ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೧೩
ಅವರು ರಾಕ್ಷಸರೆಂದು ಮಗನನ್ನು ತಡೆದರೂ, ಇನ್ನೊಮ್ಮೆ ವಿಭಾಂಡಕನಿಲ್ಲದಿರುವಾಗ ವೈಶ್ಯೆಯು ಬಂದು ಅವನನ್ನು ಲೋಮಪಾದನ ಬಳಿ ಕರೆದುಕೊಂಡು ಹೋದುದು; ಮಳೆಸುರಿದು ಭೂಮಿಯು ಸಮೃದ್ಧವಾದುದು; ರಾಜಕುಮಾರಿ ಶಾಂತಿ ಮತ್ತು ಋಷ್ಯಶೃಂಗರ ವಿವಾಹ (೧-೧೧). ವಿಭಾಂಡಕನು ನಡೆದುದೆಲ್ಲವನ್ನೂ ಸ್ವೀಕರಿಸಿ ಆಶೀರ್ವದಿಸಿದುದು (೧೨-೨೫).
03113001 ವಿಭಾಂಡಕ ಉವಾಚ|
03113001a ರಕ್ಷಾಂಸಿ ಚೈತಾನಿ ಚರಂತಿ ಪುತ್ರ|
ರೂಪೇಣ ತೇನಾದ್ಭುತದರ್ಶನೇನ|
03113001c ಅತುಲ್ಯರೂಪಾಣ್ಯತಿಘೋರವಂತಿ|
ವಿಘ್ನಂ ಸದಾ ತಪಸಶ್ಚಿಂತಯಂತಿ||
ವಿಭಾಂಡಕನು ಹೇಳಿದನು: “ಮಗನೇ! ಅವರು ನೋಡಲು ಅದ್ಭುತ ರೂಪಧರಿಸಿ ತಿರುಗಾಡುವ ರಾಕ್ಷಸರು. ಅತುಲ್ಯ ರೂಪವಂತರಾದ ಆದರೆ ಘೋರರಾದ ಅವರು ಸದಾ ತಪಸ್ಸಿಗೆ ವಿಘ್ನವನ್ನು ತಂದು ನಿಲ್ಲಿಸುತ್ತಾರೆ.
03113002a ಸುರೂಪರೂಪಾಣಿ ಚ ತಾನಿ ತಾತ|
ಪ್ರಲೋಭಯಂತೇ ವಿವಿಧೈರುಪಾಯೈಃ|
03113002c ಸುಖಾಚ್ಚ ಲೋಕಾಚ್ಚ ನಿಪಾತಯಂತಿ|
ತಾನ್ಯುಗ್ರಕರ್ಮಾಣಿ ಮುನೀನ್ವನೇಷು||
ಮಗೂ! ಅವರ ಸುಂದರ ದೇಹಗಳನ್ನು ತೋರಿಸಿ ವಿವಿಧ ತರಹಗಳಲ್ಲಿ ಅವರು ಪ್ರಲೋಭಗೊಳಿಸಲು ನೋಡುತ್ತಿರುತ್ತಾರೆ. ತಮ್ಮ ಉಗ್ರ ಕರ್ಮಗಳಿಂದ ವನಗಳಲ್ಲಿದ್ದ ಮುನಿಗಳನ್ನು ಸುಖ ಮತ್ತು ಲೋಕಗಳಿಂದ ಬೀಳಿಸುತ್ತಾರೆ.
03113003a ನ ತಾನಿ ಸೇವೇತ ಮುನಿರ್ಯತಾತ್ಮಾ|
ಸತಾಂ ಲೋಕಾನ್ಪ್ರಾರ್ಥಯಾನಃ ಕಥಂ ಚಿತ್|
03113003c ಕೃತ್ವಾ ವಿಘ್ನಂ ತಾಪಸಾನಾಂ ರಮಂತೇ|
ಪಾಪಾಚಾರಾಸ್ತಪಸಸ್ತಾನ್ಯಪಾಪ||
ಅತ್ಮವನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ಮುನಿಯು, ಸತ್ಯವಂತರ ಲೋಕಗಳನ್ನು ಪ್ರಾರ್ಥಿಸುತ್ತಿದ್ದರೆ, ಅವರನ್ನು ದೂರವಿಡಬೇಕು. ಪಾಪವನ್ನು ತಿಳಿಯದ ಮಗನೇ! ತಾಪಸರಿಗೆ ವಿಘ್ನವನ್ನು ತಂದು ಆ ಪಾಪಚಾರಿಗಳು ಸಂತೋಷಪಡುತ್ತಾರೆ.
03113004a ಅಸಜ್ಜನೇನಾಚರಿತಾನಿ ಪುತ್ರ|
ಪಾಪಾನ್ಯಪೇಯಾನಿ ಮಧೂನಿ ತಾನಿ|
03113004c ಮಾಲ್ಯಾನಿ ಚೈತಾನಿ ನ ವೈ ಮುನೀನಾಂ|
ಸ್ಮೃತಾನಿ ಚಿತ್ರೋಜ್ಜ್ವಲಗಂಧವಂತಿ||
ಮಗನೇ! ಆ ಮದ್ಯ ಪಾನೀಯಗಳು ಪಾಪಗಳು, ಅಸಚ್ಚ ಜನರು ತೆಗೆದುಕೊಳ್ಳುವವು. ಈ ಬಣ್ಣ ಬಣ್ಣದ, ಕಾಂತಿಯುಕ್ತ ಸುಗಂಧಿತ ಮಾಲೆಗಳು ಮುನಿಗಳಿಗಲ್ಲ. ಅವು ರಾಕ್ಷಸರಿಗೆ.””
03113005 ಲೋಮಶ ಉವಾಚ|
03113005a ರಕ್ಷಾಂಸಿ ತಾನೀತಿ ನಿವಾರ್ಯ ಪುತ್ರಂ|
ವಿಭಾಂಡಕಸ್ತಾಂ ಮೃಗಯಾಂ ಬಭೂವ|
03113005c ನಾಸಾದಯಾಮಾಸ ಯದಾ ತ್ರ್ಯಹೇಣ|
ತದಾ ಸ ಪರ್ಯಾವವೃತೇಽಶ್ರಮಾಯ||
ಲೋಮಶನು ಹೇಳಿದನು: “ಅವರು ರಾಕ್ಷಸರೆಂದು ಮಗನನ್ನು ತಡೆದು ವಿಭಾಂಡಕನು ಅವಳನ್ನು ಹುಡುಕಲು ಹೋದನು. ಮೂರು ದಿನಗಳು ಹುಡುಕಿ ಅವಳನ್ನು ಕಾಣದೇ, ತನ್ನ ಆಶ್ರಮಕ್ಕೆ ಹಿಂದಿರುಗಿದನು.
03113006a ಯದಾ ಪುನಃ ಕಾಶ್ಯಪೋ ವೈ ಜಗಾಮ|
ಫಲಾನ್ಯಾಹರ್ತುಂ ವಿಧಿನಾ ಶ್ರಾಮಣೇನ|
03113006c ತದಾ ಪುನರ್ಲೋಭಯಿತುಂ ಜಗಾಮ|
ಸಾ ವೇಶಯೋಷಾ ಮುನಿಂ ಋಶ್ಯಶೃಂಗಂ||
ಆದರೆ ಪುನಃ ಕಾಶ್ಯಪನು ಶ್ರಾಮಣದಿಂದ ಹಣ್ಣುಗಳು ಹುಡುಕಲು ಹೋದಾಗ, ಆ ವೈಶ್ಯೆಯು ಮುನಿ ಋಷ್ಯಶೃಂಗನನ್ನು ಪುನಃ ಲೋಭಗೊಳಿಸಲು ಬಂದಳು.
03113007a ದೃಷ್ಟ್ವೈವ ತಾಂ ಋಶ್ಯಶೃಂಗಃ ಪ್ರಹೃಷ್ಟಃ|
ಸಂಭ್ರಾಂತರೂಪೋಽಭ್ಯಪತತ್ತದಾನೀಂ|
03113007c ಪ್ರೋವಾಚ ಚೈನಾಂ ಭವತೋಽಶ್ರಮಾಯ|
ಗಚ್ಚಾವ ಯಾವನ್ನ ಪಿತಾ ಮಮೈತಿ||
ಅವಳನ್ನು ನೋಡಿದೊಡನೆಯೇ ಪ್ರಹೃಷ್ಟನಾದ ಋಷ್ಯಶೃಂಗನು ಸಂಭ್ರಾಂತಗೊಂಡವನಂತೆ ಅವಳನ್ನು ಭೇಟಿಮಾಡಿದನು. ಮತ್ತು ಹೇಳಿದನು: “ಬೇಗನೆ ನನ್ನ ತಂದೆಯು ಬರುವುದರೊಳಗೆ ನಿನ್ನ ಆಶ್ರಮಕ್ಕೆ ಹೋಗೋಣ!”
03113008a ತತೋ ರಾಜನ್ಕಾಶ್ಯಪಸ್ಯೈಕಪುತ್ರಂ|
ಪ್ರವೇಶ್ಯ ಯೋಗೇನ ವಿಮುಚ್ಯ ನಾವಂ|
03113008c ಪ್ರಲೋಭಯಂತ್ಯೋ ವಿವಿಧೈರುಪಾಯೈರ್|
ಆಜಗ್ಮುರಂಗಾಧಿಪತೇಃ ಸಮೀಪಂ||
ರಾಜನ್! ಆಗ ಅವಳು ಕಾಶ್ಯಪನ ಒಬ್ಬನೇ ಮಗನನ್ನು ವಿವಿಧರೀತಿಗಳಲ್ಲಿ ಪ್ರಲೋಭಗೊಳಿಸುತ್ತಾ ದೋಣಿಯ ಮೇಲೆ ಕೂರಿಸಿ, ಅಂಗರಾಜನ ಬಳಿಗೆ ಕರೆದೊಯ್ದಳು.
03113009a ಸಂಸ್ಥಾಪ್ಯ ತಾಮಾಶ್ರಮದರ್ಶನೇ ತು|
ಸಂತಾರಿತಾಂ ನಾವಮತೀವ ಶುಭ್ರಾಂ|
03113009c ತೀರಾದುಪಾದಾಯ ತಥೈವ ಚಕ್ರೇ|
ರಾಜಾಶ್ರಮಂ ನಾಮ ವನಂ ವಿಚಿತ್ರಂ||
ಆಶ್ರಮದಂತೆ ಕಾಣುತ್ತಿದ್ದ ಅತೀವ ಶುಭ್ರವಾಗಿದ್ದ ಆ ನಾವೆಯನ್ನು ಅದರಂತೆಯೇ ತೋರುತ್ತಿದ್ದ ರಾಜಾಶ್ರಮ ಎಂಬ ಹೆಸರಿನ ಬಣ್ಣ ಬಣ್ಣದ ವನದ ಹತ್ತಿರ ನಿಲ್ಲಿಸಿದರು.
03113010a ಅಂತಃಪುರೇ ತಂ ತು ನಿವೇಶ್ಯ ರಾಜಾ|
ವಿಭಾಂಡಕಸ್ಯಾತ್ಮಜಮೇಕಪುತ್ರಂ|
03113010c ದದರ್ಶ ದೇವಂ ಸಹಸಾ ಪ್ರವೃಷ್ಟಂ|
ಆಪೂರ್ಯಮಾಣಂ ಚ ಜಗಜ್ಜಲೇನ||
ರಾಜನು ವಿಭಾಂಡಕನ ಒಬ್ಬನೇ ಮಗನನ್ನು ಅಂತಃಪುರದಲ್ಲಿ ಇರಿಸಿದನು. ತಕ್ಷಣವೇ ದೇವತೆಗಳು ಮಳೆಸುರಿಸಿದುದನ್ನು ನೋಡಿದನು. ಭೂಮಿಯು ನೀರಿನಿಂದ ತುಂಬಿಕೊಂಡಿತು.
03113011a ಸ ಲೋಮಪಾದಃ ಪರಿಪೂರ್ಣಕಾಮಃ|
ಸುತಾಂ ದದಾವೃಶ್ಯಶೃಂಗಾಯ ಶಾಂತಾಂ|
03113011c ಕ್ರೋಧಪ್ರತೀಕಾರಕರಂ ಚ ಚಕ್ರೇ|
ಗೋಭಿಶ್ಚ ಮಾರ್ಗೇಷ್ವಭಿಕರ್ಷಣಂ ಚ||
ತನ್ನ ಆಸೆಯು ಪರಿಪೂರ್ಣವಾಗಲು ಲೋಮಪಾದನು ತನ್ನ ಮಗಳು ಶಾಂತಿಯನ್ನು ಋಷ್ಯಶೃಂಗನಿಗೆ ಕೊಟ್ಟನು. ಕ್ರೋಧಕ್ಕೆ ಪ್ರತೀಕಾರವಾಗಿ ಅವನು ಮಾರ್ಗವನ್ನು ರಚಿಸಿ ಅಲ್ಲಲ್ಲಿ ಗೋವುಗಳನ್ನೂ ಗೋಪಾಲಕರನ್ನೂ ಇರಿಸಿದನು.
03113012a ವಿಭಾಂಡಕಸ್ಯಾವ್ರಜತಃ ಸ ರಾಜಾ|
ಪಶೂನ್ಪ್ರಭೂತಾನ್ಪಶುಪಾಂಶ್ಚ ವೀರಾನ್|
03113012c ಸಮಾದಿಶತ್ಪುತ್ರಗೃದ್ಧೀ ಮಹರ್ಷಿರ್|
ವಿಭಾಂಡಕಃ ಪರಿಪೃಚ್ಚೇದ್ಯದಾ ವಃ||
03113013a ಸ ವಕ್ತವ್ಯಃ ಪ್ರಾಂಜಲಿಭಿರ್ಭವದ್ಭಿಃ|
ಪುತ್ರಸ್ಯ ತೇ ಪಶವಃ ಕರ್ಷಣಂ ಚ|
03113013c ಕಿಂ ತೇ ಪ್ರಿಯಂ ವೈ ಕ್ರಿಯತಾಂ ಮಹರ್ಷೇ|
ದಾಸಾಃ ಸ್ಮ ಸರ್ವೇ ತವ ವಾಚಿ ಬದ್ಧಾಃ||
ವಿಭಾಂಡಕನು ಬರುತ್ತಾನೆ ಎಂದು ರಾಜನು ವೀರ ಗೋಪಾಲಕರಿಗೆ ಹೇಳಿದನು: “ಮಹರ್ಷಿ ವಿಭಾಂಡಕನು ತನ್ನ ಮಗನನ್ನು ಹುಡುಕಿಕೊಂಡು ಬಂದು ನಿಮ್ಮನ್ನು ಪ್ರಶ್ನಿಸಿದರೆ ಅವನಿಗೆ ಪ್ರಾಂಜಲಿ ಬದ್ಧರಾಗಿ ಹೇಳಬೇಕು: “ಈ ಪಶುಗಳು ನಿನ್ನ ಮಗನಿಗೆ ಸೇರಿದ್ದು, ಈ ಬೆಳೆಗಳೂ ಕೂಡ. ಮಹರ್ಷೇ! ನಿನಗೆ ಪ್ರಿಯವಾಗುವ ಏನು ಕೆಲಸವನ್ನು ಮಾಡಬೇಕು? ನಾವೆಲ್ಲರೂ ನಿನ್ನ ದಾಸರು ಮತ್ತು ಮಾತಿಗೆ ಬದ್ಧರು.””
03113014a ಅಥೋಪಾಯಾತ್ಸ ಮುನಿಶ್ಚಂಡಕೋಪಃ|
ಸ್ವಮಾಶ್ರಮಂ ಮೂಲಫಲಾನಿ ಗೃಹ್ಯ|
03113014c ಅನ್ವೇಷಮಾಣಶ್ಚ ನ ತತ್ರ ಪುತ್ರಂ|
ದದರ್ಶ ಚುಕ್ರೋಧ ತತೋ ಭೃಶಂ ಸಃ||
ಫಲಮೂಲಗಳನ್ನು ಹಿಡಿದು ತನ್ನ ಆಶ್ರಮಕ್ಕೆ ಹಿಂದಿರುಗಿದ ಮುನಿಯು ಚಂಡಕೋಪಿಷ್ಟನಾದನು. ಅಲ್ಲಿ ತನ್ನ ಪುತ್ರನನ್ನು ಹುಡುಕಿದರೂ ಅಲ್ಲಿ ಇಲ್ಲದಿರುವುದನ್ನು ನೋಡಿದ ಅವನು ಇನ್ನೂ ಹೆಚ್ಚು ಕುಪಿತನಾದನು.
03113015a ತತಃ ಸ ಕೋಪೇನ ವಿದೀರ್ಯಮಾಣ|
ಆಶಂಕಮಾನೋ ನೃಪತೇರ್ವಿಧಾನಂ|
03113015c ಜಗಾಮ ಚಂಪಾಂ ಪ್ರದಿಧಕ್ಷಮಾಣಸ್|
ತಮಂಗರಾಜಂ ವಿಷಯಂ ಚ ತಸ್ಯ||
ಅವನು ಕೋಪಕ್ಕೆ ಸಿಲುಕಿ, ಇದು ರಾಜನ ಕೆಲಸ ಎಂದು ಶಂಕಿಸಿ ಅಂಗರಾಜ ಮತ್ತು ಅವನ ರಾಜ್ಯವನ್ನು ಸುಟ್ಟುಬಿಡಲು ಚಂಪಾನಗರಿಗೆ ಹೋದನು.
03113016a ಸ ವೈ ಶ್ರಾಂತಃ ಕ್ಷುಧಿತಃ ಕಾಶ್ಯಪಸ್ತಾನ್|
ಘೋಷಾನ್ಸಮಾಸಾದಿತವಾನ್ಸಮೃದ್ಧಾನ್|
03113016c ಗೋಪೈಶ್ಚ ತೈರ್ವಿಧಿವತ್ಪೂಜ್ಯಮಾನೋ|
ರಾಜೇವ ತಾಂ ರಾತ್ರಿಮುವಾಸ ತತ್ರ||
ಆಯಾಸಗೊಂಡು ಹಸಿವೆಯಿಂದ ಬಳಲಿದ ಕಾಶ್ಯಪನು ಮಾರ್ಗದಲ್ಲಿ ಸಮೃದ್ಧವಾಗಿದ್ದ ಗೋವುಗಳ ಹಿಂಡನ್ನು ನೋಡಿದನು. ಗೋಪರು ಅವನಿಗೆ ಅವನೇ ರಾಜನೋ ಎಂಬಂತೆ ವಿಧಿವತ್ತಾಗಿ ಪೂಜಿಸಿದರು ಮತ್ತು ರಾತ್ರಿ ಅಲ್ಲಿಯೇ ತಂಗಿದನು.
03113017a ಸಂಪ್ರಾಪ್ಯ ಸತ್ಕಾರಮತೀವ ತೇಭ್ಯಃ|
ಪ್ರೋವಾಚ ಕಸ್ಯ ಪ್ರಥಿತಾಃ ಸ್ಥ ಸೌಮ್ಯಾಃ|
03113017c ಊಚುಸ್ತತಸ್ತೇಽಭ್ಯುಪಗಮ್ಯ ಸರ್ವೇ|
ಧನಂ ತವೇದಂ ವಿಹಿತಂ ಸುತಸ್ಯ||
ಅವರಿಂದ ಅತೀವ ಸತ್ಕಾರವನ್ನು ಪಡೆದು “ಸೌಮ್ಯರೇ! ಇದು ಯಾರದ್ದು?” ಎಂದು ಕೇಳಿದನು. ಆಗ ಎಲ್ಲರೂ ಅವನ ಬಳಿಬಂದು “ಈ ಧನವೆಲ್ಲವೂ ನಿನ್ನ ಮಗನದ್ದು!” ಎಂದು ಹೇಳಿದರು.
03113018a ದೇಶೇ ತು ದೇಶೇ ತು ಸ ಪೂಜ್ಯಮಾನಸ್|
ತಾಂಶ್ಚೈವ ಶೃಣ್ವನ್ಮಧುರಾನ್ಪ್ರಲಾಪಾನ್|
03113018c ಪ್ರಶಾಂತಭೂಯಿಷ್ಠರಜಾಃ ಪ್ರಹೃಷ್ಟಃ|
ಸಮಾಸಸಾದಾಂಗಪತಿಂ ಪುರಸ್ಥಂ||
ಸ್ಥಳ ಸ್ಥಳಗಳಲ್ಲಿ ಅವನಿಗೆ ಪೂಜೆ ದೊರೆಯಿತು ಮತ್ತು ಅವರಿಂದ ಅದೇ ಮಧುರ ಪ್ರಲಾಪಗಳನ್ನು ಕೇಳಿ ಸಿಟ್ಟನ್ನು ಕಳೆದು ಪ್ರಶಾಂತನಾಗಿ ಸಂತೋಷಗೊಂಡೇ ಅಂಗಪತಿಯ ಪುರವನ್ನು ಪ್ರವೇಶಿಸಿದನು.
03113019a ಸಂಪೂಜಿತಸ್ತೇನ ನರರ್ಷಭೇಣ|
ದದರ್ಶ ಪುತ್ರಂ ದಿವಿ ದೇವಂ ಯಥೇಂದ್ರಂ|
03113019c ಶಾಂತಾಂ ಸ್ನುಷಾಂ ಚೈವ ದದರ್ಶ ತತ್ರ|
ಸೌದಾಮಿನೀಮುಚ್ಚರಂತೀಂ ಯಥೈವ||
ಆ ನರರ್ಷಭನು ಅವನನ್ನು ಸಂಪೂಜಿಸಿದನು. ಮತ್ತು ಅಲ್ಲಿ ಅವನು ದಿವಿಯಲ್ಲಿ ಇಂದ್ರದೇವನಂತಿರುವ ಮಗನನ್ನು ಮತ್ತು ಮಿಂಚಿನಂತೆ ಓಡಾಡುತ್ತಿರುವ ಸೊಸೆ ಶಾಂತಿಯನ್ನು ಕಂಡನು.
03113020a ಗ್ರಾಮಾಂಶ್ಚ ಘೋಷಾಂಶ್ಚ ಸುತಂ ಚ ದೃಷ್ಟ್ವಾ|
ಶಾಂತಾಂ ಚ ಶಾಂತೋಽಸ್ಯ ಪರಃ ಸ ಕೋಪಃ|
03113020c ಚಕಾರ ತಸ್ಮೈ ಪರಮಂ ಪ್ರಸಾದಂ|
ವಿಭಾಂಡಕೋ ಭೂಮಿಪತೇರ್ನರೇಂದ್ರ||
ಗ್ರಾಮಗಳನ್ನೂ, ಗೋ ಹಿಂಡುಗಳನ್ನೂ, ಮಗ ಮತ್ತು ಶಾಂತಿಯನ್ನೂ ನೋಡಿದ ಅವನ ತೀವ್ರ ಕೋಪವು ಶಾಂತವಾಯಿತು. ನರೇಂದ್ರ! ಆಗ ವಿಭಾಂಡಕನು ಭೂಮಿಪತಿಗೆ ಪರಮ ಕರುಣೆಯನ್ನು ತೋರಿಸಿದನು.
03113021a ಸ ತತ್ರ ನಿಕ್ಷಿಪ್ಯ ಸುತಂ ಮಹರ್ಷಿರ್|
ಉವಾಚ ಸೂರ್ಯಾಗ್ನಿಸಮಪ್ರಭಾವಂ|
03113021c ಜಾತೇ ಪುತ್ರೇ ವನಮೇವಾವ್ರಜೇಥಾ|
ರಾಜ್ಞಃ ಪ್ರಿಯಾಣ್ಯಸ್ಯ ಸರ್ವಾಣಿ ಕೃತ್ವಾ||
ಅಲ್ಲಿಯೇ ಮಗನನ್ನು ಇರಿಸಿ ಸೂರ್ಯಾಗ್ನಿಸಮಪ್ರಭಾವಿ ಮಹರ್ಷಿಯು ಹೇಳಿದನು: “ಮಗನು ಜನಿಸಿದ ಕೂಡಲೇ, ರಾಜನಿಗೆ ಪ್ರಿಯವಾದುದೆಲ್ಲವನ್ನೂ ಮಾಡಿ ವನಕ್ಕೆ ಮರಳಬೇಕು.
03113022a ಸ ತದ್ವಚಃ ಕೃತವಾನೃಶ್ಯಶೃಂಗೋ|
ಯಯೌ ಚ ಯತ್ರಾಸ್ಯ ಪಿತಾ ಬಭೂವ|
03113022c ಶಾಂತಾ ಚೈನಂ ಪರ್ಯಚರದ್ಯಥಾವತ್|
ಖೇ ರೋಹಿಣೀ ಸೋಮಮಿವಾನುಕೂಲಾ||
03113023a ಅರುಂಧತೀ ವಾ ಸುಭಗಾ ವಸಿಷ್ಠಂ|
ಲೋಪಾಮುದ್ರಾ ವಾಪಿ ಯಥಾ ಹ್ಯಗಸ್ತ್ಯಂ|
03113023c ನಲಸ್ಯ ವಾ ದಮಯಂತೀ ಯಥಾಭೂದ್|
ಯಥಾ ಶಚೀ ವಜ್ರಧರಸ್ಯ ಚೈವ||
03113024a ನಾಡಾಯನೀ ಚೇಂದ್ರಸೇನಾ ಯಥೈವ|
ವಶ್ಯಾ ನಿತ್ಯಂ ಮುದ್ಗಲಸ್ಯಾಜಮೀಢ|
03113024c ತಥಾ ಶಾಂತಾ ಋಶ್ಯಶೃಂಗಂ ವನಸ್ಥಂ|
ಪ್ರೀತ್ಯಾ ಯುಕ್ತಾ ಪರ್ಯಚರನ್ನರೇಂದ್ರ||
ಅವನ ಮಾತುಗಳನ್ನು ನೆರವೇರಿಸಿ ಋಷ್ಯಶೃಂಗನು ತನ್ನ ತಂದೆಯಿರುವಲ್ಲಿಗೆ ಹೋದನು. ಶಾಂತಿಯಾದರೋ ಅವನನ್ನು ಅನುಸರಿಸಿ ಹೋದಳು. ನರೇಂದ್ರ! ಅಜಮೀಢ! ಆಕಾಶದಲ್ಲಿ ರೋಹಿಣಿಯು ಚಂದ್ರನನ್ನು ಹಿಂಬಾಲಿಸುವಂತೆ, ಸುಭಗೆ ಅರುಂಧತಿಯು ವಸಿಷ್ಠನನ್ನು, ಲೋಪಾಮುದ್ರೆಯು ಅಗಸ್ತ್ಯನನ್ನು, ದಮಯಂತಿಯು ನಲನನ್ನು, ಶಚಿಯು ವಜ್ರಧರನನ್ನು, ನಾಡಾಯನಿಯು ಚಂದ್ರಸೇನನನ್ನು, ಮತ್ತು ವಶ್ಯೆಯು ನಿತ್ಯವೂ ಮುದ್ಗಲನನ್ನು ಸೇವೆಗೈಯುವಂತೆ ವನಸ್ಥನಾದ ಋಷ್ಯಶೃಂಗನಿಗೆ ಪ್ರೀತಿಯಿಂದ ಅವಳು ಪರಿಚರಿಯನ್ನು ಮಾಡಿದಳು.
03113025a ತಸ್ಯಾಶ್ರಮಃ ಪುಣ್ಯ ಏಷೋ ವಿಭಾತಿ|
ಮಹಾಹ್ರದಂ ಶೋಭಯನ್ಪುಣ್ಯಕೀರ್ತೇಃ|
03113025c ಅತ್ರ ಸ್ನಾತಃ ಕೃತಕೃತ್ಯೋ ವಿಶುದ್ಧಸ್|
ತೀರ್ಥಾನ್ಯನ್ಯಾನ್ಯನುಸಮ್ಯಾಹಿ ರಾಜನ್||
ಅವನ ಕಾಂತಿಸೂಸುವ ಆಶ್ರಮವೇ ಇದು ಮತ್ತು ಶೋಭಿಸುವ ಪುಣ್ಯ ಮಹಾ ಸರೋವರ. ರಾಜನ್! ಇಲ್ಲಿ ಸ್ನಾನಮಾಡಿ ಕೃತಕೃತ್ಯನಾಗು, ವಿಶುದ್ಧನಾಗು. ಅನಂತರ ಇತರ ತೀರ್ಥಗಳಿಗೆ ಹೋಗೋಣ.””
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಋಷ್ಯಶೃಂಗೋಪಾಖ್ಯಾನೇ ತ್ರಯೋದಶಾಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಋಷ್ಯಶೃಂಗೋಪಾಖ್ಯಾನದಲ್ಲಿ ನೂರಾಹದಿಮೂರನೆಯ ಅಧ್ಯಾಯವು.