Anushasana Parva: Chapter 71

ಅನುಶಾಸನ ಪರ್ವ: ದಾನಧರ್ಮ ಪರ್ವ

೭೧

ಗೋಪ್ರದಾನಿಕ

ಗೋಲೋಕದ ಕುರಿತು ಶಕ್ರನು ಬ್ರಹ್ಮನಲ್ಲಿ ಪ್ರಶ್ನಿಸಿದುದು (೧-೧೨)

13071001 ಯುಧಿಷ್ಠಿರ ಉವಾಚ|

13071001a ಉಕ್ತಂ ವೈ ಗೋಪ್ರದಾನಂ ತೇ ನಾಚಿಕೇತಮೃಷಿಂ ಪ್ರತಿ|

13071001c ಮಾಹಾತ್ಮ್ಯಮಪಿ ಚೈವೋಕ್ತಮುದ್ದೇಶೇನ ಗವಾಂ ಪ್ರಭೋ||

ಯುಧಿಷ್ಠಿರನು ಹೇಳಿದನು: “ಪ್ರಭೋ! ಋಷಿ ನಾಚಿಕೇತನ ಕುರಿತು ಹೇಳುವಾಗ ಗೋದಾನದ ಮಹಾತ್ಮ್ಯದ ಕುರಿತೂ ನೀನು ನನಗೆ ಹೇಳಿದೆ.

13071002a ನೃಗೇಣ ಚ ಯಥಾ ದುಃಖಮನುಭೂತಂ ಮಹಾತ್ಮನಾ|

13071002c ಏಕಾಪರಾಧಾದಜ್ಞಾನಾತ್ಪಿತಾಮಹ ಮಹಾಮತೇ||

ಮಹಾಮತೇ! ಪಿತಾಮಹ! ಅಜ್ಞಾನದಿಂದ ಮಾಡಿದ ಒಂದೇ ಒಂದು ಅಪರಾಧದಿಂದ ಮಹಾತ್ಮ ನೃಗನು ಹೇಗೆ ದುಃಖವನ್ನು ಅನುಭವಿಸಬೇಕಾಯಿತು ಎನ್ನುವುದನ್ನೂ ಹೇಳಿದೆ.

13071003a ದ್ವಾರವತ್ಯಾಂ ಯಥಾ ಚಾಸೌ ನಿವಿಶಂತ್ಯಾಂ ಸಮುದ್ಧೃತಃ|

13071003c ಮೋಕ್ಷಹೇತುರಭೂತ್ಕೃಷ್ಣಸ್ತದಪ್ಯವಧೃತಂ ಮಯಾ||

ದ್ವಾರಾವತಿಯ ಬಳಿಯಲ್ಲಿ ಬಾವಿಯಲ್ಲಿ ವಾಸಿಸುತ್ತಿದ್ದ ನೃಗನಿಗೆ ಕೃಷ್ಣನೇ ಮೋಕ್ಷಹೇತುವಾದನು ಎನ್ನುವುದನ್ನೂ ನಾನು ಕೇಳಿದೆ.

13071004a ಕಿಂ ತ್ವಸ್ತಿ ಮಮ ಸಂದೇಹೋ ಗವಾಂ ಲೋಕಂ ಪ್ರತಿ ಪ್ರಭೋ|

13071004c ತತ್ತ್ವತಃ ಶ್ರೋತುಮಿಚ್ಚಾಮಿ ಗೋದಾ ಯತ್ರ ವಿಶಂತ್ಯುತ||

ಪ್ರಭೋ! ಗೋಲೋಕದ ಕುರಿತು ನನಗೆ ಒಂದು ಸಂದೇಹವಿದೆ. ಗೋದಾನಮಾಡಿದವರು ಯಾವ ಲೋಕವನ್ನು ಪ್ರವೇಶಿಸುತ್ತಾರೆ ಎನ್ನುವುದನ್ನು ತತ್ತ್ವತಃ ಕೇಳಬಯಸುತ್ತೇನೆ.”

13071005 ಭೀಷ್ಮ ಉವಾಚ|

13071005a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13071005c ಯಥಾಪೃಚ್ಚತ್ಪದ್ಮಯೋನಿಮೇತದೇವ ಶತಕ್ರತುಃ||

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಒಂದು ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ. ಆಗ ಶತಕ್ರತುವು ಪದ್ಮಯೋನಿಯನ್ನು ಹೀಗೆಯೇ ಪ್ರಶ್ನಿಸಿದ್ದನು.

13071006 ಶಕ್ರ ಉವಾಚ|

13071006a ಸ್ವರ್ಲೋಕವಾಸಿನಾಂ ಲಕ್ಷ್ಮೀಮಭಿಭೂಯ ಸ್ವಯಾ ತ್ವಿಷಾ|

13071006c ಗೋಲೋಕವಾಸಿನಃ ಪಶ್ಯೇ ವ್ರಜತಃ ಸಂಶಯೋಽತ್ರ ಮೇ||

ಶಕ್ರನು ಹೇಳಿದನು: “ಗೋಲೋಕವಾಸಿಗಳು ಸ್ವರ್ಲೋಕವಾಸಿಗಳ ಕಾಂತಿಗಿಂತಲೂ ಹೆಚ್ಚಿನ ಕಾಂತಿಯುಕ್ತರಾಗಿ ಹೋಗುತ್ತಿರುವುದನ್ನು ನೋಡುತ್ತಿದ್ದೇನೆ. ಇದರ ಕುರಿತು ನನ್ನಲ್ಲಿ ಒಂದು ಸಂಶಯವಿದೆ.

13071007a ಕೀದೃಶಾ ಭಗವಽಲ್ಲೋಕಾ ಗವಾಂ ತದ್ಬ್ರೂಹಿ ಮೇಽನಘ|

13071007c ಯಾನಾವಸಂತಿ ದಾತಾರ ಏತದಿಚ್ಚಾಮಿ ವೇದಿತುಮ್||

ಭಗವನ್! ಅನಘ! ಗೋಲೋಕವು ಎಂಥಹುದು ಎನ್ನುವುದನ್ನು ನನಗೆ ಹೇಳು. ಗೋದಾನ ಮಾಡಿದವರು ಎಲ್ಲಿ ವಾಸಿಸುತ್ತಾರೆ ಎನ್ನುವುದನ್ನು ತಿಳಿಯ ಬಯಸುತ್ತೇನೆ.

13071008a ಕೀದೃಶಾಃ ಕಿಂಫಲಾಃ ಕಃ ಸ್ವಿತ್ಪರಮಸ್ತತ್ರ ವೈ ಗುಣಃ|

13071008c ಕಥಂ ಚ ಪುರುಷಾಸ್ತತ್ರ ಗಚ್ಚಂತಿ ವಿಗತಜ್ವರಾಃ||

ಗೋಲೋಕವು ಹೇಗಿದೆ? ಅಲ್ಲಿ ಯಾವ ಫಲಗಳು ದೊರೆಯುತ್ತವೆ? ಅಲ್ಲಿಯ ಸರ್ವಶ್ರೇಷ್ಠ ಗುಣಗಳು ಯಾವುವು? ಗೋದಾನ ಮಾಡಿದ ಪುರುಷರು ವಿಗತಜ್ವರರಾಗಿ ಅಲ್ಲಿಗೆ ಹೇಗೆ ಹೋಗುತ್ತಾರೆ?

13071009a ಕಿಯತ್ಕಾಲಂ ಪ್ರದಾನಸ್ಯ ದಾತಾ ಚ ಫಲಮಶ್ನುತೇ|

13071009c ಕಥಂ ಬಹುವಿಧಂ ದಾನಂ ಸ್ಯಾದಲ್ಪಮಪಿ ವಾ ಕಥಮ್||

ಗೋದಾನ ಮಾಡಿದವನು ಎಷ್ಟು ಕಾಲದವರೆಗೆ ಅಲ್ಲಿಯ ಫಲವನ್ನು ಭೋಗಿಸುತ್ತಾನೆ? ಬಹುವಿಧದ ದಾನವನ್ನು ಹೇಗೆ ಮಾಡಬಹುದು? ದಾನವು ಅಲ್ಪವಾದರೂ ಫಲವನ್ನು ಹೇಗೆ ಹೆಚ್ಚಿನದಾಗಿಸಿಕೊಳ್ಳಬಹುದು?

13071010a ಬಹ್ವೀನಾಂ ಕೀದೃಶಂ ದಾನಮಲ್ಪಾನಾಂ ವಾಪಿ ಕೀದೃಶಮ್|

13071010c ಅದತ್ತ್ವಾ ಗೋಪ್ರದಾಃ ಸಂತಿ ಕೇನ ವಾ ತಚ್ಚ ಶಂಸ ಮೇ||

ಅನೇಕ ಗೋವುಗಳನ್ನು ದಾನಮಾಡಿದವನ ಫಲವು ಹೇಗಿರುತ್ತದೆ? ಅಲ್ಪವೇ ಗೋವುಗಳನ್ನು ದಾನಮಾಡಿದವನ ಫಲವು ಹೇಗಿರುತ್ತದೆ? ಗೋವುಗಳನ್ನು ದಾನಮಾಡದೇ ಇರುವವರೂ ಇದ್ದಾರೆ. ಅವರಿಗೆ ಯಾವ ಫಲವು ದೊರಕುತ್ತದೆ. ಇದನ್ನು ನನಗೆ ಹೇಳು.

13071011a ಕಥಂ ಚ ಬಹುದಾತಾ ಸ್ಯಾದಲ್ಪದಾತ್ರಾ ಸಮಃ ಪ್ರಭೋ|

13071011c ಅಲ್ಪಪ್ರದಾತಾ ಬಹುದಃ ಕಥಂ ಚ ಸ್ಯಾದಿಹೇಶ್ವರ||

ಪ್ರಭೋ! ಅನೇಕ ಗೋವುಗಳನ್ನು ದಾನಮಾಡಿದವನು ಅಲ್ಪವೇ ಗೋವುಗಳನ್ನು ದಾನಮಾಡಿದವನಿಗೆ ಹೇಗೆ ಸಮನಾಗುತ್ತಾನೆ? ಈಶ್ವರ! ಅಲ್ಪ ದಾನಿಯು ಬಹುದಾನಿಯ ಸಮನು ಹೇಗಾಗುತ್ತಾನೆ?

13071012a ಕೀದೃಶೀ ದಕ್ಷಿಣಾ ಚೈವ ಗೋಪ್ರದಾನೇ ವಿಶಿಷ್ಯತೇ|

13071012c ಏತತ್ತಥ್ಯೇನ ಭಗವನ್ಮಮ ಶಂಸಿತುಮರ್ಹಸಿ||

ಗೋದಾನದಲ್ಲಿ ಎಂತಹ ದಕ್ಷಿಣೆಯು ಶ್ರೇಷ್ಠವೆನಿಸುತ್ತದೆ? ಭಗವನ್! ಇವುಗಳ ಕುರಿತು ಇದ್ದಹಾಗೆ ನನಗೆ ಹೇಳಬೇಕು.””

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಗೋಪ್ರದಾನಿಕೇ ಏಕಸಪ್ತತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಗೋಪ್ರದಾನಿಕ ಎನ್ನುವ ಎಪ್ಪತ್ತೊಂದನೇ ಅಧ್ಯಾಯವು.

Hand-drawn aquarelle painting of green leaves with small yellow ...

Comments are closed.