Aranyaka Parva: Chapter 103

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೦೩

ಅಗಸ್ತ್ಯನು ಕುಡಿದು ಸಮುದ್ರವನ್ನು ಬರಿದು ಮಾಡಲು ದೇವತೆಗಳು ಕಾಲೇಯರನ್ನು ಸಂಹರಿಸಿದ್ದುದು (೧-೧೨). ಕುಡಿದ ನೀರನ್ನು ಜೀರ್ಣಿಸಿಕೊಂಡಾಗಿರುವುದರಿಂದ ಸಾಗರವನ್ನು ಪುನಃ ತುಂಬಿಸಲು ಸಾಧ್ಯವಿಲ್ಲವೆಂದು ಅಗಸ್ತ್ಯನು ಹೇಳಲು ದೇವತೆಗಳು ಪುನಃ ಪಿತಾಮಹನಲ್ಲಿಗೆ ಹೋದುದು (೧೩-೧೯).

Image result for agastya03103001 ಲೋಮಶ ಉವಾಚ|

03103001a ಸಮುದ್ರಂ ಸ ಸಮಾಸಾದ್ಯ ವಾರುಣಿರ್ಭಗವಾನೃಷಿಃ|

03103001c ಉವಾಚ ಸಹಿತಾನ್ದೇವಾನೃಷೀಂಶ್ಚೈವ ಸಮಾಗತಾನ್||

ಲೋಮಶನು ಹೇಳಿದನು: “ಭಗವಾನ್ ಋಷಿ ವಾರುಣಿಯು ಸಮುದ್ರವನ್ನು ಸೇರಿ ಅಲ್ಲಿ ಕೂಡಿದ್ದ ದೇವತೆಗಳಿಗೆ ಮತ್ತು ಋಷಿಗಳಿಗೆ ಹೇಳಿದನು:

03103002a ಏಷ ಲೋಕಹಿತಾರ್ಥಂ ವೈ ಪಿಬಾಮಿ ವರುಣಾಲಯಂ|

03103002c ಭವದ್ಭಿರ್ಯದನುಷ್ಠೇಯಂ ತಚ್ಶೀಘ್ರಂ ಸಂವಿಧೀಯತಾಂ||

“ಈಗ ಲೋಕಹಿತಕ್ಕಾಗಿ ನಾನು ಈ ವರುಣಾಲಯವನ್ನು ಕುಡಿಯುತ್ತೇನೆ. ನೀವು ಏನು ಮಾಡಬೇಕೆಂದಿರುವಿರೋ ಅದನ್ನು ಶೀಘ್ರದಲ್ಲಿಯೇ ಮಾಡಿ.”

03103003a ಏತಾವದುಕ್ತ್ವಾ ವಚನಂ ಮೈತ್ರಾವರುಣಿರಚ್ಯುತಃ|

03103003c ಸಮುದ್ರಮಪಿಬತ್ಕ್ರುದ್ಧಃ ಸರ್ವಲೋಕಸ್ಯ ಪಶ್ಯತಃ||

ಈ ಮಾತನ್ನು ಹೇಳಿ ಅಚ್ಯುತ ಮೈತ್ರಾವರುಣಿಯು ಕೃದ್ಧನಾಗಿ ಸರ್ವ ಲೋಕವೂ ನೋಡುತ್ತಿದ್ದಂತೆ ಸಮುದ್ರವನ್ನು ಸಂಪೂರ್ಣವಾಗಿ ಕುಡಿದು ಬರಿದುಮಾಡಿದನು.

03103004a ಪೀಯಮಾನಂ ಸಮುದ್ರಂ ತು ದೃಷ್ಟ್ವಾ ದೇವಾಃ ಸವಾಸವಾಃ|

03103004c ವಿಸ್ಮಯಂ ಪರಮಂ ಜಗ್ಮುಃ ಸ್ತುತಿಭಿಶ್ಚಾಪ್ಯಪೂಜಯನ್||

ಅವನು ಸಮುದ್ರವನ್ನು ಕುಡಿದಿದ್ದುದನ್ನು ನೋಡಿ ಇಂದ್ರನೂ ಸೇರಿ ದೇವತೆಗಳು ಪರಮ ವಿಸ್ಮಿತರಾದರು ಮತ್ತು ಅವನನ್ನು ಸ್ತುತಿಸಿ ಪೂಜಿಸಿದರು.

03103005a ತ್ವಂ ನಸ್ತ್ರಾತಾ ವಿಧಾತಾ ಚ ಲೋಕಾನಾಂ ಲೋಕಭಾವನಃ|

03103005c ತ್ವತ್ಪ್ರಸಾದಾತ್ಸಮುಚ್ಚೇದಂ ನ ಗಚ್ಚೇತ್ಸಾಮರಂ ಜಗತ್||

“ಲೋಕಭಾವನ! ನೀನೇ ನಮ್ಮ ಮತ್ತು ಲೋಕಗಳ ತ್ರಾತ, ವಿಧಾತ. ನಿನ್ನ ಪ್ರಸಾದದಿಂದ ಅಮರರು ಮತ್ತು ಜಗತ್ತು ಈ ಕಷ್ಟದಿಂದ ಪಾರುಗೊಂಡಿವೆ.”

03103006a ಸಂಪೂಜ್ಯಮಾನಸ್ತ್ರಿದಶೈರ್ಮಹಾತ್ಮಾ|

        ಗಂಧರ್ವತೂರ್ಯೇಷು ನದತ್ಸು ಸರ್ವಶಃ|

03103006c ದಿವ್ಯೈಶ್ಚ ಪುಷ್ಪೈರವಕೀರ್ಯಮಾಣೋ|

        ಮಹಾರ್ಣವಂ ನಿಃಸಲಿಲಂ ಚಕಾರ||

ಆ ಮಹಾತ್ಮನು ಮಹಾಸಾಗರವನ್ನು ನೀರಿಲ್ಲದೇ ಮಾಡಿದ ನಂತರ ದೇವತೆಗಳಿಂದ ಪೂಜಿಸಲ್ಪಡಲು ಗಂಧರ್ವರು ಎಲ್ಲೆಡೆಯೂ ನಾದವನ್ನು ತುಂಬಿಸಿದರು. ಅವನ ಮೇಲೆ ದಿವ್ಯ ಪುಷ್ಪಗಳನ್ನು ಸುರಿಸಲಾಯಿತು.

03103007a ದೃಷ್ಟ್ವಾ ಕೃತಂ ನಿಃಸಲಿಲಂ ಮಹಾರ್ಣವಂ|

        ಸುರಾಃ ಸಮಸ್ತಾಃ ಪರಮಪ್ರಹೃಷ್ಟಾಃ|

03103007c ಪ್ರಗೃಹ್ಯಯ ದಿವ್ಯಾನಿ ವರಾಯುಧಾನಿ|

        ತಾನ್ದಾನವಾಂ ಜಘ್ನುರದೀನಸತ್ತ್ವಾಃ||

ಆ ಮಹಾಸಾಗರವು ನೀರಿಲ್ಲದೇ ಬತ್ತಿಹೋದದನ್ನು ಕಂಡು ಸುರರೆಲ್ಲರೂ ಪರಮ ಹೃಷ್ಟರಾದರು. ದಿವ್ಯ ಶ್ರೇಷ್ಠ ಆಯುಧಗಳನ್ನು ಹಿಡಿದು ಸಂತೋಷದಿಂದ ಆ ದಾನವರನ್ನು ಸಂಹರಿಸಿದರು.

03103008a ತೇ ವಧ್ಯಮಾನಾಸ್ತ್ರಿದಶೈರ್ಮಹಾತ್ಮಭಿರ್|

        ಮಹಾಬಲೈರ್ವೇಗಿಭಿರುನ್ನದದ್ಭಿಃ|

03103008c ನ ಸೇಹಿರೇ ವೇಗವತಾಂ ಮಹಾತ್ಮನಾಂ|

        ವೇಗಂ ತದಾ ಧಾರಯಿತುಂ ದಿವೌಕಸಾಂ||

ಮಹಾತ್ಮ ದೇವತೆಗಳಿಂದ ಮಹಾವೀರ, ಮಹಾ ವೇಗದಲ್ಲಿ ಹೋಗಬಲ್ಲ ಆ ದಾನವರು ನಿರ್ನಾಮಗೊಂಡರು. ವೇಗಶಾಲಿ ಮಹಾತ್ಮ ದಿವೌಕಸರ ವೇಗದ ಧಾಳಿಯನ್ನು ಅವರು ಸಹಿಸಲಾರದಾದರು.

03103009a ತೇ ವಧ್ಯಮಾನಾಸ್ತ್ರಿದಶೈರ್ದಾನವಾ ಭೀಮನಿಸ್ವನಾಃ|

03103009c ಚಕ್ರುಃ ಸುತುಮುಲಂ ಯುದ್ಧಂ ಮುಹೂರ್ತಮಿವ ಭಾರತ||

ಭಾರತ! ಭಯಂಕರ ಘರ್ಜನೆಯೊಂದಿಗೆ ನಡೆದ ಆ ಮಹಾ ಯುದ್ಧದಲ್ಲಿ ಒಂದೇ ಕ್ಷಣದಲ್ಲಿ ದೇವತೆಗಳು ದಾನವರನ್ನು ವಧಿಸಿದರು.

03103010a ತೇ ಪೂರ್ವಂ ತಪಸಾ ದಗ್ಧಾ ಮುನಿಭಿರ್ಭಾವಿತಾತ್ಮಭಿಃ|

03103010c ಯತಮಾನಾಃ ಪರಂ ಶಕ್ತ್ಯಾ ತ್ರಿದಶೈರ್ವಿನಿಷೂದಿತಾಃ||

ಭಾವಿತಾತ್ಮರಾದ ಮುನಿಗಳ ತಪಸ್ಸಿನಿಂದ ಮೊದಲೇ ದಗ್ಧರಾಗಿದ್ದ ಪರಮ ಶಕ್ತಿಯನ್ನುಪಯೋಗಿಸಿ ಹೋರಾಡಿದರೂ ದೇವತೆಗಳಿಂದ ನಾಶಹೊಂದಿದರು.

03103011a ತೇ ಹೇಮನಿಷ್ಕಾಭರಣಾಃ ಕುಂಡಲಾಂಗದಧಾರಿಣಃ|

03103011c ನಿಹತ್ಯ ಬಹ್ವಶೋಭಂತ ಪುಷ್ಪಿತಾ ಇವ ಕಿಂಶುಕಾಃ||

ಬಂಗಾರದ ಕವಚಾಭರಣಗಳು, ಕುಂಡಲ ಮತ್ತು ಅಂಗಗಳನ್ನು ಧರಿಸಿದ್ದ ಅವರು ವಧಿಸಲ್ಪಟ್ಟು ಹೂಬಿಟ್ಟ ಕಿಂಶುಕಗಳಂತೆ ಶೋಭಿಸಿದರು.

03103012a ಹತಶೇಷಾಸ್ತತಃ ಕೇ ಚಿತ್ಕಾಲೇಯಾ ಮನುಜೋತ್ತಮ|

03103012c ವಿದಾರ್ಯ ವಸುಧಾಂ ದೇವೀಂ ಪಾತಾಲತಲಮಾಶ್ರಿತಾಃ||

ಮನುಜೋತ್ತಮ! ಸಾಯದೇ ಉಳಿದ ಕೆಲವು ಕಾಲೇಯರು ದೇವಿ ವಸುಧೆಯನ್ನು ಬಗೆದು ಪಾತಾಲತಳವನ್ನು ಆಶ್ರಯಿಸಿದರು.

03103013a ನಿಹತಾನ್ದಾನವಾನ್ದೃಷ್ಟ್ವಾ ತ್ರಿದಶಾ ಮುನಿಪುಂಗವಂ|

03103013c ತುಷ್ಟುವುರ್ವಿವಿಧೈರ್ವಾಕ್ಯೈರಿದಂ ಚೈವಾಬ್ರುವನ್ವಚಃ||

ದಾನವರು ಹತರಾದುದನ್ನು ನೋಡಿದ ದೇವತೆಗಳು ಮುನಿಪುಂಗವನನ್ನು ವಿವಿಧ ವಾಕ್ಯಗಳಿಂದ ಪ್ರಶಂಸಿಸಿ ಹೇಳಿದರು:

03103014a ತ್ವತ್ಪ್ರಸಾದಾನ್ಮಹಾಭಾಗ ಲೋಕೈಃ ಪ್ರಾಪ್ತಂ ಮಹತ್ಸುಖಂ|

03103014c ತ್ವತ್ತೆಜಸಾ ಚ ನಿಹತಾಃ ಕಾಲೇಯಾಃ ಕ್ರೂರವಿಕ್ರಮಾಃ||

“ಮಹಾಭಾಗ! ನಿನ್ನ ಪ್ರಸಾದದಿಂದ ಲೋಕಗಳಿಗೆ ಮಹಾ ಸುಖವು ಪ್ರಾಪ್ತವಾಯಿತು. ಮತ್ತು ನಿನ್ನ ತೇಜಸ್ಸಿನಿಂದ ಈ ಕ್ರೂರವಿಕ್ರಮಿ ಕಾಲೇಯರು ಹತರಾದರು.

03103015a ಪೂರಯಸ್ವ ಮಹಾಬಾಹೋ ಸಮುದ್ರಂ ಲೋಕಭಾವನ|

03103015c ಯತ್ತ್ವಯಾ ಸಲಿಲಂ ಪೀತಂ ತದಸ್ಮಿನ್ಪುನರುತ್ಸೃಜ||

ಲೋಕಭಾವನ! ಮಹಾಬಾಹೋ! ಈಗ ಈ ಸಮುದ್ರವನ್ನು ತುಂಬಿಸು. ನೀನು ಕುಡಿದ ನೀರನ್ನು ಪುನಃ ಇದರಲ್ಲಿ ಬಿಡು.”

03103016a ಏವಮುಕ್ತಃ ಪ್ರತ್ಯುವಾಚ ಭಗವಾನ್ಮುನಿಪುಂಗವಃ|

03103016c ಜೀರ್ಣಂ ತದ್ಧಿ ಮಯಾ ತೋಯಮುಪಾಯೋಽನ್ಯಃ ಪ್ರಚಿಂತ್ಯತಾಂ||

03103016e ಪೂರಣಾರ್ಥಂ ಸಮುದ್ರಸ್ಯ ಭವದ್ಭಿರ್ಯತ್ನಮಾಸ್ಥಿತೈಃ||

ಇದನ್ನು ಕೇಳಿದ ಭಗವಾನ್ ಮುನಿಪುಂಗವನು ಉತ್ತರಿಸಿದನು: “ನಾನು ಕುಡಿದ ನೀರನ್ನು ಈಗಾಗಲೇ ಜೀರ್ಣಿಸಿಕೊಂಡಿದ್ದೇನೆ. ಸಮುದ್ರವನ್ನು ತುಂಬಿಸಲು ಬೇರೆ ಯಾವುದಾದರೂ ಉಪಾಯವನ್ನು ಯೋಚಿಸಬೇಕು. ನೀವೇ ಪ್ರಯತ್ನ ಮಾಡಬೇಕು.”

03103017a ಏತಚ್ಛೃತ್ವಾ ತು ವಚನಂ ಮಹರ್ಷೇರ್ಭಾವಿತಾತ್ಮನಃ|

03103017c ವಿಸ್ಮಿತಾಶ್ಚ ವಿಷಣ್ಣಾಶ್ಚ ಬಭೂವುಃ ಸಹಿತಾಃ ಸುರಾಃ||

ಭಾವಿತಾತ್ಮ ಮಹರ್ಷಿಯ ಈ ಮಾತುಗಳನ್ನು ಕೇಳಿದ ಸುರರು ಒಟ್ಟಿಗೇ ವಿಸ್ಮಿತರೂ ವಿಷಣ್ಣರೂ ಆದರು.

03103018a ಪರಸ್ಪರಮನುಜ್ಞಾಪ್ಯ ಪ್ರಣಮ್ಯ ಮುನಿಪುಂಗವಂ|

03103018c ಪ್ರಜಾಃ ಸರ್ವಾ ಮಹಾರಾಜ ವಿಪ್ರಜಗ್ಮುರ್ಯಥಾಗತಂ||

ಮಹಾರಾಜ! ಮುನಿಪುಂಗವನಿಗೆ ನಮಸ್ಕರಿಸಿ, ಪರಸ್ಪರರನ್ನು ಬೀಳ್ಕೊಂಡು ಎಲ್ಲರೂ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು.

03103019a ತ್ರಿದಶಾ ವಿಷ್ಣುನಾ ಸಾರ್ಧಮುಪಜಗ್ಮುಃ ಪಿತಾಮಹಂ|

03103019c ಪೂರಣಾರ್ಥಂ ಸಮುದ್ರಸ್ಯ ಮಂತ್ರಯಿತ್ವಾ ಪುನಃ ಪುನಃ||

03103019e ಊಚುಃ ಪ್ರಾಂಜಲಯಃ ಸರ್ವೇ ಸಾಗರಸ್ಯಾಭಿಪೂರಣಂ||

ಸಮುದ್ರವನ್ನು ಪುನಃ ತುಂಬಿಸುವುದರ ಕುರಿತು ಮತ್ತೆ ಮತ್ತೆ ಮಂತ್ರಾಲೋಚನೆ ಮಾಡಿ ದೇವತೆಗಳು ವಿಷ್ಣುವಿನೊಂದಿಗೆ ಪಿತಾಮಹನಲ್ಲಿಗೆ ಹೋದರು. ಅವರೆಲ್ಲರೂ ಕೈಜೋಡಿಸಿ ಸಾಗರವನ್ನು ತುಂಬಿಸುವುದರ ಕುರಿತು ಹೇಳಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ತ್ರ್ಯಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ನೂರಾಮೂರನೆಯ ಅಧ್ಯಾಯವು.

Related image

Comments are closed.