Adi Parva: Chapter 42

ಆದಿ ಪರ್ವ: ಆಸ್ತೀಕ ಪರ್ವ

೪೨

ಜರತ್ಕಾರುವು ತನ್ನ ವಿವಾಹಕ್ಕೆ ನಿಯಮಗಳನ್ನು ಹಾಕಿಕೊಳ್ಳುವುದು (೧-೫). ಕನ್ಯೆಯನ್ನು ಹುಡುಕಿ ಅರಣ್ಯದಲ್ಲಿ ಅಲೆಯುತ್ತಿರುವಾಗ ವಾಸುಕಿಯು ತನ್ನ ತಂಗಿಯನ್ನು ಕೊಡಲು ಮುಂದೆ ಬಂದುದು (೬-೨೦).

01042001 ಸೂತ ಉವಾಚ

01042001a ಏತತ್ ಶ್ರುತ್ವಾ ಜರತ್ಕಾರುರ್ದುಃಖಶೋಕಪರಾಯಣಃ|

01042001c ಉವಾಚ ಸ್ವಾನ್ಪಿತೄನ್ದುಃಖಾದ್ಬಾಷ್ಪಸಂದಿಗ್ಧಯಾ ಗಿರಾ||

ಸೂತನು ಹೇಳಿದನು: “ಇದನ್ನೆಲ್ಲ ಕೇಳಿದ ಜರತ್ಕಾರುವು ದುಃಖಶೋಕಪರಾಯಣನಾಗಿ, ದುಃಖದಿಂದ ಬಾಷ್ಪಸಂದಿಗ್ಧ ಸ್ವರದಲ್ಲಿ ತನ್ನ ಪಿತೃಗಳಿಗೆ ಹೇಳಿದನು:

01042002a ಅಹಮೇವ ಜರತ್ಕಾರುಃ ಕಿಲ್ಬಿಷೀ ಭವತಾಂ ಸುತಃ|

01042002c ತದ್ದಂಡಂ ಧಾರಯತ ಮೇ ದುಷ್ಕೃತೇರಕೃತಾತ್ಮನಃ||

“ನಾನೇ ಆ ತಪ್ಪಿತಸ್ಥ ನಿಮ್ಮ ಸುತ ಜರತ್ಕಾರು. ನಾನು ಓರ್ವ ಪಾಪಿ. ಪಾಪಾತ್ಮನಾದ ನನಗೆ ಶಿಕ್ಷೆಯನ್ನು ವಿಧಿಸಿ.”

01042003 ಪಿತರ ಊಚುಃ

01042003a ಪುತ್ರ ದಿಷ್ಟ್ಯಾಸಿ ಸಂಪ್ರಾಪ್ತ ಇಮಂ ದೇಶಂ ಯದೃಚ್ಛಯಾ|

01042003c ಕಿಮರ್ಥಂ ಚ ತ್ವಯಾ ಬ್ರಹ್ಮನ್ನ ಕೃತೋ ದಾರಸಂಗ್ರಹಃ||

ಪಿತೃಗಳು ಹೇಳಿದರು: “ಇದೇ ಸ್ಥಳಕ್ಕೆ ನೀನು ತಿರುಗಾಡುತ್ತಾ ಬಂದಿದ್ದೀಯೆ ಎಂದರೆ ಅದೃಷ್ಟವೇ ಸರಿ. ಬ್ರಾಹ್ಮಣ! ನೀನು ಇದೂವರೆಗೂ ಪತ್ನಿಯನ್ನು ಪಡೆಯದೇ ಇರಲು ಕಾರಣವೇನು?”

01042004 ಜರತ್ಕಾರುರುವಾಚ

01042004a ಮಮಾಯಂ ಪಿತರೋ ನಿತ್ಯಂ ಹೃದ್ಯರ್ಥಃ ಪರಿವರ್ತತೇ|

01042004c ಊರ್ಧ್ವರೇತಾಃ ಶರೀರಂ ವೈ ಪ್ರಾಪಯೇಯಮಮುತ್ರ ವೈ||

ಜರತ್ಕಾರುವು ಹೇಳಿದನು: “ಪಿತೃಗಳೇ! ನನ್ನ ವೀರ್ಯವನ್ನು ಹಿಡಿದಿಟ್ಟುಕೊಂಡು ಇದೇ ಶರೀರವನ್ನು ಹೊತ್ತು ಅಪರ ಲೋಕವನ್ನು ಸೇರಬೇಕೆಂಬುದು ಸದಾ ನನ್ನ ಹೃದಯದಲ್ಲಿ ಇದ್ದ ಬಯಕೆ.

01042005a ಏವಂ ದೃಷ್ಟ್ವಾ ತು ಭವತಃ ಶಕುಂತಾನಿವ ಲಂಬತಃ|

01042005c ಮಯಾ ನಿವರ್ತಿತಾ ಬುದ್ಧಿರ್ಬ್ರಹ್ಮಚರ್ಯಾತ್ಪಿತಾಮಹಾಃ||

ಆದರೆ ಪಿತಾಮಹರೇ! ಶಕುಂತ ಪಕ್ಷಿಗಳಂತೆ ನೇತಾಡುತ್ತಿರುವ ನಿಮ್ಮನ್ನು ನೋಡಿ ನನ್ನ ಬುದ್ಧಿಯು ಬ್ರಹ್ಮಚರ್ಯದಿಂದ ಹಿಂದಿರುಗಿದೆ.

01042006a ಕರಿಷ್ಯೇ ವಃ ಪ್ರಿಯಂ ಕಾಮಂ ನಿವೇಕ್ಷ್ಯೇ ನಾತ್ರ ಸಂಶಯಃ|

01042006c ಸನಾಮ್ನೀಂ ಯದ್ಯಹಂ ಕನ್ಯಾಮುಪಲಪ್ಸ್ಯೇ ಕದಾಚನ||

01042007a ಭವಿಷ್ಯತಿ ಚ ಯಾ ಕಾಚಿದ್ ಭೈಕ್ಷವತ್ಸ್ವಯಮುದ್ಯತಾ|

01042007c ಪ್ರತಿಗ್ರಹೀತಾ ತಾಮಸ್ಮಿ ನ ಭರೇಯಂ ಚ ಯಾಮಹಂ||

ನಿಮಗೆ ಪ್ರಿಯ ಕಾರ್ಯವನ್ನು ನಿಸ್ಸಂಶಯವಾಗಿಯೂ ಮಾಡುತ್ತೇನೆ - ನನ್ನ ಹೆಸರನ್ನೇ ಹೊಂದಿರುವ ಕನ್ಯೆ ಯಾರಾದರೂ ನನಗೆ ದೊರೆತರೆ, ಯಾರಾದರೂ ಅವಳನ್ನು ನನಗೆ ಸ್ವಯಂ ಬಂದು ಭಿಕ್ಷಾರೂಪದಲ್ಲಿ ಕೊಟ್ಟರೆ, ಮತ್ತು ನಾನು ಪಾಲನೆ ಮಾಡಬೇಕಾಗಿಲ್ಲದವಳು ಸಿಕ್ಕರೆ ಅವಳನ್ನು ಪತ್ನಿಯನ್ನಾಗಿ ಸ್ವೀಕರಿಸುತ್ತೇನೆ.

01042008a ಏವಂವಿಧಮಹಂ ಕುರ್ಯಾಂ ನಿವೇಶಂ ಪ್ರಾಪ್ನುಯಾಂ ಯದಿ|

01042008c ಅನ್ಯಥಾ ನ ಕರಿಷ್ಯೇ ತು ಸತ್ಯಮೇತತ್ಪಿತಾಮಹಾಃ||

ಪಿತಾಮಹರೇ! ಈ ವಿಧದಲ್ಲಿ ಮಾತ್ರ ನಾನು ಮದುವೆಯಾಗುತ್ತೇನೆ. ಅನ್ಯಥಾ ನಾನು ಮದುವೆ ಮಾಡಿಕೊಳ್ಳುವುದಿಲ್ಲ. ನಾನು ಸತ್ಯವನ್ನೇ ನುಡಿಯುತ್ತಿದ್ದೇನೆ.””

01042009 ಸೂತ ಉವಾಚ

01042009a ಏವಮುಕ್ತ್ವಾ ತು ಸ ಪಿತೄಂಶ್ಚಚಾರ ಪೃಥಿವೀಂ ಮುನಿಃ|

01042009c ನ ಚ ಸ್ಮ ಲಭತೇ ಭಾರ್ಯಾಂ ವೃದ್ಧೋಽಯಮಿತಿ ಶೌನಕ||

ಸೂತನು ಹೇಳಿದನು: “ತನ್ನ ಪಿತೃಗಳಿಗೆ ಹೀಗೆ ಹೇಳಿದ ಮುನಿಯು ಇಡೀ ಪೃಥ್ವಿಯನ್ನು ಸಂಚರಿಸಿದನು. ಶೌನಕ! ಮುದುಕನಾಗಿದ್ದಾನೆಂದು ಅವನಿಗೆ ಪತ್ನಿಯೇ ದೊರೆಯಲಿಲ್ಲ.

01042010a ಯದಾ ನಿರ್ವೇದಮಾಪನ್ನಃ ಪಿತೃಭಿಶ್ಚೋದಿತಸ್ತಥಾ|

01042010c ತದಾರಣ್ಯಂ ಸ ಗತ್ವೋಚ್ಚೈಶ್ಚುಕ್ರೋಶ ಭೃಶದುಃಖಿತಃ||

ಒಮ್ಮೆ ಅವನು ತನ್ನ ಪಿತೃಗಳ ಕಾರ್ಯವನ್ನು ನೆರವೇರಿಸಲು ಅಸಮರ್ಥನಾದೆನೆಂದು ನಿರಾಶೆಗೊಂಡು, ಒಂದು ಮಹದಾರಣ್ಯವನ್ನು ಹೊಕ್ಕು ದುಃಖದಿಂದ ಪೀಡಿತನಾಗಿ ಜೋರಾಗಿ ಕೂಗಿಕೊಂಡನು:

01042011a ಯಾನಿ ಭೂತಾನಿ ಸಂತೀಹ ಸ್ಥಾವರಾಣಿ ಚರಾಣಿ ಚ|

01042011c ಅಂತರ್ಹಿತಾನಿ ವಾ ಯಾನಿ ತಾನಿ ಶೃಣ್ವಂತು ಮೇ ವಚಃ||

“ಇಲ್ಲಿರುವ ಚಲಿಸುವ ಮತ್ತು ಚಲಿಸದೇ ಇರುವ, ಕಾಣುವ ಮತ್ತು ಕಾಣದೇ ಇರುವ ಎಲ್ಲರೂ ನನ್ನ ಈ ಮಾತುಗಳನ್ನು ಕೇಳಿ.

01042012a ಉಗ್ರೇ ತಪಸಿ ವರ್ತಂತಂ ಪಿತರಶ್ಚೋದಯಂತಿ ಮಾಂ|

01042012c ನಿವಿಶಸ್ವೇತಿ ದುಃಖಾರ್ತಾಸ್ತೇಷಾಂ ಪ್ರಿಯಚಿಕೀರ್ಷಯಾ||

ಉಗ್ರತಪಸ್ಸಿನಲ್ಲಿ ನಿರತನಾದ ನಾನು ನನ್ನ ದುಃಖಾರ್ತ ಪಿತೃಗಳ ಅಪ್ಪಣೆಯಂತೆ ಅವರಿಗೆ ಪ್ರಿಯಕಾರ್ಯವನ್ನು ಮಾಡಲು ಹೊರಟಿದ್ದೇನೆ.

01042013a ನಿವೇಶಾರ್ಥ್ಯಖಿಲಾಂ ಭೂಮಿಂ ಕನ್ಯಾಭೈಕ್ಷಂ ಚರಾಮಿ ಭೋಃ|

01042013c ದರಿದ್ರೋ ದುಃಖಶೀಲಶ್ಚ ಪಿತೃಭಿಃ ಸಂನಿಯೋಜಿತಃ||

ಪಿತೃಗಳ ಸೂಚನೆಯಂತೆ ದರಿದ್ರ ಮತ್ತು ದುಃಖಶೀಲನಾದ ನಾನು ಇಡೀ ಭೂಮಿಯನ್ನು ಕನ್ಯಾಭಿಕ್ಷಾರ್ಚನೆ ಮಡುತ್ತಾ ತಿರುಗುತ್ತಿದ್ದೇನೆ.

01042014a ಯಸ್ಯ ಕನ್ಯಾಸ್ತಿ ಭೂತಸ್ಯ ಯೇ ಮಯೇಹ ಪ್ರಕೀರ್ತಿತಾಃ|

01042014c ತೇ ಮೇ ಕನ್ಯಾಂ ಪ್ರಯಚ್ಛಂತು ಚರತಃ ಸರ್ವತೋದಿಶಂ||

ಇಲ್ಲಿ ನನ್ನ ಕೂಗು ಕೇಳುತ್ತಿರುವ ಯಾರಲ್ಲಿಯಾದರೂ ಓರ್ವ ಕನ್ಯೆಯಿದ್ದರೆ ಸರ್ವ ದಿಶೆಯಲ್ಲಿ ತಿರುಗುತ್ತಿರುವ ನನಗೆ ಅವಳನ್ನು ನೀಡಿ.

01042015a ಮಮ ಕನ್ಯಾ ಸನಾಮ್ನೀ ಯಾ ಭೈಕ್ಷವಚ್ಚೋದ್ಯತಾ ಭವೇತ್|

01042015c ಭರೇಯಂ ಚೈವ ಯಾಂ ನಾಹಂ ತಾಂ ಮೇ ಕನ್ಯಾಂ ಪ್ರಯಚ್ಛತ||

ನನ್ನ ಹೆಸರನ್ನೇ ಹೊಂದಿರುವ ಕನ್ಯೆಯನ್ನು ಭಿಕ್ಷೆಯಾಗಿ ಕೊಡಿ. ನಾನು ಪಾಲಿಸಬೇಕಾಗಿರದ ಕನ್ಯೆಯನ್ನು ನೀಡಿ.”

01042016a ತತಸ್ತೇ ಪನ್ನಗಾ ಯೇ ವೈ ಜರತ್ಕಾರೌ ಸಮಾಹಿತಾಃ|

01042016c ತಾಮಾದಾಯ ಪ್ರವೃತ್ತಿಂ ತೇ ವಾಸುಕೇಃ ಪ್ರತ್ಯವೇದಯನ್||

ಆಗ ಜರತ್ಕಾರುವಿನ ಮೇಲೆ ಕಣ್ಣಿಟ್ಟಿದ್ದ ಪನ್ನಗಗಳು ಅವನ ಪ್ರವೃತ್ತಿಯನ್ನು ವಾಸುಕಿಗೆ ಬಂದು ವರದಿಮಾಡಿದರು.

01042017a ತೇಷಾಂ ಶ್ರುತ್ವಾ ಸ ನಾಗೇಂದ್ರಃ ಕನ್ಯಾಂ ತಾಂ ಸಮಲಂಕೃತಾಂ|

01042017c ಪ್ರಗೃಹ್ಯಾರಣ್ಯಮಗಮತ್ಸಮೀಪಂ ತಸ್ಯ ಪನ್ನಗಃ||

ಅವರನ್ನು ಕೇಳಿದ ಆ ಪನ್ನಗ ನಾಗೇಂದ್ರನು ಸಮಲಂಕೃತ ಕನ್ಯೆಯನ್ನು ಕರೆದುಕೊಂಡು ಆ ಅರಣ್ಯದಲ್ಲಿ ಅವನ ಸಮೀಪ ಬಂದನು.

01042018a ತತ್ರ ತಾಂ ಭೈಕ್ಷವತ್ಕನ್ಯಾಂ ಪ್ರಾದಾತ್ತಸ್ಮೈ ಮಹಾತ್ಮನೇ|

01042018c ನಾಗೇಂದ್ರೋ ವಾಸುಕಿರ್ಬ್ರಹ್ಮನ್ನ ಸ ತಾಂ ಪ್ರತ್ಯಗೃಹ್ಣತ||

ಬಾಹ್ಮಣ! ನಾಗೇಂದ್ರ ವಾಸುಕಿಯು ಅ ಕನ್ಯೆಯನ್ನು ಮಹಾತ್ಮನಿಗೆ ಭಿಕ್ಷವಾಗಿತ್ತರೂ ಅವನು ಅವಳನ್ನು ತಕ್ಷಣವೇ ಸ್ವೀಕರಿಸಲಿಲ್ಲ.

01042019a ಅಸನಾಮೇತಿ ವೈ ಮತ್ವಾ ಭರಣೇ ಚಾವಿಚಾರಿತೇ|

01042019c ಮೋಕ್ಷಭಾವೇ ಸ್ಥಿತಶ್ಚಾಪಿ ದ್ವಂದ್ವೀಭೂತಃ ಪರಿಗ್ರಹೇ||

ತನ್ನ ಹೆಸರನ್ನೇ ಅವಳು ಹೊಂದಿರಲಿಕ್ಕಿಲ್ಲ ಮತ್ತು ಅವಳನ್ನು ಪಾಲಿಸುವವರು ಯಾರು ಎಂದು ಅನುಮಾನಿಸಿ ದ್ವಂದ್ವೀಭೂತನಾಗಿ ಅವಳನ್ನು ಸ್ವೀಕರಿಸಲು ಹಿಂಜರಿದನು.

01042020a ತತೋ ನಾಮ ಸ ಕನ್ಯಾಯಾಃ ಪಪ್ರಚ್ಛ ಭೃಗುನಂದನ|

01042020c ವಾಸುಕೇ ಭರಣಂ ಚಾಸ್ಯಾ ನ ಕುರ್ಯಾಮಿತ್ಯುವಾಚ ಹ||

ಭೃಗುನಂದನ! ಆಗ ಅವನು ವಾಸುಕಿಗೆ ಆ ಕನ್ಯೆಯ ಹೆಸರೇನೆಂದು ಕೇಳಿ ನಾನು ಅವಳ ಜೀವನವನ್ನು ನೋಡಿಕೊಳ್ಳುವುದಿಲ್ಲ ಎಂದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ವಾಸುಕಿಜರತ್ಕಾರುಸಮಾಗಮೇ ದ್ವಿಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ವಾಸುಕಿಜರತ್ಕರುಸಮಾಗಮ ಎನ್ನುವ ನಲ್ವತ್ತೆರಡನೆಯ ಅಧ್ಯಾಯವು.

Comments are closed.