ಅನುಶಾಸನ ಪರ್ವ: ದಾನಧರ್ಮ ಪರ್ವ
೫೬
ಚ್ಯವನನು ಕುಶಿಕನಿಗೆ ಭೃಗುವಂಶ ಮತ್ತು ಕುಶಿಕವಂಶಗಳ ನಡುವೆ ಆಗುವ ಸಂಬಂಧದ ಕಾರಣವನ್ನು ಹೇಳಿ ತೀರ್ಥಯಾತ್ರೆಗೆ ತೆರಳಿದುದು (೧-೨೦).
13056001 ಚ್ಯವನ ಉವಾಚ|
13056001a ಅವಶ್ಯಂ ಕಥನೀಯಂ ಮೇ ತವೈತನ್ನರಪುಂಗವ|
13056001c ಯದರ್ಥಂ ತ್ವಾಹಮುಚ್ಚೇತ್ತುಂ ಸಂಪ್ರಾಪ್ತೋ ಮನುಜಾಧಿಪ||
ಚ್ಯವನನು ಹೇಳಿದನು: “ನರಪುಂಗವ! ಮನುಜಾಧಿಪ! ನಾನು ಯಾವ ಉದ್ದೇಶದಿಂದ ನಿನ್ನ ಮೂಲೋಚ್ಛೇದನ ಮಾಡಲು ಇಲ್ಲಿಗೆ ಬಂದೆ ಎನ್ನುವುದನ್ನು ನಿನಗೆ ಅವಶ್ಯವಾಗಿ ಹೇಳಬೇಕು.
13056002a ಭೃಗೂಣಾಂ ಕ್ಷತ್ರಿಯಾ ಯಾಜ್ಯಾ ನಿತ್ಯಮೇವ ಜನಾಧಿಪ|
13056002c ತೇ ಚ ಭೇದಂ ಗಮಿಷ್ಯಂತಿ ದೈವಯುಕ್ತೇನ ಹೇತುನಾ||
ಜನಾಧಿಪ! ಭೃಗುಗಳಿಗೆ ನಿತ್ಯವೂ ಕ್ಷತ್ರಿಯರು ಯಜಮಾನರಾಗಿದ್ದಾರೆ. ಆದರೆ ದೈವ್ಯಯುಕ್ತ ಕಾರಣಗಳಿಂದ ಅದರಲ್ಲಿ ಭೇದವುಂಟಾಗುವುದಿದೆ.
13056003a ಕ್ಷತ್ರಿಯಾಶ್ಚ ಭೃಗೂನ್ಸರ್ವಾನ್ವಧಿಷ್ಯಂತಿ ನರಾಧಿಪ|
13056003c ಆ ಗರ್ಭಾದನುಕೃಂತಂತೋ ದೈವದಂಡನಿಪೀಡಿತಾಃ||
ನರಾಧಿಪ! ಕ್ಷತ್ರಿಯರು ಭೃಗುಗಳೆಲ್ಲರನ್ನೂ ವಧಿಸುತ್ತಾರೆ. ದೈವದಂಡ ಪೀಡಿತರಾಗಿ ಅವರು ಗರ್ಭದಲ್ಲಿರುವ ಮಕ್ಕಳನ್ನೂ ಸೇರಿಸಿ ತುಂಡರಿಸುತ್ತಾರೆ.
13056004a ತತ ಉತ್ಪತ್ಸ್ಯತೇಽಸ್ಮಾಕಂ ಕುಲೇ ಗೋತ್ರವಿವರ್ಧನಃ|
13056004c ಔರ್ವೋ ನಾಮ ಮಹಾತೇಜಾ ಜ್ವಲನಾರ್ಕಸಮದ್ಯುತಿಃ||
ಆಗ ನಮ್ಮ ಕುಲದಲ್ಲಿ ಔರ್ವ ಎಂಬ ಹೆಸರಿನ ಅಗ್ನಿ-ಸೂರ್ಯಸಮದ್ಯುತಿ ಗೋತ್ರವಿವರ್ಧನ ಮಹಾತೇಜಸ್ವೀ ಪುತ್ರನಾಗುತ್ತಾನೆ.
13056005a ಸ ತ್ರೈಲೋಕ್ಯವಿನಾಶಾಯ ಕೋಪಾಗ್ನಿಂ ಜನಯಿಷ್ಯತಿ|
13056005c ಮಹೀಂ ಸಪರ್ವತವನಾಂ ಯಃ ಕರಿಷ್ಯತಿ ಭಸ್ಮಸಾತ್||
ಅವನು ತ್ರಿಲೋಕ್ಯದ ವಿನಾಶಕ್ಕಾಗಿ ಕೋಪಾಗ್ನಿಯನ್ನು ಸೃಷ್ಟಿಸುತ್ತಾನೆ. ಆ ಅಗ್ನಿಯು ಪರ್ವತ-ವನಗಳೊಂದಿಗೆ ಇಡೀ ಮಹಿಯನ್ನು ಸುಟ್ಟು ಭಸ್ಮಮಾಡುತ್ತದೆ.
13056006a ಕಂ ಚಿತ್ಕಾಲಂ ತು ತಂ ವಹ್ನಿಂ ಸ ಏವ ಶಮಯಿಷ್ಯತಿ|
13056006c ಸಮುದ್ರೇ ವಡವಾವಕ್ತ್ರೇ ಪ್ರಕ್ಷಿಪ್ಯ ಮುನಿಸತ್ತಮಃ||
ಸ್ವಲ್ಪ ಕಾಲದ ನಂತರ ಅದೇ ಮುನಿಸತ್ತಮನು ಆ ಅಗ್ನಿಯನ್ನು ಸಮುದ್ರದ ವಡವದ ಬಾಯಿಯಲ್ಲಿ ಹಾಕಿ ಆರಿಸುತ್ತಾನೆ.
13056007a ಪುತ್ರಂ ತಸ್ಯ ಮಹಾಭಾಗಮೃಚೀಕಂ ಭೃಗುನಂದನಮ್|
13056007c ಸಾಕ್ಷಾತ್ಕೃತ್ಸ್ನೋ ಧನುರ್ವೇದಃ ಸಮುಪಸ್ಥಾಸ್ಯತೇಽನಘ||
ಅನಘ! ಅವನ ಮಹಾಭಾಗ ಪುತ್ರ ಭೃಗುನಂದನ ಋಚೀಕನ ಬಳಿ ಸರ್ವ ಧನುವೇದವು ಸಾಕ್ಷಾತ್ ಬಂದು ನಿಲ್ಲುತ್ತದೆ.
13056008a ಕ್ಷತ್ರಿಯಾಣಾಮಭಾವಾಯ ದೈವಯುಕ್ತೇನ ಹೇತುನಾ|
13056008c ಸ ತು ತಂ ಪ್ರತಿಗೃಹ್ಯೈವ ಪುತ್ರೇ ಸಂಕ್ರಾಮಯಿಷ್ಯತಿ||
13056009a ಜಮದಗ್ನೌ ಮಹಾಭಾಗೇ ತಪಸಾ ಭಾವಿತಾತ್ಮನಿ|
13056009c ಸ ಚಾಪಿ ಭೃಗುಶಾರ್ದೂಲಸ್ತಂ ವೇದಂ ಧಾರಯಿಷ್ಯತಿ||
ದೈವಯುಕ್ತ ಕಾರಣದಿಂದ ಕ್ಷತ್ರಿಯರನ್ನು ವಿನಾಶಗೊಳಿಸಲು ಅವನು ಆ ಧನುರ್ವೇದವನ್ನು ಸ್ವೀಕರಿಸಿ ತಪಸ್ಯದಿಂದ ಶುದ್ಧ ಅಂತಃಕರಣನಾದ ತನ್ನ ಪುತ್ರ ಮಹಾಭಾಗ ಜಮದಗ್ನಿಗೆ ಅದರ ಶಿಕ್ಷೆಯನ್ನು ನೀಡುತ್ತಾನೆ. ಭೃಗುಶಾರ್ದೂಲ ಜಮದಗ್ನಿಯು ಆ ಧನುರ್ವೇದದ ಧಾರಣೆ ಮಾಡುತ್ತಾನೆ.
13056010a ಕುಲಾತ್ತು ತವ ಧರ್ಮಾತ್ಮನ್ಕನ್ಯಾಂ ಸೋಽಧಿಗಮಿಷ್ಯತಿ|
13056010c ಉದ್ಭಾವನಾರ್ಥಂ ಭವತೋ ವಂಶಸ್ಯ ನೃಪಸತ್ತಮ||
ಧರ್ಮಾತ್ಮನ್! ನೃಪಸತ್ತಮ! ಆ ಋಚೀಕನು ನಿನ್ನ ಕುಲವನ್ನು ಉದ್ಧರಿಸುವ ಸಲುವಾಗಿ ನಿನ್ನ ವಂಶದ ಕನ್ಯೆಯ ಪಾಣಿಗ್ರಹಣ ಮಾಡುತ್ತಾನೆ.
13056011a ಗಾಧೇರ್ದುಹಿತರಂ ಪ್ರಾಪ್ಯ ಪೌತ್ರೀಂ ತವ ಮಹಾತಪಾಃ|
13056011c ಬ್ರಾಹ್ಮಣಂ ಕ್ಷತ್ರಧರ್ಮಾಣಂ ರಾಮಮುತ್ಪಾದಯಿಷ್ಯತಿ||
ನಿನ್ನ ಮೊಮ್ಮಗಳು ಗಾಧಿಯ ಪುತ್ರಿಯನ್ನು ಪಡೆದು ಆ ಮಹಾತಪಸ್ವಿ ಬ್ರಾಹ್ಮಣನು ಕ್ಷತ್ರಧರ್ಮದ ರಾಮನನ್ನು ಹುಟ್ಟಿಸುತ್ತಾನೆ.
13056012a ಕ್ಷತ್ರಿಯಂ ವಿಪ್ರಕರ್ಮಾಣಂ ಬೃಹಸ್ಪತಿಮಿವೌಜಸಾ|
13056012c ವಿಶ್ವಾಮಿತ್ರಂ ತವ ಕುಲೇ ಗಾಧೇಃ ಪುತ್ರಂ ಸುಧಾರ್ಮಿಕಮ್|
13056012e ತಪಸಾ ಮಹತಾ ಯುಕ್ತಂ ಪ್ರದಾಸ್ಯತಿ ಮಹಾದ್ಯುತೇ||
ಮಹಾದ್ಯುತೇ! ಆ ಋಚೀಕನು ನಿನ್ನ ಕುಲದಲ್ಲಿ ರಾಜಾ ಗಾಧಿಗೆ ಓರ್ವ ಮಹಾನ್ ತಪಸ್ವೀ ಮತ್ತು ಪರಮ ಧಾರ್ಮಿಕ ಪುತ್ರನನ್ನು ನೀಡುತ್ತಾನೆ. ಅವನ ಹೆಸರು ವಿಶ್ವಾಮಿತ್ರನೆಂದಾಗುತ್ತದೆ. ಅವನು ಬೃಹಸ್ಪತಿಯ ಸಮಾನ ತೇಜಸ್ವಿಯೂ ಮತ್ತು ಬ್ರಾಹ್ಮಣೋಚಿತ ಕರ್ಮಗಳನ್ನು ಮಾಡುವ ಕ್ಷತ್ರಿಯನೂ ಆಗುತ್ತಾನೆ.
13056013a ಸ್ತ್ರಿಯೌ ತು ಕಾರಣಂ ತತ್ರ ಪರಿವರ್ತೇ ಭವಿಷ್ಯತಃ|
13056013c ಪಿತಾಮಹನಿಯೋಗಾದ್ವೈ ನಾನ್ಯಥೈತದ್ಭವಿಷ್ಯತಿ||
ಬ್ರಹ್ಮನ ಪ್ರೇರಣೆಯಿಂದ ಗಾಧಿಯ ಪತ್ನಿ ಮತ್ತು ಮಗಳು ಈ ಇಬ್ಬರು ಸ್ತ್ರೀಯರು ಈ ಮಹಾ ಪರಿವರ್ತನೆಯ ಕಾರಣರಾಗುತ್ತಾರೆ. ಇದು ಅವಶ್ಯವಾಗಿ ಹೀಗೆಯೇ ನಡೆಯುತ್ತದೆ. ಇದನ್ನು ಯಾರೂ ಬದಲಾಯಿಸಲಾರರು.
13056014a ತೃತೀಯೇ ಪುರುಷೇ ತುಭ್ಯಂ ಬ್ರಾಹ್ಮಣತ್ವಮುಪೈಷ್ಯತಿ|
13056014c ಭವಿತಾ ತ್ವಂ ಚ ಸಂಬಂಧೀ ಭೃಗೂಣಾಂ ಭಾವಿತಾತ್ಮನಾಮ್||
ನಿನ್ನಿಂದ ಮೂರನೆಯ ಪುರುಷನು ಬ್ರಾಹ್ಮಣತ್ವವನ್ನು ಪಡೆಯುತ್ತಾನೆ. ಮತ್ತು ನೀನು ಭಾವಿತಾತ್ಮರಾದ ಬೃಗುಗಳ ಸಂಬಂಧಿಯಾಗುವೆ.””
13056015 ಭೀಷ್ಮ ಉವಾಚ|
13056015a ಕುಶಿಕಸ್ತು ಮುನೇರ್ವಾಕ್ಯಂ ಚ್ಯವನಸ್ಯ ಮಹಾತ್ಮನಃ|
13056015c ಶ್ರುತ್ವಾ ಹೃಷ್ಟೋಽಭವದ್ರಾಜಾ ವಾಕ್ಯಂ ಚೇದಮುವಾಚ ಹ|
13056015e ಏವಮಸ್ತ್ವಿತಿ ಧರ್ಮಾತ್ಮಾ ತದಾ ಭರತಸತ್ತಮ||
ಭೀಷ್ಮನು ಹೇಳಿದನು: “ಭರತಸತ್ತಮ! ಧರ್ಮಾತ್ಮಾ ರಾಜಾ ಕುಶಿಕನಾದರೋ ಮಹಾತ್ಮ ಚ್ಯವನ ಮುನಿಯ ಮಾತನ್ನು ಕೇಳಿ ಹರ್ಷಿತನಾಗಿ “ಹೀಗೆಯೇ ಆಗಲಿ” ಎಂದನು.
13056016a ಚ್ಯವನಸ್ತು ಮಹಾತೇಜಾಃ ಪುನರೇವ ನರಾಧಿಪಮ್|
13056016c ವರಾರ್ಥಂ ಚೋದಯಾಮಾಸ ತಮುವಾಚ ಸ ಪಾರ್ಥಿವಃ||
ಮಹಾತೇಜಸ್ವೀ ಚ್ಯವನನು ಪುನಃ ಆ ನರಾಧಿಪನಿಗೆ ವರವನ್ನು ಕೇಳಿಕೊಳ್ಳಲು ಪ್ರಚೋದಿಸಿದನು. ಆಗ ಆ ಪಾರ್ಥಿವನು ಹೇಳಿದನು:
13056017a ಬಾಢಮೇವಂ ಗ್ರಹೀಷ್ಯಾಮಿ ಕಾಮಂ ತ್ವತ್ತೋ ಮಹಾಮುನೇ|
13056017c ಬ್ರಹ್ಮಭೂತಂ ಕುಲಂ ಮೇಽಸ್ತು ಧರ್ಮೇ ಚಾಸ್ಯ ಮನೋ ಭವೇತ್||
“ಮಹಾಮುನೇ! ಒಳ್ಳೆಯದಾಯಿತು! ನಾನು ನನ್ನ ಮನೋಕಾಮನೆಯನ್ನು ನಿನ್ನಲ್ಲಿ ಹೇಳಿಕೊಳ್ಳಬಲ್ಲೆ. ನನ್ನ ಕುಲವು ಬ್ರಹ್ಮಭೂತವಾಗಲಿ ಮತ್ತು ಧರ್ಮದಲ್ಲಿಯೇ ಅದರ ಮನಸ್ಸು ನೆಲಸಿರಲಿ!”
13056018a ಏವಮುಕ್ತಸ್ತಥೇತ್ಯೇವಂ ಪ್ರತ್ಯುಕ್ತ್ವಾ ಚ್ಯವನೋ ಮುನಿಃ|
13056018c ಅಭ್ಯನುಜ್ಞಾಯ ನೃಪತಿಂ ತೀರ್ಥಯಾತ್ರಾಂ ಯಯೌ ತದಾ||
ಹಾಗೆಯೇ ಆಗಲೆಂದು ಪ್ರತ್ಯುತ್ತರವನ್ನಿತ್ತು ಮುನಿ ಚ್ಯವನನು ನೃಪತಿಗೆ ಅನುಜ್ಞೆಯನ್ನಿತ್ತು ತೀರ್ಥಯಾತ್ರೆಗೆ ಹೋದನು.
13056019a ಏತತ್ತೇ ಕಥಿತಂ ಸರ್ವಮಶೇಷೇಣ ಮಯಾ ನೃಪ|
13056019c ಭೃಗೂಣಾಂ ಕುಶಿಕಾನಾಂ ಚ ಪ್ರತಿ ಸಂಬಂಧಕಾರಣಮ್||
ನೃಪ! ಇದೋ ನಾನು ಭೃಗುಗಳ ಮತ್ತು ಕುಶಿಕರ ಸಂಬಂಧದ ಕಾರಣವನ್ನು ಸಂಪೂರ್ಣವಾಗಿ ನಿನಗೆ ಹೇಳಿದ್ದೇನೆ.
13056020a ಯಥೋಕ್ತಂ ಮುನಿನಾ ಚಾಪಿ ತಥಾ ತದಭವನ್ನೃಪ|
13056020c ಜನ್ಮ ರಾಮಸ್ಯ ಚ ಮುನೇರ್ವಿಶ್ವಾಮಿತ್ರಸ್ಯ ಚೈವ ಹ||
ನೃಪ! ಮುನಿಯು ಹೇಳಿದಂತೆಯೇ ರಾಮನ ಮತ್ತು ಮುನಿ ವಿಶ್ವಾಮಿತ್ರನ ಜನ್ಮವೂ ಆಯಿತು ಕೂಡ.”
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಚ್ಯವನಕುಶಿಕಸಂವಾದೇ ಷಟ್ಪಂಚಾಶತ್ತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಚ್ಯವನಕುಶಿಕಸಂವಾದ ಎನ್ನುವ ಐವತ್ತಾರನೇ ಅಧ್ಯಾಯವು.