವನಿಗೆ ಹೇಳಿದರು: “ಬೇರೆಯವರಿಗೆ ಸಲ್ಲಬೇಕಾದುದನ್ನು ತೆಗೆದುಕೊಳ್ಳಬೇಡ! ಸಕಲ ಧರ್ಮವನ್ನೂ ನಾಶಗೊಳಿಸಬೇಡ!”

03114009a ತತಃ ಕಲ್ಯಾಣರೂಪಾಭಿರ್ವಾಗ್ಭಿಸ್ತೇ ರುದ್ರಮಸ್ತುವನ್|

03114009c ಇಷ್ಟ್ಯಾ ಚೈನಂ ತರ್ಪಯಿತ್ವಾ ಮಾನಯಾಂ ಚಕ್ರಿರೇ ತದಾ||

ಅನಂತರ ಅವರು ರುದ್ರನನ್ನು ಕಲ್ಯಾಣರೂಪಿ ಮಾತುಗಳಿಂದ ಸ್ತುತಿಸಿದರು. ಇಷ್ಟಿಯ ಮೂಲಕ ಅವನನ್ನು ತೃಪ್ತಿಪಡಿಸಿ ಗೌರವಿಸಿದರು.

03114010a ತತಃ ಸ ಪಶುಮುತ್ಸೃಜ್ಯ ದೇವಯಾನೇನ ಜಗ್ಮಿವಾನ್|

03114010c ಅತ್ರಾನುವಂಶೋ ರುದ್ರಸ್ಯ ತಂ ನಿಬೋಧ ಯುಧಿಷ್ಠಿರ||

ಆಗ ಅವನು ಪಶುವನ್ನು ಬಿಟ್ಟು ದೇವಯಾನದಲ್ಲಿ ಹೊರಟು ಹೋದನು. ಯುಧಿಷ್ಠಿರ! ಅಲ್ಲಿ ರುದ್ರನ ಕುರಿತು ಒಂದು ಅನುವಂಶವಿದೆ. ಕೇಳು!

03114011a ಅಯಾತಯಾಮಂ ಸರ್ವೇಭ್ಯೋ ಭಾಗೇಭ್ಯೋ ಭಾಗಮುತ್ತಮಂ|

03114011c ದೇವಾಃ ಸಂಕಲ್ಪಯಾಮಾಸುರ್ಭಯಾದ್ರುದ್ರಸ್ಯ ಶಾಶ್ವತಂ||

“ಸರ್ವ ಭೋಗಗಳಲ್ಲಿನ ಉತ್ತಮ ಭಾಗವು ರುದ್ರನಿಗೆ ಸೇರಬೇಕು ಎಂದು ರುದ್ರನ ಮೇಲಿನ ಭಯದಿಂದ ದೇವತೆಗಳು ಶಾಶ್ವತ ಸಂಕಲ್ಪ ಮಾಡಿಕೊಂಡರು.”

03114012a ಇಮಾಂ ಗಾಥಾಮತ್ರ ಗಾಯನ್ನಪಃ ಸ್ಪೃಶತಿ ಯೋ ನರ|

03114012c ದೇವಯಾನಸ್ತಸ್ಯ ಪಂಥಾಶ್ಚಕ್ಷುಶ್ಚೈವ ಪ್ರಕಾಶತೇ||

ನೀರನ್ನು ಮುಟ್ಟಿ ಈ ಶ್ಲೋಕವನ್ನು ಯಾವ ನರನು ಹಾಡುತ್ತಾನೋ ಅವನು ದೇವಯಾನದಲ್ಲಿ ಪ್ರಯಾಣಿಸುತ್ತಾನೆ ಮತ್ತು ಅವನ ಕಣ್ಣುಗಳು ಪ್ರಕಾಶಿಸುತ್ತವೆ.””

03114013 ವೈಶಂಪಾಯನ ಉವಾಚ|

03114013a ತತೋ ವೈತರಣೀಂ ಸರ್ವೇ ಪಾಂಡವಾ ದ್ರೌಪದೀ ತಥಾ|

03114013c ಅವತೀರ್ಯ ಮಹಾಭಾಗಾ ತರ್ಪಯಾಂ ಚಕ್ರಿರೇ ಪಿತೄನ್||

ವೈಶಂಪಾಯನನು ಹೇಳಿದನು: “ಅನಂತರ ಮಹಾಭಾಗ ಸರ್ವ ಪಾಂಡವರೂ ಮತ್ತು ದ್ರೌಪದಿಯೂ ವೈತರಣಿಯಲ್ಲಿ ಇಳಿದು ಪಿತೃಗಳಿಗೆ ತರ್ಪಣವನ್ನಿತ್ತರು.

03114014 ಯುಧಿಷ್ಠಿರ ಉವಾಚ|

03114014a ಉಪಸ್ಪೃಶ್ಯೈವ ಭಗವನ್ನಸ್ಯಾಂ ನದ್ಯಾಂ ತಪೋಧನ|

03114014c ಮಾನುಷಾದಸ್ಮಿ ವಿಷಯಾದಪೇತಃ ಪಶ್ಯ ಲೋಮಶ||

ಯುಧಿಷ್ಠಿರನು ಹೇಳಿದನು: “ತಪೋಧನ ಲೋಮಶ! ಭಗವನ್! ನೋಡು! ಈ ನದಿಯ ನೀರನ್ನು ಮುಟ್ಟಿದಕೂಡಲೇ ಮಾನುಷಲೋಕವನ್ನು ದಾಟುತ್ತೇನೆ!

03114015a ಸರ್ವಾಽಲ್ಲೋಕಾನ್ಪ್ರಪಶ್ಯಾಮಿ ಪ್ರಸಾದಾತ್ತವ ಸುವ್ರತ|

03114015c ವೈಖಾನಸಾನಾಂ ಜಪತಾಮೇಷ ಶಬ್ಧೋ ಮಹಾತ್ಮನಾಂ||

ಸುವ್ರತ! ನಿನ್ನ ಪ್ರಸಾದದಿಂದ ಸರ್ವಲೋಕಗಳನ್ನೂ ಕಾಣುತ್ತಿದ್ದೇನೆ. ಇದು ಮಹಾತ್ಮ ವೈಖಾನಸರ ಜಪದ ಶಬ್ಧ!”

03114016 ಲೋಮಶ ಉವಾಚ|

03114016a ತ್ರಿಶತಂ ವೈ ಸಹಸ್ರಾಣಿ ಯೋಜನಾನಾಂ ಯುಧಿಷ್ಠಿರ|

03114016c ಯತ್ರ ಧ್ವನಿಂ ಶೃಣೋಷ್ಯೇನಂ ತೂಷ್ಣೀಮಾಸ್ಸ್ವ ವಿಶಾಂ ಪತೇ||

ಲೋಮಶನು ಹೇಳಿದನು: “ಯುಧಿಷ್ಠಿರ! ನೀನು ಕೇಳುತ್ತಿರುವ ಈ ಧ್ವನಿಯು ಮೂರುನೂರು ಸಾವಿರ (ಮೂರು ಲಕ್ಷ) ಯೋಜನೆಯ ದೂರದಿಂದ ಬರುವುದು. ವಿಶಾಂಪತೇ! ನಿಃಶಬ್ಧನಾಗಿರು.

03114017a ಏತತ್ಸ್ವಯಂಭುವೋ ರಾಜನ್ವನಂ ರಮ್ಯಂ ಪ್ರಕಾಶತೇ|

03114017c ಯತ್ರಾಯಜತ ಕೌಂತೇಯ ವಿಶ್ವಕರ್ಮಾ ಪ್ರತಾಪವಾನ್||

ಕೌಂತೇಯ! ರಾಜನ್! ರಮ್ಯವಾಗಿ ಪ್ರಕಾಶಿಸುತ್ತಿರುವ ಈ ವನವು ಪ್ರತಾಪವಾನ್ ವಿಶ್ವಕರ್ಮನು ಯಜ್ಞಮಾಡಿದ ಪ್ರದೇಶ.

03114018a ಯಸ್ಮಿನ್ಯಜ್ಞೇ ಹಿ ಭೂರ್ದತ್ತಾ ಕಶ್ಯಪಾಯ ಮಹಾತ್ಮನೇ|

03114018c ಸಪರ್ವತವನೋದ್ದೇಶಾ ದಕ್ಷಿಣಾ ವೈ ಸ್ವಯಂಭುವಾ||

ಈ ಯಜ್ಞದಲ್ಲಿಯೇ ಸ್ವಯಂಭುವು ಪರ್ವತ, ವನ ಪ್ರದೇಶಗಳೊಂದಿಗೆ ಭೂಮಿಯನ್ನು ಮಹಾತ್ಮ ಕಶ್ಯಪನಿಗೆ ದಾನವನ್ನಾಗಿತ್ತನು.

03114019a ಅವಾಸೀದಚ್ಚ ಕೌಂತೇಯ ದತ್ತಮಾತ್ರಾ ಮಹೀ ತದಾ|

03114019c ಉವಾಚ ಚಾಪಿ ಕುಪಿತಾ ಲೋಕೇಶ್ವರಮಿದಂ ಪ್ರಭುಂ||

ಕೌಂತೇಯ! ದಾನವನ್ನಾಗಿತ್ತ ಕೂಡಲೇ ಭೂಮಿಯು ದುಃಖಿತಳಾಗಿ ಕೋಪದಿಂದ ಲೋಕೇಶ್ವರ ಪ್ರಭುವಿಗೆ ಹೇಳಿದಳು:

03114020a ನ ಮಾಂ ಮರ್ತ್ಯಾಯ ಭಗವನ್ಕಸ್ಮೈ ಚಿದ್ದಾತುಮರ್ಹಸಿ|

03114020c ಪ್ರದಾನಂ ಮೋಘಮೇತತ್ತೇ ಯಾಸ್ಯಾಮ್ಯೇಷಾ ರಸಾತಲಂ||

“ಭಗವನ್! ನೀನು ನನ್ನನ್ನು ಯಾವ ಮರ್ತ್ಯನಿಗೂ ಕೊಡಬಾರದು. ನಿನ್ನ ದಾನವು ನಿರರ್ಥಕ. ನಾನು ರಸಾತಳಕ್ಕೆ ಹೋಗುತ್ತೇನೆ.”

03114021a ವಿಷೀದಂತೀಂ ತು ತಾಂ ದೃಷ್ಟ್ವಾ ಕಶ್ಯಪೋ ಭಗವಾನೃಷಿಃ|

03114021c ಪ್ರಸಾದಯಾಂ ಬಭೂವಾಥ ತತೋ ಭೂಮಿಂ ವಿಶಾಂ ಪತೇ||

ವಿಶಾಂಪತೇ! ಅವಳು ವಿಷಾದಗೊಂಡಿದ್ದುದನ್ನು ನೋಡಿದ ಭಗವಾನ್ ಋಷಿ ಕಶ್ಯಪನು ಭೂಮಿಯನ್ನು ಮೆಚ್ಚಿಸಿದನು.

03114022a ತತಃ ಪ್ರಸನ್ನಾ ಪೃಥಿವೀ ತಪಸಾ ತಸ್ಯ ಪಾಂಡವ|

03114022c ಪುನರುನ್ಮಜ್ಜ್ಯ ಸಲಿಲಾದ್ವೇದೀರೂಪಾ ಸ್ಥಿತಾ ಬಭೌ||

ಪಾಂಡವ! ಅವನ ತಪಸ್ಸಿಗೆ ಪ್ರಸನ್ನಳಾದ ಭೂಮಿಯು ನೀರಿನಿಂದ ಮೇಲೆದ್ದು ವೇದಿರೂಪದಲ್ಲಿ ಬಂದಳು.

03114023a ಸೈಷಾ ಪ್ರಕಾಶತೇ ರಾಜನ್ವೇದೀ ಸಂಸ್ಥಾನಲಕ್ಷಣಾ|

03114023c ಆರುಹ್ಯಾತ್ರ ಮಹಾರಾಜ ವೀರ್ಯವಾನ್ವೈ ಭವಿಷ್ಯಸಿ||

ರಾಜನ್! ಅವಳೇ ಈ ಸಂಸ್ಥಾನಲಕ್ಷಣಗಳಿಂದ ವೇದಿಯಂತೆ ಪ್ರಕಾಶಿಸುತ್ತಾಳೆ. ಮಹಾರಾಜ! ಈ ವೇದಿಯನ್ನೇರು. ನೀನು ವೀರ್ಯವಂತನಾಗುವೆ.

03114024a ಅಹಂ ಚ ತೇ ಸ್ವಸ್ತ್ಯಯನಂ ಪ್ರಯೋಕ್ಷ್ಯೇ|

        ಯಥಾ ತ್ವಮೇನಾಮಧಿರೋಕ್ಷ್ಯಸೇಽದ್ಯ|

03114024c ಸ್ಪೃಷ್ಟಾ ಹಿ ಮರ್ತ್ಯೇನ ತತಃ ಸಮುದ್ರಂ|

        ಏಷಾ ವೇದೀ ಪ್ರವಿಶತ್ಯಾಜಮೀಢ||

ಅನಘ! ನೀನು ವೇದಿಯನ್ನು ಏರಿದ ತಕ್ಷಣವೇ ನಾನೇ ನಿನಗೆ ಆಶೀರ್ವಚನಗಳನ್ನು ನೀಡುವೆ. ಅಜಮೀಢ! ಮರ್ತ್ಯನು ಈ ವೇದಿಯನ್ನು ಮುಟ್ಟಿದ ಕೂಡಲೇ ಅದು ಸಮುದ್ರವನ್ನು ಪ್ರವೇಶಿಸುತ್ತದೆ.

03114025a ಅಗ್ನಿರ್ಮಿತ್ರೋ ಯೋನಿರಾಪೋಽಥ ದೇವ್ಯೋ|

        ವಿಷ್ಣೋ ರೇತಸ್ತ್ವಮಮೃತಸ್ಯ ನಾಭಿಃ|

03114025c ಏವಂ ಬ್ರುವನ್ಪಾಂಡವ ಸತ್ಯವಾಕ್ಯಂ|

        ವೇದೀಮಿಮಾಂ ತ್ವಂ ತರಸಾಧಿರೋಹ||

ಪಾಂಡವ! “ನೀನು ಅಗ್ನಿ, ಮಿತ್ರ, ಯೋನಿ, ದಿವ್ಯ ಆಪ ಮತ್ತು ವಿಷ್ಣುವಿನ ರೇತ ಹಾಗು ಅಮೃತದ ನಾಭಿ!” ಎಂಬ ಈ ಸತ್ಯವಾಕ್ಯವನ್ನು ಹೇಳುತ್ತಾ ಈಗ ಸಾವಕಾಶವಾಗಿ ಈ ವೇದಿಯನ್ನು ಏರು.””

03114026 ವೈಶಂಪಾಯನ ಉವಾಚ|

03114026a ತತಃ ಕೃತಸ್ವಸ್ತ್ಯಯನೋ ಮಹಾತ್ಮಾ|

        ಯುಧಿಷ್ಠಿರಃ ಸಾಗರಗಾಮಗಚ್ಚತ್|

03114026c ಕೃತ್ವಾ ಚ ತಚ್ಚಾಸನಮಸ್ಯ ಸರ್ವಂ|

        ಮಹೇಂದ್ರಮಾಸಾದ್ಯ ನಿಶಾಮುವಾಸ||

ವೈಶಂಪಾಯನನು ಹೇಳಿದನು: “ಅವನಿಗೆ ಆಶೀರ್ವಚನಗಳನ್ನು ಹೇಳಿದ ನಂತರ ಮಹಾತ್ಮ ಯುಧಿಷ್ಠಿರನು ಸಾಗರವನ್ನು ಪ್ರವೇಶಿಸಿದನು. ಅವನು ಹೇಳಿದಂತೆ ಎಲ್ಲವನ್ನೂ ಮಾಡಿದ ನಂತರ, ಮಹೇಂದ್ರಪರ್ವತಕ್ಕೆ ಹೋಗಿ ರಾತ್ರಿಯನ್ನು ಕಳೆದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಮಹೇಂದ್ರಾಚಲಗಮನೇ ಚತುರ್ದಶಾಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಮಹೇಂದ್ರಾಚಲಗಮನದಲ್ಲಿ ನೂರಾಹದಿನಾಲ್ಕನೆಯ ಅಧ್ಯಾಯವು.

Related image

Comments are closed.