Adi Parva: Chapter 35

ಆದಿ ಪರ್ವ: ಆಸ್ತೀಕ ಪರ್ವ

೩೫

ವಾಸುಕಿಯು ಏಲಾಪತ್ರನು ಹೇಳಿದುದನ್ನು ಬ್ರಹ್ಮನಿಂದ ನಿರ್ದಿಷ್ಟಪಡಿಸಿಕೊಂಡು ತಂಗಿ ಜರತ್ಕಾರುವನ್ನು ನೋಡಿಕೊಳ್ಳುವುದು (೧-೧೦). ಮುನಿ ಜರತ್ಕಾರುವಿನ ಮೇಲೆ ಕಣ್ಣಿಡುವಂತೆ ಇತರ ಸರ್ಪಗಳಿಗೆ ಹೇಳಿದುದು (೧೧-೧೩).

01035001 ಸೂತ ಉವಾಚ

01035001a ಏಲಾಪತ್ರಸ್ಯ ತು ವಚಃ ಶ್ರುತ್ವಾ ನಾಗಾ ದ್ವಿಜೋತ್ತಮ|

01035001c ಸರ್ವೇ ಪ್ರಹೃಷ್ಟಮನಸಃ ಸಾಧು ಸಾಧ್ವಿತ್ಯಪೂಜಯನ್||

ಸೂತನು ಹೇಳಿದನು: “ದ್ವಿಜೋತ್ತಮ! ಏಲಾಪತ್ರನ ಈ ಮಾತುಗಳನ್ನು ಕೇಳಿದ ನಾಗಗಳೆಲ್ಲರೂ ಪ್ರಹೃಷ್ಟರಾಗಿ “ಸಾಧು! ಸಾಧು!” ಎಂದು ಉದ್ಗಾರಗೈದರು.

01035002a ತತಃ ಪ್ರಭೃತಿ ತಾಂ ಕನ್ಯಾಂ ವಾಸುಕಿಃ ಪರ್ಯರಕ್ಷತ|

01035002c ಜರತ್ಕಾರುಂ ಸ್ವಸಾರಂ ವೈ ಪರಂ ಹರ್ಷಮವಾಪ ಚ||

ಅಂದಿನಿಂದ ವಾಸುಕಿಯು ಆ ಕನ್ಯೆ ಜರತ್ಕಾರುವನ್ನು ರಕ್ಷಿಸುತ್ತಾ ಅವಳ ಪಾಲನೆ-ಪೋಷಣೆಯಲ್ಲಿ ತುಂಬಾ ಸಂತೋಷವನ್ನು ಹೊಂದಿದನು.

01035003a ತತೋ ನಾತಿಮಹಾನ್ಕಾಲಃ ಸಮತೀತ ಇವಾಭವತ್|

01035003c ಅಥ ದೇವಾಸುರಾಃ ಸರ್ವೇ ಮಮಂಥುರ್ವರುಣಾಲಯಂ||

ದೇವಾಸುರರೆಲ್ಲರೂ ಸೇರಿ ಸಮುದ್ರವನ್ನು ಮಥಿಸಿ ಹೆಚ್ಚು ಸಮಯವು ಕಳೆದಿರಲಿಲ್ಲ.

01035004a ತತ್ರ ನೇತ್ರಮಭೂನ್ನಾಗೋ ವಾಸುಕಿರ್ಬಲಿನಾಂ ವರಃ|

01035004c ಸಮಾಪ್ಯೈವ ಚ ತತ್ಕರ್ಮ ಪಿತಾಮಹಮುಪಾಗಮನ್||

ಆಗ ಬಲಶಾಲಿಗಳಲ್ಲಿ ಶ್ರೇಷ್ಠ ನಾಗ ವಾಸುಕಿಯು ಕಡೆಯುವ ಹಗ್ಗವಾಗಿದ್ದನು. ಆ ಕಾರ್ಯವನ್ನು ಮುಗಿಸಿದ ಅವನು ಪಿತಾಮಹನ ಬಳಿ ಹೋದನು.

01035005a ದೇವಾ ವಾಸುಕಿನಾ ಸಾರ್ಧಂ ಪಿತಾಮಹಮಥಾಬ್ರುವನ್|

01035005c ಭಗವನ್ ಶಾಪಭೀತೋಽಯಂ ವಾಸುಕಿಸ್ತಪ್ಯತೇ ಭೃಶಂ||

ವಾಸುಕಿಯ ಜೊತೆಗಿದ್ದ ದೇವತೆಗಳು ಪಿತಾಮಹನಲ್ಲಿ ವಿನಂತಿಸಿಕೊಂಡರು: “ಭಗವನ್! ಈ ಶಾಪಭೀತ ವಾಸುಕಿಯು ತುಂಬಾ ನೋವನ್ನು ಅನುಭವಿಸುತ್ತಿದ್ದಾನೆ.

01035006a ತಸ್ಯೇದಂ ಮಾನಸಂ ಶಲ್ಯಂ ಸಮುದ್ಧರ್ತುಂ ತ್ವಮರ್ಹಸಿ|

01035006c ಜನನ್ಯಾಃ ಶಾಪಜಂ ದೇವ ಜ್ಞಾತೀನಾಂ ಹಿತಕಾಂಕ್ಷಿಣಃ||

ದೇವ! ಜನನಿಯ ಶಾಪದಿಂದ ತನ್ನ ಜಾತಿಯವರ ಹಿತಾಕಾಂಕ್ಷಿಯಾದ ಇವನಲ್ಲಿ ಉದ್ಭವವಾಗಿರುವ ಈ ಶಲಾಕೆಯನ್ನು ಅವನ ಮನಸ್ಸಿನಿಂದ ಕಿತ್ತೊಗೆಯಬೇಕಾಗಿದೆ.

01035007a ಹಿತೋ ಹ್ಯಯಂ ಸದಾಸ್ಮಾಕಂ ಪ್ರಿಯಕಾರೀ ಚ ನಾಗರಾಟ್|

01035007c ಕುರು ಪ್ರಸಾದಂ ದೇವೇಶ ಶಮಯಾಸ್ಯ ಮನೋಜ್ವರಂ||

ಈ ನಾಗರಾಜನು ಸದಾ ನಮ್ಮ ಹಿತೈಷಿಯೂ ಪ್ರಿಯಕಾರಿಯೂ ಆಗಿದ್ದಾನೆ. ದೇವೇಶ! ಇವನ ಮನೋಜ್ವರವನ್ನು ಹೋಗಲಾಡಿಸುವ ಪ್ರಸಾದವನ್ನು ನೀಡು.”

01035008 ಬ್ರಹ್ಮೋವಾಚ

01035008a ಮಯೈವೈತದ್ವಿತೀರ್ಣಂ ವೈ ವಚನಂ ಮನಸಾಮರಾಃ|

01035008c ಏಲಾಪತ್ರೇಣ ನಾಗೇನ ಯದಸ್ಯಾಭಿಹಿತಂ ಪುರಾ||

01035009a ತತ್ಕರೋತ್ವೇಷ ನಾಗೇಂದ್ರಃ ಪ್ರಾಪ್ತಕಾಲಂ ವಚಸ್ತಥಾ|

01035009c ವಿನಶಿಷ್ಯಂತಿ ಯೇ ಪಾಪಾ ನ ತು ಯೇ ಧರ್ಮಚಾರಿಣಃ||

ಬ್ರಹ್ಮನು ಹೇಳಿದನು: “ಅಮರರೇ! ನಿಮ್ಮ ಈ ಮಾತುಗಳನ್ನು ನಾನು ಮನಸ್ಸಿನಲ್ಲಿ ಯೋಚಿಸಿದ್ದೇನೆ. ನಾಗೇಂದ್ರನು ಸಮಯ ಬಂದಾಗ ಜರತ್ಕಾರುವಿನ ಕುರಿತು ನಾಗ ಏಲಾಪತ್ರನು ಮೊದಲು ಹೇಳಿದ ಹಾಗೆಯೇ ಮಾಡಲಿ. ಇದರಿಂದ ಧರ್ಮಚಾರಿಗಳನ್ನು ಬಿಟ್ಟು ಕೇವಲ ಪಾಪಿಗಳು ಮಾತ್ರ ವಿನಾಶಹೊಂದುತ್ತಾರೆ.

01035010a ಉತ್ಪನ್ನಃ ಸ ಜರತ್ಕಾರುಸ್ತಪಸ್ಯುಗ್ರೇ ರತೋ ದ್ವಿಜಃ|

01035010c ತಸ್ಯೈಷ ಭಗಿನೀಂ ಕಾಲೇ ಜರತ್ಕಾರುಂ ಪ್ರಯಚ್ಛತು||

ಜರತ್ಕಾರುವು ಈಗಾಗಲೇ ಹುಟ್ಟಿದ್ದಾನೆ ಮತ್ತು ಆ ದ್ವಿಜನು ಉಗ್ರ ತಪಸ್ಸಿನಲ್ಲಿ ನಿರತನಾಗಿದ್ದಾನೆ. ಸರಿಯಾದ ಸಮಯದಲ್ಲಿ ಅವನಿಗೆ ತನ್ನ ತಂಗಿಯನ್ನು ಕೊಡಲಿ.

01035011a ಯದೇಲಾಪತ್ರೇಣ ವಚಸ್ತದೋಕ್ತಂ ಭುಜಗೇನ ಹ|

01035011c ಪನ್ನಗಾನಾಂ ಹಿತಂ ದೇವಾಸ್ತತ್ತಥಾ ನ ತದನ್ಯಥಾ||

ದೇವತೆಗಳೇ! ನಾಗ ಏಲಾಪತ್ರನು ಹೇಳಿದುದರಲ್ಲಿಯೇ ಪನ್ನಗಗಳ ಹಿತವಿದೆ. ಬೇರೆ ಯಾವ ರೀತಿಯಲ್ಲಿಯೂ ಇಲ್ಲ.””

01035012 ಸೂತ ಉವಾಚ

01035012a ಏತತ್ ಶ್ರುತ್ವಾ ಸ ನಾಗೇಂದ್ರಃ ಪಿತಾಮಹವಚಸ್ತದಾ|

01035012c ಸರ್ಪಾನ್ಬಹೂನ್ಜರತ್ಕಾರೌ ನಿತ್ಯಯುಕ್ತಾನ್ಸಮಾದಧತ್||

ಸೂತನು ಹೇಳಿದನು: “ಪಿತಾಮಹನ ಈ ಮಾತುಗಳನ್ನು ಕೇಳಿದ ನಾಗೇಂದ್ರನು ಜರತ್ಕಾರುವನ್ನು ಹುಡುಕಲು ಎಲ್ಲ ಸರ್ಪಗಳಿಗೂ ಆಜ್ಞೆಯನ್ನಿತ್ತನು.

01035013a ಜರತ್ಕಾರುರ್ಯದಾ ಭಾರ್ಯಾಮಿಚ್ಛೇದ್ವರಯಿತುಂ ಪ್ರಭುಃ|

01035013c ಶೀಘ್ರಮೇತ್ಯ ಮಮಾಖ್ಯೇಯಂ ತನ್ನಃ ಶ್ರೇಯೋ ಭವಿಷ್ಯತಿ||

“ಯಾವಾಗ ಜರತ್ಕಾರುವು ಪತ್ನಿಗಾಗಿ ಕೇಳುತ್ತಾನೋ ಆಗ ತಕ್ಷಣವೇ ನನ್ನಲ್ಲಿ ಬಂದು ಹೇಳಿ. ನಮ್ಮೆಲ್ಲರ ಶ್ರೇಯಸ್ಸು ಇದರ ಮೇಲೆಯೇ ನಿರ್ಭರವಾಗಿದೆ.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಜರತ್ಕಾರನ್ವೇಷಣೇ ಪಂಚತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಜರತ್ಕಾರನ್ವೇಷಣ ಎನ್ನುವ ಮೂವತ್ತೈದನೆಯ ಅಧ್ಯಾಯವು.

Leave a Reply

Your email address will not be published. Required fields are marked *