Aranyaka Parva: Chapter 107

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೦೭

ಗಂಗೆಗಾಗಿ ಭಗೀರಥನ ಘೋರ ತಪಸ್ಸು (೧-೧೪). ಗಂಗೆಯು ಪ್ರತ್ಯಕ್ಷಳಾಗಿ ಆಕಾಶದಿಂದ ಭೂಮಿಗೆ ಧುಮುಕುವಾಗ ಅವಳನ್ನು ಶಿರದಲ್ಲಿ ಧರಿಸಲು ಹರನ ಕುರಿತು ತಪಸ್ಸನ್ನಾಚರಿಸಲು ಹೇಳಿದುದು; ಹರನ ಕುರಿತು ಭಗೀರಥನ ತಪಸ್ಸು (೧೫-೨೫).

Image result for gangavatarana03107001 ಲೋಮಶ ಉವಾಚ|

03107001a ಸ ತು ರಾಜಾ ಮಹೇಷ್ವಾಸಶ್ಚಕ್ರವರ್ತೀ ಮಹಾರಥಃ|

03107001c ಬಭೂವ ಸರ್ವಲೋಕಸ್ಯ ಮನೋನಯನನಂದನಃ||

ಲೋಮಶನು ಹೇಳಿದನು: “ಆ ಮಹೇಷ್ವಾಸ, ಚಕ್ರವರ್ತೀ ಮಹಾರಥೀ ರಾಜನಾದರೋ ಸರ್ವಲೋಕದ ಮನೋನಯನ ನಂದನನಾದನು.

03107002a ಸ ಶುಶ್ರಾವ ಮಹಾಬಾಹುಃ ಕಪಿಲೇನ ಮಹಾತ್ಮನಾ|

03107002c ಪಿತೄಣಾಂ ನಿಧನಂ ಘೋರಮಪ್ರಾಪ್ತಿಂ ತ್ರಿದಿವಸ್ಯ ಚ||

ಆ ಮಹಾಬಾಹುವು ತನ್ನ ಪಿತೃಗಳು ಮಹಾತ್ಮ ಕಪಿಲನಿಂದ ಘೋರಮರಣವನ್ನು ಅನುಭವಿಸಿ ಸ್ವರ್ಗವನ್ನು ಪಡೆಯಲಿಲ್ಲ ಎನ್ನುವುದನ್ನು ಕೇಳಿದನು.

03107003a ಸ ರಾಜ್ಯಂ ಸಚಿವೇ ನ್ಯಸ್ಯ ಹೃದಯೇನ ವಿದೂಯತಾ|

03107003c ಜಗಾಮ ಹಿಮವತ್ಪಾರ್ಶ್ವಂ ತಪಸ್ತಪ್ತುಂ ನರೇಶ್ವರಃ||

03107004a ಆರಿರಾಧಯಿಷುರ್ಗಂಗಾಂ ತಪಸಾ ದಗ್ಧಕಿಲ್ಬಿಷಃ|

ಆ ರಾಜ್ಯವನ್ನು ಸಚಿವನಲ್ಲಿಟ್ಟು ನರೇಶ್ವರನು ದುಃಖಿತ ಹೃದಯದೊಂದಿಗೆ ತಪಸ್ಸನ್ನು ತಪಿಸಿ, ಕಿಲ್ಬಿಷಗಳನ್ನು ತಪಸ್ಸಿನಿಂದ ಸುಟ್ಟು ಗಂಗೆಯನ್ನು ಆರಾಧಿಸಲು ಹಿಮವತ್ ಪರ್ವತದ ಇಳಿಜಾರಿಗೆ ಹೋದನು.

03107004c ಸೋಽಪಶ್ಯತ ನರಶ್ರೇಷ್ಠ ಹಿಮವಂತಂ ನಗೋತ್ತಮಂ||

03107005a ಶೃಂಗೈರ್ಬಹುವಿಧಾಕಾರೈರ್ಧಾತುಮದ್ಭಿರಲಂಕೃತಂ|

03107005c ಪವನಾಲಂಬಿಭಿರ್ಮೇಘೈಃ ಪರಿಷ್ವಕ್ತಂ ಸಮಂತತಃ||

03107006a ನದೀಕುಂಜನಿತಂಬೈಶ್ಚ ಸೋದಕೈರುಪಶೋಭಿತಂ|

03107006c ಗುಹಾಕಂದರಸಂಲೀನೈಃ ಸಿಂಹವ್ಯಾಘ್ರೈರ್ನಿಷೇವಿತಂ||

03107007a ಶಕುನೈಶ್ಚ ವಿಚಿತ್ರಾಂಗೈಃ ಕೂಜದ್ಭಿರ್ವಿವಿಧಾ ಗಿರಃ|

03107007c ಭೃಂಗರಾಜೈಸ್ತಥಾ ಹಂಸೈರ್ದಾತ್ಯೂಹೈರ್ಜಲಕುಕ್ಕುಟೈಃ||

03107008a ಮಯೂರೈಃ ಶತಪತ್ರೈಶ್ಚ ಕೋಕಿಲೈರ್ಜೀವಜೀವಕೈಃ|

03107008c ಚಕೋರೈರಸಿತಾಪಾಂಗೈಸ್ತಥಾ ಪುತ್ರಪ್ರಿಯೈರಪಿ||

03107009a ಜಲಸ್ಥಾನೇಷು ರಮ್ಯೇಷು ಪದ್ಮಿನೀಭಿಶ್ಚ ಸಂಕುಲಂ|

03107009c ಸಾರಸಾನಾಂ ಚ ಮಧುರೈರ್ವ್ಯಾಹೃತೈಃ ಸಮಲಂಕೃತಂ||

03107010a ಕಿನ್ನರೈರಪ್ಸರೋಭಿಶ್ಚ ನಿಷೇವಿತಶಿಲಾತಲಂ|

03107010c ದಿಶಾಗಜವಿಷಾಣಾಗ್ರೈಃ ಸಮಂತಾದ್ ಘೃಷ್ಟಪಾದಪಂ||

03107011a ವಿದ್ಯಾಧರಾನುಚರಿತಂ ನಾನಾರತ್ನಸಮಾಕುಲಂ|

03107011c ವಿಷೋಲ್ಬಣೈರ್ಭುಜಂಗೈಶ್ಚ ದೀಪ್ತಜಿಹ್ವೈರ್ನಿಷೇವಿತಂ||

ಆ ನರಶ್ರೇಷ್ಠನು ನಗೋತ್ತಮ, ಖನಿಜಗಳಿಂದ ಅಲಂಕೃತಗೊಂಡ ಬಹುವಿಧದ ಆಕಾರಗಳುಳ್ಳ ಶಿಖರಗಳನ್ನು ಹೊಂದಿದ, ಎಲ್ಲೆಡೆಗಳಲ್ಲಿ ಗಾಳಿಯಿಂದ ತೇಲಿ ಬರುತ್ತಿರುವ ಮೋಡಗಳಿಂದ ಅಪ್ಪಿಹಿಡಿಯಲ್ಪಟ್ಟ; ಸದಾ ನೀರಿರುವ ನದೀ, ಕೊಳ, ಬಾವಿಗಳಿಂದ ಕಂಗೊಳಿಸುವ; ಗುಹೆ ಕಂದರಗಳಲ್ಲಿ ವಾಸಿಸುವ ಸಿಂಹ ವ್ಯಾಘ್ರಗಳಿಗೆ ಮನೆಯಾದ; ವಿಚಿತ್ರ ಅಂಗಾಂಗಳ ವಿಚಿತ್ರ ಆಕಾರಗಳ, ವಿಚಿತ್ರ ಧ್ವನಿಗಳ, ಕಪ್ಪು ಕಣ್ಣಿನ, ಪುತ್ರಪ್ರಿಯರಾದ ದುಂಬಿ, ಹಂಸ, ಕಾಡುಕೋಳಿ, ನವಿಲು, ಶತಪತ್ರಿ, ಕೋಕಿಲ, ಮರಕುಟುಕ, ಚಕೋರವೇ ಮೊದಲಾದ, ಪಕ್ಷಿಗಳಿಂದ, ಮಧುರವಾಗಿ ಅರಳುತ್ತಿರುವ ಕಮಲದ ರಾಶಿಗಳಿಂದ ಅಲಂಕೃತವಾದ ರಮ್ಯ ಸರೋವರಗಳೇ ಮೊದಲಾದ ಜಲಸ್ಥಾನಗಳಿಂದ ಕೂಡಿದ್ದ; ಕಿನ್ನರ ಅಪ್ಸರೆಯರು ಆಗಾಗ್ಗೆ ಬರುತ್ತಿದ್ದ ಶಿಲಾತಲಗಳು ಆನೆಗಳ ಕೋರೆದಾಡೆಗಳ ತುದಿಗೆ ಸಿಲುಕಿ ಗಾಯಗೊಂಡ ಮರಗಳುಳ್ಳ; ವಿಧ್ಯಾಧರರು ಸಂಚರಿಸುತ್ತಿರುವ, ನಾನಾರತ್ನಸಮಾಕುಲ, ಉರಿನಾಲಿಗೆಯ ತೀವ್ರ ವಿಷದ ಹಾವುಗಳುಳ್ಳ ಹಿಮವಂತನನ್ನು ಕಂಡನು. 

03107012a ಕ್ವ ಚಿತ್ಕನಕಸಂಕಾಶಂ ಕ್ವ ಚಿದ್ರಜತಸನ್ನಿಭಂ|

03107012c ಕ್ವ ಚಿದಂಜನಪುಂಜಾಭಂ ಹಿಮವಂತಮುಪಾಗಮತ್||

ಒಮ್ಮೆ ಬಂಗಾರದಂತೆ ತೋರುವ, ಒಮ್ಮೆ ಬೆಳ್ಳಿಯಂತೆ ತೋರುವ, ಒಮ್ಮೊಮ್ಮೆ ಕಪ್ಪಾಗಿ ಕಾಣುವ ಹಿಮಾಲಯಕ್ಕೆ ಆಗಮಿಸಿದನು.

03107013a ಸ ತು ತತ್ರ ನರಶ್ರೇಷ್ಠಸ್ತಪೋ ಘೋರಂ ಸಮಾಶ್ರಿತಃ|

03107013c ಫಲಮೂಲಾಂಬುಭಕ್ಷೋಽಭೂತ್ಸಹಸ್ರಂ ಪರಿವತ್ಸರಾನ್||

03107014a ಸಂವತ್ಸರಸಹಸ್ರೇ ತು ಗತೇ ದಿವ್ಯೇ ಮಹಾನದೀ|

03107014c ದರ್ಶಯಾಮಾಸ ತಂ ಗಂಗಾ ತದಾ ಮೂರ್ತಿಮತೀ ಸ್ವಯಂ||

ಅಲ್ಲಿಯೇ ಆ ನರಶ್ರೇಷ್ಠನು ಫಲಮೂಲ ಮತ್ತು ನೀರನ್ನು ಸೇವಿಸುತ್ತಾ ಒಂದು ಸಾವಿರ ವರ್ಷಗಳ ಘೋರ ತಪಸ್ಸನ್ನಾಚರಿಸಿದನು. ಒಂದು ಸಾವಿರ ವರ್ಷಗಳು ಕಳೆದ ನಂತರ ದಿವ್ಯ ಮಹಾನದಿ ಗಂಗೆಯು ಸ್ವಯಂ ಮೂರ್ತಿಮತ್ತಾಗಿ ಕಾಣಿಸಿಕೊಂಡಳು.

03107015 ಗಂಗೋವಾಚ|

03107015a ಕಿಮಿಚ್ಚಸಿ ಮಹಾರಾಜ ಮತ್ತಃ ಕಿಂ ಚ ದದಾನಿ ತೇ|

03107015c ತದ್ಬ್ರವೀಹಿ ನರಶ್ರೇಷ್ಠ ಕರಿಷ್ಯಾಮಿ ವಚಸ್ತವ||

ಗಂಗೆಯು ಹೇಳಿದಳು: “ಮಹಾರಾಜ! ಏನನ್ನು ಇಚ್ಛಿಸಿದ್ದೀಯೆ? ನಾನು ನಿನಗೆ ಏನನ್ನು ನೀಡಲಿ? ನರಶ್ರೇಷ್ಠ! ಹೇಳು! ನಿನ್ನ ಮಾತನ್ನು ನಡೆಸಿಕೊಡುತ್ತೇನೆ.””

03107016 ಲೋಮಶ ಉವಾಚ|

03107016a ಏವಮುಕ್ತಃ ಪ್ರತ್ಯುವಾಚ ರಾಜಾ ಹೈಮವತೀಂ ತದಾ|

03107016c ಪಿತಾಮಹಾ ಮೇ ವರದೇ ಕಪಿಲೇನ ಮಹಾನದಿ||

03107016e ಅನ್ವೇಷಮಾಣಾಸ್ತುರಗಂ ನೀತಾ ವೈವಸ್ವತಕ್ಷಯಂ||

ಲೋಮಶನು ಹೇಳಿದನು: “ಈ ಮಾತಿಗೆ ರಾಜನು ಹೈಮವತಿಗೆ ಉತ್ತರಿಸಿದನು: “ವರದೇ! ಮಹಾನದೀ! ಯಜ್ಞಾಶ್ವವನ್ನು ಹುಡುಕುತ್ತಿದ್ದ ನನ್ನ ಪಿತಾಮಹರನ್ನು ಕಪಿಲನು ಯಮನಾಲಯಕ್ಕೆ ಕಳುಹಿಸಿದನು.

03107017a ಷಷ್ಟಿಸ್ತಾನಿ ಸಹಸ್ರಾಣಿ ಸಾಗರಾಣಾಂ ಮಹಾತ್ಮನಾಂ|

03107017c ಕಾಪಿಲಂ ತೇಜ ಆಸಾದ್ಯ ಕ್ಷಣೇನ ನಿಧನಂ ಗತಾಃ||

ಅರವತ್ತು ಸಾವಿರ ಮಹಾತ್ಮ ಸಾಗರರು ಕಪಿಲನ ತೇಜಸ್ಸಿನ ಬಳಿಬಂದು ಕ್ಷಣದಲ್ಲಿಯೇ ನಿಧನಹೊಂದಿದರು.

03107018a ತೇಷಾಮೇವಂ ವಿನಷ್ಟಾನಾಂ ಸ್ವರ್ಗೇ ವಾಸೋ ನ ವಿದ್ಯತೇ|

03107018c ಯಾವತ್ತಾನಿ ಶರೀರಾಣಿ ತ್ವಂ ಜಲೈರ್ನಾಭಿಷಿಂಚಸಿ||

ವಿನಷ್ಟರಾದ ಅವರ ಶರೀರಗಳನ್ನು ನೀನು ನೀರಿನಿಂದ ತೊಳೆಯದೇ ಆ ನನ್ನವರಿಗೆ ಸ್ವರ್ಗದಲ್ಲಿ ಸ್ಥಾನ ದೊರೆಯುವುದಿಲ್ಲ ಎಂದು ತಿಳಿದಿದೆ.

03107019a ಸ್ವರ್ಗಂ ನಯ ಮಹಾಭಾಗೇ ಮತ್ಪಿತೄನ್ಸಗರಾತ್ಮಜಾನ್|

03107019c ತೇಷಾಮರ್ಥೇಽಭಿಯಾಚಾಮಿ ತ್ವಾಮಹಂ ವೈ ಮಹಾನದಿ||

ಮಹಾಭಾಗೇ! ಸಗರನ ಮಕ್ಕಳು ನನ್ನ ಪಿತೃಗಳನ್ನು ಸ್ವರ್ಗಕ್ಕೆ ಕರೆದೊಯ್ಯಿ! ಮಹಾನದೀ! ಇದನ್ನೇ ನಾನು ನಿನ್ನಲ್ಲಿ ಬೇಡ ಬಯಸುತ್ತೇನೆ.”

03107020a ಏತಚ್ಛೃತ್ವಾ ವಚೋ ರಾಜ್ಞೋ ಗಂಗಾ ಲೋಕನಮಸ್ಕೃತಾ|

03107020c ಭಗೀರಥಮಿದಂ ವಾಕ್ಯಂ ಸುಪ್ರೀತಾ ಸಮಭಾಷತ||

ರಾಜನ ಈ ಮಾತುಗಳನ್ನು ಕೇಳಿ, ಲೋಕನಮಸ್ಕೃತೆ ಗಂಗೆಯು ಸುಪ್ರೀತಳಾಗಿ ಭಗೀರಥನಿಗೆ ಈ ಮಾತುಗಳಲ್ಲಿ ಉತ್ತರಿಸಿದಳು:

03107021a ಕರಿಷ್ಯಾಮಿ ಮಹಾರಾಜ ವಚಸ್ತೇ ನಾತ್ರ ಸಂಶಯಃ|

03107021c ವೇಗಂ ತು ಮಮ ದುರ್ಧಾರ್ಯಂ ಪತಂತ್ಯಾ ಗಗನಾಚ್ಚ್ಯುತಂ||

“ಮಹಾರಾಜ! ನಿನ್ನ ಹೇಳಿಕೆಯಂತೆ ಮಾಡುತ್ತೇನೆ. ಅದರಲ್ಲಿ ಸಂಶಯವಿಲ್ಲ. ಆದರೆ ನಾನು ಗಗನದಿಂದ ಕಳಚಿ ಬೀಳುವ ವೇಗವನ್ನು ಸಹಿಸಲು ಅಸಾಧ್ಯವಾಗುತ್ತದೆ.

03107022a ನ ಶಕ್ತಸ್ತ್ರಿಷು ಲೋಕೇಷು ಕಶ್ಚಿದ್ಧಾರಯಿತುಂ ನೃಪ|

03107022c ಅನ್ಯತ್ರ ವಿಬುಧಶ್ರೇಷ್ಠಾನ್ನೀಲಕಂಠಾನ್ಮಹೇಶ್ವರಾತ್||

ನೃಪ! ವಿಬುಧಶ್ರೇಷ್ಠ ನೀಲಕಂಠ ಮಹೇಶ್ವರನ ಹೊರತು ಈ ಮೂರು ಲೋಕಗಳಲ್ಲಿ ಬೇರೆ ಯಾರೂ ಅದನ್ನು ತಡೆದುಕೊಳ್ಳಲು ಶಕ್ತರಿಲ್ಲ.

03107023a ತಂ ತೋಷಯ ಮಹಾಬಾಹೋ ತಪಸಾ ವರದಂ ಹರಂ|

03107023c ಸ ತು ಮಾಂ ಪ್ರಚ್ಯುತಾಂ ದೇವಃ ಶಿರಸಾ ಧಾರಯಿಷ್ಯತಿ||

03107023e ಕರಿಷ್ಯತಿ ಚ ತೇ ಕಾಮಂ ಪಿತೄಣಾಂ ಹಿತಕಾಮ್ಯಯಾ||

ಮಹಾಬಾಹೋ! ತಪಸ್ಸಿನಿಂದ ಆ ವರದ ಹರನನ್ನು ಮೆಚ್ಚಿಸು. ನಾನು ಕೆಳಗೆ ಬೀಳುವಾಗ ಆ ದೇವನು ನನ್ನನ್ನು ಶಿರದಲ್ಲಿ ಧರಿಸುತ್ತಾನೆ ಮತ್ತು ನಿನ್ನ ಪಿತೃಗಳಿಗಾಗಿ ನೀನು ಬಯಸಿದುದನ್ನು ನೆರವೇರಿಸಿಕೊಡುತ್ತಾನೆ.”

03107024a ಏತಚ್ಛೃತ್ವಾ ವಚೋ ರಾಜನ್ಮಹಾರಾಜೋ ಭಗೀರಥಃ|

03107024c ಕೈಲಾಸಂ ಪರ್ವತಂ ಗತ್ವಾ ತೋಷಯಾಮಾಸ ಶಂಕರಂ||

ರಾಜನ್! ಈ ಮಾತುಗಳನ್ನು ಕೇಳಿದ ಮಹಾರಾಜ ಭಗೀರಥನು ಕೈಲಾಸ ಪರ್ವತಕ್ಕೆ ಹೋಗಿ ಶಂಕರನನ್ನು ಮೆಚ್ಚಿಸಿದನು.

03107025a ತತಸ್ತೇನ ಸಮಾಗಮ್ಯ ಕಾಲಯೋಗೇನ ಕೇನ ಚಿತ್|

03107025c ಅಗೃಹ್ಣಾಚ್ಚ ವರಂ ತಸ್ಮಾದ್ಗಂಗಾಯಾ ಧಾರಣಂ ನೃಪ||

03107025e ಸ್ವರ್ಗವಾಸಂ ಸಮುದ್ದಿಶ್ಯ ಪಿತೄಣಾಂ ಸ ನರೋತ್ತಮಃ||

ಕೆಲವು ಕಾಲಾಂತರದಲ್ಲಿ ಆ ನರೋತ್ತಮ ನೃಪನು ಅವನನ್ನು ಕಂಡು ಗಂಗೆಯನ್ನು ಧರಿಸಿ ತನ್ನ ಪಿತೃಗಳಿಗೆ ಸ್ವರ್ಗವಾಸವು ದೊರಕಿಸುವ ವರವನ್ನು ಅವನಿಂದ ಕೇಳಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸಗರಸಂತತಿಕಥನೇ ಸಪ್ತಾಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸಗರಸಂತತಿಕಥನದಲ್ಲಿ ನೂರಾಏಳನೆಯ ಅಧ್ಯಾಯವು.

Related image

Comments are closed.